Tag: ಅನಿಲ್ ಕುಂಬ್ಳೆ

  • ಬಿಸಿಸಿಐನಿಂದ ಅನಿಲ್ ಕುಂಬ್ಳೆಗೆ ಅವಮಾನ!

    ಬಿಸಿಸಿಐನಿಂದ ಅನಿಲ್ ಕುಂಬ್ಳೆಗೆ ಅವಮಾನ!

    ಮುಂಬೈ: ಟೀಂ ಇಂಡಿಯಾದ ಮಾಜಿ ಕೋಚ್ ಆಗಿರುವ ಅನಿಲ್ ಕುಂಬ್ಳೆ ಅವರಿಗೆ ಬಿಸಿಸಿಐ ಅವಮಾನ ಮಾಡಿದೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಅನಿಲ್ ಕುಂಬ್ಳೆ ಇಂದು 47ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಬೆಳಗ್ಗೆ 10.56ಕ್ಕೆ ಟ್ವೀಟ್ ಮಾಡಿ ಶುಭಾಶಯ ಹೇಳಿತ್ತು.

    ಈ ಶುಭಾಶಯ ಟ್ವೀಟ್ ನಲ್ಲಿ ಅನಿಲ್ ಕುಂಬ್ಳೆಯವರನ್ನು “ಮಾಜಿ ಟೀಂ ಇಂಡಿಯಾ ಬೌಲರ್” ಎಂದು ಸಂಬೋಧಿಸಲಾಗಿತ್ತು. ಮಾಜಿ ಬೌಲರ್ ಎಂದು ಸಂಬೋಧಿಸಿ ಟ್ವೀಟ್ ಆಗಿದ್ದೆ ತಡ ಜನ ಬಿಸಿಸಿಐಯನ್ನು ತರಾಟೆಗೆ ತೆಗೆದುಕೊಳ್ಳಲು ಆರಂಭಿಸಿದರು.

    ಕೋಚ್ ಆಗಿ ಮುನ್ನಡೆಸಿದ್ದ ಕುಂಬ್ಳೆ ಅವರನ್ನು ಮಾಜಿ ಬೌಲರ್ ಎಂದು ಕರೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಅಭಿಮಾನಿಗಳು ಟ್ವೀಟ್ ಮಾಡಲು ಆರಂಭಿಸಿದರು. ಕೊನೆಗೆ ಅಭಿಮಾನಿಗಳ ಆಕ್ರೋಶಕ್ಕೆ ಮಣಿದ ಬಿಸಿಸಿಐ ತನ್ನ ಹಳೇಯ ಟ್ವೀಟ್ ಡಿಲೀಟ್ ಮಾಡಿ 11.30ಕ್ಕೆ ಮತ್ತೊಂದು ಟ್ವೀಟ್ ಮೂಲಕ “ಟೀಂ ಇಂಡಿಯಾ ನಾಯಕ” ಅನಿಲ್ ಕುಂಬ್ಳೆ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ತಿಳಿಸಿತು. ಅಷ್ಟೇ ಅಲ್ಲದೇ  ಹ್ಯಾಶ್ ಟ್ಯಾಗ್ ಬಳಸಿ ಗೌರವ ಸೂಚಿಸಿತು.

    ಅಕ್ಟೋಬರ್ 17, 1970ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಕುಂಬ್ಳೆ 132 ಟೆಸ್ಟ್ ಪಂದ್ಯಗಳನ್ನು ಆಡಿದ್ದು 619 ವಿಕೆಟ್ ಪಡೆದಿದ್ದಾರೆ. 271 ಏಕದಿನ ಪಂದ್ಯಗಳನ್ನು ಆಡಿರುವ ಕುಂಬ್ಳೆ ಒಟ್ಟು 337 ವಿಕೆಟ್ ಪಡೆದಿದ್ದಾರೆ.

