ಶಿಮ್ಲಾ: ಭಗವಾನ್ ಹನುಮಂತ (Hanuman) ಮೊದಲ ಬಾಹ್ಯಾಕಾಶ ಯಾನಿ ಎಂದು ಭಾವಿಸುವಂತೆ ವಿದ್ಯಾರ್ಥಿಗಳಿಗೆ ಕೇಂದ್ರ ಮಾಜಿ ಸಚಿವ ಅನುರಾಗ್ ಠಾಕೂರ್ (Anurag Thakur) ಸಲಹೆ ನೀಡಿದ್ದಾರೆ.
ಬಾಹ್ಯಾಕಾಶಕ್ಕೆ ಮೊದಲು ಪ್ರಯಾಣ ಬೆಳೆಸಿದ ವ್ಯಕ್ತಿ ಅಮೆರಿಕದ ಗಗನಯಾತ್ರಿ ನೀಲ್ ಆರ್ಮ್‌ಸ್ಟ್ರಾಂಗ್ ಎಂಬುದು ಸಾರ್ವತ್ರಿಕವಾಗಿ ಒಪ್ಪಿಕೊಂಡ ಸತ್ಯ. ಆದಾಗ್ಯೂ, ಮಾಜಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು, ಭಗವಾನ್ ಹನುಮಂತ ಮೊದಲ ಬಾಹ್ಯಾಕಾಶ ಯಾನಿ ಎಂದು ವಿದ್ಯಾರ್ಥಿಗಳಿಗೆ ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ್ದಾರೆ. ಇದನ್ನೂ ಓದಿ: ಪತ್ನಿಗೆ ಬೆಂಕಿ ಹಚ್ಚಿ ಕೊಂದವನ ಕಾಲಿಗೆ ಗುಂಡೇಟು – ನನಗ್ಯಾವ ಪಶ್ಚಾತ್ತಾಪ ಇಲ್ಲ ಎಂದ ಪಾಪಿ!
ಪಿಎಂ ಶ್ರೀ ಶಾಲೆಯಲ್ಲಿ ಶನಿವಾರ ರಾಷ್ಟ್ರೀಯ ಬಾಹ್ಯಾಕಾಶ ದಿನದ ಸಂದರ್ಭದಲ್ಲಿ ಠಾಕೂರ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳ ಜೊತೆ ಬಿಜೆಪಿ ಸಂಸದ ಠಾಕೂರ್ ಸಂವಾದ ನಡೆಸಿದರು.
ಏಕೆಂದರೆ ನಾವು ಇನ್ನೂ ನಮ್ಮನ್ನು ನಾವು ಇರುವಂತೆಯೇ ನೋಡುತ್ತೇವೆ. ನಮ್ಮ ಸಾವಿರಾರು ವರ್ಷಗಳ ಹಳೆಯ ಸಂಪ್ರದಾಯ, ಜ್ಞಾನ, ಸಂಸ್ಕೃತಿಯನ್ನು ನಾವು ತಿಳಿಯದೇ ಇರುವವರೆಗೆ, ಬ್ರಿಟಿಷರು ನಮಗೆ ತೋರಿಸಿದಂತೆಯೇ ಇರುತ್ತೇವೆ. ಆದ್ದರಿಂದ, ಪ್ರಾಂಶುಪಾಲರು ಮತ್ತು ನೀವೆಲ್ಲರೂ ಪಠ್ಯಪುಸ್ತಕಗಳಿಂದ ಆಚೆಗೆ ಯೋಚಿಸಿ ನಮ್ಮ ರಾಷ್ಟ್ರ, ನಮ್ಮ ಸಂಪ್ರದಾಯಗಳು, ನಮ್ಮ ಜ್ಞಾನವನ್ನು ನೋಡಬೇಕೆಂದು ವಿನಂತಿಸುತ್ತೇನೆ. ನೀವು ಆ ದಿಕ್ಕಿನಿಂದ ನೋಡಿದರೆ, ಬಹಳಷ್ಟು ವಿಷಯಗಳನ್ನು ಕಾಣಬಹುದು ಎಂದು ತಿಳಿಸಿದ್ದಾರೆ.
ಸುಮಾರು ನಲವತ್ತು ವರ್ಷಗಳ ಹಿಂದೆ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ ಮೊದಲ ಭಾರತೀಯ ರಾಕೇಶ್ ಶರ್ಮಾ. ಈ ವರ್ಷದ ಆರಂಭದಲ್ಲಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ ಎರಡನೇ ಭಾರತೀಯ ಗಗನಯಾತ್ರಿ ಎನಿಸಿಕೊಂಡರು.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶನಿವಾರ ದೆಹಲಿಯಲ್ಲಿ ಭಾರತೀಯ ಅಂತರಿಕ್ಷ ನಿಲ್ದಾಣದ (ಬಿಎಎಸ್) ಮಾದರಿಯನ್ನು ಅನಾವರಣಗೊಳಿಸಿತು. ತನ್ನದೇ ಆದ ಕಕ್ಷೀಯ ಪ್ರಯೋಗಾಲಯವನ್ನು ಸ್ಥಾಪಿಸುವ ಭಾರತದ ಪ್ರಯಾಣವು ತನ್ನ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಒಂದು ಪ್ರಮುಖ ಮುನ್ನಡೆಯನ್ನು ಸೂಚಿಸುತ್ತದೆ. ಬಾಹ್ಯಾಕಾಶ ಪರಿಶೋಧನೆಯಲ್ಲಿ ಜಾಗತಿಕ ನಾಯಕನಾಗಿ ತನ್ನ ಸ್ಥಾನವನ್ನು ಬಲಪಡಿಸುತ್ತದೆ.
2028 ರ ವೇಳೆಗೆ ಯೋಜನೆಯ ಮೊದಲ ಮಾಡ್ಯೂಲ್ ಅನ್ನು ಪ್ರಾರಂಭಿಸಲು ISRO ಗುರಿ ಹೊಂದಿದೆ. ಪೂರ್ಣ ನಿಲ್ದಾಣವು 2035 ರ ವೇಳೆಗೆ ಕಾರ್ಯರೂಪಕ್ಕೆ ಬರುವ ನಿರೀಕ್ಷೆಯಿದೆ. ದೀರ್ಘಾವಧಿಯ ಮಾನವ ಬಾಹ್ಯಾಕಾಶ ಯಾತ್ರೆಗಳಿಗೆ ಸೂಕ್ಷ್ಮ ಗುರುತ್ವಾಕರ್ಷಣೆಯ ಅಧ್ಯಯನಗಳು ಮತ್ತು ಪರೀಕ್ಷಾ ತಂತ್ರಜ್ಞಾನಗಳು ಸೇರಿದಂತೆ ಸ್ಥಳೀಯ ಸಂಶೋಧನೆಗೆ BAS ಮಹತ್ವದ ವೇದಿಕೆಯಾಗಲಿದೆ.
– ಪುಷ್ಪಾ ಸ್ಟೈಲ್‌ನಲ್ಲಿ ತಗ್ಗೋದೇ ಇಲ್ಲ ಎಂದ ಖರ್ಗೆ
– ಶಿಸ್ತು ಸಮಿತಿಯ ಪರಿಶೀಲನೆಗೆ ನೀಡಿದ ಧನಕರ್
ನವದೆಹಲಿ: ವಕ್ಫ್ ಬಿಲ್ ಮಂಡನೆಗೆ ಮುನ್ನವೇ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಗರಂ ಆದ ಪ್ರಸಂಗ ನಡೆಯಿತು. ವಕ್ಫ್ ಭೂಮಿ ಕಬ್ಜಾ ಮಾಡಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ ಅನುರಾಗ್ ಠಾಕೂರ್ (Anurag Thakur) ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ರು. ಇಂತಹ ರಾಜಕೀಯ ದಾಳಿಗಳಿಗೆ ನಾನು ಬೆದರುವ ಮಾತೇ ಇಲ್ಲ ಎಂದು ಪುಷ್ಪಾ ಸಿನಿಮಾ ಶೈಲಿಯಲ್ಲಿ ಅಬ್ಬರಿಸಿದ್ರು.
