Tag: ಅನುರಾಗ್ ಠಾಕೂರ್

  • ಸಿನಿಮಾ ಪೈರಸಿ ಮಾಡಿದರೆ 3 ವರ್ಷ ಜೈಲೂಟ ಫಿಕ್ಸ್: ಸಚಿವ ಠಾಕೂರ್

    ಸಿನಿಮಾ ಪೈರಸಿ ಮಾಡಿದರೆ 3 ವರ್ಷ ಜೈಲೂಟ ಫಿಕ್ಸ್: ಸಚಿವ ಠಾಕೂರ್

    ಲವಾರು ವರ್ಷಗಳಿಂದ ಪೈರಸಿ (Piracy) ಹಾವಳಿಗೆ ಚಿತ್ರೋದ್ಯಮ ನಲುಗಿ ಹೋಗಿತ್ತು. ಪೈರಸಿಯನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಸರಕಾರಗಳನ್ನು ಚಿತ್ರೋದ್ಯಮ ಒತ್ತಾಯಿಸುತ್ತಲೇ ಬಂದಿತ್ತು. ಇದೀಗ ಪೈರಸಿ ಕಡಿವಾಣಕ್ಕೆ ಕೇಂದ್ರ ಸರಕಾರ ಮುಂದಾಗಿದೆ. ಭಾರೀ ಮೊತ್ತದ ದಂಡದ ಜೊತೆಗೆ ಜೈಲು ಶಿಕ್ಷೆಯನ್ನೂ ವಿಧಿಸುವಂತಹ ಬಿಲ್ ಅನ್ನೂ ಪಾಸು ಮಾಡಿದೆ.

    ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ (Anurag Thakur) ಲೋಕಸಭೆಯಲ್ಲಿ ‘ಸಿನಿಮಾಟೋಗ್ರಫಿ ಬಿಲ್ 2023 (Cinematography Bill 2023) ಅನ್ನು ಮಂಡಿಸುವ ವೇಳೆ ಪೈರಸಿ ಮಾಡುವವರಿಗೆ ಇನ್ಮುಂದೆ ಕೋಟಿಗಟ್ಟಲೆ ದಂಡ ಹಾಕಲು ನಿರ್ಧರಿಸಿರುವ ಕುರಿತು ವಿವರಣೆ ನೀಡಿದರು. ಯಾವುದೇ ಸಿನಿಮಾವನ್ನು ಪೈರಸಿ ಮಾಡಿದರೆ, ಸಿನಿಮಾಗೆ ಆದ ಖರ್ಚಿನ ಶೇಕಡಾ 5ರಷ್ಟು ದಂಡ ಹಾಕಲಾಗುವುದು ಎಂದಿದ್ದಾರೆ.

     

    ‘ಚಿತ್ರರಂಗದ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸುತ್ತಿದ್ದೇವೆ. ಸಿನಿಮಾ ಪೈರಸಿ ಮಾಡಿದರೆ ಭಾರೀ ಮೊತ್ತದ ದಂಡದ ಜೊತೆಗೆ ಮೂರು ವರ್ಷಗಳ ಜೈಲು ಶಿಕ್ಷೆ ಕೂಡ ವಿಧಿಸಲಾಗುವುದು. ಅಲ್ಲದೇ, ಪೈರಸಿ ಮಾಡುವ ವೆಬ್ ಸೈಟ್ ಗಳನ್ನು ಬ್ಲಾಕ್ ಮಾಡಲಾಗುವುದು. ಅಲ್ಲದೇ ಸೆನ್ಸಾರ್ (Censorship)ಪತ್ರದಲ್ಲೂ ಕೆಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ’ ಎಂದರು ಅನುರಾಗ್ ಠಾಕೂರ್.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಆಪನ್‌ಹೈಮರ್’ ಚಿತ್ರದಲ್ಲಿ ಸೆಕ್ಸ್ ಮಾಡುವಾಗ ಭಗವದ್ಗೀತೆ ಓದು: ಸೆನ್ಸಾರ್ ಮಂಡಳಿ ಪ್ರಶ್ನೆ ಮಾಡಿದ ಸಚಿವ ಠಾಕೂರ್

    ‘ಆಪನ್‌ಹೈಮರ್’ ಚಿತ್ರದಲ್ಲಿ ಸೆಕ್ಸ್ ಮಾಡುವಾಗ ಭಗವದ್ಗೀತೆ ಓದು: ಸೆನ್ಸಾರ್ ಮಂಡಳಿ ಪ್ರಶ್ನೆ ಮಾಡಿದ ಸಚಿವ ಠಾಕೂರ್

    ಹಾಲಿವುಡ್ ನ ಆಪನ್ ಹೈಮರ್ ಚಿತ್ರಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಈ ಚಿತ್ರದಲ್ಲಿ ಸೆಕ್ಸ್ (Sex) ಮಾಡುವಾಗ ಕಥಾನಾಯಕ ಭಗವದ್ಗೀತೆಯ ಸಾಲುಗಳನ್ನು ಓದುವ ದೃಶ್ಯವಿದೆ. ಈ ದೃಶ್ಯವು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಈ ಕುರಿತಂತೆ ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಕೂಡ ಪ್ರತಿಕ್ರಿಯೆ ನೀಡಿದ್ದು, ‘ಈ ದೃಶ್ಯವನ್ನು ಸಿನಿಮಾದಲ್ಲಿ ಹೇಗೆ ಬಿಡಲಾಯಿತು ಎಂದು ಸೆನ್ಸಾರ್ ಮಂಡಳಿಯ ಅಧಿಕಾರಿಯನ್ನು ಕೇಳಲಾಗುವುದು. ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

    ಹಾಲಿವುಡ್‌ನ ‘ಆಪನ್‌ಹೈಮರ್’ (Oppenheimer) ಸಿನಿಮಾದ ರಿಲೀಸ್‌ಗೂ ಮುನ್ನವೇ ಭರ್ಜರಿ ಡಿಮ್ಯಾಂಡ್ ಶುರುವಾಗಿತ್ತು. ಜುಲೈ 21ರಂದು ರಿಲೀಸ್ ಆಗಿರೋ ಹಾಲಿವುಡ್‌ನ ಈ ಚಿತ್ರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಹೌಸ್‌ಫುಲ್ ಪ್ರದರ್ಶನ ಕೂಡ ಕಾಣುತ್ತಿದೆ. ಆದರೆ ಈ ಸಿನಿಮಾದಲ್ಲಿನ ಆ ಒಂದು ದೃಶ್ಯಕ್ಕೆ ಭಾರೀ ವಿರೋಧ  ವ್ಯಕ್ತವಾಗಿದೆ.

