Tag: ಅನಿಲ್ ಕುಂಬ್ಳೆ

  • ನಮ್ಮ ರಾಜ್ಯಕ್ಕೆ ನನ್ನ ಕೈಯಲ್ಲಾದ ಸೇವೆ ಮಾಡ್ತೀನಿ – ಅನಿಲ್ ಕುಂಬ್ಳೆ

    ನಮ್ಮ ರಾಜ್ಯಕ್ಕೆ ನನ್ನ ಕೈಯಲ್ಲಾದ ಸೇವೆ ಮಾಡ್ತೀನಿ – ಅನಿಲ್ ಕುಂಬ್ಳೆ

    – ಕ್ರಿಕೆಟ್‌ ದಿಗ್ಗಜ ಈಗ ಅರಣ್ಯ ಇಲಾಖೆ ರಾಯಭಾರಿ

    ಬೆಂಗಳೂರು: ನಮ್ಮ ರಾಜ್ಯಕ್ಕೆ ನನ್ನ ಕೈಯಲ್ಲಿ ಎಷ್ಟು ಸೇವೆ ಮಾಡಲು ಸಾಧ್ಯವೋ ಅಷ್ಟು ಸೇವೆ ಮಾಡೋದಾಗಿ ಕ್ರಿಕೆಟಿಗ ಕನ್ನಡಿಗ ಅನಿಲ್ ಕುಂಬ್ಳೆ (Anil Kumbl) ತಿಳಿಸಿದ್ದಾರೆ.

    ಅರಣ್ಯ ಇಲಾಖೆ ರಾಯಭಾರಿಯಾಗಿ (Forest Department Brand Ambassador) ನೇಮಕವಾದ ಹಿನ್ನಲೆಯಲ್ಲಿ ಇಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನ ಭೇಟಿಯಾಗಿ ಕುಂಬ್ಳೆ ಮಾತುಕತೆ ‌ನಡೆಸಿದರು. ಇದನ್ನೂ ಓದಿ: ನೋಂದಣಿ ಮಾಡಿರುವ ರೈತರ ಜೋಳ ಖರೀದಿಸಲು ರೈತರ ನಿಯೋಗದಿಂದ ಆಹಾರ ಸಚಿವರಿಗೆ ಮನವಿ

    ಈ ವೇಳೆ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ (Eshwar Khandre), ಅನಿಲ್ ಕುಂಬ್ಳೆ ಇಡೀ ದೇಶದ ಹೆಮ್ಮೆಯ ಆಟಗಾರ. ಅವರ ಸಾಧನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ. ದೇಶದಲ್ಲಿ ಅಮೋಘ ಸೇವೆ ಇದೆ, ಅವರಿಗೆ ಅರಣ್ಯಪ್ರಕೃತಿ ಬಗ್ಗೆ ಕಾಳಜಿ ಇದೆ. ಹಿಂದೆ ವನ್ಯಜೀವಿ ಬೋರ್ಡ್ ಉಪಾಧ್ಯಕ್ಷರಾಗಿದ್ರು. ಈಗ‌ ಯಾವುದೇ ಸಂಭಾವನೆ ಪಡೆಯದೇ ಅರಣ್ಯ ಇಲಾಖೆ ರಾಯಭಾರಿ ಆಗೋಕೆ ಒಪ್ಪಿದ್ದಾರೆ. ಅವರಿಗೆ ಧನ್ಯವಾದ ಹೇಳ್ತೀನಿ. ಸಿಎಂ,‌ ಡಿಸಿಎಂ ಉಪಸ್ಥಿತಿಯಲ್ಲಿ MOU ಮಾಡಿಕೊಳ್ಳಲಾಗುತ್ತದೆ. ಕುಂಬ್ಳೆ ಅವರು ರಾಯಭಾರಿ ಆಗಿರೋದ್ರೀಂದ ವನ್ಯಜೀವಿ ಸಂರಕ್ಷಣೆ, ಅರಣ್ಯ ಸಂರಕ್ಷಣೆ ಅವರಿಂದ ಆಗಲಿದೆ ಅಂತ ನಾನು ಭಾವಿಸುತ್ತೇನೆ ಅಂತ ತಿಳಿಸಿದರು.

