Tag: ಅನೂಪ್ ಭಂಡಾರಿ

  • ‘ಆಸ್ಕರ್’ ಅರ್ಹತೆ ಯಾದಿಯಲ್ಲಿ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರ

    ‘ಆಸ್ಕರ್’ ಅರ್ಹತೆ ಯಾದಿಯಲ್ಲಿ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರ

    ಪ್ರತಿಷ್ಠಿತ 95ನೇ ಆಸ್ಕರ್ ಅಕಾಡಮಿ ಪ್ರಶಸ್ತಿಯ ಅರ್ಹತೆ ವಿಭಾಗದಲ್ಲಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಕೂಡ ಕಾಣಿಸಿಕೊಂಡಿದೆ. ನಟನಾ ವಿಭಾಗದಲ್ಲಿ ಈ ಸಿನಿಮಾ ಆಯ್ಕೆಯಾಗಿದ್ದು, ಕನ್ನಡದ ಎರಡು ಚಿತ್ರಗಳು ಈ ಬಾರಿ ಆಸ್ಕರ್ ಅಂಗಳದಲ್ಲಿವೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ನಿರೂಪ್ ಭಂಡಾರಿ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.

    ವಿಕ್ರಾಂತ್ ರೋಣ ಜೊತೆ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾ ಆಸ್ಕರ್ ಪ್ರಶಸ್ತಿಗಾಗಿ ಅರ್ಹತೆ ಸುತ್ತಿನಲ್ಲಿ ಸ್ಥಾನ ಪಡೆದಿದೆ. ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ ಎರಡು ವಿಭಾಗದಲ್ಲಿ ಅದು ಅರ್ಹತೆ ಸುತ್ತನ್ನು ಪಾಸು ಮಾಡಿದ್ದು, ಮುಂದಿನ ಹಂತಕ್ಕೆ ಸಿನಿಮಾ ಹೋಗಬೇಕಾದರೆ, ಆಸ್ಕರ್ ಸದಸ್ಯರು ಮತ ಚಲಾಯಿಸುವುದು ಕಡ್ಡಾಯವಾಗಿದೆ. ವಿಶ್ವದಾದ್ಯಂತ ಒಟ್ಟು 301 ಸಿನಿಮಾಗಳು ಅರ್ಹತೆ ಸುತ್ತಿನಲ್ಲಿ ಪಾಸಾಗಿವೆ. ಇದನ್ನೂ ಓದಿ:ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಗಾಯಕಿ ಮಂಗ್ಲಿ

    ಈ ಕುರಿತು ನಿರ್ದೇಶಕ ರಿಷಬ್ ಶೆಟ್ಟಿ ಟ್ವಿಟ್ ಮಾಡಿದ್ದು, ‘ಕಾಂತಾರ ಸಿನಿಮಾ ಆಸ್ಕರ್ ಅರ್ಹತೆಯ ಸುತ್ತಿನಲ್ಲಿ ಎರಡು ವಿಭಾಗದಲ್ಲಿ ಅರ್ಹತೆ ಪಡೆದುಕೊಂಡಿದೆ. ಈ ವಿಚಾರ ತಿಳಿಸಲು ಸಂತಸವಾಗುತ್ತಿದೆ. ಈ ನಿಟ್ಟಿನಲ್ಲಿ ನಮ್ಮನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಅಲ್ಲದೇ, ಮುಂದಿನ ಹಂತಕ್ಕೆ ಹೋಗಿದ್ದು ಸಂಭ್ರಮ ತಂದಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

    ಇತ್ತೀಚೆಗಷ್ಟೇ ಸಿನಿಮಾ ಶತದಿನೋತ್ಸವ ಪೂರೈಸಿದೆ. ಸದ್ಯದಲ್ಲೇ ಅದು ಟಿವಿಯಲ್ಲೂ ಪ್ರಸಾರವಾಗಲಿದೆ. ಇಷ್ಟೊಂದು ಸಂಭ್ರಮಗಳೊಂದಿಗೆ ಚಿತ್ರತಂಡ ಕಾಂತಾರ 2 ಸಿನಿಮಾದ ಸಿದ್ಧತೆಯನ್ನು ಸದ್ದಿಲ್ಲದೇ ಮಾಡುತ್ತಿದೆ. ಈಗಾಗಲೇ ಚಿತ್ರಕಥೆಯನ್ನು ಬರೆಯುವುದರಲ್ಲಿ ಚಿತ್ರತಂಡ ತೊಡಗಿಕೊಂಡಿದೆ ಎನ್ನುವ ಮಾಹಿತಿ ಇದೆ. ಆದರೆ, ಈ ವಿಷಯವನ್ನು ಸಿನಿಮಾ ಟೀಮ್ ಬಹಿರಂಗ ಪಡಿಸುತ್ತಿಲ್ಲ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಅಕ್ಟೋಬರ್ 15 ರಂದು ಜೀ ಕನ್ನಡ ವಾಹಿನಿಯಲ್ಲಿ ‘ವಿಕ್ರಾಂತ್ ರೋಣ’

    ಅಕ್ಟೋಬರ್ 15 ರಂದು ಜೀ ಕನ್ನಡ ವಾಹಿನಿಯಲ್ಲಿ ‘ವಿಕ್ರಾಂತ್ ರೋಣ’

    ವಿಕ್ರಾಂತ್ ರೋಣ (Vikrant Rona) ಕನ್ನಡ ಸಿನಿ ಪ್ರಿಯರು ಹಿಂದೆಂದೂ ಕಾಣದಂತ 3D ಅನುಭವ ನೀಡಿದಂತ ಅತ್ಯದ್ಭುತ ದೃಶ್ಯ ವೈಭವ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅಭಿನಯದ ಈ ಚಿತ್ರ ಒಂದು ವಿಭಿನ್ನ ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಮೂಲಕ ಹೊಸತೊಂದು ಪ್ಯಾಂಟಸಿ ಲೋಕಕ್ಕೆ ಪ್ರೇಕ್ಷಕರನ್ನು ಕರೆದುಕೊಂಡ ಹೋದ ಹೆಗ್ಗಳಿಕೆ ಹೊಂದಿದೆ. ಇದೀಗ ಕನ್ನಡದ ನಂಬರ್ 1 ಮನರಂಜನಾ ವಾಹಿನಿ  ಜೀ ಕನ್ನಡ ಇದೇ ಅಕ್ಟೋಬರ್ 15 ಶನಿವಾರ ರಾತ್ರಿ 7.30ಕ್ಕೆ ಈ ಸಿನಿಮಾವನ್ನು ಅದ್ಧೂರಿಯಾಗಿ World Television premiere ಮಾಡಲಿದೆ.

