Tag: ಅನುಶ್ರೀ

  • ನುಗ್ಗೆಸೊಪ್ಪಿನ ಎಗ್‌ಬುರ್ಜಿ ಜೊತೆಗೆ ದೋಸೆ – ಪತಿ ರೋಶನ್ ಕೈರುಚಿಗೆ ಅನುಶ್ರೀ ಫಿದಾ

    ನುಗ್ಗೆಸೊಪ್ಪಿನ ಎಗ್‌ಬುರ್ಜಿ ಜೊತೆಗೆ ದೋಸೆ – ಪತಿ ರೋಶನ್ ಕೈರುಚಿಗೆ ಅನುಶ್ರೀ ಫಿದಾ

    ತ್ತೀಚೆಗಷ್ಟೇ ರೋಶನ್ (Roshan) ಜೊತೆ ಮದುವೆಯಾದ ಆ್ಯಂಕರ್ ಅನುಶ್ರೀ (Anushree) ದಾಂಪತ್ಯ ಜೀವನದ ಖುಷಿಯಲ್ಲಿದ್ದಾರೆ. ಮದುವೆ ಬಳಿಕ ಪತಿ ಜೊತೆ ಪ್ರವಾಸ ಮಾಡ್ತಿರುವ ಫೋಟೋಗಳನ್ನ ಇತ್ತೀಚೆಗೆ ಅನುಶ್ರೀ ಹಂಚಿಕೊಂಡಿದ್ದರು. ಈಗ ಪತಿ ಅಡುಗೆ ಮಾಡಿ ತಮಗೆ ತಿನ್ನಿಸಿರುವ ವೀಡಿಯೋ ಹಂಚಿಕೊಂಡಿದ್ದಾರೆ.

    ಮದುವೆ ಶಾಸ್ತ್ರದ ಬಳಿಕ ಮಾಧ್ಯಮದ ಜೊತೆ ಅನುಶ್ರೀ ಮಾತನಾಡುತ್ತಾ ಪತಿ ರೋಶನ್ ಚೆನ್ನಾಗಿ ಅಡುಗೆ ಮಾಡ್ತಾರೆ. ನಾನು ಆರಾಮಾಗಿ ತಿನ್ಕೊಂಡ್ ಇರ್ತೀನಿ ಎಂದು ಹೇಳಿ ನಕ್ಕಿದ್ದರು.

    ಇದೀಗ ಅದೇ ಚಿತ್ರಣವನ್ನ ತೋರಿಸಿದ್ದಾರೆ. ರೋಶನ್ ತಮ್ಮ ಕೈಯಾರೇ ನುಗ್ಗೆಸೊಪ್ಪಿನ ಎಗ್‌ಬುರ್ಜಿ ಮಾಡಿ ದೋಸೆ ಜೊತೆ ಅನುಶ್ರೀಗೆ ತಿನ್ನಿಸಿದ್ದಾರೆ. ಈ ವೀಡಿಯೋವನ್ನ ಅನುಶ್ರೀ ಇನ್‌ಸ್ಟಾದಲ್ಲಿ ಪೋಸ್ಟ್ ಮಾಡಿದ್ದಾರೆ.  ಇದನ್ನೂ ಓದಿ: ಬಿಗ್‌ಬಾಸ್ ಮನೆ ಬೀಗ ಓಪನ್ ಆದ್ರೂ ಶೂಟಿಂಗ್ ಇನ್ನೂ ಶುರುವಾಗಿಲ್ಲ!

    ನಿಮಿಷಕ್ಕೆ ಸಾವಿರಾರು ವೀವ್ಸ್ ಲೈಕ್ಸ್ ಬರುತ್ತಿದೆ. ಅನುಶ್ರೀಯ ಸುಖ ಸಂಸಾರಕ್ಕೆ ಯಾರ ದೃಷ್ಟಿಯೂ ಬೀಳದಿರಲಿ ಎಂದು ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಡಿಕೆಶಿ ವೈಲ್ಡ್‌ ಕಾರ್ಡ್‌ಎಂಟ್ರಿ – ಬಿಗ್‌ಬಾಸ್‌ ಮನೆ ಓಪನ್‌ | ರಾತ್ರಿ ಏನೇನಾಯ್ತು? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

    ಕಳೆದ ಆಗಸ್ಟ್ 28 ರಂದು ಅನುಶ್ರೀ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ರೋಶನ್ ಜೊತೆ ವಿವಾಹವಾಗಿದ್ದರು. ಇದೀಗ ಮದುವೆಯ ನಂತರದ ಸುಖೀ ಜೀವನದ ದರ್ಶನವನ್ನ ಪ್ರಪಂಚದ ಮುಂದೆ ತೆರೆದಿಟ್ಟಿದ್ದಾರೆ.

  • ಮಳೆಯಲ್ಲಿ ರೋಷನ್ ಜೊತೆಯಲಿ ಅನುಶ್ರೀ ಜಾಲಿ ಟ್ರಿಪ್

    ಮಳೆಯಲ್ಲಿ ರೋಷನ್ ಜೊತೆಯಲಿ ಅನುಶ್ರೀ ಜಾಲಿ ಟ್ರಿಪ್

    ನಟಿ ಹಾಗೂ ನಿರೂಪಕಿ ಅನುಶ್ರೀ (Anchor Anushree) ಕಳೆದ ತಿಂಗಳು ರೋಷನ್ ಜೊತೆ ಹಸೆಮಣೆ ಏರಿದ್ದರು. ಮದುವೆಯಾದ ಬಳಿಕ ನಿರಂತರವಾಗಿ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದ ಅನುಶ್ರೀ ಈ ವೀಕೆಂಡ್ ನಲ್ಲಿ ಮಸ್ತ್ ಮಜಾ ಮಾಡಿದ್ದಾರೆ. ರೋಷನ್ ಜೊತೆ ಜಾಲಿ ಟ್ರಿಪ್ ಮಾಡಿರುವ ಕ್ಷಣಗಳನ್ನ ಕ್ಯಾಮೆರಾದಲ್ಲಿ ಸೆರೆಹಿಡಿದು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ರೋಷನ್ ಜೊತೆ ಮಳೆಯಲಿ ಜೊತೆಯಲಿ ಅಂತಾ ಸಖತ್ ಎಂಜಾಯ್ ಮಾಡಿದ್ದಾರೆ. ಜೊತೆಗೆ ಕೆದರಿದ ಕೂದಲು, ಕೆಸರಿನಲ್ಲಿ ಪ್ರಯೋಗಳು ಪ್ರೀತಿಯ ಕ್ಷಣಗಳಲ್ಲಿ ಸೆರೆಯಾಗಿದೆ ಎಂದು ಬರೆದುಕೊಂಡಿದ್ದಾರೆ. ಅನುಶ್ರೀ ಹಾಕಿರುವ ಪೋಸ್ಟ್ ಗೆ ಜಾಲತಾಣದಲ್ಲಿ ಸಖತ್ ಮೆಚ್ಚುಗೆ ಬರುತ್ತಿದೆ. ಮಾತಿನ ಮಲ್ಲಿ ಅನುಶ್ರೀ ಕೊಂಚ ಬ್ರೇಕ್ ತೆಗೆದುಕೊಂಡು ಸುತ್ತಾಟ ನಡೆಸಿದ್ದಾರೆ.

