Tag: ಅನುಪ್ರಭಾಕರ್

  • ‘ಹಗ್ಗ’ದ ಧ್ಯಾನದಲ್ಲಿ ಟೈಟಾನಿಕ್ ಹೀರೋಯಿನ್ ಅನು ಪ್ರಭಾಕರ್

    ‘ಹಗ್ಗ’ದ ಧ್ಯಾನದಲ್ಲಿ ಟೈಟಾನಿಕ್ ಹೀರೋಯಿನ್ ಅನು ಪ್ರಭಾಕರ್

    ವರೆಗೂ ಒಂದಷ್ಟು ಚೆಂದದ ಪಾತ್ರಗಳಲ್ಲಿ ನಟಿಸಿರುವವರು ಅನು ಪ್ರಭಾಕರ್. ಎಂಥಾ ಪಾತ್ರಗಳಿಗಾದರೂ ಒಗ್ಗಿಕೊಳ್ಳುವ ಛಾತಿ ಇರುವ ಅವರು, ಒಂದಷ್ಟು ಕಾಲ ಚಿತ್ರರಂಗದಿಂದ ದೂರವಿದ್ದದ್ದೂ ಇದೆ. ಸಾಮಾನ್ಯವಾಗಿ ಇಂಥಾ ಪ್ರತಿಭಾನ್ವಿತ ಕಲಾವಿದರನ್ನು ಪ್ರೇಕ್ಷಕರು ಮಿಸ್ ಮಾಡಿಕೊಳ್ಳುತ್ತಾರೆ. ಹೀಗೆ ಅನು ಅವರನ್ನು ಸಿನಿಮಾಗಳಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿ ಬಳಗ ಕಾಯುತ್ತಿರುವಾಗಲೇ ಅಚ್ಚರಿದಾಯಕ ಗೆಟಪ್ಪಿನಲ್ಲಿ ಪ್ರೇಕ್ಷಕರನ್ನು ಮುಖಾಮುಖಿಯಾಗಿದ್ದಾರೆ. ಇಂದು ಬಿಡುಗಡೆಗೊಂಡಿರುವ ಹಗ್ಗ ಚಿತ್ರದಲ್ಲಿನ ಅವರ ಪಾತ್ರ ಕಂಡು ನೋಡುಗರೆಲ್ಲ ಥ್ರಿಲ್ ಆಗಿ ಬಿಟ್ಟಿದ್ದಾರೆ.

    ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ ನಂತರ ಬೇರೊಂದು ಹಂತದ ಪಾತ್ರಕ್ಕಾಗಿ ನಟ ನಟಿಯರು ಬಯಸೋದಿದೆ. ಅಂಥಾದ್ದೊಂದು ಹಂಬಲ ಹೊಂದಿದ್ದ ಅನು ಪ್ರಭಾಕರ್ ಅವರ ಪಾಲಿಗೆ ಒಲಿದು ಬಂದಿದ್ದ ಚಿತ್ರ ಹಗ್ಗ. ಆರಂಭದಲ್ಲಿಯೇ ನಿರ್ದೇಶಕರು ಕಥೆ ಹೇಳಿದಾಗ, ತಮ್ಮ ಪಾತ್ರದ ಚಹರೆ ಮತ್ತು ಗೆಟಪ್ಪುಗಳ ಬಗ್ಗೆ ಕೇಳಿ ಅನು ಖುಷಿಗೊಂಡಿದ್ದರಂತೆ. ಸಿನಿಮಾ ವ್ಯಾಮೋಹಿಗಳ ತಂಡದ ಜೊತೆ ಕೆಲಸ ಮಾಡಲು ಉತ್ಸುಕರಾಗಿದ್ದ ಅವರು, ಆ ಪಾತ್ರಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದರು. ಅದರ ಫಲವಾಗಿಯೇ ಅನು ಈ ಹಿಂದೆಂದೂ ಕಾಣಿಸಿಕೊಂಡಿರದ ಗೆಟಪ್ಪಿನಲ್ಲಿ ಮಿಂಚಿದ್ದಾರೆ. ಅದು ಪ್ರೇಕ್ಷಕರನ್ನೆಲ್ಲ ಸೆಳೆಯುವಲ್ಲಿಯೂ ಯಶ ಕಂಡಿದೆ.

    ರಾಜ್ ಭಾರದ್ವಾಜ್ ನಿರ್ಮಾಣದಲ್ಲಿ ಮೂಡಿ ಬಂದಿರುವ, ಅವರದ್ದೇ ನಕಥೆಯನ್ನು ಹೊಂದಿರುವ ಹಗ್ಗ ಚಿತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಟ್ರೈಲರ್ ಮೂಲಕವೇ ಆಕರ್ಷಿತರಾಗಿ ನೋಡಲು ಬಂದವರೆಲ್ಲ ಥ್ರಿಲ್ ಆಗಿದ್ದಾರೆ. ಅದರಲ್ಲಿಯೂ ಅನು ಪ್ರಭಾಕರ್ ಪಾತ್ರಕ್ಕೂ ಮೆಚ್ಚುಗೆಯ ಮಹಾ ಪೂರವೇ ಹರಿದು ಬರಲಾರಂಭಿಸಿದೆ. ಅನು ಅವರ ಪಾಲಿಗೆ ಹಗ್ಗ ಒಂದು ಮೈಲಿಗಲ್ಲು. ಯಾಕೆಂದರೆ, ಅವರು ನಟಿಯಾಗಿ ಇದೀಗ ಇಪ್ಪತೈದು ವರ್ಷ ತುಂಬಿದೆ. ಈ ಸಿಲ್ವರ್ ಜ್ಯುಬಿಲಿ ಸಂಭ್ರಮದ ಹೆಗ್ಗುರುತಾಗಿ ಹಗ್ಗ ದಾಖಲಾಗುತ್ತದೆ. 1999ರಲ್ಲಿ ಹೃದಯ ಹೃದಯ ಚಿತ್ರದ ಮೂಲಕ ಬಣ್ಣ ಹಚ್ಚಿದ್ದವರು ಅನು ಪ್ರಭಾಕರ್. ಈವರೆಗೂ ನಾನಾ ಮಜಲಿನ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅವರೇ ಹೇಳುವ ಪ್ರಕಾರ ಹಗ್ಗ ಎಂಬುದು ಅನು ವೃತ್ತಿ ಬದುಕಿನ ವಿಶಿಷ್ಟ ಚಿತ್ರ.

     

    ವಸಂತ ಸಿನಿ ಕ್ರಿಯೇಷನ್ಸ್ ಬ್ಯಾನರಿನಡಿಯಲ್ಲಿ ರಾಜ್ ಭಾರದ್ವಾಜ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.  ಅವಿನಾಶ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ಈ ಚಿತ್ರಕ್ಕೆ ಕಥೆ ಬರೆದಿರೋದಲ್ಲದೇ ರಾಜ್ ಭಾರದ್ವಾಜ್ ಅವರೇ ಸ್ಕ್ರೀನ್ ಪ್ಲೇ ಮತ್ತು ಸಂಭಾಷಣೆಯಲ್ಲಿಯೂ ಭಾಗಿಯಾಗಿದ್ದಾರೆ. ಸಿನಿಟೆಕ್ ಸೂರಿ ಛಾಯಾಗ್ರಹಣ, ಮ್ಯಾಥ್ಯೂ ಮನು ಸಂಗೀತ ನಿರ್ದೇಶನ, ವಿಕ್ರಮ್ ಮೋರ್, ಡಿಫರೆಂಟ್ ಡ್ಯಾನಿ, ಅಲ್ಟಿಮೇಟ್ ಶಿವು ಸಾಹಸ ನಿರ್ದೇಶನ ಮತ್ತು ಅನು ಪ್ರಭಾಕರ್, ವೇಣು, ಹರ್ಷಿಕಾ ಪೂಣಚ್ಚ, ತಬಲಾ ನಾಣಿ, ಅವಿನಾಶ್, ಭವಾನಿ ಪ್ರಕಾಶ್, ಸುಧಾ ಬೆಳವಾಡಿ, ಪ್ರಿಯಾ ಹೆಗ್ಡೆ, ಮೈಕೋ ಮಂಜು, ಸಂಜು ಬಸಯ್ಯ, ಸದಾನಂದ ಕಾಳಿ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

  • ಅಮೆರಿಕದಿಂದ ಬಂದು ಉಪೇಂದ್ರ, ಶ್ರೀಮುರಳಿ, ಅನುಪ್ರಭಾಕರ್ ಮನೆಗೆ ಮಾನ್ಯಾ ಭೇಟಿ

    ಅಮೆರಿಕದಿಂದ ಬಂದು ಉಪೇಂದ್ರ, ಶ್ರೀಮುರಳಿ, ಅನುಪ್ರಭಾಕರ್ ಮನೆಗೆ ಮಾನ್ಯಾ ಭೇಟಿ

    ಸ್ಯಾಂಡಲ್‌ವುಡ್ ನಟಿ ಮಾನ್ಯಾ ನಾಯ್ಡು (Manya Naidu) ಸದ್ಯ ಅಮೆರಿಕದಲ್ಲಿ ನೆಲೆಸಿದ್ದಾರೆ. ಹಾಲಿಡೇ ಕಳೆಯಲು ಮಗಳ ಜೊತೆ ಭಾರತಕ್ಕೆ ಮರಳಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ಉಪೇಂದ್ರ, ಶ್ರೀಮುರಳಿ, ಅನುಪ್ರಭಾಕರ್ ಮನೆಗೆ ಮಾನ್ಯಾ ಭೇಟಿ ಕೊಟ್ಟಿದ್ದಾರೆ. ಇದನ್ನೂ ಓದಿ:ವಯನಾಡು ಭೂಕುಸಿತ ದುರಂತ: 1 ಕೋಟಿ ದೇಣಿಗೆ ನೀಡಿದ ಚಿರಂಜೀವಿ, ರಾಮ್ ಚರಣ್

    ಕನ್ನಡದ ಶಾಸ್ತ್ರಿ, ಶಂಭು ಸಿನಿಮಾದಲ್ಲಿ ನಟಿಸಿ ಗೆದ್ದಿದ್ದ ಮಾನ್ಯಾ ಮದುವೆಯ ಬಳಿಕ ವಿದೇಶದಲ್ಲಿ ಸೆಟಲ್ ಆದರು. ಈಗ ಒಂದಷ್ಟು ವರ್ಷಗಳ ಬಳಿಕ ಭಾರತಕ್ಕೆ ಬಂದಿರುವ ಮಾನ್ಯಾ, ಸಿನಿಮಾರಂಗದ ತನ್ನ ಸ್ನೇಹಿತರನ್ನು ಭೇಟಿಯಾಗಿ ಸಂಭ್ರಮಿಸಿದ್ದಾರೆ. ಉಪೇಂದ್ರ ದಂಪತಿ (Upendra) ಮನೆಗೆ ಮಗಳೊಂದಿಗೆ ಮಾನ್ಯಾ ಭೇಟಿ ನೀಡಿ ಸಮಯ ಕಳೆದಿದ್ದಾರೆ.

    ಇನ್ನೂ ಶ್ರೀಮುರಳಿ (Srimurali) ಕುಟುಂಬದ ಜೊತೆ ಕೂಡ ಮಾನ್ಯಾ ಉತ್ತಮ ಒಡನಾಟ ಹೊಂದಿದ್ದಾರೆ. ಅವರ ಮನೆಗೆ ಭೇಟಿ ನೀಡಿ ಮಾನ್ಯಾ ಕಳೆದಿದ್ದಾರೆ. ಶ್ರೀಮುರಳಿ ಫ್ಯಾಮಿಲಿ ಭೋಜನ ಸವಿದಿದ್ದಾರೆ. ಇದನ್ನೂ ಓದಿ:ಬನಶಂಕರಿ ದೇವಿ ಪ್ರಸಾದದೊಂದಿಗೆ ದರ್ಶನ್ ನೋಡಲು ಜೈಲಿಗೆ ಬಂದ ಪತ್ನಿ

    ಇನ್ನೂ ಅನುಪ್ರಭಾಕರ್ (Anuprabhakar) ಮನೆಗೂ ನಟಿ ಭೇಟಿ ನೀಡಿ, ವರ್ಷ ಸಿನಿಮಾ ಚಿತ್ರೀಕರಣದ ಸಂದರ್ಭವನ್ನು ಸ್ಮರಿಸಿದ್ದಾರೆ. ಅನುಪ್ರಭಾಕರ್ ಜೊತೆ ಮೊದಲು ಭೇಟಿಯಾಗಿದ್ದೆ ವರ್ಷ (Varsha) ಸಿನಿಮಾದ ಸೆಟ್‌ನಲ್ಲಿ ಎಂದು ಹೇಳುತ್ತಾ, ಅವರ ಮನೆಯಲ್ಲಿ ಕಳೆದ ಸುಂದರ ಫೋಟೋಗಳನ್ನು ನಟಿ ಹಂಚಿಕೊಂಡಿದ್ದಾರೆ.

    ಮಾನ್ಯಾ ಅವರು ಸಾಲು ಸಾಲು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು. ಇಂಗ್ಲೆಂಡ್‌ನಲ್ಲಿ ಜನಿಸಿದ ಮಾನ್ಯಾ ಅವರ ಮಾತೃ ಭಾಷೆ ತೆಲುಗು. ಅನೇಕ ಮಲಯಾಳಂ, ತೆಲುಗು ಸಿನಿಮಾಗಳಲ್ಲಿ ನಟಿಸಿದ ನಂತರದಲ್ಲಿ ಅವರು 2005ರಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಆಗ ಅವರು ಕನ್ನಡ ಮಾತಾಡೋದನ್ನು ಕಲಿತಿದ್ದರು. ಈಗ ಅವರು ಮಗಳಿಗೂ ಕೂಡ ಕನ್ನಡ ಹೇಳಿಕೊಡುತ್ತಿದ್ದಾರೆ.

  • 12 ವರ್ಷದ ದಾಂಪತ್ಯಕ್ಕೆ ಬ್ರೇಕ್ ಹಾಕಿದ್ಯಾಕೆ? ಡಿವೋರ್ಸ್ ಬಗ್ಗೆ ಬಾಯ್ಬಿಟ್ಟ ಅನುಪ್ರಭಾಕರ್

    12 ವರ್ಷದ ದಾಂಪತ್ಯಕ್ಕೆ ಬ್ರೇಕ್ ಹಾಕಿದ್ಯಾಕೆ? ಡಿವೋರ್ಸ್ ಬಗ್ಗೆ ಬಾಯ್ಬಿಟ್ಟ ಅನುಪ್ರಭಾಕರ್

    ಸ್ಯಾಂಡಲ್‌ವುಡ್‌ನ (Sandalwood) ಪ್ರತಿಭಾನ್ವಿತ ನಟಿ ಅನುಪ್ರಭಾಕರ್ (Anuprabhakar) ಅವರು ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟವರು. `ಹೃದಯ ಹೃದಯ’ (Hrudaya Hrudaya) ಚಿತ್ರದ ಮೂಲ ಶಿವಣ್ಣನಿಗೆ ನಾಯಕಿಯಾದರು. ಕೆರಿಯರ್ ಪೀಕ್‌ನಲ್ಲಿರುವಾಗಲೇ ಹಿರಿಯ ನಟಿ ಜಯಂತಿ (Jayanthi) ಅವರ ಮಗ ಕೃಷ್ಣ ಕುಮಾರ್ ಜೊತೆ ಅನು ಹಸೆಮಣೆ ಏರಿದ್ದರು. 12 ವರ್ಷಗಳ ದಾಂಪತ್ಯಕ್ಕೆ ಡಿವೋರ್ಸ್ (Divorce) ತೆಗೆದುಕೊಳ್ಳುವ ಮೂಲಕ ಅಂತ್ಯವಾಗಿದ್ದೇಕೆ ಎಂಬುದರ ಬಗ್ಗೆ ಈಗ ನಟಿ ಅನುಪ್ರಭಾಕರ್ ಇದೀಗ ಮೌನ ಮುರಿದಿದ್ದಾರೆ. ಮೊದಲ ಮದುವೆ ಬಗ್ಗೆ ಮೊದಲ ಬಾರಿಗೆ ನಟಿ ಮಾತನಾಡಿದ್ದಾರೆ.

    ಕನ್ನಡ, ಇಂಗ್ಲೀಷ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ಅನುಪ್ರಭಾಕರ್ (Anuprabhakar) ಅವರು ನಟಿ ಜಯಂತಿ ಜೊತೆಗಿನ ಒಡನಾಟದ ಬಗ್ಗೆ ಮತ್ತು ಮೊದಲ ಪತಿ ಜೊತೆಗಿನ ಡಿವೋರ್ಸ್ ಬಗ್ಗೆ ಮೊದಲ ಬಾರಿಗೆ ನಟಿ  ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

    ಡಿವೋರ್ಸ್ ನಂತರ ವಾಪನ್ ನಾನು, ನನ್ನ ತಾಯಿ ಮನೆಗೆ ಬಂದೆ. ನನ್ನ ಬಗ್ಗೆ ಹುಡುಕಿದರೆ ಬರುವ ಮೊದಲ ವಿಚಾರವೇ ನನ್ನ ಡಿವೋರ್ಸ್. ನೆಗೆಟಿವ್ ಕಾಮೆಂಟ್ ನಮ್ಮ ಜೀವನದ ಒಂದು ಭಾಗ. ಅದನ್ನು ಸ್ವೀಕರಿಸಿ, ಮುಂದೆ ಸಾಗಿಸಬೇಕು. ಮದುವೆ ಆದ್ಮೇಲೆ ನಾನು ಕೆಲಸ ನಿಲ್ಲಿಸಬಾರದೆಂದು ಎಂದು ಜಯಂತಿ ಅಮ್ಮನವರು ಹೇಳಿದ್ದರು. ಮದುವೆ ಆದ ವರ್ಷವೇ 9 ಸಿನಿಮಾಗಳಲ್ಲಿ ನಟಿಸಿದೆ. ಮೊದಲಿನಿಂದಲೂ ಡ್ರೆಸ್ ತುಂಬಾ ಸಿಂಪಲ್ ಹಾಕಿಕೊಳ್ಳುವುದು. ಗ್ರ‍್ಯಾಂಡ್ ಆಗಿ ರೆಡಿ ಆಗಬೇಕು ಅಂತ ಅವರೇ ಸಲಹೆ ಕೊಡುತ್ತಿದ್ದರು. ಮೊದಲ ಮದುವೆಯಲ್ಲಿ ಏನಾಯ್ತು, ಯಾಕಾಯ್ತು ಎನ್ನುವ ವಿಚಾರವನ್ನು ನಾನು ಮಾತನಾಡುವುದಿಲ್ಲ ಎಂದು ಅನು ಹೇಳಿದ್ದಾರೆ. ಇದನ್ನೂ ಓದಿ: ರಂಜಾನ್ ಬರ್ತಿದೆ ಪತಿ ಆದಿಲ್ ರಿಲೀಸ್ ಮಾಡಿ : ಕಣ್ಣೀರಿಟ್ಟ ನಟಿ ರಾಖಿ

    ನಾನಲ್ಲದೆ ನಮ್ಮ ದಾಂಪತ್ಯ ಜೀವನದಲ್ಲಿ ಮತ್ತೊಬ್ಬ ವ್ಯಕ್ತಿ ಪ್ರವೇಶ ಮಾಡಿದ್ದರಾ ಅನ್ನೋ ಪ್ರಶ್ನೆಗಳೆಲ್ಲ ತೀರಾ ನನ್ನ ಪರ್ಸನಲ್ ವಿಚಾರ. ಹೀಗಾಗಿ ನಾನು ಮಾತನಾಡಬಾರದೆಂದು ತೀರ್ಮಾನ ಮಾಡಿರುವೆ. ಇಬ್ಬರೂ ವ್ಯಕ್ತಿಗಳ ನಡುವೆ ಏನೇ ಭಿನ್ನಾಭಿಪ್ರಾಯವಿದ್ದರೂ ಅದು ಆ ರೂಮ್‌ನ ನಾಲ್ಕು ಗೋಡೆಗಳ ನಡುವೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿರುವುದಿಲ್ಲ. ನನ್ನ ತಂದೆ, ತಾಯಿ ಅವರ ತಂದೆ ತಾಯಿಗೂ ಕರೆಕ್ಟ್ ಆಗಿ ಯಾವ ವಿಚಾರವೂ ಗೊತ್ತಿರುವುದಿಲ್ಲ ಇದೆಲ್ಲಾ ತುಂಬಾ ಪರ್ಸನಲ್ ವಿಚಾರ. ಮುಖ್ಯವಾಗಿ ಏನು ಹೇಳಬೇಕು ಅಂದ್ರೆ ಮನುಷ್ಯನಿಗೆ ಇರೋದು ಒಂದೇ ಜೀವನ. ಆ ಜೀವನವನ್ನು ಸಂತೋಷದಿಂದ ಬಾಳಬೇಕು. ಖುಷಿಯಾಗಿ ಬದುಕಬೇಕು. ನೋವಿನಲ್ಲಿಯೇ ಜೀವನ ಸಾಗಿಸುವಂತೆ ಆಗಬಾರದು. ನಾವಿಬ್ಬರೂ ಒಟ್ಟಿಗೆ ಇರಲು ಆಗುವುದಿಲ್ಲ. ಸಂತೋಷ ಅಸಾಧ್ಯವೆಂದೆನಿಸಿದಾಗ ನೋವು ಕೊಡುವ ನಿರ್ಧಾರಗಳಾದರೂ ಸರಿ, ತೆಗೆದುಕೊಳ್ಳಬೇಕಾಗುತ್ತದೆ. ಆದರಿಂದ ಮುಂದೆ ಆಗಿದ್ದೆಲ್ಲವೂ ಆಯಿತು ಎಂದಿದ್ದಾರೆ.

    ಒಂದು ಮುಖ್ಯವಾದ ಮಾತು ಹೇಳಬೇಕು. ನಿಮ್ಮ ಮನೆ ಹೆಣ್ಣು ಮಕ್ಕಳು ಕಣ್ಣೀರು ಹಾಕಿಕೊಂಡು, ಗಂಡನ ಮನೆಯಲ್ಲಿ ನೋವಾಗುತ್ತಿದೆ. ಜೀವನ ಸಾಗಿಸಲು ಆಗುತ್ತಿಲ್ಲ ಎಂದರೆ, ತಂದೆ ತಾಯಿಯಾಗಿ ಆವರನ್ನು ದಯವಿಟ್ಟು ಸಪೋರ್ಟ್ ಮಾಡಿ. ನಾನು ಆ ಘಟನೆ ಬಗ್ಗೆ ಯೋಚಿಸಿದಾಗ, ನನ್ನ ತಾಯಿ ಅಣ್ಣ ಮತ್ತು ಸ್ಕೂಲ್ ಫ್ರೆಂಡ್ಸ್ ನನ್ನ ಪರ ನಿಂತುಕೊಂಡರು. ಆಗ ನನ್ನ ತಂದೆ ಇರಲಿಲ್ಲ. ಈ ರೀತಿ ಘಟನೆ ಹೆಣ್ಣು ಮಕ್ಕಳ ಜೀವನದಲ್ಲಿ ನಡೆದರೆ, ಕುಗ್ಗುತ್ತಾರೆ. ಫ್ಯಾಮಿಲಿ ಸಪೋರ್ಟ್ ಇದ್ದಿದ್ದರಿಂದ ನನಗೆ ಮತ್ತೊಂದು ಲೈಫ್ ಕ್ರಿಯೇಟ್ ಮಾಡಿಕೊಳ್ಳಲು ಸಾಧ್ಯವಾಯ್ತು. ಸಮಾಜದಲ್ಲಿ ಯಾರೂ ಯಾರಿಗೂ ಸಪೋರ್ಟ್ ಮಾಡುವುದಿಲ್ಲ. ಕೊನೆಗೆ ನಮ್ಮ ಪರ ನಿಲ್ಲುವುದು ತಂದೆ- ತಾಯಿ ಮಾತ್ರ. ಡಿವೋರ್ಸ್ ಪರಿಹಾರ ಎಂದು ನಾನು ಹೇಳುವುದಿಲ್ಲ. ಸರಿ ಮಾಡಿಕೊಳ್ಳಿ, ಇಲ್ಲ ಸೂಕ್ತವಾದ ನಿರ್ಧಾರ ತೆಗೆದುಕೊಳ್ಳಿ. ಕೋಟಿ ಖರ್ಚು ಮಾಡಿ ಮಗಳ ಮದುವೆ ಮಾಡುತ್ತಾರೆ. ಅಲ್ಲಿ ವರದಕ್ಷಿಣಿಗಾಗಿ ಅವಳ ಪ್ರಾಣ ತೆಗೆದರೆ, ನೀವು ಆಮೇಲೆ ಮಾತನಾಡಿ ಏನು ಉಪಯೋಗ ಎಂದು ಅನು ಪೋಷಕರಿಗೆ ಕಿವಿ ಮಾತು ಹೇಳಿದ್ದಾರೆ.

