Tag: ಅನೂಪ್ ಭಂಡಾರಿ

  • ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಅಪ್ಡೇಟ್ : ಯಾವಾಗ, ಏನು ಅಂತ ನೋಡ್ಕೊಂಡ್ ಬಿಡಿ

    ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಅಪ್ಡೇಟ್ : ಯಾವಾಗ, ಏನು ಅಂತ ನೋಡ್ಕೊಂಡ್ ಬಿಡಿ

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾದ ಕುರಿತು ಅಪ್ ಡೇಟ್ ಸುದ್ದಿಗಾಗಿ ಅಭಿಮಾನಿಗಳು ಕಾಯುತ್ತಿದ್ದರು. ಬಿಡುಗಡೆ ದಿನಾಂಕ, ಹಾಡು ಬಿಡುಗಡೆ, ಇವೆಂಟ್ ಪ್ಲ್ಯಾನ್ ಕುರಿತು ಕುತೂಹಲದಿಂದ ಕಾಯುತ್ತಿದ್ದರು. ಇದಕ್ಕೆಲ್ಲ ಇಂದು ಉತ್ತರ ಸಿಕ್ಕಿದೆ. ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ತಮ್ಮ ಹುಟ್ಟು ಹಬ್ಬದ ದಿನದಂದು ವಿಶೇಷ ಅಪ್ ಡೇಟ್ ನೀಡಿದ್ದಾರೆ. ಅದನ್ನೂ ಸುಂದರವಾಗಿ ರೂಟ್ ಮ್ಯಾಪ್ ಮಾಡಿ, ಯಾವ ದಾರಿಯಲ್ಲಿ ಏನೆಲ್ಲ ಸಿಗಲಿದೆ ಎನ್ನುವ ಕುರಿತು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ : ಖ್ಯಾತ ಗಾಯಕ ಮಿಕಾ ಸಿಂಗ್ ಸ್ವಯಂವರ : ನೀವೂ ಭಾಗಿಯಾಗಬಹುದು

    ವಿಕ್ರಾಂತ್ ರೋಣ ಸಿನಿಮಾದ ಟೀಸರ್ ಬಿಡುಗಡೆ ಮಾಡುವ ಮೂಲಕ ಸಿನಿಮಾದ ಪ್ರಮೋಷನ್ ಶುರು ಮಾಡಲಿದೆ ಚಿತ್ರತಂಡ. ನಂತರ ‘ಹೇ ಫಕೀರಾ’ ಹಾಡು ರಿಲೀಸ್ ಆಗಲಿದೆ. ಈಗಾಗಲೇ ಟ್ರೇಲರ್ ಗೆ ಬಳಸಿಕೊಂಡಿರುವ ಮತ್ತು ಸಖತ್ ಕ್ರೇಜ್ ಕ್ರಿಯೇಟ್ ಮಾಡಿದ್ದ ‘ಗುಮ್ಮ ಬಂದ ಗುಮ್ಮ’ ಹಾಡು ಬಿಡುಗಡೆ ಆಗಲಿದೆ. ಇದಾದ ಕೆಲ ದಿನಗಳ ನಂತರ ‘ಚಿಕ್ಕಿ ಬೊಂಬೆ’ ಗೀತೆಯನ್ನು ರಿಲೀಸ್ ಮಾಡಲಿದ್ದಾರಂತೆ. ಬ್ಯಾಕ್ ಟು ಬ್ಯಾಕ್ ಎರಡು ಹಾಡುಗಳು ರಿಲೀಸ್ ಆದ ನಂತರ ಅಭಿಮಾನಿಗಳಿಗೆ ಒಂದ್ ಸರ್ ಪ್ರೈಸ್ ಕಾದಿದೆ. ಆ ಸರ್ ಪ್ರೈಸ್ ಏನು ಎನ್ನುವುದನ್ನು ಚಿತ್ರತಂಡ ಹೇಳಿಲ್ಲ. ಇದನ್ನೂ ಓದಿ : ಉಕ್ರೇನ್ ನಿಂದ ಪಲಾಯನ ಮಾಡಿದ ಹಾಲಿವುಡ್ ಸ್ಟಾರ್

    ಸರ್ ಪ್ರೈಸ್ ಮುಗಿಯುತ್ತಿದ್ದಂತೆಯೇ ಮತ್ತೊಂದು ಗೀತೆಯನ್ನು ಬಿಡುಗಡೆ ಮಾಡುವ ಪ್ಲ್ಯಾನ್ ಚಿತ್ರತಂಡ ಮಾಡಿಕೊಂಡಿದ್ದು, ಈ ಗೀತೆ ರಿಲೀಸ್ ಆಗುತ್ತಿದ್ದಂತೆಯೇ ಮತ್ತೊಂದು ಸರ್ ಪ್ರೈಸ್ ಕಾದಿದೆ. ಅದು ಕೂಡ ಸಸ್ಪನ್ಸ್. ಎರಡು ಸರ್ ಪ್ರೈಸ್ ಮುಗಿಯುತ್ತಿದ್ದಂತೆಯೇ ‘ದ ಕ್ವೀನ್ ಆಫ್ ಗುಡ್ ಟೈಮ್ಸ್’ ಸಾಂಗ್ ರಿಲೀಸ್ ಆಗಲಿದೆ. ಆನಂತರ ವಿಕ್ರಾಂತ್ ರೋಣ ಚಿತ್ರದ ಟ್ರೇಲರ್ ಬಿಡುಗಡೆ. ಟ್ರೇಲರ್ ನೋಡಿದವರಿಗೂ ಮತ್ತೊಂದು ಸರ್ ಪ್ರೈಸ್ ಕಾದಿದೆ. ಇಷ್ಟೊಂದು ಸರ್ ಪ್ರೈಸ್ ಗಳನ್ನು ದಾಟಿಕೊಂಡು ಬಂದರೆ ಚಿತ್ರ ಬಿಡುಗಡೆ. ಇದನ್ನೂ ಓದಿ : ಪಟ್ಟಭದ್ರ ಹಿತಾಸಕ್ತಿಯಿಂದ ಪೆದ್ರೊ ವಂಚಿತ : ಚಿತ್ರೋತ್ಸವದ ಬಗ್ಗೆ ರಿಷಭ್ ಶೆಟ್ಟಿ ಅಸಮಾಧಾನ

    ಮೂಲಗಳ ಪ್ರಕಾರ ಸರ್ ಪ್ರೈಸ್ ಅಂದರೆ, ದೇಶದ ನಾನಾ ರಾಜ್ಯಗಳಲ್ಲಿ ಇವೆಂಟ್ ಮಾಡುವ ಪ್ಲ್ಯಾನ್ ಚಿತ್ರತಂಡದ್ದು. ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗುತ್ತಿರುವುದರಿಂದ, ಆಯಾ ಭಾಷೆಯ ಚಿತ್ರರಂಗದ ಗಣ್ಯರ ಮಧ್ಯೆ ಇವೆಂಟ್ ಮಾಡುವ ಯೋಜನೆ ಸಿದ್ಧವಾಗಿದೆಯಂತೆ.