ಅನುರಾಗ್ ಠಾಕೂರ್ ಅರೋಪಕ್ಕೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ವಕ್ಫ್ ಆಸ್ತಿ (Waqf Property) ಕಬಳಿಕೆ ಆರೋಪಕ್ಕೆ ತಿರುಗೇಟು ನೀಡಿದರು. ನನ್ನ ಜೀವನ ತೆರದ ಪುಸ್ತಕ, ಜೀವನದಲ್ಲಿ ಕಷ್ಟ ಮತ್ತು ಹೋರಾಟವಿದೆ. ಸಾರ್ವಜನಿಕ ಜೀವನದಲ್ಲಿ ಉನ್ನತ ಮೌಲ್ಯಗಳನ್ನು ಕಾಪಾಡಿಕೊಂಡು ಬಂದಿದ್ದೇನೆ. 60 ವರ್ಷ ರಾಜಕೀಯದಲ್ಲಿ ಇದನ್ನು ಬಯಸಿರಲಿಲ್ಲ. ಇಂತಹ ಆಧಾರ ರಹಿತ ಆರೋಪ ನಿರೀಕ್ಷಿಸರಲಿಲ್ಲ. ಅನುರಾಗ್ ಠಾಕೂರ್ ನನ್ನ ವಿರುದ್ಧ ಆಧಾರ ರಹಿತ ಆರೋಪ ಮಾಡಿದ್ದಾರೆ. ಅದನ್ನು ನಮ್ಮ ಸಂಸದರು ವಿರೋಧಿಸಿದ ಬಳಿಕ ಈ ಹೇಳಿಕೆ ವಾಪಸ್ ಪಡೆದುಕೊಂಡಿದ್ದಾರೆ. ಆದರೆ ಡ್ಯಾಮೇಜ್ ಆಗಿ ಹೋಗಿದೆ, ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರಿಂದ ನನ್ನ ಚಾರಿತ್ರ‍್ಯ ಮತ್ತು ಗೌರವಕ್ಕೆ ಧಕ್ಕೆಯಾಗಿದೆ ಎಂದು ಅಸಮಾಧಾನ ಹೊರಹಾಕಿದ್ರು. ಇದನ್ನೂ ಓದಿ: ವಕ್ಫ್ ಮಸೂದೆ | ದಾನದ ಆಸ್ತಿ ದುರ್ಬಳಕೆಯಾಗದಂತೆ ತಡೆಯಲು ಮೋದಿ ಮುಂದಾಗಿದ್ದಾರೆ: ಹೆಚ್‌ಡಿಡಿ
ದೇವೇಗೌಡರು ಇದನ್ನು ಕೇಳಿಸಿಕೊಳ್ಳಬೇಕು. ಅವರ 50 ವರ್ಷದಿಂದ ನೋಡಿದ್ದಾರೆ. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮತ್ತು ಎಐಸಿಸಿ ಅಧ್ಯಕ್ಷನಾಗಿ ನಾನು ಒತ್ತಾಯ ಪೂರ್ವಕವಾಗಿ ಎದ್ದು ನಿಲ್ಲಬೇಕಿದೆ. ಅನುರಾಗ್ ಠಾಕೂರ್ ಹೇಳಿಕೆಯನ್ನು ವಿರೋಧಿಸಬೇಕಿದೆ, ಠಾಕೂರ್ ಈ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೇ ಅವರು ರಾಜೀನಾಮೆ ನೀಡಬೇಕು. ಅವರು ಸಾಬೀತರಾದರೇ ನಾನು ರಾಜೀನಾಮೆ ನೀಡುತ್ತೇನೆ. ನಾನು ಇಂತಹ ಬೆದರಿಕೆಗೆ ಹೆದರುವುದಿಲ್ಲ ಎಂದು ಎಚ್ಚರಿಸಿದ್ರು. ಇದನ್ನೂ ಓದಿ: 25 ಸಾವಿರ ಶಿಕ್ಷಕರ ವಜಾ – ಜಡ್ಜ್‌ಗಳ ಮನೆಯಲ್ಲಿ ಹಣ ಪತ್ತೆಯಾದ್ರೆ ವರ್ಗಾವಣೆ, ಶಿಕ್ಷಕರ ವಜಾ ಯಾಕೆ? – ಮಮತಾ ಬ್ಯಾನರ್ಜಿ ಪ್ರಶ್ನೆ
ನಾನು ಕಾರ್ಮಿಕನ ಮಗ, ಕಾರ್ಮಿಕ ನಾಯಕ, ಅಲ್ಲಿಂದ ಕಾಂಗ್ರೆಸ್ ಅಧ್ಯಕ್ಷನಾಗಿದ್ದೇನೆ. ದೇವೇಗೌಡರಿಗೆ ಎಲ್ಲವೂ ಗೊತ್ತಿದೆ. ವಿಧಾನಸಭೆಯಲ್ಲಿ ಯಾರು ನನಗೆ ಬೆರಳು ಎತ್ತಿ ಮಾಡನಾಡಿಲ್ಲ. ಈ ಬಿಜೆಪಿ ನಾಯಕರು ಬೆದರಿಕೆ ಬಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಾನು ಒಡೆದು ಹೊಗ್ತಿನಿ, ಬಗ್ಗುವುದಿಲ್ಲ, ನಾನು ಒಂದಿಂಚು ಭೂಮಿ ಕಬಳಿಸಿಲ್ಲ, ಅನುರಾಗ್ ಠಾಕೂರ್ ಕ್ಷಮೆ ಕೇಳಲೇಬೇಕು ಎಂದು ಒತ್ತಾಯಿಸಿದರು. ಬಳಿಕ ಈ ಚರ್ಚೆಯನ್ನು ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್ ಶಿಸ್ತು ಸಮಿತಿಯ ಪರಿಶೀಲನೆಗೆ ನೀಡಿದರು. ಇದನ್ನೂ ಓದಿ: ರಾಹುಲ್ ಜೊತೆ ಸಿದ್ದರಾಮಯ್ಯ ಪ್ರತ್ಯೇಕ ಮಂಥನ – ಗಿಗ್ ಕಾರ್ಮಿಕರ ಕಲ್ಯಾಣ ಮಂಡಳಿ ಸ್ಥಾಪಿಸಲು ತೀರ್ಮಾನ
ಶಿಮ್ಲಾ: ಅಗ್ನಿಪಥ್ ಯೋಜನೆ (Agnipath Scheme) ಕುರಿತು ಸುಳ್ಳು ಪ್ರಚಾರ ಮಾಡುವ ಮೂಲಕ ದೇಶದ ಯುವಕರನ್ನು ದಾರಿ ತಪ್ಪಿಸುವುದೇ ಕಾಂಗ್ರೆಸ್‍ನ (Congress) ಗುರಿಯಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಮೀರ್‌ಪುರದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಅವರು, ಅಗ್ನಿಪಥ್ ಯೋಜನೆ ಯುವಜನತೆಗೆ 100% ಉದ್ಯೋಗ ಒದಗಿಸುವ ಯೋಜನೆಯಾಗಿದೆ. ಈ ಯೋಜನೆಯು ಸಶಸ್ತ್ರ ಪಡೆಗಳಿಗೆ ಸೇರುವ ಯುವಕರನ್ನು ದೇಶಕ್ಕೆ ಸೇವೆ ಸಲ್ಲಿಸಲು ಅನುವು ಮಾಡಿಕೊಡುತ್ತದೆ. ಇಂತಹ ಯೋಜನೆ ಬಗ್ಗೆ ಸುಳ್ಳು ಹೇಳುವ ಮೂಲಕ ಯುವಕರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಡ್ರಗ್ಸ್ ದಂಧೆ ಹೆಚ್ಚಾಗಲು ಹಿಂದಿನ ಬಿಜೆಪಿ ಆಡಳಿತವೆ ಕಾರಣ: ರಾಮಲಿಂಗಾರೆಡ್ಡಿ
ಬಿಜೆಪಿ ಆಡಳಿತವಿರುವ ಎಲ್ಲ ರಾಜ್ಯ ಸರ್ಕಾರಗಳು ಈ ಯುವ ಸೈನಿಕರಿಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ 10-20% ರಷ್ಟು ಮೀಸಲಾತಿ ಕಲ್ಪಿಸಿವೆ. ಕೇಂದ್ರದ ಅರೆಸೇನಾ ಪಡೆಗಳಲ್ಲೂ ಮೀಸಲಾತಿ ಕಲ್ಪಿಸಲಾಗಿದೆ. ಅಷ್ಟೇ ಅಲ್ಲ, ಆಯ್ಕೆಯಲ್ಲಿ ಹಲವು ರಿಯಾಯಿತಿಗಳನ್ನು ನೀಡಿದೆ. ಕಾಂಗ್ರೆಸ್ ಯುವಕರನ್ನು ದಾರಿತಪ್ಪಿಸುವುದನ್ನು ನಿಲ್ಲಿಸಬೇಕು ಮತ್ತು ಅವರ ಭವಿಷ್ಯದ ಜೊತೆ ಆಟವಾಡಬಾರದು ಎಂದು ಅವರು ಹೇಳಿದ್ದಾರೆ.
ಸಶಸ್ತ್ರ ಪಡೆಗಳ ಇಚ್ಛೆಗೆ ವಿರುದ್ಧವಾಗಿ ಅಗ್ನಿಪಥ ಯೋಜನೆಯನ್ನು ತರಲಾಗಿದೆ. ಐ.ಎನ್.ಡಿ.ಐ.ಎ ಬಣ ಅಧಿಕಾರಕ್ಕೆ ಬಂದರೆ, ಪಕ್ಷವು ತಕ್ಷಣವೇ ಅದನ್ನು ತಿರಸ್ಕರಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ರಾಹುಲ್ ಗಾಂಧಿ ಇಟಲಿ ಅಥವಾ ಬ್ಯಾಂಕಾಕ್‍ಗೆ ಹೋಗುತ್ತಾರೆ. ಆದರೆ ಅಗ್ನಿವೀರರು ದೇಶಕ್ಕಾಗಿ ಸೇವೆ ಸಲ್ಲಿಸುತ್ತಾರೆ ಎಂದು ಅವರು ರಾಹುಲ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಕಾರು ಅಪಘಾತ – ಮೃತರ ಇಬ್ಬರು ಮಕ್ಕಳ ಶೈಕ್ಷಣಿಕ ಜವಾಬ್ದಾರಿ ಹೊತ್ತ ಶಾಸಕ ಪ್ರದೀಪ್ ಈಶ್ವರ್
– ತುಕ್ಡೆ-ತುಕ್ಡೆ ಗ್ಯಾಂಗ್ ಸಿದ್ಧಾಂತವನ್ನ ಕಾಂಗ್ರೆಸ್ ಹೈಜಾಕ್ ಮಾಡಿದೆ ಎಂದ ಸಚಿವ
ಶಿಮ್ಲಾ: ತುಕ್ಡೆ-ತುಕ್ಡೆ ಗ್ಯಾಂಗ್ (Tukde Tukde gang) ಕಾಂಗ್ರೆಸ್ ಅನ್ನು ಸಂಪೂರ್ಣವಾಗಿ ಸುತ್ತುವರಿದಿದೆ. ಅವರ ಸಿದ್ಧಾಂತವನ್ನು ಕಾಂಗ್ರೆಸ್ ಹೈಜಾಕ್ ಮಾಡಿದೆ. ನಿಮ್ಮ ಮಕ್ಕಳಿಗೆ ಸೇರಬೇಕಾದ ಆಸ್ತಿ ಅವರ ಬಳಿಯೇ ಉಳಿಯಬೇಕೋ ಅಥವಾ ಮುಸ್ಲಿಮರಿಗೆ ಸೇರಬೇಕೋ ಅನ್ನೋದನ್ನ ನೀವು ನಿರ್ಧರಿಸಬೇಕು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಹೇಳಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನಿಮ್ಮ ಮಕ್ಕಳ ಆಸ್ತಿಯನ್ನು ಮುಸ್ಲಿಮರಿಗೆ ಹಂಚುವುದು, ಈ ದೇಶದ ಅಣ್ವಸ್ತ್ರಗಳನ್ನು ನಾಶಪಡಿಸುವುದು, ಜಾತಿವಾದ ಮತ್ತು ಪ್ರಾದೇಶಿಕತೆಯ ಮೇಲೆ ದೇಶವನ್ನು ವಿಭಜನೆ ಮಾಡುವುದು, ವಿದೇಶಿ ಶಕ್ತಿಗಳೊಂದಿಗೆ ಕೈಜೋಡಿಸಿ ದೇಶವನ್ನು ಆಳುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ. ನಾವು ಮುಸ್ಲಿಮರಿಗೆ (Muslims) ಎಲ್ಲಾ ಹಕ್ಕುಗಳನ್ನು ಸಮಾನವಾಗಿ ನೀಡಿದ್ದೇವೆ. ಆದ್ರೆ ಅದನ್ನು ಧರ್ಮದ ಆಧಾರದಲ್ಲಿ ನೀಡಿಲ್ಲ. ನಿಮ್ಮ ಮಕ್ಕಳ ಆಸ್ತಿ ನಿಮ್ಮ ಬಳಿ ಉಳಿಯಬೇಕೋ ಅಥವಾ ಮುಸ್ಲಿಮರ ಪಾಲಾಗಬೇಕೋ ನಿರ್ಧರಿಸಿ ಎಂದು ಎಚ್ಚರಿಸಿದ್ದಾರೆ.
ಇತ್ತೀಚೆಗಷ್ಟೇ ಪ್ರಧಾನಿ ಮೋದಿ, ಮುಸ್ಲಿಮರಿಗೆ ಮೀಸಲಾತಿ ನೀಡಿದ್ದ ವಿಚಾರವನ್ನು ಪ್ರಸ್ತಾಪಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದ ಎಲ್ಲ ವರ್ಗವನ್ನು ಒಬಿಸಿಗೆ ಸೇರಿಸಿ ಆದೇಶ ಹೊರಡಿಸಿದೆ. ಶಿಕ್ಷಣ ಮತ್ತು ಉದ್ಯೋಗದಲ್ಲಿ ಮಾನ್ಯತೆ ನೀಡುವ ಮೂಲಕ ಒಬಿಸಿ ಜನರ ಅವಕಾಶಗಳನ್ನು ಕಳ್ಳತನದಿಂದ ಕಿತ್ತುಕೊಂಡಿದೆ. ಸಂವಿಧಾನ ಮತ್ತು ಕಾನೂನು ವಿರುದ್ಧವಾಗಿ ಒಬಿಸಿ ಮೀಸಲಾತಿಯನ್ನು ನೀಡಲಾಗಿದೆ. ಒಬಿಸಿ ಸಮುದಾಯಕ್ಕೆ ಸಿಗುವ ಲಾಭವನ್ನು ಲೂಟಿ ಮಾಡಿ ಮುಸ್ಲಿಮರಿಗೆ ನೀಡಲಾಗಿದೆ ಎಂದು ವಾಗ್ದಾಳಿ ನಡೆಸಿದ್ದರು. ಇದನ್ನೂ ಓದಿ: ಉಗ್ರ ಕಸಬ್‌ನನ್ನು ಗಲ್ಲಿಗೇರಿಸಲು ವಾದ ಮಂಡಿಸಿದ್ದ ವಕೀಲ ಉಜ್ವಲ್ ನಿಕಮ್‌ಗೆ ಬಿಜೆಪಿ ಟಿಕೆಟ್
ನವದೆಹಲಿ: ಮಂಗಳವಾರ ತಡರಾತ್ರಿ ಉತ್ತರಕಾಶಿಯಲ್ಲಿ (Uttarkashi) ನಡೆಯುತ್ತಿದ್ದ ಕಾರ್ಮಿಕರ (Workers) ರಕ್ಷಣಾ ಕಾರ್ಯಚರಣೆ ನೇರ ಪ್ರಸಾರ ವೀಕ್ಷಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi), ಕಾರ್ಯಚರಣೆ ಯಶಸ್ವಿಯಾದ ಬಳಿಕ ಭಾವುಕರಾಗಿದ್ದರು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಹೇಳಿದ್ದಾರೆ.
ಮಂಗಳವಾರ ರಕ್ಷಣಾ ಕಾರ್ಯಚರಣೆ ನಡೆಯುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ ನಡೆಯುತ್ತಿತ್ತು. ಕ್ಯಾಬಿನೆಟ್ ಸಹದ್ಯೋಗಿಗಳ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಕಾರ್ಯಚರಣೆ ನೇರ ಪ್ರಸಾರವನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಸಿಕ್ಕಿಬಿದ್ದ ಕಾರ್ಮಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಿದ ನಂತರ ಪ್ರಧಾನಿ ಭಾವುಕರಾದರು ಎಂದರು. ಇದನ್ನೂ ಓದಿ: ಮಹಿಳಾ ಸ್ವಸಹಾಯ ಗುಂಪುಗಳಿಗೆ ಡ್ರೋನ್ – ಸಂಪುಟ ಸಭೆಯಲ್ಲಿ ಮೋದಿ ಮಹತ್ವದ ನಿರ್ಧಾರ
ಸುರಂಗ ಕುಸಿತದ ಬಳಿಕ ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಜೊತೆಗೆ ನಿರಂತರವಾಗಿ ದೂರವಾಣಿ ಮೂಲಕ ಮಾಹಿತಿ ಪಡೆಯುತ್ತಿದ್ದರು. ಪ್ರಧಾನಿ ಕಾರ್ಯಲಯದಿಂದ ಮೇಲ್ವಿಚಾರಣೆಗೆ ವಿಶೇಷ ತಂಡವನ್ನು ಕಳುಹಿಸಿದ್ದರು. ಕಾರ್ಮಿಕರ ರಕ್ಷಣೆ ಬಳಿಕ ಎಕ್ಸ್‌ನಲ್ಲಿ ಟ್ವೀಟ್ ಮಾಡಿ ಕಾರ್ಯಚರಣೆಯಲ್ಲಿ ಭಾಗಿಯಾದ ಎಲ್ಲರನ್ನು ಶ್ಲಾಘಿಸಿದ್ದರು. ಇದನ್ನೂ ಓದಿ: ಧ್ವನಿವರ್ಧಕಗಳಲ್ಲಿ ಆಜಾನ್ ಕೂಗುವುದು ನಿಷೇಧಿಸಲು ಮನವಿ- ಅರ್ಜಿದಾರರಿಗೆ ಹೈಕೋರ್ಟ್ ತರಾಟೆ
ನವದೆಹಲಿ: ಮುಂದಿನ 4 ವರ್ಷಗಳಲ್ಲಿ 15 ಸಾವಿರ ಮಹಿಳಾ ಸ್ವಸಹಾಯ ಗುಂಪುಗಳಿಗೆ (Women Self Help Group) ಡ್ರೋನ್ (Drone) ನೀಡುವ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿದೆ. 2023-2024 ಮತ್ತು 2025-2026ರ ಅವಧಿಯಲ್ಲಿ ಡ್ರೋನ್ ವಿತರಿಸಲಿದ್ದು ಕೃಷಿ ಚಟುವಟಿಕೆಗಳಿಗೆ ಬಾಡಿಗೆ ನೀಡುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ಮತ್ತೊಂದು ಅವಕಾಶ ಕಲ್ಪಿಸಲಾಗುತ್ತಿದೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಅನುರಾಗ್ ಠಾಕೂರ್, ಸರ್ಕಾರವೂ ಡ್ರೋನ್ ಖರೀದಿಗೆ 80% ಹಣ ಅಥಾವ 8 ಲಕ್ಷದ ಗರಿಷ್ಠ ನೆರವು ನೀಡಲಿದೆ. ಮುಂದಿನ 4 ವರ್ಷದ ಯೋಜನೆಗೆ ಸರ್ಕಾರವು 1,261 ಕೋಟಿ ರೂ. ಹಣ ಮೀಸಲಿಡಲಿದೆ ಎಂದು ತಿಳಿಸಿದರು.
ಕೃಷಿ ಚಟುವಟಿಗಳಲ್ಲಿ ಡ್ರೋನ್ ಬಳಕೆ ಹೆಚ್ಚುತ್ತಿದೆ. ರಸಗೊಬ್ಬರಗಳ ಸಿಂಪಡಣೆ ಡ್ರೋನ್ ಮೂಲಕ ಮಾಡಲಾಗುತ್ತಿದೆ. ದೇಶದಲ್ಲಿ ಹತ್ತು ಕೋಟಿ ಮಹಿಳೆಯರು ಸ್ವಸಹಾಯ ಗುಂಪುಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಇವರಿಗೆ ಲಕ್‌ಪತಿ ದೀದಿ ಯೋಜನೆಯಡಿ ಡ್ರೋನ್ ನೀಡುವ ಮೂಲಕ ಕೃಷಿ ವಲಯದಲ್ಲಿ ಕ್ರಾಂತಿ ಮಾಡುವ ಉದ್ದೇಶ ಹೊಂದಲಾಗಿದೆ. ಡ್ರೋನ್ ಚಾಲನೆಗೆ 5 ದಿನ ತರಬೇತಿ ನೀಡಲಾಗುವುದು. ರಸಗೊಬ್ಬರ ಸಿಂಪಪಡೆಗೆ 10 ದಿನಗಳ ತರಬೇತಿ ನೀಡಲಾಗುವುದು ಎಂದು ತಿಳಿಸಿದರು. ಇದನ್ನೂ ಓದಿ: ಧ್ವನಿವರ್ಧಕಗಳಲ್ಲಿ ಆಜಾನ್ ಕೂಗುವುದು ನಿಷೇಧಿಸಲು ಮನವಿ- ಅರ್ಜಿದಾರರಿಗೆ ಹೈಕೋರ್ಟ್ ತರಾಟೆ
ಇದೇ ವೇಳೆ ಮುಂದಿನ 5 ವರ್ಷಗಳ ಕಾಲ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ವಿಸ್ತರಣೆ ಮಾಡಲು ಸಂಪುಟದಲ್ಲಿ ನಿರ್ಧರಿಸಿದೆ. ಬಡ ಕುಟುಂಬಗಳಿಗೆ ತಿಂಗಳಿಗೆ 5 ಕೆಜಿ ಉಚಿತ ಆಹಾರ ಧಾನ್ಯ ನೀಡುವುದು, ಅಂತ್ಯೋದಯ ಕುಟುಂಬಗಳಿಗೆ ತಿಂಗಳಿಗೆ 35 ಕೆಜಿ ಉಚಿತ ಆಹಾರ ಧಾನ್ಯಗಳು ನೀಡುವ ಯೋಜನೆಯಾಗಿದ್ದು, ಸುಮಾರು 81 ಕೋಟಿ ಜನರು ಪ್ರಯೋಜನ ಪಡೆಯಲಿದ್ದಾರೆ. ಮುಂದಿನ 5 ವರ್ಷಗಳಲ್ಲಿ ಯೋಜನೆಗೆ ಸರ್ಕಾರ ಒಟ್ಟು 11.80 ಲಕ್ಷ ಕೋಟಿ ರೂ. ಖರ್ಚು ಮಾಡಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ಹೇಳಿದರು. ಇದನ್ನೂ ಓದಿ: ಹಾರಾಟದಲ್ಲಿದ್ದ ವಿಮಾನದಲ್ಲೇ ಗಂಡ, ಹೆಂಡತಿ ಗಲಾಟೆ – ಬ್ಯಾಂಕಾಕ್‍ಗೆ ಹೊರಟಿದ್ದ ವಿಮಾನ ದೆಹಲಿಯಲ್ಲಿ ಲ್ಯಾಂಡ್
ನವದೆಹಲಿ: ಪ್ರತಿಭೆ ಗುರುತಿಸುವ, ಯುವ ಮತ್ತು ಮಹತ್ವಾಕಾಂಕ್ಷಿ ಪ್ಯಾರಾ-ಅಥ್ಲೀಟ್‌ಗಳಿಗೆ ಅವಕಾಶವನ್ನು ಸೃಷ್ಟಿಸುವ ದೂರದೃಷ್ಟಿ ಮೊದಲ ಬಾರಿಗೆ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ( Khelo India Para Games) ಆಯೋಜಿಸಲಾಗುವುದು ಎಂದು ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ (Anurag Thakur) ಘೋಷಿಸಿದ್ದಾರೆ.
ಡಿಸೆಂಬರ್ 10 ರಿಂದ 17 ರವರೆಗೆ ಮೊದಲ ಬಾರಿಗೆ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ನವದೆಹಲಿಯ ವಿವಿಧ ಸ್ಥಳಗಳಲ್ಲಿ ನಡೆಯಲಿದೆ ಎಂದು ಘೋಷಿಸಲು ನಾನು ಹೆಮ್ಮೆಪಡುತ್ತೇನೆ. ಮೂರು ಕ್ರೀಡಾಂಗಣಗಳಲ್ಲಿ (ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ) ಒಟ್ಟು 7 ವಿಭಾಗಗಳಲ್ಲಿ ಕ್ರೀಡೆ ಆಯೋಜಿಸಲಾಗಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ. ಇದನ್ನೂ ಓದಿ: ಪಾಕ್ ಆಟಗಾರರಿಗೆ ನನ್ನ ಯಶಸ್ಸನ್ನು ಅರಗಿಸಿಕೊಳ್ಳಲಾಗುತ್ತಿಲ್ಲ – ಶಮಿ ತಿರುಗೇಟು
ದೇಶದಲ್ಲಿ ಪ್ಯಾರಾ-ಸ್ಪೋರ್ಟ್ಸ್ ಅನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ಉದ್ದೇಶವಾಗಿದೆ. ಇದು ಪ್ರತಿಭಾವಂತ ಪ್ಯಾರಾ-ಅಥ್ಲೀಟ್‌ಗಳನ್ನು ಗುರುತಿಸಲು ಸಹಾಯ ಮಾಡುತ್ತದೆ. ಕ್ರೀಡಾಪಟುಗಳ ಕೌಶಲಗಳನ್ನು ವೃದ್ಧಿಸಲು ಇಂತಹ ಕ್ರೀಡೆಗಳು ಸಹಕಾರಿ ಎಂದು ಹೇಳಿದ್ದಾರೆ.
