Tag: ಅನಿಲ್ ಕುಂಬ್ಳೆ

  • ನಮೋ ಪ್ರಮಾಣ ವಚನ – ಕ್ರೀಡಾಪಟುಗಳು, ರಾಜ್ಯದ ಗಣ್ಯರಿಗೆ ಆಹ್ವಾನ

    ನಮೋ ಪ್ರಮಾಣ ವಚನ – ಕ್ರೀಡಾಪಟುಗಳು, ರಾಜ್ಯದ ಗಣ್ಯರಿಗೆ ಆಹ್ವಾನ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಕನ್ನಡದ ಮೂವರು ಕ್ರಿಕೆಟ್ ದಿಗ್ಗಜರಿಗೆ ಆಹ್ವಾನ ನೀಡಲಾಗಿದೆ.

    ಈ ಕಾರ್ಯಕ್ರಮಕ್ಕೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕನ್ನಡಿಗ ರಾಹುಲ್ ದ್ರಾವಿಡ್ ಅವರನ್ನು ಮೋದಿ ಅವರು ಆಹ್ವಾನ ಮಾಡಿದ್ದಾರೆ. ಅಷ್ಟೇ ಅಲ್ಲದೇ ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರನ್ನು ಆಹ್ವಾನಿಸಲಾಗಿದೆ.

    ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿ, ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಸುತ್ತೂರು ಮಠದ ಡಾ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ, ಮಾದಾರ ಚೆನ್ನಯ್ಯ ಪೀಠದ ಶ್ರೀ ಮಾದಾರ ಚೆನ್ನಯ್ಯ ಸ್ವಾಮೀಜಿ, ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಸುಧಾ ಮೂರ್ತಿ, ಖ್ಯಾತ ಕಾದಂಬರಿಕಾರ ಡಾ. ಎಸ್.ಎಲ್ ಭೈರಪ್ಪ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.

    ಕ್ರೀಡಾ ವಿಭಾಗದಿಂದ ಮಾಜಿ ಓಟಗಾರ್ತಿ ಪಿ.ಟಿ ಉಷಾ, ಮತ್ತು ಹರ್ಭಜನ್ ಸಿಂಗ್, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಬ್ಯಾಡ್ಮಿಂಟನ್ ತರಬೇತುಗಾರ ಪುಲೆಲ್ಲಾ ಗೋಪಿಚಂದ್ ಮತ್ತು ಜಿಮ್ನಾಸ್ಟಿಕ್ ಆಟಗಾರ್ತಿ ದೀಪಾ ಕರ್ಮಕರ್ ಭಾಗವಹಿಸಲಿದ್ದಾರೆ.

    ಈ ಕಾರ್ಯಕ್ರಮಕ್ಕೆ ನೆರೆಹೊರೆಯ ರಾಷ್ಟ್ರದ ಮುಖ್ಯಸ್ಥರು, ದೇಶದ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಮತ್ತು ಚಲನಚಿತ್ರ ನಟರನ್ನು ಆಹ್ವಾನ ಮಾಡಲಾಗಿದೆ. ಈ ಬಾರಿ ಪಶ್ಚಿಮ ಬಂಗಾಳದ ಚುನಾವಣೆ ಸಂದರ್ಭದಲ್ಲಿ ಸಾವನ್ನಪ್ಪಿದ 50 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರ ಕುಟುಂಬಗಳನ್ನು ಆಹ್ವಾನ ಮಾಡಲಾಗಿದೆ.

    ವಿದೇಶಿ ಗಣ್ಯರುಗಳಾಗಿ ಪ್ರಮಾಣ ವಚನ ಸ್ವೀಕರ ಸಭೆಗೆ ಬಿಮ್‍ಸ್ಟಿಕ್ (ಬಂಗಾಳ ಕೊಲ್ಲಿ ಬಹುವಲಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರಕ್ಕಾಗಿ ಇರುವ ಸಂಘಟನೆ) ಈ ಸಂಘಟನೆಯ ಬಾಂಗ್ಲಾದೇಶ, ಭೂತಾನ್, ಮಯನ್ಮಾರ್, ನೇಪಾಳ, ಶ್ರೀಲಂಕಾ ಮತ್ತು ಥೈಲ್ಯಾಂಡ್ ದೇಶದ ಮುಖ್ಯಸ್ಥರು ಬರುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ.

    ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಮಾರಂಭಕ್ಕೆ ಆಹ್ವಾನ ಮಾಡಲಾಗಿದೆ. ಇವರ ಜೊತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಮಾರಂಭಕ್ಕೆ ಆಗಮಿಸಲಿದ್ದಾರೆ.

  • 2019 IPL: ಕುಂಬ್ಳೆ ಬೆಸ್ಟ್ ಐಪಿಎಲ್ ತಂಡ ಪ್ರಕಟ – ವಿಶ್ವದ ನಂ.1 ಬ್ಯಾಟ್ಸ್ ಮನ್‍ಗಿಲ್ಲ ಸ್ಥಾನ

    2019 IPL: ಕುಂಬ್ಳೆ ಬೆಸ್ಟ್ ಐಪಿಎಲ್ ತಂಡ ಪ್ರಕಟ – ವಿಶ್ವದ ನಂ.1 ಬ್ಯಾಟ್ಸ್ ಮನ್‍ಗಿಲ್ಲ ಸ್ಥಾನ

    ಬೆಂಗಳೂರು: ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ತಮ್ಮ ಬೆಸ್ಟ್ ಐಪಿಎಲ್ ಬೆಸ್ಟ್ ತಂಡವನ್ನು ಆಯ್ಕೆ ಮಾಡಿದ್ದು, ಅಚ್ಚರಿ ಎಂಬಂತೆ ಆರ್ ಸಿಬಿ ತಂಡದ ನಾಯಕ ವಿರಾಟ್‍ಕೊಹ್ಲಿ ಅವರಿಗೆ ಪಟ್ಟಿಯಲ್ಲಿ ಸ್ಥಾನ ನೀಡಿಲ್ಲ.

    ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ, ಯುವ ಆಟಗಾರ ಶ್ರೇಯಸ್ ಅಯ್ಯರ್ ಅವರಿಗೆ ತಂಡದಲ್ಲಿ ಸ್ಥಾನ ನೀಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕುಂಬ್ಳೆ, ಶ್ರೇಯಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದು, ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಜವಾಬ್ದಾರಿಯನ್ನ ನಿರ್ವಹಿಸಿದ್ದಾರೆ. ಡೆಲ್ಲಿ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್‍ಗೆ ಉತ್ತಮವಾಗಿಲ್ಲದಿದ್ದರು ತಂಡವನ್ನು ಮುಂದೆ ನಿಂತು ಮುನ್ನಡೆಸಿದ್ದಾರೆ ಎಂದಿದ್ದಾರೆ. ಟೂರ್ನಿಯಲ್ಲಿ ಶ್ರೇಯಸ್ ಅಯ್ಯರ್ 16 ಪಂದ್ಯಗಳಿಂದ 119.94 ಸ್ಟ್ರೈಕ್ ರೇಟ್ ನಲ್ಲಿ 463 ರನ್ ಗಳಿಸಿದ್ದಾರೆ.

    ಈ ತಂಡವನ್ನು ಗ್ರೂಪ್ ಹಂತದಲ್ಲಿ ಆಟಗಾರರು ತೋರಿದ ಪ್ರದರ್ಶನ ಮೇಲೆ ಮಾತ್ರ ಆಯ್ಕೆ ಮಾಡಲಾಗಿದೆ ಎಂದು ಕುಂಬ್ಳೆ ತಿಳಿಸಿದ್ದು, ಡೇವಿಡ್ ವಾರ್ನರ್, ಕೆಎಲ್ ರಾಹುಲ್ ಅವರಿಗೆ ಆರಂಭಿಕರ ಸ್ಥಾನ ನೀಡಿದ್ದಾರೆ.

    ವಾರ್ನರ್ ಈ ಬಾರಿಯ ಟೂರ್ನಿಯಲ್ಲಿ 12 ಪಂದ್ಯಗಳಿಂದ 692 ರನ್ ಗಳಿಸಿ ಲೀಡಿಂಗ್ ರನ್ ಸ್ಕೋರರ್ ಆಗಿದ್ದು, ಕೆಎಲ್ ರಾಹುಲ್ 14 ಪಂದ್ಯಗಳಿಂದ 521 ರನ್ ಗಳಿಸಿದ್ದಾರೆ. ಉಳಿದಂತೆ ಮಧ್ಯಮ ಕ್ರಮಾಂಕದಲ್ಲಿ ರಿಷಬ್ ಪಂತ್, ಎಂಎಸ್ ಧೋನಿ, ರಸೆಲ್, ಹಾರ್ದಿಕ್ ಪಾಂಡ್ಯರನ್ನು ಆಯ್ಕೆ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ಆಂಡ್ರೆ ರಸೆಲ್ ಏಕಾಂಕಿಯಾಗಿ ತಂಡವನ್ನು ಗೆಲ್ಲಿಸುವ ಸಾಮಥ್ರ್ಯ ಹೊಂದಿದ್ದಾರೆ. ಉಳಿದಂತೆ ತಂಡದಲ್ಲಿ ಶ್ರೇಯಸ್ ಗೋಪಾಲ್, ಇಮ್ರಾನ್ ತಹೀರ್ ಸ್ಪಿನ್ನರ್ ಗಳಾಗಿದ್ದರೆ, ರಬಾಡ, ಬುಮ್ರಾ ವೇಗದ ಬೌಲರ್ ಗಳಾಗಿದ್ದಾರೆ.

    ತಂಡ ಇಂತಿದೆ: ಡೇವಿಡ್ ವಾರ್ನರ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್, ಧೋನಿ (ನಾಯಕ), ಹಾರ್ದಿಕ್ ಪಾಂಡ್ಯ, ಆಂಡ್ರೆ ರಸೆಲ್, ಶ್ರೇಯಸ್ ಗೋಪಾಲ್, ಇಮ್ರಾನ್ ತಹೀರ್, ರಬಾಡ, ಜಸ್ಪ್ರೀತ್ ಬುಮ್ರಾ.

  • ಆರ್‌ಸಿಬಿ ವೈಫಲ್ಯಕ್ಕೆ ಟೀಂ ಮ್ಯಾನೇಜ್‍ಮೆಂಟ್ ಕಾರಣ: ಕುಂಬ್ಳೆ

    ಆರ್‌ಸಿಬಿ ವೈಫಲ್ಯಕ್ಕೆ ಟೀಂ ಮ್ಯಾನೇಜ್‍ಮೆಂಟ್ ಕಾರಣ: ಕುಂಬ್ಳೆ

    ಬೆಂಗಳೂರು: 2019 ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ತಂಡ ನೀರಸ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದೊಂದಿಗೆ ಟೂರ್ನಿಯಿಂದ ಹೊರ ನಡೆದು ಸಾಕಷ್ಟು ಟೀಕೆಗಳನ್ನು ಎದುರಿಸಿತ್ತು. ಆದರೆ ತಂಡ ವೈಫಲ್ಯಕ್ಕೆ ಟೀಂ ಮ್ಯಾನೇಜ್‍ಮೆಂಟ್ ಕಾರಣ ಎಂದು ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರು ತಂಡ ಉತ್ತಮ ಬ್ಯಾಟಿಂಗ್ ಲೈನ್ ಅಪ್ ಹೊಂದಿದ್ದರೂ ಕೂಡ ಟೂರ್ನಿಯ ಆರಂಭಿಕ 6 ಪಂದ್ಯಗಳಲ್ಲಿ ಸೋತಿತ್ತು. ತಂಡದ ಹರಾಜು ಪ್ರಕ್ರಿಯೆ ವೇಳೆಯೇ ಟೀಂ ಮ್ಯಾನೇಜ್‍ಮೆಂಟ್ ಎಡವಿದ್ದು, ಕೆಲ ಉತ್ತಮ ಆಟಗಾರರನ್ನು ಹೊರತು ಪಡಿಸಿ ಹೊಸ ಆಟಗಾರರನ್ನು ಖರೀದಿ ಮಾಡಿತ್ತು. ಅಲ್ಲದೇ ತಂಡದಲ್ಲಿ ಇರುವ ಉತ್ತಮ ಆಟಗಾರರಿಗೆ ಸರಿಯಾದ ಅವಕಾಶಗಳು ಕೂಡ ಲಭ್ಯವಾಗಿಲ್ಲ. ಒಟ್ಟಾರೆ ತಂಡ ನಿರ್ಧಾರ ಮಾಡುವುದರಲ್ಲಿ ಎಡವಿದ್ದೇ ಪ್ಲೇಆಫ್ ತಲುಪಲು ಕೂಡ ಅಸಾಧ್ಯವಾಯಿತು ಎಂದು ಕುಂಬ್ಳೆ ತಿಳಿಸಿದ್ದಾರೆ.

    ವಿದೇಶಿ ಆಟಗಾರರ ಆಯ್ಕೆಯಲ್ಲಿ ಕೇವಲ 3 ಆಟಗಾರರನ್ನು ಮಾತ್ರ ಆರ್‍ಬಿಸಿ ಆಯ್ಕೆ ಮಾಡಿಕೊಂಡಿತ್ತು. ಅಲ್ಲದೇ ಬ್ಯಾಟಿಂಗ್‍ನಲ್ಲಿ ಕೊಹ್ಲಿ ಹಾಗೂ ಎಬಿ ಡಿವಿಲಿಯರ್ಸ್ ಮೇಲೆಯೇ ಹೆಚ್ಚಿನ ಒತ್ತಡ ಇತ್ತು. ಅವರು ವಿಫಲರಾದ ಸಂದರ್ಭದಲ್ಲಿ ತಂಡದ ಫಲಿತಾಂಶವೇ ಬೇರೆಯಾಗುತಿತ್ತು. ಬೌಲಿಂಗ್ ನಲ್ಲಿ ಅನುಭವಿ ಬೌಲರ್ ಉಮೇಶ್ ಯಾದವ್ ಅವರು ಸ್ಥಿರ ಪ್ರದರ್ಶನ ನೀಡಲು ವಿಫಲರಾಗಿದ್ದು ಹಾಗೂ ಯುವ ಆಟಗಾರರಾದ ಶಿವಂ ದುವೆ, ಅಕ್ಷ್‍ದೀಪ್‍ನಾಥ್ ನಿರೀಕ್ಷಿತ ಪ್ರದರ್ಶನ ನೀಡಿಲಿಲ್ಲ ಎಂದು 2009 ರಲ್ಲಿ ಆರ್ ಸಿಬಿ ತಂಡವನ್ನು ಮುನ್ನಡೆಸಿದ್ದ ಕುಂಬ್ಳೆ ಹೇಳಿದ್ದಾರೆ.

    ಇದೇ ವೇಳೆ ಆರ್ ಸಿಬಿ ತಂಡದಲ್ಲಿರುವ ಉತ್ತಮ ಅಂಶಗಳನ್ನು ಗುರುತಿಸಿರುವ ಕುಂಬ್ಳೆ, ನವದೀಪ್ ಶೈನಿ ಈ ಟೂರ್ನಿಯಲ್ಲಿ ಭರವಸೆಯ ಪ್ರದರ್ಶನ ನೀಡಿದ್ದಾರೆ. ಅವರ ಬೌಲಿಂಗ್ ಪ್ರದರ್ಶನ ಉತ್ತಮವಾಗಿತ್ತು. ಅಲ್ಲದೇ ಹೆಟ್ಮೇಯರ್, ಗುರ್ಕೀರಾತ್ ಟೂರ್ನಿಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಆರಂಭಿಕ ಸ್ಥಾನದಲ್ಲಿ ಪಾರ್ಥಿವ್ ಪಟೇಲ್ ನಿರ್ಣಯ ಇನ್ನಿಂಗ್ಸ್ ಗಳನ್ನು ಕಟ್ಟಿದ್ದರು. ಅಲ್ಲದೇ ಡೇಲ್ ಸ್ಟೈನ್ ಗಾಯಗೊಂಡಿದ್ದು ತಂಡಕ್ಕೆ ಹೊಡೆತ ನೀಡಿತು ಎಂದಿದ್ದಾರೆ.