    ಏಕಕಾಲಕ್ಕೆ ಹಲವಾರು ಭಾಷೆಗಳಲ್ಲಿ ತೆರೆಕಂಡು ಅದ್ಭುತ ಯಶಸ್ಸುಗಳಿಸಿರುವ ಈ ಸಿನಿಮಾ ಕೂಡ ಕನ್ನಡ ಚಿತ್ರರಂಗದ ಶಕ್ತಿ ಪ್ರದರ್ಶನ ಮಾಡಿದ ಶ್ರೇಯಸ್ಸನ್ನು ತನ್ನದಾಗಿಸಿಕೊಂಡಿದೆ. ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ (Anoop Bhandari) ಇದರ ನಿರ್ದೇಶನದ ಜವಾಬ್ದಾರಿ ಹೊತ್ತು ಯಶಸ್ವಿಯಾಗಿದ್ದರೇ ಜಾಕ್ ಮಂಜು ಅವರು ಹಣಹೂಡಿಕೆ ಮಾಡಿದ್ದಾರೆ. ಇದನ್ನೂ ಓದಿ:‘ಆದಿಪುರುಷ್’ ಸಿನಿಮಾ ಟೀಮ್ ಮೇಲೆ ಬಿತ್ತು ಕೇಸ್: ಅ.27ಕ್ಕೆ ವಿಚಾರಣೆ ನಿಗದಿ

    ಚಂದನವನದ ಸದ್ಯದ ಟ್ರೆಂಡ್ ಸೆಟ್ಟಿಂಗ್ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಸಂಗೀತ  ಸಂಯೋಜನೆ ಹಾಗೂ ವಿಲಿಯಮ್ ಡೇವಿಡ್ ಅವರ ಭರ್ಜರಿ ಛಾಯಾಗ್ರಹಣವಿದೆ. ಬಹುಕೋಟಿ ವೆಚ್ಚದ ಈ ಚಿತ್ರದ ಹಂಚಿಕೆ ಜವಾಬ್ದಾರಿಯನ್ನು ದೇಶದ ಅತಿದೊಡ್ಡ ಮನರಂಜನಾ ಸಂಸ್ಥೆಯಾದ ಜೀ ಸ್ಟುಡಿಯೋಸ್ ವಹಿಸಿದ್ದು ವಿಶೇಷ .

    ಇನ್ನು ವಿಕ್ರಾಂತ್ ರೋಣ ಚಿತ್ರ ಶ್ರೀಮಂತ ತಾರಾಗಣಕ್ಕೆ ಸಾಕ್ಷಿಯಾಗಿದ್ದು ಕಿಚ್ಚ ಸುದೀಪ್ ಸೇರಿದಂತೆ  ನಿರೂಪ್ ಭಂಡಾರಿ , ನೀತಾ ಅಶೋಕ್, ಜಾಕ್ವೆಲಿನ್ ಫರ್ನಾಂಡಿಸ್ ಹಾಗೂ ಇನ್ನು ಅನೇಕರು ಇದರ ಭಾಗವಾಗಿದ್ದಾರೆ. ಅಷ್ಟೇ ಅಲ್ಲದೆ ವಿಶ್ವದ ಅತಿದೊಡ್ಡ ಕಟ್ಟಡವಾದ ಬುರ್ಜ್ ಖಲೀಫಾದ ಮೇಲೆ ಕನ್ನಡದ ಬಾವುಟ ಹಾರಿಸಿದ ಹೆಮ್ಮೆಯ ವಿಷಯಕ್ಕೆ ಪಾತ್ರವಾಗಿದೆ ಈ ಚಿತ್ರತಂಡ.

    ಇನ್ನು ಕಿಚ್ಚ ಸುದೀಪ್ ಅವರು ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandes)  ಜೊತೆ ಹೆಜ್ಜೆ ಹಾಕಿರುವ ʼರಾರಾ ರಕ್ಕಮ್ಮ ಹಾಡುʼ ಇಡೀ ದೇಶದಲ್ಲೇ ಸಂಚಲನ ಮೂಡಿಸಿದ್ದು ಈಗಲೂ ಸೋಷಿಯಲ್ ಮೀಡಿಯಾದಲ್ಲಿ, ರೀಲ್ಸ್ ಗಳಲ್ಲಿ ಅತಿಹೆಚ್ಚು ಬಳಕೆಯಲ್ಲಿದೆ. ಇದೇ ಅಕ್ಟೋಬರ್ 15 ಶನಿವಾರ ರಾತ್ರಿ 7.30ಕ್ಕೆ ಈ ಸಿನಿಮಾ ಅದ್ಧೂರಿಯಾಗಿ World Television premiere ಆಗುತ್ತಿದ್ದು, ಮನೆಮಂದಿಯೆಲ್ಲಾ ಕೂತು ನೋಡಿ ವಿಶೇಷವಾದ ಪ್ಯಾಂಟಸಿ ಲೋಕಕ್ಕೆ ಹೋಗಿ.

    Live Tv
    [brid partner=56869869 player=32851 video=960834 autoplay=true]

  • ಒಟಿಟಿ ಟ್ರೇಡಿಂಗ್ ಟಾಪ್ 3 ಸ್ಥಾನದಲ್ಲಿ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’

    ಒಟಿಟಿ ಟ್ರೇಡಿಂಗ್ ಟಾಪ್ 3 ಸ್ಥಾನದಲ್ಲಿ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’

    ಕಿಚ್ಚ ಸುದೀಪ್ (Sudeep) ಹಾಗೂ ಅನೂಪ್ ಭಂಡಾರಿ ಕಾಂಬಿನೇಷನ್ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ (Vikrant Rona) ಜೀ5 ಒಟಿಟಿಯಲ್ಲಿ ಧಮಾಕ ಸೃಷ್ಟಿಸ್ತಿದೆ. ಅಡ್ವೆಂಚರ್ಸ್ ಜೊತೆಗೆ ಮರ್ಡರ್ ಮಿಸ್ಟ್ರೀ ಜಾನರ್ ನ ಈ ಚಿತ್ರಕ್ಕೆ ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಸೆಪ್ಟಂಬರ್ 2ರಂದು ಜೀ5 ಒಟಿಟಿಗೆ (OTT) ಲಗ್ಗೆ ಇಟ್ಟಿದ್ದ ವಿಕ್ರಾಂತ್ ರೋಣ ಒಂದು ನಿಮಿಷದಲ್ಲಿ 1000ಕ್ಕೂ ಹೆಚ್ಚು ಮಿಲಿಯನ್ಸ್ ಸ್ಟ್ರೀಮಿಂಗ್ ಕಂಡು ದಾಖಲೆ ಬರೆದಿದೆ. ಅಲ್ಲದೇ ಕಳೆದ ಮೂರು ವಾರಗಳಿಂದ ಜೀ5 ಒಟಿಟಿಯಲ್ಲಿ ಟ್ರೇಡಿಂಗ್ ಟಾಪ್ 3 (Top) ಸ್ಥಾನ ಕೂಡ ಗಿಟ್ಟಿಸಿಕೊಂಡಿದೆ.

