Tag: ಅನುರಾಗ್ ಠಾಕೂರ್

  • ಗಾಂಧಿ ಕುಟುಂಬದಿಂದಾಚೆಗೆ ಕಾಂಗ್ರೆಸ್‌ ಪಕ್ಷ ಕಾಣುವುದೇ ಇಲ್ಲ: ಅನುರಾಗ್‌ ಠಾಕೂರ್‌

    ಗಾಂಧಿ ಕುಟುಂಬದಿಂದಾಚೆಗೆ ಕಾಂಗ್ರೆಸ್‌ ಪಕ್ಷ ಕಾಣುವುದೇ ಇಲ್ಲ: ಅನುರಾಗ್‌ ಠಾಕೂರ್‌

    ನವದೆಹಲಿ: ಕಾಂಗ್ರೆಸ್‌ ಪಕ್ಷವು ಗಾಂಧಿ ಕುಟುಂಬದಿಂದಾಚೆ ಕಾಣುವುದೇ ಇಲ್ಲ ಎಂದು ಕಾಂಗ್ರೆಸ್‌ ವಿರುದ್ಧ ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ವಾಗ್ದಾಳಿ ನಡೆಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಹುಲ್‌ ಗಾಂಧಿ ನೇತೃತ್ವ ವಹಿಸಿಕೊಂಡರೂ ಪಶ್ಚಿಮ ಬಂಗಾಳದಲ್ಲಿ ಒಂದು ಸ್ಥಾನವನ್ನೂ ಗೆಲ್ಲಲಾಗಲಿಲ್ಲ. ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಉಸ್ತುವಾರಿ ವಹಿಸಿಕೊಂಡರೂ ಎರಡು ಸ್ಥಾನಗಳ ಮೇಲೆ ಗೆಲ್ಲಲಾಗಲಿಲ್ಲ. ಈಗ ಸೋನಿಯಾ ಗಾಂಧಿ ಅವರು ಪಕ್ಷದ ನಾಯಕತ್ವ ವಹಿಸಿಕೊಂಡಿದ್ದಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ನನ್ನನ್ನು ಈ ಬಾರಿ ಪರಿಗಣಿಸುತ್ತಾರೆ ಎಂಬ ನಂಬಿಕೆ ಇದೆ: ರೇಣುಕಾಚಾರ್ಯ

    ಕಾಂಗ್ರೆಸ್‌ನಲ್ಲಿ ಏನಾಗುತ್ತಿದೆ? ಅವರು ತಮ್ಮನ್ನು ಕೇವಲ ಒಂದು ಕುಟುಂಬಕ್ಕೆ ಸೀಮಿತಗೊಳಿಸುತ್ತಾರೆಯೇ ಎಂಬ ಪ್ರಶ್ನೆಗಳು ಹಲವು ವರ್ಷಗಳಿಂದ ಬದಲಾಗದೇ ಉಳಿದಿವೆ ಎಂದು ಟೀಕಿಸಿದ್ದಾರೆ.

    ಪ್ರಸ್ತುತ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾ ದೇಶಕ್ಕಿಂತಲೂ ಭಾರತದ ಆರ್ಥಿಕ ಪರಿಸ್ಥಿತಿ ದುಸ್ಥರವಾಗಿದೆ ಎಂಬ ಮಮತಾ ಬ್ಯಾನರ್ಜಿ ಅವರ ಟೀಕೆಗೆ ಟಾಂಗ್‌ ಕೊಟ್ಟಿರುವ ಠಾಕೂರ್‌, ಪ್ರಪಂಚದ ಮತ್ತು ನಮ್ಮ ನೆರೆಹೊರೆಯ ದೇಶಗಳ ಪ್ರಸ್ತುತ ಪರಿಸ್ಥಿತಿಯನ್ನು ನೀವು ನೋಡಿದ್ದೀರಿ. ಭಾರತವು ತನ್ನ ನಾಯಕತ್ವವನ್ನು ಸರಿಯಾಗಿ ಆರಿಸಿಕೊಂಡಿರುವುದರಿಂದ ದೇಶ ಅಭಿವೃದ್ಧಿ ಹೊಂದುತ್ತಿದೆ ಎಂದು ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಪಕ್ಷವು ಎಲ್ಲಾ ಹಂತಗಳಲ್ಲೂ ಏಕತೆ ಸಾಧಿಸಲಿ: ಸೋನಿಯಾ ಗಾಂಧಿ

    ಕೇಂದ್ರದ ಕೋವಿಡ್ ಲಸಿಕೆ ಅಭಿಯಾನ ಕುರಿತು ಮಾತನಾಡಿ, ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಕೇಂದ್ರವು ದೇಶದ ಆರ್ಥಿಕ ಅಭಿವೃದ್ಧಿಗಾಗಿ ಪ್ರಯತ್ನಿಸಿದೆ. ನಾವು ದೀರ್ಘಕಾಲದವರೆಗೆ ಉಚಿತ ಆಹಾರ ಧಾನ್ಯಗಳನ್ನು ಒದಗಿಸಿದ್ದೇವೆ. 80 ಕೋಟಿ ಬಡವರಿಗೆ ಉಚಿತವಾಗಿ ಲಸಿಕೆ ನೀಡಲಾಗಿದೆ. ಇದೆಲ್ಲವೂ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದಿದೆ ಎಂದಿದ್ದಾರೆ.

  • ರಣ್‍ವೀರ್ ಸಿಂಗ್ ಜೊತೆಗೆ ಹೆಜ್ಜೆ ಹಾಕಿದ ಅನುರಾಗ್ ಠಾಕೂರ್ – ವೀಡಿಯೋ ವೈರಲ್

    ರಣ್‍ವೀರ್ ಸಿಂಗ್ ಜೊತೆಗೆ ಹೆಜ್ಜೆ ಹಾಕಿದ ಅನುರಾಗ್ ಠಾಕೂರ್ – ವೀಡಿಯೋ ವೈರಲ್

    ಬಾಲಿವುಡ್ ಸಖತ್ ಆ್ಯಕ್ಟೀವ್ ನಟರಲ್ಲಿ ರಣ್‍ವೀರ್ ಸಿಂಗ್ ಕೂಡ ಒಬ್ಬರು. ತಮ್ಮ ಕ್ರೇಜಿನೆಸ್ ಮೂಲಕ ತಮ್ಮ ಜೊತೆಯಲ್ಲಿರುವವರನ್ನು ಸದಾ ಸಂತೋಷದಿಂದ ಇರಿಸುವ ರಣ್‍ವೀರ್ ಸಿಂಗ್ ಅವರು ಸೋಮವಾರ ದುಬೈ ಎಕ್ಸ್’ಪೋ 2020ರಲ್ಲಿ ಇಂಡಿಯನ್ ಪೆವಿಲಿಯನ್‍ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ರಣವೀರ್ ಅವರೊಂದಿಗೆ ಮಲ್ಹಾರಿ ಸಾಂಗ್‍ಗೆ ಹೆಜ್ಜೆ ಹಾಕಿದ್ದಾರೆ.

    2016ರಲ್ಲಿ ತೆರೆಕಂಡ ನಟಿ ದೀಪಿಕಾ ಪಡುಕೋಣೆ, ಪ್ರಿಯಾಂಕ ಚೋಪ್ರಾ ಹಾಗೂ ರಣ್‍ವೀರ್ ಸಿಂಗ್ ಅಭಿನಯ ಬಾಜಿರಾವ್ ಮಸ್ತಾನಿ ಸಿನಿಮಾ ಬಾಲಿವುಡ್ ಗಲ್ಲಾಪೆಟ್ಟಿಗೆ ಭಾರೀ ಸದ್ದು ಮಾಡಿತ್ತು. ಅಲ್ಲದೇ ಈ ಸಿನಿಮಾದ ಮಲ್ಹಾರಿ ಸಾಂಗ್‍ಗೆ ಸಿನಿ ಪ್ರಿಯರು ಫಿದಾ ಆಗಿದ್ದರು. ಸದ್ಯ ಈ ಸಾಂಗ್‍ಗೆ ರಣ್‍ವೀರ್ ಸಿಂಗ್ ಹಾಗೂ ಅನುರಾಗ್ ಠಾಕೂರ್ ಒಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಅನುರಾಗ್ ಠಾಕೂರ್ ಅವರು ರಣವೀರ್ ಅವರೊಂದಿಗೆ ದಿ ಗ್ಲೋಬಲ್ ರೀಚ್ ಆಫ್ ಇಂಡಿಯನ್ ಮೀಡಿಯಾ ಮತ್ತು ಎಂಟರ್‍ಟೈನ್‍ಮೆಂಟ್ ಇಂಡಸ್ಟ್ರಿ ಕುರಿತಂತೆ ಚರ್ಚಿಸಲು ಇಂಡಿಯಾ ಪೆವಿಲಿಯನ್‍ಗೆ ತೆರಳಿದ್ದರು. ಈ ವೇಳೆ ರಣ್‍ವೀರ್ ಸಿಂಗ್ ಅವರು ಅನುರಾಗ್ ಠಾಕೂರ್ ಅವರ ಕೈ ಹಿಡಿದು ಮಲ್ಹಾರಿ ಹಾಡಿಗೆ ಸ್ಟೆಪ್ ಹಾಕುವಂತೆ ಒತ್ತಾಯಿಸಿದರು. ಆಗ ಅನುರಾಗ್ ಠಾಕೂರ್ ಅವರು ರಣ್‍ವೀರ್ ಜೊತೆಗೆ ಮಲ್ಹಾರಿ ಸಾಂಗ್‍ನ ಸಿಗ್ನೇಚರ್ ಸ್ಟೆಪ್ ಹಾಕಿದ್ದಾರೆ. ಇದನ್ನೂ ಓದಿ: ಮೂರು ದಿನಕ್ಕೆ 500 ಕೋಟಿ ಬಾಚಿದ ಆರ್.ಆರ್.ಆರ್: ಬಾಕ್ಸ್ ಆಫೀಸ್ ಚಿಂದಿಚಿತ್ರಾನ್ನ

    ಇದೇ ವೇಳೆ ಮಾತನಾಡಿದ ಅನುರಾಗ್ ಠಾಕೂರ್ ಅವರು, ಮುಂದಿನ ವರ್ಷದ ವೇಳೆಗೆ ಭಾರತವು ಪ್ರಪಂಚದ ಉಪಖಂಡವಾಗಬೇಕು ಎಂದು ನಾನು ಭಾವಿಸುತ್ತೇನೆ. ಇಂದು ಭಾಷೆಯು ಯಾವುದಕ್ಕೂ ಅಡ್ಡಿಯಲ್ಲ. ಹಾಡಿನ ಮೂಲಕ ಸಮಾಜದ ಎಲ್ಲಾ ವರ್ಗದ ಜನರು ಭಾರತದ ಧ್ವನಿಯನ್ನು ಪ್ರತಿಬಿಂಬಿಸುತ್ತಿದ್ದರೆ. ಹಾಡು ಭಾರತೀಯ ಚಲನಚಿತ್ರೋದ್ಯಮದ ದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ : ಕೆಜಿಎಫ್ ಸಿನಿಮಾ ಆಗೋಕೆ ಮೂವರು ಮಹಿಳೆಯರು ಕಾರಣ: ವಿಜಯ್ ಕಿರಗಂದೂರು

  • ಮೋದಿ ವೆಬ್‍ಸೈಟ್ ಲಾಂಚ್ – ಈ ವೆಬ್‍ಸೈಟ್‍ನಲ್ಲಿದೆ ಮೋದಿಜಿ ಕುತೂಹಲಕಾರಿ ಕಥೆಗಳು

    ಮೋದಿ ವೆಬ್‍ಸೈಟ್ ಲಾಂಚ್ – ಈ ವೆಬ್‍ಸೈಟ್‍ನಲ್ಲಿದೆ ಮೋದಿಜಿ ಕುತೂಹಲಕಾರಿ ಕಥೆಗಳು

    ನವದೆಹಲಿ: ‘ದಿ ಮೋದಿ ಸ್ಟೋರಿ ವೆಬ್‍ಸೈಟ್’ ಪ್ರಾರಂಭವಾಗಿದ್ದು, ಈ ಲಿಂಕ್‍ ಅನ್ನು ಬಿಜೆಪಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಇದರಲ್ಲಿ ಮೋದಿಜಿ  ಕುರಿತ ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ.

    ಈ ಸುದ್ದಿಯ ಮತ್ತೊಂದು ವಿಶೇಷವೆಂದರೆ ‘ಮೋದಿ ವೆಬ್‍ಸೈಟ್’ ಅನ್ನು ಮಹಾತ್ಮ ಗಾಂಧಿಯವರ ಮೊಮ್ಮಗಳು ಸುಮಿತ್ರಾ ಗಾಂಧಿ ಕುಲಕರ್ಣಿ ಉದ್ಘಾಟಿಸಿದ್ದಾರೆ. ಈ ವೆಬ್‍ಸೈಟ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಜೀವನದ ಒಂದು ನೋಟ ಮತ್ತು ಅವರ ಜೀವನದ ಕಥೆಗಳನ್ನು ಪ್ರಸ್ತುತಪಡಿಸಲಾಗುತ್ತೆ. ಮೋದಿ ಜೀವನವನ್ನು ಹತ್ತಿರದಿಂದ ನೋಡಿದ ವ್ಯಕ್ತಿಗಳ ಪ್ರತ್ಯಕ್ಷ ಘಟನೆಗಳು ಮತ್ತು ನೆನಪುಗಳನ್ನು ಸಂಗ್ರಹಿಸಲಾಗಿದೆ. ಇದನ್ನೂ ಓದಿ: ಗ್ರಾಮಕ್ಕೆ ಬಸ್‌ ಬಿಡಿ: ಸಿಎಂ ಕಾರು ತಡೆದು ಮನವಿ ಪತ್ರ ಕೊಟ್ಟ ವಿದ್ಯಾರ್ಥಿನಿಯರು

    ಅಲ್ಲದೇ ಮೋದಿ ಅವರೊಂದಿಗಿನ ಫೋಟೋಗಳು, ಪತ್ರಗಳು ಮತ್ತು ಅವರಿಗೆ ಸಂಬಂಧಿಸಿದ ವೈಯಕ್ತಿಕ ಸ್ಮರಣಿಕೆಗಳ ಜೊತೆಗೆ ಯಾವುದೇ ಅನುಭವ ಅಥವಾ ಬರಹಗಳ ಆಡಿಯೋ, ದೃಶ್ಯ ಕಥೆಗಳನ್ನು ನೀಡಲು ಇಷ್ಟಪಡುವವರಿಗೆ ಈ ವೆಬ್ ಅವಕಾಶಗಳನ್ನು ಕೊಡುತ್ತಿದೆ.

    ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಶೀರ್ಷಿಕೆಯ ಹೊಸ ವೆಬ್‍ಸೈಟ್‍ ಬಗ್ಗೆ(modistory.in) ಟ್ವಟ್ಟರ್‌ನಲ್ಲಿ ಮಾಹಿತಿ ಶೇರ್ ಮಾಡಿಕೊಂಡಿದ್ದು, ಸ್ಟೋರಿಸ್ ಆಫ್ ಗ್ರಿಟ್ ಮತ್ತು ಗ್ರೇಸ್ ಮಾಂತ್ರಿಕನ ನೆನಪುಗಳು, ಸೌಹಾರ್ದಯುತ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವ ಮಾತುಕತೆಗಳು, ನಿರ್ಣಾಯಕ ರಾಜಕೀಯ ವ್ಯಕ್ತಿತ್ವ. ಇದುವರೆಗೂ ಹೇಳಲಾಗದ, ಕೇಳಿರದ ಕಥೆಗಳು ಎಂದು ಬರೆದು ಲಿಂಕ್ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: RRR ಸಿನಿಮಾದಲ್ಲಿ ತಾಂತ್ರಿಕ ದೋಷ – ಚಿತ್ರಮಂದಿರದ ಗಾಜು ಪುಡಿ ಪುಡಿ ಮಾಡಿದ ಅಭಿಮಾನಿಗಳು

    ಸ್ವಯಂಸೇವಕ ಗುಂಪು ಈ ವೆಬ್ ಪರಿಚರಿಸಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯಾಣ ಮತ್ತು ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವ ಕುತೂಹಲಕಾರಿ ಕಥೆಗಳಿವೆ ಎಂದು ಬರೆದು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ವೆಬ್‍ಸೈಟ್ ಲಿಂಕ್ ಹಂಚಿಕೊಂಡಿದ್ದಾರೆ.

  • ದೇಶದ ವಿರುದ್ಧ ಸಂಚು ನಡೆಸುವವರ ಮೇಲೆ ಕಠಿಣ ಕ್ರಮ: ಅನುರಾಗ್ ಠಾಕೂರ್

    ದೇಶದ ವಿರುದ್ಧ ಸಂಚು ನಡೆಸುವವರ ಮೇಲೆ ಕಠಿಣ ಕ್ರಮ: ಅನುರಾಗ್ ಠಾಕೂರ್

    ನವದೆಹಲಿ: ದೇಶದ ವಿರುದ್ಧ ಸಂಚು ನಡೆಸುವವರ ಮೇಲೆ ಸರ್ಕಾರ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಎಚ್ಚರಿಕೆ ನೀಡಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನೇಕ ದೇಶಗಳು ಇದನ್ನು ಅರಿತುಕೊಂಡಿರುವುದು ನನಗೆ ಬಹಳ ಸಂತೋಷವಾಗಿದೆ. ಯೂಟ್ಯೂಬ್ ಕೂಡ ಈ ರೀತಿ ದೇಶದ್ರೋಹಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಚಾನೆಲ್‍ಗಳನ್ನು ನಿರ್ಬಂಧಿಸಲು ಕ್ರಮ ಕೈಗೊಂಡಿದೆ ಎಂದರು.

    ಇನ್ನೂ ಮುಂದೆಯೂ ಈ ರೀತಿಯ ದೇಶದ್ರೋಹಿ ಚುಟುವಟಿಕೆ ನಡೆದರೆ, ದೇಶದ ವಿರುದ್ಧ ಸುಳ್ಳು ಸುದ್ದಿಗಳನ್ನು ಹರಡುವುದು, ಸಮಾಜವನ್ನು ವಿಭಜಿಸುವಂತಹ ಯಾವುದೇ ಖಾತೆಗಳಿದ್ದರೂ ಅದನ್ನು ತಡೆಯಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಲಡಾಖ್‌ನಲ್ಲಿ ಚೀನಾದಿಂದ ಪ್ಯಾಂಗ್ಯಾಂಗ್‌ ಸೇತುವೆ ನಿರ್ಮಾಣ – ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

    ಗುಪ್ತಚರ ಏಜೆನ್ಸಿಗಳ ನಿಕಟ ಪ್ರಯತ್ನದಿಂದಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಕಳೆದ ಡಿಸೆಂಬರ್‍ನಲ್ಲಿ ಭಾರತ ವಿರೋಧಿ ಪ್ರಚಾರ ಮತ್ತು ನಕಲಿ ಸುದ್ದಿಗಳನ್ನು ಪ್ರಸಾರ ಮಾಡುತ್ತಿದ್ದ 20 ಯುಟ್ಯೂಬ್ ಚಾನೆಲ್‍ಗಳು ಹಾಗೂ 2 ವೆಬ್‍ಸೈಟ್‍ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿತ್ತು. ಇದನ್ನೂ ಓದಿ: ಬಾಲಕಿಯನ್ನು ಎಳೆದೊಯ್ದು ಮನೆ ಮುಂದೆಯೇ ಅತ್ಯಾಚಾರ ಮಾಡ್ದ

  • ಎಸ್‍ಪಿ ಆಡಳಿತವಿದ್ದಾಗ ಕೋಮುಗಲಭೆ, ಬಿಜೆಪಿಯಿಂದ ಅಭಿವೃದ್ಧಿ: ಅನುರಾಗ್ ಠಾಕೂರ್

    ಎಸ್‍ಪಿ ಆಡಳಿತವಿದ್ದಾಗ ಕೋಮುಗಲಭೆ, ಬಿಜೆಪಿಯಿಂದ ಅಭಿವೃದ್ಧಿ: ಅನುರಾಗ್ ಠಾಕೂರ್

    ಲಕ್ನೋ: ಸಮಾಜವಾದಿ ಪಕ್ಷವು ಉತ್ತರಪ್ರದೇಶವನ್ನು ಆಳುವಾಗ ರಾಜ್ಯವು ಕೋಮುಗಲಭೆಗೆ ಸಾಕ್ಷಿಯಾಗಿತ್ತು ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ವಾಗ್ದಾಳಿ ನಡೆಸಿದ್ದಾರೆ.

    ಆಗ್ರಾದಲ್ಲಿ ನಡೆದ ಎಂಪಿ ಕ್ರೀಡಾ ಸ್ಪರ್ಧೆಯ ಸಮಾರಂಭದಲ್ಲಿ ಪ್ರೇಕ್ಷಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷವು 2017 ರಲ್ಲಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮೊದಲು, ಸಮಾಜವಾದಿ ಪಕ್ಷ ಉತ್ತರಪ್ರದೇಶವನ್ನು ಆಳುತ್ತಿತ್ತು. ಆದರೆ ಆ ಸಂದರ್ಭದಲ್ಲಿ ರಾಜ್ಯವು ಕೋಮುಗಲಭೆಗೆ ಸಾಕ್ಷಿಯಾಗಿತ್ತು ಎಂದು ಆರೋಪಿಸಿದರು. ಇದನ್ನೂ ಓದಿ: ಉತ್ತರ ಪ್ರದೇಶ ಚುನಾವಣೆ ಮುಂದೂಡಿ, ರ‍್ಯಾಲಿ-ಸಮಾರಂಭ ನಿಲ್ಲಿಸಿ: ಚುನಾವಣಾ ಆಯೋಗ, ಕೇಂದ್ರಕ್ಕೆ ಕೋರ್ಟ್‌ ಒತ್ತಾಯ

    ನಮ್ಮ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಕ್ರೀಡಾಕೂಟಗಳನ್ನು ನಡೆಸುತ್ತಿವೆ. ದೇಶದಲ್ಲಿ ಅಥವಾ ದೇಶದ ಹೊರಗೆ ಯಾರು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೋ ಅವರನ್ನ ಯಾವುದೇ ಕಾರಣಕ್ಕೂ ಉಳಿಸುವುದಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಉತ್ತರ ಪ್ರದೇಶದಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ ಜಾರಿ

    ಕ್ರೀಡಾ ಕೂಟವನ್ನು ಉದ್ದೇಶಿಸಿ ಪ್ರತಿಕ್ರಿಯೆ ನೀಡಿದ ಅವರು, ಈ ಕ್ರೀಡಾ ಕೂಟವು ಪ್ರತಿ ವರ್ಷ ಎಲ್ಲಾ ಸಂಸದೀಯ ಕ್ಷೇತ್ರಗಳಲ್ಲಿ ನಡೆಸುತ್ತೇವೆ. ಇಂತಹ ಕ್ರೀಡಾ ಸ್ಪರ್ಧೆಗಳು ನಮ್ಮ ದೇಶದ ಆಟಗಾರಿಗೆ ಒಲಂಪಿಕ್ಸ್ ಕ್ರೀಡಾ ಕೂಟದಲ್ಲಿ ಉತ್ತಮ ಪ್ರದರ್ಶನ ನೀಡಲು ಸಹಾಯ ಆಗುತ್ತದೆ ಎಂದರು.

    ನಗರದ ಬಹುಬೇಡಿಕೆಯಾಗಿರುವ ಹೊಸ ಅಂತರಾಷ್ಟ್ರೀಯ ಕ್ರೀಡಾಂಗಣ ಆಗ್ರಾದಲ್ಲಿ ನಿರ್ಮಿಸುತ್ತೇವೆ. ಈ ಕ್ರೀಡಾಂಗಣದಲ್ಲಿ ಗ್ರ್ಯಾಂಡ್ ಕ್ರೀಡಾಕೂಟಗಳನ್ನು ಆಯೋಜಿಸುತ್ತೇವೆ. ಈ ಹಿಂದೆ ಕೇಂದ್ರ ಸಚಿವ ಎಸ್‍ಪಿ ಸಿಂಗ್ ಬಾಘೆಲ್, ಲೋಕಸಭೆ ಸಂಸದ ರಾಜ್‍ಕುಮಾರ್ ಚಹಾರ್, ಅವರು ಈ ಕ್ರೀಡಾಂಗಣ ನಿರ್ಮಿಸಲು ಒತ್ತಾಯಿಸಿದ್ದರು. ಆದರೆ ಹಿಂದಿನ ಸರ್ಕಾರವು ಈ ಕ್ರೀಡಾಂಗಣದ ಬೇಡಿಕೆಯನ್ನು ನಿರ್ಲಕ್ಷಿಸಿತ್ತು. ನಮ್ಮ ಸರ್ಕಾರವು ಜನಪರವಾದ ಸರ್ಕಾರವಾಗಿದೆ ಎಂದರು.

  • ತವರಿಗೆ ಬಂದ ಟೋಕಿಯೋ ಒಲಿಂಪಿಕ್ಸ್ ವೀರರಿಗೆ ಅದ್ಧೂರಿ ಸ್ವಾಗತ – ದೆಹಲಿಯಲ್ಲಿ ಕೇಂದ್ರ ಸರ್ಕಾರದಿಂದ ಸನ್ಮಾನ

    ತವರಿಗೆ ಬಂದ ಟೋಕಿಯೋ ಒಲಿಂಪಿಕ್ಸ್ ವೀರರಿಗೆ ಅದ್ಧೂರಿ ಸ್ವಾಗತ – ದೆಹಲಿಯಲ್ಲಿ ಕೇಂದ್ರ ಸರ್ಕಾರದಿಂದ ಸನ್ಮಾನ

    ನವದೆಹಲಿ: ಟೋಕಿಯೋ ಒಲಂಪಿಕ್ಸ್ ನಲ್ಲಿ ಅದ್ವಿತೀಯ ಸಾಧನೆ ಮೆರೆದು ತಾಯ್ನಾಡಿಗೆ ಮರಳಿದ ಕ್ರೀಡಾಪಟುಗಳಿಗೆ ದೆಹಲಿಯಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ. ಚಿನ್ನದ ಪದಕ ವಿಜೇತ ನೀರಜ್, ಕಂಚಿನ ತಾರೆ ಲವ್ಲಿನಾ, ಕಂಚಿನ ವೀರ ಭಜರಂಗ್ ಪುನಿಯಾ, ಪುರುಷ ಮತ್ತು ಮಹಿಳಾ ಹಾಕಿ ತಂಡದ ಸದಸ್ಯರಿಗೆ ದೆಹಲಿ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳು ಆತ್ಮೀಯ ಸ್ವಾಗತ ನೀಡಿದ್ರು.

