Tag: ಅನೈತಿ ಸಂಬಂಧ

  • ಪತ್ನಿ ಮಗಳನ್ನ ಕೊಂದು ಕೆಲ್ಸಕ್ಕೆ ಹೋದ – ಲವ್ವರ್ ಬಂದು ಬೆಂಕಿ ಹಚ್ಚಿ ಹೋದ್ಳು

    ಪತ್ನಿ ಮಗಳನ್ನ ಕೊಂದು ಕೆಲ್ಸಕ್ಕೆ ಹೋದ – ಲವ್ವರ್ ಬಂದು ಬೆಂಕಿ ಹಚ್ಚಿ ಹೋದ್ಳು

    ಮುಂಬೈ: ವ್ಯಕ್ತಿಯೊಬ್ಬ ತನ್ನ ಲವ್ವರ್ ಜೊತೆ ಸೇರಿಕೊಂಡು 30 ವರ್ಷದ ಪತ್ನಿ ಮತ್ತು ಮೂರು ವರ್ಷದ ಮಗಳನ್ನು ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.

    ತಹ್ಸಿನ್ ಮತ್ತು ಆಲಿಯಾ ಮೃತ ದುರ್ದೈವಿಗಳು. ಆರೋಪಿಗಳನ್ನು 38 ವರ್ಷದ ಇಲ್ಯಾಸ್ ಸಯ್ಯದ್ ಮತ್ತು 22 ವರ್ಷದ ಆಫ್ರೀನ್ ಸಯ್ಯದ್ ಎಂದು ಗುರುತಿಸಲಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

    ಏನಿದು ಪ್ರಕರಣ?
    ಆರೋಪಿ ಇಲ್ಯಾಸ್ ಮತ್ತು ಮೃತ ತೆಹ್ಸಿನ್ ಆರು ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಹೆಣ್ಣು ಮಕ್ಕಳಿದ್ದರು. ಆದರೆ ಆರೋಪಿ ತಲ್ಯಾಸ್ ಗೆ ತನ್ನ ಸಂಬಂಧಿಯಾದ ಆಫ್ರೀನ್ ಸಯ್ಯದ್ ಜೊತೆ ಅನೈತಿಕ ಸಂಬಂಧ ಇತ್ತು. ಆಕೆಯನ್ನೇ ಮದುವೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದು, ಪತ್ನಿಗೆ ವಿಚ್ಛೇದನ ಕೊಡುವಂತೆ ಒತ್ತಾಯಿಸುತ್ತಿದ್ದನು. ಇತ್ತ ಪತಿಯ ಮತ್ತು ಆಫ್ರೀನ್ ಸಂಬಂಧ ಬಗ್ಗೆ ಮೃತ ತಹ್ಸಿನ್‍ಗೆ ತಿಳಿದಿತ್ತು. ಹೀಗಾಗಿ ದಂಪತಿ ನಡುವೆ ಪ್ರತಿದಿನ ಜಗಳವಾಗುತ್ತಿತ್ತು ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ ರವೀಂದ್ರ ಶಿಶ್ವೆ ಹೇಳಿದ್ದಾರೆ.

    ಕೊನೆಗೆ ಲವ್ವರ್ ಜೊತೆ ಸೇರಿಕೊಂಡು ಪತ್ನಿಯನ್ನು ಕೊಲೆ ಮಾಡಲು ಇಲ್ಯಾಸ್ ನಿರ್ಧರಿಸಿದ್ದನು. ಅದರಂತೆಯೇ ಗುರುವಾರ ಬೆಳಗ್ಗೆ ತಹ್ಸಿನ್ ತನ್ನ ಹಿರಿಯ ಮಗಳನ್ನು ಶಾಲೆಗೆ ಬಿಟ್ಟು ಅಪಾರ್ಟ್ ಮೆಂಟಿಗೆ ಹಿಂದಿರುಗಿದ್ದರು. ಈ ವೇಳೆ ಪತಿ ಆಕೆಯ ಕುತ್ತಿಗೆಯನ್ನು ಹಿಸುಕಿ ಕೊಲೆ ಮಾಡಿದ್ದಾನೆ. ಇದೇ ವೇಳೆ ಮಗಳು ಆಲಿಯಾ ಕಿರುಚಾಡಿದ್ದಾಳೆ. ಹೀಗಾಗಿ ಆಕೆಯ ಕುತ್ತಿಗೆಯನ್ನು ಹಿಸುಕಿ ಕೊಂದಿದ್ದಾನೆ. ಕೊನೆಗೆ ತನಗೆ ಏನು ಗೊತ್ತಿಲ್ಲದ್ದಂತೆ ಕೆಲಸಕ್ಕೆ ಹೋಗಿದ್ದಾನೆ.

