Tag: ಅನಿಲ ಸೋರಿಕೆ

  • ಗ್ಯಾಸ್ ಟ್ಯಾಂಕರ್ ನಿಂದ ಅನಿಲ ಸೋರಿಕೆ- ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ

    ಗ್ಯಾಸ್ ಟ್ಯಾಂಕರ್ ನಿಂದ ಅನಿಲ ಸೋರಿಕೆ- ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತ

    ಮಂಗಳೂರು: ಚಲಿಸುತ್ತಿದ್ದ ಗ್ಯಾಸ್ ಟ್ಯಾಂಕರ್ ನಿಂದ ಭಾರೀ ಪ್ರಮಾಣ ಅನಿಲ ಸೋರಿಕೆಯಾಗಿದೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಅನಿಲ ಸೋರಿಕೆಯಾಗಿದೆ.

    ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಕರವೇಲು ಬಳಿ ಗ್ಯಾಸ್ ಸಿಲಿಂಡರ್ ನ ಕ್ಯಾಪ್ ಏಕಾಏಕಿ ಓಪನ್ ಆಗಿದ್ದರಿಂದ ಅನಿಲ ಸೋರಿಕೆಯಾಗಿದ್ದು, ಮುನ್ನೆಚ್ಚರಿಕ ಕ್ರಮವಾಗಿ ಅಧಿಕಾರಿಗಳು ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿದ್ದಾರೆ.

    ಸ್ಥಳಕ್ಕೆ ಎಂಆರ್‌ಪಿಎಲ್ (Mangalore Refinery and Petrochemicals Limited) ತಜ್ಞರು ಆಗಮಿಸಿ ಅನಿಲ ಸೋರಿಕೆ ತಡೆದಿದ್ದಾರೆ. ಗ್ಯಾಸ್ ಟ್ಯಾಂಕರ ಮಂಗಳೂರಿನಿಂದ ಬೆಂಗಳೂರಿಗೆ ಹೋಗುತ್ತಿತ್ತು. ಅನಿಲ ಹೇಗೆ ಸೋರಿಕೆ ಆಗಿದೆ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಚಾಲಕನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

  • ಎಸಿ ಆನ್ ಮಾಡಿ ಮಲಗಿದ್ದ 8ರ ಮಗ ಸೇರಿ ದಂಪತಿ ದುರ್ಮರಣ

    ಎಸಿ ಆನ್ ಮಾಡಿ ಮಲಗಿದ್ದ 8ರ ಮಗ ಸೇರಿ ದಂಪತಿ ದುರ್ಮರಣ

    ಚೆನ್ನೈ: ಎಸಿಯಿಂದ ಅನಿಲ ಸೋರಿಕೆಯಾಗಿ 8 ವರ್ಷದ ಮಗ ಸೇರಿದಂತೆ ಕುಟುಂಬದ ಮೂವರು ಉಸಿರುಗಟ್ಟಿ ಮೃತಪಟ್ಟ ದುರ್ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ.

    ಚೆನ್ನೈ ಕೊಯಂಬಿಡುನ ತಿರುವಲ್ಲೂವರ್ ನಗರದಲ್ಲಿ ಸೋಮವಾರ ರಾತ್ರಿ ಈ ಘಟನೆ ನಡೆದಿದೆ. 35 ವರ್ಷದ ವ್ಯಕ್ತಿ, ಅವರ ಪತ್ನಿ ಹಾಗೂ 8 ವರ್ಷದ ಮಗು ಮೃತಪಟ್ಟಿದೆ.

    ಆಗಿದ್ದು ಏನು?
    ದಂಪತಿ ಸೋಮವಾರ ರಾತ್ರಿ ಎಸಿ ಹಚ್ಚಿಕೊಂಡು ಮಲಗಿದ್ದಾರೆ. ಈ ವೇಳೆ ಅನಿಲ ಸೋರಿಕೆಯಾಗಿದ್ದು, ಉಸಿರಾಟ ಸಮಸ್ಯೆಯಿಂದಾಗಿ ಮನೆಯಲ್ಲಿಯೇ ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ ಮನೆಯ ಬಾಗಿಲನ್ನು ತೆರೆದಿರಲಿಲ್ಲ. ಹೀಗಾಗಿ ನೆರೆಹೊರೆಯವರು ಶಂಕೆ ವ್ಯಕ್ತಪಡಿಸಿದ್ದಾರೆ. ಬಳಿಕ ಬಾಗಿಲು ಮುರಿದು ನೋಡಿದಾಗ ಮಗು ಹಾಗೂ ದಂಪತಿಯ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

    ವಿದ್ಯುತ್ ಕಡಿತವಾಗಿದ್ದರಿಂದ ಮಧ್ಯರಾತ್ರಿ ಇನ್ವರ್ಟರ್ ಮುಖಾಂತರ ಎಸಿ ಆನ್ ಆಗಿದೆ. ಹೀಗಾಗಿ ಎಸಿ ಸಮರ್ಪಕವಾಗಿ ಕಾರ್ಯನಿರ್ವಹಿಸದ ಪರಿಣಾಮ ಅನಿಲ ಸೋರಿಕೆಯಾಗಿದೆ. ಇದರಿಂದಾಗಿ ದಂಪತಿ ಹಾಗೂ ಮಗು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪಂಪ್‍ಹೌಸ್‍ನಲ್ಲಿ ಕ್ಲೋರಿನ್ ಅನಿಲ ಸೋರಿಕೆ- 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ

    ಪಂಪ್‍ಹೌಸ್‍ನಲ್ಲಿ ಕ್ಲೋರಿನ್ ಅನಿಲ ಸೋರಿಕೆ- 10ಕ್ಕೂ ಹೆಚ್ಚು ಮಂದಿ ಅಸ್ವಸ್ಥ

    ಹಾಸನ: ಕುಡಿಯುವ ನೀರಿನ ಪಂಪ್ ಹೌಸ್‍ನಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾಗಿ 10ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾದ ಘಟನೆ ಹಾಸನದಲ್ಲಿ ನಡೆದಿದೆ.

    ಬೇಲೂರು ಹೊರವಲಯದ ಗೆಂಡೆಹಳ್ಳಿ ಬಳಿ ಇರುವ ಪಂಪ್‍ಹೌಸ್‍ನಲ್ಲಿ ಈ ಘಟನೆ ನಡೆದಿದ್ದು, ಸೋರಿಕೆಯಾದ ಅನಿಲದ ವಾಸನೆ ಅರ್ಧ ಕಿಲೋಮೀಟರ್ ವ್ಯಾಪಿಸಿತ್ತು. ತಡ ರಾತ್ರಿಯೇ ಕಾರ್ಯಾಚರಣೆ ನಡೆಸಿದ ಪುರಸಭೆ ಅಧಿಕಾರಿಗಳು ಮತ್ತು ಅಗ್ನಿಶಾಮಕ ಸಿಬ್ಬಂದಿ ಅನಿಲ ಸೋರಿಕೆ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

    ಅಸ್ವಸ್ಥರಾಗಿದ್ದವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಎಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ.