Tag: ಅನೂಪ್ ಚಂದ್ರಪಾಂಡೆ

  • ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ಅನೂಪ್ ಚಂದ್ರಪಾಂಡೆ ನೇಮಕ

    ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ಅನೂಪ್ ಚಂದ್ರಪಾಂಡೆ ನೇಮಕ

    ನವದೆಹಲಿ: ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ಉತ್ತರ ಪ್ರದೇಶ ಮೂಲದ ನಿವೃತ್ತ ಐಎಎಸ್ ಅಧಿಕಾರಿ ಅನೂಪ್ ಚಂದ್ರಪಾಂಡೆ ಅವರು ನೇಮಕವಾಗಿದ್ದಾರೆ.

    ಈ ಕುರಿತಂತೆ ಕೇಂದ್ರ ಕಾನೂನು ಮತ್ತು ಸಂಸದೀಯ ಸಚಿವಾಲಯ ಆದೇಶ ಹೊರಡಿಸಿದ್ದು, ಚುನಾವಣಾ ಆಯೋಗದ ನೂತನ ಆಯುಕ್ತರಾಗಿ ನಿವೃತ್ತ ಐಎಎಸ್ ಅಧಿಕಾರಿ ಅನೂಪ್ ಚಂದ್ರಪಾಂಡೆ ಅವರನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೇಮಕ ಮಾಡಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಪ್ರಧಾನಿಗಳನ್ನ ಭೇಟಿಯಾಗಿದ್ದು, ನವಾಜ್ ಶರೀಫ್‍ರನಲ್ಲ: ಸಿಎಂ ಠಾಕ್ರೆ

    ಅನೂಪ್ ಚಂದ್ರಪಾಂಡೆ ಅವರು 1984ರ ಕೇಡರ್‍ ನ ಐಎಎಸ್ ಅಧಿಕಾರಿಯಾಗಿದ್ದು, ಈ ಹಿಂದೆ ರಕ್ಷಣಾ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮತ್ತು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಜಂಟಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಯಿಸಿದ್ದರು. ಬಳಿಕ 2019 ಆಗಸ್ಟ್ ನಲ್ಲಿ ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತಿಯಾಗಿದ್ದರು.

    ಇದೀಗ ಚುನಾವಣಾ ಆಯೋಗದ ಇಬ್ಬರು ಮುಖ್ಯಸ್ಥರ ಪೈಕಿ ಒಂದು ಸ್ಥಾನಕ್ಕೆ ಅನೂಪ್ ಚಂದ್ರಪಾಂಡೆ ಆಯ್ಕೆಯಾಗಿದ್ದು, ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಮತ್ತು ರಾಜೀವ್ ಕುಮಾರ್ ಅವರೊಂದಿಗೆ ಮುಂದಿನ ಆರು ವರ್ಷ ಅಥವಾ ಅವರಿಗೆ 65 ವರ್ಷ ತುಂಬುವವರೆಗೆ ಅಧಿಕಾರ ನಿರ್ವಹಿಸಬಹುದಾಗಿದೆ.