Tag: ಅನುಪ್ ಭಂಡಾರಿ

  • `ಸೈಕ್’ ಗೀತೆಗೆ ಕಿಚ್ಚ ಭರ್ಜರಿ ಡ್ಯಾನ್ಸ್

    `ಸೈಕ್’ ಗೀತೆಗೆ ಕಿಚ್ಚ ಭರ್ಜರಿ ಡ್ಯಾನ್ಸ್

    ಕಿಚ್ಚ ಸುದೀಪ್ (Sudeep) ನಟಿಸುತ್ತಿರುವ ಬಹುನಿರೀಕ್ಷಿತ ಮಾರ್ಕ್ (Mark) ಚಿತ್ರದ ಮೊದಲ ಹಾಡು ರಿಲೀಸ್ ಆಗಿದೆ. ಅನೂಪ್ ಭಂಡಾರಿ (Anup Bhandari) ಹಾಡಿಗೆ ಸಾಹಿತ್ಯ ಒದಗಿಸಿದ್ದಾರೆ. ವಿಜಯ್ ಪ್ರಕಾಶ್, ಅಜನೀಶ್ ಲೋಕನಾಥ್ ಹಾಗೂ ಅನಿರುದ್ಧ ಶಾಸ್ತ್ರಿ ಕಂಠ ಕುಣಿಸಿದ್ದಾರೆ.

    ಅಜನೀಶ್ ಲೋಕನಾಥ್ ಟ್ಯೂನ್ ಹಾಕಿದ್ದು, ಸುದೀಪ್ ಪಾತ್ರದ ಮ್ಯಾನರಿಸಂನ್ನು ಈ ಹಾಡಿನಲ್ಲಿ ಕಟ್ಟಿಕೊಡಲಾಗಿದೆ. `ಮಾರ್ಕ್’ ಸಿನಿಮಾದ ಸೈಕೋ ಸೈತಾನ್ ಗೀತೆಗೆ ಕಿಚ್ಚ ಸುದೀಪ್ ಭರ್ಜರಿಯಾಗಿ ಕುಣಿದಿದ್ದಾರೆ.  ಇದನ್ನೂ ಓದಿ:  ಕಾಂತಾರ ಅಚ್ಚಳಿಯದ ಪಯಣ – ತೆರೆಹಿಂದಿನ ಅನುಭವ ಹಂಚಿಕೊಂಡ ರಿಷಬ್ ಪತ್ನಿ ಪ್ರಗತಿ ಶೆಟ್ಟಿ

     

    ಸಾಂಗ್ ರಿಲೀಸ್ ಆದ ಬೆನ್ನಲ್ಲೇ ಮಾರ್ಕ್ ಸಿನಿಮಾ ತಂಡ ಸಿನಿಮಾ ಪ್ರೇಮಿಗಳಿಗೆ ಹುಕ್‌ಸ್ಟೆಪ್ ಡ್ಯಾನ್ಸ್ ಚಾಲೆಂಜ್ ನೀಡಿದೆ. ಈ ಸಾಂಗ್ ಪ್ಲೇ ಮಾಡಿಕೊಂಡು, ಹುಕ್ ಸ್ಟೆಪ್ ಹಾಕಬೇಕು. ಕಿಚ್ಚ ಸುದೀಪ್ ಅವರು ಸಾಂಗ್‌ನಲ್ಲಿ ಹಾಕಿದ ಸ್ಟೆಪ್‌ಗಳಲ್ಲಿ ಯಾವುದಾದರೂ ಆಯ್ಕೆ ಮಾಡಿಕೊಂಡು ನೀವೂ ಡ್ಯಾನ್ಸ್ ಮಾಡಬೇಕು. ಬಳಿಕ ಇದನ್ನ ನಿಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಹ್ಯಾಷ್‌ಟ್ಯಾಗ್ ಜೊತೆ ಪೋಸ್ಟ್ ಮಾಡಬೇಕು. ಅತ್ಯುತ್ತಮ ರೀಲ್ಸ್‌ ಚಿತ್ರತಂಡದ ಆಫಿಷಿಯಲ್ ಇನ್‌ಸ್ಟಾ ಪೇಜ್‌ನಲ್ಲಿ ಶೇರ್ ಮಾಡಿ ಅವರಿಗೆ ಬಹುಮಾನ ನೀಡಲಾಗುತ್ತದೆ ಎಂದು ಚಿತ್ರ ತಂಡ ಹೇಳಿದೆ. ಇದನ್ನೂ ಓದಿ:  ನಟಿಗೆ ಕಿರುಕುಳ – ನಿರ್ಮಾಪಕ ಹೇಮಂತ್‌ ಕುಮಾರ್‌ ಅರೆಸ್ಟ್‌