ಸೇವಾ ಕ್ರೀಡಾ ನಿಯಂತ್ರಣ ಮಂಡಳಿ ಸೇರಿದಂತೆ 32 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 1,350 ಕ್ಕೂ ಹೆಚ್ಚು ಕ್ರೀಡಾಪಟುಗಳು ಈ ಚೊಚ್ಚಲ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಇದು ಪ್ಯಾರಾ ಅಥ್ಲೆಟಿಕ್ಸ್, ಪ್ಯಾರಾ ಶೂಟಿಂಗ್, ಪ್ಯಾರಾ ಆರ್ಚರಿ ಸೇರಿದಂತೆ ಏಳು ವಿಭಾಗಗಳಲ್ಲಿ ಕ್ರೀಡಾಪಟುಗಳ ಪಾಲ್ಗೊಳ್ಳಲಿದ್ದಾರೆ. ಫುಟ್ಬಾಲ್, ಪ್ಯಾರಾ-ಬ್ಯಾಡ್ಮಿಂಟನ್, ಪ್ಯಾರಾ ಟೇಬಲ್ ಟೆನಿಸ್ ಮತ್ತು ಪ್ಯಾರಾ ವೇಟ್ ಲಿಫ್ಟಿಂಗ್ ಕೂಡ ಇರಲಿದೆ. IG ಸ್ಟೇಡಿಯಂ, ತುಘಲಕಾಬಾದ್‌ನ ಶೂಟಿಂಗ್ ರೇಂಜ್ ಮತ್ತು JLN ಸ್ಟೇಡಿಯಂಗಳಲ್ಲಿ ಸ್ಫೋರ್ಟ್ಸ್ ನಡೆಯಲಿವೆ. ಇದನ್ನೂ ಓದಿ: ಇಂದಿನಿಂದ ಭಾರತ-ಆಸೀಸ್ T20 ಸರಣಿ – ODI ನಲ್ಲಿ ಫ್ಲಾಪ್ ಆದ್ರೂ T20ಯಲ್ಲಿ ಅಬ್ಬರಿಸ್ತಾರಾ ಸೂರ್ಯ?
ಇತ್ತೀಚಿನ ಹ್ಯಾಂಗ್‌ಝೌ ಏಷ್ಯನ್ ಪ್ಯಾರಾ ಗೇಮ್ಸ್ ತಾರೆಯರಾದ ಶೀತಲ್ ದೇವಿ, ಭಾವಿನಾ ಪಟೇಲ್, ಏಕ್ತಾ ಭಯ್, ನೀರಜ್ ಯಾದವ್, ಸಿಂಗ್‌ರಾಜ್, ಮನೀಶ್, ಸೋನಾಲ್, ರಾಕೇಶ್ ಕುಮಾರ್ ಮತ್ತು ಸರಿತಾ ಸೇರಿದಂತೆ ಇತರರು ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್‌ನ ಮೊದಲ ಆವೃತ್ತಿಯಲ್ಲಿ ತಮ್ಮ ರಾಜ್ಯಗಳನ್ನು ಪ್ರತಿನಿಧಿಸುವ ನಿರೀಕ್ಷೆಯಿದೆ.
ಹ್ಯಾಂಗ್‌ಝೌನಲ್ಲಿ ಇತ್ತೀಚೆಗೆ ನಡೆದ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಅಭೂತಪೂರ್ವ 111 ಪದಕಗಳನ್ನು ಗೆದ್ದ ಭಾರತೀಯ ಪ್ಯಾರಾ-ಅಥ್ಲೀಟ್‌ಗಳ ಸಾಧನೆ ಶ್ಲಾಘನೀಯ ಎಂದು ಸಚಿವರು ಬಣ್ಣಿಸಿದ್ದಾರೆ. ಪ್ಯಾರಾಲಿಂಪಿಕ್ ಕ್ರೀಡೆಯಲ್ಲಿ ಹೆಚ್ಚಿನ ಅಭಿವೃದ್ಧಿಯು ನಮ್ಮ ಪ್ರಮುಖ ಅಜೆಂಡಾವಾಗಿದೆ. ಮೊದಲ ಬಾರಿಗೆ ಖೇಲೋ ಇಂಡಿಯಾ ಪ್ಯಾರಾ ಗೇಮ್ಸ್ ಆಯೋಜಿಸುತ್ತಿರುವುದು ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೃಷ್ಟಿಯ ಮತ್ತೊಂದು ದೊಡ್ಡ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಟಿ20-ಐಗೆ ರೋಹಿತ್ ಶರ್ಮಾ ನಿವೃತ್ತಿ? ಬಿಸಿಸಿಐ ಜೊತೆ ಚರ್ಚೆ
2018 ರಿಂದ ಒಟ್ಟು 11 ಖೇಲೋ ಇಂಡಿಯಾ ಗೇಮ್ಸ್ ಯಶಸ್ವಿಯಾಗಿ ನಡೆದಿವೆ. ಇವುಗಳ ಪೈಕಿ ಐದು ಖೇಲೋ ಇಂಡಿಯಾ ಯೂತ್ ಗೇಮ್ಸ್, ಮೂರು ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಮತ್ತು ಮೂರು ಖೇಲೋ ಇಂಡಿಯಾ ವಿಂಟರ್ ಗೇಮ್ಸ್ ಸೇರಿವೆ. ಈ ಕ್ರೀಡಾಕೂಟಗಳು ದೇಶದಾದ್ಯಂತ ಪ್ರತಿಭೆಗಳನ್ನು ಗುರುತಿಸುವಲ್ಲಿ ಪ್ರಮುಖವಾಗಿವೆ. ಪ್ರತಿಷ್ಠಿತ ಬಹು-ಶಿಸ್ತಿನ ಈವೆಂಟ್‌ಗಳಲ್ಲಿ ಭಾರತದ ಪ್ರದರ್ಶನಕ್ಕೆ ಸಹಾಯ ಮಾಡಿವೆ ಎಂದು ಠಾಕೂರ್ ಬಣ್ಣಿಸಿದ್ದಾರೆ.
ಅದೊಂದು ಕಾಲವಿತ್ತು, ಆಗ ಭಾರತದ ಕೆಲ ಕ್ರೀಡಾಪಟುಗಳು ಬರಿಗಾಲಿನಲ್ಲಿ ಕ್ರೀಡಾಕೂಟದಲ್ಲಿ ಪಾಲ್ಗೊಂಡ ದಿನಗಳು ಅದು. ಆದ್ರೆ ಇಂದು ವಿಶ್ವದ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತಿರುವ ಭಾರತದ ಆತ್ಮವಿಶ್ವಾಸವೇ ಬೇರೆ. ಸದ್ಯ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಆತಿಥ್ಯದಿಂದ ಯಶಸ್ಸು ಕಾಣುತ್ತಿರುವ ಭಾರತ, ವಿಶ್ವ ಜಾಗತಿಕ ಕ್ರೀಡಾಹಬ್ಬ ಒಲಿಂಪಿಕ್ಸ್ (Olympics) ಕ್ರೀಡಾಕೂಟ ಆಯೋಜಿಸಲು ಸಜ್ಜಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ (Narendra Modi) ಹಾಗೂ ಕೇಂದ್ರ ಸಚಿವ ಅನುರಾಗ್ ಠಾಕೂರ್ ಇದನ್ನು ಇತ್ತೀಚೆಗೆ ಪ್ರಸ್ತಾಪಿಸಿದ್ದಾರೆ.
ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಭಾರತ ಒಲಿಂಪಿಕ್ಸ್ ಆತಿಥ್ಯ ವಹಿಸಲು ಕಾತರದಿಂದ ಕಾಯುತ್ತಿದೆ. 2036ರ ಒಲಿಂಪಿಕ್ಸ್ (Olympics 2036) ಯಶಸ್ವಿಯಾಗಿ ಸಂಘಟಿಸಲು ಯಾವ ಕೊರತೆಯೂ ಆಗದಂತೆ ನೋಡಿಕೊಳ್ಳುತ್ತದೆ. ಇದು 140 ಕೋಟಿ ಭಾರತೀಯರ ಕನಸು ಎಂದು ಹೇಳಿದ್ದರು. ಅಲ್ಲದೇ ಕೇಂದ್ರೀಯ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆ ಸಚಿವ ಅನುರಾಗ್ ಠಾಕೂರ್ (Anurag Thakur), ಭಾರತ ಖಂಡಿತವಾಗಿಯೂ ಈ ಅವಕಾಶ ಸದುಪಯೋಗಪಡಿಸಿಕೊಳ್ಳಲಿದೆ. ಕಳೆದ 9 ವರ್ಷಗಳಲ್ಲಿ ಕೇಂದ್ರ ಸರ್ಕಾರ ಕ್ರೀಡೆಗೆ ನೀಡಿದ ಅನುದಾನದಲ್ಲಿ 2.5 ಪಟ್ಟು ಹೆಚ್ಚಾಗಿದೆ. ಕ್ರೀಡೆಗೆ ಉತ್ತೇಜನ ನೀಡಬೇಕು ಅನ್ನೋದು ಇದರಿಂದ ಸ್ಪಷ್ಟವಾಗಿ ಕಾಣುತ್ತದೆ. ಅಲ್ಲದೇ ಕಳೆದ 2 ವರ್ಷಗಳಲ್ಲಿ ನಡೆದ ಟೋಕಿಯೊ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಕಿವುಡರ ಒಲಿಂಪಿಕ್ಸ್, ಕಾಮನ್‌ವೆಲ್ತ್ ಗೇಮ್ಸ್, ವಿಶ್ವ ಚಾಂಪಿಯನ್‌ಶಿಪ್ ಈ ಎಲ್ಲಾ ಚಾಂಪಿಯನ್‌ಶಿಪ್‌ಗಳಲ್ಲೂ ಭಾರತ ಉತ್ತಮ ಸಾಧನೆಯನ್ನೇ ತೋರಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಏಷ್ಯನ್ ಗೇಮ್ಸ್‌ನಲ್ಲೂ 107 ಪದಕಗಳನ್ನ ಗೆದ್ದು ಭಾರತ ಇತಿಹಾಸ ನಿರ್ಮಿಸಿದೆ. ಅಷ್ಟೇ ಯಾಕೆ ಚೆಸ್ ಒಲಂಪಿಯಾಡ್, ಕ್ರಿಕೆಟ್ ವಿಶ್ವಕಪ್ ಟೂರ್ನಿಗಳ ಆತಿಥ್ಯ ವಹಿಸಿರುವ ಭಾರತ ಯಶಸ್ವಿಯಾಗಿ ನಿರ್ವಹಣೆ ಮಾಡುತ್ತಿದ್ದು, ಇವೆಲ್ಲವೂ ಭಾರತದ ಆತ್ಮವಿಶ್ವಾಸ ಹೆಚ್ಚಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಗುಜರಾತ್‌ನಲ್ಲಿ 2036ರ ಒಲಿಂಪಿಕ್ಸ್ ಜಾಗತಿಕ ಕ್ರೀಡಾ ಹಬ್ಬ ಜರುಗಲಿದೆ.
ಒಲಿಂಪಿಕ್ಸ್ ಆತಿಥ್ಯ ಪಡೆಯುವುದು ಹೇಗೆ?
ವಿಶ್ವದ ಸುಮಾರು ರಾಷ್ಟ್ರಗಳು ಪಾಲ್ಗೊಳ್ಳುವ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುವುದು ಸುಲಭದ ಕೆಲಸವಲ್ಲ. 45 ರಾಷ್ಟ್ರಗಳು ಪಾಲ್ಗೊಳ್ಳುವ ಏಷ್ಯಾಡ್, 56 ದೇಶಗಳು ಅಂಗಳಕ್ಕಿಳಿಯುವ ಕಾಮನ್‌ವೆಲ್ತ್, 10 ರಾಷ್ಟ್ರಗಳು ಆಡುವ ವಿಶ್ವಕಪ್ ಟೂರ್ನಿಗಿಂತ ಒಲಿಂಪಿಕ್ಸ್ ಕೂಟಕ್ಕೆ ಜವಾಬ್ದಾರಿ ಹೆಚ್ಚಾಗಿರುತ್ತದೆ. ಅದಕ್ಕೆ ತಕ್ಕಂತೆ ಲಕ್ಷಕೋಟಿಗಟ್ಟಲೆ ವೆಚ್ಚವನ್ನೂ ಮಾಡಬೇಕಾಗುತ್ತದೆ. ಈ ಜಾಗತಿಕ ಕ್ರೀಡಾ ಹಬ್ಬವು ವಾಸ್ತವವಾಗಿ ಶತಕೋಟಿ ಡಾಲರ್‌ಗಳ ವಿಷಯ. ಸ್ಥಳ, ಮಾನವ ಸಂಪನ್ಮೂಲ, ಮೂಲಸೌಕರ್ಯ ಮತ್ತು ಮನರಂಜನೆ ಸೇರಿದಂತೆ ಎಲ್ಲಾ ಸೌಲಭ್ಯಗಳೂ ಅಚ್ಚುಕಟ್ಟಾಗಿದ್ದರಷ್ಟೇ ಯಶಸ್ವಿಯಾಗಿ ಆಯೋಜನೆ ಮಾಡಲು ಸಾಧ್ಯ. ಇದಕ್ಕಾಗಿ ಆತಿಥೇಯ ದೇಶವು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ) ಜತೆ ಒಪ್ಪಂದ ಮಾಡಿಕೊಳ್ಳಬೇಕು. ಆಯೋಜನೆಯ ಪೈಪೋಟಿ ವೇಳೆ ಅತಿಹೆಚ್ಚು ಬಿಡ್ ಮಾಡುವ ರಾಷ್ಟ್ರಕ್ಕೆ ಒಲಿಂಪಿಕ್ಸ್ ಆತಿಥ್ಯದ ಅವಕಾಶ ಲಭಿಸುತ್ತದೆ.
ಒಲಿಂಪಿಕ್ಸ್ ಆತಿಥ್ಯ ಭಾರತಕ್ಕೆ ಏಕೆ ಮುಖ್ಯ?
ಒಲಿಂಪಿಕ್ಸ್ ಕ್ರೀಡಾಕೂಟವು ಪ್ರತಿ 4 ವರ್ಷಗಳಿಗೊಮ್ಮೆ ನಡೆಯುತ್ತದೆ. 2024ರ ಒಲಿಂಪಿಕ್ಸ್ ಪ್ಯಾರಿಸ್‌ನಲ್ಲಿ 2028ರ ಒಲಿಂಪಿಕ್ಸ್ ಅಮೆರಿಕದ ಲಾಸ್ ಏಂಜಲೀಸ್‌ನಲ್ಲಿ ನಡೆಯಲಿವೆ. 2032ರ ಆತಿಥ್ಯ ಆಸ್ಟ್ರೇಲಿಯಾದ ಪಾಲಾಗಿದೆ. ಈಗ 2036, 2040ರ ಸರದಿ ಬಾಕಿಯಿದ್ದು, ಭಾರತ ಈ ವಿಚಾರದಲ್ಲಿ ಪ್ರಬಲ ಆಕಾಂಕ್ಷಿಯಾಗಿದೆ. ಯಾವುದೇ ರಾಷ್ಟ್ರಕ್ಕೆ ಒಲಿಂಪಿಕ್ಸ್ ಆತಿಥ್ಯ ಲಾಭ ತಂದುಕೊಡುತ್ತದೆ. ಒಲಿಂಪಿಕ್ಸ್ ಕ್ರೀಡಾಕೂಡ ಆಯೋಜನೆಯಿಂದ ಅಂತಾರಾಷ್ಟ್ರೀಯ ಸಂಬಂಧಗಳ ಸುಧಾರಣೆಯಾಗಲಿದೆ. ಜೊತೆಗೆ ಬಹುರಾಷ್ಟ್ರೀಯ ಸಂಸ್ಥೆಗಳ ಹೂಡಿಕೆಯಿಂದ ಭಾರೀ ಲಾಭ ಸಿಗುತ್ತದೆ. ಅನೇಕ ರಾಷ್ಟ್ರಗಳ ರಾಯಭಾರಿಗಳು ಆಗಮಿಸುವುದರಿಂದ ಕ್ರೀಡಾ ರಾಜತಾಂತ್ರಿಕ ಸಂಬಂಧಗಳು ಬಲಗೊಳ್ಳುತ್ತವೆ. ಸ್ಥಳೀಯ ಕ್ರೀಡೆಗಳಿಗೆ ಉತ್ತೇಜನ ಸಿಗುತ್ತದೆ, ಕ್ರೀಡಾ ಉದ್ಯಮಕ್ಕೆ ಬಲ ಸಿಗುತ್ತದೆ, ಮುಖ್ಯವಾಗಿ ಪ್ರವಾಸೋದ್ಯಮಕ್ಕೆ ಒಲಿಂಪಿಕ್ಸ್ ಬಹುದೊಡ್ಡ ಬೂಸ್ಟರ್ ಡೋಸ್ ಆಗಿದ್ದು, ಉದ್ಯೋಗಾವಕಾಶಗಳೂ ಸೃಸ್ಟಿಯಾಗುತ್ತವೆ.