    ಏರ್‍ಪೋರ್ಟ್ ಮುಂದೆ ಸಾವಿರಾರು ಅಭಿಮಾನಿಗಳು ಜಮಾಯಿಸಿದ್ದನ್ನು ಕಂಡು ಬೇರೊಂದು ಮಾರ್ಗದಲ್ಲಿ ಕ್ರೀಡಾಪಟುಗಳನ್ನು ಹೊರಗೆ ಕರೆತಂದರೂ, ಅಭಿಮಾನಿಗಳು ಬಿಡಲಿಲ್ಲ. ಚಿನ್ನದ ಭರ್ಜಿ ಭೀಮನನ್ನು ಅಭಿಮಾನಿಗಳು ಭುಜದ ಮೇಲೆ ಹೊತ್ತು ಸಂಭ್ರಮಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯ್ತು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ರು. ಏರ್ ಪೋರ್ಟ್ ನಿಂದ ಹೋಟೆಲ್ ಅಶೋಕವರೆಗೆ ತೆರೆದ ವಾಹನಗಳಲ್ಲಿ ಒಲಂಪಿಕ್ಸ್ ವೀರರ ಮೆರವಣಿಗೆ ನಡೀತು. ನಂತರ ಒಲಂಪಿಕ್ಸ್ ವೀರರನ್ನು ಕೇಂದ್ರ ಸರ್ಕಾರ ಸನ್ಮಾನಿಸಿತು.

    ಪದೇ ಪದೇ ಪದಕ ನೋಡುತ್ತಿದ್ದೇನೆ:
    ವೇದಿಕೆ ಮೇಲೆ ಬಂದ ಚಿನ್ನದ ಹುಡುಗ ನೀರಜ್ ಚೋಪ್ರಾ ಎಲ್ಲರಿಗೂ ಮೆಡಲ್ ತೋರಿಸಿ ಮಾತನಾಡಿದರು. ಇದು ದೇಶದ ಪದಕ ನನ್ನದಲ್ಲ. ಈ ಪದಕ ಬಂದಾಗಿನಿಂದ ಸರಿಯಾಗಿ ನಿದ್ದೆ, ಊಟ ಸಹ ಮಾಡಿಲ್ಲ. ಅಂದಿನಿಂದ ಇಂದಿನವರೆಗೂ ಜೇಬಿನಲ್ಲಿಯೇ ಪದಕ ಇಟ್ಟುಕೊಂಡು ಓಡಾಡುತ್ತಿದ್ದೇನೆ. ಜೇಬಿನಿಂದ ಪದೇ ಪದೇ ಪದಕ ತೆಗೆದು ನೋಡಿ ಸಂಭ್ರಮಿಸುತ್ತಿದ್ದೇನೆ. ಇಂದು ಪದಕ ಬಂದಿದ್ದರ ಬಗ್ಗೆ ಹಲವು ವಿಷಯಗಳನ್ನು ಹೇಳಬಹುದು. ಆದ್ರೆ ಈಗ ಆ ವಿಷಯಗಳು ಬೇಡ. ನನ್ನನ್ನು ಬೆಂಬಲಿಸಿ ಗೌರವಿಸುತ್ತಿರುವ ಎಲ್ಲರಿಗೂ ಧನ್ಯವಾದ. ಓಲಿಂಪಿಕ್ಸ್ ನನ್ನ ಜೀವನದ ಬಹುದೊಡ್ಡ ಕನಸು ಅಗಿತ್ತು. ಸಿಕ್ಕ ಅವಕಾಶವನ್ನು ಮಿಸ್ ಮಾಡಿಕೊಳ್ಳಲು ನನಗಿಷ್ಟವಿರಲಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಭಾರತಕ್ಕೆ ಮತ್ತೊಂದು ರಜತ ಪದಕ – ಕುಸ್ತಿಯಲ್ಲಿ ಬೆಳ್ಳಿ ಗೆದ್ದ ರವಿ

    ಇದೇ ವೇಳೆ ಮಾತನಾಡಿದ ಭಜರಂಗ್ ಪುನಿಯಾ, ಕಂಚಿನ ಪದಕಕ್ಕಾಗಿ ಆಡುವಾಗ ನಾನು ನೀ ಕ್ಯಾಪ್ ಸಹ ಧರಿಸಿರಲಿಲ್ಲ. ಗಾಯವಾದ್ರೂ ಪರವಾಗಿಲ್ಲ, ಮರುದಿನ ವಿಶ್ರಾಂತಿ ಪಡೆದುಕೊಳ್ಳಬಹುದು ಅಂತ ಅಖಾಡ ಪ್ರವೇಶಿಸಿದೆ ಅಂತ ಎಂದರು. ಲವ್ಲಿನಾ ಮಾತನಾಡಿ, ನಾನು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಚಿನ್ನ ತರಲು ಪ್ರಯತ್ನಿಸುತ್ತೇನೆ ಎಂದು ದೇಶದ ಜನತೆಗೆ ಭರವಸೆ ನೀಡಿದರು. ಇದನ್ನೂ ಓದಿ: 200 ರಿಂದ 4ನೇ ಸ್ಥಾನಕ್ಕೆ ಜಿಗಿತ – ಕೊನೆ ಕ್ಷಣದಲ್ಲಿ ಅದಿತಿಗೆ ತಪ್ಪಿತು ಪದಕ

    ಹೊಸ ಭಾರತದ ಹೊಸ ಹೀರೋಗಳು:
    ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕ ತಂಡ ಕ್ರೀಡಾಳುಗಳ ಹೆಸರಿನಲ್ಲಿ ಈ ಸಂಜೆ ಇತಿಹಾಸದಲ್ಲಿ ದಾಖಲಾಗಲಿದೆ. ಎಲ್ಲ ವಿಜೇತರಿರೂ 135 ಕೋಟಿ ಭಾರತೀಯರ ಪರವಾಗಿ ಶುಭ ಕೋರುತ್ತೇನೆ. ನೀರಜ್ ಚೋಪ್ರಾ ಕೇವಲ ಪದಕ ಮಾತ್ರ ಗೆದ್ದಿಲ್ಲ, ಬದಲಾಗಿ ಇಡೀ ಭಾರತೀಯರ ಹೃದಯವನ್ನು ಗೆದ್ದಿದ್ದಾರೆ. ಎಲ್ಲ ಅಥ್ಲೀಟ್ ಗಳು ಹೊಸ ಭಾರತದ ಹೊಸ ಹೀರೋಗಳು. ಮುಂದಿನ ಒಲಿಂಪಿಕ್ಸ್ ನಲ್ಲಿ ನಮ್ಮ ಕ್ರೀಡಾಳುಗಳು ಚೆನ್ನಾಗಿ ಪ್ರದರ್ಶನ ನೀಡಲಿ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್ ಹೇಳಿದರು. ಇದನ್ನೂ ಓದಿ: ಶತಕೋಟಿ ಭಾರತೀಯರ ಕನಸು ನನಸು – ಚಿನ್ನ ಗೆದ್ದ ನೀರಜ್