  • ವಿಕ್ರಾಂತ್ ರೋಣ 2 ಮುನ್ಸೂಚನೆ ಕೊಟ್ಟರಾ ಸುದೀಪ್?

    ವಿಕ್ರಾಂತ್ ರೋಣ 2 ಮುನ್ಸೂಚನೆ ಕೊಟ್ಟರಾ ಸುದೀಪ್?

    ಕಿಚ್ಚ ಸುದೀಪ್ ಮತ್ತು ವಿಕ್ರಾಂತ್ ರೋಣ ಸಿನಿಮಾದ ನಿರ್ದೇಶಕ ಅನೂಪ್ ಭಂಡಾರಿ ಮತ್ತೊಂದು ಸಿನಿಮಾ ಮಾಡುವುದು ಖಚಿತವಾಗಿದೆ. ಈ ಹಿಂದೆಯೇ ಸ್ವತಃ ಸುದೀಪ್ ಅವರೇ ವಿಷಯವನ್ನು ಬಹಿರಂಗ ಪಡಿಸಿದ್ದಾರೆ. ಈಗ ಮತ್ತೊಂದು ಸುದ್ದಿಯನ್ನು ಸ್ವತಃ ಸುದೀಪ್ ಅವರೇ ಟ್ವಿಟರ್ ಮೂಲಕ ಹೇಳಿಕೊಂಡಿದ್ದಾರೆ. ಅದು ವಿಕ್ರಾಂತ್ ರೋಣ 2 ಕುರಿತಾದದ್ದಾ ಅಥವಾ ಅನೂಪ್ ಭಂಡಾರಿ ಅವರ ಜತೆ ಮಾಡಬೇಕಿದ್ದ ಮತ್ತೊಂದು ಸಿನಿಮಾ ಬಿಲ್ಲ, ರಂಗ, ಬಾಷಾ ಚಿತ್ರದ್ದಾ ಎನ್ನುವ ಕುರಿತು ಕುತೂಹಲ ಮೂಡಿದೆ. ಇದನ್ನೂ ಓದಿ : ಏನಾಯ್ತು ಅಮಿತಾಭ್ ಬಚ್ಚನ್ ಗೆ? ಆತಂಕದಲ್ಲಿ ಅಭಿಮಾನಿಗಳು

    ವಿಕ್ರಾಂತ್ ರೋಣಕ್ಕಿಂತ ಮುಂಚೆಯೇ ‘ಬಿಲ್ಲ ರಂಗ ಬಾಷಾ’ ಸಿನಿಮಾ ಆಗಬೇಕಿತ್ತು. ಆದರೆ, ಅದಕ್ಕೂ ಮುನ್ನ ‘ವಿಕ್ರಾಂತ್ ರೋಣ’ ಸಿದ್ಧವಾಯಿತು. ಇತ್ತೀಚೆಗಷ್ಟೇ ಮತ್ತೆ ನಾವು ಜತೆಯಾಗಿ ಕೆಲಸ ಮಾಡುತ್ತಿದ್ದೇವೆ. ಆದಷ್ಟು ಬೇಗ ಆ ಕುರಿತು ಮಾಹಿತಿ ನೀಡುತ್ತೇನೆ ಎಂದು ಸುದೀಪ್ ಬರೆದುಕೊಂಡಿದ್ದರು. ಯಾವ ಚಿತ್ರ ಮಾಡುತ್ತಾರೆ ಎಂದು ಮಾತ್ರ ಅವರು ಈವರೆಗೂ ಹೇಳಿಲ್ಲ. ಇದನ್ನೂ ಓದಿ : ಕಂಠೀರವ ಸ್ಟುಡಿಯೋ ಆವರಣದಲ್ಲಿ 14 ಅಡಿ ಎತ್ತರದ ಅಂಬರೀಶ್ ಪ್ರತಿಮೆ

     

    ಸುದೀಪ್ ಅವರ ಗರಡಿಯಲ್ಲೇ ಸದಾ ಇರುವ ನಟ ಪ್ರದೀಪ್, ಈ ವಿಷಯ ಕುರಿತಾಗಿ ಸುದೀಪ್ ಅವರಿಗೆ ನೇರವಾಗಿ ಪ್ರಶ್ನೆಯನ್ನು ಕೇಳಿದ್ದಾರೆ. ನೀವು ಈಗ ಮಾಡಿರುವ ಟ್ವಿಟ್.. ವಿಕ್ರಾಂತ್ ರೋಣ 2 ಅಥವಾ ಬಿಲ್ಲ ರಂಗ ಬಾಷಾ? ಎಂದು ಕೇಳಿದ್ದಾರೆ. ಅವರ ಈ ಪ್ರಶ್ನೆಯೇ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

    ಸುದೀಪ್ ಅವರ ಆಪ್ತರು ಹೇಳುವ ಪ್ರಕಾರ, ಇನ್ನೂ ಎರಡು ಸಿನಿಮಾ ಮಾಡುವಷ್ಟ ಕಥೆ ವಿಕ್ರಾಂತ್ ರೋಣದಲ್ಲಿ ಇದೆಯಂತೆ. ಅಲ್ಲದೇ, ಮುಂದಿನ ಭಾಗಕ್ಕೆ ಬೇಕಾದ ಒಂದಷ್ಟು ದೃಶ್ಯಗಳನ್ನು ಈಗಾಗಲೇ ಪ್ಲ್ಯಾನ್ ಮಾಡಲಾಗಿದೆಯಂತೆ. ಹೀಗಾಗಿ ವಿಕ್ರಾಂತ್ ರೋಣ ಭಾಗ 2 ಬಂದರೂ ಅಚ್ಚರಿ ಪಡಬೇಕಿಲ್ಲ.