  • ‘ವಿಕ್ರಾಂತ್ ರೋಣ’ 3 ಡಿ ಟ್ರೈಲರ್ ಲಾಂಚ್ ಮಾಡಿ, ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ ಶಿವರಾಜ್ ಕುಮಾರ್

    ‘ವಿಕ್ರಾಂತ್ ರೋಣ’ 3 ಡಿ ಟ್ರೈಲರ್ ಲಾಂಚ್ ಮಾಡಿ, ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದ ಶಿವರಾಜ್ ಕುಮಾರ್

    ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾದ ಟ್ರೈಲರ್ ಲಾಂಚ್ ನಾಳೆ ಸಂಜೆ 5 ಗಂಟೆಗೆ ನಡೆಯಲಿದೆ. ಅದಕ್ಕೂ ಮುನ್ನ ಇಂದು 3 ಡಿ ಟ್ರೈಲರ್ ಅನ್ನು ಶಿವರಾಜ್ ಕುಮಾರ್ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸುದೀಪ್ ನನ್ನ ಬ್ರದರ್ ಇದ್ದಹಾಗೆ. ನನ್ನ ಕುಟುಂಬಕ್ಕೂ ಕೂಡ ತೀರಾ ಹತ್ತಿರದವರು. ಅವರ ಶಾಂತಿ ನಿವಾಸ ಸಿನಿಮಾಗೆ ನಾನು ಸಣ್ಣದಾಗಿ ಧ್ವನಿ ನೀಡಿದ್ದೆ. ಅಲ್ಲದೇ, ನಿರ್ದೇಶಕ ಅನೂಪ್ ಭಂಡಾರಿ ಅವರ ರಂಗಿತರಂಗ ಸಿನಿಮಾವನ್ನು ನಾನು ಥಿಯೇಟರ್ ನಲ್ಲಿ ನೋಡಿದ್ದೆ’ ಎಂದು ನೆನಪುಗಳನ್ನು ಹಂಚಿಕೊಂಡರು.

    ಕೊರೊನಾ ವೇಳೆಯಲ್ಲಿ ಸುದೀಪ್ ಅವರು ಧೈರ್ಯ ಮಾಡಿಕೊಂಡು ವಿಕ್ರಾಂತ್ ರೋಣ ಸಿನಿಮಾ ಶೂಟಿಂಗ್ ಮಾಡಿದ್ದನ್ನು ಈ ಸಂದರ್ಭದಲ್ಲಿ ಶಿವರಾಜ್ ಕುಮಾರ್ ನೆನಪಿಸಿಕೊಂಡರು. ಕೊನೆಯಲ್ಲಿ ವಿಕ್ರಾಂತ್ ರೋಣ ಸಿನಿಮಾದ ಹುಕ್ ಸ್ಟೆಪ್ ಮಾಡಿದ ಶಿವಣ್ಣ, ವೇದಿಕೆಯ ಮೇಲೆಯೇ ರಾ ರಾ ರಕ್ಕಮ್ಮ ಸಿನಿಮಾದ ಹಾಡಿಗೆ ಹೆಜ್ಜೆ ಹಾಕಿದರು. ಇದನ್ನೂ ಓದಿ:ಇನ್ನೆರಡು ತಿಂಗಳಲ್ಲಿ ಶಿವರಾಜ್ ಕುಮಾರ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ ಸಿನಿಮಾ: ರಮೇಶ್ ರೆಡ್ಡಿ

    ಕಾರ್ಯಕ್ರಮದಲ್ಲಿ ರವಿಚಂದ್ರನ್, ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ, ಡಾಲಿ ಧನಂಜಯ್, ಸೃಜನ್ ಲೋಕೇಶ್, ರಾಜೀವ್ ನಿರ್ದೇಶಕ ನಂದಕಿಶೋರ್, ರಿಷಭ್ ಶೆಟ್ಟಿ, ರಾಜ್ ಬಿ ಶೆಟ್ಟಿ, ನಿರ್ಮಾಪಕ ಕೆ.ಪಿ ಶ್ರೀಕಾಂತ್ ಮತ್ತು ಎನ್. ಕುಮಾರ್ ಹಾಗೂ  ಸುದೀಪ್ ಪತ್ನಿ ಪ್ರಿಯಾ, ಮಗಳು ಸಾನ್ವಿ, ಸಹೋದರಿ ಸುಜಾತ ಸೇರಿದಂತೆ ಹಲವರು ಭಾಗಿಯಾಗಿದ್ದರು.