    #VikranthronaZEE5Contest ನಡಿ ಜೀ5 ಒಟಿಟಿ ಸಂಸ್ಥೆ ರಕ್ಕಮ್ಮ ಹಾಡಿಗೆ ಅದ್ಭುತವಾಗಿ ಹೆಜ್ಜೆ ಹಾಕಿದವರಿಗೆ 25 ಸಾವಿರ ಬಹುಮಾನ ಹಾಗೂ ಪ್ರಮುಖ 10 ಸ್ಪರ್ಧಿಗಳಿಗೆ ಉಡುಗೊರೆ ಹಾಗೂ ಸುದೀಪ್ ವೈಯಕ್ತಿಕ ಪಾತ್ರ ಕೊಡುವುದಾಗಿ ಸ್ಪರ್ಧೆ ಆಯೋಜಿಸಲಾಗಿತ್ತು. ಅದರಂತೆ ರಕ್ಕಮ್ಮ ಹಾಡಿಗೆ ಬೊಂಬಾಟ್ ಆಗಿ ಹೆಜ್ಜೆ ಹಾಕಿದವರಿಗೆ 25 ಸಾವಿರ ಹಣ ಹಾಗೂ 10 ಜನಕ್ಕೆ ಕಿಚ್ಚನ ಕಡೆಯಿಂದ ಪತ್ರ ಹಾಗೂ ಉಡುಗೊರೆ ನೀಡಲಾಗಿದೆ. ಇದನ್ನೂ ಓದಿ: ರಕ್ಷಿತಾ ಪ್ರೇಮ್ ಸಹೋದರನ ಮತ್ತೊಂದು ಸಿನಿಮಾ: ಪ್ರೇಮ್ ಶಿಷ್ಯನೇ ನಿರ್ದೇಶಕ

    ಅದ್ದೂರಿ ಬಜೆಟ್​ನಲ್ಲಿ ‘ವಿಕ್ರಾಂತ್​ ರೋಣ’  ಜಾಕ್​ ಮಂಜು ನಿರ್ಮಾಣ ಮಾಡಿದ್ದರು. ಕಿಚ್ಚ ಸುದೀಪ್​, ಅನೂಪ್​ ಭಂಡಾರಿ (Anoop Bhandari), ನೀತಾ ಅಶೋಕ್​, ಮಿಲನಾ ನಾಗರಾಜ್​, ಜಾಕ್ವೆಲಿನ್​ ಫರ್ನಾಂಡಿಸ್​, ಮಧುಸೂದನ್​ ರಾವ್​, ರವಿಶಂಕರ್ ಗೌಡ ಮುಂತಾದವರು ನಟಿಸಿದ್ದರು. ಅಜನೀಶ್​ ಬಿ. ಲೋಕನಾಥ್​ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿದ್ದವು. ಜಾಕ್ವೆಲಿನ್ ಫರ್ನಾಂಡಿಸ್​ ಜೊತೆ ಕಿಚ್ಚ ಸುದೀಪ್ ಹೆಜ್ಜೆ ಹಾಕಿದ ‘ರಾ ರಾ ರಕ್ಕಮ್ಮ..’ ಹಾಡಿಗೆ​ ಅಭಿಮಾನಿಗಳು ಫಿದಾ ಆಗಿದ್ದರು. ಥಿಯೇಟರ್ ನಲ್ಲಿಯೂ ಭರ್ಜರಿ ಕಮಾಯಿ ಮಾಡಿದ್ದ ಸಿನಿಮಾ ಈಗ ಜೀ5 ಒಟಿಟಿಯಲ್ಲಿ ಹಂಗಾಮ ಸೃಷ್ಟಿಸುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಒಟಿಟಿಯಲ್ಲಿ ‘ವಿಕ್ರಾಂತ್ ರೋಣ’ ಹವಾ: 24 ಗಂಟೆಯಲ್ಲಿ ವೀಕ್ಷಣೆ ಆಗಿದ್ದೆಷ್ಟು?

    ಒಟಿಟಿಯಲ್ಲಿ ‘ವಿಕ್ರಾಂತ್ ರೋಣ’ ಹವಾ: 24 ಗಂಟೆಯಲ್ಲಿ ವೀಕ್ಷಣೆ ಆಗಿದ್ದೆಷ್ಟು?

    ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ವಿಕ್ರಾಂತ್ ರೋಣ ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸುತ್ತಿದೆ. ಅಡ್ವೆಂಚರ್ಸ್ ಕಥಾನಕದ ಜೊತೆಗೆ ಮರ್ಡರ್ ಮಿಸ್ಟ್ರೀ ಕಂಟೆಂಟ್ ಹೊತ್ತುಬಂದಿದ್ದ ಈ ಚಿತ್ರಕ್ಕೆ ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಸುದೀಪ್ ಹುಟ್ಟುಹಬ್ಬಕ್ಕೆ ಅಂದ್ರೆ ಸೆಪ್ಟಂಬರ್ 2ರಂದು ಜೀ5 ಒಟಿಟಿಗೆ ಲಗ್ಗೆ ಇಟ್ಟಿದ್ದ ವಿಕ್ರಾಂತ್ ರೋಣ ಜಸ್ಟ್ 24 ಗಂಟೆಯಲ್ಲಿ 500 ಮಿಲಿಯನ್ಸ್ ಸ್ಟ್ರೀಮಿಂಗ್ ಕಂಡು ದಾಖಲೆ ಬರೆದಿದೆ.