    ರಿಲೀಸ್ ಆಗುವ ಮುನ್ನವೇ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ಆಪನ್‌ಹೈಮರ್’ ಸಿನಿಮಾ, 2 ಸಾವಿರ ರೂಪಾಯಿಗೆ ಟಿಕೆಟ್ ಸೇಲ್ ಆಗಿತ್ತು. ರಿಲೀಸ್ ಬಳಿಕ ಈ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ. ಈ ಬೆನ್ನಲ್ಲೇ ಸಿನಿಮಾದಲ್ಲಿ ಹಿಂದೂ ಧರ್ಮಕ್ಕೆ ಅವಮಾನವಾಗಿದೆ ಎಂದು ಚಿತ್ರತಂಡದ ವಿರುದ್ಧ ಭಾರತೀಯರು ಗರಂ ಆಗಿದ್ದಾರೆ. ಹೀರೋ ಸೆಕ್ಸ್ ಮಾಡುವಾಗ ಭಗವದ್ಗೀತೆ ಹೇಳುವ ಸಂಭಾಷಣೆ ಬಗ್ಗೆ ಕೇಂದ್ರ ಸರ್ಕಾರದ ಮಾಹಿತಿ ಆಯುಕ್ತ ಉದಯ್ ಮಹುರ್ಕರ್ ತಕರಾರು ತೆಗೆದಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಅವರು ‘ಆಪನ್‌ಹೈಮರ್’ ಚಿತ್ರತಂಡಕ್ಕೆ ಪ್ರಶ್ನೆ ಮಾಡಿದ್ದಾರೆ. ಈ ದೃಶ್ಯಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ. ಇದನ್ನೂ ಓದಿ:ಉಪ್ಪಿ ಅಭಿಮಾನಿಗಳಿಗೆ ಗುಡ್ ನ್ಯೂಸ್- ‌’ಬುದ್ಧಿವಂತ 2′ ಬಿಗ್ ಅಪ್‌ಡೇಟ್

    ಅಣುಬಾಂಬ್ ಕಂಡು ಹಿಡಿದ ಅಮೆರಿಕದ ವಿಜ್ಞಾನಿ ಜೆ. ರಾಬರ್ಟ್ ಆಪನ್‌ಹೈಮರ್ ಅವರ ಜೀವನದ ಕಥೆ ಬಗ್ಗೆ ಈ ಸಿನಿಮಾದಲ್ಲಿ ತೋರಿಸಲಾಗಿದೆ. ಆಪನ್‌ಹೈಮರ್ ಪಾತ್ರವನ್ನು ಕಿಲಿಯನ್ ಮರ್ಫಿ ಮಾಡಿದ್ದಾರೆ. ರಿಯಲ್ ಲೈಫ್‌ನಲ್ಲಿ ಆಪನ್‌ಹೈಮರ್ ಅವರಿಗೆ ಹಿಂದೂ ಪುರಾಣಗಳ ಬಗ್ಗೆ ಆಸಕ್ತಿ ಇತ್ತು. ಅವರು ಸಂಸ್ಕೃತ ಕಲಿತಿದ್ದರು ಮತ್ತು ಭಗವದ್ಗೀತೆ (Bhagavad Gita) ಓದಿಕೊಂಡಿದ್ದರು. ಅದಕ್ಕೆ ಸಂಬಂಧಿಸಿದಂತೆ ಈ ಸಿನಿಮಾದಲ್ಲಿ ಒಂದು ದೃಶ್ಯ ಇದೆ. ಆ ದೃಶ್ಯವೇ ಈಗ ಕಾಂಟ್ರವರ್ಸಿ ಸೃಷ್ಟಿ ಮಾಡಿದೆ.

     

    ಆಪನ್‌ಹೈಮರ್ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿರುವ ಅವರ ಪ್ರೇಯಸಿಗೆ ಅನೇಕ ಪುಸ್ತಕಗಳು ಕಾಣಿಸುತ್ತವೆ. ಆ ಪೈಕಿ ಒಂದು ಪುಸ್ತಕವನ್ನು ಕೈಗೆತ್ತಿಕೊಂಡು ಇದು ಏನು ಅಂತ ಆಕೆ ಪ್ರಶ್ನಿಸುತ್ತಾಳೆ. ಇದು ಭಗವದ್ಗೀತೆ ಎಂದು ಆಪನ್‌ಹೈಮರ್ ಹೇಳುತ್ತಾರೆ ಮತ್ತು ಅದರಲ್ಲಿನ ಒಂದೆರಡು ಸಾಲುಗಳನ್ನು ವಿವರಿಸುತ್ತಾರೆ. ಇಂಥ ದೃಶ್ಯಕ್ಕೆ ಭಾರತದಲ್ಲಿ ಸೆನ್ಸಾರ್ ಮಂಡಳಿಯವರು ಹೇಗೆ ಅನುಮತಿ ನೀಡಿದರು. ಇದು ಹಿಂದೂ ಧರ್ಮದ ಮೇಲೆ ಮಾಡಲಾಗಿರುವ ದಾಳಿ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ‘ಸೇವ್ ಕಲ್ಚರ್ ಸೇವ್ ಇಂಡಿಯಾ ಪ್ರತಿಷ್ಠಾನ’ದ ಕಡೆಯಿಂದ ಉದಯ್ ಮಹುರ್ಕರ್ ನಿರ್ದೇಶಕ ಕ್ರಿಸ್ಟೋಫರ್‌ಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿದ್ದಾರೆ.  ಸಿನಿಮಾದಿಂದ ಆ ದೃಶ್ಯ ತೆಗೆಯುವಂತೆ ಹೇಳಿದ್ದಾರೆ. ಈ ಬಗ್ಗೆ ಚಿತ್ರತಂಡದ ಕಡೆಯಿಂದ ಇನ್ನೂ ರೆಸ್ಪಾನ್ಸ್ ಬಂದಿಲ್ಲ. ಮುಂದೆ ಏನೆಲ್ಲಾ ಬೆಳವಣಿಗೆ ಆಗಬಹುದು ಕಾಯಬೇಕಿದೆ.
    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿನಿಮಾ ಪೈರಸಿ ತಡೆ ಮಸೂದೆಗೆ ಒಪ್ಪಿಗೆ: ಬದಲಾವಣೆ ಏನು?