    ನಟಿ ಅನುಪ್ರಭಾಕರ್ ಅವರು 2016ರಲ್ಲಿ ನಟ ರಘು ಮುಖರ್ಜಿ (Raghu Mukherjee) ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈಗ ದಂಪತಿಗೆ ನಂದನಾ ಎಂಬ ಮುದ್ದಾದ ಮಗಳಿದ್ದಾಳೆ. ಇಬ್ಬರೂ ಖುಷಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಚಿತ್ರರಂಗದಲ್ಲೂ ಆಕ್ಟೀವ್ ಆಗಿದ್ದಾರೆ.

  • ಪತಿಯ ಬಾಲ್ಯದ ಫೋಟೋ ಶೇರ್ ಮಾಡಿದ ಅನುಗೆ ಮೇಘನಾ ಧನ್ಯವಾದ

    ಪತಿಯ ಬಾಲ್ಯದ ಫೋಟೋ ಶೇರ್ ಮಾಡಿದ ಅನುಗೆ ಮೇಘನಾ ಧನ್ಯವಾದ

    ಬೆಂಗಳೂರು: ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ಬಾಲ್ಯದ ಫೋಟೋವನ್ನು ಹಂಚಿಕೊಂಡ ನಟಿ ಅನುಪ್ರಭಾಕರ್ ಅವರಿಗೆ ಮೇಘನಾ ರಾಜ್ ಧನ್ಯವಾದ ತಿಳಿಸಿದ್ದಾರೆ.

    ಅನುಪ್ರಭಾಕರ್ ಅವರು ತಮ್ಮ ಫೋಟೋದಲ್ಲಿ ಚಿರು, ಅರ್ಜುನ್ ಸರ್ಜಾ ಹಾಗೂ ಅವರ ಪತ್ನಿ ಜೊತೆಗಿದ್ದ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ಫೋಟೋವನ್ನು ಶೇರ್ ಮಾಡಿಕೊಂಡಿರುವ ಮೇಘನಾ, ಅತ್ಯಂತ ಅಮೂಲ್ಯವಾದ ಫೋಟೋ ಶೇರ್ ಮಾಡಿದ ಅನುಪ್ರಭಾಕರ್ ಅವರಿಗೆ ಧನ್ಯವಾದ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Meghana Raj Sarja (@megsraj)

    ಇತ್ತ ತಮ್ಮ ಇನ್ ಸ್ಟಾ ಖಾತೆಯಲ್ಲಿ ಅಪರೂಪದ ಫೊಟೋದೊಂದಿಗೆ ಭಾವನಾತ್ಮಕ ಸಂದೇಶ ಬರೆದುಕೊಂಡಿರುವ ಅನು, ನನ್ನ ಅಕ್ಕ ನಿವೇದಿತಾ ಹಾಗೂ ಭಾವ ಅರ್ಜುನ್ ಸರ್ಜಾ ಅವರ ನಿಶ್ಚಿತಾರ್ಥದ ಫೋಟೋ. ಭಾವನ ತೊಡೆ ಮೇಲೆ ಚಿರು, ಅಕ್ಕನ ತೊಡೆ ಮೇಲೆ ನಾನು. ಇದೊಂದು ಬೆಲೆ ಕಟ್ಟಲಾಗದ ಫೋಟೋ. ಚಿರು ನೀನು ಎಲ್ಲಿದ್ದರೂ ಸಂತೋಷವಾಗಿ, ಶಾಂತವಾಗಿದ್ದೀಯ ಎಂಬ ವಿಶ್ವಾಸವಿದೆ ಎಂದು ಬರೆದಿದ್ದಾರೆ.

    ಅನು ಪ್ರಭಾಕರ್ ಅವರು ಅಪರೂಪದ ಫೋಟೋ ಹಂಚಿಕೊಳ್ಳುವ ಮೂಲಕ ಚಿರಂಜೀವಿ ಸರ್ಜಾ ಅವರನ್ನು ನೆನೆಪು ಮಾಡಿಕೊಂಡಿದ್ದಾರೆ. ಇದಕ್ಕೆ ಐಶ್ವರ್ಯ ಅರ್ಜುನ್ ಹಾರ್ಟ್ ಎಮೋಜಿಯನ್ನು ಕಮೆಂಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ. ಫೋಟೋಗೆ ಸಾಕಷ್ಟು ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅವರ ಅಕಾಲಿಕ ನಿಧನ ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿತ್ತು. ಇದೇ ಬೇಸರದಲ್ಲಿದ್ದ ಕುಟುಂಬಕ್ಕೆ ಇದೀಗ ಪುಟ್ಟ ಮಗುವಿನ ಆಗಮನದಿಂದ ಸಂತಸ ತಂದಿದೆ. ಮೇಘನಾ ಅವರು ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಕುಟುಂಬಸ್ಥರಲ್ಲಿ ಸಂತಸ ಮನೆ ಮಾಡಿದೆ. ಮೇಘನಾ ಅವರು ಅಕ್ಟೋಬರ್ 22 ರಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈಗಾಗಲೇ ತಮ್ಮ ನೆಚ್ಚಿನ ನಟನನ್ನು ಕಳೆದುಕೊಂಡಿರುವ ಅಭಿಮಾನಿಗಳು ಚಿರುಗೆ ಗಂಡು ಮಗುವಾಗುತ್ತಿದ್ದಂತೆಯೇ ಸಂತಸ ಮುಗಿಲುಮುಟ್ಟಿತ್ತು. ಅಲ್ಲದೆ ಅದಾಗಲೇ ಜ್ಯೂನಿಯರ್ ಚಿರು ಅಂತಾನೇ ಹೆಸರಿಟ್ಟಿದ್ದಾರೆ. ಮಗುವಿನಲ್ಲೇ ಚಿರುನನ್ನು ಕಾಣುತ್ತಿದ್ದಾರೆ.

