Tag: ಅನುಷಾ ರಂಗನಾಥ್

  • ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಆಶಿಕಾ ರಂಗನಾಥ್

    ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಆಶಿಕಾ ರಂಗನಾಥ್

    ನ್ನಡದ ನಟಿ ಆಶಿಕಾ ರಂಗನಾಥ್ (Ashika Ranganath) ಅವರು ಸಿನಿಮಾ ಕೆಲಸಕ್ಕೆ ಬ್ರೇಕ್ ಸಿಕ್ಕ ಬೆನ್ನಲ್ಲೇ ತಿರುಪತಿ ತಿಮ್ಮಪ್ಪನ (Tirumala Temple) ದರ್ಶನ ಪಡೆದಿದ್ದಾರೆ. ತಿಮ್ಮಪ್ಪನಿಗೆ ನಟಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಇದನ್ನೂ ಓದಿ:ಬಹುನಿರೀಕ್ಷಿತ ‘ಹೌಸ್‌ಫುಲ್ 5’ ಚಿತ್ರದ ಟೀಸರ್ ಔಟ್

    ಅಕ್ಕ ಅನುಷಾ ಮತ್ತು ಭಾವನೊಂದಿಗೆ ಆಂಧ್ರಪ್ರದೇಶದ ತಿರುಪತಿ ತಿರುಮಲ ವೆಂಕಟೇಶ್ವರ ಸ್ವಾಮಿ ದೇಗುಲಕ್ಕೆ ಆಶಿಕಾ ಭೇಟಿ ನೀಡಿದ್ದಾರೆ. ತಿಮ್ಮಪ್ಪನಿಗೆ ಪೂಜೆ ಸಲ್ಲಿಸಿ ಕೆಲ ಕಾಲ ದೇವಸ್ಥಾನದಲ್ಲಿ ಸಮಯ ಕಳೆದಿದ್ದಾರೆ. ಈ ವೇಳೆ, ಬಹುಭಾಷಾ ನಟಿ ಆಶಿಕಾ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದಿದ್ದಾರೆ. ಇದನ್ನೂ ಓದಿ:ಬಿಜೆಪಿ ಮುಖಂಡನ ಮಗನ ಮದುವೆಯಲ್ಲಿ ಜಾಕ್ವೆಲಿನ್‌ ಡ್ಯಾನ್ಸ್- ನೆಟ್ಟಿಗರಿಂದ ಟೀಕೆ

     

    View this post on Instagram

     

    A post shared by Ashika Ranganath (@ashika_rangnath)


    ಕಳೆದ ವಾರ ಗೆಳತಿ ಅರ್ಚನಾ ಕೊಟ್ಟಿಗೆ ಮತ್ತು ಕ್ರಿಕೆಟರ್ ಶರತ್ ಮದುವೆಯಲ್ಲಿ ಮಿಂಚಿದ್ದರು. ದಿಯಾ ಖ್ಯಾತಿಯ ಖುಷಿ, ತೇಜಸ್ವಿ ಶರ್ಮಾ, ಸಿರಿ ಪ್ರಹ್ಲಾದ್ ಸೇರಿದಂತೆ ಅನೇಕರು ಅರ್ಚನಾ ಮದುವೆಯಲ್ಲಿ ಭಾಗಿಯಾಗಿದ್ದರು.

    ಸದ್ಯ ಕಾರ್ತಿ ನಟನೆಯ ‘ಸರ್ದಾರ್ 2’, ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’, ಕನ್ನಡದ ‘ಗತವೈಭವ’ ಸೇರಿದಂತೆ ಹಲವು ಚಿತ್ರಗಳು ಆಶಿಕಾ ಕೈಯಲ್ಲಿವೆ.

  • ಬ್ರೈಡಲ್ ಪಾರ್ಟಿ ಸಂಭ್ರಮದಲ್ಲಿ ಆಶಿಕಾ ರಂಗನಾಥ್ ಸಹೋದರಿ ಅನುಷಾ

    ಬ್ರೈಡಲ್ ಪಾರ್ಟಿ ಸಂಭ್ರಮದಲ್ಲಿ ಆಶಿಕಾ ರಂಗನಾಥ್ ಸಹೋದರಿ ಅನುಷಾ

    ಸ್ಯಾಂಡಲ್‌ವುಡ್‌ನ ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ (Ashika Ranganath) ಅಕ್ಕ ಅನುಷಾ (Anusha) ಅವರು ಮದುವೆಗೆ ಸಜ್ಜಾಗಿದ್ದಾರೆ. ಇದೇ ಖುಷಿಯಲ್ಲಿ ಸಹೋದರಿ, ತಂಗಿ ಆಶಿಕಾ ಜೊತೆ ಬ್ರೈಡಲ್ ಪಾರ್ಟಿ ಮಾಡಿದ್ದಾರೆ. ಈ ಕುರಿತ ಸುಂದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

