Tag: ಅನುದಾನ

  • ಹೆಸ್ಕಾಂಗೆ 13 ಸಾವಿರ ಕೋಟಿ ಅನುದಾನ ನೀಡಿ ಪುನಶ್ಚೇತನ ನೀಡಿದ್ದೆ: ಬೊಮ್ಮಾಯಿ

    ಹೆಸ್ಕಾಂಗೆ 13 ಸಾವಿರ ಕೋಟಿ ಅನುದಾನ ನೀಡಿ ಪುನಶ್ಚೇತನ ನೀಡಿದ್ದೆ: ಬೊಮ್ಮಾಯಿ

    ಬೆಳಗಾವಿ: ಕಾಂಗ್ರೆಸ್ (Congress) ಕಾಲದ ದೊಡ್ಡ ಪ್ರಮಾಣದ ಹೊರೆ ಹೆಸ್ಕಾಂ (HESCOM) ಮೇಲಿತ್ತು. ನಾನು ಸಿಎಂ ಆಗಿದ್ದಾಗ ದೊಡ್ಡ ಪ್ರಮಾಣದ ಅನುದಾನವನ್ನು (Grant) ನೀಡಿದ್ದೇನೆ ಎಂದು‌ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದರು.

    ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ದೊಡ್ಡ ಪ್ರಮಾಣದ ಹೊರೆಯನ್ನು ಹೆಸ್ಕಾಂ ಮೇಲೆ ಹಾಕಿತ್ತು. 13 ಸಾವಿರ ಕೋಟಿ ರೂಪಾಯಿ ನೀಡಿ ಹೆಸ್ಕಾಂಗೆ ಪುನಶ್ಚೇತನ ನೀಡಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಇದು ಗೊತ್ತಿಲ್ಲ. ವಿದ್ಯುಚ್ಛಕ್ತಿ ಕ್ಷೇತ್ರ ಆರ್ಥಿಕವಾಗಿ ಸಂಕಷ್ಟದಲ್ಲಿದೆ ಎಂದರು.

     

    ಒಟ್ಟು ಬಿಲ್‌ನಲ್ಲಿ 50% ಬಿಲ್ ಸರ್ಕಾರದಿಂದ ಬರುತ್ತದೆ. ಹೆಸ್ಕಾಂ ಅಧಿಕಾರಿಗಳಿಗೆ ಬಿಲ್ ವಸೂಲಿ ಮಾಡಲು ಆರ್ಥಿಕ ಇಲಾಖೆಯಲ್ಲಿ ಕುರ್ಚಿ ಹಾಕಿ ಕೊಡಬೇಕಾಗುತ್ತದೆ. ಹಳೆ ಬಾಕಿ ಅಂತಾ ಪುಕ್ಕಟೆ ಹೊರೆಯನ್ನು ಜನರ ಮೇಲೆ ಹಾಕಿದ್ದಾರೆ. ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದ್ದಾರೆ. ಇದು ಜನರಿಗೆ ಮಾಡಿರುವ ಒಂದು ದೋಖಾ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ – ಹಿರಿಯ ವೈದ್ಯರ ಕಿರುಕುಳವೇ ಕಾರಣ: ಸಂಬಂಧಿಕರ ಆಕ್ರೋಶ

     

    ಜನರನ್ನು ಸಂಕಷ್ಟಕ್ಕೆ ಸಿಲುಕಿಸುವುದನ್ನ ಮಾಡುತ್ತಿದ್ದಾರೆ. ಎಷ್ಟು ವಿದ್ಯುತ್ ಬಳಕೆ ಮಾಡಬೇಕು ಎನ್ನುವ ಅಧಿಕಾರ ಪ್ರತಿ ಪ್ರಜೆಗೂ ಇದೆ. ಇವರು ಸರಾಸರಿ ಲೆಕ್ಕದಲ್ಲಿ ಅವರು ಬಳಸುವ ವಿದ್ಯುತ್ ಮೇಲೂ ಸಹ ಹಿಡಿದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.

  • ಮುಂದೆ ನಮ್ಮದೇ ಸರ್ಕಾರ ಬರುತ್ತೆ: ಹೆಚ್‍ಡಿಕೆ

    ಮುಂದೆ ನಮ್ಮದೇ ಸರ್ಕಾರ ಬರುತ್ತೆ: ಹೆಚ್‍ಡಿಕೆ

    ಮಂಡ್ಯ: ಮುಂದೆ ನಮ್ಮದೇ ಸರ್ಕಾರ ಬರುತ್ತದೆ. ನಾನೇ ಮಳವಳ್ಳಿಯ (Malvalli) ಬಸವ ಭವನಕ್ಕೆ ಒಂದು ಕೋಟಿ ಅನುದಾನ ಕೊಡುತ್ತೇನೆ ಎನ್ನುವ ಮೂಲಕ ಮುಂದಿನ ಮುಖ್ಯಮಂತ್ರಿ ನಾನೇ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D.KumarSwamy) ಹೇಳಿದ್ದಾರೆ.

    ಮಂಡ್ಯ (Mandya) ಜಿಲ್ಲೆಯ ಮಳವಳ್ಳಿಯ ಕನ್ನಹಳ್ಳಿಯ ಬಸವ ಭವನ (Basava Bhavana)ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈಗ ನನಗೆ ಬಸವ ಭವನಕ್ಕೆ ಅನುದಾನ ಕೊಡುವ ಅಧಿಕಾರ ಇಲ್ಲ. ಮುಂದೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಆಗ ನಾನೇ ಒಂದು ಕೋಟಿ ಅನುದಾನ ನೀಡುತ್ತೇನೆ ಎಂದು ಲಿಂಗಾಯತ ಸಮುದಾಯದ ಮುಖಂಡರಿಗೆ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಇಂಡಿಯಾ, ನ್ಯೂಜಿಲೆಂಡ್ ಕ್ರಿಕೆಟ್ ಸರಣಿ – ಡಿ.ಡಿ ಸ್ಪೋರ್ಟ್ಸ್‌ನಲ್ಲಿ ಮಾತ್ರ ನೇರ ಪ್ರಸಾರ