    ಅನಿಲ್ ಕುಂಬ್ಳೆ ಮಾತಾಡಿ, ಕರ್ನಾಟಕ ಸರ್ಕಾರ ನನಗೆ ಇದೊಂದು ಜವಾಬ್ದಾರಿ ಕೊಟ್ಟಿದೆ. ಹಿಂದೆಯೂ ನಾನು ಉಪಾಧ್ಯಕ್ಷ ಆಗಿದ್ದೆ. ಮತ್ತೊಮ್ಮೆ ಅವಕಾಶ ಸಿಕ್ಕಿದ್ದಕ್ಕೆ, ಜವಾಬ್ದಾರಿ ಕೊಟ್ಟಿದ್ದಕ್ಕೆ ಸಂತೋಷ ಆಗುತ್ತದೆ. ನಮ್ಮ ರಾಜ್ಯಕ್ಕೆ ಏನು ಸೇವೆ ಆಗುತ್ತೋ ಅದನ್ನ ಸಲ್ಲಿಸುತ್ತೇನೆ. ಎಲ್ಲರಿಗೂ ವನ್ಯಜೀವಿಗಳ ಬಗ್ಗೆ ಕಾಳಜಿ ಬರಲಿ. ವನ್ಯಜೀವಿಗಳ ಬಗ್ಗೆ ಮಕ್ಕಳು ಸೇರಿ ಎಲ್ಲರಿಗೂ ಕಾಳಜಿ ಬರಲಿ ಅಂತ ಕರೆ ನೀಡಿದ್ರು. ಇದನ್ನೂ ಓದಿ: IPL Final | ಸಂಭ್ರಮಾಚರಣೆ ವೇಳೆ ಸಾರ್ವಜನಿಕರಿಗೆ ತೊಂದರೆ ಕೊಟ್ರೆ ಕ್ರಮ – ಬಿ.ದಯಾನಂದ್

  • ಕಪ್‌ ನಮ್ದೆ ಅಂತ ಗೆದ್ದ ಮೇಲೆ ಹೇಳೋಣ: ಅನಿಲ್‌ ಕುಂಬ್ಳೆ

    ಕಪ್‌ ನಮ್ದೆ ಅಂತ ಗೆದ್ದ ಮೇಲೆ ಹೇಳೋಣ: ಅನಿಲ್‌ ಕುಂಬ್ಳೆ

    ಬೆಂಗಳೂರು: ಈಗಲೇ ಕಪ್ ನಮ್ದೇ ಅಂತ ಹೇಳಬೇಡಿ. ಗೆದ್ದ ಮೇಲೆ ಹೇಳೋಣ ಎಂದು ಆರ್‌ಸಿಬಿ (RCB) ಮಾಜಿ ನಾಯಕ ಅನಿಲ್‌ ಕುಂಬ್ಳೆ (Anil Kumble) ಹೇಳಿದ್ದಾರೆ

    ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಆರ್‌ಸಿಬಿ ತಂಡ ಚೆನ್ನಾಗಿ ಆಡುತ್ತಿದೆ. ಎರಡು ಬೆಸ್ಟ್‌ ತಂಡಗಳು ಫೈನಲ್‌ ಪ್ರವೇಶಿಸಿವೆ. ನಾನು ಎರಡು ತಂಡವನ್ನು ಪ್ರತಿನಿಧಿಸಿದ್ದೆ. ಆರ್‌ಸಿಬಿ ಗೆಲ್ಲಬೇಕೆಂದು ನಾನು ಹಾರೈಸುತ್ತೇನೆ ಎಂದು ತಿಳಿಸಿದರು.  ಇದನ್ನೂ ಓದಿ: ಆರ್‌ಸಿಬಿಗೆ ದೊಡ್ಡ ಶಾಕ್‌ – ಸಾಲ್ಟ್‌ ಆಡೋದು ಅನುಮಾನ

    ಕೊಹ್ಲಿ (Virat Kohl) ಉತ್ತಮವಾಗಿ ಆಡುತ್ತಿದ್ದು 600ಕ್ಕೂ ಅಧಿಕ ರನ್‌ ಹೊಡೆದಿದ್ದಾರೆ. ಸಂತೋಷದ ಸುದ್ದಿ ಏನೆಂದರೆ ಈ ಬಾರಿ ಹೊಸ ಐಪಿಎಲ್‌ ವಿನ್ನರ್‌ ಆಗುತ್ತಾರೆ. ಆರ್‌ಸಿಬಿ ಉತ್ತಮವಾಗಿ ಆಡುತ್ತಿದೆ. ಫೈನಲಿನಲ್ಲಿ ಆರ್‌ಸಿಬಿ ಗೆಲ್ಲಬೇಕು ಎಂದರು.

  • ಅರಣ್ಯ ಇಲಾಖೆ ರಾಯಭಾರಿಯಾಗಿ ಅನಿಲ್ ಕುಂಬ್ಳೆ: ಈಶ್ವರ್ ಖಂಡ್ರೆ

    ಅರಣ್ಯ ಇಲಾಖೆ ರಾಯಭಾರಿಯಾಗಿ ಅನಿಲ್ ಕುಂಬ್ಳೆ: ಈಶ್ವರ್ ಖಂಡ್ರೆ

    ಬೆಂಗಳೂರು: ಖ್ಯಾತ ಕ್ರೀಡಾಪಟು, ಮಾಜಿ ಕ್ರಿಕೆಟಿಗ, ಕನ್ನಡಿಗ ಅನಿಲ್ ಕುಂಬ್ಳೆ (Anil Kumble) ಇನ್ನು ಮುಂದೆ ಅರಣ್ಯ ಇಲಾಖೆಯ ರಾಯಭಾರಿಯಾಗಲಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ (Eshwar Khandre) ತಿಳಿಸಿದರು.

    ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅನಿಲ್ ಕುಂಬ್ಳೆ ರಾಯಭಾರಿ ಆಗಿರೋ ವಿಚಾರವನ್ನು ಸ್ಪಷ್ಟಪಡಿಸಿದರು. ಅನಿಲ್ ಕುಂಬ್ಳೆ ಅವರು ಅರಣ್ಯ ಇಲಾಖೆ ರಾಯಭಾರಿಯಾಗಲು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಆಪರೇಷನ್ ಸಿಂಧೂರವನ್ನ ಕ್ಯಾಮೆರಾ ಮುಂದೆಯೇ ಮಾಡಲಾಯ್ತು ಆದ್ದರಿಂದ ಯಾರೂ ಪುರಾವೆ ಕೇಳಲ್ಲ: ವಿಪಕ್ಷಗಳಿಗೆ ತಿವಿದ ಮೋದಿ

    ಈ ಹಿಂದೆ ಕರ್ನಾಟಕ ವನ್ಯಜೀವಿ ಮಂಡಳಿಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಅನಿಲ್ ಕುಂಬ್ಳೆ ಅವರಿಗೆ ಇದೆ. ಇವರು ವಿಶ್ವಾದ್ಯಂತ ಖ್ಯಾತಿ ಹೊಂದಿದ್ದಾರೆ. ಅನಿಲ್ ಕುಂಬ್ಳೆ ಅವರು ಅರಣ್ಯ ಇಲಾಖೆಗೆ (Forest Department) ರಾಯಭಾರಿ ಆಗಲಿದ್ದು, ಅರಣ್ಯ ಸಂರಕ್ಷಣೆ, ಅರಣ್ಯ ಸಂವರ್ಧನೆ, ವೃಕ್ಷ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದ್ದಾರೆ ಎಂದರು. ಇದನ್ನೂ ಓದಿ: ಸಮಾಜದಲ್ಲಿ ಅಶಾಂತಿ, ಒಡಕು ಮೂಡಿಸೋದು ಬಿಜೆಪಿ ಉದ್ದೇಶ: ಶರಣಪ್ರಕಾಶ್ ಪಾಟೀಲ್

    ಅನಿಲ್ ಕುಂಬ್ಳೆ ಅವರಿಗೆ ವನ್ಯಜೀವಿಗಳ ಬಗ್ಗೆ ಅಪಾರ ಕಾಳಜಿ ಇದೆ. ಅರಣ್ಯದ ಬಗ್ಗೆ ಪ್ರೀತಿ ಇದೆ. ಹೀಗಾಗಿ ಅವರು ಯಾವುದೇ ಸಂಭಾವನೆ ಪಡೆಯದೆ ರಾಯಭಾರಿ ಆಗಲು ಸಮ್ಮತಿಸಿದ್ದಾರೆ. ಆದಷ್ಟು ಬೇಗ ಸಿಎಂ ಮತ್ತು ಡಿಸಿಎಂ ಸಮ್ಮುಖದಲ್ಲಿ ಎಂಒಯು ಮಾಡಿಕೊಳ್ಳಲಾಗುವುದು ಅಂತ ತಿಳಿಸಿದರು.

  • ʻಈ ಸಲ ಕಪ್‌ ನಮ್ದೇʼ ಅಂತ ಹೇಳಬೇಡಿ, ಹೇಳಿದಾಗೆಲ್ಲ ತೊಂದ್ರೆ ಆಗುತ್ತೆ: ಅನಿಲ್‌ ಕುಂಬ್ಳೆ

    ʻಈ ಸಲ ಕಪ್‌ ನಮ್ದೇʼ ಅಂತ ಹೇಳಬೇಡಿ, ಹೇಳಿದಾಗೆಲ್ಲ ತೊಂದ್ರೆ ಆಗುತ್ತೆ: ಅನಿಲ್‌ ಕುಂಬ್ಳೆ

    ಬೆಂಗಳೂರು: ಇಲ್ಲಿನ ಸದಾಶಿವನಗರದಲ್ಲಿರುವ ಡಿಸಿಎಂ ನಿವಾಸದಲ್ಲಿಂದು ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ (Anil Kumble) ಡಿ.ಕೆ ಶಿವಕುಮಾರ್‌ ಅವರನ್ನ ಭೇಟಿಯಾದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡುತ್ತಾ.. ಆರ್‌ಸಿಬಿ ಕಪ್‌ ಗೆಲ್ಲುವ ನಿರೀಕ್ಷೆಯನ್ನು ವ್ಯಕ್ತಪಡಿಸಿದ್ದಾರೆ.

    ಈ ಸಲ ಆರ್‌ಸಿಬಿ (RCB) ಕಪ್‌ ಗೆಲ್ಲುವ ನಿರೀಕ್ಷೆ ಇದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಅದನ್ನ ಹೇಳಬೇಡಿ, ಹೇಳಿದಾಗೆಲ್ಲ ತೊಂದ್ರೆ ಆಗುತ್ತಲ್ಲ. ಕಪ್‌ ಗೆಲ್ಲುವ ನಿರೀಕ್ಷೆ ಅಂತು ಇದ್ದೇ ಇದೆ ಅಂತ ಹೇಳಿದ್ದಾರೆ.

    ಕಳೆದ 18 ವರ್ಷಗಳಿಂದಲೂ ಐಪಿಎಲ್‌ ಚೆನ್ನಾಗಿ ನಡೆದುಕೊಂಡು ಬಂದಿದೆ. ಈ ಆವೃತ್ತಿಯಲ್ಲಿ ಏನಾಗುತ್ತೆ ನೋಡೋಣ. ಇವತ್ತಿನ ಆರ್‌ಸಿಬಿ ಮ್ಯಾಚ್‌ಗೆ ಆಲ್ ದಿ ಬೆಸ್ಟ್ ಹೇಳುವೆ ಎಂದರಲ್ಲದೇ, ನಾನು ಪಂಜಾಬ್ ಹಾಗೂ ಬೆಂಗಳೂರು ಎರಡೂ ತಂಡದಲ್ಲಿ ಇದ್ದೆ. ಅದೇ ಸಮಸ್ಯೆ ನನಗೆ ಎಂದು ಮುಗುಳುನಕ್ಕರು.

  • ಬೆಂಗಳೂರು | ಡಿಸಿಎಂ ಡಿಕೆಶಿ ಭೇಟಿಯಾದ ಕ್ರಿಕೆಟ್‌ ದಿಗ್ಗಜ ಅನಿಲ್ ಕುಂಬ್ಳೆ

    ಬೆಂಗಳೂರು | ಡಿಸಿಎಂ ಡಿಕೆಶಿ ಭೇಟಿಯಾದ ಕ್ರಿಕೆಟ್‌ ದಿಗ್ಗಜ ಅನಿಲ್ ಕುಂಬ್ಳೆ

    ಬೆಂಗಳೂರು: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅನಿಲ್‌ ಕುಂಬ್ಳೆ (Anil Kumble) ಅವರಿಂದು ಡಿಸಿಎಂ ಡಿ.ಕೆ ಶಿವಕುಮಾರ್‌ (DK Shivakumar) ಅವರನ್ನ ಭೇಟಿಯಾದರು. ಬೆಂಗಳೂರಿನ ಸದಾಶಿವನಗರದಲ್ಲಿರುವ ಅವರ ನಿವಾಸದಲ್ಲಿ ಉಪಮುಖ್ಯಮಂತ್ರಿಗಳನ್ನ ಭೇಟಿಯಾದರು.

    ಈ ಕುರಿತು ಡಿಸಿಎಂ ತಮ್ಮ ಎಕ್ಸ್‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇಂದು ನನ್ನ ನಿವಾಸದಲ್ಲಿ ಭಾರತ ಕ್ರಿಕೆಟ್‌ ತಂಡದ ಮಾಜಿ ಕ್ರಿಕೆಟಿಗ, ದಿಗ್ಗಜ ಸ್ಪಿನ್ನರ್ ಅನಿಲ್ ಕುಂಬ್ಳೆ ಅವರನ್ನು ಭೇಟಿ ಮಾಡಿದ್ದು ಖುಷಿ ತಂದಿದೆ. ಕರ್ನಾಟಕ ಮತ್ತು ಭಾರತೀಯ ಕ್ರಿಕೆಟ್‌ಗೆ ಅಪಾರವಾದ ಕೊಡುಗೆ ನೀಡಿದ ಹೆಮ್ಮೆಯ ಹೆಮ್ಮೆಯ ಕನ್ನಡಿಗನೊಂದಿಗೆ ಸಂವಾದದಲ್ಲಿ ತೊಡಗಿಸಿಕೊಂಡಿದ್ದು ಸಂತಸವಾಗಿದೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ದಕ್ಷಿಣ ಭಾರತದಲ್ಲಿ ನನ್ನ ಹೆಸರಲ್ಲೊಂದು ದೇವಸ್ಥಾನ ಆಗಬೇಕು ಎಂದ ಊರ್ವಶಿ – ಟ್ರೋಲ್ ಆದ ನಟಿ

    ಇನ್ನೂ ಡಿಸಿಎಂ ಮಾಧ್ಯಮಗಳೊಂದಿಗೆ ಮಾತನಾಡಿದ ಅನಿಲ್ ಕುಂಬ್ಳೆ, ವೈಯುಕ್ತಿಕ ಕೆಲಸದ ನಿಮಿತ್ತ ಡಿಸಿಎಂ ಭೇಟಿ ಆಗಿದ್ದೆ ಎಂದು ಹೇಳಿದರು. ಇದನ್ನೂ ಓದಿ: ಕಾಫಿ ತೋಟದ ಸೊಬಗಿಗೆ ಮಾರುಹೋದ ಬ್ಯಾಡ್ಮಿಂಟರ್ ತಾರೆ – ಪಿವಿ ಸಿಂಧುಗೆ ಕೊಡಗಿನಲ್ಲಿ ಕಾಫಿ ತೋಟ ಖರೀದಿಸುವಾಸೆ!

