Tag: ಅನುಶ್ರೀ

  • ಆ್ಯಂಕರ್ ಅನುಶ್ರೀಗೆ ಮದುವೆ ವಿಷ್ಯ ಬಿಟ್ಟು ಹೊಸ ಬೇಡಿಕೆಯಿಟ್ಟ ಫ್ಯಾನ್ಸ್

    ಆ್ಯಂಕರ್ ಅನುಶ್ರೀಗೆ ಮದುವೆ ವಿಷ್ಯ ಬಿಟ್ಟು ಹೊಸ ಬೇಡಿಕೆಯಿಟ್ಟ ಫ್ಯಾನ್ಸ್

    ಸ್ಯಾಂಡಲ್‌ವುಡ್‌ನ (Sandalwood) ಪಟಪಟ ಮಾತನಾಡೋ ಸುಂದರಿ ನಿರೂಪಕಿ ಅನುಶ್ರೀ (Anchor Anushree) ಅವರು ಸದಾ ಅವರಿಗೆ ಮದುವೆ (Wedding) ಬಗ್ಗೆಯೇ ಪ್ರಶ್ನೆ ಎದುರಾಗುತ್ತದೆ. ಇದೀಗ ಫ್ಯಾನ್ಸ್, ಹೊಸ ವಿಚಾರಕ್ಕೆ ಅನುಶ್ರೀ ಹಿಂದೆ ಬಿದ್ದಿದ್ದಾರೆ. ಮದುವೆಯಲ್ಲ, ಬದಲಾಗಿ ಹೊಸ ವಿಚಾರವಾಗಿ ಅನುಶ್ರೀಗೆ ಬೇಡಿಕೆ ಇಟ್ಟಿದ್ದಾರೆ. ಇದನ್ನೂ ಓದಿ:ದಕ್ಷಿಣದ ಸಿನಿಮಾಗಳಲ್ಲಿ ಸಂಜಯ್ ದತ್ ಬ್ಯುಸಿ

    ರಿಯಾಲಿಟಿ ಶೋಗಳ ನಿರೂಪಣೆ ಮತ್ತು ಕನ್ನಡ ಸಿನಿಮಾಗಳ ಪ್ರಿ ರಿಲೀಸ್ ಈವೆಂಟ್‌ನ ನಿರೂಪಣೆ ಅಂತಾ ಸದಾ ಒಂದಲ್ಲಾ ಒಂದು ಕಾರ್ಯಕ್ರಮಗಳ ಮೂಲಕ ಮಾತಿನ ಮಲ್ಲಿ ಅನುಶ್ರೀ ಸದ್ದು ಮಾಡುತ್ತಾರೆ. ಇದೀಗ ಇತ್ತೀಚಿಗೆ ತಮ್ಮ ಖಾಸಗಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಲೈವ್ ಬಂದ ನಿರೂಪಕಿಗೆ ಅಭಿಮಾನಿಗಳಿಂದ ಪ್ರಶ್ನೆಯೊಂದು ಎದುರಾಗಿದೆ.

    ಸದಾ ಮದುವೆ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳು ಈಗ ನೀವು ಯಾವಾಗ ಮತ್ತೆ ಸಿನಿಮಾ (Films) ಮಾಡ್ತೀರಾ ಅಂತಾ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ನಟಿ ಪ್ರತಿಕ್ರಿಯಿಸಿ, ಒಳ್ಳೆಯ ಕಥೆ ಮತ್ತು ತಂಡ ಬಂದಾಗ ಮತ್ತೆ ಸಿನಿಮಾ ಮಾಡ್ತೀನಿ ಎಂದು ಖುಷಿಯಿಂದ ಅಭಿಮಾನಿಯ ಪ್ರಶ್ನೆಗೆ ಉತ್ತರಿಸಿದ್ದಾರೆ.

    ಇದೇ ರೀತಿ ಪ್ರತಿಸಲವೂ ಅನುಶ್ರೀಯವರಿಗೆ ಎದುರಾಗುವ ಪ್ರಶ್ನೆಯೆಂದರೆ ಅದು ಮದುವೆಯ ಕುರಿತು. ಮದುವೆಯ ಪ್ರಶ್ನೆ ನಂ.1 ಸ್ಥಾನ ಪಡೆದುಕೊಂಡರೆ, 2ನೇ ಪ್ರಶ್ನೆ ಇರುವುದು ಸಿನಿಮಾ ಕುರಿತು. ಇದಾಗಲೇ ನಟಿ ತಮ್ಮ ಮದುವೆಯ ಬಗ್ಗೆ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ನಟಿ ಮದುವೆ ಬಗ್ಗೆ ಕೇಳಿದ್ದಕ್ಕೆ ಕೊರಗಜ್ಜನ ಮೇಲೆ ಬಿಡ್ತೀನಿ ಎಂದ ನಿರೂಪಕಿ ಅನುಶ್ರೀ ಇನ್ನಾದರೂ ತಮ್ಮ ಮದುವೆಯ ಬಗ್ಗೆ ಪ್ರಶ್ನೆ ಮಾಡೋದನ್ನು ನಿಲ್ಲಿಸಿ ಎನ್ನೋ ಅರ್ಥದಲ್ಲಿ ಹೇಳಿದ್ದರು. ಮದುವೆ ಮಾಡಿಕೊಳ್ಳುವ ತುಂಬಾ ಸಮಯವಿದೆ. ಮೊದಲು ಕೆಲಸ ಮಾಡೋಣ ಎಂದಿದ್ದ ಅವರು, ಮದುವೆ ಅನ್ನೋದು ಒಂದು ಸುಂದರ ಅನುಭವ. ಯಾರ್ಯಾರನ್ನೋ ಮದುವೆ ಮಾಡಿಕೊಳ್ಳಲು ಆಗಲ್ಲ ಎಂದು ಈ ಹಿಂದೆ ಹೇಳಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಟೂಡೆಂಟ್ ಲೈಫ್ ಮೆಮೊರೆಬಲ್ ಫೋಟೋ ಹಂಚಿಕೊಂಡ ಅನುಶ್ರೀ