ಮೋದಿ ತವರಲ್ಲಿ ತಯಾರಿ ಶುರು:
ಅಮಿತ್ ಶಾ ಅವರು ಈಗಾಗಲೇ ಒಲಿಂಪಿಕ್ಸ್ ಸಿದ್ಧತೆಗಾಗಿ ಮಹತ್ವದ ಸಭೆಗಳನ್ನ ನಡೆಸಿದ್ದು, ಗುಜರಾತ್‌ನಲ್ಲಿ ತಯಾರಿ ಶುರುವಾಗಿದೆ. ಗುಜರಾತ್ ಸರ್ಕಾರ ಎಕರೆ ಭೂಮಿ ಗುರುತಿಸಿ, ಕಾಮಗಾರಿ ಆರಂಭಿಸಿದೆ. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂ ಬಳಿ ಸಂಭಾವ್ಯ ಒಲಿಂಪಿಕ್ ಗ್ರಾಮ ನಿರ್ಮಾಣವಾಗುತ್ತಿದೆ. ಅಹಮದಾಬಾದ್‌ನ ಸರ್ದಾರ್ ಸ್ಪೋರ್ಟ್ಸ್ ಎನ್‌ಕ್ಲೇವ್ ಒಲಿಂಪಿಕ್ಸ್ ಕೂಟದ ಪ್ರಮುಖ ಕೇಂದ್ರವಾಗಲಿದ್ದು, ಇಲ್ಲಿ 20ಕ್ಕೂ ಹೆಚ್ಚು ಕ್ರೀಡೆಗಳನ್ನು ಆಯೋಜಿಸಲು ಸಿದ್ಧತೆಗಳು ನಡೆಯಲಿವೆ ಎನ್ನಲಾಗುತ್ತಿದೆ. ರಾಜ್ಯದಾದ್ಯಂತ 33 ಕ್ರೀಡಾ ಸ್ಥಳಗಳನ್ನ ಪಟ್ಟಿ ಮಾಡಲಾಗಿದ್ದು, ಶಿವರಾಜಪುರ, ಸೂರತ್‌ನ ಕರಾವಳಿಗಳಲ್ಲಿ ಜಲ ಕ್ರೀಡೆಗಳಿಗೆ ಆದ್ಯತೆ ನೀಡಲಾಗಿದೆ. ಸೂರತ್ ನಗರದಲ್ಲಿ ಜಲಕ್ರೀಡೆಗಳಿಗೆ ಅನುಕೂಲಕರ ವಾತಾವರಣ ಇರುವುದರಿಂದ ಗುಜರಾತ್‌ನಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟ ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಒಲಿಂಪಿಕ್ಸ್ ಆಯೋಜಿಸಲು ಭಾರತಕ್ಕೆಷ್ಟು ಹಣ ಬೇಕು?
2008ರ ಬೀಜಿಂಗ್ ಒಲಿಂಪಿಕ್ಸ್ ಇದುವರೆಗಿನ ಅತ್ಯುತ್ತಮ ಆಯೋಜನೆ ಎಂದೇ ವಿಶ್ಲೇಷಿಸಲಾಗುತ್ತದೆ. ಚೀನಾ ಬರೋಬ್ಬರಿ 6.81 ಶತಕೋಟಿ ಡಾಲರ್ ವೆಚ್ಚಮಾಡಿತ್ತು. ಚೀನಾದಂತೆ ಸಕಲ ವ್ಯವಸ್ಥೆಗಳನ್ನು ನೀಡಿ ಒಲಿಂಪಿಕ್ಸ್ ಆಯೋಜಿಸಲು 2 ಭಾರತಕ್ಕೆ ಕನಿಷ್ಠ 3-4 ಲಕ್ಷಕೋಟಿ ರೂ. ಮೀಸಲಿಡುವುದು ಅನಿವಾರ್ಯವಾಗಬಹುದು. ಆದರೆ, ಹಲವು ರಾಷ್ಟ್ರಗಳು ಐಒಸಿ ಅಂದಾಜಿಸುವ ವಾಸ್ತವಿಕ ವೆಚ್ಚಕ್ಕಿಂತ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದ ನಿದರ್ಶನಗಳೂ ಇವೆ. ವಿಶೇಷವಾಗಿ ಈ ಸಂದರ್ಭದಲ್ಲಿ ಮೂಲ ಸೌಕರ್ಯಗಳಿಗೆ ಹೆಚ್ಚಿನ ವೆಚ್ಚ ಬೀಳುತ್ತದೆ.
ಒಲಿಂಪಿಕ್ಸ್ ಆಯೋಜನೆ ಎಲ್ಲಿ – ವಿನಿಯೋಗಿಸಿದ ವೆಚ್ಚ ಎಷ್ಟು (ಶೇಕಡಾವಾರು)?
ಟೋಕಿಯೊ (ಜಪಾನ್) 2020- (500%)
ರಿಯೋ ಡಿ ಜನೈರೋ (ಬ್ರೆಜಿಲ್)- 2016 – (51%)
ಲಂಡನ್ (ಇಂಗ್ಲೆಂಡ್)- 2012-(76%)
ಬೀಜಿಂಗ್ (ಚೀನಾ)- 2008-(2%)
ಅಥೆನ್ಸ್ (ಗ್ರೀಸ್) – 2004-(49%)
ಸಿಡ್ನಿ (ಆಸ್ಟ್ರೇಲಿಯಾ)- 2000-(90%)
ಅಟ್ಲಾಂಟಾ (ಅಮೆರಿಕ) – 1996-(151%)
ಬಾರ್ಸಿಲೋನಾ (ಸ್ಪೇನ್) – 1993 -(266%)
ಭಾರತದ ಮುಂದಿರುವ ಸವಾಲುಗಳೇನು?
ಮುಂದಿನ ಜಾಗತಿಕ ಕೂಟಗಳಲ್ಲಿ ಭಾರತ ಹೆಚ್ಚಿನ ಪದಕಗಳನ್ನು ಗೆದ್ದು ತಾನು ಕ್ರೀಡಾ ಪವರ್ ಹೌಸ್ ಎಂದು ಸಾಬೀತು ಪಡಿಸುವುದು. ಸುಮಾರು ಒಂದೂವರೆ ಶತಕೋಟಿ ಜನಸಂಖ್ಯೆಯ ರಾಷ್ಟ್ರಕ್ಕೆ ಹೆಚ್ಚಿನ ಸಂಖ್ಯೆಯ ಒಲಿಂಪಿಕ್ ಪದಕ ವಿಜೇತರನ್ನು ಹೊಂದುವುದು ಪ್ರತಿಷ್ಠೆಯ ವಿಚಾರವಾಗಬೇಕಿದೆ. ಅತ್ಯುತ್ತಮ ಮೂಲಸೌಕರ್ಯಗಳೊಂದಿಗೆ ಕ್ರೀಡಾಕೂಟ ಆಯೋಜಿಸುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ಭಾರತ ಸಾಬೀತು ಮಾಡಬೇಕು. ಇಂಡೋನೇಷ್ಯಾ, ಕತಾರ್, ಕೊರಿಯಾ, ಜರ್ಮನಿಯಂಥ ಪ್ರಬಲ ಸ್ಪರ್ಧಿಗಳ ನಡುವೆ ಬಿಡ್ ಮಾಡಬೇಕು. ಮಾಲಿನ್ಯ ಮತ್ತು ತ್ಯಾಜ್ಯ ನಿರ್ವಹಣೆ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಸ್ವಚ್ಛ ಮತ್ತು ಸುರಕ್ಷಿತ ಸೌಲಭ್ಯಗಳನ್ನು ಒದಗಿಸಬೇಕು. ವಿವಿಧ ಅಕಾಡೆಮಿಗಳು, ಕ್ರೀಡಾ ಸಂಸ್ಥೆಗಳು ಇದಕ್ಕೆ ಕೈಜೋಡಿಸಬೇಕು.
ನವದೆಹಲಿ: ದೆಹಲಿ ಹೊಸ ಮದ್ಯ ನೀತಿ ಪ್ರಕರಣದಲ್ಲಿ (Delhi Liquor Policy Case) ಡಿಸಿಎಂ ಮನೀಶ್ ಸಿಸೊಡಿಯಾ ಸೇರಿ ಹಲವು ನಾಯಕರು ಬಂಧನಕ್ಕೊಳಪಟ್ಟಿದ್ದಾರೆ. ಪ್ರಕರಣದ ಕಿಂಗ್‌ಪಿನ್ ಇನ್ನೂ ಹೊರಗಿದ್ದು ಅವರ ಸರದಿಯೂ ಬರಲಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ (Anurag Thakur) ವಾಗ್ದಾಳಿ ನಡೆಸಿದ್ದಾರೆ. ತಮ್ಮ ಹೇಳಿಕೆಯಲ್ಲಿ ಪರೋಕ್ಷವಾಗಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ.
