Tag: ಅನಿಲ್ ಮೆಣಸಿನಕಾಯಿ

  • ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ತಾರಾ ಮೆರುಗು

    ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ತಾರಾ ಮೆರುಗು

    ಗದಗ: ಬಿಜೆಪಿ (BJP) ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರ ಚುನಾವಣಾ (Election) ಪ್ರಚಾರಕ್ಕೆ ತಾರಾ ಮೆರುಗು ಸಿಕ್ಕಿದೆ.

    ಸ್ಯಾಂಡಲ್‍ವುಡ್‍ನ ಖ್ಯಾತ ನಟ ಭುವನ್ ಹಾಗೂ ಬಹುಭಾಷಾ ನಟಿ ಹರ್ಷಿಕಾ ಪೂಣಚ್ಚಾ (Harshika Poonacha) ಗದಗ (Gadag) ಹಾಗೂ ಬೆಟಗೇರಿ ಅವಳಿ ನಗರದ ಅನೇಕ ವಾರ್ಡ್‍ಗಳಲ್ಲಿ ಭಾನುವಾರ ಸಂಚರಿಸಿ ಅನಿಲ್ ಪರ ಪ್ರಚಾರ ಮಾಡಿದ್ದಾರೆ. ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಬಿಸಿಲಿನ ಬೇಗೆಯನ್ನು ಲೆಕ್ಕಿಸದೆ ನಟ ನಟಿಯರಿಬ್ಬರೂ ಮತದಾರರ ಮನೆ ಮನೆಗೆ ತೆರಳಿ ಬಿರುಸಿನ ಪ್ರಚಾರ ನಡೆಸಿದ್ದಾರೆ. ಇದನ್ನೂ ಓದಿ: ಆಸ್ಪತ್ರೆಯಲ್ಲೇ ಕುಳಿತು ಪ್ರಚಾರದ ರೂಟ್ ಮ್ಯಾಪ್ ಸಿದ್ಧಪಡಿಸಿದ ಹೆಚ್‌ಡಿಕೆ

    ಈ ವೇಳೆ ಹರ್ಷಿಕಾ ಪೂಣಚ್ಚಾ ಮಾತನಾಡಿ, ನನಗೆ ಮತ್ತು ಅನಿಲ್ ಮೆಣಸಿನಕಾಯಿ ಅವರಿಗೆ ಬಹಳ ವರ್ಷಗಳಿಂದ ಪರಿಚಯವಿದೆ. ಅವರು ಉತ್ತಮ ಅಭ್ಯರ್ಥಿಯಾಗಿದ್ದು, ಸ್ವ-ಇಚ್ಛೆಯಿಂದ ಅವರ ಪರ ಪ್ರಚಾರಕ್ಕೆ ಬಂದಿದ್ದೇನೆ. ಅವರಿಗೆ ಗದಗದ ಅಭಿವೃದ್ಧಿಯ ಬಗ್ಗೆ ದೂರದೃಷ್ಟಿ ಇದೆ. ಆದರೆ ದುರದೃಷ್ಟವಶಾತ್ ಕಳೆದ ಬಾರಿ ಕಡಿಮೆ ಅಂತರದಿಂದ ಸೋತಿದ್ದರು. ಈಗಿನ ಕಾಂಗ್ರೆಸ್ ಶಾಸಕರು ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ವಸತಿ ರಹಿತರಿಗೆ ಮನೆ ಹಂಚಿಕೆ ಮಾಡಿಲ್ಲ. ಸರಿಯಾಗಿ ಕುಡಿಯುವ ನೀರು ಸಿಗುತ್ತಿಲ್ಲ. ಚರಂಡಿ ವ್ಯವಸ್ಥೆ ಸರಿ ಇಲ್ಲ. ಅಲ್ಲದೆ ಗದಗ ಹಾಗೂ ಬೆಟಗೇರಿಯಲ್ಲಿ ಸಾಕಷ್ಟು ಸಮಸ್ಯೆಗಳಿದ್ದು, ಇವು ದೂರವಾಗಬೇಕಾದರೆ ಈ ಬಾರಿ ಅನಿಲ್ ಅವರನ್ನು ಗೆಲ್ಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದ್ದಾರೆ.