    ಅನ್ನದಾನಿ ಕ್ಷೇತ್ರದ ಸಮಸ್ಯೆಗಳಿಗೆ ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ, ಅನ್ನದಾನಿ ಕಾರ್ಯಕ್ಕೆ ನನ್ನ ಮೆಚ್ಚುಗೆ ಇದೆ. ನಮ್ಮ ಮನೆ ಹುಡುಗ ಅಂತಾ ನಾನು ಹತ್ತಿರದಿಂದ ಆತನನ್ನು ನೋಡಿದ್ದೇನೆ. ಸಣ್ಣಪುಟ್ಟ ಸಮಸ್ಯೆಗಳಿದ್ದರೆ ಸರಿಪಡಿಸಿಕೊಳ್ಳಲಿ, ನಿಮ್ಮ ಆಶೀರ್ವಾದ ಸದಾ ಪಡೆಯಲಿ. ದೇವೇಗೌಡರ ಅನುದಾನದಲ್ಲಿ 25 ಲಕ್ಷ ಬಿಡುಗಡೆಗೆ ಪತ್ರ ನೀಡುತ್ತೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವರನ ಕಡೆಯವರು ನೀಡಿದ ಲೆಹೆಂಗಾ ಚೀಪ್ ಕ್ವಾಲಿಟಿ – ಮದುವೆ ಬೇಡವೆಂದ ವಧು

    Live Tv
    [brid partner=56869869 player=32851 video=960834 autoplay=true]

  • ಚಾಲೆಂಜ್ ಸೋತ ಗಡ್ಕರಿ – ಎಂಪಿಗೆ ಕೊಡಬೇಕು 32 ಸಾವಿರ ಕೋಟಿ

    ಚಾಲೆಂಜ್ ಸೋತ ಗಡ್ಕರಿ – ಎಂಪಿಗೆ ಕೊಡಬೇಕು 32 ಸಾವಿರ ಕೋಟಿ

    ಭೋಪಾಲ್: ಸವಾಲು ಸೋತ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಅವರು ಮಧ್ಯಪ್ರದೇಶದ ಸಂಸದರಿಗೆ 32 ಸಾವಿರ ಕೋಟಿ ರೂ. ನೀಡಬೇಕಿದೆ.

    ಹೌದು, ನಿತಿನ್ ಗಡ್ಕರಿ ಅವರ ಸವಾಲನ್ನು ಸ್ವೀಕರಿಸಿದ ಸಂದರೊಬ್ಬರು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಕೆಲವೇ ತಿಂಗಳುಗಳಲ್ಲಿ 32 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ.

    ಉಜ್ಜಯಿನಿಯ (Ujjain) ಸಂಸದ ಅನಿಲ್ ಫಿರೋಜಿಯಾ (Anil Firojiya) ಅವರು ಈ ವರ್ಷ ಫೆಬ್ರವರಿ ತಿಂಗಳಿನಲ್ಲಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಗಡ್ಕರಿಯವರನ್ನು ಭೇಟಿಯಾಗಿದ್ದರು. ಈ ವೇಳೆ ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಸಂಸದರು ಗಡ್ಕರಿ ಅವರಲ್ಲಿ ಅನುದಾನವನ್ನು ಬಿಡುಗಡೆ ಮಾಡುವಂತೆ ಕೇಳಿಕೊಂಡಿದ್ದಾರೆ. ಆಗ ಗಡ್ಕರಿಯವರು ನೀವು ನಿಮ್ಮ ತೂಕವನ್ನು ಇಳಿಸಿಕೊಳ್ಳಿ, ನೀವು ಇಳಿಸಿಕೊಳ್ಳುವ ಪ್ರತಿ ಕೆಜಿಗೆ 1,000 ಕೋಟಿ ರೂ. ಅನುದಾನ ಬಿಡುಗಡೆ ಮಾಡುತ್ತೇನೆ ಎಂದು ಭರವಸೆ ನೀಡಿದ್ದಾರೆ.

    ಗಡ್ಕರಿ ಅವರು ಚಾಲೆಂಜ್ ನೀಡಿದ ಸಮಯ 135 ಕೆಜಿ ಇದ್ದ ಸಂಸದರು, ತಮ್ಮ ಕ್ಷೇತ್ರಕ್ಕಾಗಿ ವರ್ಕೌಟ್, ಡಯಟ್ ಮಾಡಿ ಇದೀಗ 32 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ. ಈಗ ಸಂಸದರು 93 ಕೆಜಿ ತೂಗುತ್ತಿದ್ದು ಗಡ್ಕರಿಯವರ ಚಾಲೆಂಜ್ ಗೆದ್ದಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ದೀಪಾವಳಿ

    ಫಿರೋಜಿಯಾ ಅವರು ಜೂನ್‌ನಲ್ಲಿಯೇ 15 ಕೆಜಿ ತೂಕವನ್ನು ಇಳಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ ಇಂಡಿಯಾ ಆಂದೋಲನದ ವೇಳೆ ಮಾತನಾಡಿ, ಗಡ್ಕರಿ ನೀಡಿದ ಚಾಲೆಂಜ್ ಬಗ್ಗೆ ತಿಳಿಸಿದ್ದರು. ನಾನು ಕಳೆದುಕೊಳ್ಳುವ ಪ್ರತಿ ಕೆಜಿಗೆ ಗಡ್ಕರಿಯವರು 1,000 ಕೋಟಿ ರೂ. ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ನಾನು ಈಗಾಗಲೇ 15 ಕೆಜಿ ಕಳೆದುಕೊಂಡಿದ್ದೇನೆ. ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಇನ್ನಷ್ಟು ತೂಕವನ್ನು ಕಳೆದುಕೊಳ್ಳುತ್ತೇನೆ. ನಾನು ತೂಕ ಇಳಿಸಿಕೊಳ್ಳುವುದರಿಂದ ಉಜ್ಜಯಿನಿಗೆ ಹೆಚ್ಚಿನ ಅನುದಾನ ಸಿಗುತ್ತದೆಯಾದರೆ ನಾನು ಫಿಟ್‌ನೆಸ್ ಆಡಳಿತ ಮುಂದುವರೆಸಲು ಸಿದ್ಧ ಎಂದಿದ್ದರು.

