ಕಾರವಾರ: ಊಟ ಮಾಡುತ್ತಿದ್ದ ವೇಳೆ ಅನ್ನದ ಅಗಳು ಗಂಟಲಲ್ಲಿ ಸಿಲುಕಿ ಯುವಕ ಸಾವನ್ನಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ (Karwar) ತಾಲೂಕಿನ ಬಿಣಗಾದಲ್ಲಿ ನಡೆದಿದೆ.
ಬಿಣಗಾ ಮಾಳಸವಾಡ ನಿವಾಸಿ ಅಮಿತ್ ಮಾಳಸೇರ್ (38) ಮೃತ ದುರ್ದೈವಿ. ವೃತ್ತಿಯಲ್ಲಿ ಕಾರು ಚಾಲಕನಾಗಿದ್ದ ಅಮಿತ್, ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ವೈದ್ಯರಿಂದ ಚಿಕಿತ್ಸೆಯನ್ನು ಸಹ ಪಡೆಯುತ್ತಿದ್ದರು. ಇದನ್ನೂ ಓದಿ: ಹೃದಯಾಘಾತ – ಸಿನಿಮಾ ರೈಟರ್ ಎಸ್.ಎಸ್ ಡೇವಿಡ್ ನಿಧನ
ಅಮಿತ್ ಭಾನುವಾರ ಮನೆಯಲ್ಲಿ ಊಟ ಮಾಡುತ್ತಿದ್ದಾಗ ಅನ್ನದ ಅಗಳೊಂದು ಗಂಟಲಲ್ಲಿ ಸಿಲುಕಿತ್ತು. ತಕ್ಷಣ ಮನೆಯವರು ಅಮಿತ್‌ಗೆ ನೀರು ಕುಡಿಸಿದ್ದು, ಆತ ಅಲ್ಲೇ ಕುಸಿದು ಬಿದಿದ್ದ. ಕೂಡಲೇ ಆತನನ್ನು ಅಂಬುಲೆನ್ಸ್ ಮೂಲಕ ಕಾರವಾರದ ಕ್ರಿಮ್ಸ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ವೈದ್ಯರು ಪರೀಕ್ಷಿಸಿದಾಗ ಗಂಟಲಲ್ಲಿ ಅನ್ನದ ಅಗಳು ಸಿಲುಕಿ ಅಮಿತ್ ಮೃತಪಟ್ಟಿದ್ದಾನೆಂದು ದೃಢಪಡಿಸಿದ್ದಾರೆ. ಇದನ್ನೂ ಓದಿ: ಸದ್ದಿಲ್ಲದೇ ಹಾಸ್ಯನಟ ಚಿಕ್ಕಣ್ಣ ಮದ್ವೆ ನಿಶ್ಚಯ
ಘಟನೆ ಸಂಬಂಧ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಗಳೂರು: ಒಂದು ಕಡೆಯಲ್ಲಿ ಅನ್ನಭಾಗ್ಯದ (Anna Bhagya) ಅಕ್ಕಿಗೆ (Rice) ಕೇಂದ್ರದ ಬಾಗಿಲು ಬಹುತೇಕ ಬಂದ್ ಆಗಿದ್ದರೆ ಇನ್ನೊಂದು ಕಡೆ ರಾಜ್ಯಗಳಿಂದಲೂ ನಿರೀಕ್ಷಿಸಿದ ಭರವಸೆ ಸಿಕ್ಕಿಲ್ಲ.
ಛತ್ತೀಸ್‍ಗಢ (Chhattisgarh) ಅಕ್ಕಿ ಕೊಡುವ ಭರವಸೆ ನೀಡಿದರೂ ಎಷ್ಟು ಪ್ರಮಾಣ ಎಂದು ಖಚಿತ ಪಡಿಸಿಲ್ಲ. ಅಲ್ಲದೇ ಛತ್ತೀಸ್‌ಗಢದಿಂದ ಅಕ್ಕಿ ಕೊಳ್ಳುವುದು ದುಬಾರಿಯಾಗಿದೆ. ಒಂದು ವೇಳೇ ಖರೀದಿಸಿದರೂ ಸಾಗಾಣಿಕಾ ವೆಚ್ಚವೂ ಹೆಚ್ಚಾಗುತ್ತದೆ.
ಪಂಜಾಬ್ (Punjab) 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ನೀಡುವ ಭರವಸೆ ನೀಡಿದೆ. ಆಂಧ್ರಪ್ರದೇಶ (Andhra Pradesh) ಅಕ್ಕಿ ನೀಡುವ ಭರವಸೆ ನೀಡಿದರೂ ಕೆಜಿಗೆ 42 ರೂ. ದರ ನಿಗದಿ ಎಂದಿದೆ. ತೆಲಂಗಾಣ ಮತ್ತು ತಮಿಳುನಾಡಿನ ಅಕ್ಕಿ ನಿರೀಕ್ಷೆಯಲ್ಲಿ ಇದ್ದ ರಾಜ್ಯ ಸರ್ಕಾರಕ್ಕೆ ಖಚಿತ ಭರವಸೆ ಸಿಕ್ಕಿಲ್ಲ ಎನ್ನಲಾಗಿದೆ.
ಶುಕ್ರವಾರ ಕೇಂದ್ರ ಆಹಾರ ಸಚಿವ ಪಿಯೂಶ್ ಗೋಯಲ್ (Piyush Goyal) ಅವರನ್ನು ರಾಜ್ಯದ ಆಹಾರ ಸಚಿವ ಮುನಿಯಪ್ಪ (Muniyappa) ಭೇಟಿ ಮಾಡಿದ್ದರು. ಭೇಟಿ ಬಳಿಕ ಪ್ರತಿಕ್ರಿಯಿಸಿದ ಮುನಿಯಪ್ಪ, ಪಿಯೂಷ್ ಗೋಯಲ್ ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು. ಇದು ರಾಜಕೀಯ ದುರುದ್ದೇಶದ ನಿಲುವು. ಸ್ಟಾಕ್ ಇದ್ದರೂ ಕೊಡುವುದಿಲ್ಲ ಎನ್ನುವುದು ಎಷ್ಟು ಸರಿ? ನಾವು ಅಕ್ಕಿಯನ್ನು ಕೊಡುತ್ತೇವೆ. ಕೇಂದ್ರದ ಏಜೆನ್ಸಿಗಳ ಮೂಲಕ ಅಕ್ಕಿ ಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಈ ವಾರದಲ್ಲಿ ತೀರ್ಮಾನ ಆಗಲಿದೆ ಎಂದು ತಿಳಿಸಿದರು.
ಬೆಂಗಳೂರು: ಕರ್ನಾಟಕ ಸರ್ಕಾರಕ್ಕೆ (Karnataka Government) ಮತ್ತೆ ಅಕ್ಕಿ ಸಮಸ್ಯೆ ಬಿಗಡಾಯಿಸಿದೆ. ಅಕ್ಕಿ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಖಡಕ್ ಉತ್ತರ ನೀಡಿದ್ದರಿಂದ ರಾಜ್ಯಕ್ಕೆ ಅಕ್ಕಿ ಟೆನ್ಶನ್ ಮತ್ತಷ್ಟು ಗಂಭೀರವಾಗಿದೆ.
ಸದ್ಯ ಸರ್ಕಾರಕ್ಕೆ ಇರುವ ಕೊನೆ ದಾರಿ ಕೇಂದ್ರ 3 ಸಂಸ್ಥೆಗಳು ಮಾತ್ರ. ಭಾರತ ಸರ್ಕಾರದ ಅಧೀನದ ನ್ಯಾಷನಲ್ ಕೋ-ಆಪರೇಟಿವ್ ಕನ್ಸೂಮರ್ಸ್ ಫೆಡರೇಷನ್ (NCCF), ನ್ಯಾಷನಲ್ ಅಗ್ರಿಕಲ್ಬರಲ್ ಕೋ-ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ (NAFED) ಹಾಗೂ ಕೇಂದ್ರೀಯ ಭಂಡಾರದಿಂದ (Kendriya Bhandar) ಅಕ್ಕಿ ಪಡೆಯಲು ದರಪಟ್ಟಿ ಕೇಳಲಾಗಿದೆ.
ಎನ್‍ಸಿಸಿಎಫ್, ನಾಫೆಡ್, ಕೇಂದ್ರೀಯ ಭಂಡಾರದಿಂದ ಅಕ್ಕಿ ಬಂದರೆ ಕರ್ನಾಟಕ ಸರ್ಕಾರ ಪಾರಾಗುತ್ತದೆ. ಇಲ್ಲ ಅಂದರೆ ಅಕ್ಕಿಗೆ ಸಂಗ್ರಹಕ್ಕೆ ಮುಕ್ತ ಮಾರುಕಟ್ಟೆಯ ಮೊರೆ ಹೋಗಬೇಕಾದ ಅನಿವಾರ್ಯತೆ ನಿರ್ಮಾಣ ಆಗುತ್ತದೆ. ಈಗಾಗಲೇ ಒಂದು ಸಂಸ್ಥೆ ಕೊಟೇಶನ್ ಕೊಟ್ಟಿರುವ ಬಗ್ಗೆ ಮಾಹಿತಿ ಇದೆ. ಯಾವ ಸಂಸ್ಥೆ, ಎಷ್ಟು ಕೊಟೇಶನ್ ಅಂತ ಮಾಹಿತಿಯನ್ನು ಮಾತ್ರ ಆಹಾರ ಸಚಿವರು ನೀಡಿಲ್ಲ. ಇದನ್ನೂ ಓದಿ: ಪಾಟ್ನಾದಲ್ಲಿ ವಿಪಕ್ಷ ನಾಯಕರ ಸಭೆ – ಮೋದಿ ಸರ್ಕಾರ ಗದ್ದುಗೆಯಿಂದಿಳಿಸಲು 15 ಪಕ್ಷಗಳ ಮಹತ್ವದ ಚರ್ಚೆ
ಮುಂದಿರುವ ಆಯ್ಕೆಯೇನು?
ಎನ್‍ಸಿಸಿಎಫ್, ನಾಫೆಡ್, ಕೇಂದ್ರೀಯ ಭಂಡಾರ ಸಂಸ್ಥೆಗಳೇ ಕೊನೆ ಆಯ್ಕೆ. ಈಗಾಗಲೇ ಒಂದು ಸಂಸ್ಥೆ ಕೊಟೇಶನ್ ಕೊಟ್ಟಿರುವ ಬಗ್ಗೆ ಸಚಿವರ ಮಾಹಿತಿ ನೀಡಿದ್ದಾರೆ. ಕೊಟೇಶನ್ ವಿವರದ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ.