    ಅಲ್ಲದೇ ಈ ಬಾರಿ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿ ಪಂದ್ಯಗಳ ಕುರಿತು ಮಾತನಾಡಿ, ಆರ್‌ಸಿಬಿ ಹೀಗೇ ಆಡಲಿ, ಇನ್ನೂ ಅರ್ಧ ಕೂಡ ಟೂರ್ನಿ ಆಗಿಲ್ಲ. ಆರ್‌ಸಿಬಿ ಇನ್ನೂ ಬೆಂಗಳೂರಿನಲ್ಲಿ ಪಂದ್ಯ ಗೆದ್ದಿಲ್ಲ, ಆದ್ರೆ ಪ್ರದರ್ಶನ ನೋಡಿದ್ರೆ ಈ ಬಾರಿ ಆರ್‌ಸಿಬಿ ಕಪ್ ಗೆಲ್ಲುವ ನಿರೀಕ್ಷೆ ಇದ್ದೇ ಇದೆ. ಇವತ್ತಿನ ಮ್ಯಾಚ್‌ ಗೆ ಆಲ್ ದಿ ಬೆಸ್ಟ್ ಹೇಳುವೆ, ನಾನು ಪಂಜಾಬ್ ಹಾಗೂ ಬೆಂಗಳೂರು ಎರಡೂ ತಂಡದಲ್ಲಿ ಇದ್ದೆ. ಅದೇ ಸಮಸ್ಯೆ ನನಗೆ ಎಂದು ಮುಗುಳುನಕ್ಕರು. ಇದನ್ನೂ ಓದಿ: ಲೇಸರ್‌ ಲೈಟ್‌ ಎಫೆಕ್ಟ್‌, ಪಾಟ್ನಾ ಏರ್‌ಪೋರ್ಟ್‌ನಲ್ಲಿ ತಪ್ಪಿತು ದುರಂತ – ಪೈಲಟ್‌ ಸಾಹಸದಿಂದ ಉಳಿಯಿತು ನೂರಾರು ಜೀವ

  • ಎಸ್‌ಎಂಕೆ ಅಂತಿಮ ದರ್ಶನ ಪಡೆದ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ

    ಎಸ್‌ಎಂಕೆ ಅಂತಿಮ ದರ್ಶನ ಪಡೆದ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ

    ಬೆಂಗಳೂರು: ಟೀಂ ಇಂಡಿಯಾದ (Team India) ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ (Anil Kumble) ಅವರಿಂದು ಬೆಂಗಳೂರು ಸದಾಶಿವ ನಗರದ ಎಸ್‌ಎಂ ಕೃಷ್ಣ (SM Krishna) ನಿವಾಸಕ್ಕೆ ಆಗಮಿಸಿ ಎಸ್‌ಎಂಕೆಗೆ ಅಂತಿಮ ನಮನ ಸಲ್ಲಿಸಿದರು.

    ಬಳಿಕ ಮಾತನಾಡಿದ ಅವರು, ಕರ್ನಾಟಕಕ್ಕೆ ಅವರ ಕೊಡುಗೆ ಅಪಾರವಾಗಿದೆ. ಬೆಂಗಳೂರು, ಕರ್ನಾಟಕದ ಅಭಿವೃದ್ಧಿಗೆ ಅವರ ಕೊಡುಗೆ ಸಾಕಷ್ಟಿದೆ. ಜೊತೆಗೆ ಕ್ರೀಡೆಗೂ ತುಂಬಾ ಪ್ರೋತಾಹ ನೀಡುತ್ತಿದ್ದರು ಎಂದರು.ಇದನ್ನೂ ಓದಿ: 1,000 ಕೆಜಿ ಗಂಧದ ಕಟ್ಟಿಗೆಯಲ್ಲಿ ಎಸ್‌ಎಂ ಕೃಷ್ಣ ಅಂತ್ಯಸಂಸ್ಕಾರ: ಗಣಿಗ ರವಿ

    ಎಸ್‌ಎಂ ಕೃಷ್ಣ ಅವರ ಅಗಲಿಕೆ ರಾಜ್ಯಕ್ಕೆ ದು:ಖಕರವಾದ ಸಂಗತಿ. ನಾವೆಲ್ಲ ಕುಟುಂಬದ ರೀತಿ ಇದ್ದೇವು ಎಂದು ಸ್ಮರಿಸಿದರು.

    ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಕೇಂದ್ರ ವಿದೇಶಾಂಗ ಸಚಿವ ಎಸ್‌ಎಂ ಕೃಷ್ಣ ಅವರಿಂದು (ಡಿ.10) ಬೆಳಗಿನ ಜಾವ ವಿಧಿವಶರಾದರು.ಇದನ್ನೂ ಓದಿ: ಹೈಟೆಕ್‌ ಜಿಮ್‌, ಸ್ಪಾ – ದೆಹಲಿ ಸಿಎಂ ನಿವಾಸ ʻಶೇಶ್‌ ಮಹಲ್‌ʼ ವೀಡಿಯೋ ಹರಿಬಿಟ್ಟ ಬಿಜೆಪಿ!