    ಫಿರೋಜಿಯಾ ಅವರು ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡಿ, ತಾವು 32 ಕೆಜಿ ಕಳೆದುಕೊಂಡಿರುವುದರ ಬಗ್ಗೆ ತಿಳಿಸಿದ್ದರು. ಗಡ್ಕರಿ ನೀಡಿರುವ ಭರವಸೆಯಂತೆ ಅವರು 2,300 ಕೋಟಿ ರೂ. ವೆಚ್ಚದ ಪ್ರದೇಶ ಅಭಿವೃದ್ಧಿ ಯೋಜನೆಯನ್ನು ಅನುಮೋದಿಸಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನನ್ನ ಅಪ್ಪನಾಣೆ ಇನ್ನೂ ಐದು ವರ್ಷ ನಾನೇ MLA ಆಗಿರ್ತೀನಿ: ಶ್ರೀನಿವಾಸ್

    Live Tv
    [brid partner=56869869 player=32851 video=960834 autoplay=true]

  • ನಷ್ಟ ಸರಿದೂಗಿಸಲು ತೈಲ ಕಂಪನಿಗಳಿಗೆ 22 ಸಾವಿರ ಕೋಟಿ ರೂ. ಅನುದಾನ

    ನಷ್ಟ ಸರಿದೂಗಿಸಲು ತೈಲ ಕಂಪನಿಗಳಿಗೆ 22 ಸಾವಿರ ಕೋಟಿ ರೂ. ಅನುದಾನ

    ನವದೆಹಲಿ: ಮೂರು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಗೆ( State-run Oil Firms) ಕೇಂದ್ರ ಸರ್ಕಾರ 22 ಸಾವಿರ ಕೋಟಿ ರೂ. ಅನುದಾನ ಪ್ರಕಟಿಸಿದೆ.

    ಕಳೆದ ಎರಡು ವರ್ಷಗಳಿಂದ ಗೃಹ ಬಳಕೆಯ ಎಲ್‌ಪಿಜಿ(LPG) ಬೆಲೆ ಭಾರೀ ಏರಿಕೆಯಾಗಿದ್ದರೂ ಕಡಿಮೆ ದರದಲ್ಲಿ ವಿತರಣೆ ಮಾಡಿದ ಹಿನ್ನೆಲೆಯಲ್ಲಿ ಆಗಿರುವ ನಷ್ಟವನ್ನು ಸರಿದೂಗಿಸಲು ಈ ಅನುದಾನ ಬಿಡುಗಡೆಗೆ ಒಪ್ಪಿಗೆ ನೀಡಿದೆ. ಇದನ್ನೂ ಓದಿ: ಮುಸ್ಲಿಂ ಪತಿ 2ನೇ ಮದುವೆಯಾಗುವಂತಿಲ್ಲ – ಕುರಾನ್ ಉಲ್ಲೇಖಿಸಿ ಹೈಕೋರ್ಟ್ ತೀರ್ಪು

    ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್‌ ಸಭೆ ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌(IOC), ಭಾರತ್‌ ಪೆಟ್ರೋಲಿಯಂ ಲಿಮಿಟೆಡ್‌(BPCL) ಮತ್ತು ಹಿಂದೂಸ್ತಾನ್‌ ಪೆಟ್ರೋಲಿಯಂ ಲಿಮಿಟೆಡ್‌(HPCL) ಕಂಪನಿಗಳಿಗೆ ಈ ಅನುದಾನ ನೀಡುವ ನಿರ್ಧಾರ ಕೈಗೊಂಡಿದೆ.

    ಜೂನ್‌ 2020 ರಿಂದ ಜೂನ್‌ 2022ರ ಅವಧಿಯಲ್ಲಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಬೆಲೆ ಶೇ.300 ರಷ್ಟು ಹೆಚ್ಚಳ ಕಂಡಿದೆ.

    Live Tv
    [brid partner=56869869 player=32851 video=960834 autoplay=true]

  • ಸಂಸದರಾಗಿ ಏನು ಮಾಡಬೇಕೆಂಬ ಜವಾಬ್ದಾರಿ ಇಲ್ಲ – ಸಮಲತಾ ವಿರುದ್ಧ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ

    ಸಂಸದರಾಗಿ ಏನು ಮಾಡಬೇಕೆಂಬ ಜವಾಬ್ದಾರಿ ಇಲ್ಲ – ಸಮಲತಾ ವಿರುದ್ಧ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ

    ಮಂಡ್ಯ: ಸಂಸದರಾಗಿ ನಿಮಗೆ ಏನು ಮಾಡಬೇಕು ಎಂಬ ಜವಾಬ್ದಾರಿ ಇಲ್ಲ ಎಂದು ಸಂಸದೆ ಸಮಲತಾ ಅಂಬರೀಶ್ ವಿರುದ್ಧ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ವಾಗ್ದಾಳಿ ನಡೆಸಿದ್ದಾರೆ.

    ಶಾಸಕರ ಕೆಲಸವನ್ನು ನಾನೇ ಮಾಡುತ್ತಿದ್ದೇನೆ ಎಂಬ ಸುಮಲತಾ ಹೇಳಿಕೆ ವಿಚಾರವಾಗಿ ಶ್ರೀರಂಗಪಟ್ಟಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿಮಗೆ ಸಂಸದರಾಗಿ ಏನು ಮಾಡಬೇಕು ಎಂಬ ಜವಬ್ದಾರಿಯ ಅರಿವಿಲ್ಲ. ಶಾಸಕರಿಗೆ ಸಂಸದರಿಗೆ ಸಾಮಾನ್ಯವಾಗಿ ಅನುದಾನ ಬರುತ್ತದೆ. ಅದನ್ನು ಬಿಟ್ಟು ಬೇರೆ ಮಂಡ್ಯಕ್ಕೆ ಹೊಸದಾಗಿ ಯಾವ ಅನುದಾನ ತಂದಿದ್ದೀರಾ ಮೊದಲು ಹೇಳಿ. ನಾನು ಅನುದಾನ ತಂದಿದ್ದೇನೆ. ಬೇಕು ಅಂದರೆ ಲೆಕ್ಕ ಕೊಡುತ್ತೇನೆ. ಆದರೆ ನೀವೇನು ಅನುದಾನ ತಂದಿದ್ದೀರಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸರ್ರಂತ ಸುಡುವ ಜ್ವಾಲಾಗ್ನಿ ಆಗಿ ಬಂದ ಈ ತೂಫಾನ್: ಕೆಜಿಎಫ್ 2 ಫಸ್ಟ್ ಲಿರಿಕಲ್ ಹಾಡು ರಿಲೀಸ್

