Tag: ಅನುಪಮಾ ಪರಮೇಶ್ವರ್‌

  • ಕಾರಿನಲ್ಲಿ ಲಿಪ್ ಲಾಕ್ ಮಾಡುವಾಗ ಕಷ್ಟವಾಯ್ತು : ನಟಿ ಅನುಪಮಾ

    ಕಾರಿನಲ್ಲಿ ಲಿಪ್ ಲಾಕ್ ಮಾಡುವಾಗ ಕಷ್ಟವಾಯ್ತು : ನಟಿ ಅನುಪಮಾ

    ಟಿ ಅನುಪಮಾ ಪರಮೇಶ್ವರನ್ ಅವರು ಟಿಲ್ಲು ಸ್ಕ್ವೇರ್ (Tillu Square) ಸಿನಿಮಾದಲ್ಲಿ ಲಿಪ್ ಲಾಕ್ ಮಾಡಿರುವುದು ಭಾರೀ ಚರ್ಚೆಗೆ ಕಾರಣವಾಗುತ್ತಿದೆ. ಈ ರೀತಿಯ ದೃಶ್ಯದಲ್ಲಿ ಅನುಪಮಾ ಮೊದಲ ಬಾರಿಗೆ ಕಂಡಿದ್ದರಿಂದ ಸ್ವತಃ ಅಭಿಮಾನಿಗಳೇ ನಾನಾ ರೀತಿಯಲ್ಲಿ ಪ್ರಶ್ನೆ ಮಾಡಿದ್ದರು. ಈ ಕುರಿತಂತೆ ಅನುಪಮಾ ಮಾತನಾಡಿದ್ದು, ಕಾರಿನಲ್ಲಿ ತಮಗೆ ಲಿಪ್ ಲಾಕ್ ಮಾಡಲು ಕಷ್ಟವಾಯಿತು ಎಂದು ಹೇಳಿದ್ದಾರೆ.

    ನೂರಾರು ಜನರ ಎದುರು, ಅದು ಕಾರಿನಲ್ಲಿ (Car) ಅಂತಹ ದೃಶ್ಯ ಮಾಡುವಾಗ ಬೇರೆಯದ್ದೇ ಮನಸ್ಥಿತಿ ಬೇಕಾಗುತ್ತದೆ. ಹಾಗಾಗಿ ಆ ದೃಶ್ಯದಲ್ಲಿ ನಟಿಸುವಾಗ ನನಗೆ ತೀರಾ ಕಷ್ಟವಾಯಿತು. ಆದರೆ, ಅದು ಬೇರೆಯದ್ದೇ ರೀತಿಯ ಪಾತ್ರವಾಗಿದ್ದರಿಂದ ಮಾಡಿದೆ ಎಂದು ಅನುಪಮಾ ಮಾತನಾಡಿದ್ದಾರೆ.

    ಕನ್ನಡವೂ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ನಟಿ ಅನುಪಮಾ ಪರಮೇಶ್ವರನ್  (Anupama Parameswaran) ಟಿಲ್ಲು ಸ್ಕ್ವೇರ್ ಸಿನಿಮಾದಲ್ಲಿ ಹೊಸ ಬಗೆಯ ಪಾತ್ರ ಮಾಡಿದ್ದಾರೆ. ಆ ಪಾತ್ರವು ಸಖತ್ ಬೋಲ್ಡ್‍ ಮತ್ತು ಹಾಟ್ ಆಗಿದೆ. ಡೀಪ್ ಲಿಪ್ ಲಾಕ್ ಕೂಡ ಮಾಡಿಕೊಂಡಿದ್ದಾರೆ. ಹಾಗಾಗಿ ಇಂತಹ ಪಾತ್ರಗಳು ನಿಮಗೆ ಬೇಕಾ? ಎಂದು ಹಲವಾರು ಜನ ಪ್ರಶ್ನೆ ಮಾಡಿದ್ದಾರೆ.

    ನಿನ್ನೆ ಟಿಲ್ಲು ಸ್ಕ್ವೇರ್ ಸಿನಿಮಾದ ಮತ್ತೊಂದು ಹಾಡು ಬಿಡುಗಡೆ ಆಗಿದೆ. ಈ ಹಾಡು ಬಿಡುಗಡೆ ಸಮಾರಂಭದಲ್ಲಿ ತಮ್ಮ ಮೇಲಿನ ಆರೋಪಕ್ಕೆ ಅನುಪಮಾ ಖಡಕ್ಕಾಗಿಯೇ ಉತ್ತರ ಕೊಟ್ಟಿದ್ದಾರೆ. ದಿನವೂ ಯಾರೂ ಪಲಾವು, ಬಿರಿಯಾನಿ ತಿನ್ನಲ್ಲ. ಒಂದೊಂದು ಸಲ ಬೇರೆ ಟೇಸ್ಟ್ ಮಾಡಬೇಕು ಅನಿಸತ್ತೆ. ನನಗೆ ಒಂದೇ ಪಾತ್ರ ಮಾಡೋಕೆ ಆಗಲಿಲ್ಲ. ಹಾಗಾಗಿ ಭಿನ್ನ ಪಾತ್ರ ಆಯ್ಕೆ ಮಾಡಿಕೊಂಡಿದ್ದೇನೆ ಅಂದಿದ್ದಾರೆ. ಅಲ್ಲದೇ, ಚಿತ್ರದಲ್ಲಿ ಅಡಲ್ಟ್ ಕಂಟೆಂಟ್ ಏನೂ ಇಲ್ಲ ಎಂಬ ಮಾಹಿತಿಯನ್ನೂ ನೀಡಿದ್ದಾರೆ.