    Live Tv

  • ಚಿರು ಅಂತ ಕರೆಯಿರಿ ಎಂದಿದ್ರು, ನಿಜಕ್ಕೂ ಶಾಕಿಂಗ್ ಸುದ್ದಿ: ನಿರ್ದೇಶಕ ಅನೂಪ್ ಕಂಬನಿ

    ಚಿರು ಅಂತ ಕರೆಯಿರಿ ಎಂದಿದ್ರು, ನಿಜಕ್ಕೂ ಶಾಕಿಂಗ್ ಸುದ್ದಿ: ನಿರ್ದೇಶಕ ಅನೂಪ್ ಕಂಬನಿ

    ಬೆಂಗಳೂರು: ಸ್ಯಾಂಡಲ್‍ವುಡ್ ಚಿರಂಜೀವಿ ಸರ್ಜಾ ಅವರು ಸಾವಿನ ಸುದ್ದಿ ಕೇಳಿ ನಿಜಕ್ಕೂ ತುಂಬಾ ಆಘಾತವಾಯಿತು ಎಂದು ನಿರ್ದೇಶಕ ಅನುಪ್ ಭಂಡಾರಿ ಕಂಬನಿ ಮಿಡಿದಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅನುಪ್ ಭಂಡಾರಿ, ನನಗೆ ಸಾವಿನ ಸುದ್ದಿ ಈಗ ಗೊತ್ತಾಯಿತು. ಇದರಿಂದ ನನಗೆ ಶಾಕ್ ಆಗಿದೆ. ಚಿರಂಜೀವಿ ಅವರು ನನಗೆ ಪರಿಯಚವಿರಲಿಲ್ಲ. ಆದರೆ ನನ್ನ ‘ರಂಗಿತರಂಗ’ ಸಿನಿಮಾ ರಿಲೀಸ್ ಆದ ಸಂದರ್ಭದಲ್ಲಿ ಅವರೇ ಫೋನ್ ಮಾಡಿದ್ದರು. ಆಗ ಚೆನ್ನಾಗಿ ಮಾಡಿದ್ದೀರ ಎಂದು ವಿಶ್ ಮಾಡಿದ್ದರು ಎಂದು ನೋವಿನಿಂದ ಹೇಳಿದರು.

    ಮೊದಲ ಸಲ ಫೋನ್ ಮಾಡಿದಾಗ ನಾನು ಚಿರಂಜೀವಿ ಸರ್ಜಾ ಎಂದು ಕರೆದೆ. ಆಗ ಅವರು ನನ್ನನ್ನು ಚಿರು ಎಂದು ಕರೆಯಿರಿ ಎಂದಿದ್ದರು. ಅವರ ಆರೋಗ್ಯದ ಬಗ್ಗೆ ನನಗೆ ಗೊತ್ತಿರಲಿಲ್ಲ. ಆಗಾಗ ನನಗೆ ಫೋನ್ ಮಾಡುತ್ತಿದ್ದರು. ಜೊತೆಗೆ ಕೆಲಸ ಮಾಡೋಣ ಎಂದು ಹೇಳುತ್ತಿದ್ದರು. ಚಿರಂಜೀವಿ ಅವರು ಎಲ್ಲರ ಜೊತೆ ತುಂಬಾ ಸ್ನೇಹದಿಂದ ಇರುತ್ತಿದ್ದರು. ಹೀಗಾಗಿ ಈ ಸಾವಿನ ಸುದ್ದಿ ತುಂಬಾನೇ ಶಾಕಿಂಗ್ ಆಗಿದೆ ಎಂದರು.

    ಈಗಲೂ ನನಗೆ ಚಿರಂಜೀವಿ ಸಾವಿನ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ. ಈಗ ತಾನೇ ಮದುವೆಯಾಗಿತ್ತು. ತುಂಬಾ ಬೇಸರವಾಗುತ್ತಿದೆ ಎಂದು ಅನುಪ್ ಭಂಡಾರಿ ಚಿರಂಜೀವಿ ಅಕಾಲಿಕ ಸಾವಿನ ಬಗ್ಗೆ ಸಂತಾಪ ಸೂಚಿಸಿದರು.