    ಸ್ಟೂಡೆಂಟ್ ಲೈಫ್ ಮೆಮೊರೆಬಲ್ ಫೋಟೋ ಹಂಚಿಕೊಂಡ ಅನುಶ್ರೀ

    ನ್ನಡ ಸಿನಿಮಾ(Kannada Films) ರಂಗದ ಬೆಸ್ಟ್ ನಟಿ, ನಿರೂಪಕಿಯಾಗಿ ಹೆಸರು ಗಳಿಸಿರುವ ಅನುಶ್ರೀ (Anushree) ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ನಟಿ ಸ್ಪೂಡೆಂಟ್ ಲೈಫ್ ಇಸ್ ಗೋಲ್ಡ್ ಲೈಫ್ ಅಂತಾ ತಮ್ಮ ಸ್ಟೂಡೆಂಟ್ ಲೈಫ್ ಬಗ್ಗೆ ಮೆಮೊರೇಬಲ್ ಫೋಟೋ ಶೇರ್ ಮಾಡಿದ್ದಾರೆ.

    ಚಂದನವನದ ಬ್ಯೂಟಿ, ನಾಟಿ ಅನುಶ್ರೀ ಅವರು ಸದ್ಯ ಕಿರುತೆರೆ ರಿಯಾಲಿಟಿ ಶೋನ ನಿರೂಪಣೆಯ ಮೂಲಕ ಅಭಿಮಾನಿಗಳನ್ನ ಹೆಚ್ಚೆಚ್ಚು ಗಮನ ಸೆಳೆಯುತ್ತಿದ್ದಾರೆ. ಸ್ಟಾರ್ ನಟರ ಸಿನಿಮಾ ಕಾರ್ಯಕ್ರಮಗಳಿಗೆ ಇವರ ನಿರೂಪಣೆನೇ ಬೇಕು ಎಂಬಷ್ಟರ ಮಟ್ಟಿಗೆ ಡಿಮ್ಯಾಂಡ್ ಕ್ರಿಯೆಟ್ ಮಾಡಿದ್ದಾರೆ. ನಿರೂಪಕಿಯಾಗಿ ಅನುಶ್ರೀ ಗೆದ್ದರು. ಆದರೆ ಹೀರೋಯಿನ್ ಆಗಿ ಗೆಲ್ಲೋದ್ರಲ್ಲಿ ನಟಿ ಎಡವಿದ್ರು.

    ಅನುಶ್ರೀ ಮೂಲತಃ ಮಂಗಳೂರಿನ(Manglore) ಕುಡ್ಲದವರಾಗಿದ್ದಾರೆ. ತಮ್ಮ ಸ್ಕೂಲ್, ಕಾಲೇಜು ಲೈಫ್‌ನ ಅಲ್ಲೇ ಓದಿದ್ದಾರೆ. ತಮ್ಮ ಸ್ಟೂಡೆಂಟ್ ಲೈಫ್‌ನ ಖುಷಿಯಿಂದ ಕಳೆದಿದ್ದಾರೆ. ಇದೀಗ ತಮ್ಮ ಸ್ಟೂಡೆಂಟ್ ಲೈಫ್ ಬಗ್ಗೆ ನಟಿ ಮೆಲುಕು ಹಾಕಿದ್ದಾರೆ. ವಿದ್ಯಾರ್ಥಿಯಾಗಿದಾಗಿ ಐಡಿ ಫೋಟೋ ಶೇರ್ ಮಾಡಿದ್ದಾರೆ. ಈ ಹುಡುಗಿ ಯಾರು ಗೊತ್ತಾ ಅಂತಾ ಕೇಳಿದ್ದಾರೆ. ಸ್ಟೂಡೆಂಟ್ ಲೈಫ್ ಇಸ್ ಗೋಲ್ಡನ್ ಲೈಫ್ ಅಂತಾರೆ. ನಿಜ ಬೆಲೆ ಕಟ್ಟಲು ಅಸಾಧ್ಯ.. ನಿಮ್ಮ ಸ್ಪೂಡೆಂಟ್ ಲೈಫ್ ಹೇಗಿತ್ತು ಅಂತಾ ನಟಿ ಕೇಳಿದ್ದಾರೆ. ಇದನ್ನೂ ಓದಿ:ಮಳೆ, ಕೊರೆವ ಚಳಿ ನಡುವೆ ಕಾಶ್ಮೀರದಲ್ಲಿ ಸಾನ್ಯ ಟ್ರೆಕ್ಕಿಂಗ್

    ಈ ಪೋಸ್ಟ್ ಶೇರ್ ಮಾಡ್ತಿದ್ದಂತೆ, ನೆಟ್ಟಿಗರು ಕಾಮೆಂಟ್ಸ್‌ಗಳು ಹರಿದು ಬರುತ್ತಿದೆ. ನಿಮ್ಮ ಹಣೆಯಲ್ಲಿ ಕುಂಕುಮ ಇದೆ ನಿಮಗೆ ಮದುವೆ ಆಗಿದ್ಯಾ ಅಂತಾ ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದಾರೆ. ಹೀಗೆ ಬಗೆ ಬಗೆಯ ರೀತಿಯಲ್ಲಿ ಕಾಮೆಂಟ್ ಬಂದಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದುವೆ ಬಗ್ಗೆ ಅಪ್‌ಡೇಟ್‌ ಕೊಟ್ರು ಅನುಶ್ರೀ

    ಮದುವೆ ಬಗ್ಗೆ ಅಪ್‌ಡೇಟ್‌ ಕೊಟ್ರು ಅನುಶ್ರೀ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮದುವೆ ಯಾವಾಗ ಎಂಬ ಅಭಿಮಾನಿಯ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಅನುಶ್ರೀ

    ಮದುವೆ ಯಾವಾಗ ಎಂಬ ಅಭಿಮಾನಿಯ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಅನುಶ್ರೀ

    ಸ್ಯಾಂಡಲ್‌ವುಡ್ (Sandalwood) ನಟಿ, ನಿರೂಪಕಿ ಅನುಶ್ರೀ (Anushree) ಅವರು ಸದಾ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಸದಾ ಅವರಿಗೆ ಎದುರಾಗಿವ ಪ್ರಶ್ನೆ ಅಂದರೆ ಮದುವೆ ವಿಚಾರ. ಯಾವಾಗ ಮದುವೆಯಾಗುತ್ತೀರಾ ಎಂಬ ಅನುಶ್ರೀಗೆ ಎದುರಾಗುತ್ತಲೇ ಇರುತ್ತದೆ. ಈಗ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಲೈವ್ ಮಾಡುವಾಗ ಮದುವೆ (Wedding) ಮ್ಯಾಟರ್ ಅನ್ನೇ ಅಭಿಮಾನಿಗಳು ಕೇಳಿದ್ದಾರೆ. ಅದಕ್ಕೆ ನಟಿ ಕೂಡ ರಿಯಾಕ್ಟ್ ಮಾಡಿದ್ದಾರೆ.

    ಕಿರುತೆರೆಯ ಡ್ಯಾನ್ಸ್ ಶೋವೊಂದರಲ್ಲಿ ಸ್ಪರ್ಧಿಯಾಗಿ ಗೆದ್ದು ಅನುಶ್ರೀ ಬೀಗಿದ್ದರು. ಬಳಿಕ ನಟಿ, ನಿರೂಪಕಿಯಾಗಿ ಕರ್ನಾಟಕದ ಮನೆ ಮಾತಾದರು. ವಾಹಿನಿಯ ರಿಯಾಲಿಟಿ ಶೋ, ಸಿನಿಮಾ ಸಂಬಂಧಿತ ಕಾರ್ಯಕ್ರಮಗಳಲ್ಲಿ ಅನುಶ್ರೀ ನಿರೂಪಣೆಯ ಮೂಲಕ ಮೋಡಿ ಮಾಡುತ್ತಲೇ ಇರುತ್ತಾರೆ.

    ಸಾಕಷ್ಟು ವರ್ಷಗಳಿಂದ ಚಿತ್ರರಂಗದಲ್ಲಿರುವ ನಟಿಗೆ 36 ವರ್ಷ ವಯಸ್ಸಾಗಿದ್ದು, ಸದಾ ಅವರಿಗೆ ಮದುವೆಯ ಬಗ್ಗೆಯೇ ಪ್ರಶ್ನೆ ಕೇಳಿ ಬರುತ್ತದೆ. 40ರ ಅಸುಪಾಸಿನಲ್ಲಿರುವ ಈ ನಟಿ ಕೆಲ ತಿಂಗಳುಗಳ ಹಿಂದೆ, ನನ್ನ ಮದುವೆ ವಿಚಾರ ದೈವ ಕೊರಗಜ್ಜನಿಗೆ (Koragajja) ಬಿಡುತ್ತೇನೆ ಎಂದು ಅನುಶ್ರೀ ಹೇಳಿದ್ದರು. ಈಗ ಮತ್ತೆ ಅದೇ ಪ್ರಸಂಗ ನಟಿಗೆ ಎದುರಾಗಿದೆ. ಅಭಿಮಾನಿಗಳು ಬಿಟ್ಟು ಬಿಡದೇ ಅನುಶ್ರೀ ಅವರನ್ನ ಕಾಡುತ್ತಿದ್ದಾರೆ. ಇದನ್ನೂ ಓದಿ:ಜುಲೈ 12ಕ್ಕೆ ಸೆಂಚುರಿ ಸ್ಟಾರ್ ಬರ್ತ್‌ಡೇಗೆ ಸಿದ್ಧತೆ ಹೇಗಿದೆ ಗೊತ್ತಾ?