  • 40ನೇ ವರ್ಷಕ್ಕೆ ಕಾಲಿಡ್ತಿದ್ದೇನೆ- ‘ಹ್ಯಾಪಿ ಬರ್ತ್ ಡೇ ಟು ಮೀ’ ಅಂದ್ರು ಅನುಪ್ರಭಾಕರ್

    40ನೇ ವರ್ಷಕ್ಕೆ ಕಾಲಿಡ್ತಿದ್ದೇನೆ- ‘ಹ್ಯಾಪಿ ಬರ್ತ್ ಡೇ ಟು ಮೀ’ ಅಂದ್ರು ಅನುಪ್ರಭಾಕರ್

    – ಪತ್ರದ ಮೂಲಕ ತನಗೆ ತಾನೇ ವಿಶ್
    – ವಾಗ್ದಾನ ಮಾಡ್ಕೊಂಡ ನಟಿ

    ಬೆಂಗಳೂರು: ಸ್ಯಾಂಡಲ್‍ವುಡ್ ಖ್ಯಾತ ನಟಿಯರಲ್ಲಿ ಒಬ್ಬರಾದ ಅನುಪ್ರಭಾಕರ್ ಮುಖರ್ಜಿ ಅವರದ್ದು ಇಂದು 40ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ನಟಿಗೆ ಅಭಿಮಾನಿಗಳು, ಸಂಬಂಧಿಕರು ಹಾಗೂ ನಟ-ನಟಿಯರಿಂದ ಶುಭಾಶಯಗಳ ಸುರಿಮಳೆಗಳೇ ಬರುತ್ತಿವೆ. ಈ ಮಧ್ಯೆ ಅನು ಅವರು ವಿಶೇಷವಾಗಿ ತಮಗೆ ತಾವೇ ವಿಶ್ ಕೂಡ ಮಾಡಿಕೊಂಡಿದ್ದಾರೆ.

    ಇವತ್ತು ನಾನು 40ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ ಎಂಬ ತಲೆಬರಹದೊಂದಿಗೆ ಪತ್ರದ ಮೂಲಕ ಶುಭಾಶಯ ಕೋರಿಕೊಂಡ ಅನು, ಕೃತಜ್ಞತೆ! ಎಂಬ ಒಂದು ಪದವು ಇಂದು ನನ್ನ ಹೃದಯವನ್ನು ತುಂಬುತ್ತದೆ. ನನಗೆ ಈ ಅದ್ಭುತವಾದ ಜೀವನ, ತಂದೆ-ತಾಯಿಗಳು, ಕುಟುಂಬ ಮತ್ತು ಕುಟುಂಬದಂತಿರುವ ಸ್ನೇಹಿತರನ್ನು ನೀಡಿರುವ ದೇವರು ಮತ್ತು ಈ ಪ್ರಪಂಚಕ್ಕೆ ಋಣಿಯಾಗಿದ್ದೇನೆ ಹಾಗೂ ವಂದನೆಗಳನ್ನು ಸಲ್ಲಿಸುತ್ತೇನೆ.

    ಗಾಯತ್ರಿ ಮತ್ತು ಪ್ರಭಾಕರ್ ಮಗಳಾಗಿ, ವಿಕ್ಕಿಯ ತಂಗಿಯಾಗಿ, ಅನ್ನಪೂರ್ಣಳಾಗಿ ನನ್ನ ಬಾಲ್ಯ ಕಳೆದೆ. ಆನಂತರ ಲಕ್ಷಾಂತರ ಕನ್ನಡಿಗರ ಹೃದಯದಲ್ಲಿ ಅನುಪ್ರಭಾಕರ್ ಆಗಿ ನೆಲೆಸಿದೆ. ರಘು ಅವರ ಜೀವನ ಸಂಗಾತಿಯಾಗಿ, ನಂದನಾಳ ಅಮ್ಮನಾಗುವ ಮೂಲಕ ನನ್ನ ಸುಂದರವಾದ ಜೀವನ ನಿಜವಾದ ಅರ್ಥದಲ್ಲಿ ಪರಿಪೂರ್ಣವಾಯಿತು.

    ಈ 40 ವರ್ಷಗಳು ಸ್ಮರಣಯೋಗ್ಯ ಜೀವನವಾಗುವಂತೆ ಮಾಡಿದ ಪ್ರತಿಯೊಬ್ಬರಿಗೂ ನನ್ನ ವಂದನೆಗಳನ್ನು ಅರ್ಪಿಸುತ್ತೇನೆ. ಕೃತಜ್ಞತೆ ತುಂಬಿದ ಜೀವನವನ್ನು ನಡೆಸುವಲ್ಲಿ ನನ್ನ ತಂದೆ-ತಾಯಿಗಳು ನನ್ನಲ್ಲಿ ಅಂತರ್ಗತ ಮಾಡಿರುವ ಮೂಲ ತತ್ವಗಳಂತೆ ಜೀವನವನ್ನು ಸಾಗಿಸುತ್ತೇನೆಂದು ನನಗೆ ನಾನೇ ವಾಗ್ದಾನ ಮಾಡಿಕೊಳ್ಳುತ್ತೇನೆ.

    ಅಪ್ಪ-ನಾನು ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೀನಿ, ಆದರೆ ನನಗೆ ಗೊತ್ತು ಪ್ರತಿಕ್ಷಣ ನೀವು ನನ್ನ ಪಕ್ಕದಲ್ಲಿದ್ದು, ನನ್ನ ಕೈಹಿಡಿದು ಆಶೀರ್ವಾದ ಮಾಡಿ ನನ್ನನ್ನು ನಡೆಸುತ್ತೀರಿ ಎಂದು! ಹ್ಯಾಪಿ ಬರ್ತ್ ಡೇ ಟು ಮೀ..!! ಎಂದು ಅನು ಬರೆದುಕೊಂಡಿದ್ದಾರೆ.