    ಸಿನಿಮಾ ಪೈರಸಿ ತಡೆ ಮಸೂದೆಗೆ ಒಪ್ಪಿಗೆ: ಬದಲಾವಣೆ ಏನು?

    ಸಿನಿಮಾಟೋಗ್ರಾಫ್ (ತಿದ್ದುಪಡಿ) ಮಸೂದೆ 2023ಕ್ಕೆ (Cinematograph Bill) ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ. ಇದರಿಂದಾಗಿ ಸಿನಿಮಾಗಳ ಪೈರಸಿ (Piracy) ತಡೆಗಟ್ಟುವಲ್ಲಿ ಈ ಮಸೂದೆ ರಕ್ಷಾಕವಚವಾಗಿ ನಿಲ್ಲಲಿದೆ. ಈ ಕುರಿತು ಮಾತನಾಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur), ‘ಇಂಟರ್ ನೆಟ್ ನಲ್ಲಿ ಸಿನಿಮಾ ಪೈರಸಿ ಪಸರಿಸುವುದನ್ನು ಈ ಮಸೂದೆ ಕಟ್ಟುನಿಟ್ಟಾಗಿ ತಡೆಗಟ್ಟುತ್ತದೆ’ ಎಂದಿದ್ದಾರೆ.

    ಅಷ್ಟೇ ಅಲ್ಲದೇ ಸೆನ್ಸಾರ್ (Censorship) ಮಂಡಳಿಯು ಕೊಡುವ ಚಲನಚಿತ್ರ ಪ್ರಮಾಣಪತ್ರದಲ್ಲೂ ಬದಲಾವಣೆ ಆಗಲಿದೆ. ಈಗಾಗಲೇ ಯಾವ ವಯಸ್ಸಿನವರು ಎಂತಹ ಸಿನಿಮಾ ನೋಡಬಹುದು ಎನ್ನುವುದಕ್ಕೆ ಯುಎ, ಯು, ಎ, ಸಿ ಪ್ರಮಾಣಪತ್ರವನ್ನು ಕೊಡಲಾಗುತ್ತಿದೆ. ಈ ಪ್ರಮಾಣ ಪತ್ರದಲ್ಲಿ ಬದಲಾವಣೆ ಆಗಲಿದೆ ಎನ್ನುತ್ತದೆ ಮಸೂದೆ. ಇದನ್ನೂ ಓದಿ:ಲಿಫ್ಟ್‌ನಲ್ಲಿ ಪತಿ ನಿಕ್ ಜೋನಸ್ ಜೊತೆ ಪ್ರಿಯಾಂಕಾ ಚೋಪ್ರಾ ರೊಮ್ಯಾನ್ಸ್

    ಈ ಮಸೂದೆಯನ್ನು ಮುಂದಿನ ಸಂಸತ್ ಕಲಾಪದ ವೇಳೆ ಮಂಡಿಸಲು ಸಿದ್ಧತೆ ಮಾಡಿಕೊಂಡಿದ್ದು, ಯಾವುದೇ ವಿವಾದಗಳು ಇಲ್ಲದೇ ಈ ಮಸೂದೆ ಪಾಸಾಗಲಿದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಅನುರಾಗ್ ಠಾಕೂರ್. ವಯಸ್ಸಿನ ಆಧಾರದ ಮೇಲೆ ಸಿನಿಮಾಗಳನ್ನು ವಿಂಗಡಿಸಿ ಎನ್ನುವ ಬೇಡಿಕೆ ತಮ್ಮುಂದೆ ಇದ್ದ ಕಾರಣಕ್ಕಾಗಿ ಮಸೂದೆ ತರಲಾಗಿದೆ ಎಂದಿದ್ದಾರೆ.

  • ಗಾಂಧಿ ಕುಟುಂಬವನ್ನು ರಾಮನ ವಂಶಕ್ಕೆ ಹೋಲಿಸಿರುವುದು ಅಹಂಕಾರ : ಅನುರಾಗ್ ಠಾಕೂರ್

    ಗಾಂಧಿ ಕುಟುಂಬವನ್ನು ರಾಮನ ವಂಶಕ್ಕೆ ಹೋಲಿಸಿರುವುದು ಅಹಂಕಾರ : ಅನುರಾಗ್ ಠಾಕೂರ್

    ನವದೆಹಲಿ: ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi) ಅವರು ಗಾಂಧಿ ಕುಟುಂಬವನ್ನು ಭಗವಾನ್ ರಾಮನ ವಂಶದೊಂದಿಗೆ ಹೋಲಿಸಿರುವುದು ಅಹಂಕಾರವಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಕಿಡಿಕಾರಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮ ಮತ್ತು ಗಾಂಧಿ ಕುಟುಂಬದ ನಡುವಿನ ಹೋಲಿಕೆಗಿಂತ ದುರದೃಷ್ಟಕರ ಬೇರೊಂದಿಲ್ಲ. ಸಹೋದರ ಮತ್ತು ಸಹೋದರಿಯ ಈ ದುರಹಂಕಾರವನ್ನು ಇಡೀ ರಾಷ್ಟ್ರವು ಗಮನಿಸುತ್ತಿದೆ. ದೇಶವನ್ನು ಬಿಡಿ, ಈಗ ಅವರು ಭಗವಾನ್ ರಾಮನನ್ನು ಸಹ ಉಳಿಸುತ್ತಿಲ್ಲ ಎಂದು ಕಿಡಿಕಾರಿದರು.