    ಯುವಕರಿಗೆ ಉದ್ಯೋಗ, ಬಡ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಬೇಕು ಎಂಬ ಹಂಬಲವಿದ್ದರೆ ಈ ಬಾರಿ ಗದಗದಲ್ಲಿ ಅನಿಲ ಮೆಣಸಿನಕಾಯಿ ಅವರನ್ನು ಗೆಲ್ಲಿಸಲೇಬೇಕೆಂದು ಮನವಿ ಮಾಡಿಕೊಂಡರು. ಈ ವೇಳೆ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಹಾಜರಿದ್ದರು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ನಾಮಪತ್ರ ಸಲ್ಲಿಕೆ ದಿನ ನಟ ಕಿಚ್ಚ ಸುದೀಪ್ (Sudeep), ಸಿಎಂ ಜೊತೆ ರೋಡ್ ಶೋನಲ್ಲಿ ಭಾಗಿಯಾಗಿದ್ದರು. ಶಿಗ್ಗಾಂವಿ ಕ್ಷೇತ್ರದ ಜನರ ಸಹಕಾರದೊಂದಿಗೆ ಬೊಮ್ಮಾಯಿಯವರನ್ನು ಗೆಲ್ಲಿಸುತ್ತೇನೆ ಎಂದಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ ಮೇಲಿನ ಆರೋಪ ಇಡೀ ಕುರುಬ ಸಮಾಜಕ್ಕೆ ಮಾಡ್ತಿರೋ ಅವಮಾನವಲ್ಲವೇ – ಕಾಂಗ್ರೆಸ್‌ ಪ್ರಶ್ನೆ

  • 55 ವರ್ಷ ಆಡಳಿತ ಮಾಡಿದ್ರೂ ನೀರಿನ ದಾಹ ತೀರಿಸಲಾಗಿಲ್ಲ – ಕಾಂಗ್ರೆಸ್ ವಿರುದ್ಧ ಅನಿಲ್ ಮೆಣಸಿನಕಾಯಿ ಕಿಡಿ

    55 ವರ್ಷ ಆಡಳಿತ ಮಾಡಿದ್ರೂ ನೀರಿನ ದಾಹ ತೀರಿಸಲಾಗಿಲ್ಲ – ಕಾಂಗ್ರೆಸ್ ವಿರುದ್ಧ ಅನಿಲ್ ಮೆಣಸಿನಕಾಯಿ ಕಿಡಿ

    ಗದಗ: ಕಾಂಗ್ರೆಸ್ (Congress) 55 ವರ್ಷ ಆಡಳಿತ ಮಾಡಿದ್ರೂ ಗದಗ (Gadag) ಜನರ ನೀರಿನ ದಾಹ ತೀರಿಸಲಾಗಲಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷವಾದರೂ ಗದಗದಲ್ಲಿ ನೀರಿಗಾಗಿ ಪರದಾಡುತ್ತಿದ್ದೇವೆ. ಕ್ಷೇತ್ರದಲ್ಲಿ ಮೂಲಭೂತ ಸೌಕರ್ಯಗಳು ಮರಿಚೀಕೆಯಾಗಿವೆ ಎಂದು ಗದಗ ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿ ಅನಿಲ್ ಮೆಣಸಿನಕಾಯಿ (Anil Menasinakai) ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ್ದಾರೆ.

    ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನವರಿಗೆ ಅಧಿಕಾರಕ್ಕೆ ಬರುವ ಯಾವುದೇ ನೈತಿಕತೆಯಿಲ್ಲ. ವಂಶ ಪಾರಂಪರಿಕ ಕುಟುಂಬ ರಾಜಕಾರಣಕ್ಕೆ (Politics) ಜನ ಬೇಸತ್ತಿದ್ದಾರೆ. ಶಾಸಕ ಹೆಚ್.ಕೆ ಪಾಟೀಲ್ (H.K.Patil) ಕೇವಲ ಹುಲಕೋಟಿಗೆ (Hulakoti) ಮಾತ್ರ ಸೀಮಿತವಾಗಿದ್ದಾರೆ. ಮೂಲಭೂತ ಸೌಲಭ್ಯಗಳು ಕೇವಲ ಹುಲಕೋಟಿಗೆ ಮಾತ್ರ ಸೀಮಿತವಾಗಿವೆ. ಗದಗ ಮತಕ್ಷೇತ್ರ ಮರೆತ ನಾಯಕರಿಗೆ ಈ ಬಾರಿ ಜನ ಪಾಠ ಕಲಿಸುತ್ತಾರೆ. ರಿಪಬ್ಲಿಕ್ ಆಫ್ ಹುಲಕೋಟಿ ಈ ಬಾರಿ ಬಂದ್ ಮಾಡುತ್ತೇವೆ ಎಂದು ಹರಿಹಾಯ್ದರು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಬಂಡಾಯದ ಸಿಡಿಲು – ಕೈ ಕಟ್ಟಾಳು ಕಾಗೋಡು ಪುತ್ರಿ ಬಿಜೆಪಿಗೆ ಸೇರ್ಪಡೆ 

