Tag: ಅನುಷ್ಕಾ

  • ವಿರಾಟ್ ಕೊಹ್ಲಿಯ 9 ತಿಂಗಳ ಮಗಳಿಗೆ ಅತ್ಯಾಚಾರ ಬೆದರಿಕೆ

    ವಿರಾಟ್ ಕೊಹ್ಲಿಯ 9 ತಿಂಗಳ ಮಗಳಿಗೆ ಅತ್ಯಾಚಾರ ಬೆದರಿಕೆ

    ಮುಂಬೈ: ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಪುತ್ರಿ ಮೇಲೆ ಆನ್‍ಲೈನ್‍ಲ್ಲಿ ಬಂದಿರುವ ಅತ್ಯಾಚಾರದ ಬೆದರಿಕೆಗಳ ಕುರಿತು ದೆಹಲಿ ಮಹಿಳಾ ಆಯೋಗವು ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದೆ.

    ದುಬೈನಲ್ಲಿ ನಡೆದ ಟಿ20 ವಿಶ್ವಕಪ್‍ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತ ನಂತರ ವಿರಾಟ್ ಕೊಹ್ಲಿ ಮಗಳ ವಿರುದ್ಧ ದ್ವೇಷಪೂರಿತ ಕಾಮೆಂಟ್‍ಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸಿದವು. ಈ ಪಂದ್ಯದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ವಿರುದ್ದ ಕಿಡಿಗೇಡಿಗಳು ಸೋಷಿಯಲ್ ಮೀಡಿಯಾದಲ್ಲಿ ಕೋಮು ದಾಳಿ ನಡೆಸಿದ್ದರು. ಈ ಬಗ್ಗೆ ಸಚಿನ್ ತೆಂಡೂಲ್ಕರ್, ಹರ್ಭಜನ್ ಸಿಂಗ್, ಸೆಹ್ವಾಗ್ ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿ ಶಮಿ ಪರವಾಗಿ ನಿಂತಿದ್ದರು. ಇದನ್ನೂ ಓದಿ: ಗೂಗಲ್ ಸರ್ಚ್‍ನಲ್ಲಿ ಸಿಕ್ಕ ಫ್ಲಿಪ್ಕಾರ್ಟ್ ನಂಬರ್ – ಕರೆ ಮಾಡಿ 2 ಲಕ್ಷ ಕಳ್ಕೊಂಡ

    ನ್ಯೂಜಿಲೆಂಡ್ ವಿರುದ್ದದ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೇ ವಿಷಯವನ್ನು ಪ್ರಸ್ತಾಪಿಸಿದ್ದರು. ಶಮಿ ವಿರುದ್ದದ ಕೋಮು ನಿಂದನೆಯನ್ನು ಖಂಡಿಸಿದ ಕೊಹ್ಲಿ, ಒಂದು ಧರ್ಮವನ್ನು ಗುರಿಯಾಗಿಸಿ ಆಕ್ರಮಣ ಮಾಡುವುದು ಒಬ್ಬ ಮನುಷ್ಯ ಮಾಡಬಹುದಾದ ಅತ್ಯಂತ ಹೀನಾಯ ಕೃತ್ಯ. ಏಕೆಂದರೆ ಧರ್ಮ ಎಂಬುದು ಅತ್ಯಂತ ಪವಿತ್ರ ಮತ್ತು ವೈಯಕ್ತಿಕ ವಿಷಯವಾಗಿದೆ. ಯಾವುದೇ ವ್ಯಕ್ತಿಯನ್ನು ಅವರ ಧರ್ಮದ ಆಧಾರದ ಮೇಲೆ ಗುರಿಯಾಗಿಸಬಾರದು ಎಂದು ವಿರಾಟ್ ಕೊಹ್ಲಿ ಸ್ಪಷ್ಟವಾಗಿ ಹೇಳಿದರು. ಇದನ್ನೂ ಓದಿ: ಅಪ್ಪು ಜೊತೆಗಿನ ಲಾಸ್ಟ್ ಸೆಲ್ಫಿ ಶೇರ್ ಮಾಡಿದ ರಾಘಣ್ಣ

    ಮೊಹಮ್ಮದ್ ಶಮಿ ಟೀಮ್ ಇಂಡಿಯಾದ ಪ್ರಮುಖ ಭಾಗ. ಅವರು ಭಾರತಕ್ಕಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿದ್ದಾರೆ. ಇಂತಹ ಟೀಕೆಗಳನ್ನು ಮಾಡುವವರಿಗಾಗಿ ನನ್ನ ಸಮಯವನ್ನು ವ್ಯರ್ಥ ಮಾಡಲು ನಾನು ಬಯಸುವುದಿಲ್ಲ. ನಾವು ಶಮಿ ಜೊತೆ ಶೇಕಡಾ 200 ರಷ್ಟು ನಿಲ್ಲುತ್ತೇವೆ. ತಂಡದಲ್ಲಿನ ನಮ್ಮ ಸಹೋದರತ್ವ ಬಾಂದವ್ಯವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ಕೊಹ್ಲಿ ಖಾರವಾಗಿ ಹೇಳಿದ್ದರು. ಇದನ್ನೂ ಓದಿ:  ಪಂಜಾಬ್ ಲೋಕ್ ಕಾಂಗ್ರೆಸ್ -ಅಮರಿಂದರ್ ಸಿಂಗ್ ಹೊಸ ಪಕ್ಷ

    ಕೊಹ್ಲಿಯ ಈ ಹೇಳಿಕೆಯ ಬೆನ್ನಲ್ಲೇ ಇದೀಗ ವಿಕೃತರು ಟೀಮ್ ಇಂಡಿಯಾ ನಾಯಕನ ವಿರುದ್ದ ತಿರುಗಿದ್ದಾರೆ. ಅನ್ಯಧರ್ಮೀಯನ ಪರ ನಿಂತಿದ್ದಕ್ಕಾಗಿ ಸೋಷಿಯಲ್ ಮೀಡಿಯಾ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಕೊಹ್ಲಿಯ 9 ತಿಂಗಳ ಮಗುವಿನ ಮೇಲೆ ಅತ್ಯಾಚಾರ ಎಸೆಗುವುದಾಗಿ ಬೆದರಿಕೆಗಳ ಕಮೆಂಟ್ ಮಾಡುತ್ತಿದ್ದಾರೆ. ಈ ಕಮೆಂಟ್‍ಗಳು ಈಗ ವೈರಲ್ ಆಗುತ್ತಿದ್ದು, ಪಾಕ್ ಆಟಗಾರ ಮೊಹಮ್ಮದ್ ಅಮೀರ್ ಸೇರಿದಂತೆ ಅನೇಕರು ಇಂತಹ ನೀಚ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ಅಪ್ಪು ಕೊನೆ ಕ್ಷಣದ ವಿಡಿಯೋ ಲಭ್ಯ

    ವಿರಾಟ್ ಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಪ್ರಿಯ ವಿರಾಟ್, ಈ ಜನರು ದ್ವೇಷದಿಂದ ತುಂಬಿದ್ದಾರೆ ಏಕೆಂದರೆ ಯಾರೂ ಅವರಿಗೆ ಯಾರೂ ಪ್ರೀತಿಯನ್ನು ನೀಡುವುದಿಲ್ಲ. ಅವರನ್ನು ಕ್ಷಮಿಸಿ. ತಂಡವನ್ನು ರಕ್ಷಿಸಿ ಎಂದು ರಾಹುಲ್ ಗಾಂಧಿ  ಟ್ವೀಟ್ ಮಾಡಿದ್ದಾರೆ.