    ಜುಲೈ 28ರಂದು ಬಿಗ್ ಸ್ಕ್ರೀನ್ ನಲ್ಲಿ ದಿಬ್ಬಣ ಹೊರಟಿದ್ದ ವಿಕ್ರಾಂತ್ ರೋಣನಿಗೆ ಸುದೀಪಿಯನ್ಸ್ ಬಹುಪರಾಕ್ ಎಂದಿದ್ದರು. ತ್ರಿಡಿಯಲ್ಲಿ ಕಿಚ್ಚನ ನಯಾ ಅವತಾರ ಕಣ್ತುಂಬಿಕೊಂಡು ಫುಲ್ ಮಾರ್ಕ್ಸ್ ಕೊಟ್ಟಿದ್ದರು. ಅನೂಪ್ ಭಂಡಾರಿ ಸಾರಥ್ಯದಲ್ಲಿ ಮೂಡಿಬಂದಿದ್ದ ಈ ಚಿತ್ರದಲ್ಲಿ ಬಿಟೌನ್ ಬೊಂಬೆ ಜಾಕ್ವೆಲಿನ್ ಫರ್ನಾಂಡಿಸ್, ಅನೂಪ್ ಭಂಡಾರಿ, ನೀತಾ ಆಶೋಕ್ ಸೇರಿದಂತೆ ಹಲವರು ಅಭಿನಯಿಸಿದ್ದರು. ಜಾಕ್ ಮಂಜು ನಿರ್ಮಾಣದಲ್ಲಿ ಅದ್ಧೂರಿಯಾಗಿ ನಿರ್ಮಾಣಗೊಂಡಿದ್ದ ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ನಲ್ಲೂ ಕೋಟಿ-ಕೋಟಿ ಕಮಾಯಿ ಮಾಡಿತ್ತು. ಇದನ್ನೂ ಓದಿ:ಪ್ರೀ ವೆಡ್ಡಿಂಗ್ ಫೋಟೋಶೂಟ್‌ನಲ್ಲಿ ಮಿಂಚಿದ `ಕಮಲಿ’ ಖ್ಯಾತಿಯ ಗೇಬ್ರಿಯೆಲಾ- ಸುಹಾಸ್

    ಅದ್ಧೂರಿ ಸೆಟ್ ನಲ್ಲಿ ಚಿತ್ರೀಕರಿಸಿದ್ದ ರಾ ರಾ ರಕ್ಕಮ್ಮ ಹಾಡು ಹಿಟ್ ಲೀಸ್ಟ್ ಸೇರಿತ್ತು. ಬಿ ಅಜನೀಶ್ ಲೋಕನಾಥ್ ಸಂಗೀತವಿದ್ದ ಎಲ್ಲಾ ಹಾಡುಗಳು ಪ್ರೇಕ್ಷಕ ಗಮನಸೆಳೆದಿದ್ದವು. ಸಿಲ್ವರ್ ಸ್ಕ್ರೀನ್ ನಲ್ಲಿ ಗುಮ್ಮನ  ಆರ್ಭಟ ಮಿಸ್ ಮಾಡಿಕೊಂಡ ಪ್ರೇಕ್ಷಕರು ಈಗ ಕುಳಿತು ವಿಕ್ರಾಂತ್ ರೋಣ ಸಿನಿಮಾವನ್ನು ಕಣ್ತುಂಬಿಕೊಳ್ಳಬಹುದು.

    Live Tv
    [brid partner=56869869 player=32851 video=960834 autoplay=true]

  • ‘ವಿಕ್ರಾಂತ್ ರೋಣ’ ಕಲೆಕ್ಷನ್ 200 ಕೋಟಿ: ಹಲವು ಅಡೆತಡೆಗಳ ನಡುವೆಯೂ ಗೆದ್ದ ಸುದೀಪ್

    ‘ವಿಕ್ರಾಂತ್ ರೋಣ’ ಕಲೆಕ್ಷನ್ 200 ಕೋಟಿ: ಹಲವು ಅಡೆತಡೆಗಳ ನಡುವೆಯೂ ಗೆದ್ದ ಸುದೀಪ್

    ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಸಿನಿಮಾಗೆ ಆದ ತೊಂದರೆ ಒಂದಾ, ಎರಡಾ? ಸಿನಿಮಾ ಸೋಲಿಸಲು ವಿರೋಧಿಗಳು ಏನೆ‍ಲ್ಲ ಕಸರತ್ತು ಮಾಡಿದರು. ಪೈರಸಿ ಕಾಪಿಯಿಂದ ಹಿಡಿದು ನೆಗೆಟಿವ್ ಪ್ರಚಾರ ಕೂಡ ಮಾಡಿದರು. ಸೋಷಿಯಲ್ ಮೀಡಿಯಾದಲ್ಲಿ ಸಿನಿಮಾ ಸೋಲಿಸಲು ಏನೆಲ್ಲ ತಂತ್ರಗಳನ್ನು ಹೆಣೆಯಲಾಯಿತು. ಆದರೂ, ಸಿನಿಮಾ ಸೋಲಲಿಲ್ಲ. ಅಚ್ಚರಿ ಎನ್ನುವಂತೆ ಬಾಕ್ಸ್ ಆಫೀಸಿನಲ್ಲಿ ಗೆದ್ದಿದೆ.

    ವಿಕ್ರಾಂತ್ ರೋಣ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಎಷ್ಟು ಕಲೆಕ್ಷನ್ ಮಾಡಿರಬಹುದು ಎನ್ನುವ ಪ್ರಶ್ನೆ ಕಿಚ್ಚನ ಅಭಿಮಾನಿಗಳಲ್ಲಿ ಮೂಡಿತ್ತು. ಊಹಾಪೋಹಗಳು ಏನೇ ಇದ್ದರೂ, ಅಧಿಕೃತ ಮಾಹಿತಿಯು ಅವರಿಗೆ ಬೇಕಿತ್ತು. ಇದೀಗ ಅಧಿಕೃತ ಮಾಹಿತಿಯೇ ಹೊರಬಿದ್ದಿದೆ. ಇನ್ನೇನು ಜೀ 5 ಓಟಿಟಿಯಲ್ಲಿ ಸಿನಿಮಾ ಪ್ರಸಾರ ಕಾಣಲಿದ್ದು, ಇದು 200 ಕೋಟಿ ಗಳಿಸಿದ ಸಿನಿಮಾ ಎಂದು ಪ್ರೊಮೊ ರಿಲೀಸ್ ಮಾಡಲಾಗಿದೆ. ಅಲ್ಲಿಗೆ ವಿಕ್ರಾಂತ್ ರೋಣ ಡಬಲ್ ನೂರು ಕೋಟಿ ಕ್ಲಬ್ ಸೇರಿದಂತಾಗಿದೆ. ಇದನ್ನೂ ಓದಿ:ಸೀರೆಯಲ್ಲಿ ಸೆಕ್ಸಿ ಲುಕ್‌ನಲ್ಲಿ ಕಾಣಿಸಿಕೊಂಡ ಜಾನ್ವಿ ಕಪೂರ್