    ಬಿಜೆಪಿ ಕಾರ್ಯಕರ್ತರು ಹಾಗೂ ಹಿರಿಯ ಮುಖಂಡರ ಆಶಿರ್ವಾದದಿಂದ ಟಿಕೆಟ್ ದೊರೆತಿದೆ. ಮತ್ತೊಮ್ಮೆ ಸ್ಪರ್ಧೆ ಮಾಡಲು ಪಕ್ಷ ನನಗೆ ಅವಕಾಶ ಕಲ್ಪಿಸಿದೆ. ಬಿಜೆಪಿ ಅಲೆ ಗದಗ ಮತಕ್ಷೇತ್ರದಲ್ಲಿದೆ. ಗೆಲುವಿನ ವಾತಾರವರಣವಿದೆ. ಅಲ್ಲದೇ ಇದು ಸಂಭ್ರಮದ ಆಚರಣೆಯಾಗಿ ಪರಿವರ್ತನೆ ಆಗಿದೆ. 2018ರಲ್ಲಿ ಕೇವಲ 1,800 ಮತಗಳಿಂದ ಪರಾಭವಗೊಂಡಿದ್ದೆ. ಈ ಬಾರಿ 30 ಸಾವಿರಕ್ಕೂ ಅಧಿಕ ಮತಗಳಿಂದ ಗೆಲ್ಲುವ ವಾತಾವರಣವಿದೆ. ಗದಗ ಕ್ಷೇತ್ರದ ಬಿಜೆಪಿ ಆಕಾಂಕ್ಷಿಗಳಲ್ಲಿ ಭಿನ್ನಮತವಿಲ್ಲ. 4 ಜನ ಆಕಾಂಕ್ಷಿಗಳಲ್ಲಿ ಯಾರಿಗೇ ಟಿಕೆಟ್ ಕೊಟ್ಟರೂ ಒಟ್ಟಾಗಿ ಕಾಂಗ್ರೆಸ್ ಹತ್ತಿಕ್ಕುವ ಉದ್ದೇಶ ನಮ್ಮದಾಗಿದೆ. ಆಕಾಂಕ್ಷಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಎಲ್ಲರೂ ಅಭ್ಯರ್ಥಿಗಳಾಗಿ ಕೆಲಸ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಪೈಕಿ 8 ಕ್ಷೇತ್ರಗಳಲ್ಲಿ ಬಂಡಾಯ..! 

    ಟಿಕೆಟ್ ಸಿಗದೇ ಇದ್ದವರಿಗೆ ಎಲ್ಲೋ ಒಂದು ಕಡೆ ನೋವಾಗುತ್ತದೆ. ಹೈಕಮಾಂಡ್ (High Command) ತೀರ್ಮಾನಕ್ಕೆ ಬದ್ಧ ಎಂದು ಪಕ್ಷದ ಕಚೇರಿಯಲ್ಲಿ ತೀರ್ಮಾನ ಮಾಡಿದ್ದೆವೆ. ನಮ್ಮಲ್ಲಿ ಅಸಮಾಧಾನ ಇಲ್ಲ, ನಾಳೆಯಿಂದ ಎಲ್ಲರೂ ಒಟ್ಟಾಗಿ ಪ್ರಚಾರ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ಆರ್. ಶಂಕರ್

  • ಬಿಜೆಪಿ ಮುಖಂಡನ ಜೊತೆಗೆ ರೂಂ ಬುಕ್ ಮಾಡಿದ್ದ ನಟಿ ಪೂಜಾ ಗಾಂಧಿ!

    ಬಿಜೆಪಿ ಮುಖಂಡನ ಜೊತೆಗೆ ರೂಂ ಬುಕ್ ಮಾಡಿದ್ದ ನಟಿ ಪೂಜಾ ಗಾಂಧಿ!

    ಬೆಂಗಳೂರು: ಸ್ಯಾಂಡಲ್‍ವುಡ್ ಮಳೆ ಹುಡುಗಿ ಪೂಜಾ ಗಾಂಧಿ ವಿರುದ್ಧ ದೂರು ದಾಖಲಾದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಪೂಜಾಗಾಂಧಿಯವರು ಬಿಜೆಪಿ ಮುಖಂಡನ ಜೊತೆಗೆ ರೂಂ ಬುಕ್ ಮಾಡಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.