  • ಅನೂಪ್ ಭಂಡಾರಿ ಜತೆ ಮತ್ತೊಂದು ಚಿತ್ರ : ಸರ್ಪೈಸ್ ಕೊಟ್ಟ ಸುದೀಪ್

    ಅನೂಪ್ ಭಂಡಾರಿ ಜತೆ ಮತ್ತೊಂದು ಚಿತ್ರ : ಸರ್ಪೈಸ್ ಕೊಟ್ಟ ಸುದೀಪ್

    ಶುಕ್ರವಾರ ಬೆಳ್ಳಂಬೆಳಗ್ಗೆ ಅಭಿಮಾನಿಗಳಿಗೆ ಶುಭ ಸುದ್ದಿ ಕೊಟ್ಟಿದ್ದಾರೆ ಕಿಚ್ಚ ಸುದೀಪ್. ವಿಕ್ರಾಂತ್ ರೋಣ ಸಿನಿಮಾದ ತ್ರಿಡಿ ವರ್ಷನ್ ನೋಡಿ ಮೆಚ್ಚಿಕೊಂಡಿದ್ದಲ್ಲದೇ, ಈ ಮೂಲಕ ಇಡೀ ಚಿತ್ರತಂಡಕ್ಕೆ ಧನ್ಯವಾದಗಳನ್ನು ಹೇಳಿದ್ದಾರೆ. ಇದನ್ನೂ ಓದಿ : ಭೋಜಪುರಿ ಚಿತ್ರರಂಗದಲ್ಲಿ ಕನ್ನಡ ನಾಯಕಿಯರ ಕಲರವ

    “ವಿಕ್ರಾಂತ್ ರೋಣ ತ್ರಿಡಿ ಅದ್ಭುತವಾಗಿ ಮೂಡಿ ಬಂದಿದೆ. ಈ ಸಿನಿಮಾದ ಬಿಡುಗಡೆಯ ದಿನಾಂಕಕ್ಕಾಗಿ ನಾನು ಕಾಯುತ್ತಿದ್ದೇನೆ. ಜತೆಗೆ ನಿರ್ದೇಶಕ ಅನೂಪ್ ಭಂಡಾರಿ ಅವರ ಜತೆಗಿನ ಮತ್ತೊಂದು ಸಿನಿಮಾ ಕುರಿತಾದ ಮಾಹಿತಿ ಹಂಚಿಕೊಳ್ಳಲು ಕಾತುರನಾಗಿದ್ದೇನೆ” ಎಂದು ಸುದೀಪ್ ಟ್ವಿಟ್ ಮಾಡಿದ್ದಾರೆ. ಇದನ್ನು ಓದಿ :ಗ್ಯಾಂಗ್ ಸ್ಟಾರ್ ಅವತಾರದಲ್ಲಿ ದೊಡ್ಮನೆ ಕುಡಿ


    ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್ ನ ‘ವಿಕ್ರಾಂತ್ ರೋಣ’ ಸಿನಿಮಾದ ಕೆಲಸ ಬಹುತೇಕ ಮುಗಿದಿದೆ. ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗೆ ಸಿನಿಮಾ ಬಿಡುಗಡೆ ಆಗಬೇಕಿತ್ತು. ಕೋವಿಡ್ ಮತ್ತು ಸರಕಾರದ ಕೆಲ ನಿಯಮಗಳಿಂದಾಗಿ ಬಿಡುಗಡೆ ಎರಡೆರಡು ಬಾರಿ ಬಿಡುಗಡೆಯ ದಿನಾಂಕವನ್ನು ಮುಂದೂಡಿದ್ದಾರೆ. ಈ ಬಾರಿ ಪಕ್ಕಾ ದಿನಾಂಕವನ್ನು ಗೊತ್ತು ಮಾಡಿಕೊಂಡು ಅಖಾಡಕ್ಕೆ ಇಳಿಯಲಿದೆಯಂತೆ ಚಿತ್ರತಂಡ. ಇದನ್ನೂ ಓದಿ : ಈ ವರ್ಷ ಯಾರೆಲ್ಲ ನಟರು ನಿರ್ದೇಶನ ಮಾಡಲಿದ್ದಾರೆ ಗೊತ್ತಾ?


    ಅನೂಪ್ ಭಂಡಾರಿ ಜತೆ ಸುದೀಪ್ ಅವರು ಮತ್ತೊಂದು ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯಿತ್ತು. ಆದರೆ, ಅದನ್ನು ಇಷ್ಟು ಬೇಗ ಸುದೀಪ್ ಅವರು ಬಹಿರಂಗ ಪಡಿಸುತ್ತಾರೆ ಅಂದುಕೊಂಡಿರಲಿಲ್ಲ. ಸುದ್ದಿ ಬಹಿರಂಗವಾಗಿದ್ದರೂ, ಸಿನಿಮಾ ಆಗುವುದು ಸದ್ಯಕ್ಕಂತೂ ಅಲ್ಲ.

  • ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಬಿಡುಗಡೆ ಮುಂದೂಡಿಕೆ!

    ಬಹುನಿರೀಕ್ಷಿತ ಚಿತ್ರ ವಿಕ್ರಾಂತ್ ರೋಣ ಬಿಡುಗಡೆ ಮುಂದೂಡಿಕೆ!

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟಿಸಿರುವ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಿದೆ. ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಕಾರಣದಿಂದ ಚಿತ್ರತಂಡ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡುವುದಾಗಿ ಘೋಷಿಸಿದೆ.

    ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ ಸಿನಿಮಾ ಫೆಬ್ರವರಿ 24ರಂದು ಬಿಡುಗಡೆಯಾಗಬೇಕಿತ್ತು. ಆದರೆ ಕೊರೊನಾ ಭೀತಿಯಿಂದಾಗಿ ಸಿನಿಮಾ ಸೇರಿದಂತೆ ಎಲ್ಲಾ ವಾಣಿಜ್ಯ ಉದ್ಯಮಗಳು ಆತಂಕಕ್ಕೆ ಒಳಗಾಗಿವೆ. ಹೀಗಾಗಿ ಸಿನಿಮಾವನ್ನು ಮುಂದೂಡುವುದಾಗಿ ಚಿತ್ರ ತಂಡ ಘೋಷಿಸಿದೆ. ಇದನ್ನೂ ಓದಿ: ಚಿರು ಸ್ನೇಹಿತನ ಮಗನಿಗೆ ಹೇರ್ ಸ್ಟೈಲಿಸ್ಟ್ ಆದ ರಾಯನ್- ಫೋಟೋ ವೈರಲ್

    ‘ನಮ್ಮ ಕನಸು ಫೆಬ್ರವರಿ 24ರಂದು ನಿಮ್ಮ ಮುಂದೆ ತರಲು ನಾವು ಉತ್ಸುಕರಾಗಿದ್ದರೂ, ಪ್ರಸ್ತುತ ಕೋವಿಡ್ ಪರಿಸ್ಥಿತಿ ಹಾಗೂ ಅದಕ್ಕೆ ಸಂಬಂಧಿಸಿದ ನಿಯಮಾವಳಿಗಳು, ಪ್ರಪಂಚದಾದ್ಯಂತ ನಮ್ಮ ಸಿನಿಮಾವನ್ನು ತಲುಪಿಸಲು ಅನುಕೂಲಕರವಾಗಿಲ್ಲ. ನಿಮ್ಮ ಪ್ರೀತಿ ಹಾಗೂ ತಾಳ್ಮೆಗೆ ನಾವು ಆಭಾರಿ. ಅದಕ್ಕೆ ಪ್ರತಿಯಾಗಿ, ನೀವು ಮನಸಾರೆ ಸ್ವೀಕರಿಸುವಂತಹ ಚಿತ್ರ ನಿಮ್ಮ ಮುಂದೆ ತರುತ್ತೇವೆ ಎಂಬ ಭರವಸೆ ನಮಗಿದೆ. ಭಾರತದ ಮೊದಲ ಅಡ್ವೆಂಚರ್ ಹೀರೋನನ್ನು ಪ್ರಪಂಚಕ್ಕೆ ಪರಿಚಯಿಸುವ ಹೊಸ ದಿನಾಂಕವನ್ನು ಶೀಘ್ರದಲ್ಲೇ ನಿಮಗೆ ತಿಳಿಸುತ್ತೇವೆ ಎಂದು ನಿರ್ದೇಶಕ ಅನೂಪ್ ಭಂಡಾರಿ ಇನ್‍ಸ್ಟಾಗ್ರಾಮ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ನಿದ್ದೆಗಳಿಲ್ಲದ ರಾತ್ರಿ ಕಳೆಯಲು ಸಿದ್ಧರಾಗಿ – ಪ್ರಿಯಾಂಕಾಗೆ ಅನುಷ್ಕಾ ಶರ್ಮಾ ವಿಶ್

     

    View this post on Instagram

     

    A post shared by Manjunathgowda (@jack_manjunath_)

    ಬಹು ನಿರೀಕ್ಷಿತ ಸ್ಯಾಂಡಲ್‍ವುಡ್ ಸಿನಿಮಾದಲ್ಲಿ ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ಜಾಕ್ವೆಲಿನ್ ಫರ್ನಾಂಡಿಸ್ ಮುಂತಾದವರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಒಟಿಟಿ ಮುಖಾಂತರ ಸಿನಿಮಾವನ್ನು ಬಿಡುಗಡೆ ಮಾಡಲು ಒಪ್ಪದ ಚಿತ್ರತಂಡ ನೇರವಾಗಿ ಚಿತ್ರಮಂದಿರದಲ್ಲೇ ಬಿಡುಗಡೆ ಮಾಡಲು ಸರಿಯಾದ ಸಮಯಕ್ಕೆ ನಿರೀಕ್ಷಿಸುತ್ತಿದೆ.

  • ವಿಕ್ರಾಂತ್ ರೋಣ ಡಿಸೆಂಬರ್​ನಲ್ಲಿ ಬಿಡುಗಡೆ ಸಾಧ್ಯತೆ

    ವಿಕ್ರಾಂತ್ ರೋಣ ಡಿಸೆಂಬರ್​ನಲ್ಲಿ ಬಿಡುಗಡೆ ಸಾಧ್ಯತೆ

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಡಿಸೆಂಬರ್ ತಿಂಗಳಿನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

    ನಿರ್ಮಾಪಕ ಜಾಕ್ ಮಂಜು ‘ವಿಕ್ರಾಂತ್ ರೋಣ’ ಸಿನಿಮಾ ಕುರಿತು ಮಾತನಾಡಿದ್ದು, ಪರಿಸ್ಥಿತಿ ಸರಿಯಾಗಿದ್ದರೆ ಡಿಸೆಂಬರ್‍ನಲ್ಲಿ ಚಿತ್ರವನ್ನು ರಿಲೀಸ್ ಮಾಡುತ್ತೇವೆ. ಡಿಸೆಂಬರ್‍ನಲ್ಲಿ ರಿಲೀಸ್ ಮಾಡುವ ಉದ್ದೇಶ ಇಟ್ಟುಕೊಂಡು ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಆದರೆ ದಿನಾಂಕವನ್ನು ನಾವು ಘೋಷಿಸುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಅಮ್ಮ ನೀವು ಸೂಪರ್ ವುಮೆನ್ – ಹಾಡಿ ಹೊಗಳಿದ ರಾಧಿಕಾ ಪಂಡಿತ್

    ದಿನಾಂಕ ಹೇಳಿ ಮತ್ತೆ ಮುಂದೆ ಹೋಗುವುದು ನಮಗೆ ಇಷ್ಟವಿಲ್ಲ. ಸಿನಿಮಾ ಬಿಡುಗಡೆಗೆ ಇನ್ನೂ 10 ದಿನ ಇದೆ ಎಂದಾಗ ದಿನಾಂಕ ಕುರಿತು ನಾವು ಹೇಳುತ್ತೇವೆ ಎಂದು ಹೇಳಿದ್ದಾರೆ.