    ಇತ್ತೀಚಿನ ದಿನಗಳಲ್ಲಿ ಸುದೀಪ್ ಅವರ ಸಿನಿಮಾ ರಿಲೀಸ್ ಆದಾಗ ನೆಗೆಟಿವ್ ಪ್ರಚಾರಗಳನ್ನು ವಿರೋಧಿಗಳು ಮಾಡುತ್ತಿದ್ದಾರೆ. ಸಿನಿಮಾವನ್ನು ಪೈರಸಿ ಮಾಡಿ, ಆ ಲಿಂಕ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿದ್ದಾರೆ. ಈ ಹಿಂದೆ ಪೈಲ್ವಾನ್ ಸಿನಿಮಾಗೂ ಅಷ್ಟೇ ಕಾಟವನ್ನು ನೀಡಲಾಗಿತ್ತು. ವಿಕ್ರಾಂತ್ ರೋಣವನ್ನೂ ಅವರು ಬಿಡಲಿಲ್ಲ. ವಿರೋಧಿಗಳು ಏನೇ ಮಾಡಿದರೂ ಕಿಚ್ಚ ಈ ಸಲವೂ ಅವೆಲ್ಲವನ್ನೂ ವಿರೋಧಿಸಿ ಗೆದ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಓಟಿಟಿಗೆ ಬಂದ ಗುಮ್ಮ: ಕಿಚ್ಚನ ‘ವಿಕ್ರಾಂತ್ ರೋಣ’ ಇನ್ನೊಂದೇ ವಾರದಲ್ಲಿ ಪ್ರಸಾರ

    ಓಟಿಟಿಗೆ ಬಂದ ಗುಮ್ಮ: ಕಿಚ್ಚನ ‘ವಿಕ್ರಾಂತ್ ರೋಣ’ ಇನ್ನೊಂದೇ ವಾರದಲ್ಲಿ ಪ್ರಸಾರ

    ಅನೂಪ್ ಭಂಡಾರಿ ಮತ್ತು ಕಿಚ್ಚ ಸುದೀಪ್ ಕಾಂಬಿನೇಷನ್ ನ ವಿಕ್ರಾಂತ್ ರೋಣ ಕೆಲವೇ ದಿನಗಳಲ್ಲಿ ಜೀ 5 ಓಟಿಟಿಯಲ್ಲಿ ಪ್ರಸಾರವಾಗಲಿದೆ. ಹಾಗಂತ ಜೀ 5 ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿದೆ. ಥಿಯೇಟರ್ ನಲ್ಲಿ ಈ ಸಿನಿಮಾವನ್ನು ನೋಡದೇ ಇರುವವರು ಓಟಿಟಿಯಲ್ಲಿ ಸಿನಿಮಾವನ್ನು ಆನಂದಿಸಬಹುದಾಗಿದೆ. ಬಾಕ್ಸ್ ಆಫೀಸಿನಲ್ಲಿ ಸಖತ್ ಸದ್ದು ಮಾಡಿರುವ ಈ ಸಿನಿಮಾ ಇನ್ನೊಂದೇ ವಾರದಲ್ಲೇ ಓಟಿಟಿಗೆ ಎಂಟ್ರಿ ಕೊಡುತ್ತಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.

    ಇದೇ ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರ ಚಿತ್ರಕ್ಕೆ ಅನೂಪ್ ಭಂಡಾರಿ ನಿರ್ದೇಶನ ಮಾಡಿದ್ದರು. 3 ಡಿ ಹಾಗೂ 2 ಡಿಯಲ್ಲಿ ವಿಕ್ರಾಂತ್ ರೋಣ ಬಿಡುಗಡೆ ಆಗಿತ್ತು. ಒಳ್ಳೆಯ ಓಪನಿಂಗ್ ಕೂಡ ಪಡೆದಿತ್ತು. ನಂತರದ ದಿನಗಳಲ್ಲಿ ಸಿನಿಮಾ ಸೋಲಿಸಲೆಂದೇ ಹಲವರು ಮುಂದಾಗಿದ್ದರು. ಪೈರಸಿ ಮಾಡಲಾಯಿತು. ಆ ಲಿಂಕ್ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಲವರು ಹಂಚಿಕೊಂಡು ಸಿನಿಮಾ ತಂಡಕ್ಕೆ ತೊಂದರೆಯನ್ನೂ ಕೊಟ್ಟರು. ಅಲ್ಲದೇ, ವಸತಿ ಶಾಲೆಯಲ್ಲಿ ಪೈರಸಿ ಸಿನಿಮಾವನ್ನೂ ತೋರಿಸಿದ ಘಟನೆ ನಡೆಯಿತು. ಇದನ್ನೂ ಓದಿ:ಎರಡನೇ ಮದುವೆ ವದಂತಿಯ ಬಗ್ಗೆ ಮೇಘನಾ ರಾಜ್ ಸ್ಪಷ್ಟನೆ

    ಹಾಗಂತ ನಿರ್ಮಾಪಕರಿಗೆ ಈ ಸಿನಿಮಾದಿಂದ ಲಾಸ್ ಆಗಿಲ್ಲ ಎಂದು ಹೇಳಲಾಗಿತ್ತು. ಸಿನಿಮಾ ರಿಲೀಸ್ ಗೂ ಮುನ್ನ ನಿರ್ಮಾಪಕರು ಸೇಫ್ ಎಂದು ಜಾಕ್ ಮಂಜು ಅವರು ಹೇಳಿಕೊಂಡಿದ್ದರು. ಹಾಗಾಗಿ ನಿಶ್ಚಿಂತೆಯಿಂದ ಆದಷ್ಟು ಬೇಗ ಓಟಿಟಿಯಲ್ಲಿ ಸಿನಿಮಾ ನೋಡುವಂತಹ ಅವಕಾಶವನ್ನು ನಿರ್ಮಾಪಕರು ನೋಡುಗರಿಗೆ ಒದಗಿಸಿಕೊಟ್ಟಿದ್ದಾರೆ. ಇದೇ ಸೆಪ್ಟಂಬರ್ 2 ರಂದು ಓಟಿಟಿಯಲ್ಲಿ ವಿಕ್ರಾಂತ್ ರೋಣ ಸಿನಿಮಾವನ್ನು ನೋಡಬಹುದಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರ ನಾನು ಮಾಡಲ್ಲ, ಆಫರ್ ಬಂದಿದ್ದು ನಿಜ: ಅನೂಪ್ ಭಂಡಾರಿ

    ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರ ನಾನು ಮಾಡಲ್ಲ, ಆಫರ್ ಬಂದಿದ್ದು ನಿಜ: ಅನೂಪ್ ಭಂಡಾರಿ

    ಜೊತೆ ಜೊತೆಯಲಿ ಧಾರಾವಾಹಿಗೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಹೊಸ ಸುದ್ದಿಗಳು ಬರುತ್ತಿವೆ. ಈ ಧಾರಾವಾಹಿಯಿಂದ ಆರ್ಯವರ್ಧನ್ ಪಾತ್ರಧಾರಿ ಅನಿರುದ್ಧ ಅವರನ್ನು ಕೈ ಬಿಡುತ್ತಿದ್ದಂತೆಯೇ ಆ ಪಾತ್ರವನ್ನು ಯಾರು ಮಾಡಲಿದ್ದಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿತ್ತು. ಸಡನ್ನಾಗಿ ಕನ್ನಡದ ಹೆಸರಾಂತ ನಿರ್ದೇಶಕ ಅನೂಪ್ ಭಂಡಾರಿ ಅವರ ಹೆಸರು ಕೇಳಿ ಬಂದಿತ್ತು. ಎಂದೂ ನಟನೆಯನ್ನೇ ಮಾಡದ ಅನೂಪ್ ಗೆ ಇಂಥದ್ದೊಂದು ಆಫರ್ ಹೋಗಿದ್ದು ನಿಜವಾ ಎನ್ನುವ ಅನುಮಾನ ಕೂಡ ಮೂಡಿತ್ತು.