    ಬಹಳ ದಿನಗಳ ಬಳಿಕ ಅನುಶ್ರೀ ಇನ್ಸ್ಟಾಗ್ರಾಂನಲ್ಲಿ ಲೈವ್‌ಗೆ ಬಂದಾಗಲೂ ಇದೇ ಮದುವೆ ಪ್ರಶ್ನೆ ಕೇಳಿದ್ದಾರೆ. ಅಬ್ಬಾ ಮತ್ತೆ ಅದೇ ಪ್ರಶ್ನೆ, ಯಾವಾಗ ಮದ್ವೆಯಾಗ್ತೀರಿ ಅನ್ನೋದು? ಈ ಪ್ರಶ್ನೆ ನೋಡಿದ ನಟಿ ಜೋರಾಗಿ ನಕ್ಕು ನನ್ನ ಅಮ್ಮಂಗೂ ಇದೇ ಪ್ರಶ್ನೆಯಾಗಿ ಹೋಗಿದೆ, ಯಾರಪ್ಪಾ ನನ್ನ ಮಗಳ ಹಿಂದೆ ಮದುವೆಗಾಗಿ ಬಿದ್ದಿರೋದು ಅಂತ ಅಮ್ಮನೂ ಕೇಳ್ತಿದ್ದಾರೆ ಎಂದರು. ಇದೇ ಲೈವ್ ಕಾರ್ಯಕ್ರಮದಲ್ಲಿ ತೇಜಸ್ವಿನಿ ಎನ್ನುವ ನವ ವಿವಾಹಿತೆ ಜೊತೆ ಅನುಶ್ರೀ ಮಾತನಾಡಿದರು. ತೇಜಸ್ವಿನಿ ಅವರು ಕೂಡ ಅನುಶ್ರೀ ಅವರ ಮದುವೆಯ ಬಗ್ಗೆ ಪ್ರಸ್ತಾಪಿಸಿದಾಗ, ಅನುಶ್ರೀಯವರು ಸರಿ ನನಗೆ ಎಂತಹ ಹುಡುಗ ಸಿಗ್ಬೇಕು ಎಂದು ನಿಮಗೆ ಅನಿಸುತ್ತದೆ ಎಂದರು. ಆಗ ತೇಜಸ್ವಿನಿಯವರು ನಿಮ್ಮ ಹಾಗೆ ಪಟಪಟ ಎಂದು ಮಾತನಾಡುವ ಹುಡುಗ ಸಿಗಲಿ ಎನ್ನುವುದು ನನ್ನ ಹಾರೈಕೆ ಎಂದರು. ಅದಕ್ಕೆ ಅನುಶ್ರೀ ಪಟಪಟ ಮಾತನಾಡಿದರೆ ಸಾಕಾ? ಚೆನ್ನಾಗಿ ನೋಡ್ಕೋಳೋದು ಬೇಡ್ವಾ ಎಂದು ಅನುಶ್ರೀ ತಮಾಷೆ ಮಾಡಿದ್ದಾರೆ. ಒಟ್ಟಿನಲ್ಲಿ ಅನುಶ್ರೀ ಮದ್ವೆಯಾಗುವವರೆಗೂ ಫ್ಯಾನ್ಸ್ ಬಿಡಲ್ಲ ಎಂದು ಕಾಣಿಸುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಡಿಕೆಡಿ’ಯಲ್ಲಿ ಪ್ರಭುದೇವ- ಅನುಶ್ರೀ ಜೊತೆ ಹೆಜ್ಜೆ ಹಾಕಿದ ಡ್ಯಾನ್ಸ್‌ಕಿಂಗ್

    ‘ಡಿಕೆಡಿ’ಯಲ್ಲಿ ಪ್ರಭುದೇವ- ಅನುಶ್ರೀ ಜೊತೆ ಹೆಜ್ಜೆ ಹಾಕಿದ ಡ್ಯಾನ್ಸ್‌ಕಿಂಗ್

    ಪ್ರಭುದೇವ…ಕನ್ನಡದವರೇ ಆಗಿದ್ದರೂ ಕನ್ನಡಿಗರಿಗೆ ಬಲು ಅಪರೂಪ. ವಿಶ್ವಾದ್ಯಂತ ಹೆಸರು ಮಾಡಿರೋ ಡ್ಯಾನ್ಸ್‌ ಕಿಂಗ್ ಪ್ರಭುದೇವ (Prabhudeva) ಕೆಲ ತಿಂಗಳ ಹಿಂದೆ ವೀಕೇಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮದಲ್ಲಿ ಜೀವನತೆರೆದಿಟ್ಟಿದ್ರು. ಇದೀಗ ಅದೇ ವಾಹಿನಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲೂ ಕಾಣಿಸ್ಕೊಂಡು ಮಕ್ಕಳ ಜೊತೆ ಡ್ಯಾನ್ಸ್ ಮಾಡಿದ್ದಾರೆ.

    ಭಾರತದ ಮೈಕಲ್ ಜಾಕ್ಸನ್…ಆಲ್‌ರೌಂಡರ್ ಪ್ರಭುದೇವ ಭಾರತೀಯ ಸಿನಿಮೋದ್ಯಮದ ಅದ್ಭುತ ಕಲಾವಿದ. ವಿಶ್ವವ್ಯಾಪಿ ಅಭಿಮಾನಿಗಳನ್ನ ಹೊಂದಿರೋ ಪ್ರಭುದೇವ ಇದೀಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ ಅತಿಥಿಯಾಗಿ ಆಗಮಿಸಿದ್ರು.