    ಈ ಸಮಯಕ್ಕೆ ಬೇರೆ ರಾಜ್ಯಗಳ ಚಿತ್ರರಂಗದಸ್ಥಿತಿಯನ್ನ ನೋಡಿ ಆ ಭಾಷೆಗಳಲ್ಲಿ ರಿಲೀಸ್ ಮಾಡುವುದರ ಬಗ್ಗೆ ನಾವು ಯೋಚಿಸುತ್ತೇವೆ. ಅಂಧ್ರದಲ್ಲಿ 100% ಸೀಟು ಭರ್ತಿಗೆ ಆದೇಶ ಬರಲಿದೆ. ಅದು ಅಲ್ಲದೇ ಬೇರೆ ಭಾಷೆಗಳಲ್ಲಿ ರಿಲೀಸ್ ಮಾಡಲು ಸಾಕಷ್ಟು ಖರ್ಚು ಮಾಡಬೇಕು. ಇವೆಲ್ಲ ಸೇರಿ ಸಿನಿಮಾದ ಬಜೆಟ್ 100 ಕೋಟಿ ರೂ. ಆಗಬಹುದು ಎಂದಿದ್ದಾರೆ. ಇದನ್ನೂ ಓದಿ: ಮಗನಿಗೆ 6 ತಿಂಗಳು ತುಂಬಿರೋ ಸಂಭ್ರಮ- ಮುಯೂರಿ ಫೋಟೋಶೂಟ್

    ಓಟಿಟಿಗಳಿಂದ ನಮಗೆ ಸಾಕಷ್ಟು ಆಫರ್ ಬರುತ್ತಿದೆ. ಆದರೆ ನಾವು ಅಲ್ಲಿ ಈ ಸಿನಿಮಾವನ್ನು ಬಿಡುವುದಿಲ್ಲ. ಮೊದಲು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತೇವೆ. ಬಳಿಕ ಜನರ ಪ್ರತಿಕ್ರಿಯೆ ನೋಡಿಕೊಂಡು ಓಟಿಟಿಯಲ್ಲಿ ಬಿಡುಗಡೆ ಮಾಡುತ್ತೇವೆ. ಸುದೀಪ್ ಅವರು ಈಗಾಗಲೇ ಕನ್ನಡದಲ್ಲಿ ಡಬ್ಬಿಂಗ್ ಮುಗಿಸಿದ್ದಾರೆ. ಮಲಯಾಳಂ ಬಿಟ್ಟು, ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಕಿಚ್ಚ ಅವರೇ ಧ್ವನಿ ನೀಡುತ್ತಿದ್ದಾರೆ ಎಂದರು. ಇದನ್ನೂ ಓದಿ:  ಆಹಾರ, ಸೆಕ್ಸ್ ಯಾವುದನ್ನ ಆಯ್ಕೆ ಮಾಡಿಕೊಳ್ಳುತ್ತೀರಾ..?: ಶೃತಿ ಕೊಟ್ರು ಬೋಲ್ಡ್ ಆನ್ಸರ್

  • ವಿಕ್ರಾಂತ್ ರೋಣದಲ್ಲಿ ಸುದೀಪ್ ಜೊತೆ ಅದ್ಭುತ ಕಾಲ ಕಳೆದೆ: ಜಾಕ್ವೆಲಿನ್

    ವಿಕ್ರಾಂತ್ ರೋಣದಲ್ಲಿ ಸುದೀಪ್ ಜೊತೆ ಅದ್ಭುತ ಕಾಲ ಕಳೆದೆ: ಜಾಕ್ವೆಲಿನ್

    ಮುಂಬೈ: ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಇದೇ ಮೊದಲ ಬಾರಿಗೆ ಕನ್ನಡದ ವಿಕ್ರಾಂತ್ ರೋಣ ಸಿನಿಮಾದಲ್ಲಿ ಅಭಿನಯಿಸಿದರ ಕುರಿತು ತಮ್ಮ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಈ ಕುರಿತಂತೆ ಜಾಕ್ವೆಲಿನ್ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವೊಂದನ್ನು ಹಂಚಿಕೊಂಡಿದ್ದು, ವಿಕ್ರಾಂತ್ ರೋಣ ಚಿತ್ರೀಕರಣದ ವೇಳೆ ಕಿಚ್ಚ ಸುದೀಪ್ ಅವರೊಂದಿಗೆ ಅದ್ಭುತ ಕಾಲ ಕಳೆದೆ. ಶಾಲಿನಿ ಹಾಗೂ ಜಾಕ್ ಮಂಜುರವರ ಸ್ವಾಗತ ಮತ್ತು ಆತಿಥ್ಯಕ್ಕೆ ಧನ್ಯವಾದಗಳು.

    ಕಿಚ್ಚ ಸುದೀಪ್ ಅವರೊಟ್ಟಿಗೆ ದೀರ್ಘಕಾಲದಿಂದ ಕೆಲಸ ಮಾಡಿದ ಅನುಭವ. ಮುಂದಿನ ಬಾರಿ ಟಫ್ ಚೆಸ್ ಆಟಕ್ಕೆ ಸಿದ್ಧರಾಗಿ. ಅನೂಪ್ ಭಂಡಾರಿ ನಿಮ್ಮ ಯೋಜನೆಗಳ ಬಗೆಗಿನ ಸ್ಪಷ್ಟತೆ ಮತ್ತು ವಿಕ್ರಾಂತ್ ರೋಣ ಚಿತ್ರೀಕರಿಸುತ್ತಿರುವ ರೀತಿ ಅದ್ಭುತವಾಗಿದೆ. ಇಡೀ ಚಿತ್ರತಂಡಕ್ಕೆ ಧನ್ಯವಾದ. ಮತ್ತೆ ಶೀಘ್ರದಲ್ಲಿಯೇ ಸಿಗೋಣಾ. ವಿಕ್ರಾಂತ್ ರೋಣ ಸಿನಿಮಾ ಖಂಡಿತಾ ಭಾರತವನ್ನು ಜಾಗತಿಕ ಮಟ್ಟದಲ್ಲಿ ಹೆಮ್ಮೆ ಪಡಿಸುತ್ತದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