     

    ಅನುಶ್ರೀ-ರೋಷನ್ ಜೋಡಿ ಪ್ರೀತಿಸಿ ಮದುವೆಯಾಗಿದ್ದಾರೆ. ಐಟಿ ಉದ್ಯೋಗಿಯಾಗಿರುವ ರೋಷನ್ ಹಾಗೂ ಅನುಶ್ರೀ ಇಬ್ಬರೂ ಅಪ್ಪು ಅಭಿಮಾನಿಗಳು. ಸರಳವಾಗಿ ಮದುವೆಯಾದ ಅನುಶ್ರೀ ಇದೀಗ ಜಾಲಿ ಟ್ರಿಪ್ ನಡೆಸಿದ್ದಾರೆ. ಈ ಫೋಟೋ ಈಗ ಜಾಲತಾಣದಲ್ಲಿ ವೈರಲ್ ಆಗ್ತಿವೆ.

  • ಮದ್ವೆಯಲ್ಲಿ ಅನುಶ್ರೀ ಉಟ್ಟ ಸೀರೆಯ ಬೆಲೆ 2.5 ಲಕ್ಷ ಅಲ್ಲ ಕೇವಲ 2,700 ರೂ.

    ಮದ್ವೆಯಲ್ಲಿ ಅನುಶ್ರೀ ಉಟ್ಟ ಸೀರೆಯ ಬೆಲೆ 2.5 ಲಕ್ಷ ಅಲ್ಲ ಕೇವಲ 2,700 ರೂ.

    ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ (Kannada Anchor Anushree) ಸದ್ಯಕ್ಕೆ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಸರಳ ವಿವಾಹ ಅಂತ ಅವರು ಹೇಳಿಕೊಂಡಿದ್ದರೂ ಅದ್ಧೂರಿಯಂತೆ ಕಂಡುಬಂದಿತ್ತು. ಬಳಿಕ ಮದುವೆಯ ಒಂದೊಂದೇ ವೀಡಿಯೋಗಳನ್ನ ತಮ್ಮ ಇನ್‌ಸ್ಟಾದಲ್ಲಿ ಪೋಸ್ಟ್‌ ಮಾಡುತ್ತಾ ಬರ್ತಿದ್ದಾರೆ ಅನುಶ್ರೀ.

    ಇದೀಗ ಮದುವೆಯ (AnuShree Marriage) ಶಾಸ್ತ್ರಕ್ಕೆ ಧರಿಸಿದ್ದ ಒಂದು ಸೀರೆ ಬಗ್ಗೆ ಹಾಗೂ ಆ ಸೀರೆಯ ಅಸಲಿ ಬೆಲೆ ಬಗ್ಗೆ ಬಹಿರಂಗವಾಗಿ ಮಾಹಿತಿ ಕೊಟ್ಟಿದ್ದಾರೆ. ಇದನ್ನೂ ಓದಿ: ನಮ್ಮನೆ ಅವ್ರ ಮನೆ ಒಂದೇ, ನಾವೆಲ್ಲ ಒಂದೇ ಕುಟುಂಬದವರು: ಯಶ್‌ ತಾಯಿ ಪುಷ್ಪ ಅರುಣ್‌ಕುಮಾರ್

    ಮುಹೂರ್ತಕ್ಕೂ ಮುನ್ನ ನಡೆಯುವ ದೇವತಾ ಕಾರ್ಯ ಶಾಸ್ತ್ರಕ್ಕಾಗಿ ಅನುಶ್ರೀ ಸಿಲ್ವರ್ ಬಣ್ಣದ ಸೀರೆ ಧರಿಸಿದ್ದರು. ನೋಡೋದಕ್ಕೆ ಬೆಲೆ ಬಾಳುವ ಸೀರೆಯಂತೆ ಕಾಣುತ್ತಿತ್ತು. ಇದೀಗ ಆ ಸೀರೆಯ ಬೆಲೆಯನ್ನ ಹೇಳುವ ಮೂಲಕ ಅಚ್ಚರಿ ಮೂಡಿದ್ದಾರೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಇಲ್ಲದ ರೂಲ್ಸ್ ದರ್ಶನ್‌ಗೆ ಯಾಕೆ?- ವಕೀಲರ ವಾದ

    ಸಿಲ್ವರ್ ಬಣ್ಣದ ಸೀರೆಯ ಫೋಟೋಗಳನ್ನ ತಮ್ಮ ಇನ್‌ಸ್ಟಾದಲ್ಲಿ ಹಂಚಿಕೊಂಡಿರುವ ಅನುಶ್ರೀ ʻಎಲ್ಲಾ ಪೋಸ್ಟ್‌ಗಳು ಹೇಳ್ತಿವೆ, ಈ ಸೀರೆ ಬೆಲೆ 2.5 ಲಕ್ಷ ಅಂತ. ಆದ್ರೆ ಈ ಸೀರೆಯ ಅಸಲಿ ಬೆಲೆ 2,700 ರೂಪಾಯಿʼ ಎಂದಿದ್ದಾರೆ. ಜೊತೆಗೆ ʻಈ ಕ್ಷಣದ ನಗು ನಾ ಆರಾಧಿಸುವ ದೇವರು, ಆಶೀರ್ವಾದ ಮಾಡಿದ ಪ್ರೀತಿಯ ಕನ್ನಡಿಗರು ಕೊಟ್ಟ ವರʼ ಎಂದು ಹೇಳುವ ಮೂಲಕ ಮದುವೆಯ ಖುಷಿಯನ್ನ ಮೊದಲ ಬಾರಿ ಪದಗಳಲ್ಲಿ ವರ್ಣಿಸಿದ್ದಾರೆ.  ಇದನ್ನೂ ಓದಿ: ಹಿಂದೆಂದೂ ಕಂಡು ಕೇಳರಿಯದ ರುಕ್ಮಿಣಿ ವಸಂತ್ ಬೋಲ್ಡ್ ಫೋಟೋಶೂಟ್