    ವಿಕ್ರಾಂತ್ ರೋಣ ಸಿನಿಮಾ ಸಕ್ಸಸ್ ಬೆನ್ನಲ್ಲೇ ಮತ್ತೊಂದು ಚಿತ್ರಕ್ಕೆ ತಯಾರಿ ನಡೆಸಿದಿರುವ ಅನೂಪ್, ಈ ಪಾತ್ರವನ್ನು ಒಪ್ಪಿಕೊಂಡು ಮಾಡುತ್ತಾರೆ ಎನ್ನುವ ಚರ್ಚೆ ಕೂಡ ಶುರುವಾಗಿತ್ತು. ಅನೂಪ್ ಮುಖ, ಗಡ್ಡ, ಅವರ ಲುಕ್ ಥೇಟ್ ಅನಿರುದ್ಧ ರೀತಿಯಲ್ಲೇ ಕಾಣುವುದರಿಂದ ಧಾರಾವಾಹಿ ತಂಡವು ಅನೂಪ್ ಅವರನ್ನು ಸಂಪರ್ಕಿಸಬಹುದು ಎಂದೂ ಹೇಳಲಾಗಿತ್ತು. ಈಗ ಅದೆಲ್ಲವೂ ನಿಜವಾಗಿದೆ. ಧಾರಾವಾಹಿ ತಂಡ ತಮ್ಮನ್ನು ಸಂಪರ್ಕಿಸುವ ವಿಚಾರವನ್ನು ಅನೂಪ್ ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ:ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣನ ಹುಡುಕಿಕೊಂಡು ಬಂತು ಮತ್ತೊಂದು ಬಾಲಿವುಡ್ ಸಿನಿಮಾ

    ಜೊತೆ ಜೊತೆಯಲಿ ಧಾರಾವಾಹಿ ತಂಡ ನನ್ನನ್ನು ಸಂಪರ್ಕಿಸಿದ್ದು ನಿಜ. ಆದರೆ, ನಾನು ಆ ಆಫರ್ ಅನ್ನು ನಿರಾಕರಿಸಿದೆ. ಈಗಾಗಲೇ ಹೊಸ ಸಿನಿಮಾ ಮಾಡುವ ತಯಾರಿ ನಡೆಸಿದ್ದೇನೆ. ಇಂತಹ ವೇಳೆಯಲ್ಲಿ ನಾನು ಧಾರಾವಾಹಿ ಒಪ್ಪಿಕೊಂಡರೆ, ನನ್ನ ಚಿತ್ರಕ್ಕೆ ಹಿನ್ನೆಡೆ ಆಗುತ್ತದೆ. ಹಾಗಾಗಿ ನಾನು ಈ ಧಾರಾವಾಹಿಯಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದೇನೆ ಎನ್ನುತ್ತಾರೆ ಅನೂಪ್ ಭಂಡಾರಿ.

    Live Tv
    [brid partner=56869869 player=32851 video=960834 autoplay=true]

  • `ವಿಕ್ರಾಂತ್ ರೋಣ’ ಸಕ್ಸಸ್ ಬೆನ್ನಲ್ಲೇ ಅನೂಪ್‌ಗೆ ಸುದೀಪ್ ಕಾರ್ ಗಿಫ್ಟ್

    `ವಿಕ್ರಾಂತ್ ರೋಣ’ ಸಕ್ಸಸ್ ಬೆನ್ನಲ್ಲೇ ಅನೂಪ್‌ಗೆ ಸುದೀಪ್ ಕಾರ್ ಗಿಫ್ಟ್

    ಭಿನಯ ಚಕ್ರವರ್ತಿ ಸುದೀಪ್ ನಟನೆಯ ಸಿನಿಮಾ `ವಿಕ್ರಾಂತ್ ರೋಣ’ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಸೌಂಡ್ ಮಾಡುತ್ತಿದೆ. ಚಿತ್ರ 100 ಕೋಟಿ ಕ್ಲಬ್ ಮಾಡಿ, ಹಿಸ್ಟರಿ ಕ್ರಿಯೇಟ್` ಮಾಡಿರುವ ಬೆನ್ನಲ್ಲೇ ಅನೂಪ್‌ಗೆ ಸುದೀಪ್ ಕಾರ್ ಗಿಫ್ಟ್ ಮಾಡಿದ್ದಾರೆ.

    ಸುದೀಪ್ ನಟನೆಯ `ವಿಕ್ರಾಂತ್ ರೋಣ’ನ ಗುಮ್ಮನ ಕಥೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಗೆಲ್ಲಾಪೆಟ್ಟಿಗೆಯಲ್ಲಿ ಕಿಚ್ಚನ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಚಿತ್ರದ ಯಶಸ್ಸಿನ ಅಲೆಯಲ್ಲಿರುವ ಸುದೀಪ್ ಇದೀಗ ನಿರ್ದೇಶಕ ಅನೂಪ್ ಭಂಡಾರಿಗೆ ಕಾರ್‌ವೊಂದನ್ನ ಗಿಫ್ಟ್ ಮಾಡಿದ್ದಾರೆ. ಕಿಚ್ಚನಿಗೆ ಯಾರದಾದರೂ ಕೆಲಸ ಇಷ್ಟವಾದರೆ ಅವರಿಗೆ ಉಡುಗೊರೆ ನೀಡುವುದು ವಾಡಿಕೆ. ಅದರಂತೆಯೇ ವಿಕ್ರಾಂತ್ ರೋಣ ಚಿತ್ರಕ್ಕಾಗಿ ಅನೂಪ್ ಅವರ ಕಾರ್ಯವೈಖರಿ ಕಿಚ್ಚನಿಗೆ ಇಷ್ಟವಾಗಿದ್ದು, ಚಿತ್ರದ ಸಕ್ಸಸ್ ಬೆನ್ನಲ್ಲೇ ಅನೂಪ್‌ಗೆ ಸುದೀಪ್ ಕಾರ್ ಗಿಫ್ಟ್ ಮಾಡಿದ್ದಾರೆ. ಇದನ್ನೂ ಓದಿ:ವಿವಾದ ಸೃಷ್ಟಿಸಿದ ಪ್ಯಾಡ್ ಮೇಲೆ ಹಿಂದೂ ದೇವರ ಪೋಸ್ಟರ್