ಛತ್ತೀಸ್‌ಗಢದ ರಾಯ್‌ಪುರದಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕೂರ್, ಭ್ರಷ್ಟಾಚಾರದ ವಿರುದ್ಧ ಭಾರತ ಎನ್ನುವ ಘೋಷಣೆಯ ಮೇಲೆ ಅಧಿಕಾರಕ್ಕೆ ಬಂದವರು ಈಗ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ ಎಂದು ಎಎಪಿಯನ್ನ (AAP) ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: Bigg Boss Kannada 10: ದೊಡ್ಮನೆಗೆ ಜಗ್ಗೇಶ್ ಎಂಟ್ರಿ: ನಟ ಹೇಳಿದ್ದೇನು?
ಅರವಿಂದ್ ಕೇಜ್ರಿವಾಲ್ (Arvind Kejriwal) ಹೇಳಿಕೆ ನೋಡಿ ಜನರು ನಗುತ್ತಿದ್ದಾರೆ. ಇದೇ ವ್ಯಕ್ತಿಗಳು ಆರಂಭದಲ್ಲಿ ಭ್ರಷ್ಟಾಚಾರದ ವಿರುದ್ಧ ಭಾರತ ಎಂಬ ಘೋಷಣೆಯನ್ನು ಪ್ರತಿಪಾದಿಸಿದ್ದರು. ಆದರೀಗ ಅದೇ ಭ್ರಷ್ಟ ಅಭ್ಯಾಸಗಳಲ್ಲಿ ಸಿಲುಕಿಕೊಂಡಿದ್ದಾರೆ. ಪಂಜಾಬ್‌ನಲ್ಲಿ, ಆಪ್ ಅಧಿಕಾರಕ್ಕೆ ಬಂದಿತು, ಆದರೆ ಎರಡು ತಿಂಗಳೊಳಗೆ ರಾಜ್ಯದ ಆರೋಗ್ಯ ಸಚಿವರು ಭ್ರಷ್ಟಾಚಾರದ ಕಾರಣದಿಂದ ಕೆಳಗಿಳಿಯಬೇಕಾಯಿತು ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಇಸ್ಪೀಟ್ ಅಡ್ಡೆಯ ಮೇಲೆ ದಾಳಿ – 1.78 ಲಕ್ಷ ರೂ. ಜಪ್ತಿ
ಕೇಜ್ರಿವಾಲ್ ಅವರು ತಮ್ಮ ಖ್ಯಾತಿಗೆ ಕಳಂಕ ತಂದಿರುವ ಮದ್ಯದ ಹಗರಣದ ಬಗ್ಗೆ ವಿವರಣೆ ನೀಡಲು ವಿಫಲರಾಗಿದ್ದಾರೆ. ದೆಹಲಿಯ ಉಪಮುಖ್ಯಮಂತ್ರಿ ಮತ್ತು ಇತರರು ಜೈಲುವಾಸದಲ್ಲಿದ್ದಾಗ, ಅದರ ಹಿಂದಿನ ಮಾಸ್ಟರ್ ಮೈಂಡ್ ತಲೆಮರೆಸಿಕೊಂಡಿದ್ದಾರೆ. ತನಿಖೆ ನಡೆಯುತ್ತಿದೆ ಮತ್ತು ಮಾಸ್ಟರ್ ಮೈಂಡ್ ಕೂಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಠಾಕೂರ್ ಪರೋಕ್ಷವಾಗಿ ಕೇಜ್ರಿವಾಲ್ ಅವರನ್ನು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದಾರೆ.
ಬಾಲಿವುಡ್ (Bollywood) ನ ಹೆಸರಾಂತ ಹಿರಿಯ ನಟಿ, ನೃತ್ಯಗಾರ್ತಿ ವಹೀದಾ ರೆಹಮಾನ್ (Waheeda Rahman) ಅವರಿಗೆ 2023ನೇ ಸಾಲಿನ ದಾದಾ ಸಾಹೇಬ್ ಫಾಲ್ಕೆ (Dada Saheb Phalke) ಪ್ರಶಸ್ತಿಯನ್ನು (Award) ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ಈ ಕುರಿತು ಕೇಂದ್ರ ಸಚಿವ ಅನುರಾಗ್ ಠಾಕೋರ್ (Anurag Thakur) ಕೂಡ ಟ್ವೀಟ್ ಮಾಡಿ, ಹಿರಿಯ ನಟಿಯನ್ನು ಅಭಿನಂದಿಸಿದ್ದಾರೆ.
ಅಪ್ರತಿಮ ಸುಂದರಿ ಮತ್ತು ಅದ್ಭುತ ನಟಿಯಾಗಿರುವ ವಹೀದಾ ರೆಹಮಾನ್, ಮೂಲತಃ ದಕ್ಷಿಣ ಭಾರತದವರು. ಬಾಲಿವುಡ್ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಇಡೀ ದೇಶವನ್ನೇ ಬೆರಗುಗೊಳಿಸುವಂತೆ ಮಿಂಚಿದರು. ತೆಲುಗು ಸಿನಿಮಾ ರಂಗದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ವಹೀದಾ ನಂತರ ತಮಿಳಿನಲ್ಲೂ ಸಿನಿಮಾ ಮಾಡಿದರು. ಅಲ್ಲಿಂದ ಸೀದಾ ಹೊರಟಿದ್ದು ಬಾಲಿವುಡ್ ನತ್ತ.
ಬಾಲಿವುಡ್ ನ ಸೂಪರ್ ಸ್ಟಾರ್ ಗಳಾದ ರಾಜೇಶ್ ಖನ್ನಾ, ರಾಜ್ ಕಪೂರ್, ಅಮಿತಾಬ್ ಬಚ್ಚನ್, ದಿಲೀಪ್ ಕುಮಾರ್ ಹೀಗೆ ಅಷ್ಟೂ ಹೆಸರಾಂತ ನಟರ ಜೊತೆ ತೆರೆ ಹಂಚಿಕೊಂಡ ಹೆಗ್ಗಳಿಕೆ ಇವರದ್ದು. ಸಾಂಪ್ರದಾಯಿಕ ಉರ್ದು ಕುಟುಂಬದಲ್ಲಿ ಜನಸಿದ ವಹೀದಾ ಹತ್ತು ವರ್ಷದವಳಿದ್ದಾಗಲೇ ತಂದೆ ತಾಯಿಯನ್ನು ಕಳೆದುಕೊಂಡು, ಕಷ್ಟದಲ್ಲಿ ಬೆಳೆಯುತ್ತಾರೆ. ಆ ನಂತರ ಚಿತ್ರರಂಗವೇ ಅವರನ್ನು ಅಪ್ಪಿ ಎಲ್ಲವನ್ನೂ ಕೊಡುತ್ತದೆ.
ಬಾಲಿವುಡ್ ಸಿನಿಮಾ ರಂಗದಲ್ಲಿ ಮೊದಲು ವಹೀದಾರನ್ನು ಗುರುತಿಸಿದ್ದು ಗುರುದತ್. ಮೊದಲ ಬಾರಿಗೆ ಅವರೇ ಹಿಂದಿ ಚಿತ್ರದಲ್ಲಿ ನಟಿಸುವಂತೆ ಅವಕಾಶ ನೀಡುತ್ತಾರೆ. ಸಿಐಡಿ ವಹೀದಾ ಅವರ ಮೊದಲ ಸಿನಿಮಾ. ಪ್ಯಾಸಾ, ತ್ರಿಶೂಲ್, ಅದಾಲತ್, ಕಭಿ ಕಭಿ, ದೆಹಲಿ 6 ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅವರು ವಿವಿಧ ಪಾತ್ರಗಳನ್ನು ಮಾಡಿದ್ದಾರೆ.
ತಮ್ಮನ್ನು ಬಾಲಿವುಡ್ ಸಿನಿಮಾ ರಂಗಕ್ಕೆ ಪರಿಚಯಿಸಿದ ಗುರುದತ್ ಜೊತೆಯಾಗಿ ಐದು ಸಿನಿಮಾಗಳನ್ನು ಮಾಡಿದ್ದರು. ಐದೂ ಸಿನಿಮಾಗಳು ಸೂಪರ್ ಹಿಟ್ ಆಗಿದ್ದವು. ಹಾಗಾಗಿ ಗುರುದತ್ ಜೊತೆ ಆತ್ಮೀಯ ಸಂಬಂಧ ಹೊಂದಿದ್ದಾರೆ ಎಂದು ದೊಡ್ಡ ಸುದ್ದಿಯೇ ಆಗಿತ್ತು. ಆದರೆ, ವಹೀದಾ 1974ರಲ್ಲಿ ಶಗೂನ್ ಚಿತ್ರದಲ್ಲಿ ನಾಯಕನಾಗಿ ತಮ್ಮೊಂದಿಗೆ ನಟಿಸಿದ್ದ ಕಮಲ್ ಜಿತ್ ಸಿಂಗ್ ಅವರನ್ನು ಮದುವೆಯಾದರು.