    ಹೌದು. ಬೆಂಗಳೂರಿನ ದಿ ಲಲಿತ್ ಅಶೋಕ್ ಹೋಟೆಲ್‍ನಲ್ಲಿ ನಟಿ ಪೂಜಾ ಗಾಂಧಿ ಹಾಗೂ ಗದಗ ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ 1 ವರ್ಷ ರೂಂ ಬುಕ್ ಮಾಡಿದ್ದರು. ಕಳೆದ 2016ರ ಏಪ್ರಿಲ್‍ನಿಂದ ಮಾರ್ಚ್ 2017ರವರೆಗೆ ಬರೋಬ್ಬರಿ 1 ವರ್ಷ ರೂಂ ಬುಕ್ ಮಾಡಿದ್ದರು.

    ಬಿಜೆಪಿ ಮುಖಂಡನ ಜೊತೆ ರೂಂ ಬುಕ್ ಮಾಡಿ ಆತಿಥ್ಯ ಸ್ವೀಕರಿಸಿದ್ದ ನಟಿ, 26 ಲಕ್ಷ ರೂಪಾಯಿ ಬಿಲ್ ಕಟ್ಟದೆ ಹೋಟೆಲಿಗೆ ಸತಾಯಿಸುತ್ತಿದ್ದರು. ಅಲ್ಲದೆ ಇದರಲ್ಲಿ 22 ಲಕ್ಷ ರೂಪಾಯಿ ಪಾವತಿಸಿ 3.53 ಲಕ್ಷ ರೂ. ಬಾಕಿ ಉಳಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಹೋಟೆಲ್ ಆಡಳಿತ ಮಂಡಳಿ ಬೆಂಗಳೂರಿನ ಹೈ ಗ್ರೌಂಡ್ ಪೊಲೀಸರಿಗೆ ದೂರು ನೀಡಿದ್ದಾರೆ.

    ದೂರು ಹಿನ್ನೆಲೆಯಲ್ಲಿ ಪೊಲೀಸರು ನಟಿ ವಿರುದ್ಧ ಎನ್‍ಸಿಆರ್(ಗಂಭೀರ ಸ್ವರೂಪವಲ್ಲದ ಪ್ರಕರಣ) ದಾಖಲು ಮಾಡಿಕೊಂಡಿದ್ದಾರೆ. ಅಲ್ಲದೆ ದೂರು ದಾಖಲಾದ ಕೂಡಲೇ ಪೊಲೀಸರು ನಟಿಯನ್ನು ಠಾಣೆಗೆ ಕರೆಸಿದ್ದಾರೆ. ಬಳಿಕ ಪೊಲೀಸರ ಸಮ್ಮುಖದಲ್ಲಿಯೇ ನಟಿ ಎರಡು ಲಕ್ಷ ರೂ. ನೀಡಿದ್ದಾರೆ. ಉಳಿದ ಹಣ ಕೊಡಲು ಕಾಲಾವಕಾಶ ಕೇಳಿದ್ದಾರೆ. ಒಟ್ಟಿನಲ್ಲಿ ಓರ್ವ ಸ್ಟಾರ್ ನಟಿಯ ಬಳಿ ಬಿಲ್ ಕಟ್ಟಲೂ ಹಣ ಇರಲಿಲ್ಲವೇ? ನಾಲ್ಕೂವರೆ ಲಕ್ಷ ಹಣ ಕೊಡದೇ ಎಸ್ಕೇಪ್ ಆಗಿದ್ದು ಯಾಕೆ ಎಂಬ ಪ್ರಶ್ನೆ ಜನಸಾಮಾನ್ಯರನ್ನು ಕಾಡುತ್ತಿದೆ.