     

    ಈ ಸಿನಿಮಾದಲ್ಲಿ ಸಿದ್ದು ಜೊನ್ನಲಗಡ್ಡ ಜೊತೆಯಾಗಿ ನಟಿಸಿರುವ ಅನುಪಮಾ ಅಭಿಮಾನಿಗಳಿಗೆ ಮತ್ತೇರಿಸುವಂತ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಬೋಲ್ಡ್ ಪಾತ್ರಗಳಲ್ಲಿ ಮಾಡಲ್ಲ ಅಂತಿದ್ದ ಈ ನಟಿ ಟಿಲ್ಲು ಸ್ಕ್ವೇರ್ (Tillu Square) ಸಿನಿಮಾದಲ್ಲಿ ಬೋಲ್ಡ್ ಆಗಿ ನಟಿಸಿದ್ದಾರೆ. ಜೊತೆಗೆ ಲಿಪ್ ಲಾಕ್ (Lip Lock) ಕೂಡ ಮಾಡಿದ್ದಾರೆ. ಈ ಹಿಂದೆ ರೌಡಿ ಬಾಯ್ಸ್ ಸಿನಿಮಾದಲ್ಲಿ ಈ ರೀತಿಯ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರೂ, ಅಭಿಮಾನಿಗಳಿಗೆ ಅಷ್ಟೇನೂ ಅವು ಮತ್ತೇರಿಸಿರಲಿಲ್ಲ.

  • `ನಟಸಾರ್ವಭೌಮ’ ಚಿತ್ರದ ನಾಯಕಿ ಅನುಪಮಾಗೆ ಕೊರೋನಾ ಪಾಸಿಟಿವ್

    `ನಟಸಾರ್ವಭೌಮ’ ಚಿತ್ರದ ನಾಯಕಿ ಅನುಪಮಾಗೆ ಕೊರೋನಾ ಪಾಸಿಟಿವ್

    ಸೌತ್ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ ನಟಿ ಅನುಪಮಾ ಪರಮೇಶ್ವರನ್ ಸದ್ಯ `ಕಾರ್ತಿಕೇಯನ್ 2′ ಚಿತ್ರದ ಸಕ್ಸಸ್ ಖುಷಿಯಲ್ಲಿದ್ದಾರೆ. ಇದೀಗ  ನಟಿ ಅನುಪಮಾಗೆ ಕೊರೋನಾ ಪಾಸಿಟಿವ್ ದೃಢಪಟ್ಟಿರುವುದು ತಿಳಿದು ಬಂದಿದೆ.

    ದಕ್ಷಿಣದ ಸಿನಿಮಾಗಳ ಜತೆ ಕನ್ನಡದ `ನಟಸಾರ್ವಭೌಮ’ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್‌ಗೆ ನಾಯಕಿಯಾಗುವ ಮೂಲಕ ಛಾಪೂ ಮೂಡಿಸಿದ ಚೆಲುವೆ ಅನುಪಮಾ ಪರಮೇಶ್ವರನ್‌ `ಕಾರ್ತಿಕೇಯನ್’ ಚಿತ್ರದ ಸಕ್ಸಸ್ ಖುಷಿಯಲ್ಲಿದ್ದಾರೆ. ಇನ್ನು ಚಿತ್ರದ ಪ್ರಚಾರ ಕಾರ್ಯದಲ್ಲಿ ಭಾಗಿಯಾಗಿದ್ದ ನಟಿಗೆ ಇದೀಗ ಕೊರೋನಾ ಸೋಂಕು ತಗುಲಿದೆ.

    ಸಾಕಷ್ಟು ಕಡೆ ಪ್ರಚಾರ ಕಾರ್ಯದಲ್ಲಿ ತಂಡದ ಜತೆ ಭಾಗಿಯಾಗಿದ್ದ ಅನುಪಮಾ ಶೀತ ಜ್ವರದಿಂದ ಬಳಲುತ್ತಿದ್ದಾರೆ. ವೈದ್ಯರನ್ನ ಸಂಪರ್ಕಿಸಿದಾಗ ಕೊರೋನಾ ಪಾಸಿಟಿವ್ ಎಂದು ತಿಳಿದು ಬಂದಿದೆ. ಇನ್ನು ತಮ್ಮ ನಿವಾಸದಲ್ಲಿಯೇ ನಟಿ ಕ್ವಾರಂಟೈನಲ್ಲಿದ್ದಾರೆ. ಇದನ್ನೂ ಓದಿ:ಸೌತ್ ಸ್ಟಾರ್ ವಿಜಯ್ ದೇವರಕೊಂಡ ವಿರುದ್ಧ ಸಿಡಿದೆದ್ದ ಬಾಲಿವುಡ್ ಥಿಯೇಟರ್ ಮಾಲೀಕ

     

    View this post on Instagram

     

    A post shared by Nikhil Siddhartha (@actor_nikhil)

    ಇನ್ನು `ಕಾರ್ತೀಕೇಯನ್ 2′ ಸಿನಿಮಾ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರದಲ್ಲಿನ ಅನುಪಮಾ ಪಾತ್ರ ಮತ್ತು ನಟನೆ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಬೆನ್ನಲ್ಲೇ ನಟಿಗೆ ಸಾಲು ಸಾಲು ಸಿನಿಮಾ ಅವಕಾಶಗಳು ಅರಸಿ ಬರುತ್ತಿದೆ.

    Live Tv
    [brid partner=56869869 player=32851 video=960834 autoplay=true]