    ಈ ವೇಳೆ ರಾಹುಲ್ ಗಾಂಧಿ ಅವರ ವಿರುದ್ಧ ಕಿಡಿಕಾರಿದ ಅವರು, ರಾಹುಲ್ ಗಾಂಧಿ ತನ್ನ ಅತ್ಯುತ್ತಮ ಕನಸುಗಳಲ್ಲಿ ಎಂದಿಗೂ ವೀರ್ ಸಾವರ್ಕರ್ ಆಗಲು ಸಾಧ್ಯವಿಲ್ಲ. ಏಕೆಂದರೆ ಅದಕ್ಕೆ ಬಲವಾದ ನಿರ್ಣಯ ಮತ್ತು ದೇಶದ ಬಗ್ಗೆ ಅಪಾರ ಪ್ರೀತಿಯ ಅಗತ್ಯವಿರುತ್ತದೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ಮಾಡಾಳ್‌ ವಿರೂಪಾಕ್ಷಪ್ಪ ಜಾಮೀನು ಅರ್ಜಿ ವಜಾ: ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ

    ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸದಸ್ಯತ್ವದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ನಮ್ಮ ಮೇಲೆ ರಾಜವಂಶದ ಆರೋಪ ಮಾಡುತ್ತಾರೆ. ಹಾಗಾದರೆ ಭಗವಾನ್ ರಾಮ ಏನು? ಅವರು ದೇಶಭ್ರಷ್ಟರಾಗಿದ್ದರು, ಆದರೆ ಇನ್ನೂ ತಮ್ಮ ಕುಟುಂಬ ಮಾತೃಭೂಮಿಯ ಬಗ್ಗೆ ತಮ್ಮ ಜವಾಬ್ದಾರಿಗಳನ್ನು ಪೂರೈಸಿದ್ದಾರೆ. ಇದು ರಾಜವಂಶವೇ? ಪಾಂಡವರು ರಾಜವಂಶದಲ್ಲಿ ತೊಡಗಿಸಿಕೊಂಡಿದ್ದಾರೆಯೇ ಎಂದು ಹೇಳಿದ್ದರು. ಇದನ್ನೂ ಓದಿ: ಗ್ಯಾಂಗ್‍ಸ್ಟರ್ ಅತೀಕ್‍ನನ್ನು ಕರೆದೊಯ್ಯುತ್ತಿದ್ದ ಪೊಲೀಸ್ ಬೆಂಗಾವಲು ವಾಹನಕ್ಕೆ ಹಸು ಡಿಕ್ಕಿ

  • ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ – ಶೇ.4 ರಷ್ಟು ತುಟ್ಟಿ ಭತ್ಯೆ ಹೆಚ್ಚಳ

    ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್‌ – ಶೇ.4 ರಷ್ಟು ತುಟ್ಟಿ ಭತ್ಯೆ ಹೆಚ್ಚಳ

    ನವದೆಹಲಿ: ಯುಗಾದಿ ಹಬ್ಬದ ನಂತರ ಕೇಂದ್ರ ಸರ್ಕಾರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಕೊಟ್ಟಿದೆ. ತುಟ್ಟಿ ಭತ್ಯೆ (Dearness Allowance) ಶೇ.4ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡಿದೆ.

    ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ ಘೋಷಣೆ ಮಾಡಿದೆ. ಈ ಹೆಚ್ಚಳವು 7ನೇ ಕೇಂದ್ರ ವೇತನ ಆಯೋಗದ (Central Pay Commission) ಶಿಫಾರಸುಗಳ ಆಧಾರದ ಮೇಲೆ ಅಂಗೀಕರಿಸಲ್ಪಟ್ಟ ಸೂತ್ರಕ್ಕೆ ಅನುಗುಣವಾಗಿದೆ. ಇದನ್ನೂ ಓದಿ: PSI ಅಕ್ರಮ ನೇಮಕಾತಿ ಪ್ರಕರಣ- ವಿಚಾರಣೆ ಎದುರಿಸಿದ್ದ ಮಧ್ಯವರ್ತಿ ಗಣಪತಿ ಭಟ್ ಶವವಾಗಿ ಪತ್ತೆ

    ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸಿಹಿಸುದ್ದಿ ನೀಡಲಾಗಿದ್ದು, ಶೇ.4ರಷ್ಟು ತುಟ್ಟಿಭತ್ಯೆ ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರವು ತನ್ನ ವ್ಯಾಪ್ತಿಯ 1 ಕೋಟಿಗೂ ಹೆಚ್ಚು ಉದ್ಯೋಗಿಗಳಿಗೆ ತುಟ್ಟಿಭತ್ಯೆ ಶೇ.4.ರಷ್ಟು ಹೆಚ್ಚಿಸಿದೆ. ಒಟ್ಟಾರೆಯಾಗಿ ತುಟ್ಟಿಭತ್ಯೆ ಹೆಚ್ಚಳ ಶೇ.38 ರಿಂದ ಶೇ.42ಕ್ಕೆ ಹೆಚ್ಚಾಗಿದೆ. ಇದನ್ನೂ ಓದಿ: ರಾಹುಲ್‌ ಗಾಂಧಿ ಅಜ್ಜಿ ಇಂದಿರಾ ಗಾಂಧಿ ಸಹ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದರು..!

    ತುಟ್ಟಿಭತ್ಯೆ ಹೆಚ್ಚಳವನ್ನು 2023ರ ಜನವರಿಯಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ. ತುಟ್ಟಿಭತ್ಯೆ ಹೆಚ್ಚಳವನ್ನು ಪೂರೈಸಲು ಕೇಂದ್ರವು 12,815.60 ಕೋಟಿ ರೂ.ಗಳನ್ನ ಖರ್ಚು ಮಾಡಲಿದೆ. ಇದರಿಂದ ಸುಮಾರು 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

    ತುಟ್ಟಿಭತ್ಯೆ ಹೇಗೆ ಲೆಕ್ಕ ಹಾಕಲಾಗುತ್ತದೆ?
    ತುಟ್ಟಿಭತ್ಯೆಯನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬ ಮಾಹಿತಿಯನ್ನೂ ಅಧಿಸೂಚನೆಯಲ್ಲಿ ನೀಡಲಾಗಿದೆ. ಪರಿಷ್ಕೃತ ಮೂಲ ವೇತನ ಮತ್ತು ಭತ್ಯೆ ರಹಿತರ ಪ್ರಕಾರ ಡಿಎ ಲೆಕ್ಕಾಚಾರ ನಡೆಯಲಿದೆ. ಬೇರೆ ಯಾವುದೇ ಭತ್ಯೆ ಇಲ್ಲದಿದ್ದರೆ ಮೂಲ ವೇತನ ಮತ್ತು ಡಿಎ ಲೆಕ್ಕ ಹಾಕಲಾಗುತ್ತದೆ. ಈ ಹೆಚ್ಚಿದ ಡಿಎ, ಶಿಕ್ಷಕರು ಮತ್ತು ಸರ್ಕಾರಿ ಅನುದಾನಿತ ಸಂಸ್ಥೆಗಳ ಇತರ ನೌಕರರು ಹಾಗೂ ಸ್ಥಳೀಯ ಸಂಸ್ಥೆಗಳ ನೌಕರರಿಗೆ ಅನ್ವಯಿಸುತ್ತದೆ.

  • ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಭದ್ರಕೋಟೆಯಲ್ಲಿ ಶೂನ್ಯ ಸುತ್ತಿದ ಬಿಜೆಪಿ

    ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಭದ್ರಕೋಟೆಯಲ್ಲಿ ಶೂನ್ಯ ಸುತ್ತಿದ ಬಿಜೆಪಿ

    ಶಿಮ್ಲಾ: ಕೇಂದ್ರ ಪ್ರಸಾರ ಖಾತೆ ಮತ್ತು ಕ್ರೀಡಾ ಖಾತೆಯ ಸಚಿವ ಅನುರಾಗ್‌ ಠಾಕೂರ್‌(Anurag Thakur) ಪ್ರತಿನಿಧಿಸುತ್ತಿರುವ ಹಿಮಾಚಲ ಪ್ರದೇಶದ ಹಮೀರ್‌ಪುರ(Hamirpur) ಲೋಕಸಭಾ ಕ್ಷೇತ್ರದಲ್ಲಿ ಬರುವ ಎಲ್ಲಾ 5 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ(BJP) ಅಭ್ಯರ್ಥಿಗಳು ಸೋತಿದ್ದಾರೆ.

    ಬಾರ್ಸರ್‌ನಲ್ಲಿ 13,792 ಮತಗಳಿಂದ ಕಾಂಗ್ರೆಸ್‌(Congress) ಗೆದ್ದರೆ ನಾದೌನ್‌ನಲ್ಲಿ 3,363 ಮತಗಳಿಂದ ಗೆದ್ದಿದೆ. ಸುಜಾನ್‌ಪುರ್‌ನಲ್ಲಿ 399 ಮತಗಳಿಂದ ಜಯಗಳಿಸಿದರೆ ಭೋರಂಜ್‌ನಲ್ಲಿ 60 ಮತಗಳಿಂದ ಕಾಂಗ್ರೆಸ್‌ ಜಯಗಳಿಸಿದೆ. ಇದನ್ನೂ ಓದಿ: Himachal Pradesh Election Result: ಕಾಂಗ್ರೆಸ್‌ 40, ಬಿಜೆಪಿ 25 ಸ್ಥಾನ ಗೆಲುವು

    ಹಮೀರ್‌ಪುರ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಆಶಿಶ್ ಶರ್ಮಾ ಗೆಲುವು ಸಾಧಿಸಿದ್ದಾರೆ. ಅನುರಾಗ್‌ ಠಾಕೂರ್‌ ಅವರ ತಂದೆ 78 ವರ್ಷದ ಮಾಜಿ ಸಿಎಂ ಪ್ರೇಮ್‌ ಕುಮಾರ್‌ ಧುಮಾಲ್(Prem Kumar Dhumal) ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿತ್ತು.

    ಅನುರಾಗ್‌ ಠಾಕೂರ್‌ ಹಮೀರ್‌ಪುರ ಲೋಕಸಭಾ ಕ್ಷೇತ್ರದಿಂದ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. 2008ರ ಉಪಚುನಾವಣೆ, 2009, 2014, 2019ರಲ್ಲಿ ಠಾಕೂರ್‌ ಈ ಕ್ಷೇತ್ರದಿಂದ ಗೆದ್ದಿದ್ದಾರೆ.

     
    2019ರ ಚುನಾವಣೆಯಲ್ಲಿ ಅನುರಾಗ್‌ ಠಾಕೂರ್‌ 3,99,572 ಮತಗಳಿಂದ ಕಾಂಗ್ರೆಸ್‌ ಅಭ್ಯರ್ಥಿಯನ್ನು ಸೋಲಿಸಿದ್ದರು. ಅನುರಾಗ್‌ ಠಾಕೂರ್‌ 6,82,992 ಮತಗಳನ್ನು ಪಡೆದರೆ ಕಾಂಗ್ರೆಸ್‌ ಅಭ್ಯರ್ಥಿ 2,83,120 ಮತಗಳನ್ನು ಪಡೆದಿದ್ದರು.

    Live Tv
    [brid partner=56869869 player=32851 video=960834 autoplay=true]

  • ಅರ್ಜುನ ಪ್ರಶಸ್ತಿ ಸಿಕ್ಕಿದ್ದು 2017ರಲ್ಲಿ ಕೈ ಸೇರಿದ್ದು 2022ರಲ್ಲಿ – 5 ವರ್ಷಗಳ ಬಳಿಕ ಪೂಜಾರ ಪ್ರಶಸ್ತಿ ಸ್ವೀಕಾರ

    ಅರ್ಜುನ ಪ್ರಶಸ್ತಿ ಸಿಕ್ಕಿದ್ದು 2017ರಲ್ಲಿ ಕೈ ಸೇರಿದ್ದು 2022ರಲ್ಲಿ – 5 ವರ್ಷಗಳ ಬಳಿಕ ಪೂಜಾರ ಪ್ರಶಸ್ತಿ ಸ್ವೀಕಾರ

    ಮುಂಬೈ: ಟೀಂ ಇಂಡಿಯಾದ (Team India) ಕ್ರಿಕೆಟರ್‌ ಚೇತೇಶ್ವರ ಪೂಜಾರಗೆ (Cheteshwar Pujara) 2017ರಲ್ಲಿ ಅರ್ಜುನ ಪ್ರಶಸ್ತಿ (Arjuna Award) ಸಿಕ್ಕಿತ್ತು. ಆ ಪ್ರಶಸ್ತಿ 5 ವರ್ಷಗಳ ಬಳಿಕ ಇದೀಗ ಪೂಜಾರ ಕೈ ಸೇರಿದೆ.

    2017ರಲ್ಲಿ ಪೂಜಾರ ಅರ್ಜುನ ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕೆ ಹೋಗಿರಲಿಲ್ಲ. ಆ ಬಳಿಕ ಇದೀಗ 5 ವರ್ಷಗಳ ಬಳಿಕ ಅರ್ಜುನ ಪ್ರಶಸ್ತಿಯನ್ನು ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್‌ರಿಂದ ಪೂಜಾರ ಸ್ವೀಕರಿಸಿದ್ದಾರೆ. ಇದನ್ನೂ ಓದಿ: 11 ಬೌಂಡರಿ, 7 ಸಿಕ್ಸ್ – ಶತಕ ಸಿಡಿಸಿದ ದಾಖಲೆವೀರ ಸೂರ್ಯ

    ಈ ಬಗ್ಗೆ ಟ್ವೀಟ್ ಮಾಡಿರುವ ಪೂಜಾರ, ನಾನು 2017ರಲ್ಲಿ ಅರ್ಜುನ ಪ್ರಶಸ್ತಿ ಬಂದಾಗ ಸ್ವೀಕರಿಸಿರಲಿಲ್ಲ. ಕ್ರಿಕೆಟ್ ನಡುವೆ ಬಿಡುವಿಲ್ಲದ ಕಾರಣ ಹಾಗೆ ಉಳಿದುಕೊಂಡಿತ್ತು. ಇದೀಗ ಕೇಂದ್ರ ಕ್ರೀಡಾ ಸಚಿವರಾದ ಅನುರಾಗ್ ಠಾಕೂರ್‌ರಿಂದ ಪ್ರಶಸ್ತಿ ಪಡೆದುಕೊಂಡಿದ್ದೇನೆ. ಬಿಸಿಸಿಐ (BCCI) ಮತ್ತು ಸಚಿವರಿಗೆ ಧನ್ಯವಾದ ಎಂದಿದ್ದಾರೆ. ಇದನ್ನೂ ಓದಿ: ಕಾಲ್ಚೆಂಡು ಹಬ್ಬ ಬಲು ದುಬಾರಿ – ಫಿಫಾ ಟಿಕೆಟ್ ದರ ಕೇಳಿದ್ರೆ ದಂಗಾಗ್ತಿರಿ!

    ಪೂಜಾರ ಸದ್ಯ ಸೌರಾಷ್ಟ್ರ ಪರ ವಿಜಯ್ ಹಜಾರೆ ದೇಸಿ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಮುಂದಿನ ತಿಂಗಳು ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿ ಆಡಲು ಭಾರತ-ಎ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಭಾರತ-ಪಾಕ್ ಕ್ರಿಕೆಟ್ ಬೋರ್ಡ್‍ಗಳ ಕದನ – ಭಾರತ ಯಾರ ಮಾತನ್ನು ಕೇಳಲ್ಲ: ಅನುರಾಗ್ ಠಾಕೂರ್

    ಭಾರತ-ಪಾಕ್ ಕ್ರಿಕೆಟ್ ಬೋರ್ಡ್‍ಗಳ ಕದನ – ಭಾರತ ಯಾರ ಮಾತನ್ನು ಕೇಳಲ್ಲ: ಅನುರಾಗ್ ಠಾಕೂರ್

    ಮುಂಬೈ: ಕ್ರಿಕೆಟ್ (Cricket) ವಿಚಾರವಾಗಿ ಭಾರತ-ಪಾಕಿಸ್ತಾನ (India-Pakistan)  ಕ್ರಿಕೆಟ್ ಬೋರ್ಡ್‍ಗಳ ನಡುವೆ ಕಿತ್ತಾಟ ಆರಂಭವಾಗಿದೆ. 2023ರ ಏಷ್ಯಾ ಕಪ್ (Asia Cup) ಟೂರ್ನಿ ಪಾಕಿಸ್ತಾನದಲ್ಲಿ ನಡೆದರೆ ಆ ಟೂರ್ನಿಯಲ್ಲಿ ಭಾರತ ಭಾಗವಹಿಸುವುದಿಲ್ಲ ಎಂದು ಬಿಸಿಸಿಐ (BCCI) ಘೋಷಿಸಿತ್ತು. ಈ ಮಾತಿಗೆ ಪಾಕಿಸ್ತಾನ ತಂಡ ಕೆರಳಿ ಕೆಂಡವಾಗಿದೆ. ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ ಕೇಂದ್ರ ಕ್ರೀಡಾ ಸಚಿವರಾದ ಅನುರಾಗ್ ಠಾಕೂರ್ (Anurag Thakur), ಭಾರತ ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಈ ಬಗ್ಗೆ ಮಾಧ್ಯಮವೊಂದರಲ್ಲಿ ಮಾತನಾಡಿದ ಅವರು, ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‍ಗೆ (World Cup) ಪಾಕಿಸ್ತಾನ ಸೇರಿದಂತೆ ಎಲ್ಲಾ ದೇಶಗಳನ್ನು ಆಹ್ವಾನಿಸುತ್ತೇವೆ. ಈ ಟೂರ್ನಿ ನಿಗದಿಯಂತೆ ನಡೆಯಲಿದೆ. ಇದು ಬಿಸಿಸಿಐ ತೆಗೆದುಕೊಂಡಿರುವ ನಿರ್ಧಾರ. ಭಾರತ ಕ್ರೀಡಾಪಟುಗಳ ತವರೂರು. ನಾವು ಈಗಾಗಲೇ ಹಲವು ಕ್ರೀಡಾಕೂಟಗಳೊಂದಿಗೆ ವಿಶ್ವಕಪ್‍ನಂತಹ ಮಹತ್ವದ ಟೂರ್ನಿಗಳನ್ನು ಆಯೋಜಿಸಿದ್ದೇವೆ. ಭಾರತವನ್ನು ಯಾವುದೇ ಕ್ರೀಡೆಯಲ್ಲಿ ನಿರ್ಲಕ್ಷಿಸುವಂತಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಬಿನ್ನಿ ಬಿಸಿಸಿಐ ಅಧ್ಯಕ್ಷರಾದ ಬಳಿಕ ತೆರವಾದ KSCA ಅಧ್ಯಕ್ಷ ಹುದ್ದೆ – ಮುಂದಿನ ಬಾಸ್ ಯಾರು?