  • ವಮಿಕಾ ಫೋಟೋ ಶೇರ್ ಮಾಡಿದ ಅನುಷ್ಕಾ

    ವಮಿಕಾ ಫೋಟೋ ಶೇರ್ ಮಾಡಿದ ಅನುಷ್ಕಾ

    ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ದಂಪತಿ ಮುದ್ದು ಮಗಳಾದ, ವಮಿಕಾ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಪುತ್ರಿ ವಮಿಕಾ ಜೊತೆ ಕಾಲಕಳೆಯುತ್ತಿರುವ ಕೊಹ್ಲಿ ಫೋಟೋವನ್ನು ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಪುತ್ರಿ ಜೊತೆ ಆಟವಾಡುತ್ತಿರುವ ಕೊಹ್ಲಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇದುವರೆಗೂ ವಮಿಕಾ ಮುಖದ ಫೋಟೋ ರಿವೀಲ್ ಮಾಡಿಲ್ಲ. ಈಗಲೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಫೋಟೋದಲ್ಲಿ ವಮಿಕಾ ಮುಖ ಕಾಣುತ್ತಿಲ್ಲ. ಈ ಹಿಂದಿನಂತೆ ರಹಸ್ಯ ಉಳಿಸಿಕೊಂಡೇ ಫೋಟೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ:  ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ

     

    View this post on Instagram

     

    A post shared by AnushkaSharma1588 (@anushkasharma)

    ಐಪಿಎಲ್ ಟೂರ್ನಿ ಮುಗಿಸಿದ ಕೊಹ್ಲಿ ಕ್ವಾರಂಟೈನ್‍ಲ್ಲಿದ್ದರು. ಹೀಗಾಗಿ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಭೇಟಿಯಾಗಿರಲಿಲ್ಲ. ಕ್ವಾರಂಟೈನ್ ಮುಗಿಸಿದ ಕೊಹ್ಲಿ ಮತ್ತೆ ಜೊತೆಯಾಗಿದ್ದಾರೆ. ಕೊಹ್ಲಿ ಸದ್ಯ ಪಂದ್ಯದ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಅಕ್ಟೋಬರ್ 24 ರಂದು ಟೀಂ ಇಂಡಿಯಾ, ಪಾಕಿಸ್ತಾನ ವಿರುದ್ಧ ಹೋರಾಟ ನಡೆಸಲಿದೆ. ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ರೋಚಕ ಪಂದ್ಯಕ್ಕಾಗಿ ಕೌಂಟ್‍ಡೌನ್ ಆರಂಭಗೊಂಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಪ್ರಕರಣ ಏರಿಳಿತ – ಇಂದು 214 ಕೇಸ್, 12 ಸಾವು

  • ಮಹಿಳೆಯರು ಪುರುಷರಿಗಿಂತಲೂ ಅತ್ಯಂತ ಬಲಶಾಲಿ: ವಿರಾಟ್ ಕೊಹ್ಲಿ

    ಮಹಿಳೆಯರು ಪುರುಷರಿಗಿಂತಲೂ ಅತ್ಯಂತ ಬಲಶಾಲಿ: ವಿರಾಟ್ ಕೊಹ್ಲಿ

    ನವದೆಹಲಿ: ಮಹಿಳಾ ದಿನಾಚರಣೆಯ ಪ್ರಯುಕ್ತ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಗಳು ವಮಿಕಾರ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ಈ ಫೋಟೋದಲ್ಲಿ ಅನುಷ್ಕಾ ಶರ್ಮಾ ಮಗುವನ್ನು ಎರಡು ಕೈಗಳಿಂದ ತಬ್ಬಿಕೊಂಡು ಮಗುವಿನ ಮುಖ ನೋಡುತ್ತಾ ಹೃದಯದಿಂದ ಮುಗುಳು ನಗೆ ಬೀರಿದ್ದಾರೆ.

     

    View this post on Instagram

     

    A post shared by Virat Kohli (@virat.kohli)

    ಫೋಟೋವನ್ನು ಪೋಸ್ಟ್ ಮಾಡಿರುವ ವಿರಾಟ್, ಮಗುವಿಗೆ ಜನ್ಮ ನೀಡುವುದನ್ನು ನೋಡುವುದೇ ನಂಬಲಾಗದ ಹಾಗೂ ಅದ್ಭುತದ ಅನುಭವ. ಅದಕ್ಕೆ ಸಾಕ್ಷಿ ಮಹಿಳೆಯರು. ಮಹಿಳೆಯರಲ್ಲಿ ಶಕ್ತಿ ಮತ್ತು ದೈವತ್ವವನ್ನು ದೇವರು ಯಾಕೆ ಸೃಷ್ಟಿಸಿದ್ದಾನೆ ಎಂಬುವುದು ನಿಮಗೂ ಅರ್ಥವಾಗುತ್ತದೆ ಎಂದು ಕ್ಯಾಪ್ಷನ್ ಹಾಕಿದ್ದಾರೆ. ಜೊತೆಗೆ ಮಹಿಳೆಯರು ಪುರುಷರಿಗಿಂತಲೂ ಅತ್ಯಂತ ಬಲಶಾಲಿ. ನನ್ನ ಜೀವನದ ದಿಟ್ಟ, ಸಹಾನೂಭೂತಿ ಹಾಗೂ ಧೈರ್ಯಶಾಲಿ ಮಹಿಳೆ ಹಾಗೂ ಅಮ್ಮನಂತೆ ಬೆಳೆಯಲಿರುವ ಮಗಳಿಗೆ ಮಹಿಳಾ ದಿನಾಚರಣೆಯ ಶುಭಾಶಯಗಳು ಹಾಗೂ ವಿಶ್ವದ ಎಲ್ಲಾ ಮಹಿಳೆಯರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳು ಎಂದು ಪೋಸ್ಟ್ ಮಾಡಿದ್ದಾರೆ.