  • ಕುಟುಂಬದೊಂದಿಗೆ ವಿದ್ಯಾರ್ಥಿ ಭವನಕ್ಕೆ ಆಗಮಿಸಿ ದೋಸೆ ಸವಿದ ಕುಂಬ್ಳೆ

    ಕುಟುಂಬದೊಂದಿಗೆ ವಿದ್ಯಾರ್ಥಿ ಭವನಕ್ಕೆ ಆಗಮಿಸಿ ದೋಸೆ ಸವಿದ ಕುಂಬ್ಳೆ

    ಬೆಂಗಳೂರು: ಗಾಂಧೀ ಬಜಾರ್‌ನಲ್ಲಿರುವ ಪ್ರಸಿದ್ಧ ವಿದ್ಯಾರ್ಥಿ ಭವನ (Vidyarthi Bhavan) ಹೋಟೆಲಿಗೆ ಟೀಂ ಇಂಡಿಯಾ ಮಾಜಿ ನಾಯಕ, ಸ್ಪಿನ್‌ ಬೌಲರ್‌ ಅನಿಲ್‌ ಕುಂಬ್ಳೆ (Anil Kumble) ಭೇಟಿ ನೀಡಿದ್ದಾರೆ.

    ತಮ್ಮ ಕುಟುಂಬ ಸದಸ್ಯರ ಜೊತೆ ಭೇಟಿ ನೀಡಿದ ಕುಂಬ್ಳೆ ವಿದ್ಯಾರ್ಥಿ ಭವನದ ಫೇಮಸ್‌ ಮಸಾಲೆ ದೋಸೆಯನ್ನು (Masala Dosa) ಸವಿದಿದ್ದಾರೆ. ಇದನ್ನೂ ಓದಿ: ಕದ್ದ ಬೈಕ್‍ಗಳನ್ನು ಮೆಜೆಸ್ಟಿಕ್‍ನಲ್ಲಿ ಪಾರ್ಕ್ ಮಾಡಿ ಪರಾರಿ

    ಕುಂಬ್ಳೆ ಬಂದ ವಿಚಾರವನ್ನು ವಿದ್ಯಾರ್ಥಿ ಭವನ ಎಕ್ಸ್‌ನಲ್ಲಿ ತಿಳಿಸಿದ್ದು, ಇಂದು ವಿದ್ಯಾರ್ಥಿ ಭವನದಲ್ಲಿ ಸುಂದರ ಜೋಡಿಯನ್ನು ನೋಡಿ ಸಂತೋಷವಾಯಿತು ಎಂದು ಹೇಳಿದೆ.

    ಬೆಂಗಳೂರಿನ ಗಾಂಧೀ ಬಜಾರ್ ಬಡಾವಣೆಯಲ್ಲಿರುವ ವಿದ್ಯಾರ್ಥಿ ಭವನ 70 ವರ್ಷಕ್ಕಿಂತ ಹಳೆಯದಾದ ಸಸ್ಯಾಹಾರಿ ಹೋಟೆಲ್‌ ಆಗಿದ್ದು ಈಗಲೂ ಜನಪ್ರಿಯತೆ ಮತ್ತು ಗುಣಮಟ್ಟವನ್ನು ಉಳಿಸಿಕೊಂಡು ಬಂದಿದೆ. ಭಾರತ ಸೇರಿದಂತೆ ವಿದೇಶದ ಹಲವು ಗಣ್ಯರು ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿ ಆಹಾರ ಸೇವಿಸುತ್ತಾರೆ.

     

  • ಬೆಂಗ್ಳೂರಿನಲ್ಲಿ ಮತ ಚಲಾಯಿಸಿದ ಟೀಂ ಇಂಡಿಯಾ ಮುಖ್ಯಕೋಚ್‌ – ಮತದಾನಕ್ಕೆ ಕರೆ ಕೊಟ್ಟ ಮಾಜಿ ಕ್ರಿಕೆಟರ್ಸ್‌!

    ಬೆಂಗ್ಳೂರಿನಲ್ಲಿ ಮತ ಚಲಾಯಿಸಿದ ಟೀಂ ಇಂಡಿಯಾ ಮುಖ್ಯಕೋಚ್‌ – ಮತದಾನಕ್ಕೆ ಕರೆ ಕೊಟ್ಟ ಮಾಜಿ ಕ್ರಿಕೆಟರ್ಸ್‌!

    ಬೆಂಗಳೂರು: ಕರ್ನಾಟಕದಲ್ಲಿಂದು ಮೊದಲ ಹಂತದ ಮತದಾನ ಯಶಸ್ವಿಯಾಗಿ ಸಾಗುತ್ತಿದೆ. ಬೆಂಗಳೂರಿನ 4 ಕ್ಷೇತ್ರ ಹೊರತುಪಡಿಸಿ ಉಳಿದ 10 ಕ್ಷೇತ್ರಗಳಲ್ಲಿ ಜನರು ಉತ್ಸಾಹದಿಂದಲೇ ಮತ ಹಾಕುತ್ತಿದ್ದಾರೆ. ಇದರೊಂದಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗರೂ (Cricketers) ಸಹ ಸರತಿ ಸಾಲಿನಲ್ಲಿ ಸಾಮಾನ್ಯರೊಂದಿಗೆ ನಿಂತು ತಮ್ಮ ಹಕ್ಕು ಚಲಾಯಿಸಿದ್ದಾರೆ.