    ‘ಗೋಕುಲದಲ್ಲಿ ಸೀತೆ’ ಎಂಬ ಧಾರಾವಾಹಿ ಸೇರಿದಂತೆ ಸಿನಿಮಾದಲ್ಲಿ ನಟಿಸಿರುವ ಅನುಷಾ ರಂಗನಾಥ್ (Anusha Ranganath) ಅವರು ಈಗ ಮದುವೆಗೆ ಸಜ್ಜಾಗಿದ್ದಾರೆ. ಖಾಸಗಿ ರೆಸಾರ್ಟ್‌ವೊಂದರಲ್ಲಿ ಬ್ರೈಡಲ್ ಪಾರ್ಟಿ ಮಾಡುವ ಮೂಲಕ ಅನುಷಾ & ಟೀಮ್‌ ಸಂಭ್ರಮಿಸಿದೆ. ಇದನ್ನೂ ಓದಿ:ನೀವಿಲ್ಲ ಅಂದ್ರೆ ಈ ಸೀಸನ್ ಅಪೂರ್ಣ- ಸಂಗೀತಾ, ವಿನಯ್‌ಗೆ ಕಿಚ್ಚನ ಚಪ್ಪಾಳೆ

    ತಂಗಿ ಆಶಿಕಾ ರಂಗನಾಥ್, ಸಿರಿ ಪ್ರಹ್ಲಾದ್, ಸುಶ್ಮಿತಾ ಗೌಡ ಮತ್ತು ಆಪ್ತರ ಜೊತೆ ಸೇರಿ ಬ್ರೈಡ್ ಪಾರ್ಟಿ ಮಾಡಿ ಮದುವೆ ಹುಡುಗಿ ಅನುಷಾ ಸಂಭ್ರಮಿಸಿದ್ದಾರೆ. ಇನ್ನೂ ಖುಷಿಯಿಂದ ತಂಗಿ ಆಶಿಕಾರನ್ನು ಎತ್ತಿಕೊಂಡು ಅನುಷಾ ಖುಷಿಯಿಂದ ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.

    ಈ ಬ್ರೈಡಲ್ ಪಾರ್ಟಿಯಲ್ಲಿ ಕೇಕ್‌ನಲ್ಲಿ ಬ್ರೈಡ್ ಎಂದು ಬರೆದಿರೋದ್ರಿಂದ ಮದುಮಗಳು ಎಂಬುದು ರಿವೀಲ್ ಆಗಿದೆ. ಆದರೆ ಮದುವೆ ಯಾವಾಗ? ಹುಡುಗ ಯಾರು ಎಂಬುದು ರಿವೀಲ್ ಆಗಿಲ್ಲ. ಈ ಸುದ್ದಿ ತಿಳಿಯುತ್ತಿದ್ದಂತೆ, ಇದೀಗ ಅಭಿಮಾನಿಗಳು ನಟಿಗೆ ಶುಭಕೋರುತ್ತಿದ್ದಾರೆ.

    ಕಿರುತೆರೆಯ ‘ಗೋಕುಲದಲ್ಲಿ ಸೀತೆ’ ಸೀರಿಯಲ್, 10, ಕೌರವ ಸಿನಿಮಾ, ‘ದಿ ಗ್ರೇಟ್ ಸ್ಟೋರಿ ಆಫ್ ಸೋಡಾಬುಡ್ಡಿ’ ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ಅನುಷಾ ನಟಿಸಿದ್ದಾರೆ. ಆದರೆ ಆಶಿಕಾಗೆ ಸಿನಿಮಾರಂಗದಲ್ಲಿ ಸಿಕ್ಕಂತಹ ಚಾರ್ಮ್ ಅನುಷಾಗೆ ಕೈಹಿಡಿಯಲಿಲ್ಲ.