  • ಸುದೀಪ್ ಜೊತೆ ನಟಿಸಲು ಹೆಣ್ಣು ಮಗುವಿಗಾಗಿ ಹುಡುಕುತ್ತಿದ್ದಾರೆ ಅನೂಪ್ ಭಂಡಾರಿ

    ಸುದೀಪ್ ಜೊತೆ ನಟಿಸಲು ಹೆಣ್ಣು ಮಗುವಿಗಾಗಿ ಹುಡುಕುತ್ತಿದ್ದಾರೆ ಅನೂಪ್ ಭಂಡಾರಿ

    ಬೆಂಗಳೂರು: ಕಿಚ್ಚ ಸುದೀಪ್ ಅವರ ಜೊತೆ ನಟಿಸಲು ಹೆಣ್ಣು ಮಗುವನ್ನು ನಿರ್ದೇಶಕ ಅನೂಪ್ ಭಂಡಾರಿ ಹುಡುಕುತ್ತಿದ್ದಾರೆ.

    ಅನೂಪ್ ಅವರು ಸುದೀಪ್ ಅವರ ಜೊತೆ ‘ಬಿಲ್ಲಾ ರಂಗ ಭಾಷಾ’ ಸಿನಿಮಾವನ್ನು ನಿರ್ದೇಶಿಸುತ್ತಾರೆ ಎಂಬ ಸುದ್ದಿ ಕೇಳಿ ಬರುತಿತ್ತು. ಆದರೆ ಈಗ ಈ ಚಿತ್ರದ ಬದಲು ಮತ್ತೊಂದು ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶಿಸುತ್ತಿದ್ದಾರೆ. ಸದ್ಯ ಈ ಚಿತ್ರದಲ್ಲಿ ಸುದೀಪ್ ಅವರ ಜೊತೆ ನಟಿಸಲು ಹೆಣ್ಣು ಮಗು ಬೇಕು ಎಂದು ಅನೂಪ್ ಭಂಡಾರಿ ಟ್ವೀಟ್ ಮಾಡಿದ್ದಾರೆ.

    ಅನೂಪ್ ಭಂಡಾರಿ ಅವರು ತಮ್ಮ ಟ್ವಿಟ್ಟರಿನಲ್ಲಿ ಕಿಚ್ಚ ಅವರು ಇರುವ ಪೋಸ್ಟರ್ ಹಾಕಿ “ಸುದೀಪ್ ಅವರ ಜೊತೆ ನಟಿಸಲು 3-7 ವರ್ಷದ ಮುದ್ದಾಗಿ ನಟಿಸಬಲ್ಲ ಪ್ರತಿಭಾವಂತ ಹೆಣ್ಣು ಮಕ್ಕಳಿಗೆ ಸುವರ್ಣಾವಕಾಶ ಎಂದು ಬರೆದು ಮೇಲ್ ಐಡಿ ಹಾಕಿ” ಟ್ವೀಟ್ ಮಾಡಿದ್ದಾರೆ.

    ಅನೂಪ್ ಅವರ ಹೆಸರಿಡದ ಈ ಸಿನಿಮಾದಲ್ಲಿ ಬಾಲಕಿಯ ಪಾತ್ರ ಮುಖ್ಯವಾಗಿದೆ. ಹಾಗಾಗಿ ಅವರು 3 ರಿಂದ 7 ವರ್ಷದ ಒಳಗಿನ ಹೆಣ್ಣು ಮಗುವಿಗಾಗಿ ಆಡಿಶನ್ ಶುರು ಮಾಡಿದ್ದಾರೆ. ಈ ಸಿನಿಮಾದಲ್ಲಿ ಆಸಕ್ತಿ ಇರುವವರು ಸಂಪರ್ಕಿಸಬಹುದು ಎಂದು ಅನೂಪ್ ಮನವಿ ಮಾಡಿಕೊಂಡಿದ್ದಾರೆ.

    ಈ ಸಿನಿಮಾವನ್ನು ಜಾಕ್ ಮಂಜು ಅವರು ನಿರ್ಮಾಣ ಮಾಡುತ್ತಿದ್ದು, ಸೆಪ್ಟಂಬರ್ ತಿಂಗಳಿನಲ್ಲಿ ಚಿತ್ರೀಕರಣ ಶುರುವಾಗಲಿದೆ. ಈ ಚಿತ್ರಕ್ಕೆ ನಾಯಕಿ ಸೇರಿದಂತೆ ಯಾವುದೇ ಕಲಾವಿದರು ಆಯ್ಕೆ ಆಗಿಲ್ಲ. ಚಿತ್ರತಂಡ ಪ್ರಿಪ್ರೊಡಕ್ಷನ್ ಹಂತದಲ್ಲಿದ್ದು, ಹೆಣ್ಣು ಮಗುವಿನ ಆಯ್ಕೆಗೆ ಈಗ ಆಡಿಶನ್ ನಡೆಸುತ್ತಿದ್ದಾರೆ.