    1990 ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಆಡಿದ್ದರೆ, 2008ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದರು. 1990ರಲ್ಲಿ ಶ್ರೀಲಂಕಾ ವಿರುದ್ಧ ಮೊದಲ ಏಕದಿನ ಆಡಿದ ಕುಂಬ್ಳೆ, 2007ರಲ್ಲಿ ಬರ್ಮುಡಾ ವಿರುದ್ಧ ಕೊನೆಯ ಏಕದಿನ ಆಡಿದ್ದರು.

    ಈ ವರ್ಷ ಇಂಗ್ಲೆಂಡಿನಲ್ಲಿ ನಡೆದ  ಚಾಂಪಿಯನ್ಸ್ ಟ್ರೋಫಿ ಫೈನಲ್ ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಸೋತಿತ್ತು. ಟೀಂ ಇಂಡಿಯಾ ಸೋತ ಬಳಿಕ ಡ್ರೆಸ್ಸಿಂಗ್ ರೂಂ ಅಸಮಾಧಾನದ ವಿಚಾರಗಳು ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ  ಕುಂಬ್ಳೆ ಟೀಂ ಇಂಡಿಯಾಗೆ ರಾಜೀನಾಮೆ ನೀಡಿದ್ದರು.

    ಇದನ್ನೂ ಓದಿ: ಕುಂಬ್ಳೆ ರಾಜೀನಾಮೆ ನೀಡಿದ್ದು ಯಾಕೆ? ಡ್ರೆಸ್ಸಿಂಗ್ ರೂಂ ಸೀಕ್ರೆಟ್ ಬಹಿರಂಗ

    https://youtu.be/upEMDhTPHy8

    https://youtu.be/nFxZvI-PNrY

  • ಕುಂಬ್ಳೆ ರಾಜೀನಾಮೆ ಬಗ್ಗೆ ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ ಕೊಹ್ಲಿ ನೀಡಿದ ಉತ್ತರ ಇದು

    ಕುಂಬ್ಳೆ ರಾಜೀನಾಮೆ ಬಗ್ಗೆ ಮಾಧ್ಯಮಗಳು ಪ್ರಶ್ನೆ ಕೇಳಿದ್ದಕ್ಕೆ ಕೊಹ್ಲಿ ನೀಡಿದ ಉತ್ತರ ಇದು

    ಪೋರ್ಟ್ ಆಫ್ ಸ್ಪೇನ್: ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಂ ಗೌಪ್ಯತೆಯನ್ನು ನಾನು ಬಹಿರಂಗ ಮಾಡುವುದಿಲ್ಲ ಎಂದು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

    ವೆಸ್ಟ್ ಇಂಡೀಸ್ ವಿರುದ್ಧ 5 ಪಂದ್ಯಗಳ ಏಕದಿನ ಸರಣಿ ಶುಕ್ರವಾರದಿಂದ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಪತ್ರಕರ್ತರು ಕುಂಬ್ಳೆ ರಾಜೀನಾಮೆ ನೀಡಿದ್ದು ಯಾಕೆ? ಡ್ರೆಸ್ಸಿಂಗ್ ರೂಂನಲ್ಲಿ ನಡೆದಿದೆ ಎನ್ನಲಾದ ಸುದ್ದಿಗಳು ನಿಜವೇ ಎಂದು ಪ್ರಶ್ನೆ ಮಾಡಿದರು.

    ನಿರೀಕ್ಷಿತ ಪ್ರಶ್ನೆಗೆ ಕೊಹ್ಲಿ, ಅನಿಲ್ ಕುಂಬ್ಳೆ ಅವರು ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ ನಿರ್ಧಾರವನ್ನು ಗೌರವಿಸುತ್ತೇನೆ. ಯಾವುದೇ ಕಾರಣಕ್ಕೂ ಡ್ರೆಸಿಂಗ್ ರೂಂ ಪಾವಿತ್ರ್ಯತೆಯನ್ನು ನಾವು ಕಾಪಾಡಿಕೊಂಡು ಬಂದಿದ್ದೆವೆ. ಮುಂದೆಯೂ ಅದನ್ನು ಹಾಗೆ ಕಾಪಾಡಿಕೊಂಡು ಬರುತ್ತೇವೆ. ಹೀಗಾಗಿ ನಾನು ಡ್ರೆಸಿಂಗ್ ರೂಂ ವಿಚಾರವನ್ನು ಬಹಿರಂಗ ಪಡಿಸುವುದಿಲ್ಲ ಎಂದು ಹೇಳಿದರು.