  • ಗೋಕರ್ಣಕ್ಕೆ ಅನಿಲ್ ಕುಂಬ್ಳೆ ಭೇಟಿ

    ಗೋಕರ್ಣಕ್ಕೆ ಅನಿಲ್ ಕುಂಬ್ಳೆ ಭೇಟಿ

    ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಶ್ರೀ ಕ್ಷೇತ್ರ ಗೋಕರ್ಣದ ಸಂಸ್ಥಾನ ಶ್ರೀ ಮಹಾಬಲೇಶ್ವರ ದೇವಾಲಯಕ್ಕೆ ಖ್ಯಾತ ಮಾಜಿ ಕ್ರಿಕೆಟ್ ಆಟಗಾರ ಅನಿಲ್ ಕುಂಬ್ಳೆ ಭೇಟಿ ನೀಡಿ ಪೂಜಾ ಕಾರ್ಯ ನೆರವೇರಿಸಿದರು.

    ಆತ್ಮಲಿಂಗಕ್ಕೆ ಪಂಚಾಮೃತ, ನವಧಾನ್ಯ, ಗಂಗಾಭಿಷೇಕ ಪೂಜೆ ಮತ್ತು ಸುವರ್ಣ ನಾಗಾಭರಣ ವಿಶೇಷ ಪೂಜೆ ನೆರವೇರಿಸಿದರು. ವೇ.ವಿಶ್ವನಾಥ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು.

    ದೇವಸ್ಥಾನದ ಆಡಳಿತಾಧಿಕಾರಿ ಶ್ರೀ ಜಿಕೆ ಹೆಗಡೆ ಆತ್ಮಲಿಂಗ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಉಪಾಧಿವಂತ ಮಂಡಳದ ಸದಸ್ಯರು ಉಪಸ್ಥಿತರಿದ್ದರು.

  • ಅನಿಲ್ ಕುಂಬ್ಳೆ ಕನಸಿನ ವಿಶ್ವಕಪ್ ಟೀಂ

    ಅನಿಲ್ ಕುಂಬ್ಳೆ ಕನಸಿನ ವಿಶ್ವಕಪ್ ಟೀಂ

    ಬೆಂಗಳೂರು: ಟೀಂ ಇಂಡಿಯಾ ಮಾಜಿ ನಾಯಕ, ಮಾಜಿ ಕೋಚ್ ಆಗಿರುವ ಅನಿಲ್ ಕುಂಬ್ಳೆ ತಮ್ಮ ಕನಸಿನ ವಿಶ್ವಕಪ್ ಟೀಂ ಇಂಡಿಯಾ ಘೋಷಣೆ ಮಾಡಿದ್ದು, ಆಡುವ 15 ಆಟಗಾರರ ಪಟ್ಟಿಯಲ್ಲಿ ಕೆಲ ಮುಖ್ಯ ಆಟಗಾರರಿಗೆ ಸ್ಥಾನ ನೀಡಿದ್ದಾರೆ.

    ಕುಂಬ್ಳೆ ತಮ್ಮ ತಂಡದಲ್ಲಿ ಆಯ್ಕೆ ಮಾಡಿರುವ ಆಟಗಾರರಿಗೆ ಕೆಲ ಕಾರಣಗಳನ್ನು ನೀಡಿದ್ದು, ರೋಹಿತ್ ಶರ್ಮಾ, ಧವನ್ ಅವರಿಗೆ ಆರಂಭಿಕರ ಸ್ಥಾನ ನೀಡಿದ್ದಾರೆ. ನಂ.3 ಆಟಗಾರರಾಗಿ ಕೊಹ್ಲಿಗೆ ಅವಕಾಶ ನೀಡಿದ್ದರೆ, ಅಚ್ಚರಿ ಎಂಬಂತೆ ಟೀಂ ಇಂಡಿಯಾ ಮಾಜಿ ನಾಯಕ ಧೋನಿ ಅವರಿಗೆ 4ನೇ ಕ್ರಮಾಂಕವನ್ನು ನೀಡಿದ್ದಾರೆ.

    ಅಂಬಟಿ ರಾಯುಡು ನಂ.4 ರೇಸ್ ನಲ್ಲಿದ್ದರೂ ಕೂಡ ಕೆಲ ಪಂದ್ಯಗಳಲ್ಲಿ ವಿಫಲರಾಗಿ ನಿರಾಸೆ ಮೂಡಿಸಿದ್ದಾರೆ. ಉಳಿದಂತೆ 5ನೇ ಸ್ಥಾನದಲ್ಲಿ ಕೇಧಾರ್ ಜಾಧವ್‍ಗೆ ಅವರನ್ನು ಆಡಿಸುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಳಿದಂತೆ ಹಾರ್ದಿಕ್ ಪಾಂಡ್ಯ, ಭುವನಶ್ವರ್ ಕುಮಾರ್ ಅವರಿಗೆ ಅಲೌಂಡರ್ ಸ್ಥಾನ ನೀಡಿದ್ದಾರೆ. ಉಳಿದಂತೆ ಬೌಲಿಂಗ್ ನಲ್ಲಿ ಕುಲ್ದೀಪ್ ಯಾದವ್, ಚಹಲ್, ಶಮಿ, ಬುಮ್ರಾ, ಜೋಡಿ ಅತ್ಯುತ್ತಮ ಎಂದಿದ್ದಾರೆ.

    ತಂಡದಲ್ಲಿ ಅವಕಾಶ ಪಡೆದಿರುವ ಆಟಗಾರರ ಪಟ್ಟಿಯಲ್ಲಿ ಉಮೇಶ್ ಯಾದವ್ ಬದಲಾಗಿ ಖಲೀಲ್ ಅಹ್ಮದ್‍ರನ್ನು ಆಯ್ಕೆ ಮಾಡಿದ್ದು, ರಿಷಬ್ ಪಂತ್, ವಿಜಯ್ ಶಂಕರ್ ಕೂಡ 15 ಆಟಗಾರರ ಪಟ್ಟಿಯಲ್ಲಿದ್ದಾರೆ. ಕುಂಬ್ಳೆರ ಈ ತಂಡ ವಿಶ್ವಕಪ್ ಗೆಲ್ಲುವ ಫೆವರಿಟ್ ತಂಡ ಎಂದೇ ಹೇಳಬಹುದಾಗಿದ್ದು, ವಿಶ್ವಕಪ್ ವೇಳೆ ಆಗ್ರ ಕ್ರಮಾಂಕ ವಿಫಲವಾದರೆ ಧೋನಿ 4ನೇ ಕ್ರಮಾಂಕದಲ್ಲಿ ಉತ್ತಮವಾಗಿ ನಿಭಾಯಿಸಿ 80% ರಷ್ಟು ಗೆಲುವು ಖಚಿತ ಎಂಬ ಲೆಕ್ಕಾಚಾರ ಮುಂದಿಟ್ಟಿದ್ದಾರೆ.

    ಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮತ್ತೊಂದು ಚಾನ್ಸ್: ಐಸಿಸಿ ಕ್ರಿಕೆಟ್ ಕಮಿಟಿ ಅಧ್ಯಕ್ಷರಾಗಿ ಅನಿಲ್ ಕುಂಬ್ಳೆ

    ಮತ್ತೊಂದು ಚಾನ್ಸ್: ಐಸಿಸಿ ಕ್ರಿಕೆಟ್ ಕಮಿಟಿ ಅಧ್ಯಕ್ಷರಾಗಿ ಅನಿಲ್ ಕುಂಬ್ಳೆ

    ದುಬೈ: ಅಂತರಾಷ್ಟ್ರೀಯ ಕ್ರಿಕೆಟ್ ಕಮಿಟಿ ಅಧ್ಯಕ್ಷರಾಗಿ ಟೀಂ ಇಂಡಿಯಾ ಮಾಜಿ ಆಟಗಾರ, ಕನ್ನಡಿಗ ಅನಿಲ್ ಕುಂಬ್ಳೆ ಮತ್ತೊಮ್ಮೆ ಆಯ್ಕೆ ಆಗಿದ್ದಾರೆ.

    ದುಬೈನಲ್ಲಿ ನಡೆದ 6 ದಿನಗಳ ಐಸಿಸಿಯ ಸಭೆಯಲ್ಲಿ ಈ ನಿರ್ಣಯವನ್ನು ಮಾಡಲಾಗಿದೆ. ಈಗಾಗಲೇ 2 ಅವಧಿಗಳಲ್ಲಿ ಐಸಿಸಿ ಸಮಿತಿಯ ಅಧ್ಯಕ್ಷರಾಗಿರುವ ಅನುಭವವನ್ನು ಕುಂಬ್ಳೆ ಪಡೆದಿದ್ದಾರೆ.

    2012ರಲ್ಲಿ ಮೊದಲ ಬಾರಿಗೆ ಕುಂಬ್ಳೆ ಅವರು ಐಸಿಸಿ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಆಗಿದ್ದರು. ಅದಕ್ಕೂ ಮುನ್ನ ಆ ಸ್ಥಾನವನ್ನು ವೆಸ್ಟ್ ಇಂಡೀಸ್ ಮಾಜಿ ಆಟಗಾರ ಕ್ಲೇವ್ ಲಾಯ್ಡ್ ನಿರ್ವಹಿಸಿದ್ದರು. ಸದ್ಯ ಸತತವಾಗಿ 3ನೇ ಬಾರಿಗೆ ಕುಂಬ್ಳೆ ಅವರು ಆಯ್ಕೆ ಆಗಿದ್ದಾರೆ.

    ಕುಂಬ್ಳೆ ಅವರು ಅಧ್ಯಕ್ಷರಾಗಿರುವ ಐಸಿಸಿ ಸಮಿತಿ ಪ್ರಮುಖವಾಗಿ ನಿಯಮ ಉಲ್ಲಂಘಿಸಿದ ಆಟಗಾರರ ಮೇಲೆ ಯಾವ ಪ್ರಮಾಣದ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುತ್ತದೆ. ಕೆಲವು ಪ್ರಕರಣಗಳ ವಿಚಾರಣೆ ಸಹ ನಡೆಸುತ್ತದೆ. ಇತ್ತೀಚಿಗೆ ಶ್ರೀಲಂಕಾದ ಆಟಗಾರ ಸನತ್ ಜಯಸೂರ್ಯ ಭ್ರಷ್ಟಾಚಾರ ಪ್ರಕರಣದಲ್ಲಿ ಸಾಕ್ಷ್ಯವನ್ನು ನೀಡದ್ದಕ್ಕೆ ಈ ಸಮಿತಿ 2 ವರ್ಷಗಳ ಕಾಲ ನಿಷೇಧ ಹೇರಿತ್ತು.

    18 ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ್ದ ಕುಂಬ್ಳೆ, 132 ಟೆಸ್ಟ್ ಪಂದ್ಯಗಳಲ್ಲಿ 619 ವಿಕೆಟ್, 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್ ಪಡೆದ ಹೆಮ್ಮೆ ಹೊಂದಿದ್ದಾರೆ. ವಿಶ್ವ ಕ್ರಿಕೆಟ್‍ನಲ್ಲಿ ಅತಿ ಹೆಚ್ಚುನ ವಿಕೆಟ್ ಪಡೆದ ಆಟಗಾರರ ಪಟ್ಟಿಯಲ್ಲಿ 8ನೇ ಸ್ಥಾನವನ್ನು ಪಡೆದಿದ್ದಾರೆ. ಅಲ್ಲದ ಟೆಸ್ಟ್ ಕ್ರಿಕೆಟ್ ಪಂದ್ಯದ ಇನ್ನಿಂಗ್ಸ್ ಎಲ್ಲಾ 10 ವಿಕೆಟ್ ಪಡೆದು ಮಿಂಚಿದ್ದರು.

  • ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆಗೆ ವಿಶ್ವಚೇತನ ಪ್ರಶಸ್ತಿ

    ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆಗೆ ವಿಶ್ವಚೇತನ ಪ್ರಶಸ್ತಿ

    ಬೆಳಗಾವಿ/ಚಿಕ್ಕೋಡಿ: ಖ್ಯಾತ ಕ್ರಿಕೆಟ್ ಆಟಗಾರ ಹಾಗೂ ಟೀಂ ಇಂಡಿಯಾ ಮಾಜಿ ಕೋಚ್ ಅನಿಲ್ ಕುಂಬ್ಳೆ ಅವರಿಗೆ ವಿಶ್ವಚೇತನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

    ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರು ಗ್ರಾಮದ ವೀರಭದ್ರೇಶ್ವರ ವಿಶಾಳಿ ಜಾತ್ರಾ ಮಹೋತ್ಸವದಲ್ಲಿ ಕಾಡಸಿದ್ದೇಶ್ವರ ಮಠದಿಂದ ಈ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಯಡೂರು ಮಠದ ಪೀಠಾಧಿಪತಿಗಳು, ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಸ್ವಾಮೀಜಿ, ನಿಡಸೋಶಿ ಮಠದ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹಾಗೂ ಕಾಶಿ ಜಗದ್ಗುರು ಸ್ವಾಮೀಜಿಗಳು ಕ್ರಿಕೆಟಿಗ ಅನಿಲ್ ಕುಂಬ್ಳೆ ಅವರಿಗೆ ಈ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ.

    ಪ್ರಶಸ್ತಿ ಸ್ವೀಕರಿಸಿದ ಬಳಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅನಿಲ್ ಕುಂಬ್ಳೆ ಇಂದಿನ ಯುವಕರು ತಾವು ಮಾಡುವ ಕೆಲಸದಲ್ಲಿ ಶ್ರಮವಹಿಸಬೇಕು ಎಂದಾಗ ಮಾತ್ರ ಯಶಸ್ಸು ಸಿಗಲು ಸಾಧ್ಯ. 619 ವಿಕೆಟ್ ಪಡೆಯಲು 42 ಸಾವಿರ ಎಸೆತಗಳನ್ನು ಎಸೆಯಬೇಕಾಯಿತು. ಶ್ರಮವಿಲ್ಲದೆ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂದು ಯುವ ಜನಾಂಗಕ್ಕೆ ಕಿವಿ ಮಾತು ಹೇಳಿದರು.

    ಅಲ್ಲದೇ ಇಂದಿನ ಮಕ್ಕಳು ಮೊಬೈಲಿನಲ್ಲಿ ಮುಳುಗಿ ನೈಜ ಕ್ರೀಡೆಗಳನ್ನು ಮರೆಯುತ್ತಿದ್ದಾರೆ. ಮಕ್ಕಳನ್ನು ಮೈದಾನಗಳಿಗೆ ಸೆಳೆಯಲು ಕ್ರೀಡೆಗಳಿಗೆ ಉತ್ತೇಜನ ನೀಡಬೇಕಿದೆ ಎಂದ ಅವರು ಈ ಇತಿಹಾಸ ಪ್ರಸಿದ್ಧ ತಾಣದಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿರುವದು ಸಂತಸ ತಂದಿದೆ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕೊಹ್ಲಿ ಇಮೇಲ್‍ನಿಂದ ಕುಂಬ್ಳೆ ಕೋಚ್ ಹುದ್ದೆಗೆ ರಾಜೀನಾಮೆ!

    ಕೊಹ್ಲಿ ಇಮೇಲ್‍ನಿಂದ ಕುಂಬ್ಳೆ ಕೋಚ್ ಹುದ್ದೆಗೆ ರಾಜೀನಾಮೆ!

    ಮುಂಬೈ: ಅನಿಲ್ ಕುಂಬ್ಳೆ ಟೀಂ ಇಂಡಿಯಾದ ಕೋಚ್ ಹುದ್ದೆಗೆ ರಾಜೀನಾಮೆ ನೀಡಲು ವಿರಾಟ್ ಕೊಹ್ಲಿ ಬಿಸಿಸಿಐಗೆ ಕಳುಹಿಸಿದ ಇಮೇಲ್ ಕಾರಣ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಕೊಹ್ಲಿ ಬಿಸಿಸಿಐ ಸಮಿತಿಗೆ ಕಳುಹಿಸಿದ್ದ ಇ-ಮೇಲ್ ಹಾಗೂ ಕೆಲವು ಸಂದೇಶಗಳು ಲಿಕ್ ಆಗಿವೆ. ಅಂದಹಾಗೇ ಅನಿಲ್ ಕುಂಬ್ಳೆ ಕಳೆದ ವರ್ಷ ತಂಡದ ಕೋಚ್ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಕುಂಬ್ಳೆ ಅವಧಿಯಲ್ಲಿ ಆಡಿದ್ದ 17 ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಒಂದು ಪಂದ್ಯದಲ್ಲಿ ಮಾತ್ರ ಸೋಲುಂಡಿತ್ತು. ಕುಂಬ್ಳೆ ಕೋಚಿಂಗ್ ನಲ್ಲಿ ತಂಡ ಉನ್ನತ ಮಟ್ಟದಲ್ಲಿ ಪ್ರದರ್ಶನ ನೀಡುತ್ತಿದ್ದರೂ ಕೋಚ್ ಅವಧಿ ಮುಗಿಯುತ್ತಿದಂತೆ ರಾಜೀನಾಮೆ ನೀಡಿ ಹೊರಬಂದಿದ್ದರು.

    ಸದ್ಯ ಮಾಧ್ಯಮ ವರದಿಯಲ್ಲಿ ಕುಂಬ್ಳೆ ಕುರಿತು ನಾಯಕ ವಿರಾಟ್ ಕೊಹ್ಲಿ ಸತತವಾಗಿ ಬಿಸಿಸಿಐ ಮುಖ್ಯ ಕಾರ್ಯದರ್ಶಿ ರಾಹುಲ್ ಜೋಹರಿ ಅವರಿಗೆ ಸಂದೇಶ ರವಾನಿಸುತ್ತಿದ್ದರು. ಆ ಬಳಿಕ ಕೊಹ್ಲಿಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ರವಿಶಾಸ್ತ್ರಿ ಅವರು ಕೋಚ್ ಆಗಿ ನೇಮಕಗೊಂಡಿದ್ದರು.

    ಸುಪ್ರೀಂ ನೇಮಕ ಮಾಡಿದ್ದ ಕ್ರಿಕೆಟ್ ಸಲಹಾ ಸಮಿತಿಯಲ್ಲಿದ್ದ ಸಚಿನ್, ವಿವಿಎಸ್ ಲಕ್ಷ್ಮಣ್, ಸೌರವ್ ಗಂಗೂಲಿ ಅವರು ಕುಂಬ್ಳೆ ಅವರನ್ನು ಶಿಫಾರಸ್ಸು ಮಾಡಿದ್ದರು. ಅಲ್ಲದೇ ಒಂದು ವರ್ಷದ ಕಾಲ ತಂಡದ ಕೋಚ್ ಆಗಿದ್ದ ಕುಂಬ್ಳೆ ಮುಂದಾಳತ್ವದಲ್ಲಿ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟಿನಲ್ಲಿ ನಂ.1 ಪಟ್ಟಕ್ಕೆರಿತ್ತು. ಕುಂಬ್ಳೆ ಕೂಡ ತಮ್ಮ ರಾಜೀನಾಮೆ ಬಳಿಕ ತಂಡದ ನಾಯಕ ಹಾಗೂ ತಮ್ಮ ಶೈಲಿ ಹೊಂದಾಣಿಕೆ ಆಗುತ್ತಿಲ್ಲ ಎಂದು ತಿಳಿಸಿದ್ದರು.

    ಈ ಹಿಂದೆ ಕೂಡ ಅನಿಲ್ ಕುಂಬ್ಳೆ ರಾಜೀನಾಮೆ ಕುರಿತು ಪ್ರತಿಕ್ರಿಯೆ ನೀಡಿದ್ದ ಟೀಂ ಇಂಡಿಯಾ ಮಾಜಿ ಆಟಗಾರ ಬಿಶನ್ ಸಿಂಗ್, ತಂಡದಲ್ಲಿ ಒಬ್ಬರ ಮಾತು ಮಾತ್ರ ನಡೆಯುತ್ತಿದ್ದು, ಅದು ನಾಯಕ ವಿರಾಟ್ ಕೊಹ್ಲಿ ಅವರದ್ದು ಮಾತ್ರ. ಅವರು ತಂಡದಲ್ಲಿ ಒಂದು ರೀತಿಯಲ್ಲಿ ರಾಜನಂತೆ ವರ್ತಿಸುತ್ತಿದ್ದಾರೆ. ಅದ್ದರಿಂದಲೇ ಕುಂಬ್ಳೆ ರಾಜೀನಾಮೆ ನೀಡಿದ್ದಾರೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್‌ಪೋರ್ಟಲ್ಲಿ ಪವರ್ ಸ್ಟಾರ್ ಅಪ್ಪುಗೆ ಎದುರಾದ ಗೂಗ್ಲಿ!

    ಏರ್‌ಪೋರ್ಟಲ್ಲಿ ಪವರ್ ಸ್ಟಾರ್ ಅಪ್ಪುಗೆ ಎದುರಾದ ಗೂಗ್ಲಿ!

    ಬೆಂಗಳೂರು: ಕೆಲ ಸಂದರ್ಭಗಳಲ್ಲಿ ಸೆಲೆಬ್ರಿಟಿಗಳ ನಡುವೆ ಅನಿರೀಕ್ಷಿತ ಭೇಟಿ ಸಂಭವಿಸುತ್ತೆ. ಹಾಗೆ ಸಿಕ್ಕಾಗ ಯಾವ ಕ್ಷೇತ್ರದವರೇ ಆಗಿದ್ದರೂ ಪರಸ್ಪರ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸುತ್ತಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೂ ಕೂಡಾ ಚೆನ್ನೈ ಏರ್‌ಪೋರ್ಟನಲ್ಲಿ ಅಂಥಾದ್ದೇ ಒಂದು ವಿಶೇಷ ವ್ಯಕ್ತಿತ್ವ ಹಠಾತ್ತನೆ ಎದುರಾಗಿದೆ!

    ಕೆಲಸದ ನಿಮಿತ್ತವಾಗಿ ಚೆನ್ನೈಗೆ ತೆರಳಿದ್ದ ಪುನೀತ್ ವಾಪಾಸಾಗುವಾಗ ಏರ್ ಪೋರ್ಟಿನಲ್ಲಿ ಅನಿಲ್ ಕುಂಬ್ಳೆ ಕಾಣಿಸಿಕೊಂಡಿದ್ದಾರೆ. ಸ್ವತಃ ಪುನೀತ್ ಅವರೇ ಬಳಿ ಸಾಗಿ ಮಾತಾಡಿಸಿದಾಗ ಹೌಹಾರಿದ ಕುಂಬ್ಳೆ ಆಲಿಂಗಿಸಿಕೊಂಡು ಉಭಯ ಕುಶಲೋಪರಿ ವಿಚಾರಿಸಿದ್ದಾರೆ. ನಂತರ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.

    ನಂತರ ಈ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ ಪುನೀತ್ ಅನಿಲ್ ಕುಂಬ್ಳೆಯವರನ್ನು ಭೇಟಿ ಮಾಡಿದ ಬಗ್ಗೆ ಖುಷಿಯಿಂದ ಹೇಳಿಕೊಂಡರೆ, ಅತ್ತ ಕುಂಬ್ಳೆ ಸಹ ಈ ಫೋಟೋ ಜಾಹೀರು ಮಾಡಿ ಪವರ್ ಸ್ಟಾರ್ ಭೇಟಿಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

    ವಿಶೇಷವೆಂದರೆ ಈ ಭೇಟಿ ಅನಿರೀಕ್ಷಿತವಾಗಿದ್ದರೂ ಅನಿಲ್ ಕುಂಬ್ಳೆ ಮತ್ತು ಪುನೀತ್ ರಾಜ್ ಕುಮಾರ್ ಕಪ್ಪು ಬಣ್ಣದ ಡ್ರೆಸ್ ಮೂಲಕ ಕಾಕತಾಳೀಯವೆಂಬಂತೆ ಕಂಗೊಳಿಸಿದ್ದಾರೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    https://www.instagram.com/p/Bma_EytAeZO/?hl=en&taken-by=puneethrajkumar.official

  • ದ್ರಾವಿಡ್, ಕುಂಬ್ಳೆಗೆ ಟಿಕೆಟ್ ಆಫರ್ ನೀಡಿದ ಬಿಜೆಪಿ

    ದ್ರಾವಿಡ್, ಕುಂಬ್ಳೆಗೆ ಟಿಕೆಟ್ ಆಫರ್ ನೀಡಿದ ಬಿಜೆಪಿ

    ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷದಿಂದ ಸ್ಪರ್ಧಿಸುವಂತೆ ಬಿಜೆಪಿ ಪಕ್ಷ ರಾಹುಲ್ ದ್ರಾವಿಡ್ ಹಾಗೂ ಅನಿಲ್ ಕುಂಬ್ಳೆ ಅವರಿಗೆ ಟಿಕೆಟ್ ಆಫರ್ ನೀಡಿದ್ದು, ಆದರೆ ಇದನ್ನು ಇಬ್ಬರು ಆಟಗಾರರು ನಿರಾಕರಿಸಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಮೂಲಗಳ ಪ್ರಕಾರ ಬಿಜೆಪಿ ಇಬ್ಬರು ಆಟಗಾರರನ್ನು ತಮ್ಮ ಪಕ್ಷದತ್ತ ಸೆಳೆಯಲು ಕಳೆದ ಕೆಲ ವಾರಗಳಿಂದ ಪ್ರಯತ್ನಿಸುತ್ತಿದ್ದು, ಸ್ಟಾರ್ ಆಟಗಾರ ಬೆಂಬಲ ನೀಡುವಂತೆ ಮನವಿ ಮಾಡಿತ್ತು ಎನ್ನಲಾಗಿದೆ.

    ಬಿಜೆಪಿ ನೀಡಿರುವ ಅವಕಾಶವನ್ನು ಕುಂಬ್ಳೆ ಹಾಗೂ ದ್ರಾವಿಡ್ ಇಬ್ಬರು ನಿರಾಕರಿಸಿದ್ದಾರೆ. ಆದರು ಬಿಜೆಪಿ ಸತತ ಮಾತುಕತೆಗಳನ್ನು ನಡೆಸುತ್ತಿದ್ದು, ಈ ಬಾರಿ ಅಲ್ಲದಿದ್ದರೂ ಮುಂದಿನ ಲೋಕಸಭಾ ಆಥವಾ ರಾಜ್ಯಸಭಾ ಚುನಾವಣೆ ಸ್ಥಾನ ನೀಡುವ ಬಗ್ಗೆ ತಿಳಿಸಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಇಬ್ಬರು ಆಟಗಾರರು ಮಾಧ್ಯಮಗಳಿಗೆ ಹೇಳಿಕೆ ನೀಡಲು ನಿರಾಕರಿಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಕ್ರಿಕೆಟ್ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿರುವ ದ್ರಾವಿಡ್ ಸದ್ಯ ಟೀಂ ಇಂಡಿಯಾ ಅಂಡರ್ 19 ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೇ ಕಳೆದ ತಿಂಗಳು ರಾಜ್ಯ ಚುನಾವಣಾ ಆಯೋಗ ದ್ರಾವಿಡ್ ರನ್ನು ವಿಧಾನಸಭಾ ಚುನಾವಣೆಯ ರಾಯಭಾರಿಯನ್ನಾಗಿ ಆಯ್ಕೆ ಮಾಡಿತ್ತು. ಇನ್ನು ಕುಂಬ್ಳೆ ಕ್ರೀಡಾ ನಿರ್ವಹಣೆ ಹಾಗೂ ಕ್ರಿಕೆಟ್ ಅಡ್ಮಿನಿಸ್ಟ್ರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.