    ಕುಶಾಲನಗರದ ರೋಷನ್ ಜೊತೆ ಅನುಶ್ರೀ ಕಳೆದ ಆಗಸ್ಟ್ 28 ರಂದು ಸಪ್ತಪದಿ ತುಳಿದಿದ್ದರು. ಅದಕ್ಕವರು ಸರಳ ವಿವಾಹ ಎಂದು ಹೇಳಿದ್ದರು. ಇನ್ನೂ ಸರಳವಾಗಿ ಮಂತ್ರಮಾಂಗಲ್ಯ ಮಾಡಿಕೊಳ್ಳಲು ಅನುಶ್ರೀ ಇಷ್ಟಪಟ್ಟಿದ್ದರಂತೆ. ಆದರೆ ಸಾಧ್ಯವಾಗಲಿಲ್ಲ ಎಂದಿದ್ದಾರೆ. ಇದೀಗ ಅನುಶ್ರೀ ಮದುವೆಯಲ್ಲಿ ಉಟ್ಟ ಸೀರೆಯ ಅಸಲಿ ಬೆಲೆ ಹೇಳುವ ಮೂಲಕ ನೀವ್ ಅಂದುಕೊಂಡಿದ್ದೆಲ್ಲ ತಪ್ಪು ಅಸಲಿ ವಿಷಯ ಬೇರೆಯೇ ಇರುತ್ತೆ ಅನ್ನೋದನ್ನ ಮಾರ್ಮಿಕವಾಗಿ ನುಡಿದಿದ್ದಾರೆ.  ಇದನ್ನೂ ಓದಿ: ಕೀನ್ಯಾದಲ್ಲಿ ರಾಜಮೌಳಿ ಗಸ್ತು, ಕೀನ್ಯಾ ಸಚಿವ ಬಿಚ್ಚಿಟ್ಟರು `ಆ’ ರಹಸ್ಯ

  • ಅನುಶ್ರೀ ಕಲ್ಯಾಣದಲ್ಲಿ ರಾರಾಜಿಸಿದ ಅಪ್ಪು ಫೋಟೋ

    ಅನುಶ್ರೀ ಕಲ್ಯಾಣದಲ್ಲಿ ರಾರಾಜಿಸಿದ ಅಪ್ಪು ಫೋಟೋ

    ಪುನೀತ್ ರಾಜಕುಮಾರ್ (Puneeth Rajkumar) ಅವರ ಅಪ್ಪಟ ಅಭಿಮಾನಿಯಾಗಿರುವ ಅನುಶ್ರೀ (Anushree) ಅವರು ತಾವು ಮದುವೆಯಾಗುತ್ತಿರುವ ಮಂಟಪದಲ್ಲಿ ಅಪ್ಪು ಫೋಟೋವನ್ನು ರಾರಾಜಿಸುವಂತೆ ಮಾಡಿದ್ದಾರೆ.

    ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಇಂದು (ಆ.28) ಕೊಡಗು ಮೂಲದ ರೋಷನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ನಿರೂಪಣೆಯಿಂದ ಹೆಚ್ಚು ಜನಪ್ರಿಯತೆ ಗಳಿಸಿದ ಅನುಶ್ರೀ ತಮ್ಮ ಬಹುಕಾಲದ ಗೆಳೆಯ ರೋಷನ್ ಜೊತೆ ಹಸೆಮಣೆ ಏರಿದ್ದು, 10:56ರ ಶುಭ ಮೂಹೂರ್ತದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಇದನ್ನೂ ಓದಿ: ದಾವಣಗೆರೆ | ಶಿಕ್ಷಕನ ಬ್ಯಾಂಕ್ ಖಾತೆಯಿಂದ 22 ಲಕ್ಷ ಎಗರಿಸಿದ್ದ ಆರೋಪಿ ಅರೆಸ್ಟ್

    ಅಪ್ಪು ಅವರ ಅಪ್ಪಟ ಅಭಿಮಾನಿಯಾಗಿರುವ ಅನುಶ್ರೀ ಮದುವೆ ಮಂಟಪದಲ್ಲಿ ಅಪ್ಪು ಫೋಟೋವೊಂದನ್ನು ಇರಿಸಿ, ಸುತ್ತಲೂ ಹೂವುಗಳಿಂದ ಅಲಂಕಾರ ಮಾಡಿದ್ದಾರೆ. ಈ ಮೂಲಕ ಅಪ್ಪು ಮೇಲಿನ ಪ್ರೀತಿಯನ್ನು ತೋರ್ಪಡಿಸಿದ್ದಾರೆ. ಈ ಹಿಂದೆಯೂ ಅಪ್ಪು ಬಗ್ಗೆ ನಟಿ ಅನುಶ್ರೀ ಮಾತನಾಡಿದ್ದರು. ಅಪ್ಪು ಸರ್ ನನಗೆ ತುಂಬಾ ಹತ್ತಿರ. ಸಿನಿಮಾ ಇಷ್ಟ ಪಡಲು ಶುರುವಾಗಿದ್ದ ದಿನದಿಂದ ಅವರು ನನಗೆ ತುಂಬಾ ಹತ್ತಿರವಾಗಿದ್ದಾರೆ. ನಾನು ಇಷ್ಟ ಪಡುವ ಏಕೈಕ ನಟ ಅಂದ್ರೆ ಅಪ್ಪು ಸರ್. ಅವರನ್ನು ಭೇಟಿಯಾದ ಮೇಲೆ ಅವರ ಗುಣ, ವ್ಯಕ್ತಿತ್ವಕ್ಕೆ ನಾನು ಅಭಿಮಾನಿಯಾದೆ ಎಂದು ಹಲವು ಭಾರೀ ಭಾವುಕರಾಗಿದ್ದರು.