    ಡಾನ್ಸ್ ಕಿಂಗ್ ಆಗಮನದಿಂದ ಡಿಕೆಡಿ ವೇದಿಕೆಯಲ್ಲಿ ಅದ್ದೂರಿ ಕಳೆ ಬಂದಿತ್ತು…ಸ್ಪರ್ಧಿಗಳೆಲ್ಲಾ ಅವರ ಆರಾಧ್ಯದೈವ ಪ್ರಭುದೇವ ಮುಂದೆ ಡಾನ್ಸ್ ಪ್ರದರ್ಶನ ಮಾಡಿ ಖುಷಿಯಿಂದ ಕುಣಿದ್ರು. ಓರ್ವ ಸ್ಪರ್ಧಿಯಂತೂ ಪ್ರಭುದೇವ ಆಶೀರ್ವಾದ ಸದಾ ತನ್ನೊಂದಿಗೆ ಇರಲೆಂದು ಕಾಲಿನ ಅಚ್ಚನ್ನೇ ಪಡೆದ. ಮಕ್ಕಳ ನೃತ್ಯವೆಂದ್ರೆ ಯಾರಿಗ್ ತಾನೇ ಇಷ್ಟವಿಲ್ಲ…ಹಾಗೇನೇ ಪ್ರಭುದೇವಾಗೂ ಇಷ್ಟ…ತಮ್ಮೆದುರು ಕುಣಿದ ಮಕ್ಕಳ ನೃತ್ಯಕ್ಕೆ ಮನಸೋತು ತಾವೂ ವೇದಿಕೆಗೆ ಹೋಗಿ ಕುಣಿದ್ರು. ಹೊಸ ಹೊಸ ಸ್ಟೆಪ್‌ಗಳ ಸೃಷ್ಟಿಕರ್ತ ಪ್ರಭುದೇವ. ಎಷ್ಟೋ ಹಾಡುಗಳು ಇಂದಿಗೂ ಎವರ್‌ಗ್ರೀನ್, ಅದರಲ್ಲೊಂದು ಚಂದಾರೇ ಹಾಡು…ಇದೇ ಹಾಡಿಗೆ ಪ್ರಭು , ಆ್ಯಂಕರ್ ಅನುಶ್ರೀ (Anushee) ಜೊತೆ ಹೆಜ್ಜೆ ಹಾಕಿದ್ರು. ಇದನ್ನೂ ಓದಿ:ಪವನ್ ಒಡೆಯರ್ ನಿರ್ದೇಶನದ ಬಾಲಿವುಡ್ ಸಿನಿಮಾಗೆ ಟೈಟಲ್ ಫಿಕ್ಸ್

    ಶಿವಣ್ಣ (Shivanna) ಹಾಗೂ ಪ್ರಭುದೇವ ಬೆಸ್ಟ್ ಫ್ರೆಂಡ್ಸ್. ಡಿಕೆಡಿ ಜಡ್ಜ್ ಆಗಿರೋ ಶಿವರಾಜ್‌ಕುಮಾರ್ (Shivarajkumar) ಜೊತೆಯೂ ಪ್ರಭುದೇವ ಸ್ಟೆಪ್ ಹಾಕಿದ್ರು. ಡ್ಯಾನ್ಸ್‌ ಕಿಂಗ್ ಸಿಗ್ನೇಚರ್ ಸ್ಟೆಪ್‌ನ್ನ ಇಡೀ ವೇದಿಕೆ ಮಾಡಿ ಖುಷಿ ಪಡ್ತು. ಭಾರತದಲ್ಲಿ ಡ್ಯಾನ್ಸ್ ಕಿಂಗ್‌ಗಳ ಕಿಂಗ್ ಅಂದ್ರೆ ಪ್ರಭುದೇವ, ಇಂಥಹ ಪ್ರಭುದೇವ ಆಗಮನದಿಂದ ಡಿಕೆಡಿ ವೇದಿಕೆ ಇನ್ನಷ್ಟು ರಂಗೇರಿದೆ. ಬ್ಯುಸಿ ಶೆಡ್ಯೂಲ್‌ನಲ್ಲೂ ಕನ್ನಡದ ಮೇಲಿನ ಪ್ರೀತಿಯಿಂದ ಪ್ರಭುದೇವ ಆಗಮನ ಇಂಟ್ರೆಸ್ಟಿಂಗ್.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Saregamapa 19 Grand Finale: ಯಾರ ಪಾಲಾಗಲಿದ್ದಾಳೆ ವಿಜಯಲಕ್ಷ್ಮಿ

    Saregamapa 19 Grand Finale: ಯಾರ ಪಾಲಾಗಲಿದ್ದಾಳೆ ವಿಜಯಲಕ್ಷ್ಮಿ

    ಕಿರುತೆರೆ ಜನಪ್ರಿಯ ಸಿಂಗಿಂಗ್ ರಿಯಾಲಿಟಿ ಶೋ ‘ಸರಿಗಮಪ’ (Saregamapa 19) ಈಗಾಗಲೇ 18 ಸೀಸನ್‌ಗಳ ಜೊತೆಗೆ ಚಾಂಪಿಯನ್‌ಶಿಪ್ ಸೀಸನ್ ಕೂಡ ಮಾಡಿದೆ. ಇದೀಗ 19ನೇ ಸೀಸನ್‌ನ ಅಂತಿಮ ಘಟ್ಟ ತಲುಪಿದೆ. ಕಾರ್ಯಕ್ರಮ ತೆರೆ ಬೀಳಲು ಈಗಾಗಲೇ ಕೌಂಡ್‌ಡೌನ್ ಶುರುವಾಗಿದೆ.