  • 5 ವರ್ಷದಲ್ಲಿ ಬ್ಯಾಂಕುಗಳಿಗೆ ವಂಚಿಸಿದವರೆಷ್ಟು ಮಂದಿ- ವಿಪಕ್ಷದ ಪ್ರಶ್ನೆಗೆ ಠಾಕೂರ್ ಉತ್ತರ

    5 ವರ್ಷದಲ್ಲಿ ಬ್ಯಾಂಕುಗಳಿಗೆ ವಂಚಿಸಿದವರೆಷ್ಟು ಮಂದಿ- ವಿಪಕ್ಷದ ಪ್ರಶ್ನೆಗೆ ಠಾಕೂರ್ ಉತ್ತರ

    ನವದೆಹಲಿ: ಕಳೆದ ಐದು ವರ್ಷದಲ್ಲಿ ಬ್ಯಾಂಕ್‍ಗಳಿಗೆ ವಂಚಿಸಿ ವಿದೇಶಕ್ಕೆ ಹೋದ ಪಲಾಯಾನವಾದಿಗಳ ಸಂಖ್ಯೆ ಎಷ್ಟು ಎಂಬ ಪ್ರಶ್ನೆಗೆ ವಿತ್ತ ರಾಜ್ಯ ಸಚಿವ ಅನುರಾಗ್ ಠಾಕೂರ್ ಲೋಕಸಭೆ ಅಧಿವೇಶನದಲ್ಲಿ ಉತ್ತರ ನೀಡಿದ್ದಾರೆ. ಬ್ಯಾಂಕ್ ಗಳಿಗೆ ವಂಚನೆ ಕುರಿತು ವಿಪಕ್ಷಗಳು ಸರ್ಕಾರದ ವಿರುದ್ಧ ಪ್ರಶ್ನೆ ಮಾಡುತ್ತಿರುತ್ತವೆ. ಮಾನ್ಸೂನ್ ಅಧಿವೇಶನದ ಮೊದಲ ದಿನವೇ ಬ್ಯಾಂಕ್ ವಂಚನೆಕಾರರ ಬಗ್ಗೆ ಮಾಹಿತಿ ಕೇಳಲಾಗಿತ್ತು.

    ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಪ್ರಕಾರ ಕಳೆದ ಐದು ವರ್ಷದಲ್ಲಿ ಬರೋಬ್ಬರಿ 38 ಆರೋಪಿಗಳು ಬ್ಯಾಂಕ್‍ಗಳಿಗೆ ವಂಚಿಸಿ ವಿದೇಶಗಳಿಗೆ ಪಲಾಯಾನ ಮಾಡಿದ್ದಾರೆ. ಈ ಸಂಖ್ಯೆ ಜನವರಿ 1, 2015 ರಿಂದ ಡಿಸೆಂಬರ್ 31, 2019ರ ನಡುವೆ ಬ್ಯಾಂಕ್ ವ್ಯವಹಾರಗಳಲ್ಲಾದ ವಂಚನೆಗಳ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿದೆ. ಈ ಎಲ್ಲ ಪ್ರಕರಣಗಳ ತನಿಖೆಯನ್ನ ಸಿಬಿಐ ಮೂಲಕ ನಡೆಸಲಾಗುತ್ತಿದೆ ಎಂದು ವಿತ್ತ ರಾಜ್ಯ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ.

    ಮಲ್ಯ, ನೀರವ್ ಮೋದಿ ಹೆಸ್ರು ಸೇರ್ಪಡೆ: 38 ಆರೋಪಿಗಳಲ್ಲಿ ವಿಜಯ್ ಮಲ್ಯ, ನೀರವ್ ಮೋದಿ ಹೆಸರುಗಳಿವೆ. ವಿವಿಧ ಬ್ಯಾಂಕುಗಳಿಗೆ ವಿಜಯ್ ಮಲ್ಯ 9 ಸಾವಿರ ಕೋಟಿ ವಂಚಿಸಿದ್ದು, ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 12 ಸಾವಿರ ಕೋಟಿ ವಂಚಿಸಿ ವಿದೇಶದಲ್ಲಿ ಉಳಿದುಕೊಂಡಿದ್ದಾರೆ. ಆರೋಪಿಗಳ ಪಟ್ಟಿಯಲ್ಲಿ ಈ ಮೂವರ ಕುಟುಂಬಸ್ಥರ ಹೆಸರುಗಳಿವೆ. ಇದರ ಜೊತೆಗೆ 15 ಸಾವಿರ ಕೋಟಿ ಫ್ರಾಡ್ ಆರೋಪಿ ಸಂದೇಸಾರ ಸಮೂಹದ ಮಾಲೀಕ ಮತ್ತು ಆಪ್ತರು ಸಹ ದೇಶ ತೊರೆದಿದ್ದಾರೆ. ಇದನ್ನೂ ಓದಿ: ಉದ್ಯಮಿ ವಿಜಯ್ ಮಲ್ಯಗೆ ಹಿನ್ನಡೆ – ಪುನರ್ ಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್

    ಜನವರಿ 4, 2019ರಂದು ಸರ್ಕಾರ ಬ್ಯಾಂಕ್‍ಗಳಿಗೆ ವಂಚನೆ ಮಾಡಿದ ಆರೋಪಿಗಳ ಸಂಖ್ಯೆ 27 ಎಂದು ಹೇಳಿತ್ತು. ಎರಡೂವರೆ ವರ್ಷದಲ್ಲಿ ಈ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ದೇಶದ ಹಣವನ್ನ ಕೊಳ್ಳೆ ಹೊಡೆದು ಹೋಗುವವರನ್ನು ತಡೆಯುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಪಕ್ಷ ನಾಯಕರು ಕಿಡಿ ಕಾರಿದರು. ಇದನ್ನೂ ಓದಿ: ವಿಜಯ್ ಮಲ್ಯ ಭಾರತದ ಮೊದಲ ‘ದೇಶಭ್ರಷ್ಟ ಆರ್ಥಿಕ ಅಪರಾಧಿ’

    ಇದೇ ವೇಳೆ ಸದನದಲ್ಲಿ ಉತ್ತರಿಸಿದ ಅನುರಾಗ್ ಠಾಕೂರ್, ವಿದೇಶಕ್ಕೆ ಓಡಿ ಹೋಗಿರುವ 20 ಆರೋಪಿಗಳ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಅಂತರಾಷ್ಟ್ರೀಯ ಇಂಟರ್‍ಪೋಲ್ ಸಂಸ್ಥೆಗೂ ಪ್ರಕರಣಗಳ ಮಾಹಿತಿ ನೀಡಲಾಗಿದೆ. ಆರೋಪಿಗಳನ್ನು ಭಾರತದ ವಶಕ್ಕೆ ನೀಡುವಂತೆ ಅಲ್ಲಿ ಸರ್ಕಾರಗಳಿಗೆ ಮನವಿಯನ್ನ ಸಹ ಸಲ್ಲಿಸಲಾಗಿದ ಎಂದರು. ಇದನ್ನೂ ಓದಿ: ನನ್ನನ್ನು ಭಾರತಕ್ಕೆ ಹಸ್ತಾಂತರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ – ನೀರವ್ ಮೋದಿ

  • ಠಾಕೂರ್, ಮಿಶ್ರಾ ವಿರುದ್ಧ ಯಾಕೆ ಎಫ್‍ಐಆರ್ ಹಾಕಬಾರದು – ಕೇಂದ್ರ, ದೆಹಲಿ ಸರ್ಕಾರಕ್ಕೆ ಸುಪ್ರೀಂ ಛೀಮಾರಿ

    ಠಾಕೂರ್, ಮಿಶ್ರಾ ವಿರುದ್ಧ ಯಾಕೆ ಎಫ್‍ಐಆರ್ ಹಾಕಬಾರದು – ಕೇಂದ್ರ, ದೆಹಲಿ ಸರ್ಕಾರಕ್ಕೆ ಸುಪ್ರೀಂ ಛೀಮಾರಿ

    – ಸಂಯಮ ಕಾಪಾಡುವಂತೆ ಮೋದಿ ಮನವಿ
    – ಪ್ರಧಾನಿ, ಶಾ ರಾಜೀನಾಮೆಗೆ ವಿರೋಧ ಪಕ್ಷಗಳ ಆಗ್ರಹ

    ನವದೆಹಲಿ: ಹಿಂಸಾಚಾರ ಸಂಬಂಧ ಕೇಂದ್ರ ಮತ್ತು ದೆಹಲಿ ಸರ್ಕಾರ ಹಾಗೂ ಪೊಲೀಸರಿಗೆ ದೆಹಲಿ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಗಳು ಛೀಮಾರಿ ಹಾಕಿವೆ.