    ಇದೇ ಪ್ರಥಮ ಬಾರಿಗೆ ಜಾಕ್ವೆಲಿನ್ ಫರ್ನಾಂಡಿಸ್ ದಕ್ಷಿಣ ಭಾರತದ ಸಿನಿಮಾಕ್ಕೆ ಬಣ್ಣ ಹಚ್ಚಿದ್ದು, ವಿಕ್ರಾಂತ್‍ರೋಣ ಸಿನಿಮಾದ ನಾಯಕನಾಗಿ ನಟ ಕಿಚ್ಚ ಸುದೀಪ್ ನಟಿಸುತ್ತಿದ್ದು, ಚಿತ್ರದ ವಿಶೇಷ ಹಾಡೊಂದಕ್ಕೆ ಜಾಕ್ವೆಲಿನ್ ಹೆಜ್ಜೆ ಹಾಕಿದ್ದಾರೆ. ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ಈ ಹಾಡಿಗೆ ನೃತ್ಯ ಮಾಡಲು ಇತ್ತೀಚೆಗಷ್ಟೇ ಮುಂಬೈನಿಂದ ಜಾಕ್ವೆಲಿನ್ ಬೆಂಗಳೂರಿಗೆ ಬಂದಿದ್ದರು. ಸದ್ಯ ಹಾಡಿನ ಚಿತ್ರೀಕರಣ ಪೂರ್ಣಗೊಂಡಿದ್ದು, ಜಾಕ್ವೆಲಿನ್ ಮತ್ತೆ ಮುಂಬೈಗೆ ಹಾರಿದ್ದಾರೆ. ಇದನ್ನೂ ಓದಿ: ಜಾಕ್ವೆಲಿನ್ ಜೊತೆ ಫೇವರೆಟ್ ಫೋಟೋ ಶೇರ್ ಮಾಡಿದ ಸುದೀಪ್

  • ಫ್ಯಾಂಟಮ್ ಟೈಟಲ್ ಬದಲಾಗಿದ್ದೇಕೆ? ಅನೂಪ್ ಭಂಡಾರಿ ಸ್ಪಷ್ಟನೆ

    ಫ್ಯಾಂಟಮ್ ಟೈಟಲ್ ಬದಲಾಗಿದ್ದೇಕೆ? ಅನೂಪ್ ಭಂಡಾರಿ ಸ್ಪಷ್ಟನೆ

    ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಫ್ಯಾಂಟಮ್ ಸಿನಿಮಾದ ಟೈಟಲ್ ಬದಲಾಗಿದ್ದೇಕೆ ಅನ್ನೋ ಪ್ರಶ್ನೆಗೆ ನಿರ್ದೇಶಕ ಅನೂಪ್ ಭಂಡಾರಿ ಸ್ಪಷ್ಟನೆ ನೀಡಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಂಡಿರುವ ಅನೂಪ್ ಭಂಡಾರಿ, ಸಿನಿಮಾದ ಚಿತ್ರೀಕರಣ ಆರಂಭವಾದಾಗ ಅರ್ಧ ಮುಖದ ಫೋಟೋ ಹಾಕಿ ವಿಕ್ರಾಂತ್ ರೋಣ ಡ್ಯೂಟಿಗೆ ಹಾಜರು ಅಂತ ಹಾಕಿಕೊಂಡಿದ್ದಾರೆ. ಫ್ಯಾಂಟಮ್ ಟೈಟಲ್ ಗಿಂತ ವಿಕ್ರಾಂತ್ ರೋಣ ಹೆಸರು ಹೆಚ್ಚು ಸದ್ದು ಮಾಡಿದೆ. ಹಾಗಾಗಿ ಸಿನಿಮಾ ಟೈಟಲ್ ಬದಲಿಸಲಾಗಿದೆ. ವಿಕ್ರಾಂತ್ ರೋಣ ಅಲ್ಲಿಂದ ತಂದಿರೋದ ಶೀರ್ಷಿಕೆ ಅಲ್ಲ. ಇದು ಸಿನಿಮಾದ ನಿಮ್ಮ ಹೀರೋ ಹೆಸರು. ಹಾಗಾಗಿ ಅಭಿಮಾನಿಗಳ ಇಷ್ಟದಂತೆ ಫ್ಯಾಂಟಮ್ ಸಿನಿಮಾವನ್ನ ವಿಕ್ರಾಂತ್ ರೋಣನನ್ನಾಗಿ ಪರಿಚಯಿಸಲಾಗ್ತಿದೆ ಎಂದು ತಿಳಿಸಿದ್ದಾರೆ.

    ವಿಕ್ರಾಂತ್ ರೋಣನಾಗಿ ಜನವರಿ 31ರಂದು ಬುರ್ಜ್ ಖಲೀಫ ಮೇಲೆ ಅಬ್ಬರಿಸಲಿದ್ದಾನೆ. ನಿರ್ದೇಶಕ ಅನೂಪ್ ಭಂಡಾರಿ, ಜನವರಿ 31 ರಂದು ಟೈಟಲ್ ಲೋಗೋ ಹಾಗೂ 3 ನಿಮಿಷದ ವೀಡಿಯೋವನ್ನು ಬುರ್ಜ್ ಖಲೀಫ ಮೇಲೆ ರಿವೀಲ್ ಮಾಡೋದಾಗಿ ತಿಳಿಸಿದ್ದಾರೆ.

  • ಚಾಮುಂಡಿ ತಾಯಿಯ ದರ್ಶನ ಪಡೆದ ಅಭಿನಯ ಚಕ್ರವರ್ತಿ

    ಚಾಮುಂಡಿ ತಾಯಿಯ ದರ್ಶನ ಪಡೆದ ಅಭಿನಯ ಚಕ್ರವರ್ತಿ

    – ಅಭಿಮಾನಿಗೆ ಕಿಚ್ಚ ಕಿವಿಮಾತು

    ಮೈಸೂರು: ಸ್ಯಾಂಡಲ್‍ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇಂದು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ್ದಾರೆ.

    ಫ್ಯಾಂಟಮ್ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸುದೀಪ್ ಅವರು ಇಂದು ನಿರ್ದೇಶಕ ಅನೂಪ್ ಭಂಡಾರಿ ಜೊತೆ ಆಗಮಿಸಿ ನಾಡದೇವಿಯ ದರ್ಶನ ಪಡೆದರು.