     

    View this post on Instagram

     

    A post shared by AnushkaSharma1588 (@anushkasharma)

    ಕಳೆದ ತಿಂಗಳು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ತಮ್ಮ ಮಗಳ ಫೋಟೋವನ್ನು ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು ಹಾಗೂ ವಮಿಕಾ ಎಂದು ಹೇಳುವ ಮೂಲಕ ಮಗಳ ಹೆಸರನ್ನು ಬಹಿರಂಗ ಪಡಿಸಿದ್ದರು.

  • ಮಗಳಿಗೆ ದುರ್ಗೆಯೆ ಹೆಸರಿಟ್ಟ ವಿರುಷ್ಕಾ

    ಮಗಳಿಗೆ ದುರ್ಗೆಯೆ ಹೆಸರಿಟ್ಟ ವಿರುಷ್ಕಾ

    ಮುಂಬೈ: ಜನವರಿ 11 ರಂದು ಅನುಷ್ಕಾ ಮುದ್ದಾದ ಹೆಣ್ಣು ಮಗುವಿನ ಜನ್ಮ ನೀಡಿದ್ದರು. ಇದೀಗ ಅವರ ಮುದ್ದು ಮಗಳಿಗೆ ಹೆಸರನ್ನು ಇಟ್ಟಿರುವ ವಿಚಾರವನ್ನು ಸೋಷಿಲ್ ಮೀಡಿಯಾ ಮೂಲಕವಾಗಿ ರಿವೀಲ್ ಮಾಡಿದ್ದಾರೆ.

    ಮುದ್ದು ಮಗಳಿಗೆ ‘ವಮಿಕಾ’ ಎನ್ನುವ ಹೆಸರಿಡುವ ಮೂಲಕವಾಗಿ ನಾಮಕರಣ ಮಾಡಿದ್ದಾರೆ. ತಾಯಿ ದುರ್ಗೆಯೆ ಹೆಸರು ಆಗಿದೆ ಮತ್ತು ವಿರಾಟ್- ಅನುಷ್ಕಾ ಹೆಸರಿನ ಮೊದಲ ಹಾಗೂ ಅಂತ್ಯದ ಅಕ್ಷರ ಜೋಡಿಸಿ ಮಗಳಿಗೆ ಹೆಸರಿಟ್ಟಿದ್ದಾರೆ.

    ನಾವಿಬ್ಬರು ಪ್ರೀತಿ, ಕೃತಜ್ಞತೆಯಿಂದ ಬದುಕಿದಂತೆ ನಾವು ವಮಿಕಾಳನ್ನು ಕೂಡ ನಡೆಸಿಕೊಂಡು ಹೋಗುತ್ತೇವೆ. ವಮಿಕಾ ನಮ್ಮ ಜೀವನದಲ್ಲಿ ಬಂದು ಅದೆಲ್ಲವನ್ನು ಮತ್ತೊಂದು ಹಂತಕ್ಕೆ ತಂದಿದ್ದಾಳೆ. ಕೆಲವೊಂದು ಸಂದರ್ಭದಲ್ಲಾದರೂ ಅಳು, ನಗು, ಚಿಂತೆ, ಆನಂದ ಭಾವನೆಗಳನ್ನು ಅನುಭವಿಸಿದ್ದೇವೆ. ಇತ್ತೀಚೆಗೆ ನಿದ್ದೆ ಕಡಿಮೆಯಾಗಿದೆ, ಆದರೆ ಹೃದಯ ತುಂಬಿದೆ. ನಿಮ್ಮೆಲ್ಲರ ಆಶಿರ್ವಾದ ಶುಭಾಶಯ, ಪ್ರೀತಿಗೆ ಧನ್ಯವಾದಗಳು ಎಂದು ಬರೆದು ತಮ್ಮ ಮಗುವಿನ ಜೊತೆಗೆ ದಂಪತಿ ಇರುವ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.

     

    View this post on Instagram

     

    A post shared by AnushkaSharma1588 (@anushkasharma)

    ಅಭಿಮಾನಿಗಳಿಗಾಗಿ ತಮ್ಮ ಮದುವೆ ವಿಚಾರದಿಂದ ಹಿಡಿದು ಅವರ ಪ್ರತಿಯೊಂದು ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕವಾಗಿ ತಿಳಿಸುವ ಈ ಜೋಡಿ ಮುದ್ದು ಮಗಳಿಗೆ ಯಾವ ಹೆಸರು ಇಡುತ್ತಾರೆ ಎಂಬ ಕುರಿತಾಗಿ ಚರ್ಚೆ ನಡೆಯುತ್ತಿತ್ತು. ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಈಗ ಮಗಳ ಜೊತೆಗಿರುವ ಫೋಟೋ ಜೊತೆಗೆ ಹೆಸರನ್ನು ಕೂಡ ರಿವೀಲ್ ಮಾಡಿದ್ದಾರೆ. ತಂದೆ-ತಾಯಿಗಳಾಗಿ ಬಡ್ತಿ ಪಡೆದಿರುವ ವಿರುಷ್ಕಾ ದಂಪತಿ ಮಗಳಿಗೆ ಹೆಸಟ್ಟ ವಿಚಾರವನ್ನು ಟ್ವಿಟ್ಟರ್, ಇನ್‍ಸ್ಟಾಗ್ರಾಮ್ ಮೂಲಕವಾಗಿ ಹಂಚಿಕೊಂಡು ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ.

  • 3 ವರ್ಷದ ಪಯಣ, ಶೀಘ್ರದಲ್ಲೇ ಮೂವರಾಗಲಿದ್ದೇವೆ- ಮದ್ವೆ ಆ್ಯನಿವರ್ಸರಿ ಸಂಭ್ರಮದಲ್ಲಿ ವಿರುಷ್ಕಾ

    3 ವರ್ಷದ ಪಯಣ, ಶೀಘ್ರದಲ್ಲೇ ಮೂವರಾಗಲಿದ್ದೇವೆ- ಮದ್ವೆ ಆ್ಯನಿವರ್ಸರಿ ಸಂಭ್ರಮದಲ್ಲಿ ವಿರುಷ್ಕಾ

    – ಪರಸ್ಪರ ವಿಶ್ ಮಾಡ್ಕೊಂಡ ದಂಪತಿ
    – ವಿರಾಟ್‍ಗೆ ಮಿಸ್ ಯೂ ಅಂದ್ರು ಅನುಷ್ಕಾ

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದಂಪತಿಗೆ ಇಂದು ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ವಿಶೇಷ ದಿನದ ಪ್ರಯುಕ್ತ ಒಬ್ಬರಿಗೊಬ್ಬರು ಸ್ಪೆಷಲ್ ಆಗಿ ವಿಶ್ ಮಾಡಿದ್ದಾರೆ.