    ಭಾರತದಲ್ಲಿ ನಡೆಯುವ ವಿಶ್ವಕಪ್‍ಗೆ ಸರ್ಕಾರ ಬೆಂಬಲ ನೀಡಲಿದೆ. ಗೃಹ ಸಚಿವಾಲಯದಿಂದ ಟೂರ್ನಿಗೆ ಸಿಗಬೇಕಾದ ಭದ್ರತೆ ವ್ಯವಸ್ಥೆ ಮಾಡುತ್ತೇವೆ. ಈ ಕುರಿತಾಗಿ ಭಾರತ ಯಾರ ಮಾತನ್ನು ಕೇಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಗ್ರೀನ್‍ಗೆ ಸಿಕ್ತು ಟಿ20 ವಿಶ್ವಕಪ್ ಗ್ರೀನ್ ಸಿಗ್ನಲ್

    ಬಿಸಿಸಿಐ 2023ರ ಏಷ್ಯಾ ಕಪ್ ಟೂರ್ನಿ ಪಾಕಿಸ್ತಾನದಲ್ಲಿ ನಡೆದರೆ ಆ ಟೂರ್ನಿಯಲ್ಲಿ ಭಾರತ ಪಾಲ್ಗೊಳ್ಳಲ್ಲ ಎಂದ ಬಳಿಕ ಭಾರತದ ನಿರ್ಣಯ ಖಂಡಿಸಿ ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿ ಬಹಿಷ್ಕರಿಸುವ ಸುಳಿವನ್ನು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನೀಡಿದೆ. ಜೊತೆಗೆ ಏಷ್ಯಾ ಕ್ರಿಕೆಟ್ ಕೌನ್ಸಿಲ್‍ನಿಂದಲೇ ಹೊರಬರುವ ಬಗ್ಗೆ ಪಾಕಿಸ್ತಾನದ ಕ್ರಿಕೆಟ್ ಬೋರ್ಡ್ (PCB) ಮುಖ್ಯಸ್ಥ ರಮೀಜ್ ರಾಜಾ ಗಂಭೀರ ಚಿಂತನೆ ನಡೆಸಿದ್ದಾರೆ.

    ನಾವೀಗ ಕಠಿಣವಾಗಿ ಸ್ಪಂದಿಸಬೇಕಿದೆ. ಐಸಿಸಿ, ಎಸಿಸಿ ಟೂರ್ನಿಯಲ್ಲಿ ಭಾರತದ ವಿರುದ್ಧ ಮ್ಯಾಚ್ ಆಡದಿದ್ರೆ ಪಾಕಿಸ್ತಾನಕ್ಕೆ ಆರ್ಥಿಕವಾಗಿ ಭಾರೀ ನಷ್ಟ ಉಂಟಾಗುತ್ತದೆ. ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾ ಕಪ್ ಟೂರ್ನಿಯನ್ನು, ಬೇರೆ ಕಡೆ ಮಾಡುತ್ತೇವೆ ಎಂದು ನಿರ್ಧರಿಸಲು ಜಯ್ ಶಾ ಯಾರು ಎಂದು ಪಿಸಿಬಿ ಪ್ರಶ್ನಿಸಿದೆ.

    Live Tv
    [brid partner=56869869 player=32851 video=960834 autoplay=true]

  • ರೈತರಿಗೆ ಭರ್ಜರಿ ಗಿಫ್ಟ್ – ಗೋಧಿ ಸೇರಿ 6 ಬೆಳೆಗಳ ಬೆಂಬಲ ಬೆಲೆ ಹೆಚ್ಚಳ

    ರೈತರಿಗೆ ಭರ್ಜರಿ ಗಿಫ್ಟ್ – ಗೋಧಿ ಸೇರಿ 6 ಬೆಳೆಗಳ ಬೆಂಬಲ ಬೆಲೆ ಹೆಚ್ಚಳ

    ನವದೆಹಲಿ: ನಿನ್ನೆಯಷ್ಟೇ ರೈತರ (Farmers) ಖಾತೆಗೆ 12ನೇ ಕಂತಿನ ಹಣ ಬಿಡುಗಡೆ ಮಾಡಿದ್ದ ಕೇಂದ್ರ ಸರ್ಕಾರ (Central Government Of India) ಇಂದು 6 ಪ್ರಮುಖ ಹಿಂಗಾರು ಬೆಳೆಗಳ (Crops) ಬೆಂಬಲ ಬೆಲೆ ಹೆಚ್ಚಿಸಿದೆ. ಈ ಮೂಲಕ ದೀಪಾವಳಿಗೂ ಮುನ್ನವೇ ರೈತರಿಗೆ ಬಂಪರ್ ಕೊಡುಗೆ ನೀಡಿದೆ.

    ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಧ್ಯಕ್ಷತೆಯಲ್ಲಿ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಸಭೆ ನಂತರ ಕೇಂದ್ರದ ನಿರ್ಧಾರಗಳ ಬಗ್ಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ್ದಾರೆ. ಇದನ್ನೂ ಓದಿ: ಜೀವನಶೈಲಿ ಹೇಗಿದ್ದರೆ ಸ್ತನ ಕ್ಯಾನ್ಸರ್‌ ಬರುತ್ತೆ ಗೊತ್ತಾ?

    ಕೇಂದ್ರ ಸರ್ಕಾರ ಗೋಧಿ (Wheat Crop) ಸೇರಿದಂತೆ ಪ್ರಮುಖ 6 ಹಿಂಗಾರು ಬೆಳೆಗಳಿಗೆ ಬೆಂಬಲ ಬೆಲೆ (Minimum Support Price) ಘೋಷಣೆ ಮಾಡಿದೆ. ಈ ಋತುವಿನಲ್ಲಿ ಕೇಂದ್ರ ಸರ್ಕಾರ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಒಟ್ಟು 23 ಬೆಳೆಗಳಿಗೆ ಬೆಂಬಲ ಘೋಷಣೆ ಮಾಡಿದ್ದು ರೈತರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದು ಠಾಕೂರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ರಾಹುಲ್ ಗಾಂಧಿ ಅವರಮ್ಮ ಮದುವೆಯಲ್ಲೂ ಕುಂಕುಮ ಇಟ್ಟಿದ್ರೋ ಇಲ್ವೋ ಗೊತ್ತಿಲ್ಲ- ಸಿ.ಟಿ ರವಿ

    2023-24 ಮಾರುಕಟ್ಟೆ ಋತುವಿಗಾಗಿ ಪ್ರಮುಖ 6 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಹಿನ್ನೆಲೆಯಲ್ಲಿ ಗೋಧಿಗೆ 110 ರೂ. ಬೆಂಬಲ ಬೆಲೆ ಹೆಚ್ಚಿಸಲಾಗಿದೆ. ಒಟ್ಟಾರೆ ಗೋಧಿಗೆ 2,125 ರೂ. ಬೆಂಬಲ ಬೆಲೆ ಸಿಗಲಿದೆ. ಗೋಧಿ ಉತ್ಪಾದನಾ ವೆಚ್ಚ ಪ್ರತಿ ಕ್ವಿಂಟಾಲ್‌ಗೆ 1,065 ರೂ. ಎಂದು ಅಂದಾಜಿಸಿ ಬೆಲೆ ಹೆಚ್ಚಳ ಮಾಡಲಾಗಿದೆ ಎಂದು ಠಾಕೂರ್ ಹೇಳಿದ್ದಾರೆ.