    ರೈಲ್ವೆ ಯೋಜನೆಗೆ ದಕ್ಷಿಣ ಭಾರತಕ್ಕೆ 55 ಕೋಟಿ ಬಿಡುಗಡೆಯಾಗಿದೆ. ಉತ್ತರ ಭಾರತಕ್ಕೆ 13 ಸಾವಿರ ಕೋಟಿ ಬಿಡುಗಡೆಯಾಗಿದೆ. ಸಂಸದರಾಗಿ ನೀವು ಏನು ಮಾಡುತ್ತಿದ್ದೀರಾ? ಇವರಿಗೆ ಇವರ ಜವಾಬ್ದಾರಿಯ ಅರಿವಿಲ್ಲ. ಕೆ.ಆರ್. ನಗರದಲ್ಲಿ ಸ್ಟೇಟ್ ಫಂಡ್ ಕಾಮಗಾರಿಗೆ ಪೂಜೆ ಮಾಡುವುಕ್ಕೆ ಹೋಗುತ್ತಾರೆ. ಅದರಲ್ಲೂ ಎಂಎಲ್‍ಎ ಬಿಟ್ಟು ಹೋಗಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಗೆಳೆಯನ ಜೊತೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ತೇಜಸ್ವಿನಿ ಪ್ರಕಾಶ್

    ಮಂಡ್ಯ ಜಿಲ್ಲೆಗೆ ಸಂಸದರು ಏನು ಕೊಡುಗೆ ಕೊಡುತ್ತಾರೆ ಅಂತ ಜನ ಕಾಯುತ್ತಿದ್ದಾರೆ. ಮುಂದಿನ ಚುನಾವಣೆಗೆ ಜನರು ಉತ್ತರ ಕೊಡುತ್ತಾರೆ. ಈಗ ಭ್ರಮ ಲೋಕದಲ್ಲಿ ಇರುವಂತೆ ಕಾಣುತ್ತಾರೆ. ಮಂಡ್ಯ ಜಿಲ್ಲೆಗೆ ಏನಾದರೂ ಅಭಿವೃದ್ಧಿ ಮಾಡಿ. ಸಮುದಾಯ ಭವನಕ್ಕೆ ಕೊಟ್ಟಿದ್ದೇನೆ ಅಂತಾರೆ. ಯಾರೇ ಮೆಂಬರ್ ಆದರೂ ಎಂಪಿ ಫಂಡ್ ಬರುತ್ತದೆ.ಸಚಿವರಿಗೆ ಲೆಟರ್ ಕೊಟ್ಟು ಫೇಸ್ ಬುಕ್ ವಾಟ್ಸ್ ಆಫ್‍ನಲ್ಲಿ ಫೋಟೋ ಹಾಕಿಸಿಕೊಳ್ಳುತ್ತಾರೆ. ಅದನ್ನು ಬಿಟ್ಟು ಏನಾದರೂ ಹೊಸ ಯೋಜನೆ ತಂದಿದ್ದೇನೆ ಎನ್ನುವುದನ್ನು ಮಾಧ್ಯಮದ ಮುಂದೆ ಹೇಳಲಿ ಎಂದಿದ್ದಾರೆ.

    ನೀವು ಗೆದ್ದಿದ್ದು ಅಂಬರೀಶ್ ಹೆಂಡತಿ, ಅಂಬರೀಶ್ ಅವರು ಅಕಾಲಿಕವಾಗಿ ಮರಣಹೊಂದಿದರು ಎನ್ನುವ ಗೌರವಾರ್ಥದಲ್ಲಿ ಜನರು ಗೆಲ್ಲಿಸಿದ್ದಾರೆ. ಇದು ಎಲ್ಲಾ ಟೈಂನಲ್ಲಿಯೂ ನಡೆಯುವುದಿಲ್ಲ. ಅಂಬರೀಶ್ ಅವರು 25 ವರ್ಷ ಎಂಪಿಯಾಗಿ ಅನುಭವಿಸಿದ್ದಾರೆ. ಆದರೆ ಮಂಡ್ಯ ಇದ್ದಂತೆಯೇ ಇದೆ. ಆದರೆ ಪಕ್ಕದಲ್ಲಿರುವ ಹಾಸನ ಜಿಲ್ಲೆ ಅಭಿವೃದ್ಧಿಯಾಗಿದೆ. ಈಗಲಾದರೂ ಹೆಚ್ಚೆತ್ತು ಹೋರಾಟ ಮಾಡಿ ವಿಶೇಷ ಅನುದಾನ ತೆಗೆದುಕೊಂಡು ಬನ್ನಿ. ಜನರಿಗೆ ಗೊಂದಲ ಸೃಷ್ಟಿ ಮಾಡಿ. ಮುಗ್ದ ಜನರು ಹೊಡೆದಾಡುವಂತೆ ಮಾಡಬೇಡಿ ಎಂದು ಹರಿಹಾಯ್ದಿದ್ದಾರೆ.

  • ಮೇಕೆದಾಟು ಯೋಜನೆಗೆ 1,000 ಕೋಟಿ ರೂ. ಅನುದಾನ

    ಮೇಕೆದಾಟು ಯೋಜನೆಗೆ 1,000 ಕೋಟಿ ರೂ. ಅನುದಾನ

    ಬೆಂಗಳೂರು: ಕಾಂಗ್ರೆಸ್ ಪ್ರತಿಭಟನೆ ಬೆನ್ನಲ್ಲೇ ಮೇಕೆದಾಟು ಯೋಜನೆಗೆ 1,000 ಕೋಟಿ ರೂ. ಅನುದಾನವನ್ನು ಸಿಎಂ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.

    ರಾಜ್ಯ ಮಹತ್ವಾಕಾಂಕ್ಷಿ ಎತ್ತಿನ ಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಪ್ರಥಮ ಹಂತದ ಕಾಮಗಾರಿಗಳನ್ನು ಪ್ರಸ್ತಕ ಸಾಲಿನಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸುವುದು. ಈ ಯೋಜೆನೆಗೆ 2ನೇ ಹಂತದ 260 ಕಿ.ಮೀ ಉದ್ದ ಗುರತ್ವ ಕಾಲುವೆ ಟಿ.ಜಿ ಹಳ್ಳಿ- ರಾಮನಗರ ಫೀಡರ್, ಮಧುಗಿರಿ ಫೀಡರ್ ಹಾಗೂ ಟಿ.ಜಿ ಗೌರೀಬಿದನೂರು ಫೀಡರ್ ಕಾಲುವೆ ಕಾಮಗಾರಿಗಳನ್ನು ಪ್ರಸ್ತಕ ಸಾಲಿನಲ್ಲಿ ಪೂರ್ಣಗೊಳಿಸಿ, ಮುಂದಿನ ವರ್ಷದ ಮುಂಗಾರು ಹಂಗಾಮಿನಲ್ಲಿ ನೀರು ಪೂರೈಸಲು ಕ್ರಮ ಜರುಗಿಸಲು ಹಾಗೂ ಯೋಜೆನಗೆ ಉಳಿಗೆ ಕಾಮಗಾರಿಗಳನ್ನು ಹಂತ, ಹಂತವಾಗಿ ಕಾರ್ಯಗತಗೊಳಿಸಲು ಕ್ರಮವಹಿಸಲಾಗುವುದು. ಈ ಯೋಜನೆ ಅನುಷ್ಠಾನಕ್ಕೆ 3,000 ಕೋಟಿ ರೂಪಾಯಿ ಅನುದಾನ ಒದಗಿಲಸಾಗುವುದು. ಇದನ್ನೂ ಓದಿ: Karnataka Budget: ಈ ವರ್ಷ ಯಾವುದೇ ತೆರಿಗೆ ಹೆಚ್ಚಳ ಇಲ್ಲ

    ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನಾ ವರದಿಗೆ ಕೇಂದ್ರ ಸರ್ಕಾರದ ಸಮಕ್ಷ ಪ್ರಾಧಿಕಾರಿಗಳ ತೀರುವಳಿಗನ್ನು ಪಡೆದು ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಯ ಅನುಷ್ಠಾನಕ್ಕೆ ಪ್ರಸ್ತಕ ಸಾಲಿನಲ್ಲಿ 1,000 ಕೋಟಿ ರೂಪಾಯಿ ಅನುದಾನವನ್ನು ಒದಗಿಸಲಾಗುವುದು. ಇದನ್ನೂ ಓದಿ: Karnataka Budget: ಈ ವರ್ಷ ಯಾವುದೇ ತೆರಿಗೆ ಹೆಚ್ಚಳ ಇಲ್ಲ

    ನೀರಾವರಿಗೆ ಆದ್ಯತೆ:
    * ಕೃಷ್ಣಾ ಮೇಲ್ದಂಡೆ ಯೋಜೆನೆ ಹಂತ 3ಕ್ಕೆ- 5000 ಕೋಟಿ ರೂ.
    * ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆ- 1000 ಕೋಟಿ ರೂ
    * ಭದ್ರಾ ಮೇಲ್ದಂಡೆ ಯೋಜನೆ- 3000 ಕೋಟಿ ರೂ ಅನುದಾನ
    * ಮೇಕೆದಾಟು ಯೋಜನೆಗೆ 1,000 ಕೋಟಿ ಅನುದಾನ
    * ಎತ್ತನಹೊಳೆ ಯೋಜನೆ- 3,000 ಕೋಟಿ ರೂ ಅನುದಾನ

  • ಮಡಪ್ಪಾಡಿ ಗ್ರಾಮ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ 1.5 ಕೋಟಿ ಅನುದಾನ

    ಮಡಪ್ಪಾಡಿ ಗ್ರಾಮ ಸಂಪರ್ಕಿಸುವ ರಸ್ತೆ ಅಭಿವೃದ್ಧಿಗೆ 1.5 ಕೋಟಿ ಅನುದಾನ

    ಮಂಗಳೂರು: ಸುಳ್ಯದ ಮಡಪ್ಪಾಡಿ ಗ್ರಾಮವನ್ನು ಸಂಪರ್ಕಿಸುವ ಸೇವಾಜೆ- ಮಡಪ್ಪಾಡಿ ರಸ್ತೆ ಅಭಿವೃದ್ಧಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಯತ್ನ ಮತ್ತು ಗ್ರಾಮ ವಾಸ್ತವ್ಯದ ಫಲವಾಗಿ ಸರ್ಕಾರ ಒಂದೂವರೆ ಕೋಟಿ ರೂ ಅನುದಾನ ಬಿಡುಗಡೆಯಾಗಿದೆ.

    ಜನವರಿ11ರಂದು ಶಂಕುಸ್ಥಾಪನೆ ನೆರವೇರಿದ್ದು, ಎರಡು ತಿಂಗಳಲ್ಲಿ ರಸ್ತೆ ಕಾಮಗಾರಿ ಪೂರ್ತಿ ಮಾಡುವ ಭರವಸೆಯನ್ನು ಇಂಜಿನಿಯರ್‌ಗಳು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು 2020 ಜನವರಿ 5 ರಂದು ಮಡಪ್ಪಾಡಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಮಡಪ್ಪಾಡಿ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ಧಿ ಮಾಡಬೇಕು ಎಂಬುದು ಜನರಿಂದ ಕೇಳಿ ಬಂದ ಪ್ರಮುಖ ಬೇಡಿಕೆಯಾಗಿತ್ತು.  ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರಕ್ಕೆ 400 ಕೆಜಿಯ ಬೀಗ ದೇಣಿಗೆ!

    ಬಳಿಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ನೇತೃತ್ವದ ಪತ್ರಕರ್ತರ ನಿಯೋಗ ಪಂಚಾಯತ್‍ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರನ್ನು ಭೇಟಿ ಮಾಡಿ ಮಡಪ್ಪಾಡಿಯ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಬೇಕು ಎಂದು ಮನವಿ ಸಲ್ಲಿಸಲಾಗಿತ್ತು.ಕೂಡಲೇ ಸ್ಪಂದಿಸಿದ ಸಚಿವ ಕೆ.ಎಸ್.ಈಶ್ವರಪ್ಪ ಅವರು 2 ಕೋಟಿ ಅನುದಾನ ಘೋಷಣೆ ಮಾಡಿದ್ದರು. ಅದರಲ್ಲಿ 1.5 ಕೋಟಿ ಅನುದಾನ ಬಿಡುಗಡೆಯಾಗಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಇದನ್ನೂ ಓದಿ:  ಜಿಎಸ್‍ಟಿ ನೋಟಿಸ್‌ನಲ್ಲಿ ಮೊತ್ತ ನೋಡಿ ಶಾಕ್ ಆದ ದಂಪತಿ!

