Tag: ಅನಿಷ್ಠ ಪದ್ಧತಿ

  • ಕೂಡ್ಲಿಗಿಯಲ್ಲಿ ಜೀವಂತವಾಗಿದೆ ಅನಿಷ್ಠ ಪದ್ಧತಿ- ವಿಡಿಯೋ ಮಾಡಿದ್ದಕ್ಕೆ ಯುವಕನಿಗೆ ಥಳಿತ!

    ಕೂಡ್ಲಿಗಿಯಲ್ಲಿ ಜೀವಂತವಾಗಿದೆ ಅನಿಷ್ಠ ಪದ್ಧತಿ- ವಿಡಿಯೋ ಮಾಡಿದ್ದಕ್ಕೆ ಯುವಕನಿಗೆ ಥಳಿತ!

    ಬಳ್ಳಾರಿ: 21ನೇ ಶತಮಾನಕ್ಕೆ ಕಾಲಿಟ್ಟರೂ ಇಂದಿಗೂ ಅನಿಷ್ಠ ಪದ್ಧತಿಗಳು ನಿಂತಿಲ್ಲ. ಇದಕ್ಕೆ ಬಳ್ಳಾರಿ ಜಿಲ್ಲೆಯಲ್ಲಿ ನಡೆಯುವ ಜಾತ್ರೆಯ ಆಚರಣೆಯೇ ಸಾಕ್ಷಿಯಾಗಿದೆ. ಈ ವಿಶಿಷ್ಟ ಆಚರಣೆಯನ್ನು ಯುವಕನೊಬ್ಬ ತನ್ನ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಕ್ಕೆ ಆತನಿಗೆ ಚೆನ್ನಾಗಿ ಥಳಿಸಿದ್ದಾರೆ.

    ಕೂಡ್ಲಿಗಿ ತಾಲೂಕಿನ ಓಬಳೇಶ ಶೆಟ್ಟಿಹಳ್ಳಿ ಗ್ರಾಮದಲ್ಲಿ ದೇವಿಯ ಜಾತ್ರೆಯಲ್ಲಿ ಜನರು ಜೀವಂತ ಮೇಕೆಯ ರಕ್ತಹೀರುವ ಪದ್ಧತಿ. ಈ ಆಚರಣೆ ಈಗಲೂ ಅಲ್ಲಿ ಕಂಡುಬರುತ್ತಿದೆ. ಗಾವು ಜಿಗಿಯುವ ಮೂಢಪದ್ಧತಿ ಇನ್ನೂ ಜೀವಂತವಾಗಿರುವುದಕ್ಕೆ ಇದೇ ಸಾಕ್ಷಿಯಾಗಿದೆ.

    ಊರು ಮಾರಮ್ಮ ಜಾತ್ರೆಯಲ್ಲಿ ಈ ರೀತಿಯಾಗಿ ಜೀವಂತ ಮೇಕೆಯ ರಕ್ತ ಹೀರುವ ನರಮಾನವರ ಅನಿಷ್ಠ ಪದ್ಧತಿ ಬಗ್ಗೆ ಗ್ರಾಮದ ಯುವಕ ವಿಡಿಯೋ ತಗೆದಿದ್ದಕ್ಕೆ ಗ್ರಾಮಸ್ಥರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಡ್ಡರ ಹನುಮಂತಪ್ಪ ಎನ್ನುವ ಯುವಕ ಅನಿಷ್ಠ ಪದ್ಧತಿ ಬಗ್ಗೆ ವಿಡಿಯೋ ಚಿತ್ರೀಕರಿಸಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿದ ಪರಿಣಾಮ ಯುವಕ ತ್ರೀವವಾಗಿ ಅಸ್ವಸ್ಥಗೊಂಡಿದ್ದಾನೆ.

    ಸದ್ಯ ಗಾಯಾಳು ಯುವಕನನ್ನು ಕೂಡ್ಲಿಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಖಾನಾ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv