Tag: ಅನುಮಾನಸ್ಪದ ಸಾವು

  • 2 ತಿಂಗಳ ಹಿಂದೆ ಮದ್ವೆಯಾಗಿದ್ದ ಗೃಹಿಣಿ ಸಾವು!

    2 ತಿಂಗಳ ಹಿಂದೆ ಮದ್ವೆಯಾಗಿದ್ದ ಗೃಹಿಣಿ ಸಾವು!

    ಮೈಸೂರು: ಅನುಮಾನಾಸ್ಪದವಾಗಿ ಗೃಹಿಣಿ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಕೆ.ಆರ್ ನಗರ ತಾಲೂಕಿನ ಹಂಪಾಪುರ ಗ್ರಾಮದಲ್ಲಿ ನಡೆದಿದೆ.

    ಮೃತಳನ್ನು ಜ್ಯೋತಿ (24) ಎಂದು ಗುರುತಿಸಲಾಗಿದೆ. ಈಕೆ ಕೆ.ಆರ್ ನಗರದ ಹೊಸರಾಮನಹಳ್ಳಿ ನಿವಾಸಿಯಾಗಿದ್ದು, ಎರಡು ತಿಂಗಳ ಹಿಂದೆ ಹಂಪಾಪುರದ ಉಮೇಶ್ ಜೊತೆ ವಿವಾಹ ಆಗಿತ್ತು.

    ಉಮೇಶ್ ವೃತ್ತಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ ನೇಣು ಬಿಗಿದ ಸ್ಥಿತಿಯಲ್ಲಿ ಜ್ಯೋತಿಯ ಶವ ಪತ್ತೆಯಾಗಿದ್ದು, ಉಮೇಶ್ ಮತ್ತು ಅವರ ಮನೆಯವರು ಕೊಲೆ ಮಾಡಿದ್ದಾರೆ ಎಂದು ಮೃತಳ ಪೋಷಕರು ಆರೋಪ ಮಾಡಿದ್ದಾರೆ.

    ಈ ಬಗ್ಗೆ ಜ್ಯೋತಿ ಪೋಷಕರು ಕೆ.ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

  • ಗೃಹಿಣಿಯ ಅನುಮಾನಾಸ್ಪದ ಸಾವು: ಕೈ-ಕಾಲು ಕಟ್ಟಿ, ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

    ಗೃಹಿಣಿಯ ಅನುಮಾನಾಸ್ಪದ ಸಾವು: ಕೈ-ಕಾಲು ಕಟ್ಟಿ, ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

    ವಿಜಯಪುರ: ಮನೆಯ ಜಂತಿಗೆ ಕೈ, ಕಾಲು ಕಟ್ಟಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಣಿಯ ಶವ ಪತ್ತೆಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಹೊನ್ನಳ್ಳಿ ಗ್ರಾಮದಲ್ಲಿ ನಡೆದಿದೆ.

    ಬಸಮ್ಮ ಸಜ್ಜನ (30) ಸಾವನ್ನಪ್ಪಿರುವ ಗೃಹಿಣಿ. ಘಟನೆಯ ಬಳಿಕ ಬಸಮ್ಮನ ಗಂಡ ವಿರೇಶ್, ಮಾವ ಶಿವಶರಣಪ್ಪ ಹಾಗೂ ಅತ್ತೆ ಪಾರ್ವತಿ ನಾಪತ್ತೆಯಾಗಿದ್ದಾರೆ. ವರದಕ್ಷಿಣೆಗಾಗಿ ವಿರೇಶ್, ಶಿವಶರಣಪ್ಪ, ಪಾರ್ವತಿ ಮೂವರು ಸೇರಿ ಬಸಮ್ಮನನ್ನು ಹತ್ಯೆ ಮಾಡಿರುವುದಾಗಿ ಅವರ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

    ಈ ಸಂಬಂಧ ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.