    ಎಲಿಮಲೆಯಿಂದ ಮಡಪ್ಪಾಡಿಗೆ 9 ಕಿ.ಮಿ.ದೂರವಿದೆ. ಎಲೆಮಲೆ- ಅರಂತೋಡು ಲೋಕೋಯೋಗಿ ರಸ್ತೆಯ ಸೇವಾಜೆಯಿಂದ ಮಡಪ್ಪಾಡಿಗೆ 5 ಕಿ.ಮಿ.ದೂರ ಇದೆ. ಇದರಲ್ಲಿ 1.5 ಕಿ.ಮಿ. ರಸ್ತೆ ಅಭಿವೃದ್ಧಿಯಾಗಿದೆ. ಉಳಿದ 3.7 ಕಿ.ಮಿ. ರಸ್ತೆ ಸಂಪೂರ್ಣ ಎಕ್ಕುಟ್ಟಿ ಹೋಗಿದೆ. ಇದೀಗ ಗ್ರಾಮೀಣಾಭಿವೃದ್ಧಿ ಇಲಾಖೆ ನೀಡಿದ ಈ ಅನುದಾನದಲ್ಲಿ ರಸ್ತೆಯ 3.7 ಕಿ.ಮಿ. ಅಭಿವೃದ್ಧಿಯಾಗಲಿದೆ. 3.75 ಮೀಟರ್ ಅಗಲದಲ್ಲಿ ರಸ್ತೆಯ ಅಭಿವೃದ್ಧಿ ಕಾಣಲಿದ್ದು ಇದರಲ್ಲಿ 150 ಮೀಟರ್ ಕಾಂಕ್ರೀಟೀಕರಣ ಮತ್ತು ಉಳಿದ ಭಾಗ ಡಾಮರೀಕರಣ ನಡೆಯಲಿದೆ ಎಂದು ಇಂಜಿನಿರ್‍ಗಳು ತಿಳಿಸಿದ್ದಾರೆ.

  • 11 ಜಿಲ್ಲಾ ಕಚೇರಿಗಳ ಪ್ರಾರಂಭಕ್ಕೆ ತೀರ್ಮಾನ – ವಿಜಯನಗರಕ್ಕೆ 53 ಕೋಟಿ ಮಂಜೂರು

    11 ಜಿಲ್ಲಾ ಕಚೇರಿಗಳ ಪ್ರಾರಂಭಕ್ಕೆ ತೀರ್ಮಾನ – ವಿಜಯನಗರಕ್ಕೆ 53 ಕೋಟಿ ಮಂಜೂರು

    ವಿಜಯನಗರ: ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 11 ಜಿಲ್ಲಾ ಕಚೇರಿಗಳನ್ನು ಸ್ಥಾಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

    ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಗೆ ಮೂಲಸೌಕರ್ಯ ಒದಗಿಸುವ ಬಗ್ಗೆ ಚರ್ಚಿಸಲು ಸಭೆ ನಡೆಸಲಾಯಿತು. ವಿಜಯನಗರ ಜಿಲ್ಲೆಯಲ್ಲಿ ಸರ್ಕಾರಿ ಕಚೇರಿಗಳ ದುರಸ್ತಿ, ನವೀಕರಣ ಮತ್ತು ಕಛೇರಿ ಮೂಲಸೌಕರ್ಯಕ್ಕೆ 53 ಕೋಟಿ ರೂ. ಅನುದಾನ ಒದಗಿಸಲು ಮಂಜೂರಾತಿ ನೀಡಲಾಗಿದೆ.

    ಎರಡು ಹಂತಗಳಲ್ಲಿ ಹುದ್ದೆಗಳ ಸೃಜನೆ ಮಾಡಲಾಗುತ್ತಿದ್ದು, ಮೊದಲ ಹಂತದಲ್ಲಿ ಸಾರ್ವಜನಿಕರು ಹೆಚ್ಚಾಗಿ ಭೇಟಿ ನೀಡುವ ಜಿಲ್ಲಾಧಿಕಾರಿಗಳ ಕಚೇರಿ, ಜಿಲ್ಲಾ ಪಂಚಾಯತ್, ಎಸ್.ಪಿ ಕಚೇರಿ, ಜಿಲ್ಲಾ ಆರೋಗ್ಯಾಧಿಕಾರಿ, ಭೂದಾಖಲೆಗಳ ಉಪನಿರ್ದೇಶಕರ ಕಚೇರಿ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ, ನಗರ ಯೋಜನೆ ಹಾಗೂ ಅರಣ್ಯ ಇಲಾಖೆಗಳ ಕಚೇರಿಗಳನ್ನು ಪ್ರಾರಂಭಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಹಂತ ಹಂತವಾಗಿ ಎಲ್ಲ ಕಚೇರಿಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಇದನ್ನೂ ಓದಿ: ಬೇಡದ ಖಾತೆ ಪಡೆದು ಉತ್ತಮ ಕೆಲಸ ಮಾಡುತ್ತಿದ್ದೇವೆ: ಎಸ್ ಟಿ ಸೋಮಶೇಖರ್

    ಇದರಲ್ಲಿ ಕೆಲವು ಹುದ್ದೆಗಳನ್ನು ಬಳ್ಳಾರಿಯಿಂದ ಸ್ಥಳಾಂತರ ಮಾಡುವ ಮೂಲಕ ಹಾಗೂ ಕೆಲವು ಹುದ್ದೆಗಳ ಸೃಜನೆಯ ಮೂಲಕ ಜಿಲ್ಲಾ ಮಟ್ಟದ ಕಚೇರಿ ಸ್ಥಾಪಿಸಲಾಗುವುದು. ಜಿಲ್ಲಾ ಕಚೇರಿಗಳ ನಿರ್ಮಾಣಕ್ಕೆ ಕರ್ನಾಟಕ ಗೃಹಮಂಡಳಿಯ 83 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಅನುದಾನವನ್ನು ಎರಡು ಹಂತದಲ್ಲಿ ವರ್ಗಾಯಿಸಲಾಗುವುದು. ಅನಗತ್ಯ ಸ್ಥಳ ವ್ಯರ್ಥ ಮಾಡದೆ ಕಾರ್ಯನಿರ್ವಹಣೆಗೆ ಪೂರಕವಾಗಿ ಸುಸಜ್ಜಿತ ಜಿಲ್ಲಾಡಳಿತ ಭವನದ ನಕ್ಷೆ ರೂಪಿಸಲು ಮುಖ್ಯಮಂತ್ರಿಗಳು ಸೂಚಿಸಿದರು. ಇದನ್ನೂ ಓದಿ: ಕೋವಿಡ್ ಇತಿಮಿತಿಯಲ್ಲಿ ನಮ್ಮ ಶ್ರಮಕ್ಕೆ ಸಮಾಧಾನಕರ ಫಲಿತಾಂಶ ಬಂದಿದೆ: ಡಿಕೆಶಿ

