Tag: ಅನೈತಿಕ ಚಟುವಟಿಕೆ

  • ‘ನಾನು ದಂಧೆ ಮಾಡೋಳು ಏನ್ ಮಾಡ್ಕೋತ್ತೀರಿ’- ಆಂಟಿಯ ಹೈಟೆಕ್ ಸೆಕ್ಸ್ ದಂಧೆ

    ‘ನಾನು ದಂಧೆ ಮಾಡೋಳು ಏನ್ ಮಾಡ್ಕೋತ್ತೀರಿ’- ಆಂಟಿಯ ಹೈಟೆಕ್ ಸೆಕ್ಸ್ ದಂಧೆ

    -ಗುಮ್ಮಟ ನಗರಿಯಲ್ಲಿ ಆಂಟಿಯ ಮಾಂಸ ದಂಧೆ

    ವಿಜಯಪುರ: ಕೊರೊನಾ ರುದ್ರ ನರ್ತನದ ನಡುವೆ ಎಗ್ಗಿಲ್ಲದೇ ಮಾಂಸ ದಂಧೆ ನಡೆಯುತ್ತಿದೆ. ವಿಜಯಪುರ ನಗರದ ಗಾಂಧಿನಗರದಲ್ಲಿ ಮಾಂಸ ದಂಧೆ ಹಾಡಹಗಲೇ ಪ್ರಾರಂಭವಾಗಿದೆ.

    ಮಧ್ಯ ವಯಸ್ಕ ಮಹಿಳೆ ಈ ಮಾಂಸ ದಂಧೆಯನ್ನು ನಡೆಸುತ್ತಿರುವ ಮಾಹಿತಿ ಲಭ್ಯವಾಗಿದೆ. ವೇಶ್ಯಾವಾಟಿಕೆಗೆ ಮುಂಬೈ, ಪುಣೆಯಿಂದ ಯುವತಿಯರನ್ನು ಕರೆಸುತ್ತಿದ್ದಾಳೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಕುಟುಂಬಸ್ಥರು ಹೆಚ್ಚಾಗಿರುವ ಈ ಏರಿಯಾದಲ್ಲಿ ವೇಶ್ಯಾವಾಟಿಕೆ ನಡಸಬೇಡಿ ಅಂತಾ ಸ್ಥಳೀಯರು ಹೇಳಿದ್ರೆ, ನಾನು ದಂಧೆ ಮಾಡೋಳೆ ಏನ್ ಮಾಡ್ಕೋತಿರಿ ಮಾಡ್ಕೋಳಿ ಎಂದು ಧಮ್ಕಿ ಹಾಕಿದ್ದಾಳೆ.

    ಮಹಿಳೆಯ ಕರಾಳ ಮಾಂಸದಂಧೆಯ ಚಿತ್ರಣವನ್ನು ಸ್ಥಳೀಯರೇ ಮೊಬೈಲಿನಲ್ಲಿ ಸೆರೆ ಹಿಡಿದು ಬಯಲು ಮಾಡಿದ್ದಾರೆ. ಸ್ಥಳೀಯರು ಮೊಬೈಲಿನಲ್ಲಿ ದೃಶ್ಯ ಸೆರೆಹಿಡಿಯುತ್ತಿರೋದನ್ನ ಗಮನಿಸಿದ ಕೆಲ ಮಾಂಸದಂಧೆಕೋರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಆದಷ್ಟು ಬೇಗ ಪೊಲೀಸರು ಈ ಮಾಂಸದಂಧೆಗೆ ಬ್ರೇಕ್ ಹಾಕಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.

  • ಬಹಿರಂಗವಾಗಿ ಹಾಡಹಗಲೇ ಯುವತಿಯರಿಂದ ಎಣ್ಣೆ ಪಾರ್ಟಿ

    ಬಹಿರಂಗವಾಗಿ ಹಾಡಹಗಲೇ ಯುವತಿಯರಿಂದ ಎಣ್ಣೆ ಪಾರ್ಟಿ

    ಶಿವಮೊಗ್ಗ: ಜಿಲ್ಲೆಯ ಮಹಾನಗರ ಪಾಲಿಕೆ ನಿರ್ವಹಣೆಯಲ್ಲಿ ಇರುವ ಗಾಂಧಿ ಪಾರ್ಕ್ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿದೆ.