    ಹೌದು. 3ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ವಿರುಷ್ಕಾ ದಂಪತಿಗಳಿದ್ದಾರೆ. ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಳ್ಳುವ ಮೂಲಕವಾಗಿ ಒಬ್ಬರಿಗೊಬ್ಬರು ವಿಶ್ ಮಾಡಿಕೊಂಡಿದ್ದಾರೆ.

     

    View this post on Instagram

     

    A post shared by AnushkaSharma1588 (@anushkasharma)

    ಅನುಷ್ಕಾ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಇಬ್ಬರು ಇರುವ ಫೋಟೋ ಶೇರ್ ಮಾಡಿ ಮೂರು ವರ್ಷಗಳ ಪಯಣ, ಶೀಘ್ರದಲ್ಲೇ ಮೂವರಾಗಲಿದ್ದೇವೆ. ಮಿಸ್ ಯೂ ಎಂದು ಬರೆದು ಪತಿ ವಿರಾಟ್‍ಗೆ ಮದುವೆ ವಾರ್ಷಿಕೋತ್ಸವದ ವಿಶ್ ಮಾಡಿದ್ದಾರೆ. ಇತ್ತ ವಿವಾಹ ವಾರ್ಷಿಕೋತ್ಸವದಂದು ಮದುವೆಯಲ್ಲಿ ತೆಗೆದ ಈ ಫೋಟೋ ವನ್ನು ಹಂಚಿಕೊಳ್ಳುವ ಮೂಲಕ ಮೂರು ವರ್ಷಗಳ ಕಾಲ ಜೊತೆ ಇದ್ದೇವೆ ರೆಡ್ ಹಾರ್ಟ್ ಎಂದು ಬರೆದುಕೊಂಡು ಪತ್ನಿಗೆ ಕೂಡ ಕೊಹ್ಲಿ ವಿಶ್ ಮಾಡಿದ್ದಾರೆ.

    ಅನುಷ್ಕಾ, ವಿರಾಟ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಫೋಟೋ ಗಳಿಗೆ ಅಭಿಮಾನಿಗಳೂ ಶುಭ ಕೋರುತ್ತಿದ್ದಾರೆ. ಅನುಷ್ಕಾ ಅವರ ಕುಟುಂಬಕ್ಕೆ ಮುಂದಿನ ತಿಂಗಳು ಅಂದರೆ ಜನವರಿಯಲ್ಲಿ ಹೊಸ ಅತಿಥಿಯ ಆಗಮನವಾಗಲಿದೆ.

    2017ರ ಡಿ. 11ರಂದು ವಿವಾಹವಾದ ಈ ಜೋಡಿ ಈಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅನುಷ್ಕಾಗೆ ಮುಂದಿನ ತಿಂಗಳು ಡೆಲಿವರಿಯಾಗಲಿದೆ. ಇದಕ್ಕಾಗಿ ಕೇವಲ ವಿರಾಟ್ ದಂಪತಿ ಮಾತ್ರವಲ್ಲ, ಅವರ ಕೋಟ್ಯಂತರ ಅಭಿಮಾನಿಗಳೂ ಎದುರು ನೋಡುತ್ತಿದ್ದಾರೆ.

  • ಜಪಾನ್‍ಗೆ ಹಾರಲಿದ್ದಾರೆ ಪ್ರಭಾಸ್-ಅನುಷ್ಕಾ

    ಜಪಾನ್‍ಗೆ ಹಾರಲಿದ್ದಾರೆ ಪ್ರಭಾಸ್-ಅನುಷ್ಕಾ

    ಹೈದರಾಬಾದ್: ‘ಬಾಹುಬಲಿ’ ಸಿನಿಮಾ ಯಶಸ್ವಿಯಾದ ಬಳಿಕ ಅಭಿಮಾನಿಗಳು ನಟ ಪ್ರಭಾಸ್ ಮತ್ತು ನಟಿ ಅನುಷ್ಕಾ ಶೆಟ್ಟಿ ನಡುವೆ ಪ್ರೀತಿ ಇದೆ ಎಂದು ಮಾತನಾಡುತ್ತಿದ್ದರು. ಈ ಬಗ್ಗೆ ಇಬ್ಬರು ಕೂಡ ಸ್ಪಷ್ಟನೆ ಕೊಟ್ಟಿದ್ದರು. ಆದರೂ ಈಗ ಮತ್ತೆ ಒಟ್ಟಿಗೆ ಬಾಹುಬಲಿ ಜೋಡಿ ಜಪಾನ್‍ಗೆ ಪ್ರಯಾಣ ಬೆಳಸಲಿದ್ದಾರೆ.

    ನಟ ಪ್ರಭಾಸ್ ಅವರು ತಮ್ಮ ವೃತ್ತಿ ಜೀವನದಲ್ಲಿ ಸುಮಾರು 5-6 ವರ್ಷಗಳನ್ನ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ 1’ ಹಾಗೂ ‘ಬಾಹುಬಲಿ 2’ ಸಿನಿಮಾಕ್ಕೆ ಮೀಸಲಿಟ್ಟಿದ್ದರು. ಇದರಿಂದಾಗಿ ಅವರು ಪಟ್ಟಂತಹ ಶ್ರಮಕ್ಕೆ ಪ್ರತಿಫಲ ಎಂಬಂತೆ ದೇಶಾದ್ಯಂತ ಖ್ಯಾತಿ ಪಡೆದಿದ್ದರು. ಜೊತೆಗೆ ಈ ಎರಡು ಸಿನಿಮಾದ ಅಭಿನಯದ ಮೂಲಕ ದೇಶದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ.

    ಅದೇ ರೀತಿ ಜಪಾನ್‍ನಲ್ಲಿ ಪ್ರಭಾಸ್ ಅಭಿಮಾನಿಗಳು ಇದ್ದಾರೆ. ಹೀಗಾಗಿ ಅಲ್ಲಿ ಕೂಡ ಪ್ರಭಾಸ್ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿವೆ. ನಟ ಪ್ರಭಾಸ್ ಈ ಹಿಂದೆ ಅಭಿನಯಿಸಿದ್ದ ‘ಮಿರ್ಚಿ’ ಹಾಗೂ ‘ಡಾರ್ಲಿಂಗ್’ ಸಿನಿಮಾಗಳು ಮುಂದಿನ ತಿಂಗಳ ಮಾರ್ಚ್ 2 ರಂದು ಜಪಾನ್ ನಲ್ಲಿ ಪ್ರದರ್ಶನಗೊಳ್ಳಲಿದೆ.

    ‘ಮಿರ್ಚಿ’ ಸಿನಿಮಾದಲ್ಲಿ ಪ್ರಭಾಸ್ ಅವರಿಗೆ ನಾಯಕಿಯಾಗಿ ಅನುಷ್ಕಾ ಶೆಟ್ಟಿ ಮತ್ತು ‘ಡಾರ್ಲಿಂಗ್’ ಸಿನಿಮಾದಲ್ಲಿ ನಟಿ ಕಾಜಲ್ ಅಗರ್ವಾಲ್ ಅಭಿನಯಿಸಿದ್ದರು. ಹೀಗಾಗಿ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಇಬ್ಬರು ಒಟ್ಟಿಗೆ ಜಪಾನ್ ಗೆ ಹೋಗಲಿದ್ದಾರೆ. ಈ ಬಗ್ಗೆ ತಿಳಿದ ಅವರ ಅಭಿಮಾನಿಗಳು ಮತ್ತೆ ಇವರಿಬ್ಬರ ನಡುವೆ ಪ್ರೀತಿ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

    ಈಗಾಗಲೇ ಪ್ರಭಾಸ್ ‘ಕಾಫಿ ವಿಥ್ ಕರಣ್’ ಶೋನಲ್ಲಿ ನಾವಿಬ್ಬರು ಒಳ್ಳೆಯ ಸ್ನೇಹಿತರು. ನಮ್ಮಿಬ್ಬರ ನಡುವೆ ಏನೂ ಇಲ್ಲ. ನಾನು ಅನುಷ್ಕಾ ಜೊತೆ ಡೇಟಿಂಗ್ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇತ್ತ ಅನುಷ್ಕಾ ಕೂಡ ನನ್ನ ಪ್ರಭಾಸ್ ನಡುವೆ ಯಾವುದೇ ರೀತಿಯ ಸಂಬಂಧವಿಲ್ಲ. ನಿಜ ಜೀವನದಲ್ಲಿ ಬಾಹುಬಲಿ-ದೇವಾಸೇನಾ ರೀತಿ ಕೆಮಿಸ್ಟ್ರಿ ನಿರೀಕ್ಷಿಸಬೇಡಿ. ಅದು ಕೇವಲ ಬೆಳ್ಳಿ ಪರದೆಯಲ್ಲಿ ಮಾತ್ರ ಸಾಧ್ಯ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅನುಷ್ಕಾಗೆ ಪ್ರಭಾಸ್‍ನಂತಹ Mr. Perfect ಹುಡುಗ ಸಿಗಲಿ: ಸ್ವೀಟಿ ತಾಯಿ

    ಅನುಷ್ಕಾಗೆ ಪ್ರಭಾಸ್‍ನಂತಹ Mr. Perfect ಹುಡುಗ ಸಿಗಲಿ: ಸ್ವೀಟಿ ತಾಯಿ

    ಹೈದರಾಬಾದ್: ಸೌಥ್ ಸಿನಿ ಇಂಡಸ್ಟ್ರಿಯ ಪ್ರಸಿದ್ಧ ಜೋಡಿ, ಕ್ಯೂಟ್ ಹೀರೋ-ಹೀರೋಯಿನ್ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಒಂದಲ್ಲ ಒಂದು ವಿಷಯಕ್ಕೆ ಸುದ್ದಿ ಆಗುತ್ತಿರುತ್ತಾರೆ. ಅದರಲ್ಲೂ `ಬಾಹುಬಲಿ 2 ಚಿತ್ರ ತೆರೆಕಂಡ ನಂತರ ಇವರಿಬ್ಬರ ಆಫ್‍ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಗಾಸಿಪ್‍ಗಳು ಹೆಚ್ಚಾಗುತ್ತಲೇ ಇವೆ.

    ಸ್ವಲ್ಪ ದಿನದಿಂದಲೂ ಈ ಜೋಡಿಯ ಬಗ್ಗೆ ಯಾವ ಮಾತುಗಳು ಇರಲಿಲ್ಲ. ಈಗ ಅನುಷ್ಕಾ ತಾಯಿ ಇವರಿಬ್ಬರ ಮದುವೆ ಬಗ್ಗೆ ಮಾತನಾಡಿದ್ದಾರೆ.

    ಸ್ವೀಟಿ ತಾಯಿ ಪ್ರಫುಲ್ಲಾ ಶೆಟ್ಟಿ ಅವರು, ಅನುಷ್ಕಾ ಮತ್ತು ಪ್ರಭಾಸ್ ಇಬ್ಬರು ಒಳ್ಳೆಯ ಜೋಡಿ. ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸುವುದು ನನಗೂ ಇಷ್ಟ. ಅನುಷ್ಕಾಗೆ ಪ್ರಭಾಸ್ ನಂತಹ ಮಿ. ಪರ್ಫೆಕ್ಟ್ ಹುಡುಗ ಸಿಗಲಿ ಎಂದು ನಾನು ಇಷ್ಟ ಪಡುತ್ತೇನೆ. ಆದರೆ ಅವರಿಬ್ಬರು ಒಳ್ಳೆಯ ಸ್ನೇಹಿತರು. ಆದ್ದರಿಂದ ಅವರಿಬ್ಬರ ನಡುವಿನ ರಿಲೇಷನ್ ಶಿಪ್ ಬಗ್ಗೆ ವದಂತಿ ಹಬ್ಬಿಸಬೇಡಿ ಎಂದು ಹೇಳಿದ್ದಾರೆ.

    ಪ್ರಭಾಸ್-ಅನುಷ್ಕಾ ಅಭಿಮಾನಿಗಳು ಮದುವೆಯಾಗುತ್ತಾರೆ ಎಂದು ಸುದ್ದಿ ಹರಿದಾಡುತ್ತಿತ್ತು. ಈ ಸುದ್ದಿಗೆ ಪ್ರತಿಕ್ರಿಯಿಸಿದ ಅವರು, ನಾವಿಬ್ಬರೂ ಒಳ್ಳೆಯ ಸ್ನೇಹಿತರು ಎಂದು ಹೇಳೋ ಮೂಲಕ ಸುದ್ದಿಯನ್ನ ತಳ್ಳಿ ಹಾಕಿದ್ದರು.

    ಸದ್ಯಕ್ಕೆ ಪ್ರಭಾಸ್ `ಸಾಹೋ’ ಸಿನಿಮಾದ ಶೂಟಿಂಗ್ ಅಲ್ಲಿ ಬ್ಯುಸಿಯಾಗಿದ್ದಾರೆ. ಸಾಹೋ ಚಿತ್ರವನ್ನು ಸುಜೀತ್ ನಿರ್ದೇಶನ ಮಾಡುತ್ತಿದ್ದು, ಪ್ರಭಾಸ್, ಶ್ರದ್ಧಾ ಕಪೂರ್, ಅರುಣ್ ವಿಜಯ್, ನೀಲ್ ನಿತಿನ್ ಮುಕೇಶ್, ಜಾಕಿ ಶ್ರಾಫ್ ಹಾಗೂ ಲಾಲ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ತಮಿಳು, ತೆಲಗು ಹಾಗೂ ಹಿಂದಿಯಲ್ಲಿ ಬಿಡುಗಡೆಯಾಗಲಿದೆ.

  • ಸ್ವೀಟಿಯ ಬಾಲಿವುಡ್ ಎಂಟ್ರಿ ತಡೆದ ಪ್ರಭಾಸ್!

    ಸ್ವೀಟಿಯ ಬಾಲಿವುಡ್ ಎಂಟ್ರಿ ತಡೆದ ಪ್ರಭಾಸ್!

    ಹೈದರಾಬಾದ್: ಟಾಲಿವುಡ್‍ನಲ್ಲಿ ಪ್ರಭಾಸ್-ಅನುಷ್ಕಾ ಸೂಪರ್ ಜೋಡಿ. ಕ್ಯೂಟ್ ಹೀರೋ-ಹೀರೋಯಿನ್ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಯಾವಾಗಲು ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿ ಆಗುತ್ತಿರುತ್ತಾರೆ. ಅದರಲ್ಲೂ `ಬಾಹುಬಲಿ 2 ಚಿತ್ರ ತೆರೆಕಂಡ ನಂತರ ಇವರಿಬ್ಬರ ಆಫ್ ಸ್ಕ್ರೀನ್ ಕೆಮಿಸ್ಟ್ರಿ ಬಗ್ಗೆ ಗಾಸಿಪ್‍ಗಳು ಹೆಚ್ಚಾಗುತ್ತಲೇ ಇವೆ.

    ಸ್ರ್ಕೀನ್ ಮೇಲೆ ಪ್ರಭಾಸ್ ಹಾಗೂ ಅನುಷ್ಕಾ ಒಟ್ಟಾಗಿ ನಟಿಸಿದರೆ ಆ ಚಿತ್ರ ಸೂಪರ್ ಹಿಟ್. ಅಭಿಮಾನಿಗಳನ್ನು ಮೋಡಿ ಮಾಡುವ ಈ ಜೋಡಿಗೆ ಟಾಲಿವುಡ್‍ನಲ್ಲಿ ತುಂಬಾ ಬೇಡಿಕೆ ಇದೆ. ಇತ್ತೀಚಿಗಷ್ಟೇ ಪ್ರನುಷ್ಕಾ ಜೋಡಿ ಬಾಹುಬಲಿ 2 ಚಿತ್ರದಲ್ಲಿ ತೆರೆಹಂಚಿಕೊಂಡಿದ್ದರು. ಮತ್ತೊಮ್ಮೆ ಒಂದಾಗಲಿ ಎಂದು ಅಭಿಮಾನಿಗಳ ಡಿಮ್ಯಾಂಡ್ ಹೆಚ್ಚಿದೆ.

    ನಟ ಪ್ರಭಾಸ್ ಬಾಲಿವುಡ್‍ಗೆ ಎಂಟ್ರಿ ಕೊಡುತ್ತಿರುವ ವಿಷಯ ಹಳೆಯದು. ಅಮರೇಂದ್ರ ಬಾಹುಬಲಿ ಬಿಟೌನ್‍ಗೆ ಗ್ರ್ಯಾಂಡ್ ಎಂಟ್ರಿ ಕೊಡಲು ಸಿದ್ಧವಾಗಿದ್ದಾರೆ. ಇತ್ತ ಸ್ವೀಟಿ ಅನುಷ್ಕಾಗೂ ಕೂಡ ಬಾಲಿವುಡ್‍ನಿಂದ ಆಫರ್ ಗಳು ಬಂದಿದ್ದು, ಇತ್ತೀಚಿಗಷ್ಟೇ ನಿರ್ದೇಶಕರೊಬ್ಬರು ಬಾಲಿವುಡ್‍ಗೆ ಬರುವಂತೆ ಅನುಷ್ಕಾ ಶೆಟ್ಟಿಗೆ ಕೇಳಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ ಬಾಲಿವುಡ್‍ನಿಂದ ಬಂದ ಆಹ್ವಾನವನ್ನು ಅನುಷ್ಕಾ ತಿರಸ್ಕರಿಸಿದ್ದಾರೆ. ಈ ನಿರ್ಧಾರದ ಹಿಂದೆ ಪ್ರಭಾಸ್ ಇದ್ದಾರೆ ಎಂಬ ಸುದ್ದಿ ಬಿಟೌನ್ ನಲ್ಲಿ ಹರಿದಾಡುತ್ತಿದೆ.

    ಸದ್ಯಕ್ಕೆ ಅನುಷ್ಕಾ ಬಾಲಿವುಡ್‍ಗೆ ಬರೋದು ಬೇಡ ಎಂದು ಪ್ರಭಾಸ್ ಹೇಳುತ್ತಿದ್ದು, ಬಾಲಿವುಡ್‍ನ ಆಫರ್ ತಿರಸ್ಕರಿಸುವಂತೆ ಹೇಳಲು ಬಲವಾದ ಕಾರಣವಿದೆ. ಒಂದು ವೇಳೆ ಅನುಷ್ಕಾ ಶೆಟ್ಟಿ ಬಾಲಿವುಡ್‍ಗೆ ಎಂಟ್ರಿ ಕೊಡುವುದಾದರೆ ಅದು ಪ್ರಭಾಸ್ ಜೊತೆಯೇ ಆಗಬೇಕಂತೆ. ಅನುಷ್ಕಾ ಅವರೊಂದಿಗೆ ಬಾಲಿವುಡ್ ಗೆ ಪಾದಾರ್ಪಣೆ ಮಾಡಬೇಕೆಂದು ಪ್ರಭಾಸ್ ಅಭಿಪ್ರಾಯಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    ಪ್ರಭಾಸ್ `ಭಾಗಮತಿ’ ಸಿನಿಮಾದ ಚಿತ್ರೀಕರಣದಲ್ಲಿ ಸ್ವತಃ `ಭಾಗಮತಿ’ ಸೆಟ್‍ಗೆ ತೆರಳಿ ಅನುಷ್ಕಾರನ್ನು ಭೇಟಿಯಾಗಿದ್ದರು. ಸೆಟ್ ಪ್ರವೇಶಕ್ಕೂ ಮುನ್ನ ಯಾರಿಗೂ ತಿಳಿಯಬಾರದೆಂದು ಮುಖಕ್ಕೆ ಕರ್ಚಿಪ್ ಕಟ್ಟಿಕೊಂಡು ಹೋಗಿದ್ದರು. ಭಾಗಮತಿ ಟ್ರೇಲರ್ ಬಿಡುಗಡೆಗೊಂಡಾಗ ಪ್ರಭಾಸ್ ಫೇಸ್‍ಬುಕ್‍ನಲ್ಲಿ “ಪ್ರತಿ ಸಿನಿಮಾಗಳಲ್ಲಿಯೂ ಹೊಸ ರೀತಿಯ ಪ್ರಯೋಗ ಮಾಡುವುದರಲ್ಲಿ ಅನುಷ್ಕಾ ಶೆಟ್ಟಿ ಯಾವಾಗಲೂ ಮೊದಲಿರುತ್ತಾರೆ. ಗುಡ್ ಲಕ್ ಸ್ವೀಟಿ.. ಹಾಗೂ ಚಿತ್ರತಂಡಕ್ಕೆ ಶುಭವಾಗಲಿ” ಎಂದು ಬರೆದು ಭಾಗಮತಿ ಸಿನಿಮಾ ಟೀಸರ್ ಹಾಕಿಕೊಂಡು ಅನುಷ್ಕಾ ಶೆಟ್ಟಿಗೆ ಶುಭಕೋರಿದ್ದರು.