    ಬಳ್ಳಾರಿ ಜಿಲ್ಲೆಯ ಜಿಲ್ಲಾ ಖನಿಜ ನಿಧಿಗೆ ಸಂಬಂಧಿಸಿದಂತೆ ಈಗಾಗಲೇ 2023-24ರವರೆಗೆ ಅನುಮೋದನೆಯಾಗಿರುವ ಕ್ರಿಯಾಯೋಜನೆಯನ್ನು ಜಾರಿಗೊಳಿಸಲಾಗುವುದು. ನಂತರ ಜಿಲ್ಲಾ ಖನಿಜ ನಿಧಿಯನ್ನು ಎರಡೂ ಜಿಲ್ಲೆಗಳ ನಡುವೆ ಹಂಚಿಕೆ ಮಾಡುವ ಕುರಿತು ಒಂದು ಸೂತ್ರ ರೂಪಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಇದನ್ನೂ ಓದಿ: ಬೇಡದ ಖಾತೆ ಪಡೆದು ಉತ್ತಮ ಕೆಲಸ ಮಾಡುತ್ತಿದ್ದೇವೆ: ಎಸ್ ಟಿ ಸೋಮಶೇಖರ್

    ವಿಜಯನಗರ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ವಿಫುಲ ಅವಕಾಶವಿದ್ದು, ಹಂಪಿಯಲ್ಲಿ ಹಾಗೂ ಮತ್ತಿತರ ಪಾರಂಪರಿಕ ತಾಣಗಳಲ್ಲಿ ಪ್ರವಾಸಿಗರಿಗೆ ಮೂಲಸೌಕರ್ಯ ಕಲ್ಪಿಸುವ ಕುರಿತು ಆರ್ಕಿಯಲಾಜಿಕಲ್ ಸರ್ವೇ ಆಫ್ ಇಂಡಿಯಾದ ಅಧಿಕಾರಿಗಳೊಂದಿಗೆ ಪ್ರತ್ಯೇಕ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಯಿತು.

     

  • 550 ಕೋಟಿ ಅನುದಾನ ವಿಚಾರದಲ್ಲಿ ಜಿ.ಎಸ್ ಬಸವರಾಜು, ಎಸ್ ಆರ್ ಶ್ರೀನಿವಾಸ್ ನಡುವೆ ಕಿತ್ತಾಟ

    550 ಕೋಟಿ ಅನುದಾನ ವಿಚಾರದಲ್ಲಿ ಜಿ.ಎಸ್ ಬಸವರಾಜು, ಎಸ್ ಆರ್ ಶ್ರೀನಿವಾಸ್ ನಡುವೆ ಕಿತ್ತಾಟ

    ತುಮಕೂರು: ಜಿಲ್ಲೆಗೆ 550 ಕೋಟಿ ಅನುದಾನದ ವಿಚಾರದಲ್ಲಿ ತುಮಕೂರು ಸಂಸದ ಜಿ.ಎಸ್ ಬಸವರಾಜು ಅವರಿಗೆ ಗುಬ್ಬಿ ಶಾಸಕ ಎಸ್ ಆರ್ ಶ್ರೀನಿವಾಸ್ ಅವಾಜ್ ಹಾಕಿರುವ ಪ್ರಸಂಗ ನಡೆದಿದೆ.

    ಗುಬ್ಬಿ ತಾಲೂಕಿನ ಚೇಳೂರು ಸಮೀಪದ ಸಿ. ನಂದಿಹಳ್ಳಿ ಗ್ರಾಮದಲ್ಲಿ ನಡೆದ ಬೆಸ್ಕಾಂ ವಿದ್ಯುತ್ ಎಂಎಸ್‍ಎಸ್ ಸ್ಟೇಷನ್ ಉದ್ಘಾಟನೆಯ ವೇಳೆ ಇಬ್ಬರು ನಾಯಕರು ಕೈಕೈ ಮಿಲಾಯಿಸಿಕೊಂಡು ಜಗಳಕ್ಕಿಳಿದ್ದಾರೆ. ಇದನ್ನೂ ಓದಿ: ವಾಜಪೇಯಿ ಹೆವೀ ಡ್ರಿಂಕರ್ – ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ

    ಚೇಳೂರು ಹೋಬಳಿಯಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಕೇಂದ್ರ ಸರ್ಕಾರ 500 ಕೋಟಿ ಮೀಸಲಿಟ್ಟಿದೆ ಎಂದು ಸಭೆಯಲ್ಲಿ ಜಿಎಸ್ ಬಸವರಾಜು ಹೇಳಿದರು. ಈ ವೇಳೆ ರೊಚ್ಚಿಗೆದ್ದ ಗುಬ್ಬಿ ಶ್ರೀನಿವಾಸ್, ರೈತರಿಗೆ ಸುಳ್ಳು ಹೇಳ್ತಿಯಾ, ನಿಮ್ ಯೋಗ್ಯತೆಗೆ ಇಷ್ಟು ಬೆಂಕಿ ಹಾಕ.. ಸುಳ್ಳು ಯಾಕೆ ಬೊಗಳುತ್ತೀಯಾ..? ವಯಸ್ಸಾಗಿದೆ ಈಗಲಾದ್ರೂ ಸುಳ್ಳು ಹೇಳೋದನ್ನ ನಿಲ್ಲಿಸು ಎಂದು ಏಕವಚನದಲ್ಲಿಯೇ ಮಾತಿಗಿಳಿದರು.

    ಇಲ್ಲದ ವಿಚಾರವನ್ನು ಮಾತಾಡಬೇಡ ನೀನು. ನೀನು ಅಯೋಗ್ಯ ನನ್ಮಗ ಎಂದು ಇಬ್ಬರೂ ನಾಯಕರು ಪರಸ್ಪರ ಬೈದಾಡಿಕೊಂಡರು. 550 ಕೋಟಿ ತಂದಿದ್ದೀವಿ ಎಂದ ಬಸವರಾಜುಗೆ 550 ಕೋಟಿ ನಿಮ್ ತಾತ ತಂದಿದ್ನಾ..? 550 ಕೋಟಿ ಎಲ್ ತಂದಿದ್ದೀರಿ ತೋರಿಸ್ರಿ ಎಂದು ಎಸ್ ಆರ್ ಶ್ರೀನಿವಾಸ್ ವಾಗ್ದಾಳಿ ನಡೆಸಿದ್ದಾರೆ.