    ಇನ್ನು ಅನೂಪ್ ಮತ್ತು ಸುದೀಪ್ ಕಾಂಬಿನೇಷನ್‌ನ `ಬಿಲ್ಲ ರಂಗ ಬಾಷ’ ಮತ್ತು `ಅಶ್ವತ್ಥಾಮ’ ಚಿತ್ರದಲ್ಲೂ ಒಟ್ಟಿಗೆ ಕೆಲಸ ಮಾಡುವುದರ ಬಗ್ಗೆ ಈ ಹಿಂದೆ ಸುದೀಪ್ ಹೇಳಿಕೊಂಡಿದ್ದರು. ಸದ್ಯದಲ್ಲೇ ಈ ಚಿತ್ರದ ಕುರಿತು ನಿರ್ದೇಶಕ ಅನೂಪ್ ಅಧಿಕೃತ ಘೋಷಣೆ ಮಾಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ರಿಪೋರ್ಟ್ : ಪಕ್ಕಾ ಲೆಕ್ಕಾಚಾರ

    ವಿಕ್ರಾಂತ್ ರೋಣ ಬಾಕ್ಸ್ ಆಫೀಸ್ ರಿಪೋರ್ಟ್ : ಪಕ್ಕಾ ಲೆಕ್ಕಾಚಾರ

    ನಿನ್ನೆಯಷ್ಟೇ ವಿಶ್ವದಾದ್ಯಂತ ಬಿಡುಗಡೆ ಆಗಿರುವ ಸುದೀಪ್ ನಟನೆಯ ‘ವಿಕ್ರಾಂತ್ ರೋಣ ‘ ಸಿನಿಮಾದ ಬಾಕ್ಸ್ ಆಫೀಸ್ ರಿಪೋರ್ಟ್ ಬಗ್ಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ದೇಶಾದ್ಯಂತ ಒಳ್ಳೆಯ ಓಪನಿಂಗ್ ಪಡೆದಿರುವ ಸಿನಿಮಾವನ್ನು ತಮ್ಮದೇ ಆದ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ. ಅದರಲ್ಲೂ ಹಣ ಗಳಿಕೆಯ ಲೆಕ್ಕಾಚಾರಗಳು ರಾತ್ರಿಯಿಂದಲೇ ಶುರುವಾಗಿದ್ದು, ಬಾಕ್ಸ್ ಆಫೀಸಿನಲ್ಲಿ ಗೆಲುವಿನ ದಾಖಲೆಯನ್ನು ಚಿತ್ರ ಬರೆದಿದೆ.

    ಕರ್ನಾಟಕವೊಂದರಲ್ಲೇ 2500ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ವಿಕ್ರಾಂತ್ ರೋಣ ಪ್ರದರ್ಶನ ಕಂಡಿದೆ. ಬೆಳಗ್ಗೆ 5 ಗಂಟೆಯಿಂದಲೇ ಕೆಲವು ಕಡೆ ಶೋಗಳು ಆರಂಭವಾಗಿವೆ. ಹಾಗಾಗಿ ಕರ್ನಾಟಕವೊಂದರಲ್ಲೇ ಅಂದಾಜು 20 ಕೋಟಿ ರೂಪಾಯಿ ಹರಿದು ಬಂದಿದೆ ಎನ್ನಲಾಗುತ್ತಿದೆ. ಮೊದಲ ದಿನ ಬಹುತೇಕ ಶೋಗಳು ಹೌಸ್ ಫುಲ್ ಪ್ರದರ್ಶನ ಕಂಡಿವೆ. ಇದನ್ನೂ ಓದಿ:ʻರಶ್ಮಿಕಾ ನನ್ನ ಡಾರ್ಲಿಂಗ್ʼ ಎಂದ ವಿಜಯ್ ದೇವರಕೊಂಡ

    ಬಾಲಿವುಡ್ ನಲ್ಲೂ ಈ ಸಿನಿಮಾ ಹಿಂದೆ ಬಿದ್ದಿಲ್ಲ. ಈಗಾಗಲೇ ರಿಲೀಸ್ ಆಗಿರುವ ಹಿಂದಿ ಸಿನಿಮಾಗಳ ಲೆಕ್ಕಾಚಾರವನ್ನು ಉಲ್ಟಾ ಮಾಡಿ ಚಿತ್ರ ಮುನ್ನುಗ್ಗುತ್ತಿದೆ. ಬಾಲಿವುಡ್ ನಲ್ಲಿ ಸಾವಿರಾರು ಸ್ಕ್ರೀನ್ ಗಳಲ್ಲಿ ಈ ಚಿತ್ರ ರಿಲೀಸ್ ಆಗಿದೆ. ಹಾಗಾಗಿ ಅಂದಾಜು 10 ಕೋಟಿ ಹಣ ಹರಿದು ಬಂದಿದೆ ಎನ್ನುವುದು ಬಾಕ್ಸ್ ಆಫೀಸ್ ಪಂಡಿತರ ಲೆಕ್ಕಾಚಾರ. ಸದ್ಯ ಬಿಡುಗಡೆಯಾಗಿರುವ ಬೇರೆ ಸಿನಿಮಾಗಳಿಗೆ ಹೋಲಿಸಿದರೆ, ವಿಕ್ರಾಂತ್ ರೋಣ ಹೆಚ್ಚು ದುಡ್ಡು ಮಾಡಿದೆ.