    ಯಶಸ್ವಿ 47 ಸಂಚಿಕೆಗಳನ್ನ ಪೂರೈಸಿರುವ ‘ಸರಿಗಮಪ’ ಸೀಸನ್ 19ರ ಗ್ರಾಂಡ್ ಫಿನಾಲೆ ಸಂಚಿಕೆಗಳು ಇದೇ ಶನಿವಾರ ಮತ್ತು ಭಾನುವಾರ ಸಂಜೆ 6.30ರಿಂದ ಪ್ರಸಾರವಾಗಲಿದೆ. ಸಾವಿರಾರು ಜನರ ಮಧ್ಯೆ ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ಗ್ರ‍್ಯಾಂಡ್ ಫಿನಾಲೆ ಚಿತ್ರೀಕರಣ ಯಶಸ್ವಿಯಾಗಿ ಜರುಗಿದೆ. ಅಷ್ಟೇ ಅಲ್ಲದೆ, ಈ ಅದ್ಧೂರಿ ಸ್ವರ ಸಮರದಲ್ಲಿ ಗೆಲುವಿನ ಕಿರೀಟ ಯಾರ ಮುಡಿಗೇರಲಿದೆ ಎಂಬ ಕೂತೂಹಲದಿಂದ ವೀಕ್ಷಕರು ಕಾರ್ಯಕ್ರಮವನ್ನು ಎದುರು ನೋಡುವಂತಾಗಿದೆ. ಇದನ್ನೂ ಓದಿ:Weekend With Ramesh 5: ಮದುವೆ ಬಗ್ಗೆ ಗುಟ್ಟು ರಟ್ಟು ಮಾಡಿದ ಡಾಲಿ ಧನಂಜಯ್‌

    ಹತ್ತು ಹಲವು ವಿಶೇಷತೆಗಳಿಗೆ ಸಾಕ್ಷಿಯಾಗಿರುವ ಸರಿಗಮಪ ಎಂದಿನಂತೆ ಈ ಬಾರಿಯೂ ಕರ್ನಾಟಕದ ಮೂಲೆ ಮೂಲೆಯಿಂದ ವಿವಿಧ ಪ್ರತಿಭೆಗಳನ್ನು ಹೆಕ್ಕಿ ತಂದು ಕನ್ನಡಿಗರಿಗೆ ಪರಿಚಯಿಸಿ ಸಾರ್ಥಕತೆ ಗಳಿಸಿದೆ. ಅರ್ಜುನ್ ಜನ್ಯ, ವಿಜಯ್ ಪ್ರಕಾಶ್ ಮತ್ತು ಮಹಾಗುರುಗಳಾದ ಹಂಸಲೇಖ ಅವರು ಈ ಕಾರ್ಯಕ್ರಮದ ಯಶಸ್ಸಿನ ರೂವಾರಿ ಎಂದು ಹೇಳಿದರೂ ತಪ್ಪಾಗಲಾರದು. ನಾಡಿನ ಹೆಸರಾಂತ ಗಾಯಕ, ಗಾಯಕಿಯರು ತೀರ್ಪುಗಾರರ ಜೊತೆ ಮೆಂಟರ್‌ಗಳಾಗಿ ತಮ್ಮ ತಂಡದ ಪ್ರತಿಯೊಬ್ಬ ಸ್ಪರ್ಧಿಯನ್ನೂ ತಿದ್ದಿ ತೀಡಿ, ಅವರಲ್ಲಿರುವ ವಿಶೇಷ ಪ್ರತಿಭೆಯನ್ನು ವೇದಿಕೆಯ ಮೇಲೆ ಪ್ರಸ್ತುತಪಡಿಸುವಲ್ಲಿ ಶ್ರಮವಹಿಸಿದ್ದಾರೆ. ನಿರೂಪಕಿ ಅನುಶ್ರೀ ಅವರು ಸರಿಗಮಪ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದಾರೆ.

    ‘ಸರಿಗಮಪ’ ಕಾರ್ಯಕ್ರಮದ ಫಿನಾಲೆಯಲ್ಲಿ ರಮೇಶ್ ಅರವಿಂದ್ (Ramesh Aravind) ಅವರು ‘ಶಿವಾಜಿ ಸುರತ್ಕಲ್’ ಸಿನಿಮಾ ತಂಡದ ಜೊತೆ ಈ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಆಗಮಿಸಿ ವೇದಿಕೆಯ ಮೆರಗನ್ನು ಹೆಚ್ಚಿಸಿದ್ದಾರೆ. ಅಂತಿಮ ಟಾಪ್ 6 ಸ್ಪರ್ಧಿಗಳಾಗಿ ಮಂಗಳೂರಿನ ತನುಶ್ರೀ, ಬೆಂಗಳೂರಿನ ಕುಷಿಕ್, ಮೈಸೂರಿನ ಗುರುಪ್ರಸಾದ್, ಉಡುಪಿಯ ಶಿವಾನಿ ನವೀನ್ ಕೊಪ್ಪ, ಸೊಲ್ಲಾಪುರದ ರೇವಣಸಿದ್ಧ ಮತ್ತು ಕುಶಾಲನಗರದ ಪ್ರಗತಿ ಬಡಿಗೇರ್ ಸಂಗೀತ ಹಣಾಹಣಿಯಲ್ಲಿದ್ದಾರೆ. ಗೆಲುವಿನ ವಿಜಯಲಕ್ಷ್ಮೀ ಯಾರ ಪಾಲಾಗಲಿದ್ದಾಳೆ ಎಂಬುದನ್ನ ಕಾದುನೋಡಬೇಕಿದೆ.