    1984ರ ಸಿಖ್ ದಂಗೆಯಂಥ ಪರಿಸ್ಥಿತಿ ಪುನರಾವರ್ತನೆ ಆಗಬಾರದು ಅಂತ ಸರ್ಕಾರಕ್ಕೆ ದೆಹಲಿ ಹೈಕೋರ್ಟ್ ಆದೇಶಿಸಿದೆ. ಹಿಂಸಾಚಾರಕ್ಕೆ ಪ್ರೇರಣೆ ಎನ್ನಲಾಗ್ತಿರೋ ಬಿಜೆಪಿ ನಾಯಕರಾದ ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಂಸದರಾದ ಪ್ರವೇಶ್ ವರ್ಮಾ, ಅಭಯ್ ವರ್ಮಾ ಹಾಗೂ ಮಾಜಿ ಶಾಸಕ ಕಪಿಲ್ ಮಿಶ್ರಾ ಹೇಳಿಕೆಗಳ ವೀಡಿಯೋ ಕ್ಲಿಪ್ಪಿಂಗ್ಸ್ ಗಳನ್ನು ಕೋರ್ಟ್ ನಲ್ಲಿ ಪ್ಲೇ ಮಾಡಲಾಯಿತು.

    ಸೂಕ್ಷ್ಮವಾಗಿ ಆಲಿಸಿದ ಜಡ್ಜ್ ಮುರಳೀಧರ್, ಇಂಥ ಹೇಳಿಕೆಗೆಳು ರಿಪೀಟ್ ಆಗಿವೆ. ಸಾರ್ವಜನಿಕ ಆಸ್ತಿ ನಷ್ಟ ಮಾಡೋವ್ರ ಮೇಲೆ ಎಫ್‍ಐಆರ್ ಹಾಕೋ ನೀವ್ಯಾಕೆ ಇಂಥ ಹೇಳಿಕೆ ಕೊಡೋವ್ರ ಮೇಲೆ ಹಾಕಲ್ಲ. ಸಮಾಜಕ್ಕೆ ತಪ್ಪು ಸಂದೇಶ ಹೋಗಲ್ವಾ ಅಂತ ಪೊಲೀಸರನ್ನು ಪ್ರಶ್ನಿಸಿದ್ರು.

    ಇದಕ್ಕೆ ಉತ್ತರಿಸಿದ ದೆಹಲಿ ಸಾಲಿಟರ್ ಜನರಲ್ ತುಷಾರ್ ಮೆಹ್ತಾ, ದೆಹಲಿ ಪೊಲೀಸರೇನು ಪಿಕ್‍ನಿಕ್‍ಗೆ ಹೋಗಿರಲಿಲ್ಲ. ಅವರ ಮೇಲೂ ಆ್ಯಸಿಡ್ ದಾಳಿಗಳು ನಡೆದಿವೆ ಎಂದರು

    ಇನ್ನೊಂದು ಕಡೆ ನಿಮ್ಮಲ್ಲಿ ವೃತ್ತಿಪರತೆ ಇಲ್ಲವೇ? ಅಂತ ದೆಹಲಿ ಪೊಲೀಸರನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಹಿಂಸಾಚಾರ ಸಂಭವಿಸಿದ ತಕ್ಷಣವೇ ಕಾರ್ಯಪ್ರವೃತ್ತ ಆಗಿದ್ರೆ ಇಷ್ಟು ಹಾನಿಯನ್ನು ತಡೆಯಬಹುದಿತ್ತು. ಇದು ನಿಮ್ಮ ವಿಫಲತೆಯನ್ನು ತೋರಿಸ್ತಿದೆ ಅಂತ ಜಡ್ಜ್ ಕೆ.ಎಂ. ಜೋಸೆಫ್ ಬಿಸಿಮುಟ್ಟಿಸಿದ್ದಾರೆ.

    ಪ್ರಚೋದನಾಕಾರಿ ಹೇಳಿಕೆ ನೀಡಿದವರ ವಿರುದ್ಧ ಯಾಕೆ ಕ್ರಮಕೈಗೊಂಡಿಲ್ಲ. ಯಾರಿಗಾಗಿ ಕಾಯುತ್ತಾ ಕೂತಿದ್ದೀರಿ ಅಂತ ಪ್ರಶ್ನಿಸಿದ್ದಾರೆ. ಪ್ರಕರಣದಲ್ಲಿ ದೆಹಲಿ ಹೈಕೋರ್ಟೇ ತೀರ್ಮಾನ ಕೈಗೊಳ್ಳಲಿದೆ ಅಂತ ಸುಪ್ರೀಂಕೋರ್ಟ್ ಹೇಳಿದೆ.

    ಮೋದಿ ಮನವಿ:
    ಶಕ್ತಿಕೇಂದ್ರದಲ್ಲೇ ಸೃಷ್ಟಿಯಾಗಿರೋ ಇಂಥಾ ಹಿಂಸಾಚಾರದ ಬಗ್ಗೆ ಪ್ರಧಾನಿ ಮೋದಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದು, ಶಾಂತಿ ಕಾಪಾಡುವಂತೆ ಟ್ವಿಟರ್ ನಲ್ಲಿ ಮನವಿ ಮಾಡಿದ್ದಾರೆ.

    ಇನ್ನು,ಸಾವು-ನೋವಿನಲ್ಲೂ ರಾಜಕೀಯ ಕೆಸರೆರಚಾಟ ನಡೀತಿದೆ. ಇಷ್ಟೆಲ್ಲಾ ಹಿಂಸಾಚಾರಕ್ಕೆ ಕೇಂದ್ರ ಸರ್ಕಾರವೇ ಜವಾಬ್ದಾರಿ. ಗೃಹ ಸಚಿವರೇ ನೇರಹೊಣೆ. ಅವರು ಎಲ್ಲೋಗಿದ್ರು. ಈ ಕ್ಷಣವೇ ರಾಜೀನಾಮೆ ಕೊಡ್ಬೇಕು ಅಂತ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕಿಡಿಕಾರಿದ್ರು.