    ಇಂಗ್ಲೆಂಡ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಸಂದರ್ಭದಲ್ಲಿ 11 ಪತ್ರಿಕಾಗೋಷ್ಠಿಯಲ್ಲಿ ನಡೆಸಿದ್ದೆ. ಆದ್ರೆ ಡ್ರೆಸ್ಸಿಂಗ್ ರೂಂನಲ್ಲಿ ಏನು ನಡೆಯುತ್ತೆ ಎನ್ನುವುದನ್ನು ಆ ಗುಟ್ಟು ನಾನು ಯಾವತ್ತು ಬಿಟ್ಟುಕೊಟ್ಟಿರಲಿಲ್ಲ. ನಾವು ಮೂರ್ನಾಲ್ಕು ವರ್ಷಗಳಿಂದ ಡ್ರೆಸ್ಸಿಂಗ್ ರೂಂ ಗೌಪ್ಯತೆಯನ್ನು ಬಹಿರಂಗಪಡಿಸದ ಸಂಸ್ಕೃತಿಯನ್ನು ಬೆಳೆಸಿಕೊಂಡು ಬಂದಿದ್ದೇವೆ. ತಂಡದ ಎಲ್ಲ ಸದಸ್ಯರು ಇದಕ್ಕೆ ಬದ್ಧರಾಗಿದ್ದಾರೆ ಎಂದು ಕೊಹ್ಲಿ ತಿಳಿಸಿದರು.

    ಡ್ರೆಸಿಂಗ್ ರೂಂನಲ್ಲಿ ನಡೆಯುವ ಪ್ರತಿಯೊಂದು ಘಟನೆ ಕೂಡ ಆಟಗಾರರ ಖಾಸಗಿ ವಿಚಾರವಾಗಿರುತ್ತದೆ. ಹೀಗಾಗಿ ನಾವು ಅದರ ಗುಟ್ಟನ್ನು ನಿರ್ವಹಣೆ ಮಾಡಲೇಬೇಕು ಎಂದರು.

    ಒಬ್ಬ ಕ್ರಿಕೆಟಿಗನಾಗಿ ಅನಿಲ್ ಕುಂಬ್ಳೆ ಅವರನ್ನು ನಾನು ತುಂಬಾ ಗೌರವಿಸುತ್ತೇನೆ. ಅವರು ಹಲವು ವರ್ಷಗಳ ಕಾಲ ಆಡಿ ದೇಶದ ಕ್ರಿಕೆಟಿಗೆ ನೀಡಿರುವ ಕೊಡುಗೆಯನ್ನು ನಾನು ಗೌರವಿಸುತ್ತೆನೆ ಎಂದು ತಿಳಿಸಿದರು.

    ಇದನ್ನೂ ಓದಿ:   ಕುಂಬ್ಳೆ ರಾಜೀನಾಮೆ ನೀಡಿದ್ದು ಯಾಕೆ? ಡ್ರೆಸ್ಸಿಂಗ್ ರೂಂ ಸೀಕ್ರೆಟ್ ಬಹಿರಂಗ   

  • ಕೊಹ್ಲಿ ಆ ಟ್ವೀಟ್ ಡಿಲೀಟ್ ಮಾಡಿದ್ದು ಯಾಕೆ?

    ಕೊಹ್ಲಿ ಆ ಟ್ವೀಟ್ ಡಿಲೀಟ್ ಮಾಡಿದ್ದು ಯಾಕೆ?