ಸರ್ಕಾರಕ್ಕೆ ಒಪ್ಪಿಗೆ ಆಗದೇ ಇದ್ದರೆ ಉಳಿದ 2 ಸಂಸ್ಥೆಗಳ ಕೊಟೇಶನ್‍ಗೆ ಕಾಯಬೇಕು. ಆ ಎರಡು ಸಂಸ್ಥೆಗಳ ಕೊಟೇಶನ್ ಸರ್ಕಾರಕ್ಕೆ ಒಪ್ಪಿಗೆ ಆದರೆ ಅಕ್ಕಿ ಖರೀದಿ ಮಾಡುತ್ತದೆ. ಆ 2 ಸಂಸ್ಥೆಗಳ ಕೊಟೇಶನ್ ಒಪ್ಪದೇ ಇದ್ದರೆ ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಬೇಕಾಗುತ್ತದೆ.
ಮುಂಬೈ: ಮಟನ್ ಸೂಪ್‍ನಲ್ಲಿ (Mutton Soup) ಅನ್ನ (Rice) ಇರುವುದನ್ನು ನೋಡಿದ ಗ್ರಾಹಕರಿಬ್ಬರು (Customer) ವೇಟರ್‌ನನ್ನು (Waiter) ಥಳಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದದಿದೆ.
ಮಹಾರಾಷ್ಟ್ರದ ಪುಣೆಯ ಪಿಂಪಲ್ ಸೌದಾಗರ್ ಪ್ರದೇಶದ ಹೋಟೆಲ್‍ವೊಂದರಲ್ಲಿ (Hotel) ಈ ಘಟನೆ ನಡೆದಿದೆ. ಮಂಗೇಶ್ ಪೋಸ್ತೆ (19) ಎಂಬಾತ ವೇಟರ್ ಆಗಿ ಕೆಲಸ ಮಾಡುತ್ತಿದ್ದ. ಆ ಹೊಟೆಲ್‍ಗೆ ತಡರಾತ್ರಿ ಕುಡಿತದ ಅಮಲಿನಲ್ಲಿ ಬಂದ ಇಬ್ಬರು ಗ್ರಾಹಕರು ಮಟನ್ ಸೂಪ್‍ನ್ನು ಆರ್ಡರ್ ಮಾಡಿದ್ದಾರೆ. ಈ ಮಟನ್ ಸೂಪ್‍ನ್ನು ಮಂಗೇಶ್ ಗ್ರಾಹಕರಿಗೆ ಸರ್ವ್ ಮಾಡಿದ್ದಾನೆ. ಈ ವೇಳೆ ಆ ಗ್ರಾಹಕರು ಮಟನ್ ಸೂಪ್‍ನಲ್ಲಿ ಅಕ್ಕಿ ಇರುವುದನ್ನು ನೋಡುತ್ತಾರೆ.
ಇದರಿಂದ ಕೋಪಗೊಂಡ ಇಬ್ಬರು ಗ್ರಾಹಕರು ಹೋಟೆಲ್‍ನಲ್ಲಿ ಗುಣಮಟ್ಟದ ಆಹಾರವನ್ನು ನೀಡುತ್ತಿಲ್ಲ ಎಂದು ಮಂಗೇಶ್ ಮೇಲೆ ಹಲ್ಲೆ ನಡೆಸುತ್ತಾರೆ. ಹಲ್ಲೆ ವೇಳೆ ಮಂಗೇಶ್‍ಗೆ ತಲೆಗೆ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೂ ಘಟನೆ ವೇಳೆ ಬಿಡಿಸಲು ಬಂದ ಮತ್ತಿಬ್ಬರು ವೇಟರ್‌ಗಳ ಮೇಲೂ ಆತ ಹಲ್ಲೆ ನಡೆಸಿದ್ದು, ಅವರಿಬ್ಬರಿಗೂ ಗಂಭೀರ ಗಾಯವಾಗಿದೆ.
ಘಟನೆಗೆ ಸಂಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿ ಅಲ್ಲಿನ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನೂ ಆರೋಪಿಗಳಲ್ಲಿ ಒಬ್ಬನನ್ನು ವಿಜಯ್ ವಾಘಿರೆ ಎಂದು ಗುರುತಿಸಲಾಗಿದ್ದು, ಇನ್ನೊಬ್ಬ ಆರೋಪಿಯ ಹೆಸರು ತಿಳಿದು ಬಂದಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ಆ ಇಬ್ಬರು ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಸಾಂಬಾರ್ ಪಾಕವಿಧಾನಗಳು ದಕ್ಷಿಣ ಭಾರತೀಯರಿಗೆ ಪ್ರಧಾನ ಮತ್ತು ಹೆಚ್ಚು ಆದ್ಯತೆಯ ಪಾಕವಿಧಾನವಾಗಿದೆ. ಸಾಂಬಾರ್ ಅನ್ನ, ಇಡ್ಲಿ ಜೊತೆ ತಿನ್ನುವುದರಿಂದ ಸವಿಯಲು ಸಖತ್ ಟೇಸ್ಟಿಯಾಗಿರುತ್ತೆ. ಅದರಲ್ಲಿಯೂ ಅನ್ನಕ್ಕೆ ನುಗ್ಗೆಕಾಯಿ ಸಾಂಬಾರ್ ಸಖತ್ ಕಾಂಬಿನೇಷನ್. ನುಗ್ಗೆಕಾಯಿಯಲ್ಲಿ ಮಾಡುವ ಸಾಂಬಾರ್ ಎಂದರೆ ಎಲ್ಲರಿಗೂ ತುಂಬಾ ಇಷ್ಟ. ಈ ಸಾಂಬಾರ್ ಮಾಡುವ ವಿಧಾನ ತುಂಬಾ ಸುಲಭವಾಗಿದ್ದು, ರೆಸಿಪಿ ಇಲ್ಲಿದೆ.