    ಗುರುವಾರ ಬೆಂಗಳೂರಿನ ಕಗ್ಗಲಿಪುರ ಬಳಿಯ ಹೊರವಲಯದ ರೆಸಾರ್ಟ್‌ನಲ್ಲಿ ಮದುವೆ ನೆರವೇರಿದ್ದು, ನಟ ಶರಣ್, ಹಿರಿಯ ನಟಿ ಪ್ರೇಮ, ಡಾಲಿ ಧನಂಜಯ್, ಚೈತ್ರಾ ಆಚಾರ್, ನಾಗಭೂಷಣ, ಗಾಯಕ ವಿಜಯಪ್ರಕಾಶ್, ನಟ ವಿಜಯ ರಾಘವೇಂದ್ರ ಸೇರಿದಂತೆ ಕಿರುತೆರೆ ಕಲಾವಿದರು, ಚಿತ್ರೋದ್ಯಮದ ಗಣ್ಯರು ನವಜೋಡಿಗೆ ಶುಭ ಹಾರೈಸಿದ್ದಾರೆ.ಇದನ್ನೂ ಓದಿ: ಅಮೆರಿಕದ ಚರ್ಚ್ ಮೇಲೆ ಶೂಟೌಟ್ – ಗನ್‌ನಲ್ಲಿ ಬರೆದಿತ್ತು Nuke India

  • ಅನುಶ್ರೀ-ರೋಷನ್‌ ಹಳದಿ ಶಾಸ್ತ್ರದ ಫೋಟೋಸ್‌ ವೈರಲ್‌ – ಆ.28ರಂದು ಹಸೆಮಣೆ ಏರಲಿರುವ ನಿರೂಪಕಿ

    ಅನುಶ್ರೀ-ರೋಷನ್‌ ಹಳದಿ ಶಾಸ್ತ್ರದ ಫೋಟೋಸ್‌ ವೈರಲ್‌ – ಆ.28ರಂದು ಹಸೆಮಣೆ ಏರಲಿರುವ ನಿರೂಪಕಿ

    – ʻಬಂದರೋ ಬಂದರೋ ಬಾವ ಬಂದರೋʼ ಹಾಡಿಗೆ ಭಾವಿ ದಂಪತಿ ಭರ್ಜರಿ ಡಾನ್ಸ್‌

    ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ದಾಂಪತ್ಯ (Anushree) ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕೊಡಗು ಮೂಲದ ರೋಷನ್ ಜೊತೆ ಆ್ಯಂಕರ್ ಅನುಶ್ರೀ ಆಗಸ್ಟ್‌ 28ರಂದು ಹಸೆಮಣೆ ಏರುತ್ತಿದ್ದು, ಹಳದಿ ಶಾಸ್ತ್ರದಲ್ಲಿ (Haldi Ceremony) ಮಿಂದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಹೌದು. ಆಗಸ್ಟ್ 28ರ ಗುರುವಾರ ಅನುಶ್ರೀ ತಮ್ಮ ಬಹುಕಾಲದ ಗೆಳೆಯ ರೋಷನ್ ಜೊತೆ ದಾಂಪತ್ಯ ಬದುಕಿಗೆ ಕಾಲಿಡುತ್ತಿದ್ದು, ವೆಡ್ಡಿಂಗ್ ಕಾರ್ಡ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿಬಿಟ್ಟಿದೆ.

    ಮದುವೆಗೂ ಮುನ್ನಾದಿನವಾದ ಇಂದು ಹಳದಿ ಶಾಸ್ತ್ರದ ಫೋಟೋಗಳು ವೈರಲ್‌ ಆಗಿವೆ. ಹಳದಿ ಶಾಸ್ತ್ರದಲ್ಲಿ ಭಾವಿ ದಂಪತಿಗಳು ಹಳದಿ ಉಡುಗೆಯಲ್ಲೇ ಕಾಣಿಸಿಕೊಂಡಿದ್ದಾರೆ. ಸುತ್ತಲೂ ಸೂರ್ಯಕಾಂತಿ ಹೂವಿನ ಅಲಂಕಾರ ಈ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದೆ. ಹಳದಿ ಶಾಸ್ತ್ರದ ವೇಳೆ ಅನುಶ್ರೀ – ರೋಷನ್‌ ಸು ಫ್ರಂ ಸೋ ಚಿತ್ರದ ʻಬಂದರೋ ಬಂದರೋ ಬಾವ ಬಂದರೋʼ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ.

    ಗುರುವಾರ ಬೆಳಗ್ಗೆ 10:56ರ ಶುಭ ಮುಹೂರ್ತದಲ್ಲಿ ಅನುಶ್ರೀ ಹಾಗೂ ರೋಷನ್ ಮದುವೆ ನಡೆಯಲಿದೆ. ಅಂದಹಾಗೆ, ಇವರಿಬ್ಬರ ಮದುವೆಯು (Anushree Roshan Wedding) ಬೆಂಗಳೂರಿನ ಹೊರವಲಯದ ಕಗ್ಗಲಿಪುರದಲ್ಲಿರುವ ಒಂದು ಖಾಸಗಿ ರೆಸಾರ್ಟ್‌ನಲ್ಲಿ ನಡೆಯಲಿದೆ.

    ಮೂಲತಃ ಉದ್ಯಮಿ ಆಗಿರುವ ರೋಷನ್ ಜೊತೆ ಅನುಶ್ರೀ ಮದುವೆಯಾಗುತ್ತಿದ್ದಾರೆ. ಕೂರ್ಗ್‌ನವರಾದ ರೋಷನ್ ತಂದೆ ಹೆಸರು ರಾಮಮೂರ್ತಿ ಹಾಗೂ ತಾಯಿ ಹೆಸರು ಸಿಸಿಲಿಯಾ ಎಂದು. ಇದು ಲವ್‌ ಕಂ ಅರೇಂಜ್ಡ್‌ ಮ್ಯಾರೇಜ್‌ ಅಂತ ಹೇಳಲಾಗುತ್ತಿದೆ.