    ಯಾವ ಬೆಳೆಗೆ ಎಷ್ಟು ಬೆಲೆ?
    ಪ್ರತಿ ಕ್ವಿಂಟಲ್‌ಗೆ ಗೋಧಿಗೆ 110 ರೂ., ಬಾರ್ಲಿಗೆ 100 ರೂ., ಬೇಳೆ 105 ರೂ., ಮಸೂರ್ (ಬೆಳೆ) 500 ರೂ., ಸಾಸಿವೆ 400 ರೂ., ಸೂರ್ಯಕಾಂತಿಗೆ 209 ರೂ. ಬೆಂಬಲ ಬೆಲೆ  (Minimum Support Price) ಹೆಚ್ಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಕೇಂದ್ರ ಸಚಿವ ಠಾಕೂರ್ ಭೇಟಿ ಮಾಡಿದ ‘ಕಾಂತಾರ’ ನಿರ್ಮಾಪಕ ವಿಜಯ್ ಕಿರಗಂದೂರ

    ಕೇಂದ್ರ ಸಚಿವ ಠಾಕೂರ್ ಭೇಟಿ ಮಾಡಿದ ‘ಕಾಂತಾರ’ ನಿರ್ಮಾಪಕ ವಿಜಯ್ ಕಿರಗಂದೂರ

    ಹೊಂಬಾಳೆ ಫಿಲ್ಮ್ಸ್ (Hombale Films) ಮೂಲಕ ಭಾರತೀಯ ಸಿನಿಮಾ ರಂಗಕ್ಕೆ ಉತ್ತಮ ಚಿತ್ರಗಳನ್ನು ನೀಡಿರುವ ನಿರ್ಮಾಪಕ ವಿಜಯ್ ಕಿರಗಂದೂರು (Vijay Kirgandur), ಇಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯಲ್ಲಿ ಸಿನಿಮಾ ರಂಗದ ಕುರಿತು ಹಲವು ವಿಚಾರಗಳನ್ನು ಸಚಿವರ ಜೊತೆ ಹಂಚಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ. ಅದೊಂದು ಅತ್ಯುತ್ತಮವಾದ ಭೇಟಿ ಆಗಿತ್ತು ಎಂದೂ ವಿಜಯ್ ಬರೆದುಕೊಂಡಿದ್ದಾರೆ.

    ಕೇಂದ್ರ ಸಚಿವರನ್ನು ಭೇಟಿ ಮಾಡಿದ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಜಯ್ ಕಿರಗಂದೂರ, ‘ಅನುರಾಗ್ ಠಾಕೂರ್ (Anurag Thakur) ಜೊತೆ ಭಾರತೀಯ ಸಿನಿಮಾ ರಂಗದ ಕುರಿತು ಚರ್ಚಿಸಲಾಯಿತು. ನಮ್ಮ ನೆಲದ ಸಂಸ್ಕೃತಿಯನ್ನು ಬಿಂಬಿಸುವಂತಹ, ಅದನ್ನು ಮುಂದುವರೆಸಿಕೊಂಡು ಹೋಗು ಸಾಧ್ಯತೆಯ ಕುರಿತಾಗಿ ಮಾತನಾಡಲಾಯಿತು. ಭಾರತೀಯ ಸಿನಿಮಾ ರಂಗದ ಕುರಿತಾದ ಸೂಕ್ಷ್ಮ ಒಳನೋಟ ಈ ವಿಷಯದಲ್ಲಿ ಇತ್ತು’ ಎಂದು ಅವರು ಬರೆದುಕೊಂಡಿದ್ದಾರೆ. ಇದನ್ನೂ ಓದಿ:‘ಆದಿಪುರುಷ್’ ಸಿನಿಮಾ ಟೀಮ್ ಮೇಲೆ ಬಿತ್ತು ಕೇಸ್: ಅ.27ಕ್ಕೆ ವಿಚಾರಣೆ ನಿಗದಿ

    ಕನ್ನಡ ಸಿನಿಮಾ ರಂಗಕ್ಕೆ ಗೆಲುವಿನ ಚಿತ್ರಗಳನ್ನು ಕೊಟ್ಟ ಹೆಗ್ಗಳಿಕೆ ವಿಜಯ್ ಕಿರಗಂದೂರ ಅವರದ್ದು. ಇವರ ಬ್ಯಾನರ್ ನಲ್ಲಿ ಮೂಡಿ ಬಂದ ಕೆಜಿಎಫ್ 2 ಸಿನಿಮಾ ಐತಿಹಾಸಿಕ ದಾಖಲೆ ಮಾಡಿತು. ಅಲ್ಲದೇ, ಈಗ ಬಿಡುಗಡೆ ಆಗಿರುವ ಕಾಂತಾರ ಸಿನಿಮಾ ಕೂಡ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸುತ್ತಿದೆ. ಕನ್ನಡದಲ್ಲಿ ಮಾತ್ರವಲ್ಲ, ಹಲವು ಭಾಷೆಗಳಲ್ಲೂ ಈ ಸಿನಿಮಾವನ್ನು ರಿಲೀಸ್ ಮಾಡುತ್ತಿದ್ದಾರೆ ಹೊಂಬಾಳೆ ಫಿಲ್ಮ್ಸ್.

    ನಾಳೆಯಿಂದ ಕಾಂತಾರ (Kantara) ಸಿನಿಮಾ ಬಾಲಿವುಡ್ (Bollywood) ನಲ್ಲಿ ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಪ್ರಮೋಷನ್‍ಗಾಗಿ ಇಡೀ ತಂಡ ಮುಂಬೈನಲ್ಲಿ ಬೀಡು ಬಿಟ್ಟಿದೆ. ಇದೇ ಸಂದರ್ಭದಲ್ಲೇ ಕೇಂದ್ರ ಸಚಿವರನ್ನು ವಿಜಯ್ ಅವರು ಭೇಟಿ ಮಾಡಿ, ಭಾರತೀಯ ಸಿನಿಮಾ ರಂಗದ ಬಗ್ಗೆ ಮಾತನಾಡಿದ್ದಾರೆ. ಅದನ್ನು ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]