ಬೇಕಾಗಿರುವ ಪದಾರ್ಥಗಳು
* ನುಗ್ಗೆಕಾಯಿ – 20 ತುಂಡುಗಳು
* ಸಾಂಬಾರ್ ಪೌಡರ್ – 2 ಟೀಸ್ಪೂನ್
* ಎಣ್ಣೆ – 3 ಟೀಸ್ಪೂನ್
* ಸಾಸಿವೆ – 1 ಟೀಸ್ಪೂನ್
* ಒಣಗಿದ ಕೆಂಪು ಮೆಣಸಿನಕಾಯಿ – 3
* ಚಿಕ್ಕ ಈರುಳ್ಳಿ – 1 ಕಪ್
* ಕರಿಬೇವು – 10 ಎಲೆಗಳು
* ಕಟ್ ಮಾಡಿದ ಟೊಮೆಟೊ – 1
* ಅರಿಶಿನ – ಅರ್ಧ ಟೀಸ್ಪೂನ್
* ಉಪ್ಪು – 1 ಟೀಸ್ಪೂನ್
* ನೀರು – 2 ಕಪ್
* ತೊಗರಿ ಬೇಳೆ – 2 ಕಪ್
* ಹುಣಸೆಹಣ್ಣಿನ ಸಾರ – ಅರ್ಧ ಕಪ್
* ಕೊತ್ತಂಬರಿ – 2 ಟೇಬಲ್ಸ್ಪೂನ್
* ಬೆಳ್ಳುಳ್ಳಿ – 2
ಮಾಡುವ ವಿಧಾನ
* ಮೊದಲನೆಯದಾಗಿ, ದೊಡ್ಡ ಕಡಾಯಿಯಲ್ಲಿ 3 ಟೀಸ್ಪೂನ್ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಅದಕ್ಕೆ ಸಾಸಿವೆ, ಕೆಂಪು ಮೆಣಸಿನಕಾಯಿ, ಕರಿಬೇವಿನ ಎಲೆಗಳನ್ನು ಹಾಕಿ ಫ್ರೈ ಮಾಡಿ.
* ಈ ಮಿಶ್ರಣಕ್ಕೆ ಚಿಕ್ಕ ಈರುಳ್ಳಿಗಳನ್ನು ಸೇರಿಸಿ, 2 ನಿಮಿಷ ಬೇಯಿಸಿ. ನಂತರ ಅದಕ್ಕೆ ಟೊಮೆಟೊ ಸೇರಿಸಿ ಫ್ರೈ ಮಾಡಿ.
* ಅದಕ್ಕೆ ಅರಿಶಿನ, ಸಾಂಬಾರ್ ಪೌಡರ್ ಮತ್ತು ಉಪ್ಪು ಸೇರಿಸಿ ಒಂದು ನಿಮಿಷ ಬೇಯಿಸಿ.
* ಆ ಮಸಾಲೆಗೆ ನುಗ್ಗೆಕಾಯಿ ತುಂಡುಗಳನ್ನು ಸೇರಿಸಿ 1 ಕಪ್ ನೀರು ಸೇರಿಸಿ. 10 ನಿಮಿಷಗಳ ಕಾಲ ಮುಚ್ಚಿಡಿ. ಅದಕ್ಕೆ ತೊಗರಿ ಬೇಳೆ ಮತ್ತು ನೀರು ಸೇರಿಸಿ ಬೇಯಿಸಿ.
* ಈ ಮಿಶ್ರಣಕ್ಕೆ ಹುಣಸೆಹಣ್ಣಿನ ಸಾರವನ್ನು ಸೇರಿಸಿ, ಚೆನ್ನಾಗಿ ಬೆರೆಸಿ ಪರಿಮಳ ಬರುವವರೆಗೂ ಕುದಿಸಿ.-
– ಅಂತಿಮವಾಗಿ, ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತು ಬಿಸಿ ಬಿಸಿ ಅನ್ನದೊಂದಿಗೆ ನುಗ್ಗೆಕಾಯಿ ಸಾಂಬಾರ್ ಜೊತೆ ಆನಂದಿಸಿ.
ಕಟ್ಲೆಟ್ಟನ್ನು ಸಾಮಾನ್ಯವಾಗಿ ತರಕಾರಿಯ ಮಿಶ್ರಣದೊಂದಿಗೆ ಮಾಡಲಾಗುತ್ತದೆ. ಇಂಥ ಈ ವಿಶೇಷ ರುಚಿಯ ಕಟ್ಲೆಟ್ಟನ್ನು ಅಷ್ಟೇ ರುಚಿರುಚಿಯಾಗಿ ಉಳಿದ ಅನ್ನದಿಂದಲೂ ಮಾಡಬಹುದು ಎಂದು ನಿಮಗೆ ಗೊತ್ತಾ? ಇನ್ನೊಮ್ಮೆ ಕಟ್ಲೆಟ್ ಮಾಡುವಾಗ ಅದಕ್ಕಾಗಿ ಬೇಯಿಸಿದ ತರಕಾರಿಗಳೊಡನೆ ಉಳಿದ ಅನ್ನವನ್ನೂ ಸೇರಿಸಿ ಕಲಸಿ. ಇದರಿಂದ ರೈಸ್ ಕಟ್ಲೆಟ್ ಹೊಟ್ಟೆಯನ್ನೂ ತುಂಬಿಸುತ್ತದೆ. ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ ಕೊಡಲು ಇದು ಬಹಳ ಚೆನ್ನಾಗಿರುತ್ತೆ.