  • ಶೀಘ್ರದಲ್ಲೇ ಬರಲಿದೆ ‘ಅಂದವಾದ’ ಟ್ರೇಲರ್

    ಶೀಘ್ರದಲ್ಲೇ ಬರಲಿದೆ ‘ಅಂದವಾದ’ ಟ್ರೇಲರ್

    ಬೆಂಗಳೂರು: ಯುವ ನಿರ್ದೇಶಕ ಚಲ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಚಿತ್ರ ಅಂದವಾದ. ಮಳೆಗಾಲದಲ್ಲಿ ನಡೆಯುವ ಬೆಚ್ಚಗಿನ ಪ್ರೇಮಕಥಾನಕವನ್ನು ಒಳಗೊಂಡಿದೆ. ಈಗಾಗಲೇ ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಮುಗಿಸಿಕೊಂಡು ಬಿಡುಗಡೆಗೆ ತಯಾರಾಗಿದೆ. ಈ ಚಿತ್ರದ ಟ್ರೇಲರ್ ಇದೇ ತಿಂಗಳು ಬಿಡುಗಡೆಯಾಗಲಿದೆ.

    ಚಿತ್ರವನ್ನು ಮುಂದಿನ ತಿಂಗಳು ತೆರೆಗೆ ತರುವ ಯೋಜನೆ ಚಿತ್ರತಂಡದ್ದಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್ ಗೆ ಸಿಕ್ಕ ಅದ್ಭುತವಾದ ಪ್ರತಿಕ್ರಿಯೆ ಚಿತ್ರತಂಡಕ್ಕೆ ಹೆಚ್ಚಿನ ಉತ್ಸಾಹ ನೀಡಿದೆ. ಹಲವಾರು ವಿಶೇಷತೆಗಳನ್ನು ಒಳಗೊಂಡಿರುವ ಇಡೀ ಚಿತ್ರವನ್ನು ಮಾನ್ಸೂನ್ ಹಿನ್ನೆಲೆಯಲ್ಲಿ ಕಟ್ಟಿಕೊಂಡಿರುವ ನಿರ್ದೇಶಕರು ಮಳೆಗಾಲದಲ್ಲೇ ಅತಿಹೆಚ್ಚು ಭಾಗದ ಚಿತ್ರೀಕರಣ ನಡೆಸಿದ್ದಾರೆ. ಸಂಗೀತಮಯ ಪ್ರೇಮಕಥಾ ಹಂದರವನ್ನು ಒಳಗೊಂಡಿರುವ ಈ ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಎಲ್ಲವೂ ಈಗಾಗಲೇ ಹಿಟ್ ಆಗಿವೆ. ನಗಿಸುತ್ತಲೇ, ಕಣ್ಣಾಲಿಗಳನ್ನು ತೇವಗೊಳಿಸುವಂತಹ ಹಾಗೂ ಕಾಡುವ ಕತೆ ಈ ಚಿತ್ರದ್ದಾಗಿದೆ.

    ಮಧುಶ್ರೀ ಗೋಲ್ಡ್ ಫ್ರೇಮ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಡಿ.ಆರ್. ಮಧು ಜಿ ರಾಜ್ ನಿರ್ಮಿಸುತ್ತಿದ್ದಾರೆ. ಈ ಚಿತ್ರಕ್ಕೆ ವಿಕ್ರಮ್ ವರ್ಮನ್ ಸಂಗೀತ, ಗುರುಕಿರಣ್ ಹಿನ್ನೆಲೆ ಸಂಗೀತ, ಹರೀಶ್ ಎನ್ ಸೊಂಡೇಕೊಪ್ಪ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನ, ಮುರಳಿ ನೃತ್ಯ ನಿರ್ದೇಶನ, ಯೋಗರಾಜ್ ಭಟ್, ಜಯಂತ ಕಾಯ್ಕಿಣಿ, ಹೃದಯ ಶಿವ ಗೀತ ಸಾಹಿತ್ಯ, ಮೋಹನ್ ಬಿ. ಕೆರೆ ಕಲಾ ನಿರ್ದೇಶನವಿದೆ. ಜೈ, ಅನುಷಾ ರಂಗನಾಥ್, ಹರೀಶ್ ರೈ, ಕೆ.ಎಸ್. ಶ್ರೀಧರ್, ಕೆ.ವಿ. ಮಂಜಯ್ಯ, ರೇಖಾ ಸಾಗರ್, ಅಮರನಾಥ್ ಆಳ್ವ, ರೋಜಾ, ಮಂಗಳೂರು ಮೀನಾನಾಥ್ ಮುಂತಾದವರ ತಾರಾಬಳಗವಿದೆ.