    ಇತ್ತ ಆರೋಪಿ ಇಲ್ಯಾಸ್ ಕೆಲಸ ಹೋದ ತಕ್ಷಣ ತನ್ನ ಗುರುತನ್ನು ಪತ್ತೆ ಮಾಡಬಾರದು ಎಂದು ಆಫ್ರೀನ್ ಬುರ್ಕಾ ಧರಿಸಿ ಫ್ಲಾಟ್ ಗೆ ಬಂದಿದ್ದಾಳೆ. ಬಳಿಕ ಇಬ್ಬರ ಮೇಲೆ ಅಡುಗೆ ಎಣ್ಣೆಯನ್ನು ಸುರಿದು ಬೆಂಕಿ ಹಚ್ಚಿ ಹೊರಟ್ಟಿದ್ದಾಳೆ. ಈ ವೇಳೆ ತನ್ನ ಮೇಲೆ ಅನುಮಾನ ಬಾರದಂತೆ ಮೃತ ತೆಹ್ಸಿನ್ ಮೊಬೈಲ್ ಫೋನ್ ಬಳಸಿ ಇಲ್ಯಾಸ್‍ಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗೆ ಮೆಸೇಜ್ ಕಳುಹಿಸಿದ್ದಾಳೆ. ಬಳಿಕ ಗಾರ್ಡನ್ ಬಳಿ ತನ್ನ ಬುರ್ಕಾವನ್ನು ಎಸೆದು ಹೋಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪೊಲೀಸ್ ತನಿಖೆ:
    ಅಪಾರ್ಟ್ ಮೆಂಟಿನಲ್ಲಿ ಹೊಗೆ ಕಾಣಿಸಿಕೊಂಡಿದ್ದರಿಂದ ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ನಿವಾಸಕ್ಕೆ ಬಂದಿದ್ದು, ಎರಡು ದೇಹಗಳು ಸುಟ್ಟು ಹೋಗಿದ್ದು ಕಂಡು ಬಂದಿದೆ. ಬಳಿಕ ಆರೋಪಿ ಇಲ್ಯಾಸ್ ಬಂದು ದೇಹವನ್ನು ತನ್ನ ಪತ್ನಿ ಮತ್ತು ಮಗಳು ಎಂದು ಗುರುತಿಸಿದ್ದಾನೆ. ಶಾಹು ಪೊಲೀಸರು ಈ ಕುರಿತು ಅಪರಿಚಿತ ವ್ಯಕ್ತಿಗಳು ಕೊಲೆ ಮಾಡಿದ್ದಾರೆ ಎಂದು ಕೇಸ್ ದಾಖಲಿಸಿಕೊಂಡಿದ್ದು, ತನಿಖೆ ಶುರುಮಾಡಿದ್ದಾರು.

    ಆಗ ಆರೋಪಿ ನಾನು ಕೆಲಸಕ್ಕೆ ಹೋಗಿದ್ದೆ. ನನಗೆ ಏನು ಗೊತ್ತಿಲ್ಲ ಎಂದು ಹೇಳಿದ್ದಾನೆ. ಪೊಲೀಸರು ಕಟ್ಟಡ ಮತ್ತು ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿಯನ್ನು ಪರಿಶೀಲಿಸಿದಾಗ ಸುಮಾರು 10:35 ಗಂಟೆಗೆ ಟ್ಯಾಕ್ಸಿಯಲ್ಲಿ ಬುರ್ಕಾ ಧರಿಸಿ ಬಂದು ತಹ್ಸಿನ್ ಮನೆಗೆ ಹೋಗಿರುವುದು. ಮತ್ತೆ ಬುರ್ಕಾ ತೆಗೆದು ಅಪಾರ್ಟ್ ಮೆಂಟ್ ನಿಂದ 11:10 ಗಂಟೆಗೆ ಹೊರಟಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಇತ್ತ ಆರೋಪಿ ಇಲ್ಯಾಸ್ ಕೆಲಸಕ್ಕೆ ಹೋಗಿದ್ದ ಜಾಗದಲ್ಲೂ ವಿಚಾರಿಸಿದಾಗ ಆರೋಪಿ ಮನೆಗೆ ಬೇಗ ಹೋಗಿರುವುದು ತಿಳಿದು ಬಂದಿದೆ. ನಂತರ ಪೊಲೀಸರು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾವೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಪತ್ನಿಯ ಗುಪ್ತಾಂಗಕ್ಕೆ ಕರೆಂಟ್ ಶಾಕ್ ಕೊಟ್ಟ ಸಿಎಎಫ್ ಸೈನಿಕ

    ಪತ್ನಿಯ ಗುಪ್ತಾಂಗಕ್ಕೆ ಕರೆಂಟ್ ಶಾಕ್ ಕೊಟ್ಟ ಸಿಎಎಫ್ ಸೈನಿಕ

    ರಾಯ್ಪುರ್: ಛತ್ತೀಸ್‍ಗಢ ಆರ್ಮಿ ಫೋರ್ಸ್(ಸಿಎಎಫ್) ನ ಸೈನಿಕನೊಬ್ಬ ಪತ್ನಿಯ ಶೀಲ ಶಂಕಿಸಿ ಆಕೆಗೆ ವಿದ್ಯುತ್ ಶಾಕ್ ಕೊಟ್ಟು ಕೊಲೆ ಮಾಡಿರುವ ಘಟನೆ ಭಟಪಾರ ಜಿಲ್ಲೆಯ ಬಾಲೋದಬಜಾರ್ ನಗರದಲ್ಲಿ ನಡೆದಿದೆ.