    ಕನ್ನಡದಲ್ಲಿ ಬಹು ಬೇಡಿಕೆಯುಳ್ಳ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಶ್ರೀ ಮದುವೆ ಬಗ್ಗೆ ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿತ್ತು. ಅವರು ಎಲ್ಲೇ ಹೋದರೂ, ʻಮದುವೆ ಯಾವಾಗ?ʼ ಅನ್ನೋ ಪ್ರಶ್ನೆಯನ್ನ ಅಭಿಮಾನಿಗಳಲ್ಲದೇ ನಟ-ನಟಿಯರೂ ಕೇಳುತ್ತಲೇ ಇದ್ದರು. ಆಗೆಲ್ಲಾ ಫನ್ನಿಯಾಗಿ ಏನನ್ನಾದರೂ ಉತ್ತರಿಸಿ ಅನುಶ್ರೀ ಸುಮ್ಮನಾಗಿ ಬಿಡುತ್ತಿದ್ದರು. ಆದರೆ, ʻಈ ವರ್ಷ ಮದುವೆ ಆಗುತ್ತೇನೆʼ ಎಂದು ಇತ್ತೀಚೆಗೆ ಹೇಳಿಕೊಂಡಿದ್ದರು. ಅದರಂತೆಯೇ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ಸುದ್ದಿ ಕೇಳಿ ಅನುಶ್ರೀ ಅವರ ಅಭಿಮಾನಿಗಳಿಗೆ ಖುಷಿಯಾಗಿದೆ.

    ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿ ಸೈ ಎನಿಸಿಕೊಂಡಿರುವ ಅನುಶ್ರೀ, ʻಬಿಗ್‌ ಬಾಸ್‌ʼನಲ್ಲಿಯೂ ಸ್ಪರ್ಧಿಸಿದ್ದರು. ನಟಿಯಾಗಿಯೂ ತಮ್ಮ ಪ್ರತಿಭೆಯನ್ನು ತೋರಿದ ಅನುಶ್ರೀ, ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.

  • ಇದೇ 28 ರಂದು ಬೆಂಗಳೂರಿನಲ್ಲಿ ಮದುವೆಯಾಗಲಿದ್ದಾರೆ ಅನುಶ್ರೀ

    ಇದೇ 28 ರಂದು ಬೆಂಗಳೂರಿನಲ್ಲಿ ಮದುವೆಯಾಗಲಿದ್ದಾರೆ ಅನುಶ್ರೀ

    ಬೆಂಗಳೂರು: ನಿರೂಪಕಿ, ನಟಿ ಅನುಶ್ರೀ (Anushree) ಅವರು ಕೊಡಗು ಮೂಲದ ರೋಷನ್ ಜೊತೆ ಆ.28 ರಂದು ಸಪ್ತಪದಿ ತುಳಿಯಲಿದ್ದಾರೆ.

    ಬೆಂಗಳೂರಿನ ಹೊರವಲಯದ ರೆಸಾರ್ಟ್‌ನಲ್ಲಿ ಈ ಮದುವೆ (Marriage) ಕಾರ್ಯಕ್ರಮ ನಡೆಯಲಿದೆ.

     

    ರೋಷನ್ ರಾಮಮೂರ್ತಿ ಅವರ ಪುತ್ರನಾಗಿದ್ದಾರೆ. ಬೆಳಗ್ಗೆ 10:56 ಶುಭ ಮುಹೂರ್ತದಲ್ಲಿ ಅನುಶ್ರಿ ರೋಷನ್‌ ಅವರ ಕೈ ಹಿಡಿಯಲಿದ್ದಾರೆ. ಇದನ್ನೂ ಓದಿ: ಕನ್ನಡಕ್ಕೆ ಅಜಯ್ ದೇವಗನ್ ಜೆಪಿ ತುಮಿನಾಡ್‌ ಸಿನಿಮಾದಲ್ಲಿ ಅಭಿನಯ!

    `ನೀವೆಲ್ಲ ಕೇಳುತ್ತಿದ್ದ ಏಕೈಕ ಪ್ರಶ್ನೆಗೆ ಈಗ ಉತ್ತರ. ಏಕಾಂಗಿ ನಿರೂಪಣೆಯ ನಂತರ ಅರ್ಧಾಂಗಿ ಆಗುವ ಹೊಸ ಮನ್ವಂತರ’ ಎಂದು ಅನುಶ್ರೀ ಆಮಂತ್ರಣ ಪತ್ರಿಕೆಯಲ್ಲಿ ಬರೆಯಿಸಿದ್ದಾರೆ.

  • ಪೋಷಕರ ವಿರೋಧದ ನಡುವೆಯೂ ಗಾಯಕಿ ಪೃಥ್ವಿ ಭಟ್‌ ಅದ್ದೂರಿ ರಿಸೆಪ್ಷನ್‌

    ಪೋಷಕರ ವಿರೋಧದ ನಡುವೆಯೂ ಗಾಯಕಿ ಪೃಥ್ವಿ ಭಟ್‌ ಅದ್ದೂರಿ ರಿಸೆಪ್ಷನ್‌

    – ಯಾರೆಲ್ಲಾ ಸೆಲೆಬ್ರಿಟಿಸ್‌ ಭಾಗಿ?

    ರಿಗಮಪ ಖ್ಯಾತಿಯ ಗಾಯಕಿಯಾಗಿ ಮಿಂಚಿದ್ದ ಪೃಥ್ವಿ ಭಟ್‌ ಅದ್ದೂರಿಯಾಗಿ ರಿಸೆಪ್ಷನ್‌ ಮಾಡಿಕೊಂಡಿದ್ದಾರೆ. ಆರತಕ್ಷತೆಯಲ್ಲಿ ಪಾಲ್ಗೊಂಡು ಪೃಥ್ವಿ ಭಟ್‌ ಮತ್ತು ಅಭಿಷೇಕ್‌ ಜೋಡಿಗೆ ಸೆಲೆಬ್ರಿಟಿಗಳು ಶುಭಹಾರೈಸಿದ್ದಾರೆ.