ಬೇಕಾಗಿರುವ ಪದಾರ್ಥಗಳು:
* ಚೆನ್ನಾಗಿ ಬೆಂದ ಅನ್ನ – 1 ಕಪ್
* ಬೇಯಿಸಿ ಮ್ಯಾಶ್ ಮಾಡಿದ ಆಲೂಗಡ್ಡೆ – 1
* ತುರಿದ ಕ್ಯಾರೆಟ್ – 1 ಕಪ್
* ಸಣ್ಣಗೆ ಹೆಚ್ಚಿದ ದೊಣ್ಣೆಮೆಣಸು – 2 ಚಮಚ
* ಸ್ವೀಟ್ ಕಾರ್ನ್ – 2 ಚಮಚ
* ಕಟ್ ಮಾಡಿದ ಗೋಡಂಬಿ – 2 ಚಮಚ
* ಶುಂಠಿ ಪೇಸ್ಟ್ – ಅರ್ಧ ಕಪ್
* ಕೆಂಪು ಮೆಣಸಿನ ಪುಡಿ – 1 ಚಮಚ
* ಗರಂ ಮಸಾಲಾ – 1 ಚಮಚ
* ಜೀರಿಗೆ ಪುಡಿ – 1 ಚಮಚ
* ಉಪ್ಪು – 1 ಚಮಚ
* ಸಣ್ಣಗೆ ಕಟ್ ಮಾಡಿದ ಕೊತ್ತಂಬರಿ ಸೊಪ್ಪು – 2 ಚಮಚ
* ನಿಂಬೆರಸ – 1 ಚಮಚ
* ಬ್ರೆಡ್ ಪೀಸ್‍ಗಳು – ಅರ್ಧ ಕಪ್
* ಮೈದಾ – ಅರ್ಧ ಕಪ್
* ಜೋಳದ ಹಿಟ್ಟು – 2 ಚಮಚ
* ಪೆಪ್ಪರ್ – 1 ಚಮಚ
ಇತರೆ ಸಾಮಗ್ರಿಗಳು- ಕರಿಯಲು ಎಣ್ಣೆ, 1 ಕಪ್ ಬ್ರೆಡ್ ಕ್ರಂಬ್ಸ್
ಮಾಡುವ ವಿಧಾನ:
* ದೊಡ್ಡ ಬಟ್ಟಲಿನಲ್ಲಿ ಅನ್ನವನ್ನು ತೆಗೆದುಕೊಂಡು ನುಣ್ಣಗೆ ಮ್ಯಾಶ್ ಮಾಡಿ. ಇದಕ್ಕೆ ಸ್ವಲ್ಪ ಉಪ್ಪು ಸೇರಿಸಿ 3 ವಿಶಲ್ ಬೇಯಿಸಿ, ಚೆನ್ನಾಗಿ ಕಲಸಿದ ಆಲೂಗಡ್ಡೆ ಸೇರಿಸಿ. ಕ್ಯಾರೆಟ್, ದೊಣ್ಣೆಮೆಣಸು, ಕಾರ್ನ್, ಗೋಡಂಬಿ ಸೇರಿಸಿ.
* ಈ ಮಿಶ್ರಣಕ್ಕೆ ಶುಂಠಿ ಪೇಸ್ಟ್, ಮೆಣಸಿನ ಪುಡಿ, ಗರಂ ಮಸಾಲೆ, ಜೀರಿಗೆ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಗೂ ನಿಂಬೆರಸ ಸೇರಿಸಿ ಚೆನ್ನಾಗಿ ಕಲಸಿ. ಕಡೆಯಲ್ಲಿ ಬ್ರೆಡ್ ಕ್ರಂಬ್ಸ್ ಸೇರಿಸಿ ಮತ್ತೆ ಕಲಸಿ.
* ಈಗ ಇನ್ನೊಂದು ಪಾತ್ರೆಯಲ್ಲಿ ಮೈದಾಹಿಟ್ಟು, ಜೋಳದ ಹಿಟ್ಟು, ಪೆಪ್ಪರ್, ಉಪ್ಪು ಸೇರಿಸಿ ಮಿಶ್ರಣ ಮಾಡಿ.
* ಕೈಗೆ ಸ್ವಲ್ಪ ಎಣ್ಣೆ ಸವರಿಕೊಂಡು ಕಟ್ಲೆಟ್ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆ ಮಾಡಿಕೊಳ್ಳಿ.ಪ್ರತಿ ಉಂಡೆಯನ್ನೂ ಹಿಟ್ಟಿನಲ್ಲಿ ಅದ್ದಿ, ಪುಡಿ ಮಾಡಿಟ್ಟುಕೊಂಡ ಬ್ರೆಡ್ ಕ್ರಂಬ್ಸ್ ಮೇಲೆ ಉರುಳಾಡಿಸಿ.