  • ಮದುವೆ ಬಗ್ಗೆ ಕೇಳಿದ್ದಕ್ಕೆ ಕೊರಗಜ್ಜನ ಮೇಲೆ ಬಿಡ್ತೀನಿ ಎಂದ ಅನುಶ್ರೀ

    ಮದುವೆ ಬಗ್ಗೆ ಕೇಳಿದ್ದಕ್ಕೆ ಕೊರಗಜ್ಜನ ಮೇಲೆ ಬಿಡ್ತೀನಿ ಎಂದ ಅನುಶ್ರೀ

    ಕಿರುತೆರೆಯ ಖ್ಯಾತ ನಿರೂಪಕಿ ಅನುಶ್ರೀ (Anchor Anushree) ಅವರಿಗೆ ತಮ್ಮದೇ ಆದ ಅಪಾರ ಅಭಿಮಾನಿಗಳ ಬಳಗವಿದೆ. ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ಅನುಶ್ರೀ ಅವರು ಅಭಿಮಾನಿಗಳ ಜೊತೆ ಇನ್ಸ್ಟಾಗ್ರಾಂ ಲೈವ್‌ನಲ್ಲಿ ಮಾತನಾಡಿದ್ದಾರೆ. ಪದೇ ಪದೇ ಮದುವೆ ಬಗ್ಗೆ ಕೇಳುವ ಅಭಿಮಾನಿಗಳಿಗೆ ನಟಿ ಉತ್ತರಿಸಿದ್ದಾರೆ.

    ನಿರೂಪಕಿ, ನಟಿಯಾಗಿ ಸೈ ಎನಿಸಿಕೊಂಡಿರುವ ಅನುಶ್ರೀಗೆ ಸದಾ ಎದುರಾಗುವ ಪ್ರಶ್ನೆ ಎಂದರೆ ಅವರ ಮದುವೆ ವಿಚಾರ. ಇದೀಗ ಈ ಬಗ್ಗೆ ನಟಿ ಮೌನ ಮುರಿದಿದ್ದಾರೆ. ನಾನು ಎಲ್ಲೇ ಹೋದರು ಜನರು ನನ್ನ ಮದುವೆ ಯಾವಾಗ ಎಂದು ಕೇಳುತ್ತಲೇ ಇರುತ್ತಾರೆ. ಮದುವೆ ಮಾಡಿಕೊಳ್ಳುವುದಕ್ಕೆ ತುಂಬಾ ಸಮಯವಿದೆ. ನಾನು ಮೊದಲು ಕೆಲಸ ಮಾಡಬೇಕು. ಮದುವೆ (Wedding) ಅನ್ನೋದು ಒಂದು ಸುಂದರ ಅನುಭವ ಸುಮ್ಮನೆ ಯಾರನ್ನೋ ಮದುವೆ ಮಾಡಿಕೊಳ್ಳಲು ಆಗುವುದಿಲ್ಲ. ದಯವಿಟ್ಟು ನನ್ನ ಮದುವೆ ಬಗ್ಗೆ ಮಾತ್ರ ಕೇಳಬೇಡಿ. ಎಷ್ಟು ಸಲ ಹೇಳಿದ್ದರೂ ಅಭಿಮಾನಿಗಳು ಅದೇ ಹೇಳುತ್ತಾರೆ ಎಂದು ಅನುಶ್ರೀ ಲೈವ್‌ನಲ್ಲಿ ಮಾತನಾಡಿದ್ದಾರೆ. ಇದನ್ನೂ ಓದಿ: ಪ್ರಭುತ್ವದ ಮೂಲಕ ಹೊಸ ಕಥೆ ಹೇಳಲಿದ್ದಾರೆ ಚೇತನ್ ಚಂದ್ರ

    ಒಬ್ಬ ವ್ಯಕ್ತಿ ಮದುವೆಯ್ನು ಯಾವಾಗ ಯಾಕೆ ಆಗುತ್ತಾರೆ ಗೊತ್ತಾ ಈ ಮದುವೆ ಅನ್ನೋದು ಒಂದು ಬ್ಯೂಟಿಫುಲ್ ಅನುಭವ ನಾವು ಜೀವನ ಪೂರ್ತಿ ಕಾಪಾಡಿಕೊಳ್ಳಬೇಕಾದ ಸಂಬಂಧ. ನಿಮಗೆ ಏಜ್ ಆಯ್ತು ನಿಮ್ಮ ವಯಸ್ಸು ಎಷ್ಟು ಅಂತಾ ಕೇಳುತ್ತಾರೆ ಹೀಗೆ ಹೇಳಿದರು ಎಂದು ನಾನು ಮದುವೆ ಆಗಲು ಆಗಲ್ಲ. ಈ ವಿಚಾರವನ್ನು ನಮ್ಮ ಕೊರಗಜ್ಜನ (Koragajja) ಮೇಲೆ ಬಿಡ್ತೀನಿ ದೇವರೇ ಎಲ್ಲಾ ನೋಡಿಕೊಳ್ಳುತ್ತಾನೆ ಎಂದು ಅನುಶ್ರೀ ಹೇಳಿದ್ದಾರೆ.