    ಶುಕ್ರವಾರ ಅದ್ದೂರಿಯಾಗಿ ಆರತಕ್ಷತೆ ಸಮಾರಂಭ ನಡೆಯಿತು. ರಿಸೆಪ್ಷನ್‌ಗೆ ಗಾಯಕ ವಿಜಯ್‌ ಪ್ರಕಾಶ್‌, ನಿರೂಪಕಿ ಅನುಶ್ರೀ, ಬಿಗ್‌ ಬಾಸ್‌ ಖ್ಯಾತಿ ಮೋಕ್ಷಿತಾ ಪೈ, ಬಿಗ್‌ಬಾಸ್‌ ಸೀಸನ್‌ 11ರ ವಿನ್ನರ್‌ ಹನುಮಂತ ಲಮಾಣಿ, ಪ್ರಥಮ್‌, ಸಿಂಗರ್‌ ಸುನೀಲ್‌ ಹಾಗೂ ಸರಿಗಮಪ ಸ್ಪರ್ಧಿಗಳು ಕೂಡ ಆಗಮಿಸಿದ್ದರು.

    ಪೋಷಕರ ವಿರೋಧದ ನಡುವೆಯೂ ಪೃಥ್ವಿ ಭಟ್‌ ಅವರು ಮಾ.27 ರಂದು ದೇವಾಲಯವೊಂದರಲ್ಲಿ ಅಭಿಷೇಕ್‌ ಎಂಬ ಹುಡುಗನ ಜೊತೆ ವಿವಾಹವಾದರು. ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಷೇಕ್‌ ಅವರನ್ನು ಪ್ರೀತಿಸಿ ಗಾಯಕಿ ಮದುವೆಯಾಗಿದ್ದರು.

    ಪುತ್ರಿ ಪೃಥ್ವಿ ಮದುವೆಗೆ ತಂದೆ ಶಿವಪ್ರಸಾದ್‌ ವಿರೋಧ ವ್ಯಕ್ತಪಡಿಸಿದ್ದರು. ಈ ಸುದ್ದಿ ಭಾರಿ ವೈರಲ್‌ ಆಗಿತ್ತು. ಇದೀಗ ಗಾಯಕಿ ಅದ್ದೂರಿಯಾಗಿ ರಿಸೆಪ್ಷನ್‌ ಮಾಡಿಕೊಂಡಿದ್ದಾರೆ.

  • ತಮಾಷೆಗೂ ಯಾರ ಮನಸ್ಸನ್ನೂ ನೋಯಿಸದ ಹುಡುಗ ರಾಕೇಶ್: ಅನುಶ್ರೀ

    ತಮಾಷೆಗೂ ಯಾರ ಮನಸ್ಸನ್ನೂ ನೋಯಿಸದ ಹುಡುಗ ರಾಕೇಶ್: ಅನುಶ್ರೀ

    ಉಡುಪಿ: ರಾಕೇಶ್ (Rakesh Poojary) ನಮ್ಮೂರಿನ ಹುಡುಗ. ಬಾಯಿ ತುಂಬಾ ಅಕ್ಕಾ ಅಕ್ಕಾ ಅಂತ ಕರೀತಿದ್ದ. ನನ್ನ ತಮ್ಮನ ಹಾಗೆ ನಮ್ಮ ಕಣ್ಣಮುಂದೆ ಚೆನ್ನಾಗಿ ಬೆಳೆದ ಹುಡುಗ ಇನ್ನಿಲ್ಲವೆಂದರೆ ನಂಬಲಾಗುತ್ತಿಲ್ಲ ಎಂದು ನಿರೂಪಕಿ, ನಟಿ ಅನುಶ್ರೀ (Anchor Anushree) ಬೇಸರ ವ್ಯಕ್ತಪಡಿಸಿದರು.

    ಉಡುಪಿಯ ಕೆಮ್ಮಣ್ಣು ಗುಡೆಯಲ್ಲಿ ರಾಕೇಶ್ ಪೂಜಾರಿ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದ ನಂತರ ಅವರು ಮಾತನಾಡಿದರು. ತಮಾಷೆಗೂ ಯಾರ ಮನಸ್ಸನ್ನು ನೋಯಿಸದ ಹುಡುಗ ರಾಕೇಶ್. ಒಳ್ಳೆಯವರಿಗೆ ಕಾಲ ಇಲ್ಲ. ತಾಯಿ ಮತ್ತು ತಂಗಿಗೆ ನಾವೆಲ್ಲಾ ಶಕ್ತಿಯಾಗಿ ನಿಲ್ಲಬೇಕು. ಅವರ ನಗು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಡಿಂಪಲ್ ಡಿಂಪಲ್ ಎಂದು ಡ್ಯಾನ್ಸ್ ಮಾಡುತ್ತಿದ್ದದ್ದು ಕಣ್ಮುಂದೆ ಬರುತ್ತಿದೆ. ಅರ್ಜುನ್ ಜನ್ಯ ಅವರ ಮಿಮಿಕ್ರಿ ಅಷ್ಟು ಚೆನ್ನಾಗಿ ಮಾಡುತ್ತಿದ್ದ. ಯಾವಾಗಲೂ ಲವಲವಿಕೆಯಿಂದ ಇರುತ್ತಿದ್ದ ವ್ಯಕ್ತಿ ಎಂದು ಸ್ಮರಿಸಿದರು. ಇದನ್ನೂ ಓದಿ: ಉಡುಪಿಯಲ್ಲಿ ನೆರವೇರಿದ ರಾಕೇಶ್ ಪೂಜಾರಿ ಅಂತ್ಯಕ್ರಿಯೆ

    ಅರ್ಧ ದಿನದಲ್ಲಿ ಸ್ಕಿಟ್‌ನ ಎಲ್ಲ ಡೈಲಾಗ್‌ಗಳನ್ನು ಕಲಿತು ನಟಿಸುತ್ತಿದ್ದ ಕಲಾವಿದ ಆತ. ಕಾಂತಾರದಲ್ಲಿ ಅವಕಾಶ ಸಿಕ್ಕಿರುವುದು ಒಂದೊಳ್ಳೆ ಅವಕಾಶವಾಗಿತ್ತು. ಯಾವತ್ತೂ ನಮ್ಮದೇ ಕ್ಯಾರಾವ್ಯಾನ್‌ನಲ್ಲಿದ್ದು, ನಮ್ಮ ಜೊತೆ ಊಟ ಮಾಡುತ್ತಿದ್ದ. ಅಣ್ಣತಮ್ಮಂದಿರ ಹಾಗೆ ಜೊತೆಗೆ ಇದ್ದ ನನ್ನ ತಮ್ಮ ಇಲ್ಲ ಅನ್ನೋದು ನೋವು ತಂದಿದೆ ಎಂದರು.  ಇದನ್ನೂ ಓದಿ: ರಾಕೇಶ್ ಅಕಾಲಿಕ ಮರಣ ನೋವು ತಂದಿದೆ: ಯೋಗರಾಜ್ ಭಟ್