    ಪ್ರಸ್ತುತ ಪ್ರಭಾಸ್ ಸುಜೀತ್ ನಿರ್ದೇಶನದ `ಸಾಹೋ’ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಚಿತ್ರದಲ್ಲಿ ಶ್ರದ್ಧಾ ಕಪೂರ್ ಮತ್ತು ನೀಲ್ ನಿತಿನ್ ಮುಖೇಶ್ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದು, ಯುಎಇಯಲ್ಲಿ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದಾರೆ. ಈ ಚಿತ್ರವು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಮೂಡಿ ಬರುತ್ತಿದ್ದು, ಪ್ರಭಾಸ್ ಅವರ ಮೊದಲು ಬಾಲಿವುಡ್ ಸಿನಿಮಾವಾಗಿದೆ. ಈ ಚಿತ್ರವು ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

  • ಫೇಸ್‍ಬುಕ್ ಪೋಸ್ಟ್ ಹಾಕಿ ಗುಡ್ ಲಕ್ ಸ್ವೀಟಿ ಎಂದ ಪ್ರಭಾಸ್

    ಫೇಸ್‍ಬುಕ್ ಪೋಸ್ಟ್ ಹಾಕಿ ಗುಡ್ ಲಕ್ ಸ್ವೀಟಿ ಎಂದ ಪ್ರಭಾಸ್

    ಮುಂಬೈ: ದೇಶಾದ್ಯಂತ ಹವಾ ಸೃಷ್ಟಿಸಿದ್ದ `ಬಾಹುಬಲಿ’ ಚಿತ್ರದ ಬಳಿಕ ನಾಯಕ ನಟ ಪ್ರಭಾಸ್ ಹಾಗೂ ಅನುಷ್ಕಾ ನಡುವಿನ ಬಾಂಧವ್ಯದ ಬಗ್ಗೆ ಸಾಕಷ್ಟು ಬಾರಿ ಸುದ್ದಿಯಾಗಿದೆ.

    ಇದರ ಮಧ್ಯೆ ಅನುಷ್ಕಾ ಅಭಿನಯದ `ಭಾಗಮತಿ’ ಸಿನಿಮಾದ ಟೀಸರ್ ಬಿಡುಗಡೆಯಾಗಿದ್ದು, ಈ ಬಗ್ಗೆ ಪ್ರಭಾಸ್ ತಮ್ಮ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿ ಸ್ವೀಟಿ ಬಗ್ಗೆ ಪ್ರೀತಿಯ ಮಾತುಗಳನ್ನಾಡಿದ್ದಾರೆ.

    “ಪ್ರತಿ ಸಿನಿಮಾಗಳಲ್ಲಿಯೂ ಹೊಸ ರೀತಿಯ ಪ್ರಯೋಗ ಮಾಡುವುದರಲ್ಲಿ ಅನುಷ್ಕಾ ಶೆಟ್ಟಿ ಯಾವಾಗಲೂ ಮೊದಲಿರುತ್ತಾರೆ. ಗುಡ್ ಲಕ್ ಸ್ವೀಟಿ.. ಹಾಗೂ ಚಿತ್ರತಂಡಕ್ಕೆ ಶುಭವಾಗಲಿ” ಎಂದು ಬರೆದು ಭಾಗಮತಿ ಸಿನಿಮಾ ಟೀಸರ್ ಹಾಕಿಕೊಂಡಿದ್ದಾರೆ.

    ಅನುಷ್ಕಾ ಶೆಟ್ಟಿ ಅಭಿನಯದ `ಭಾಗಮತಿ’ ಚಿತ್ರದ ಟೀಸರ್ ಡಿಸೆಂಬರ್ 20 ರಂದು ಬಿಡುಗಡೆಯಾಗಿದೆ. `ಬಾಹುಬಲಿ’ ಚಿತ್ರದಲ್ಲಿ ದೇವಸೇನಾ ಆಗಿ ಕಾಣಿಸಿಕೊಂಡಿದ್ದ ಅನುಷ್ಕಾ, ಈಗ ರಾಣಿ ಭಾಗಮತಿ ಪಾತ್ರದಲ್ಲಿ ಮಿಂಚಲಿದ್ದಾರೆ. ಚಿತ್ರದ ಟೀಸರ್ ತುಂಬಾ ಕುತೂಹಲವನ್ನು ಮೂಡಿಸುತ್ತಿದೆ.

    ಪ್ರಭಾಸ್ ಸದ್ಯ ಸಾಹೋ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ಚಿತ್ರವನ್ನ ಸುಜೀತ್ ನಿರ್ದೇಶಿಸುತ್ತಿದ್ದು, ಹಾಲಿವುಡ್ ಸ್ಟಂಟ್‍ಮ್ಯಾನ್ ಕೆನ್ನಿ ಬೇಟ್ಸ್ ಪ್ರಭಾಸ್‍ಗೆ ತರಬೇತಿ ನೀಡುತ್ತಿದ್ದಾರೆ. ಸಾಹೋ ಸಿನಿಮಾ ತೆಲುಗು, ತಮಿಳು, ಮಲೆಯಾಳಂ ಮತ್ತು ಹಿಂದಿ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಲು ಸಿದ್ಧವಾಗುತ್ತಿದ್ದು, ಮುಂದಿನ ವರ್ಷ 2018 ಕ್ಕೆ ತೆರೆಕಾಣುವ ಸಾಧ್ಯತೆ ಇದೆ.