  • ಅನ್ಯ ಪಕ್ಷಗಳ ಶಾಸಕರು ಬಿಜೆಪಿ ಬರ್ತೀವಿ ಅಂದ್ರೆ ಸ್ವಾಗತಿಸುತ್ತೇವೆ: ಶ್ರೀರಾಮುಲು

    ಅನ್ಯ ಪಕ್ಷಗಳ ಶಾಸಕರು ಬಿಜೆಪಿ ಬರ್ತೀವಿ ಅಂದ್ರೆ ಸ್ವಾಗತಿಸುತ್ತೇವೆ: ಶ್ರೀರಾಮುಲು

    ಗದಗ: ಅನ್ಯ ಪಕ್ಷಗಳ ಶಾಸಕರು ಬಿಜೆಪಿ ಬರ್ತೀವಿ ಅಂದರೆ ಖಂಡಿತವಾಗಿ ಸ್ವಾಗತಿಸುತ್ತೇವೆ. ಸ್ವಯಂ ಪ್ರೇರಣೆಯಿಂದ ಬಂದರೆ ಬೇಡ ಅನ್ನೋ ಮಾತೇ ಇಲ್ಲ ಅಂತ ಬಿಜೆಪಿ ಮುಖಂಡ, ಶಾಸಕ ಬಿ. ಶ್ರೀರಾಮುಲು ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾರನ್ನೂ ಸಂಪರ್ಕಿಸಲು ಮುಂದಾಗುತ್ತಿಲ್ಲ. ಸಮ್ಮಿಶ್ರ ಸರ್ಕಾರದ ಬೆಳವಣಿಗೆಗಳನ್ನು ಸುಮ್ಮನೆ ಗಮನಿಸುತ್ತಾ ಇದ್ದೇವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕೆಲ ಶಾಸಕರು ಸ್ವಯಂ ಪ್ರೇರಣೆಯಿಂದ ಬಿಜೆಪಿಗೆ ಬಂದಿದ್ದರು. ಕಾಂಗ್ರೆಸ್‍ನವರು ಅದನ್ನು ಆಪರೇಶನ್ ಕಮಲ ಎಂದು ಬಿಂಬಿಸಿದರು. ಈಗ ಪಕ್ಷೇತರ ಶಾಸಕರನ್ನು ಬಲವಂತವಾಗಿ ಅವರೇ ಹೊತ್ತೊಯ್ಯದರಲ್ಲ ಅದಕ್ಕೆ ಏನಂತ ಕರೆಯಬೇಕು ಅಂತ ಪ್ರಶ್ನೆ ಮಾಡಿದ್ರು.

    ರಾಜ್ಯದಲ್ಲಿ ಮಳೆಯಿಂದ ಜನರು ತತ್ತರಿಸಿದ್ದಾರೆ. ಆದ್ರೆ ಕುಮಾರಸ್ವಾಮಿ ಸರ್ಕಾರ ಜನರ ಸಮಸ್ಯೆ ಕೇಳುತ್ತಿಲ್ಲ. ಇನ್ನೂ ಅಧಿಕಾರ ಮತ್ತು ಕುರ್ಚಿ ಕಸರತ್ತು ನಡೆಸುತ್ತಿದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.

    ಎಚ್.ಕೆ. ಪಾಟೀಲ್ ಶಾಸಕರಾಗಿ ಆಯ್ಕೆ ಪ್ರಶ್ನಿಸಿ ಸಿಬಿಐಗೆ ದೂರು ನೀಡಲು ನಿರ್ಧರಿಸಲಾಗಿದೆ. ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಕಡಿಮೆ ಅಂತರದಲ್ಲಿ ಸೋತಿದ್ದಾರೆ. ಎಚ್.ಕೆ ಪಾಟೀಲ್ ಬೋಗಸ್ ಮತ ಹಾಕಿಸಿ ಜಯಗಳಿಸಿದ್ದಾರೆ. ಈ ಕುರಿತು ಈಗಾಗಲೇ ರಾಜ್ಯ ಹಾಗೂ ಕೇಂದ್ರ ಚುನಾವಣೆ ಆಯೋಗಕ್ಕೆ ದೂರು ನೀಡಲಾಗಿದೆ. ಈ ನಿಟ್ಟಿನಲ್ಲಿ ಬಿಜೆಪಿ ಹೋರಾಟ ಮಾಡಲಿದೆ ಎಂದು ಶ್ರೀರಾಮುಲು ಹೇಳಿದರು.

    ಗದಗ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ಎಚ್.ಕೆ.ಪಾಟೀಲ್ ಸ್ಪರ್ಧೆ ಮಾಡಿದ್ದರು. ಇತ್ತ ಬಿಜೆಪಿ ಅಭ್ಯರ್ಥಿಯಾಗಿ ಅನಿಲ್ ಮೆಣಸಿನಕಾಯಿ ಚುನಾವಣಾ ಕಣಕ್ಕೆ ಇಳಿದಿದ್ದರು. ಎಚ್.ಕೆ.ಪಾಟೀಲ್ 77,699 ಮತಗಳನ್ನು ಪಡೆದಿದ್ದರೆ, ಅನಿಲ್ ಮೆಣಸಿನಕಾಯಿ 75,831 ಮತಗಳನ್ನು ಪಡೆದುಕೊಂಡಿದ್ದರು. ಎಚ್.ಕೆ.ಪಾಟೀಲ್ 1,868 ಅಲ್ಪಮತಗಳ ಮುನ್ನಡೆಯಲ್ಲಿ ಗೆಲುವುನ್ನು ತಮ್ಮದಾಗಿಸಿಕೊಂಡು ಶಾಸಕರಾಗಿ ಆಯ್ಕೆಯಾಗಿದ್ದಾರೆ.