  • ಈ ವರ್ಷವೇ ನನ್ನ ಮದುವೆ: ಹುಡುಗನ ಬಗ್ಗೆ ಅನುಶ್ರೀ ಮಾತು

    ಈ ವರ್ಷವೇ ನನ್ನ ಮದುವೆ: ಹುಡುಗನ ಬಗ್ಗೆ ಅನುಶ್ರೀ ಮಾತು

    ನ್ನಡದ ಖ್ಯಾತ ನಿರೂಪಕಿ ಅನುಶ್ರೀ (Anchor Anushree) ಇದೀಗ ಮದುವೆಯ (Wedding) ಬಗ್ಗೆ ಮಾತಾಡಿದ್ದಾರೆ. ನಾನಾ ಕಾರ್ಯಕ್ರಮಗಳಲ್ಲಿ ಅನುಶ್ರೀಗೆ ಮದುವೆಯ ಬಗ್ಗೆ ಪ್ರಶ್ನಿಸಿದಾಗ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಉತ್ತರ ನೀಡುತ್ತಿದ್ದರು. ಇದೀಗ ಅಧಿಕೃತವಾಗಿಯೇ ಮದುವೆಯ ಬಗ್ಗೆ ಅನುಶ್ರೀ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಇದೇ ವರ್ಷವೇ ತಾವು ಮದುವೆ ಆಗೋದಾಗಿ ಹೇಳಿದ್ದಾರೆ. ಇದನ್ನೂ ಓದಿ:‘ಡೆವಿಲ್’ ಸಿನಿಮಾ ತುಂಬಾ ಡಿಫರೆಂಟ್ ಆಗಿದೆ: ಅಪ್‌ಡೇಟ್ ಕೊಟ್ಟ ವಿನಯ್

    ಮದುವೆ ಬಗ್ಗೆ ಅಷ್ಟೇ ಅಲ್ಲ, ಮದುವೆಯಾಗೋ ಹುಡುಗ ಕೂಡ ಹೇಗಿರಬೇಕು? ಎಂದು ಅನುಶ್ರೀ ಮನಬಿಚ್ಚಿ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಲೈವ್‌ಗೆ ಬಂದಿದ್ದ ಅನುಶ್ರೀಗೆ ನಟಿ ಮಲೈಕಾ ವಸುಪಾಲ್ ಹಾಗೂ ನಟ ನಾಗಭೂಷಣ್ ಮದುವೆ ಕುರಿತು ಪ್ರಶ್ನಿಸಿದ್ದಾರೆ. ನಿಮ್ಮ ಹುಡುಗ ಹೇಗಿರಬೇಕು? ಮದುವೆ ಯಾವಾಗ ಎಂದು ಕೇಳಿದ್ದಾರೆ. ಇದನ್ನೂ ಓದಿ: ನೀವಿಲ್ಲದೆ ಅಭಿಮಾನಕ್ಕೆ ಬೆಲೆ ಇಲ್ಲ: ಅಪ್ಪು ಕುರಿತು ಅನುಶ್ರೀ ಭಾವುಕ ಪೋಸ್ಟ್

    ಅದಕ್ಕೆ ಮಾತನಾಡಿದ ನಿರೂಪಕಿ, ಹುಡುಗ ತುಂಬ ರೆಸ್ಪಾನ್ಸಿಬಲ್ ಆಗಿರಬೇಕು. ನನ್ನ ಪರವಾಗಿ ಅಲ್ಲ ಅವನ ಲೈಫ್ ಪರವಾಗಿ ರೆಸ್ಪಾನ್ಸಿಬಲ್ ಆಗಿದ್ರೆ ಸಾಕು. ಅವನು ಬದುಕಬೇಕು, ನನ್ನನ್ನು ಬದುಕೋಕೆ ಬಿಡಬೇಕು ಎಂದಿದ್ದಾರೆ. ಈ ವರ್ಷವೇ ಮದುವೆ ಆಗುತ್ತೆ ಗ್ಯಾರಂಟಿ ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ಅನುಶ್ರೀ ಮಾತಿಗೆ ಮಲೈಕಾ ವಸುಪಾಲ್ ಮತ್ತು ನಾಗಭೂಷಣ್ ಹೌದಾ ಎಂದು ಮತ್ತೊಮ್ಮೆ ಕೇಳಿದ್ದಾರೆ. ಹೌದು. ಈ ವರ್ಷವೇ ಮದುವೆ ಆಗ್ತೀನಿ ಎಂದು ಅಧಿಕೃತವಾಗಿ ಹೇಳಿದ್ದಾರೆ.

    ಇತ್ತೀಚೆಗಷ್ಟೇ ಮಾರ್ಚ್‌ನಲ್ಲಿ ಸಿಹಿ ಸುದ್ದಿ ಕೊಡುವುದಾಗಿ ಅವರು ಹೇಳಿಕೊಂಡಿದ್ದರು. ಅಪ್ಪು ಕಟ್ಟಾ ಅಭಿಮಾನಿಯಾಗಿರುವ ಅನುಶ್ರೀ ಅವರು ಪುನೀತ್‌ ಹುಟ್ಟಿದಹಬ್ಬದಂದು ಸರ್ಪ್ರೈಸ್ ಇದೆ ಅಂತೆಲ್ಲಾ ಅವರದ್ದೇ ಯೂಟ್ಯೂಬ್ ಚಾನೆಲ್‌ನ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಆದರೆ, ಅಂದು ಯಾವ ಸರ್ಪ್ರೈಸ್ ಕೊಡಲಿಲ್ಲ. ಈಗ ತಮ್ಮ ಇನ್‌ಸ್ಟಾದಲ್ಲಿ ಲೈವ್ ಮಾಡಿದ್ದ ಸಮಯದಲ್ಲಿ 2025ರ ಒಳಗೆ ಮದುವೆ ಆಗೋದಾಗಿ ಘೋಷಿಸಿದ್ದಾರೆ.