  • ಮದುವೆ ವದಂತಿ ಬಗ್ಗೆ ಪ್ರಭಾಸ್ ಮೌನ ವಹಿಸಿರೋದ್ಯಾಕೆ?- ಅಂಕಲ್ ಹೀಗಂದ್ರು!

    ಮದುವೆ ವದಂತಿ ಬಗ್ಗೆ ಪ್ರಭಾಸ್ ಮೌನ ವಹಿಸಿರೋದ್ಯಾಕೆ?- ಅಂಕಲ್ ಹೀಗಂದ್ರು!

    ಮುಂಬೈ: ದೇಶಾದ್ಯಂತ ಹವಾ ಸೃಷ್ಟಿಸಿದ್ದ `ಬಾಹುಬಲಿ’ ಚಿತ್ರದ ಬಳಿಕ ನಾಯಕ ನಟ ಪ್ರಭಾಸ್ ಮದುವೆಯ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಈ ಮಧ್ಯೆ ಪ್ರಭಾಸ್ ಮನೆಯವರು ಸಾಕಷ್ಟು ಪ್ರಪೋಸಲ್‍ಗಳನ್ನ ಮುಂದಿಟ್ಟಿದ್ದು, ಪ್ರಭಾಸ್ ಯಾವುದಕ್ಕೂ ಇನ್ನೂ ಸಮ್ಮತಿ ನೀಡಿಲ್ಲ ಅಂತ ಅಂಕಲ್ ಕೃಷ್ಣಮ್ ರಾಜು ತಿಳಿಸಿದ್ದಾರೆ. ಇದನ್ನೂ ಓದಿ: ಮೆಗಾಸ್ಟಾರ್ ಚಿರಂಜೀವಿ ಅಳಿಯನಾಗ್ತಾರ ಪ್ರಭಾಸ್?

    ಬಾಹುಬಲಿ ಚಿತ್ರ ಬಿಡುಗಡೆಗೊಂಡ ಬಳಿಕ ಪ್ರಭಾಸ್ ಮತ್ತು ಅನುಷ್ಕಾ ಮದುವೆಯಾಗುತ್ತಾರೆ ಎಂದು ಇತ್ತೀಚಿನವೆರೆಗೆ ಸುದ್ದಿಗಳು ಹರಿದಾಡುತ್ತಿದ್ದವು. ಆದ್ರೆ ಇದೀಗ ಕೆಲ ದಿನಗಳ ಹಿಂದೆಯಷ್ಟೇ ಪ್ರಭಾಸ್ ಅವರು ಮೆಗಾಸ್ಟಾರ್ ಜಿರಂಜೀವಿ ಅಳಿಯನಾಗುತ್ತಾರೆ. ಚಿರಂಜೀವಿ ಅವರ ಸಹೋದರ ನಾಗೇಂದ್ರ ಬಾಬು ಸುಪುತ್ರಿ ನಿಹಾರಿಕಾ ಅವರನ್ನು ಪ್ರಭಾಸ್ ವರಿಸಲಿದ್ದಾರೆ ಅನ್ನೋ ಗಾಸಿಪ್ ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು. ಆದ್ರೆ ಇಷ್ಟೊಂದು ಗಾಸಿಪ್ ಗಳು ಹರಿದಾಡುತ್ತಿದ್ದರೂ ಪ್ರಭಾಸ್ ಮಾತ್ರ ಮೌನ ವಹಿಸಿರುವುದು ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ. ಇದನ್ನೂ ಓದಿ: ಈ ಬಾಲಿವುಡ್ ನಟಿ ಮೇಲೆ ಪ್ರಭಾಸ್‍ಗೆ ಕ್ರಷ್ ಅಂತೆ!

    ಈ ಮೊದಲು ಅಂದ್ರೆ ಬಾಹುಬಲಿ ಚಿತ್ರ ಬಿಡುಗಡೆಗೊಂಡಾಗ ಪ್ರಭಾಸ್- ಅನುಷ್ಕಾ ಮಧ್ಯೆ ಲವ್ ಇದೆ. ಹೀಗಾಗಿ ಮದುವೆಯಾಗುತ್ತಾರೆ ಅನ್ನೋ ಸುದ್ದಿ ಹರಿದಾಡಿದಾಗ ನಾವಿಬ್ಬರೂ ಒಳ್ಳೇ ಸ್ನೇಹಿತರು ಎಂದು ಹೇಳೋ ಮೂಲಕ ಪ್ರಭಾಸ್- ಅನುಷ್ಕಾ ಈ ಸುದ್ದಿಯನ್ನ ತಳ್ಳಿ ಹಾಕಿದ್ದರು. ಇದನ್ನೂ ಓದಿ: ಶ್ರದ್ಧಾ ಕಪೂರ್ ಮೊದಲು ಈ ನಟಿಯನ್ನು ಸಾಹೋ ಚಿತ್ರಕ್ಕೆ ಆಫರ್ ಮಾಡಿದ್ರು!

    ಇತ್ತೀಚೆಗೆ ಪ್ರಭಾಸ್ ಅವರ ಅಂಕಲ್ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಮದುವೆಯ ಬಗ್ಗೆ ಪ್ರಭಾಸ್ ಇನ್ನೂ ಯಾರೊಂದಿಗೆ ತುಟಿ ಬಿಚ್ಚಿಲ್ಲ. ಈಗಾಗಲೇ ಕೆಲವು ಹುಡುಗಿಯರ ಫೋಟೋ ತೋರಿಸಿ ಅವನ ಆಯ್ಕೆಗೆ ಬಿಟ್ಟಿದ್ದೇವೆ. ಆದ್ರೂ ಕೂಡ ಈ ಬಗ್ಗೆ ಆತ ಯಾವುದೇ ಚಕಾರ ಎತ್ತಿಲ್ಲ ಎಂದು ಹೇಳಿದ್ದಾರೆ.

    ಇತ್ತ ಕುಟುಂಬದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೆ ಪ್ರಭಾಸ್ ದುಬೈನಲ್ಲಿ ಸಾಹೋ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಬೇಕಂತಲೇ ಈ ರೀತಿ ಮೌನ ವಹಿಸಿದ್ದಾರಾ? ಅಥವಾ ಅವರ ಮನಸ್ಸಿನಲ್ಲಿ ಬೇರೆ ಯಾರೋ ಇದ್ದು, ಅದನ್ನ ಬಹಿರಂಗಪಡಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾರಾ ಎಂಬ ಅನುಮಾನ ಕೂಡ ಮೂಡಿಸಿದೆ.

    https://www.youtube.com/watch?v=s1eobFGHssU