* ಹೊರಗಿನಿಂದ ಎರಡು ಲೇಯರ್ ಕೋಟ್ ಕೊಟ್ಟಾದ ಮೇಲೆ ಕಾದ ಎಣ್ಣೆಯಲ್ಲಿ ಈ ಉಂಡೆಗಳನ್ನು ಬಿಡಿ. ಕಟ್ಲೆಟ್‍ಗಳು ಕೆಂಪು ಬಣ್ಣಕ್ಕೆ ತಿರುಗುತ್ತಲೇ ಅದನ್ನು ಹೊರತೆಗೆದು ಟಿಶ್ಯೂ ಪೇಪರ್ ಮೇಲೆ ಹಾಕಿ.
ಎಣ್ಣೆಯನ್ನೆಲ್ಲ ಪೇಪರ್ ಹೀರಿಕೊಂಡ ಬಳಿಕ ಟೊಮ್ಯಾಟೊ ಸಾಸ್ ಅಥವಾ ಗ್ರೀನ್ ಚಟ್ನಿ ಜೊತೆ ಸವಿಯಲು ಕೊಡಿ.
ದಕ್ಷಿಣ ಭಾರತದ ಕಡೆ ಅದರಲ್ಲೂ ಕರ್ನಾಟಕದಲ್ಲಿ ರಸಂ ಅಥವಾ ಸಾರು ಇಲ್ಲದಿದ್ದರೆ ಊಟ ಪೂರ್ತಿಯಾಗುವುದಿಲ್ಲ. ಅದರಲ್ಲಿಯೂ ಜೀರಿಗೆ ಸಾರು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಎಲ್ಲರಿಗೂ ಬಹಳ ಇಷ್ಟ. ನೀವೂ ಕೂಡ ಒಮ್ಮೆ ಮಾಡಿ ರುಚಿ ನೋಡಿದರೆ ಮತ್ತೆ ಮತ್ತೆ ಈ ರೆಸಿಪಿನ ಮಾಡುತ್ತೀರಿ. ಇದನ್ನು ಮಾಡುವುದು ತುಂಬಾನೇ ಸುಲಭ. ಬಿಸಿ ಬಿಸಿ ಅನ್ನದ ಜೊತೆ ಬಡಿಸಿ ತಿನ್ನಲು ಜೀರಿಗೆ ರಸಂ ತುಂಬಾ ರುಚಿ. ಅಷ್ಟೇ ಅಲ್ಲ ಇದನ್ನು ಸೂಪ್ ತರಹ ಕುಡಿಯಲೂ ಬಹುದು. ಒಮ್ಮೆ ಮಾಡಿ ನೋಡಿ.
ಬೇಕಾಗಿರುವ ಪದಾರ್ಥಗಳು:
* ಒಣ ಮೆಣಸಿನಕಾಯಿ – 4 ರಿಂದ 5
* ಎಣ್ಣೆ – 2 ದೊಡ್ಡ ಚಮಚ
* ಜೀರಿಗೆ – 2 ಚಮಚ
* ಬೇಯಿಸಿದ ತೊಗರಿ ಬೇಳೆ – 2 ಕಪ್
* ಟೊಮೆಟೊ – 1 ಕಪ್
* ಅರಶಿನ ಪುಡಿ – ಅರ್ಧ ಚಮಚ
* ಉಪ್ಪು – ಅರ್ಧ ಚಮಚ
* ನೀರು – ಬೇಕಾದಷ್ಟು(4 ರಿಂದ 5 ಕಪ್)
ಮಾಡುವ ವಿಧಾನ:
* ಹುರಿದ ಒಣ ಮೆಣಸಿನಕಾಯಿ ಹಾಗೂ ಜೀರಿಗೆಯನ್ನು ಒಂದು ಪಾತ್ರೆಯಲ್ಲಿ ಗರಿ-ಗರಿಯಾಗುವವರೆಗೆ ಹುರಿಯಿರಿ.
* ಹುರಿದ ಮೆಣಸಿನಕಾಯಿ ಹಾಗೂ ಜೀರಿಗೆಯನ್ನು ಬೇಯಿಸಿದ ತೊಗರಿ ಬೇಳೆಯ ಜೊತೆ ನುಣ್ಣಗೆ ರುಬ್ಬಿಕೊಳ್ಳಿ.
* ಎಣ್ಣೆಯನ್ನು ಬಿಸಿ ಮಾಡಿ ಟೊಮೆಟೊ ಹಾಕಿ ಸಣ್ಣ ಉರಿಯಲ್ಲಿ ಅರಶಿನ ಪುಡಿ ಹಾಗೂ ಉಪ್ಪನ್ನು ಹಾಕಿ ಬೇಯಿಸಿ.
* ಅದಕ್ಕೆ ತಯಾರಿಸಿದ ಮೆಣಸಿನಕಾಯಿ-ಜೀರಿಗೆ-ಬೇಳೆ ಪೇಸ್ಟ್ ಹಾಕಿ ಚೆನ್ನಾಗಿ ಕಲಸಿ.
* ನೀರನ್ನು ಹಾಕಿಕೊಂಡು ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕಲಕಿ. ಈ ಸಾರನ್ನು ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲದವರೆಗೆ ಕುದಿಸಿ.