  • ಅತಿ ಹೆಚ್ಚು, ಅತಿ ಕಡಿಮೆ ಅನುದಾನ ಯಾರಿಗೆ ಸಿಕ್ಕಿದೆ? – ರಹಸ್ಯ ರಿಪೋರ್ಟ್ ಔಟ್

    ಅತಿ ಹೆಚ್ಚು, ಅತಿ ಕಡಿಮೆ ಅನುದಾನ ಯಾರಿಗೆ ಸಿಕ್ಕಿದೆ? – ರಹಸ್ಯ ರಿಪೋರ್ಟ್ ಔಟ್

    ಬೆಂಗಳೂರು: ಸಿಎಂ ಯಡಿಯೂರಪ್ಪ ನಮ್ಮ ಕ್ಷೇತ್ರಗಳಿಗೆ ಅನುದಾನ ನೀಡುತ್ತಿಲ್ಲ ಎನ್ನುವುದು ಕೆಲ ಬಿಜೆಪಿ ಶಾಸಕರ ಆರೋಪ. ಆದರೆ ಈಗ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರಿಗೆ ಸಿಎಂ ಯಡಿಯೂರಪ್ಪ ಅವರು ಯಾವ ಶಾಸಕರಿಗೆ ಎಷ್ಟು ಅನುದಾನ ನೀಡಿದ್ದೇನೆ ಎಂಬ ಮಾಹಿತಿ ಇರುವ ರಹಸ್ಯ ವರದಿ ನೀಡಿದ್ದಾರೆ.

    ವಿರೋಧಿ ಬಣದ ಶಾಸಕರು ತುಟಿಕ್ ಪಿಟಿಕ್ ಅನ್ನದಿರಲು ಸಿಎಂ ಮೆಗಾ ಪ್ಲ್ಯಾನ್ ಮಾಡಿದ್ದು, ಅರುಣ್ ಸಿಂಗ್‍ಗೆ ಸಾಕ್ಷಿ ಸಮೇತ ರಹಸ್ಯ ವರದಿ ಸಲ್ಲಿಕೆ ಮಾಡಿದ್ದಾರೆ. ಈ ಮೂಲಕ ನಾನು ಯಾರಿಗೂ ಮೋಸ ಮಾಡಿಲ್ಲ, ಎಲ್ಲರಿಗೂ ಅನುದಾನ ಕೊಟ್ಟಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  18 ವರ್ಷಗಳಿಂದ ಐಸಿಸಿ ಟೂರ್ನಿಯಲ್ಲಿ ಕೀವಿಸ್ ವಿರುದ್ಧ ಭಾರತ ಗೆದ್ದಿಲ್ಲ – ಈ ಬಾರಿ ಗೆಲುವು ಯಾರಿಗೆ?

    ಯಾರಿಗೆ ಎಷ್ಟು ಅನುದಾನ?
    1,000 ಕೋಟಿ ರೂ.ಗಿಂತ ಹೆಚ್ಚು ಅನುದಾನವನ್ನು 3 ಶಾಸಕರಿಗೆ ಮಂಜೂರು ಮಾಡಿದ್ದರೆ, 500 ಕೋಟಿ ರೂ.ಗಿಂತ ಹೆಚ್ಚಿನ ಅನುದಾನವನ್ನು 21 ಶಾಸಕರಿಗೆ ನೀಡಲಾಗಿದೆ. 19 ಶಾಸಕರಿಗೆ 300 ಕೋಟಿಗೂ ಹೆಚ್ಚು, 71 ಶಾಸಕರಿಗೆ 100 ಕೋಟಿಗೂ ಹೆಚ್ಚು, 7 ಶಾಸಕರಿಗೆ 100 ಕೋಟಿಗಿಂತಲೂ ಕಡಿಮೆ ಅನುದಾನ ನೀಡಲಾಗಿದೆ.

    ಹೆಚ್ಚು ಅನುದಾನ ಪಡೆದ ಟಾಪ್ 5 ಶಾಸಕರು
    1. ಬಿ.ಎಸ್. ಯಡಿಯೂರಪ್ಪ(ಶಿಕಾರಿಪುರ) – 1,299 ಕೋಟಿ ರೂ.
    2. ರಮೇಶ್ ಜಾರಕಿಹೊಳಿ(ಗೋಕಾಕ್) – 1,178 ಕೋಟಿ ರೂ.
    3. ರಾಜೇಶ್ ಗೌಡ(ಶಿರಾ) – 1,151 ಕೋಟಿ ರೂ.
    4: ಶಿವನಗೌಡ ನಾಯಕ್(ದೇವದುರ್ಗ) – 990 ಕೋಟಿ ರೂ.
    5. ಮಸಾಲೆ ಜಯರಾಂ(ತುರುವೇಕೆರೆ) – 922 ಕೋಟಿ ರೂ.

    ಕಡಿಮೆ ಅನುದಾನ ಪಡೆದವರು
    1. ಎಲ್.ನಾಗೇಂದ್ರ(ಚಾಮರಾಜ) – 82 ಕೋಟಿ ರೂ.
    2. ಶಶಿಕಲಾ ಜೊಲ್ಲೆ(ನಿಪ್ಪಾಣಿ) – 89 ಕೋಟಿ ರೂ.
    3. ಶರಣು ಸಲಗಾರ್(ಬಸವಕಲ್ಯಾಣ) – 91 ಕೋಟಿ ರೂ.
    4. ಶ್ರೀಮಂತ ಪಾಟೀಲ್(ಕಾಗವಾಡ) – 93 ಕೋಟಿ ರೂ.
    5. ರೇಣುಕಾಚಾರ್ಯ(ಹೊನ್ನಾಳಿ) – 96 ಕೋಟಿ ರೂ.

    ಧ್ವನಿ ಎತ್ತಿದ ಶಾಸಕರಿಗೆ ಎಷ್ಟು ಅನುದಾನ?
    1. ಅರವಿಂದ್ ಬೆಲ್ಲದ್(ಧಾರವಾಡ ಪಶ್ಚಿಮ) 137 ಕೋಟಿ ರೂ.
    2. ಬಸನಗೌಡ ಪಾಟೀಲ್ ಯತ್ನಾಳ್(ವಿಜಯಪುರ ನಗರ) 232 ಕೋಟಿ ರೂ.
    3. ಸುನೀಲ್ ಕುಮಾರ್(ಕಾರ್ಕಳ) 329 ಕೋಟಿ ರೂ.