    ಶಿವಮೊಗ್ಗ ನಗರದ ಹೃದಯ ಭಾಗದಲ್ಲಿ ಇರುವ ಪಾರ್ಕಿನಲ್ಲಿ ನಡೆವ ಚಟುವಟಿಕೆಗಳ ಬಗ್ಗೆ ವ್ಯಾಪಕವಾದ ದೂರುಗಳು ಇದ್ದರೂ ಖಚಿತವಾದ ಆಧಾರ ಇರಲಿಲ್ಲ. ಈಗ ಈ ಪಾರ್ಕಿನಲ್ಲಿ ಒಂದಷ್ಟು ಜನ ಹುಡುಗಿಯರು ಎಣ್ಣೆ ಪಾರ್ಟಿ ಮಾಡಿದ ವಿಡಿಯೋ ಪಬ್ಲಿಕ್ ಟಿವಿಗೆ ಸಿಕ್ಕಿದೆ.

    ಮೂರ್ನಾಲ್ಕು ಜನ ಹುಡುಗಿಯರು ಹಾಗೂ ಹುಡುಗರು ಗಾಂಧಿ ಪಾರ್ಕಿನಲ್ಲಿ ಇರುವ ಕಟ್ಟೆ ಮೇಲೆ ಬೀರ್ ಬಾಟಲುಗಳನ್ನು ಇಟ್ಟುಕೊಂಡು ಕುಡಿದಿದ್ದಾರೆ. ಅಷ್ಟೇ ಅಲ್ಲದೆ ಕೇಕೆ ಹಾಕುತ್ತಾ ಅದನ್ನು ವಿಡಿಯೋ ಮಾಡಿದ್ದಾರೆ. ಬಹಿರಂಗವಾಗಿ ಹಾಡಹಗಲೇ ಎಣ್ಣೆ ಹಾಕಿದ ಈ ಯುವತಿಯರ ಕೃತ್ಯ ಗಂಭೀರವಾಗಿದೆ.

    ಈ ವಿಡಿಯೋ ಪಾರ್ಕಿಗೆ ವಾಕಿಂಗ್‍ಗಾಗಿ ಬರುವ ಸಭ್ಯಸ್ಥರಿಗೆ ಶಾಕ್ ನೀಡಿದೆ. ಇಂತಹ ಅನೇಕ ಘಟನೆಗಳಿಗೆ ಗಾಂಧಿ ಪಾರ್ಕ್ ಕೇಂದ್ರವಾಗಿದೆ. ಆದರೆ ಈ ಬಗ್ಗೆ ಮಹಾನಗರ ಪಾಲಿಕೆ ಜಾಣ ಮೌನ ತೋರುತ್ತಿದೆ.

  • ಅನೈತಿಕ ತಾಣವಾಗ್ತಿದೆ ಹೇರೋಹಳ್ಳಿ ಸ್ಮಶಾನ – ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಡಂಪ್ ಆಗ್ತಿದೆ ತ್ಯಾಜ್ಯ

    ಅನೈತಿಕ ತಾಣವಾಗ್ತಿದೆ ಹೇರೋಹಳ್ಳಿ ಸ್ಮಶಾನ – ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಡಂಪ್ ಆಗ್ತಿದೆ ತ್ಯಾಜ್ಯ

    ಬೆಂಗಳೂರು: ರಾಜ ಆಗಲಿ, ಸೇವಕ ಆಗಲಿ, ಸತ್ತ ಮೇಲೆ ಬೇಕಿರೋದು ಮೂರಡಿ ಆರಡಿ ಜಾಗ. ಆ ಜಾಗ ಈಗ ಬಿಬಿಎಂಪಿ ನಿರ್ಲಕ್ಷ್ಯದಿಂದ ಗಾಂಜಾ ಹೋಡೆಯೋ ಸ್ಥಳವಾಗಿದೆ. ಇದೆಲ್ಲೋ ದೂರದ ಊರಿನ ಸುದ್ದಿ ಅಲ್ಲ ರಾಜಧಾನಿ ಬೆಂಗಳೂರಿನ ಸ್ಮಶಾನದ ಸುದ್ದಿಯಾಗಿದೆ. ಇಲ್ಲಿನ 5 ಎಕರೆ ಜಾಗ, ಈಗ ಬಿಬಿಎಂಪಿ ಡಂಪಿಂಗ್ ಯಾರ್ಡ್ ಆಗಿದೆ.

    ಯಶವಂತಪುರ ಕ್ಷೇತ್ರದ ಹೇರೋಹಳ್ಳಿ ಗ್ರಾಮ ವಾರ್ಡ್ ನಂಬರ್ 72ರಲ್ಲಿ 5 ಎಕರೆ ಸ್ಮಶಾನ ಜಾಗ ಇದೆ. 2009ರಲ್ಲಿ ಇದನ್ನು ಬಿಬಿಎಂಪಿ ಸುಪರ್ದಿಗೆ ನೀಡಲಾಗಿತ್ತು. ಈ ಜಾಗ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಕದ್ದು-ಮುಚ್ಚಿ ಗಾಂಜಾ ಸೇದೋಕೆ ಅಂತಾನೇ ಇಲ್ಲಿಗೆ ಯುವಕರು ಬರ್ತಿದ್ದಾರೆ.

    ಅಷ್ಟೇ ಅಲ್ಲದೇ ಬಿಬಿಎಂಪಿ ನಿರ್ಲಕ್ಷ್ಯದಿಂದ ಇದು ಡಂಪಿಂಗ್ ಯಾರ್ಡ್ ಆಗಿ ಬದಲಾಗಿದೆ. ಬಿಬಿಎಂಪಿ ನಿರ್ಮಿಸಿದ್ದ ಸುತ್ತಲಿನ ಕಾಂಪೌಂಡ್ ನ್ನು ಡಂಪ್ ಮಾಡೋಕೆ ಸುಲಭ ಆಗಲಿ ಎಂದು ತೆರವು ಮಾಡಿದ್ದಾರೆ. ದಿನಕ್ಕೆ ಸುಮಾರು 10 ರಿಂದ 20 ಗಾಡಿಗಳಲ್ಲಿ ಕಸ ತಂದು ಇಲ್ಲಿ ಸುರಿಯುತ್ತಿದ್ದಾರೆ. ಇದರಿಂದ ಇಲ್ಲಿ ಓಡಾಡೋಕು ಹಿಂಸೆಯಾಗುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ಇನ್ನು ಈ ಸ್ಮಶಾನದಲ್ಲೂ ದೊಡ್ಡ ರಾಜಕೀಯ ನಡೆದಿದೆ. ಕುರುಬ ಜನಾಂಗದವರನ್ನು ಓಲೈಸಿಕೊಳ್ಳಲು ಇಲ್ಲಿ ಕಾಂಗ್ರೆಸ್ ನವರು ಕನಕ ಭವನ ನಿರ್ಮಾಣ ಮಾಡಿದ್ದಾರೆ. ಜೊತೆ ಕೆಂಪೇಗೌಡ ನಿರ್ಮಾಣಕ್ಕೆ ಪಿಲ್ಲರ್ ಕೂಡ ಹಾಕಿದ್ದಾರೆ. ಗ್ರಾಮಸ್ಥರು ಕೋರ್ಟ್‍ನಲ್ಲಿ ದಾವೆ ಹೂಡಿರುವುದರಿಂದ ಇದಕ್ಕೆ ಕೋರ್ಟ್ ತಡೆಯಾಜ್ಞೆ ತಂದಿದೆ.

  • ಜಿಲ್ಲಾಸ್ಪತ್ರೆ ಆವರಣದಲ್ಲಿ ಕಾರ್ ನಿಲ್ಲಿಸಿ-ಒಳಗಡೆಯೇ ಶುರುವಾಯ್ತು ಯುವಕ-ಯುವತಿಯ ಕುಚ್..ಕುಚ್..!

    ಜಿಲ್ಲಾಸ್ಪತ್ರೆ ಆವರಣದಲ್ಲಿ ಕಾರ್ ನಿಲ್ಲಿಸಿ-ಒಳಗಡೆಯೇ ಶುರುವಾಯ್ತು ಯುವಕ-ಯುವತಿಯ ಕುಚ್..ಕುಚ್..!

    ಚಿಕ್ಕಬಳ್ಳಾಪುರ: ಈವರೆಗೂ ಕುಡುಕರ ಪಾಲಿನ ಬಾರ್ ಆಗಿದ್ದ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದ್ದು, ಜಿಲ್ಲಾಸ್ಪತ್ರೆಯ ಆವರಣದಲ್ಲೇ ಕಾರೊಂದರಲ್ಲಿ ಯುವಕ ಮತ್ತು ಕಾಲೇಜು ಯುವತಿ ಕಾಮದಾಟ ಆಡಿದ್ದಾರೆ.

    ಜಿಲ್ಲೆಯ ಹೈಟೆಕ್ ಜಿಲ್ಲಾಸ್ಪತ್ರೆಯಲ್ಲಿ ನಡಿಯಬಾರದ ಕೆಲಸಗಳು ನಡೆಯುತ್ತಿವೆ. ಜಿಲ್ಲಾಸ್ಪತ್ರೆಯ ಆವರಣದ ಕಾರೊಂದರಲ್ಲಿ ಕಾಲೇಜು ಯುವತಿ ಹಾಗೂ ಯುವಕನೊಬ್ಬ ಕಾಮದಾಟ ಆಡುತ್ತಿರುವುದು ಪಬ್ಲಿಕ್ ಟಿವಿ ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದೆ.

    ಜಿಲ್ಲಾಸ್ಪತ್ರೆಯ ಆವರಣದಲ್ಲೇ ಕಾರಿನ ಒಳಗೆ ಯುವತಿ ಮೈಮೇಲೆ ಎರಗಿದ ಯುವಕನೊಬ್ಬ ಲೈಂಗಿಕವಾಗಿ ಆಕೆಗೆ ಕಾಟ ಕೊಟ್ಟಿದ್ದಾನೆ. ಈ ಎಲ್ಲಾ ದೃಶ್ಯಗಳು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿವೆ. ಇನ್ನೂ ಕಳೆದ 8 ತಿಂಗಳ ಹಿಂದೆಯಷ್ಟೇ ಆರಂಭಗೊಂಡಿರುವ ಹೈಟೆಕ್ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶೌಚಾಲಯಗಳು ಕುಡುಕರ ಪಾಲಿನ ಬಾರ್ ಆಗಿದೆ. ಆದರೆ ಈಗ ಆಸ್ಪತ್ರೆಯ ಆವರಣ ಹಾಗೂ ಪಾರ್ಕಿಂಗ್ ಪ್ಲಾಟ್ ನ ಖಾಲಿ ಜಾಗಗಳು ಲೈಂಗಿಕ ಕ್ರಿಯೆ ಮಾಡುವ ಅಡ್ಡಗಳಾಗಿ ಮಾರ್ಪಾಡಾಗಿವೆ.

    ಇನ್ನೂ ಈ ಸಂಬಂಧ ಇಂತಂಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಕಟ್ಟೆಚ್ಚರ ವಹಿಸಿಬೇಕಾದ ಆಧಿಕಾರಿಗಳು ಮಾತ್ರ ತಮಗೇನು ಸಂಬಂಧವಿಲ್ಲದಂತೆ ಸುಮ್ಮನಾಗಿದ್ದಾರೆ.

    ಇದನ್ನು ಓದಿ: ಜಿಲ್ಲಾಸ್ಪತ್ರೆಯ ಶೌಚಾಲಯಗಳೇ ಬಾರ್- ಕಸದ ಬುಟ್ಟಿಯಲ್ಲಿ ಪ್ರತಿದಿನ ರಾಶಿ ರಾಶಿ ಮದ್ಯದ ಪ್ಯಾಕೆಟ್