    ಆಂಧ್ರ ಮತ್ತು ತೆಲಂಗಾಣದಲ್ಲಿ ಹೆಚ್ಚಿನ ಸ್ಕ್ರೀನ್ ಗಳಲ್ಲಿ ವಿಕ್ರಾಂತ್ ರೋಣ ರಿಲೀಸ ಆಗಿತ್ತು. ಅಲ್ಲಿಯೂ ಕೂಡ ಅಂದಾಜು 8 ಕೋಟಿಗೂ ಅಧಿಕ ಹಣ ಬಂದಿದೆಯಂತೆ. ಈ ಸಿನಿಮಾ ರಂಗದಲ್ಲಿ ಟಿಕೆಟ್ ದರ ಕಡಿಮೆ ಇರುವುದರಿಂದ, ಹಣದ ಗಳಿಕೆ ಕಡಿಮೆಯಾಗಿ ಕಾಣುತ್ತಿದೆ. ಆದರೆ, ಒಂದೊಳ್ಳೆ ಕಲೆಕ್ಷನ್ ಎಂದು ಹೇಳಲಾಗುತ್ತಿದೆ. ತಮಿಳು ಸಿನಿಮಾ ರಂಗದಿಂದಲೂ ಅಂದಾಜು 2 ಕೋಟಿ ಹಣ ಬಂದಿದೆ ಎನ್ನುವ ಲೆಕ್ಕಾಚಾರ ಸಿಗುತ್ತಿದೆ. 27 ದೇಶಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಅಷ್ಟೂ ದೇಶಗಳಿಂದ ಮೊದಲ ದಿನದ ಗಳಿಕೆ 2 ಕೋಟಿ ಎಂದು ಹೇಳಲಾಗುತ್ತಿದೆ. ವೀಕೆಂಡ್ ನಲ್ಲಿ ಹೆಚ್ಚಿನ ಪ್ರಮಾಣದ ಹಣವನ್ನು ನಿರೀಕ್ಷೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಲೀಕ್?

    ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲಿ ಆನ್‌ಲೈನ್‌ನಲ್ಲಿ ಲೀಕ್?

    ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್ ಆಗಿ ಕೆಲವೇ ಗಂಟೆಗಳಲ್ಲೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಕೆಲವು ಡಿಜಿಟಲ್ ವೇದಿಕೆಗಳಲ್ಲಿ ಸಿನಿಮಾದ ಲಿಂಕ್ ಲಭ್ಯವಾಗಿದ್ದು, ಅವುಗಳನ್ನು ಡಿಲಿಟ್ ಮಾಡಿಸುವ ಪ್ರಯತ್ನಕ್ಕೆ ಚಿತ್ರತಂಡ ಮುಂದಾಗಿದೆ. ಬಹುಕೋಟಿ ಬಜೆಟ್ ಸಿನಿಮಾಗಳು ರಿಲೀಸ್ ಆದಾಗ ಪೈರಸಿ ಆಗುವುದು ಸಾಮಾನ್ಯ. ಆದರೆ, ಅದು ಎಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಖುಷಿ ಕೊಡುತ್ತದೆ ಎನ್ನುವುದೇ ಇಲ್ಲಿ ಮುಖ್ಯ.

    ವಿಕ್ರಾಂತ್ ರೋಣ ಸಿನಿಮಾ ಆನ್‌ಲೈನ್‌ನಲ್ಲಿ ರಿಲೀಸ್ ಆಗಿದೆ ನಿಜ. ಇದು ಸಿನಿಮಾ ತಂಡಕ್ಕೂ ಅರಿವಿತ್ತು. ಹಾಗಾಗಿಯೇ ಸುದೀಪ್ ಅವರು ಪೈರಸಿ ಕುರಿತು ಮಾತನಾಡುತ್ತಾ, ಇದು ಮೊಬೈಲ್‌ನಲ್ಲಿ ನೋಡುವಂತಹ ಸಿನಿಮಾವಲ್ಲ. ಸಿಕ್ಕರೆ ಖಂಡಿತಾ ನೀವು ನೋಡಿ. ಆದರೆ, ಈ ಸಿನಿಮಾವನ್ನು ಮೊಬೈಲ್‌ನಲ್ಲಿ ನೋಡಿದ ನಂತರವೂ ನೀವು ಥಿಯೇಟರ್‌ಗೆ ಬಂದು ಮತ್ತೆ ಸಿನಿಮಾ ನೋಡುತ್ತೀರಿ. ಆ ರೀತಿಯಲ್ಲಿದೆ ಎಂದಿದ್ದರು. ಇದನ್ನೂ ಓದಿ:ನಿರ್ದೇಶಕ ಹೇಳಿದ ಮಾತು ಕೇಳದೇ ಆಸ್ಪತ್ರೆ ಸೇರಿದ ಕಿರಿಕ್ ನಟಿ ಸಂಯುಕ್ತ ಹೆಗ್ಡೆ

    ನಿರ್ದೇಶಕ ಅನೂಪ್ ಭಂಡಾರಿಯವರು ಒಂದು ಪೋಸ್ಟರ್ ರಿಲೀಸ್ ಮಾಡಿ, ವಿಕ್ರಾಂತ್ ರೋಣ ಪೈರಸಿ ಆಗಿದ್ದು ಕಂಡು ಬಂದರೆ ಕೂಡಲೇ ಸೈಬರ್ ಠಾಣೆ ಅಥವಾ ಅವರೇ ಒಂದು ನಂಬರ್ ಕೊಟ್ಟಿದ್ದರು. ಆ ನಂಬರ್ ಗೆ ಮಾಹಿತಿ ಕೊಡಿ ಎಂದು ಕೇಳಿಕೊಂಡಿದ್ದರು. ಆ ಪೋಸ್ಟರ್ ಕೂಡ ಭಾರೀ ವೈರಲ್ ಆಗಿತ್ತು. ಯಾರು, ಎಷ್ಟೇ ತಡೆದರೂ ಈ ಪೈರಸಿ ಮಾತ್ರ ಇನ್ನೂ ನಿಂತಿಲ್ಲ. ಈ ಹಿಂದೆ ಸುದೀಪ್ ನಟನೆಯ ಪೈಲ್ವಾನ್ ಸಿನಿಮಾಗೂ ಪೈರಸಿಗೆ ತುತ್ತಾಗಿತ್ತು.

    ವಿಕ್ರಾಂತ್ ರೋಣ ಸಿನಿಮಾವನ್ನು ಪೈರಸಿಯಲ್ಲಿ ನೋಡಿದರೆ ಅದನ್ನು ಆಸ್ವಾದಿಸುವುದು ಕಷ್ಟ. ಯಾಕೆಂದರೆ, ಬಹುತೇಕ ಸಿನಿಮಾ ಕತ್ತಲಿನಲ್ಲೇ ನಡೆಯುತ್ತದೆ. ಹಾಗೂ 3 ಡಿಯಲ್ಲಿ ರಿಲೀಸ್ ಆಗಿದೆ. ಆ ಖುಷಿಯೇ ಬೇರೆ ಮತ್ತು ದೃಶ್ಯ ವೈಭವವನ್ನು ಥಿಯೇಟರ್ ನಲ್ಲಿಯೇ ನೋಡಿ ಅನುಭವಿಸಬೇಕು. ಹಾಗಾಗಿ ಪೈರಸಿಯಾದರೂ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಾರೆ ಎನ್ನುವ ನಂಬಿಕೆ ಚಿತ್ರತಂಡದ್ದು.

    Live Tv
    [brid partner=56869869 player=32851 video=960834 autoplay=true]