    ತಮ್ಮ ನೆಚ್ಚಿನ ನಟ ಬರುತ್ತಿದ್ದಂತೆಯೇ ಅಭಿಮಾನಿಗಳು ಸುದೀಪ್ ಜೊತೆ ಫೋಟೋ ತೆಗೆದುಕೊಳ್ಳಲು ಮುಗಿಬಿದ್ದರು. ಅಭಿಮಾನಿಗಳ ನೂಕುನುಗ್ಗಲು ಗಮನಿಸಿದ ನಟ, ಓರ್ವನಿಗೆ ಸಂಯಮದಿಂದ ವರ್ತಿಸುವಂತೆ ಕಿವಿಮಾತು ಹೇಳಿದರು.

    ದೇವಸ್ಥಾನದಲ್ಲಿ ನಿಶ್ಯಬ್ದ ಕಾಪಾಡುವಂತೆ ಬಾಯಿ ಮೇಲೆ ಬೆರಳು ಇಟ್ಟು ಸುದೀಪ್ ತಮ್ಮ ಅಭಿಮಾನಿಗಳಿಗೆ ಸನ್ನೆ ಮಾಡಿದರು. ಇದೇ ವೇಳೆ ಮಾಸ್ಕ್ ಧರಿಸದೇ ಫೋಟೋ ತೆಗೆಸಿಕೊಳ್ಳಲು ಬಂದ ಅಭಿಮಾನಿಗೆ ಮತ್ತೊಬ್ಬ ಅಭಿಮಾನಿ ಕ್ಲಾಸ್ ತೆಗೆದುಕೊಂಡ ಪ್ರಸಂಗವೂ ನಡೆಯಿತು.

    ಕೊರೊನಾದಿಂದ ಸ್ಥಗಿತವಾಗಿದ್ದ ಸುದೀಪ್ ಅಭಿನಯದ ಫ್ಯಾಂಟಮ್ ಚಿತ್ರದ ಸೂಟಿಂಗ್ ಅನ್ ಲಾಕ್ ಬಳಿಕ ಆರಂಭಗೊಂಡಿತ್ತು. ಕೊರೊನಾ ಆತಂಕದ ನಡುವೆಯೂ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿದ ಚಿತ್ರತಂಡ ಶೂಟಿಂಗ್ ಮುಗಿಸಿದೆ. ಸುದಫ್ ಮತ್ತು ನಟಿ ಅಪರ್ಣಾ ಬಲ್ಲಾಳ್ ಹುಟ್ಟುಹಬ್ಬದಂದು ಚಿತ್ರದಲ್ಲಿನ ಇಬ್ಬರ ಲುಕ್ ರಿವೀಲ್ ಮಾಡಲಾಗಿತ್ತು. ಹಾಗೆಯೇ ದಟ್ಟ ಕಾಡಿನ ನಡುವೆ ಸುದೀಪ್ ದೋಣಿಯಲ್ಲಿ ಹೊರಟ ಧಗಧಗಿಸುವ ನೋಟ ಸ್ಯಾಂಡಲ್‍ವುಡ್ ಅಂಗಳದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.

  • ಸುದೀಪ್ ಫ್ಯಾಂಟಮ್ ಲೋಕಕ್ಕೆ ಪನ್ನಾ ಎಂಟ್ರಿ

    ಸುದೀಪ್ ಫ್ಯಾಂಟಮ್ ಲೋಕಕ್ಕೆ ಪನ್ನಾ ಎಂಟ್ರಿ

    ಬೆಂಗಳೂರು: ಅನೂಪ್ ಭಂಡಾರಿ ಕಲ್ಪನೆಯ ಕಿಚ್ಚನ ಫ್ಯಾಂಟಮ್ ಲೋಕಕ್ಕೆ ಹೊಸ ಪಾತ್ರ ಪನ್ನಾ ಎಂಟ್ರಿಯಾಗಿದೆ. ಬುಧವಾರ ಫ್ಯಾಂಟಮ್ ಚಿತ್ರತಂಡ ಪನ್ನಾ ಪಾತ್ರ ಪರಿಚಯಿಸುವ ಬಗ್ಗೆ ಮಾಹಿತಿ ನೀಡಿತ್ತು.

    ವಿಡಿಯೋ ಟ್ವೀಟ್ ಮಾಡಿರುವ ಅನೂಪ್ ಭಂಡಾರಿ ಪನ್ನಾ ಪಾತ್ರದ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಪನ್ನಾ ಮುಂಬೈನಲ್ಲಿ ಹುಟ್ಟಿ ಬೆಳೆದ ಹುಡುಗಿ. ಹಾಗಾಗಿ ಹಿಂದಿ ಮಿಶ್ರಿತ ಕನ್ನಡ ಮಾತನಾಡುತ್ತಾರೆ. ಪನ್ನಾ ಸಾಹಸಿಯಾಗಿದ್ದು ಎಲ್ಲವನ್ನು ತಿಳಿದುಕೊಳ್ಳುವ ಕುತುಹೂಲ ಹೊಂದಿರುವ ಯುವತಿ. ಫ್ಯಾಂಟಮ್ ಚಿತ್ರದಲ್ಲಿ ಅಪರ್ಣಾ ಬಲ್ಲಾಳ್ ಬಹು ಪ್ರಮುಖ ಪಾತ್ರ. ನೀತಾ ಅಶೋಕ್ ಈ ಪಾತ್ರದಲ್ಲಿ ನಟಿಸುತ್ತಿದ್ದು, ಮೊದಲ ಬಾರಿಗೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಫ್ಯಾಂಟಮ್ ಸಿನಿಮಾ ಸೆಟ್ಟೇರಿದಾಗಿನಿಂದಲೂ ಭರವಸೆಯನ್ನು ಹೆಚ್ಚಿಸುತ್ತಾ ಬಂದಿದೆ. ಲಾಕ್‍ಡೌನ್ ಬಳಿಕ ಚಿತ್ರೀಕರಣ ಆರಂಭಿಸಿರುವ ಫ್ಯಾಂಟಮ್, ಚಿತ್ರದ ಹೊಸ ಹೊಸ ಲುಕ್ ಗಳನ್ನು ಬಿಡುಗಡೆ ಮಾಡುತ್ತಾ ಬಂದಿದೆ. ಇತ್ತೀಚಿಗೆ ಕೈಯಲ್ಲಿ ಗನ್ ಹಿಡಿದು ಕುಳಿತ ವಿಕ್ರಾಂತ್ ರೋಣನ ಲುಕ್ ಬಿಡುಗಡೆ ಮಾಡಲಾಗಿತ್ತು. ಇದಕ್ಕೂ ದಟ್ಟಾರಣ್ಯದಲ್ಲಿ ಹೊರಟ ವಿಕ್ರಾಂತ್ ರೋಣನ ಒಂದು ಝಲಕ್ ಸೋಶಿಯಲ್ ಮೀಡಿಯಾದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತ್ತು.

  • ಹುಟ್ಟುಹಬ್ಬಕ್ಕೆ ಪೋಸ್ಟರ್ ರಿಲೀಸ್- ನಿರೂಪ್‍ಗೆ ಕಿಚ್ಚನಿಂದ ಸ್ಪೆಷಲ್ ಗಿಫ್ಟ್

    ಹುಟ್ಟುಹಬ್ಬಕ್ಕೆ ಪೋಸ್ಟರ್ ರಿಲೀಸ್- ನಿರೂಪ್‍ಗೆ ಕಿಚ್ಚನಿಂದ ಸ್ಪೆಷಲ್ ಗಿಫ್ಟ್

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ಫ್ಯಾಂಟಮ್’ ಚಿತ್ರ ಸಾಕಷ್ಟು ಸುದ್ದಿ ಮಾಡುತ್ತಿದೆ. ಚಿತ್ರದಲ್ಲಿ ಸುದೀಪ್ ಪಾತ್ರ ಮತ್ತು ಫಸ್ಟ್‌ಲುಕ್ ಬಿಡುಗಡೆ ಮಾಡಿರುವ ಚಿತ್ರತಂಡ ಮತ್ತೊಂದು ಪೋಸ್ಟರ್ ರಿಲೀಸ್ ಮಾಡಿದೆ.

    ‘ರಂಗಿತರಂಗ’ ಸಿನಿಮಾ ಖ್ಯಾತಿಯ ನಟ ನಿರೂಪ್ ಭಂಡಾರಿ ಹುಟ್ಟುಹಬ್ಬದಂದು ‘ಫ್ಯಾಂಟಮ್’ ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಉಡುಗೊರೆಯೊಂದನ್ನು ನೀಡಿದೆ. ಕಿಚ್ಚ ಸುದೀಪ್, ವಿಕ್ರಾಂತ್ ರೋಣನಾಗಿ ಅಭಿನಯಿಸುತ್ತಿರುವ ‘ಫ್ಯಾಂಟಮ್’ ಸಿನಿಮಾದಲ್ಲಿ ನಿರೂಪ್ ಕೂಡ ಸಂಜೀವ್ ಗಾಂಭೀರ ಅಲಿಯಾಸ್ ಸಂಜು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಗುರುವಾರ ನಿರೂಪ್ ಭಂಡಾರಿ ಹುಟ್ಟುಹಬ್ಬವಿತ್ತು. ಈ ಹಿನ್ನೆಲೆಯಲ್ಲಿ ಸಂಜು ಪೋಸ್ಟರನ್ನು ಚಿತ್ರತಂಡ ರಿಲೀಸ್ ಮಾಡಿದೆ. ಸುದೀಪ್ ಚಿತ್ರದ ಪೋಸ್ಟರನ್ನು ಟ್ವೀಟ್ ಮಾಡಿ ನಿರೂಪ್‍ಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. ಅಲ್ಲದೇ ವಿಶೇಷವಾಗಿ ತಾವೇ ನಿರೂಪ್ ಭಂಡಾರಿಗೋಸ್ಕರ ಕೇಕ್ ತಯಾರಿಸಿದ್ದಾರೆ. ಸುದೀಪ್ ಸಿದ್ಧಪಡಿಸಿರುವ ಕೇಕ್ ಫೋಟೋವನ್ನು ನಿರೂಪ್ ಶೇರ್ ಮಾಡಿಕೊಂಡಿದ್ದು, ಕಿಚ್ಚನಿಗೆ ಧನ್ಯವಾದ ತಿಳಿಸಿದ್ದಾರೆ.

    ಅನೂಪ್ ಕೂಡ ನಿರೂಪ್‍ಗೆ ಶುಭಾಶಯ ಕೋರಿದ್ದು, ಸಹೋದರ ಮಾಡುತ್ತಿರುವ ಸಂಜು ಪಾತ್ರದ ಬಗ್ಗೆ ರಿವೀಲ್ ಮಾಡಿ, ಪೋಸ್ಟರ್ ಹಂಚಿಕೊಂಡಿದ್ದಾರೆ. “ಫ್ಯಾಂಟಮ್ ಚಿತ್ರದ ಇನ್ನೊಂದು ಮುಖ್ಯ ಪಾತ್ರ ಸಂಜೀವ್ ಗಾಂಭೀರ. ಸಂಜು ಲಂಡನ್‍ನಲ್ಲಿ ಬೆಳೆದು ಹುಟ್ಟೂರಿಗೆ ವಾಪಸ್ ಬರುತ್ತಾನೆ. ಅವನು ನಗುತ್ತಾನೆ, ನಗಿಸುತ್ತಾನೆ, ತರ್ಲೆ ಮಾಡುತ್ತಾನೆ ಈ ಮೂಲಕ ಎಲ್ಲ ಮನಸ್ಸಿಗೂ ಹತ್ತಿರವಾಗುತ್ತಾನೆ. ಈ ಸಂಜು ಪಾತ್ರವನ್ನು ನಿರೂಪ್ ಭಂಡಾರಿ ನಿರ್ವಹಿಸುತ್ತಿದ್ದಾರೆ” ಎಂದು ಚಿತ್ರತಂಡಕ್ಕೆ ಅನೂಪ್ ಭಂಡಾರಿ ಸ್ವಾಗತ ಕೋರಿದ್ದಾರೆ.