    ಜೀವನದಲ್ಲಿ ನನಗೆ ಇರುವುದು ಒಂದೇ ಭಯ ನನ್ನನ್ನು ಯಾರಾದ್ರೂ ಬಿಟ್ಟು ಹೋಗುತ್ತಾರೆ ಅಂತ. ನನಗೆ ಆ ದುಃಖವನ್ನು ತಡೆದುಕೊಳ್ಳುವ ಶಕ್ತಿ ಖಂಡಿತ ಇಲ್ಲ. ದಯವಿಟ್ಟು ಇಂತಹ ವಿಚಾರಗಳನ್ನು ಕೇಳಬೇಡಿ ಎಂದು ಅನುಶ್ರೀ ಭಾವುಕರಾಗಿದ್ದಾರೆ.

  • ದೈವ ದರ್ಶನ ಪಡೆದ ನಿರೂಪಕಿ ಅನುಶ್ರೀ

    ದೈವ ದರ್ಶನ ಪಡೆದ ನಿರೂಪಕಿ ಅನುಶ್ರೀ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೈವ ದರ್ಶನ ಪಡೆದ ನಿರೂಪಕಿ ಅನುಶ್ರೀ

    ದೈವ ದರ್ಶನ ಪಡೆದ ನಿರೂಪಕಿ ಅನುಶ್ರೀ

    ಸ್ಯಾಂಡಲ್‌ವುಡ್ (Sandalwood) ನಟಿ ಕಮ್ ನಿರೂಪಕಿ ಅನುಶ್ರೀ (Anushree) ಮತ್ತೆ ಸುದ್ದಿಯಲ್ಲಿದ್ದಾರೆ. ರಿಯಾಲಿಟಿ ಶೋ ನಿರೂಪಣೆ ಶೂಟಿಂಗ್ ಕೊಂಚ ಬ್ರೇಕ್ ನೀಡಿ ದೈವ ಕೋಲದಲ್ಲಿ ಭಾಗಿಯಾಗಿದ್ದಾರೆ. ಈ ಕುರಿತ ಫೋಟೋವನ್ನ ನಟಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ತಮ್ಮದೇ ಭಿನ್ನ ಶೈಲಿಯ ನಿರೂಪಣೆ ಮೂಲಕ ಗಮನ ಸೆಳೆದಿರುವ ಅನುಶ್ರೀ ಕೊಂಚ ಬಿಡುವು ಮಾಡಿಕೊಂಡು ದೈವ ಕೋಲದಲ್ಲಿ ಭಾಗಿಯಾಗಿದ್ದಾರೆ. ಮೂಲತಃ ಕರಾವಳಿ ಭಾಗದವರೇ ಆಗಿರುವ ಅನುಶ್ರೀ ದೈವದ ಆರಾಧನೆ ಮಾಡುತ್ತಾರೆ. ಇದೀಗ `777 ಚಾರ್ಲಿ’ (777 Charlie) ನಿರ್ದೇಶಕ ಕಿರಣ್ (Director Kiran) ಅವರ ಮನೆಯಲ್ಲಿ ದೈವ ಕೋಲ (Daiva Kola) ಮಾಡಲಾಗಿತ್ತು. ಈ ವೇಳೆ ಅನುಶ್ರೀ ಮತ್ತು ನಟಿ ಸಂಗೀತಾ (Sangeetha) ಕೂಡ ಭಾಗಿಯಾಗಿದ್ದಾರೆ.

    ನಿರ್ದೇಶಕ ಕಿರಣ್ ಅವರ ಕಾಸರಗೋಡು ಮನೆಯಲ್ಲಿ ದೈಲ ಕೋಲ ನಡೆದಿದೆ. ಈ ವೇಳೆ ಅನುಶ್ರೀ ಕೂಡ ಭಾಗಿಯಾಗಿ ಪೂಜೆ ಸಲ್ಲಿಸಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಬಗ್ಗೆ ದೈವದ ಬಳಿ ಕೇಳಿದ್ದಾರೆ. ಕೊರಗಜ್ಜನಿಗೆ ಕೋಲ ಸೇವೆ ನೀಡಿದ್ದಾರೆ. ಇದನ್ನೂ ಓದಿ: ‘ದಸರಾ’ ಸಿನಿಮಾ ಟೀಸರ್ ಬಿಡುಗಡೆ ಮಾಡಲಿದ್ದಾರೆ ಸೂಪರ್ ಸ್ಟಾರ್ಸ್

    ದೈವ ಕೋಲದ ಫೋಟೋವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ, ಸುಂದರ ಹಾಗೂ ದೈವಿಕ ಕ್ಷಣಗಳು, ಕಾಸರಗೋಡು ಮಲ್ಲಮೂಲೆ ದೇವಸ್ಥಾನದಲ್ಲಿ ಎಂದು ನಟಿ ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ಸದ್ದು ಮಾಡ್ತಿದೆ. ಈ ಪೋಸ್ಟ್ ನೋಡುತ್ತಲೇ ಕೆಲ ನೆಟ್ಟಿಗರು ಮದುವೆಯ ಸಿಹಿ ಸುದ್ದಿ ಯಾವಾಗ ಎಂದು ಕಾಮೆಂಟ್ ಮಾಡ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k