    ದ್ವೇಷ ಭಾಷಣಗಳ ಮೂಲಕ ಉದ್ದೇಶ ಪೂರ್ವಕವಾಗಿಯೇ ದೆಹಲಿಯಲ್ಲಿ ಭಯದ ವಾತಾವರಣ ಸೃಷ್ಟಿಸಲಾಗ್ತಿದೆ ಅಂತ ದೂರಿದ್ರು. ನಾಳೆ ಪ್ರತಿಭಟನೆ ಮಾಡಲಿರುವ ಕಾಂಗ್ರೆಸ್, ರಾಷ್ಟ್ರಪತಿಗಳಿಗೆ ದೂರು ನೀಡಲಿದೆ. ಆದರೆ, ಸೋನಿಯಾ ಗಾಂಧಿ ಡರ್ಟಿ ಪಾಲಿಟಿಕ್ಸ್ ಮಾಡ್ತಿದ್ದಾರೆ ಅಂತ ಕೇಂದ್ರ ಸಚಿವರಾದ ಪ್ರಕಾಶ್ ಜಾವ್ಡೇಕರ್, ರವಿಶಂಕರ್ ಪ್ರಸಾದ್ ತಿರುಗೇಟು ನೀಡಿದರು.

    ಸೋನಿಯಾ ಗಾಂಧಿ ಅವರ ಹೇಳಿಕೆ ದುರಾದೃಷ್ಟ. ಖಂಡನೀಯ. ಇಂಥ ಸಮಯದಲ್ಲಿ ಎಲ್ಲಾ ಪಕ್ಷಗಳು ಶಾಂತಿ ಕಾಪಾಡುವಂತೆ ಮನವಿ ಮಾಡ್ಬೇಕು. ಅದನ್ನು ಬಿಟ್ಟು ಸರ್ಕಾರವನ್ನು ನಿಂದಿಸೋದು, ಕೊಳಕು ರಾಜಕೀಯ ಸರಿಯಲ್ಲ ಅಂದ್ರು. ಈ ಮಧ್ಯೆ, ಅಮಿತ್ ಶಾ ರಾಜೀನಾಮೆ ಕೊಡ್ಬೇಕು ಅಂತ ಎನ್‍ಸಿಪಿಯ ಸುಪ್ರಿಯಾ ಸುಳೆ ಹೇಳಿದ್ರೆ, ದೆಹಲಿಯಲ್ಲಿ ಸೇನೆಯ ನಿಯೋಜನೆ ಬಿಟ್ಟರೆ ಬೇರೆ ದಾರಿಯಿಲ್ಲ ಅಂತ ಸಿಪಿಎಂ ಸೀತಾರಾಂ ಯೆಚೂರಿ ಹೇಳಿದ್ದಾರೆ.

  • ಸಂಸತ್ ಆವರಣದಲ್ಲಿ ಕಸ ಗುಡಿಸಿದ ಹೇಮಾ ಮಾಲಿನಿ, ಅನುರಾಗ್ ಠಾಕೂರ್

    ಸಂಸತ್ ಆವರಣದಲ್ಲಿ ಕಸ ಗುಡಿಸಿದ ಹೇಮಾ ಮಾಲಿನಿ, ಅನುರಾಗ್ ಠಾಕೂರ್

    – ಟ್ರೋಲ್ ಆದ ಹೇಮಾ ಮಾಲಿನಿ

    ನವದೆಹಲಿ: ಕೇಂದ್ರ ಹಣಕಾಸು ರಾಜ್ಯ ಸಚಿವ ಅನುರಾಗ್ ಠಾಕೂರ್ ಹಾಗೂ ಸಂಸದೆ ಹೇಮಾ ಮಾಲಿನಿ ಸೇರಿದಂತೆ ಅನೇಕರು ಸಂಸತ್ ಆವರಣವನ್ನು ಸ್ವಚ್ಛಗೊಳಿಸಿದರು.

    ಸ್ವಚ್ಛ ಭಾರತ್ ಅಭಿಯಾನದ ನಿಮಿತ್ತ ಇಂದು ಸಚಿವ ಅನುರಾಗ್ ಠಾಕೂರ್ ಸೇರಿದಂತೆ ಕೆಲ ಸಂಸದರು ಕಸ ಗುಡಿಸಿದರು. ಆದರೆ ಹೇಮಾ ಮಾಲಿನಿ ಅವರು ಕಸ ಗುಡಿಸಲು ಬಾರದೇ ಪೇಚಾಡಿದರು.

    ಮಹಾತ್ಮ ಗಾಂಧಿಯವರ 150ನೇ ಜನ್ಮದಿನದ ನಿಮಿತ್ತ ಸಂಸತ್ ಆವರಣದಲ್ಲಿ ಸ್ವಚ್ಛ ಭಾರತ್ ಅಭಿಯಾನ ನಡೆಸಲು ಸ್ಪೀಕರ್ ಅವರು ಅವಕಾಶ ನೀಡಿದ್ದು ಶ್ಲಾಘನೀಯ. ಮುಂದಿನ ವಾರ ನನ್ನ ಕ್ಷೇತ್ರವಾದ ಮಥುರಾಕ್ಕೆ ತೆರಳುತ್ತೇನೆ. ಅಲ್ಲಿಯೂ ಸ್ವಚ್ಛ ಭಾರತ್ ಅಭಿಯಾನ ಮಾಡುತ್ತೇನೆ ಎಂದು ಸಂಸದೆ ಹೇಮಾ ಮಾಲಿನಿ ಹೇಳಿದ್ದಾರೆ.

    ಕಸ ಗುಡಿಸಲು ಪೇಚಾಡಿದ ಹೇಮಾ ಮಾಲಿನಿ ಅವರನ್ನು ನೆಟ್ಟಿಗರು ಕುಟುಕಿದ್ದಾರೆ. ‘ಹೇಮಾ ಜಿ, ಚಲನಚಿತ್ರಗಳಲ್ಲಿ ಮಾಡಿದ್ದಕ್ಕಿಂತ ಇಂದು ಸಂಸತ್ ಆವರಣದಲ್ಲಿ ಮಾಡಿದ ನಟನೆ ಚನ್ನಾಗಿದೆ ಎಂದು ವಿಕಾಸ್ ವಿಕ್ರಂ ತಿವಾರಿ ಎಂಬವರು ವ್ಯಂಗ್ಯವಾಡಿದ್ದಾರೆ.

    ಹೇಮಾ ಮಾಲಿನಿ ಅವರೇ ನೀವು ಪೊರಕೆಯನ್ನು ಹಿಡಿಯುವುದನ್ನು ಮೊದಲು ಕಲಿಯಬೇಕು. ನಿಮ್ಮ ಮನೆಯಲ್ಲಿ ಕೆಲಸ ಮಾಡುವ ನೌಕರರ ಜೊತೆಗೆ ನೀವು ಮೊದಲು ಕೈಗೂಡಿಸಿ ಎಂದು ನೆಟ್ಟಿಗರು ಲೇವಡಿ ಮಾಡಿದ್ದಾರೆ.