* ಒಗ್ಗರಣೆಗೆ ಸ್ವಲ್ಪ ತುಪ್ಪದಲ್ಲಿ ಸಾಸಿವೆ ಹಾಕಿ ಕರಿಬೇವಿನ ಎಲೆ ಮತ್ತು ಇಂಗು ಹಾಕಿ ಹುರಿಯಿರಿ. ಹುರಿದದ್ದನ್ನು ಸಾರಿಗೆ ಹಾಕಿ ಚೆನ್ನಾಗಿ ಕಲಕಿ. ನಂತರ ಸ್ವಲ್ಪ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲಕಿ.
– ಈ ಸಾರನ್ನು ಬಿಸಿ-ಬಿಸಿ ಅನ್ನದ ಮತ್ತು ಹಪ್ಪಳದ ಜೊತೆ ಬಡಿಸಿ.
ಮಸ್ಸೊಪ್ಪು ಎಂಬುದು ಜನಪ್ರಿಯ ಸೊಪ್ಪು ಸಾರಿನಲ್ಲಿ ಅಗ್ರ ಸ್ಥಾನದಲ್ಲಿದೆ. ಈ ಸಾರಿನ ಹೆಸರು ಕೇಳಿದರೆ ಬಾಯಲ್ಲಿ ನೀರು ಬರುತ್ತೆ. ಅದರಲ್ಲಿಯೂ ಮುದ್ದೆ ಜೊತೆ ಇದರ ಕಾಂಬಿನೇಷನ್ ಸೂಪರ್ ಆಗಿ ಇರುತ್ತೆ. ಈ ಸಾರು ಮಾಡುವುದು ತುಂಬಾ ಸುಲಭ. ಅದರಲ್ಲಿಯೂ ಇದರಲ್ಲಿ ಎಲ್ಲ ರೀತಿಯ ಸೊಪ್ಪು ಮಿಶ್ರಣವಾಗಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಟ್ರೈ ಮಾಡಿ.
ಬೇಕಾಗಿರುವ ಪದಾರ್ಥಗಳು:
* ಕಟ್ ಮಾಡಿದ ಪಾಲಕ್ ಸೊಪ್ಪು – 2 ಕಪ್
* ಸಬ್ಬಸಿಗೆ ಸೊಪ್ಪು – 1 ಕಪ್
* ಮೆಂತ್ಯ ಸೊಪ್ಪು – 1 ಕಪ್
* ಕೊತ್ತಂಬರಿ ಸೊಪ್ಪು – ಅರ್ಧ ಕಪ್
* ಬೆಳೆ – 1 ಕಪ್
* ಕಟ್ ಮಾಡಿದ ಈರುಳ್ಳಿ – ಒಂದುವರೆ ಕಪ್
* ಕಟ್ ಮಾಡಿದ ಟೊಮೆಟೊ – 2 ಕಪ್
* ಹಸಿ ಮೆಣಸಿನಕಾಯಿ – 3
* ತುರಿದ ತೆಂಗಿನಕಾಯಿ – ಅರ್ಧ ಕಪ್
* ಹುಣಸೆಹಣ್ಣು – 1 ಟೀಚಮಚ
* ಸಾಂಬಾರ್ ಪುಡಿ – 2 ಚಮಚ
* ಅಡುಗೆ ಎಣ್ಣೆ – 2-3 ಟೀಸ್ಪೂನ್
* ಸಾಸಿವೆ – ಅರ್ಧ ಚಮಚ
* ಕರಿಬೇವಿನ ಎಲೆಗಳು – 5 ಎಲೆಗಳು
* ಒಣ ಕೆಂಪು ಮೆಣಸಿನಕಾಯಿ – 2
* ಬೆಳ್ಳುಳ್ಳಿ – 4
* ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
* ಎಲ್ಲ ಸೊಪ್ಪುಗಳನ್ನು ನೀರಿನಲ್ಲಿ ತೊಳೆಯಿರಿ. ಬೆಳೆ, ಟೊಮೆಟೊ, ಹಸಿರು ಮೆಣಸಿನಕಾಯಿ ಮತ್ತು 1 ಕಪ್ ನೀರು ಹಾಕಿ ಕುಕ್ಕರ್‌ನಲ್ಲಿ ಬೇಯಿಸಿ. ನಂತರ ಸ್ಪಲ್ಪ ಸಮಯ ತಣ್ಣಗಾಗಲು ಬಿಡಿ. ನಂತರ ಈ ಮಿಶ್ರಣವನ್ನು ಮಸಿಯಿರಿ. ಆದರೆ ಹೆಚ್ಚು ನುಣ್ಣಗೆ ಮಸಿಯ ಬಾರದು.
* ಪ್ಯಾನ್‍ನಲ್ಲಿ ಎಣ್ಣೆ ಸಾಸಿವೆ, ಕರಿಬೇವು, ಒಣ ಕೆಂಪು ಮೆಣಸಿನಕಾಯಿ, ಬೆಳ್ಳುಳ್ಳಿ ಮತ್ತು ಈರುಳ್ಳಿ ಹಾಕಿ ಫ್ರೈ ಮಾಡಿ. ನಂತರ ಇದಕ್ಕೆ ತೆಂಗಿನಕಾಯಿ ತುರಿ, ಹುಣಸೆಹಣ್ಣು ರಸ ಮತ್ತು ಸಾಂಬಾರ್ ಪುಡಿಯನ್ನು ಹಾಕಿ ಫ್ರೈ ಮಾಡಿ.