    ಅನುಪ್ರಭಾಕರ್ ಅವರು ಸದಾ ಸಾಮಾಜಿಕ ಜಾಲತಾಣಗಲ್ಲಿ ಸಕ್ರಿಯರಾಗಿರುತ್ತಾರೆ. ತಮ್ಮ ಮಗಳ ತುಂಟಾಟದ ವೀಡಿಯೋಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆ ಟ್ವೀಟ್ ಮಾಡಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಚಿತ್ರದಲ್ಲಿ ನಟಿಸುವುದಾಗಿ ತಿಳಿಸಿದ್ದ ಅನು, ನನ್ನ ಪಾಲಿನ ದೇವರುಗಳಾದ ನಿಮ್ಮ ತಂದೆ-ತಾಯಿ, ನನ್ನನ್ನು ಕನ್ನಡಿಗರಿಗೆ, ನಿಮ್ಮ ಅಣ್ಣ ಶಿವರಾಜ್ ಕುಮಾರ್ ಅವರ ಜೋಡಿಯಾಗಿ ಪರಿಚಯಿಸಿದರು. 21 ವರ್ಷಗಳ ನಂತರ ಈಗ ನಿಮ್ಮ ಜೊತೆ ಅಭಿನಯಿಸುವ ಅವಕಾಶ ದೊರೆತಿದೆ ಎಂದು ಬರೆದುಕೊಂಡು ಪುನೀತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರಿಗೆ ಟ್ಯಾಗ್ ಮಾಡಿದ್ದರು. ಅಲ್ಲದೆ ನಾನು ರೋಮಾಂಚನಗೊಂಡಿದ್ದು, ಎದುರು ನೋಡುತ್ತಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದರು.

  • 21 ವರ್ಷಗಳ ನಂತ್ರ ಪುನೀತ್ ಜೊತೆ ನಟನೆ- ರೋಮಾಂಚನಗೊಂಡಿದ್ದೇನೆ ಅಂದ್ರು ಅನು

    21 ವರ್ಷಗಳ ನಂತ್ರ ಪುನೀತ್ ಜೊತೆ ನಟನೆ- ರೋಮಾಂಚನಗೊಂಡಿದ್ದೇನೆ ಅಂದ್ರು ಅನು

    ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಜೇಮ್ಸ್ ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು, ಈ ಚಿತ್ರದಲ್ಲಿ ನಟಿ ಅನುಪ್ರಭಾಕರ್ ಕೂಡ ನಟಿಸಲಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಅನು, ನನ್ನ ಪಾಲಿನ ದೇವರುಗಳಾದ ನಿಮ್ಮ ತಂದೆ-ತಾಯಿ, ನನ್ನನ್ನು ಕನ್ನಡಿಗರಿಗೆ, ನಿಮ್ಮ ಅಣ್ಣ ಶಿವರಾಜ್ ಕುಮಾರ್ ಅವರ ಜೋಡಿಯಾಗಿ ಪರಿಚಯಿಸಿದರು. 21 ವರ್ಷಗಳ ನಂತರ ಈಗ ನಿಮ್ಮ ಜೊತೆ ಅಭಿನಯಿಸುವ ಅವಕಾಶ ದೊರೆತಿದೆ ಎಂದು ಬರೆದುಕೊಂಡು ಪುನೀತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಅವರಿಗೆ ಟ್ಯಾಗ್ ಮಾಡಿದ್ದಾರೆ. ಅಲ್ಲದೆ ನಾನು ರೋಮಾಂಚನಗೊಂಡಿದ್ದು, ಎದುರು ನೋಡುತ್ತಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.

    ಚಿತ್ರದಲ್ಲಿ ಅನುಪ್ರಭಾಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. 55ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅನು ಪ್ರಭಾಕರ್ ಇದೀಗ ಮೊದಲ ಬಾರಿಗೆ ಪುನೀತ್ ರಾಜ್‍ಕುಮಾರ್ ಜೊತೆ ಬಣ್ಣ ಹಚ್ಚುತ್ತಿದ್ದಾರೆ. ಅನು ಪ್ರಭಾಕರ್ ಚಿತ್ರ ತಂಡ ಸೇರಿರುವುದು ಅಭಿಮಾನಿಗಳಲ್ಲಿ ಇನ್ನೂ ಕುತೂಹಲ ಹೆಚ್ಚಿಸಿದ್ದು, ಯಾವ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಕಾತರದಿಂದ ಕಾಯುತ್ತಿದ್ದಾರೆ.

    ಯುವರತ್ನ ಸಿನಿಮಾದ ಅಂತಿಮ ಹಂತದ ಚಿತ್ರೀಕರಣ ಮೊನ್ನೆಯಷ್ಟೇ ಪೂರ್ಣಗೊಂಡಿದೆ. ಇದರ ಬೆನ್ನಲ್ಲೇ ಇದೀಗ ಅಪ್ಪು ಜೇಮ್ಸ್ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಲಾಕ್‍ಡೌನ್ ವೇಳೆ ಫುಲ್ ರೆಸ್ಟ್ ಮೂಡ್‍ನಲ್ಲಿದ್ದ ಅಪ್ಪು ಇದೀಗ ಸಖತ್ ಬ್ಯುಸಿಯಾಗಿದ್ದಾರೆ. ಯುವರತ್ನ ಚಿತ್ರೀಕರಣ ಪೂರ್ಣಗೊಳಿಸಿ ಸದ್ಯ ಜೇಮ್ಸ್ ಶೂಟಿಂಗ್ ಶುರು ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಜೇಮ್ಸ್ ಸಿನಿಮಾ ಸದ್ದು ಮಾಡುತ್ತಿದ್ದು, ಇದೀಗ ಚಿತ್ರೀಕರಣ ಆರಂಭವಾಗಿದೆ. ಭರ್ಜರಿ ಚೇತನ್ ಕುಮಾರ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಸಿನಿಮಾ ಯಾವ ರೀತಿ ಮೂಡಿ ಬರಲಿದೆ ಎಂಬುದು ಕುತೂಹಲ ಮೂಡಿಸಿದೆ.

    ಚಿತ್ರೀಕರಣ ಆರಂಭವಾಗುತ್ತಿದ್ದಂತೆ ಚಿತ್ರದ ಕುರಿತು ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದ್ದು, ತಾರಾಗಣದ ಬಗ್ಗೆ ಸಹ ಪ್ರಶ್ನಿಸುತ್ತಿದ್ದಾರೆ. ಪ್ರಮುಖವಾಗಿ ಪುನೀತ್ ಜೊತೆ ಯಾರು ರೊಮಾನ್ಸ್ ಮಾಡಲಿದ್ದಾರೆ, ನಾಯಕಿ ಯಾರಾಗಬಹುದು ಎಂಬ ಚರ್ಚೆ ನಡೆಯುತ್ತಿತ್ತು. ಇದಕ್ಕೆ ಇದೀಗ ತೆರೆ ಬಿದ್ದಿದ್ದು, ಹಿರೋಯಿನ್ ಹೆಸರು ಬಹಿರಂಗವಾಗಿದೆ. ಜೇಮ್ಸ್ ಚಿತ್ರದಲ್ಲಿ ಅಪ್ಪು ಜೊತೆ ತಮಿಳು ನಟಿ ಪ್ರಿಯಾ ಆನಂದ್ ರೊಮ್ಯಾನ್ಸ್ ಮಾಡಲಿದ್ದಾರೆ.

  • ಬಾಳಸಂಗಾತಿಯಾಗುತ್ತೀರಾ ಎಂದ ಅಭಿಮಾನಿಗೆ ಸಲಹೆ ನೀಡಿದ ಅನುಪ್ರಭಾಕರ್

    ಬಾಳಸಂಗಾತಿಯಾಗುತ್ತೀರಾ ಎಂದ ಅಭಿಮಾನಿಗೆ ಸಲಹೆ ನೀಡಿದ ಅನುಪ್ರಭಾಕರ್

    ಬೆಂಗಳೂರು: ಮುಂದಿನ ಜನ್ಮದಲ್ಲಿ ಬಾಳಸಂಗಾತಿಯಾಗುತ್ತೀರಾ ಎಂದ ಅಭಿಮಾನಿಯೋರ್ವನಿಗೆ ನಟಿ ಅನುಪ್ರಭಾಕರ್ ಒಂದು ಒಳ್ಳೆಯ ಸಲಹೆ ನೀಡಿದ್ದಾರೆ.

    ಒಂದು ಲಾಂಗ್ ಗ್ಯಾಪ್‍ನ ನಂತರ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿರುವ ಅನುಪ್ರಭಾಕರ್ ಅವರು, ಸಾಮಾಜಿಕ ಜಾಲತಾಣದಲ್ಲಿ ಯಾವಾಗಲು ಸಖತ್ ಸಕ್ರಿಯವಾಗಿ ಇರುತ್ತಾರೆ. ಇತ್ತೀಚೆಗಷ್ಟೇ ನಿಮಗೆ ವಯಸ್ಸಯ್ತು ಎಂದಿದ್ದ ಅಭಿಮಾನಿಗೆ ಕ್ಲಾಸ್ ತೆಗೆದುಕೊಂಡಿದ್ದ ಅನು, ಈಗ ಅಭಿಮಾನಿಯೋರ್ವನಿಗೆ ಸಲಹೆ ನೀಡಿದ್ದಾರೆ.

    ನವೀನ್ ರಾಜ್ ಎಂಬ ಅನುಪ್ರಭಾಕರ್ ಅಭಿಮಾನಿಯೋರ್ವ ಟ್ವಿಟ್ಟರ್ ನಲ್ಲಿ ಅವರ ಒಂದು ಫೋಟೋಗೆ ರೀಟ್ವೀಟ್ ಮಾಡಿದ್ದು, ಸೂಪರ್ ಲುಕ್ ಅನು ನಿಮ್ಮನ್ನ ನೋಡುತ್ತಿದ್ದರೆ ನನ್ನ ಹಳೇ 1999 ಲವ್ ಸ್ಟೋರಿ ಮತ್ತೆ ಓಪನ್ ಆಗುತ್ತೆ. ಮುಂದಿನ ಜನ್ಮದಲ್ಲಿ ನೀವೇ ನನ್ನ ಬಾಳಸಂಗಾತಿಯಾಗಬೇಕು ಎಂದು ನನ್ನ ಆಸೆ ಅದಕ್ಕೆ ನೀವೆನಂತೀರಾ ಎಂದು ಬರೆದುಕೊಂಡಿದ್ದರು.

    ಈ ಟ್ವೀಟ್‍ಗೆ ಉತ್ತರ ನೀಡಿರುವ ಅನುಪ್ರಭಾಕರ್ ಅವರು, ಮೊದಲು ಈ ಜನ್ಮದಲ್ಲಿ ಖುಷಿಯಾಗಿ ಇರಿ. ಮುಂದಿನ ಜನ್ಮ ಆಮೇಲೆ ನೋಡೋಣ ಎಂದು ಸಲಹೆ ನೀಡಿದ್ದಾರೆ. ಇದಕ್ಕೆ ಕೆಲ ಅಭಿಮಾನಿಗಳು ಕಮೆಂಟ್ ಮಾಡಿದ್ದು, ಸೂಪರ್ ಉತ್ತರ ಅನು ಅವರೇ. ಸರಿಯಾಗಿ ಹೇಳಿದ್ದೀರಿ ಎಂದು ತಿಳಿಸಿದ್ದಾರೆ.

    ಇತ್ತೀಚೆಗಷ್ಟೇ ಅನುಪ್ರಭಾಕರ್ ಅವರು, ನಾನು ಚಿತ್ರರಂಗಕ್ಕೆ ಬರುತ್ತಿದ್ದೇನೆ. ಮತ್ತೆ ಕ್ಯಾಮೆರಾ ಮುಂದೆ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಕಮೆಂಟ್ ಹಾಕಿದ್ದ, ಮಧುಸೂದನ್ ಎಂಬವರು ಸ್ವಲ್ಪ ವಯಸ್ಸಗಿದೆ ಬಿಡಿ ಸಾಕು ಎಂದಿದ್ದರು. ಈ ಕಮೆಂಟ್ ನೋಡಿ ಗರಂ ಆದ ಅನುಪ್ರಭಾಕರ್, ವಯಸ್ಸು ಆದ್ರೆ ಕೆಲಸ ನಿಲ್ಲಿಸಬೇಕಾ ಮಧು? ನೀವು ನನ್ನ ಸಿನಿಮಾ ನೋಡೋ ಅವಶ್ಯಕತೆ ಇಲ್ಲ ಬಿಡಿ. ಕಲಾವಿದರಾಗಿ ನಮ್ಮನ್ನು ಇಷ್ಟ ಪಡುವವರು ನೋಡುತ್ತಾರೆ ಎಂದು ಬರೆದು ಖಾರವಾಗಿ ಪ್ರತಿಕ್ರಿಯಿಸಿದ್ದರು.