Tag: ಅನುಷ್ಕ ಶರ್ಮಾ

  • 34 ಕೋಟಿ ರೂ. ಫ್ಲಾಟ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ ವಿರಾಟ್

    34 ಕೋಟಿ ರೂ. ಫ್ಲಾಟ್ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ ವಿರಾಟ್

    ಮುಂಬೈ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ 34 ಕೋಟಿ ರೂ. ನ ಫ್ಲಾಟ್‍ಗೆ ಮಾಡಿದ್ದ ಬುಕ್ಕಿಂಗ್ ರದ್ದುಗೊಳಿಸಿದ್ದಾರೆಂದು ವರದಿಯಾಗಿದೆ.

    2016 ರ ಜೂನ್ ನಲ್ಲಿ ಕೊಹ್ಲಿ ನಗರದ ವರ್ಲಿ ಪ್ರದೇಶದ ಓಂಕಾರ್ 1973 ಅಪಾರ್ಟ್ ಮೆಂಟ್ ನಲ್ಲಿ 7,171 ಚದರ ಅಡಿಯ ಸೀ-ವ್ಯೂವ್ ಫ್ಲಾಟ್ ಬುಕ್ ಮಾಡಿದ್ದರು. 35ನೇ ಮಹಡಿಯಲ್ಲಿ ಈ ಐಷರಾಮಿ ಫ್ಲಾಟ್ ಇತ್ತು. ಇದು ಓಂಕರ್ ರಿಯಾಲ್ಟರ್ಸ್ ಅಂಡ್ ಡೆವಲಪರ್ಸ್ ಅವರ ಯೋಜನೆಯಾಗಿದ್ದು, ಕೊಹ್ಲಿ ಅವರು ಫ್ಲಾಟ್ ಬುಕ್ಕಿಂಗ್ ರದ್ದು ಮಾಡಿದನ್ನು ಓಂಕರ್ ಡೆವಲಪರ್ಸ್ ಮೂಲಗಳು ದೃಢಿಪಡಿಸಿವೆ.

    ಇತ್ತೀಚಿಗೆ ಕೊಹ್ಲಿ ಡಾ. ಅನ್ನಿ ಬೆಸೆಂಟ್ ರಸ್ತೆಯ ರಹೇಜಾ ಲೆಜೆಂಡ್ ಅಪಾರ್ಟ್ ಮೆಂಟ್ ನಲ್ಲಿ ತಿಂಗಳಿಗೆ 15 ಲಕ್ಷ ರೂ. ಬಾಡಿಗೆಗೆ 2,675.07 ಚದರ ಅಡಿಯ ಸೀ-ವ್ಯೂವ್ ಫ್ಲಾಟ್ ತೆಗೆದುಕೊಂಡಿದ್ದಾರೆ. ಇದು 40 ನೇ ಮಹಡಿಯಲ್ಲಿದೆ.

    ಕೊಹ್ಲಿ ಅವರು ನಟಿ ಅನುಷ್ಕಾ ಶರ್ಮಾ ಅವರನ್ನು ಕಳೆದ ವರ್ಷ ಡಿಸೆಂಬರ್ ನಲ್ಲಿ ಮದುವೆಯಾಗಿದ್ದರು.