    ಲಕ್ಷ್ಮೀ(27) ಪತಿಯಿಂದಲೇ ಕೊಲೆಯಾದ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ 33 ವರ್ಷದ ಸುರೇಶ್ ಮಿರಿನನ್ನು ಬುಧವಾರ ಮುಂಗೆಲಿ ಜಿಲ್ಲೆಯ ಸರ್ಗಾಂವ್ ಪೊಲೀಸರು ಬಂಧಿಸಿದ್ದಾರೆ ಎಂದು ಸಹಾಯಕ ಉಪ ಇನ್ಸ್ ಪೆಕ್ಟರ್ ಪರಾಸ್ ರಾಮ್ ಜಗತ್ ಹೇಳಿದ್ದಾರೆ.

    ಘಟನೆಯ ವಿವರ:
    ಆರೋಪಿ ದಾಂತೇವಾಡಾ ಜಿಲ್ಲೆಯ ಸಿಎಎಫ್ ನ 6ನೇ ಬೆಟಾಲಿಯನ್ ನಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದನು. ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಭಟಪಾರದ ವಸತಿ ಬೋರ್ಡ್ ಕಾಲೊನಿಯಲ್ಲಿ ವಾಸವಾಗಿದ್ದರು. ಆರೋಪಿ ಮಿರಿ ಪತ್ನಿ ಬೇರೊಬ್ಬರ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು ಎಂದು ಅನುಮಾನ ಪಡುತ್ತಿದ್ದನು. ಇದೇ ವಿಚಾರಕ್ಕೆ ಪ್ರತಿದಿನ ಜಗಳವಾಗುತ್ತಿತ್ತು ಎಂದು ಜಗತ್ ಅವರು ತಿಳಿಸಿದ್ದಾರೆ.

    ಬುಧವಾರ ಮೃತ ಲಕ್ಷ್ಮಿ ಬಾತ್‍ರೂಮಿನಲ್ಲಿ ಬಟ್ಟೆಯನ್ನು ವಾಶ್ ಮಾಡುತ್ತಿದ್ದರು. ಆಗ ಏಕಾಏಕಿ ಆರೋಪಿ ಮಿರಿ ಮನೆಗೆ ಬಂದು ಪತ್ನಿಗೆ ಥಳಿಸಿದ್ದಾನೆ. ಪರಿಣಾಮ ಲಕ್ಷ್ಮಿ ಪ್ರಜ್ಞೆತಪ್ಪಿ ಬಿದ್ದಿದ್ದಾರೆ. ಈ ವೇಳೆ ಆರೋಪಿ ಮಿರಿ ವಿದ್ಯುತ್ ತಂತಿಯಿಂದ ಆಕೆಯ ಗುಪ್ತಾಂಗಕ್ಕೆ ಶಾಕ್ ಕೊಟ್ಟಿದ್ದಾನೆ. ಆದ್ದರಿಂದ ಲಕ್ಷ್ಮಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬಳಿಕ ಮಿರಿ ಆಕೆಯ ಸಂಬಂಧಿಕರಿಗೆ ಕರೆ ಮಾಡಿ ಲಕ್ಷ್ಮಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ ಎಂದು ಹೇಳಿದ್ದಾನೆ.

    ಇಷ್ಟು ಮಾತ್ರವಲ್ಲದೇ ಆತನೇ ವ್ಯಾನ್ ಬುಕ್ ಮಾಡಿ ಲಕ್ಷ್ಮಿ ಮೃತ ದೇಹವನ್ನು ಮುಂಗೆಲಿ ಜಿಲ್ಲೆಯ ಪತ್ನಿಯ ಖಜರಿ ಗ್ರಾಮಕ್ಕೆ ಸಾಗಿಸಿದ್ದಾನೆ. ಅಲ್ಲಿಯೂ ಕೂಡ ಅನಾರೋಗ್ಯದಿಂದ ಲಕ್ಷ್ಮಿ ಮೃತಪಟ್ಟಿದ್ದಾಳೆ ಎಂದು ಹೇಳಿಕೊಂಡಿದ್ದಾನೆ ಅಂತ ಪೊಲೀಸರು ತಿಳಿಸಿದ್ದಾರೆ.

    ಲಕ್ಷ್ಮಿಯ ದೇಹವನ್ನು ನೋಡಿ ಸಂಬಂಧಿಕರು ಪೋಲಿಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಪತಿಯನ್ನು ಕಸ್ಟಡಿಗೆ ಕರೆದುಕೊಂಡು ಹೋಗಿದ್ದಾರೆ. ಸದ್ಯಕ್ಕೆ ಭಟಪಾರ ಪೊಲೀಸರು ಆರೋಪಿ ಮಿರಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