    ಮುಂಬೈ: ಕುಂಬ್ಳೆ ರಾಜೀನಾಮೆಗೆ ಕೊಹ್ಲಿಯೆ ಕಾರಣ ಎನ್ನುವ ಭಾರೀ ಚರ್ಚೆ ನಡೆಯುತ್ತಿರುವಾಗಲೇ ಕೊಹ್ಲಿ ಒಂದು ವರ್ಷದ ಹಿಂದೆ ತಾವು ಮಾಡಿದ್ದ ಟ್ವೀಟ್ ಒಂದನ್ನು ಡಿಲೀಟ್ ಮಾಡುವ ಮೂಲಕ ಮತ್ತೊಮ್ಮೆ ಚರ್ಚೆಗೆ ಕಾರಣರಾಗಿದ್ದಾರೆ.

    ಹೌದು. ಕುಂಬ್ಳೆ ಟೀಂ ಇಂಡಿಯಾದ ಕೋಚ್ ಆಗಿ ನೇಮಕವಾದ ಬಳಿಕ 2016ರ ಜೂನ್ 23ರಂದು ಕೊಹ್ಲಿ ಅವರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದರು. ಆದರೆ ಈಗ ಅವರ ಖಾತೆಯಲ್ಲಿ ಅಭಿನಂದಿಸಿದ ಆ ಟ್ವೀಟ್ ಈಗ ಮಾಯವಾಗಿದೆ.

    ನಿಮಗೆ ನಮ್ಮ ತಂಡಕ್ಕೆ ಹೃದಯಪೂರ್ವಕ ಸ್ವಾಗತಗಳು, ಭಾರತೀಯ ಕ್ರಿಕೆಟ್ ತಂಡದ ಜೊತೆ ನೀವು ಇರುವುದು ದೊಡ್ಡ ವಿಚಾರ ಎಂದು ಕುಂಬ್ಳೆ ಅವರಿಗೆ ಟ್ಯಾಗ್ ಮಾಡಿ ಅವರನ್ನು ಸ್ವಾಗತಿಸಿದ್ದರು.

    ಕುಂಬ್ಳೆ ರಾಜೀನಾಮೆ ಚರ್ಚೆಯ ನಡುವೆ ಈ ಟ್ವೀಟ್ ಈಗ ಡಿಲೀಟ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಜನರು ಕೊಹ್ಲಿಗೆ ಆ ಟ್ವೀಟನ್ನು ಡಿಲೀಟ್ ಮಾಡುವ ಉದ್ದೇಶ ಏನಿತ್ತು ಎಂದು ಪ್ರಶ್ನಿಸುತ್ತಿದ್ದಾರೆ.

    ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಮಾಜಿ ಕ್ರಿಕೆಟ್ ಕೋಚ್ ಅನಿಲ್ ಕುಂಬ್ಳೆ ಮಧ್ಯೆ ಬಿರುಕು ಇರುವ ವಿಚಾರ ಚಾಂಪಿಯನ್ಸ್ ಟ್ರೋಫಿ ವೇಳೆ ತುಂಬಾ ಓಡಾಡಿತ್ತು. ಆದ್ರೆ, ಇಬ್ಬರೂ ಟೂರ್ನ್  ಮೆಂಟ್ ಮುಗಿಯುವ ವರೆಗೂ ಅದೇಕೋ ಮೌನತಾಳಿದ್ದರು. ಆದರೆ ಜೂನ್ 20 ರಂದು ಕೋಚ್ ಸ್ಥಾನಕ್ಕೆ ಕುಂಬ್ಳೆ ರಾಜೀನಾಮೆ ನೀಡಿದ್ದರು.

    ಇದನ್ನೂ ಓದಿ: ಕುಂಬ್ಳೆ ರಾಜೀನಾಮೆ ನೀಡಿದ್ದು ಯಾಕೆ? ಡ್ರೆಸ್ಸಿಂಗ್ ರೂಂ ಸೀಕ್ರೆಟ್ ಬಹಿರಂಗ

    ಇದನ್ನೂ ಓದಿ: ಪಾಕ್ ಗೆದ್ದ ಬಳಿಕ ಅಭಿಮಾನಿ ಉದ್ಧಟತನ: ಗರಂ ಶಮಿಯನ್ನು ಕೂಲ್ ಮಾಡಿದ ಧೋನಿ – ವಿಡಿಯೋ

    ಇದನ್ನೂ ಓದಿ: ಅಂಗಳದಲ್ಲಿ ಆಯ್ತು, ಟ್ವಿಟ್ಟರ್‍ನಲ್ಲೂ ಪಾಂಡ್ಯ ಕಿಡಿ ಕಿಡಿ: ವೈರಲ್ ಆಯ್ತು ಟ್ವೀಟ್

     

     

     

  • ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಕುಂಬ್ಳೆ ಗುಡ್‍ಬೈ

    ಟೀಂ ಇಂಡಿಯಾ ಕೋಚ್ ಸ್ಥಾನಕ್ಕೆ ಕುಂಬ್ಳೆ ಗುಡ್‍ಬೈ

    ಮುಂಬೈ: ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ವಿರುದ್ಧ ಸೋತು ಆಘಾತವಾಗಿರುವಾಗಲೇ ಟೀಂ ಇಂಡಿಯಾ ಡ್ರೆಸ್ಸಿಂಗ್ ರೂಮ್‍ನ ಅಸಮಾಧಾನ ಸ್ಫೋಟವಾಗಿದ್ದು ಕೋಚ್ ಹುದ್ದೆಗೆ ಅನಿಲ್ ಕುಂಬ್ಳೆ ಗುಡ್‍ಬೈ ಹೇಳಿದ್ದಾರೆ.

    ಗುಡ್‍ಬೈ ಹೇಳಿದ್ದು ಯಾಕೆ ಎನ್ನುವುದು ತಿಳಿದಿಲ್ಲವಾದರೂ ನಾಯಕ ಕೊಹ್ಲಿ ನಡುವಿನ ಸಂಬಂಧ ಸರಿ ಇಲ್ಲದ್ದಕ್ಕೆ ಕುಂಬ್ಳೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಮುಂದೆ ಹೊಸ ಕೋಚ್ ಆಯ್ಕೆ ಮಾಡಲಿದ್ದಾರೆ. ವೆಸ್ಟ್‍ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ತಂಡ ಪ್ರಯಾಣ ಬೆಳೆಸುತ್ತಿದ್ದು ಹೊಸಕೋಚ್ ನೇಮಕವಾಗಲಿದೆ. ಕೋಚ್ ರೇಸಲ್ಲಿ ಸೆಹ್ವಾಗ್ ಹೆಸರಿದೆ.

    ದ್ರಾವಿಡ್ ಸಲಹೆ: 2019ರ ವಿಶ್ವಕಪ್ ಕ್ರಿಕೆಟ್‍ಗೆ ಈಗಿನಿಂದ್ಲೇ ರೆಡಿಯಾಗುವಂತೆ ಬಿಸಿಸಿಐಗೆ ರಾಹುಲ್ ದ್ರಾವಿಡ್ ಸಲಹೆ ನೀಡಿದ್ದಾರೆ. ಮುಂದಿನ ವಿಶ್ವಕಪ್ ದೃಷ್ಟಿಯಿಂದ ಧೋನಿ ಹಾಗೂ ಯುವರಾಜ್ ಭವಿಷ್ಯ ನಿರ್ಧರಿಸಿ, ಪರ್ಯಾಯ ಆಟಗಾರರನ್ನ ಸಜ್ಜುಗೊಳಿಸಿ. ಇದಕ್ಕೆ ಪೂರ್ವಭಾವಿಯಾಗಿ ಕಿರಿಯ ಅಟಗಾರರಿಗೆ ಅವಕಾಶ ನೀಡುವ ಅಗತ್ಯ ಇದೆ ಎಂದು ರಾಹುಲ್ ತಿಳಿಸಿದ್ದಾರೆ.