  • ಒಳ್ಳೆತನದಲ್ಲಿ ಅಪ್ಪು ಸರ್ ಯಾವಾಗಲೂ ಜೀವಂತವಾಗಿರುತ್ತಾರೆ: ಅನುಶ್ರೀ

    ಒಳ್ಳೆತನದಲ್ಲಿ ಅಪ್ಪು ಸರ್ ಯಾವಾಗಲೂ ಜೀವಂತವಾಗಿರುತ್ತಾರೆ: ಅನುಶ್ರೀ

    ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ನಿರೂಪಕಿ ಅನುಶ್ರೀ (Anushree), ನಮ್ರತಾ ಗೌಡ, ‘ಬಿಗ್ ಬಾಸ್’ ರಂಜಿತ್ ಕಂಠೀರವ ಸ್ಟುಡಿಯೋದಲ್ಲಿನ ಅಪ್ಪು ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ, ಅನುಶ್ರೀ ಮಾಧ್ಯಮಕ್ಕೆ ಮಾತನಾಡಿ, ಒಳ್ಳೆತನದಲ್ಲಿ ಅಪ್ಪು ಸರ್ ಯಾವತ್ತಿಗೂ ಜೀವಂತವಾಗಿರುತ್ತಾರೆ ಎಂದು ಪುನೀತ್ ಅವರನ್ನು ಸ್ಮರಿಸಿದ್ದಾರೆ.

    ಅನುಶ್ರೀ ಮಾತನಾಡಿ, ಅಪ್ಪು ಸ್ಮಾರಕಕ್ಕೆ ಇವತ್ತು ಜಾತ್ರೆ ಹಾಗೇ ಜನ ಸೇರಿದ್ದಾರೆ. ಈ ರೀತಿ 50ನೇ ವರ್ಷದ ಹುಟ್ಟುಹಬ್ಬ ಯಾರಿಗೂ ಆಗಿರಲಿಲ್ಲ. ಲಕ್ಷಾಂತರ ಜನ ಅವರ ಹೆಸರನ್ನು ಕೂಗೋ ರೀತಿ ನೋಡಿದ್ರೆ ನಿಜಕ್ಕೂ ಅಪ್ಪು ಸರ್ ಇದೆನ್ನೆಲ್ಲಾ ಕೇಳಿಸಿಕೊಳ್ತಾರೆ ಎಂದಿದ್ದಾರೆ. ಇದನ್ನೂ ಓದಿ:ಅಪ್ಪು ಕೇವಲ ಹೆಸರಲ್ಲ, ಕನ್ನಡಿಗರಿಗೆ ಅದೊಂದು ಭಾವನೆ: ಶ್ರೀದೇವಿ ಭೈರಪ್ಪ

    ದಿನದಿಂದ ದಿನಕ್ಕೆ ಅಪ್ಪು ಸರ್ ಮೇಲಿನ ಅಭಿಮಾನಿಗಳ ಅಭಿಮಾನ ಜಾಸ್ತಿ ಆಗ್ತಿದೆ. ಸೂರ್ಯ ಚಂದ್ರ ಇರೋವರೆಗೂ ಅಪ್ಪು ಸರ್ ಅಭಿಮಾನಿಗಳ ಪ್ರೀತಿ ಯಾವತ್ತಿಗೂ ಗ್ರೇಟ್ ಆಗಿರುತ್ತದೆ. ಆ ಎಲ್ಲಾ ಅಭಿಮಾನಿಗಳಲ್ಲಿ ನಾನು ಒಬ್ಬಳು. ಸುಖದಲ್ಲಿ ತುಂಬಾ ಜನ ನಿಮ್ಮೊಂದಿಗೆ ಬಂದು ನಿಲ್ಲಬಹುದು. ಆದರೆ ಕಷ್ಟದಲ್ಲಿ ನಿಮ್ಮೊಂದಿಗೆ ನಿಲ್ಲವವರೇ ನಿಜವಾದ ಹೀರೋ. ನನ್ನೊಂದಿಗೆ ನನ್ನ ಕಷ್ಟದಲ್ಲಿ ನಿಂತಿದ್ದು ಅಪ್ಪು ಸರ್. ಅದನ್ನು ನಾನ್ ಯಾವತ್ತು ಮರೆಯೊಲ್ಲ. ನಾನು ಮಾಡೋ ಪ್ರತಿ ಕೆಲಸವನ್ನು ಅವರು ಪ್ರಶಂಸಿಸುತ್ತಿದ್ದರು. ಇವತ್ತಿಗೂ ಅವರನ್ನು ನೆನಪು ಮಾಡಿಕೊಂಡ್ರೆ ಸಾಕಷ್ಟು ವಿಚಾರಗಳು ನೆನಪಾಗುತ್ತದೆ ಎಂದು ಪುನೀತ್‌ರನ್ನು ನೆನೆದು ನಟಿ ಭಾವುಕರಾಗಿದ್ದಾರೆ.

    ಮೊನ್ನೆ ‘ಅಪ್ಪು’ ಸಿನಿಮಾ ನೋಡಿದಾಗ ಶುರುವಿನಲ್ಲಿ ಅವರಿಲ್ಲ ಅಂತ ಎಲ್ಲೂ ಅನಿಸಲಿಲ್ಲ. ಕಡೆಯಲ್ಲಿ ಸಿನಿಮಾ ಮುಗಿತಾ ಮತ್ತೆ ಒಂದು ವರ್ಷ ಕಾಯಬೇಕಾ ಅನಸ್ತು. ಅವರು ದೈಹಿಕವಾಗಿ ನಮ್ಮೊಂದಿಗೆ ಇಲ್ಲದೇ ಇದ್ದರೂ ಮಾನಸಿಕವಾಗಿ ನಮ್ಮ ಜೊತೆ ಇರುತ್ತಾರೆ. ಒಳ್ಳೆತನದಲ್ಲಿ ಅಪ್ಪು ಸರ್ ಯಾವತ್ತಿಗೂ ಜೀವಂತವಾಗಿರುತ್ತಾರೆ ಎಂದರು.

    ಬಳಿಕ ಅಭಿಮಾನಿಗಳು ತಂದ ಕೇಕ್ ಅನ್ನು ಅಪ್ಪು ಸ್ಮಾರಕದ ಬಳಿ ಅನುಶ್ರೀ ಕತ್ತರಿಸಿದರು. ಫ್ಯಾನ್ಸ್‌ಗೆ ತಿನ್ನಿಸಿ ಸಂಭ್ರಮಿಸಿದರು.