Tag: ಅನುಸೂಯ ಭಾರದ್ವಜ್‌

  • ಬ್ಯಾಡ್ ಕಾಮೆಂಟ್ ಮಾಡಿದವನಿಗೆ ಮುಟ್ಟಿ ನೋಡಿಕೊಳ್ಳುವಂತೆ ಖಡಕ್ ಉತ್ತರ ಕೊಟ್ಟ ಅನಸೂಯ

    ಬ್ಯಾಡ್ ಕಾಮೆಂಟ್ ಮಾಡಿದವನಿಗೆ ಮುಟ್ಟಿ ನೋಡಿಕೊಳ್ಳುವಂತೆ ಖಡಕ್ ಉತ್ತರ ಕೊಟ್ಟ ಅನಸೂಯ

    ಟಾಲಿವುಡ್‌ನಲ್ಲಿ ನಟ ವಿಜಯ್ ದೇವರಕೊಂಡ ಮತ್ತು ನಿರೂಪಕಿ ಅನಸೂಯ ನಡುವಿನ ಜಟಾಪಟಿ ಇದೀಗ ಮತ್ತೆ ಭಾರೀ ಸುದ್ದಿಯಲ್ಲಿದೆ. ಇತ್ತೀಚೆಗೆ ವಿಜಯ್ ವಿರುದ್ಧ ಅನಸೂಯ ಅವರು ಹಾಕಿದ ಪೋಸ್ಟ್ ಎಲ್ಲೆಡೆ ಸಖತ್ ವೈರಲ್ ಆಗುತ್ತಿದೆ. ಈ ಬೆನ್ನಲ್ಲೇ ಅನಸೂಯ ವಿರುದ್ಧ ವಿಜಯ್ ಫ್ಯಾನ್ಸ್ ತಿರುಗಿಬಿದ್ದಿದ್ದಾರೆ. ವಿಜಯ್ ಅಭಿಮಾನಿಗಳನ್ನ ಇದೀಗ ನಟಿ ಕ್ಲಾಸ್‌ ತೆಗೆದುಕೊಂಡಿದ್ದಾರೆ.

    vijaydevarakonda

    ವಿಜಯ್ ದೇವರಕೊಂಡ ನಟನೆಯ `ಅರ್ಜುನ್ ರೆಡ್ಡಿ’ ಸಿನಿಮಾದ ಕಾರ್ಯಕ್ರಮದಲ್ಲಿ ನಿರೂಪಕಿ ಅನಸೂಯ ಮತ್ತು ವಿಜಯ್ ದೇವರಕೊಂಡ ನಡುವೆ ಜಟಾಪಟಿ ನಡೆದಿತ್ತು. ಮಹಿಳೆಯರ ಕುರಿತಾಗಿ ವಿಜಯ್ ದೇವರಕೊಂಡ ಅವಮಾನಕರ ರೀತಿಯಲ್ಲಿ ಸಂಭಾಷಣೆ ಹೇಳಿದರು ಎಂದು ವೇದಿಕೆಯ ಮೇಲೆಯೇ ಅನಸೂಯ ಆಕ್ಷೇಪಿಸಿದ್ದರು. `ಲೈಗರ್’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಸೋತಿರುವ ಬೆನ್ನಲ್ಲೇ ವಿಜಯ್ ವಿರುದ್ಧ ನಿರೂಪಕಿ ಅನಸೂಯ ಬರೆದಿರುವ ಪೋಸ್ಟ್ ವೈರಲ್ ಆಗುತ್ತಿದ್ದಂತೆ ವಿಜಯ್ ಅಭಿಮಾನಿಗಳು ಅನುಸೂಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ವಿಜಯ್‌ ಫ್ಯಾನ್ಸ್‌ ಮತ್ತು ಅನಸೂಯ ನಡುವೆ ಬಿಗ್‌ ವಾರ್‌ ನಡೆಯುತ್ತಿದೆ. ಇದನ್ನೂ ಓದಿ:1 ವರ್ಷದ ಬಳಿಕ ಆಫ್ಘನ್‌ನಲ್ಲಿ ಚಿತ್ರಮಂದಿರಗಳು ಓಪನ್ – ಸಿನಿಮಾದಲ್ಲಿ ಮಹಿಳಾ ಪಾತ್ರಗಳಿಗೆ ತಾಲಿಬಾನ್ ನಿರ್ಬಂಧ

    ಅದರಲ್ಲಿ ಒಬ್ಬ ಅಭಿಮಾನಿ, ಅಸಹ್ಯವಾಗಿ ಕಾಮೆಂಟ್ ಮಾಡಿದ್ದಾರೆ. ಒಂದು ದಿನಕ್ಕೆ ನಿನ್ನ ರೇಟ್ ಎಷ್ಟು ಎಂದು ಕೇಳಿದ್ದಾರೆ. ಆ ಕಾಮೆಂಟ್ ನೋಡಿರುವ ಅನಸೂಯ, ಮುಟ್ಟಿ ನೋಡಿಕೊಳ್ಳುವಂತೆ ಖಡಕ್ ಉತ್ತರ ನೀಡಿದ್ದಾರೆ.

    ನಿಮ್ಮ ಸಹೋದರಿಯರಿಗೆ, ಅಥವಾ ನೀವು ಮದುವೆಯಾಗಿದ್ದರೆ, ನಿಮ್ಮ ಹೆಂಡತಿ ಅಥವಾ ಸಹೋದರಿಯ ಬಳಿ ಕೇಳಿ ಒಂದು ದಿನದಲ್ಲಿ ಎಷ್ಟು ತೆಗೆದುಕೊಳ್ಳುತ್ತಾರೆ ಎಂದು ರಿಪ್ಲೇ ಮಾಡಿದ್ದಾರೆ. ನೆಟ್ಟಿಗರು ಹೆದರಿ ತಮ್ಮ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಅನಸೂಯ ಅವರ ಈ ಕಾಮೆಂಟ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇನ್ನು ಕೆಲವೊಬ್ಬರು ಆಂಟಿ ಎಂದು ಕರೆದಿದ್ದಾರೆ. ಕೆಲವರ ಬ್ಯಾಡ್ ಕಾಮೆಂಟ್‌ಗೆ ನಟಿ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

    Live Tv
    [brid partner=56869869 player=32851 video=960834 autoplay=true]