* ಇದಕ್ಕೆ ನೀರು 2 ರಿಂದ 3 ಕಪ್ ನೀರು ಸೇರಿಸಿ ಮಸಿದ ಸೊಪ್ಪಿನ ಮಿಶ್ರಣವನ್ನು ಹಾಕಿ ಅದಕ್ಕೆ ರುಚಿಗೆ ತಕ್ಕಷ್ಟು ಸೇರಿಸಿ ಕುದಿಸಿ.
* ಕುದಿಯಲು ಪ್ರಾರಂಭಿಸಿದ ನಂತರ, ಗ್ಯಾಸ್ ಆಫ್ ಮಾಡಿ.
– ಈ ಸಾರನ್ನು ತುಪ್ಪದ ಜೊತೆ ರಾಗಿ ಮುದ್ದೆ / ಅನ್ನದೊಂದಿಗೆ ಬಡಿಸಿ. ಟೆಸ್ಟ್ ಮಾಡಿ.
ಕ್ಷೀರ ಎಂಬುದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ ಹಾಲು. ಹಾಲು ಮತ್ತು ಅನ್ನದಿಂದ ಕ್ಷೀರಾನ್ನವನ್ನು ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡುತ್ತೇವೆ. ಇದು ತುಂಬಾ ಸುಲಭವಾಗಿದ್ದು, ದೇವಸ್ಥಾನಗಳಲ್ಲಿ ವಿಶೇಷ ಸಂದರ್ಭದಲ್ಲಿ ಇದನ್ನು ಮಾಡುತ್ತಾರೆ. ದೇವಸ್ಥಾನದಲ್ಲಿ ಮಾಡುವಂತೆಯೇ ರುಚಿಯಾಗಿ ಮನೆಯಲ್ಲೇ ಕ್ಷೀರಾನ್ನ ಮಾಡುವುದನ್ನು ಟ್ರೈ ಮಾಡಿ.
ಬೇಕಾಗಿರುವ ಪದಾರ್ಥಗಳು:
* ಹಾಲು – 1 ಲೀಟರ್
* ಕಲ್ಲು ಸಕ್ಕರೆ – 1 ಕಪ್
* ಏಲಕ್ಕಿ – 4 (ಪುಡಿಮಾಡಿ)
* ತುಪ್ಪ – 1/2 ಕಪ್
* ಗೋಡಂಬಿ – 20 ರಿಂದ 25
* ಒಣದ್ರಾಕ್ಷಿ – 2 ಟೀಸ್ಪೂನ್
ಮಾಡುವ ವಿಧಾನ:
* ಅಕ್ಕಿಯನ್ನು ತೊಳೆದು ನೀರನ್ನು ತೆಗೆಯಿರಿ. ಅನ್ನವನ್ನು ಬಿಸಿ ಮಾಡಿಕೊಳ್ಳಿ.
* ಒಂದು ಬಾಣಲೆಗೆ ಹಾಲು ಹಾಕಿ ಚೆನ್ನಾಗಿ ಕುದಿಸಿ.
* ಕುದಿಯುತ್ತಿದ್ದ ಹಾಲಿಗೆ ಕಲ್ಲುಸಕ್ಕರೆ ಸೇರಿಸಿ ಸಂಪೂರ್ಣವಾಗಿ ಕರಗುವವರೆಗೂ ಬೇಯಿಸಿ.
* ಸಕ್ಕರೆ ಸಂಪೂರ್ಣವಾಗಿ ಹಾಲಿನಲ್ಲಿ ಕರಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನಂತರ ಅದಕ್ಕೆ ಬೇಯಿಸಿದ ಅನ್ನವನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ. ಅಗತ್ಯವಿದ್ದರೆ ಹೆಚ್ಚು ಹಾಲು ಸೇರಿಸಿ ಕುದಿಸಿ.
* 3 ಚಮಚ ತುಪ್ಪವನ್ನು ಸೇರಿಸಿ ಮತ್ತು ಏಲಕ್ಕಿ ಪುಡಿಯನ್ನು ಹಾಕಿ, ಒಟ್ಟಿಗೆ ಮಿಶ್ರಣ ಮಾಡಿ 5 ರಿಂದ 6 ನಿಮಿಷ ಬೇಯಿಸಿ.
* ಇನ್ನೊಂದು ಪ್ಯಾನ್‍ಗೆ ಉಳಿದ ತುಪ್ಪವನ್ನು ಸೇರಿಸುವ ಮೂಲಕ ಬಿಸಿ ಮಾಡಿ, ಅದಕ್ಕೆ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಹಾಕಿ ಗೋಲ್ಡನ್ ಬ್ರೌನ್ ಬರುವವರೆಗೂ ಹುರಿಯಿರಿ.
* ಮಿಶ್ರಣವನ್ನು ಕ್ಷೀರಾನ್ನದ ಮೇಲೆ ಹಾಕಿ ನಂತರ ಸವಿಯಿರಿ.
ಮಾಡುವ ವಿಧಾನ:
* ಟೊಮೆಟೊ, ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
* ನಂತರ ಅಗತ್ಯವಿದ್ದಷ್ಟು ನೀರು, ಉಪ್ಪು, ಅರಿಶಿನ ಸೇರಿಸಿ ಹಸಿವಾಸನೆ ಹೋಗುವರೆಗೂ ಕುದಿಸಿ.
* ಅದಕ್ಕೆ ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಸೇರಿಸಿ.
* ಒಗ್ಗರಣೆಯನ್ನು ಮಾಡಿ ಅದನ್ನು ಸಾರಿಗೆ ಸೇರಿಸಿ.