    ಬೆಂಗಳೂರಿನ ಪದ್ಮನಾಭನಗರದ ಕೆಂಪೇಗೌಡ ಮೆಡಿಕಲ್ ಕಾಲೇಜಿನ ಮತಗಟ್ಟೆಯಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ (Anil Kumble) ಅವರು ತಮ್ಮ ಕುಟುಂಬದೊಂದಿಗೆ ಮತ ಚಲಾಯಿಸಿ ಯುವ ಜನತೆಗೆ ಮತ ಚಲಾಯಿಸುವಂತೆ ಕರೆ ನೀಡಿದ್ದಾರೆ. ಅಲ್ಲದೇ ಬೆಂಗಳೂರಿನ ಡಾಲರ್ಸ್‌ ಕಾಲೋನಿ ಮತಟ್ಟೆಯಲ್ಲಿ ಎಲ್ಲರೊಂದಿಗೆ ಸಾಲಿನಲ್ಲಿ ನಿಂತು ಮತ ಹಾಕಿದ ಟೀಂ ಇಂಡಿಯಾ ಮುಖ್ಯಕೋಚ್‌ ರಾಹುಲ್‌ ದ್ರಾವಿಡ್‌ (Rahul Dravid) ಅವರು ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಮುಂದೆ ಬಂದು ಮತ ಚಲಾಯಿಸಬೇಕೆಂದು ಕರೆ ಕೊಟ್ಟಿದ್ದಾರೆ.

    ಮೈಸೂರು ಕೊಡಗು ಲೋಕಸಭಾ ಚುನಾವಣೆಯ ಚುನಾವಣೆ ರಾಯಭಾರಿಯಾಗಿರುವ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರು ನಗರದ ಜ್ಞಾನ ಗಂಗಾ ಪಿಯು ಕಾಲೇಜಿನಲ್ಲಿ ಮತದಾನ ಮಾಡಿದ್ದಾರೆ. ಇದನ್ನೂ ಓದಿ: Olympic 2024: ಕ್ರೀಡೆಗಳ ಮಹಾಸಂಗಮಕ್ಕೆ ಕೆಲವೇ ದಿನ ಬಾಕಿ – ಕೈಬೀಸಿ ಕರೆಯುತ್ತಿದೆ ಪ್ಯಾರಿಸ್‌!

    ಎಲ್ಲಿ- ಎಷ್ಟು ಮತದಾನ?
    ಕರ್ನಾಟಕದಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ 50.93% ಮತದಾನ ನಡೆದಿದೆ. ಬೆಂಗಳೂರಿನ 4 ಕ್ಷೇತ್ರ ಹೊರತು ಪಡಿಸಿದ ಉಳಿದ ಎಲ್ಲಾ ಕ್ಷೇತ್ರಗಳಲ್ಲಿ ಮತದಾನ 50% ಗಡಿ ದಾಟಿದೆ. ಇದನ್ನೂ ಓದಿ:  ಮತ್ತೆ ಕಳಪೆ ಸ್ಟ್ರೈಕ್‌ರೇಟ್‌ ಮುಂದುವರಿಸಿದ ಕೊಹ್ಲಿ – ಹಿರಿಯ ಕ್ರಿಕೆಟಿಗರಿಂದ ವ್ಯಾಪಕ ಟೀಕೆ

    ಬೆಂಗಳೂರು ಗ್ರಾಮೀಣ 49.62%, ಬೆಂಗಳೂರು ಉತ್ತರ 41.12%, ಬೆಂಗಳೂರು ಕೇಂದ್ರ 40.10%, ಬೆಂಗಳೂರು ದಕ್ಷಿಣ 40.77% ಮತದಾನ ದಾಖಲಾಗಿದೆ. ದಕ್ಷಿಣ ಕನ್ನಡದಲ್ಲಿ 58.76%, ಉಡುಪಿ- ಚಿಕ್ಕಮಗಳೂರು 57.49% ಮತದಾನ ನಡೆದಿದೆ. ಆರಂಭದಿಂದಲೂ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಭರ್ಜರಿ ಮತದಾನ ನಡೆಯುತ್ತಿದೆ. ಮಧ್ಯಾಹ್ನವಾದ ಕಾರಣ ಮತಗಟ್ಟೆಗೆ ಕಡಿಮೆ ಸಂಖ್ಯೆಯಲ್ಲಿ ಮತದಾರರು ಆಗಮಿಸಿದ್ದು, ಸಂಜೆ ಮತದಾನ ಮತ್ತಷ್ಟು ಬಿರುಸುಗೊಳ್ಳುವ ಸಾಧ್ಯತೆಯಿದೆ.

  • ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಶ್ವಿನ್‌ ಕಮಾಲ್‌ – ಕುಂಬ್ಳೆ ದಾಖಲೆ ಅಳಿಸಿ ಅಗ್ರಸ್ಥಾನಕ್ಕೇರಿದ ಸ್ಪಿನ್‌ ಮಾಂತ್ರಿಕ

    ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಶ್ವಿನ್‌ ಕಮಾಲ್‌ – ಕುಂಬ್ಳೆ ದಾಖಲೆ ಅಳಿಸಿ ಅಗ್ರಸ್ಥಾನಕ್ಕೇರಿದ ಸ್ಪಿನ್‌ ಮಾಂತ್ರಿಕ

    ರಾಂಚಿ: ಇಲ್ಲಿನ JSCA ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್‌ನ 3ನೇ ದಿನದಾಟದಲ್ಲಿ ಟೀಂ ಇಂಡಿಯಾದ ಆಫ್‌ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ (Ashwin) ಟೆಸ್ಟ್‌ ಕ್ರಿಕೆಟ್‌ನಲ್ಲಿ (Test Cricket) ಭಾರತದಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.

    3ನೇ ದಿನದ ಆಟದಲ್ಲಿ ಇಂಗ್ಲೆಂಡ್‌ (England) ಅಗ್ರ ಕ್ರಮಾಂಕದ ಬ್ಯಾಟರ್‌ಗಳಾದ ಬೆನ್‌ ಡಕೆಟ್‌, ಓಲಿ ಪೋಪ್‌, ಜೋ ರೂಟ್‌ ಅವರನ್ನು ಔಟ್‌ ಮಾಡುವ ಮೂಲಕ ಟೆಸ್ಟ್‌ನಲ್ಲಿ ಭಾರತದಲ್ಲಿ ಅತಿಹೆಚ್ಚು ವಿಕೆಟ್‌ ಪಡೆದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಭಾರತದಲ್ಲಿ ನಡೆದ ಟೆಸ್ಟ್‌ ಪಂದ್ಯಗಳಲ್ಲಿ 351 ವಿಕೆಟ್‌ ಪಡೆದಿರುವ ಅಶ್ವಿನ್‌ 350 ವಿಕೆಟ್‌ ಪಡೆದ ಅಗ್ರಸ್ಥಾನದಲ್ಲಿದ್ದ ಅನಿಲ್‌ ಕುಂಬ್ಳೆ (Anil Kumble) ಅವರ ದಾಖಲೆಯನ್ನು ಅಳಿಸಿಹಾಕಿದ್ದಾರೆ. ಇದನ್ನೂ ಓದಿ: WPL 2024: 2 ರನ್‌ಗಳ ರೋಚಕ ಜಯ – ಮೊದಲ ಗೆಲುವನ್ನು ಅಭಿಮಾನಿ ದೇವ್ರುಗಳಿಗೆ ಅರ್ಪಿಸಿದ ‌RCB

    ಟೀಂ ಇಂಡಿಯಾದ ಬೌಲಿಂಗ್‌ ದಿಗ್ಗಜ ಅನಿಲ್‌ ಕುಂಬ್ಳೆ ಭಾರತದಲ್ಲಿ ಆಡಿದ 63 ಪಂದ್ಯಗಳಲ್ಲಿ 24.88 ಸರಾಸರಿಯಲ್ಲಿ 350 ವಿಕೆಟ್‌ಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದರು. ಆದ್ರೆ ಅಶ್ವಿನ್‌ ಸ್ವದೇಶದಲ್ಲಿ ಆಡಿದ 59 ಪಂದ್ಯಗಳಲ್ಲಿ 21.40 ಸರಾಸರಿಯಲ್ಲಿ 351 ವಿಕೆಟ್‌ ಪಡೆದು ಅಗ್ರಸ್ಥಾನ ತಲುಪಿದ್ದಾರೆ. ಇದೊಂದಿಗೆ ಎರಡು ಪ್ರತ್ಯೇಕ ದೇಶಗಳ ವಿರುದ್ಧ ನಡೆದ ಪಂದ್ಯಗಳಲ್ಲಿ 100ಕ್ಕೂ ಹೆಚ್ಚು ವಿಕೆಟ್‌ ಪಡೆದ ಮೊದಲ ಭಾರತೀಯ ಎನಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆದ 22 ಪಂದ್ಯಗಳಲ್ಲಿ 114 ವಿಕೆಟ್‌, ಇಂಗ್ಲೆಂಡ್‌ ವಿರುದ್ಧ ನಡೆದ 23 ಪಂದ್ಯಗಳಲ್ಲಿ 102 ವಿಕೆಟ್‌ ಪಡೆದು ಅಶ್ವಿನ್‌ ಈ ಸಾಧನೆ ಮಾಡಿದ್ದಾರೆ. ಇದನ್ನೂ ಓದಿ: ಬಶೀರ್‌ ಸ್ಪಿನ್‌ ದಾಳಿಗೆ ಭಾರತ ಕಂಗಾಲು – ಇಂಗ್ಲೆಂಡ್‌ಗೆ 134 ರನ್‌ಗಳ ಮುನ್ನಡೆ

    ಟೆಸ್ಟ್‌ನಲ್ಲಿ ಭಾರತದಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಸ್ಪಿನ್ನರ್ಸ್‌:

    • ಆರ್. ಅಶ್ವಿನ್ – 351*
    • ಅನಿಲ್ ಕುಂಬ್ಳೆ – 350
    • ಹರ್ಭಜನ್ ಸಿಂಗ್ – 265
    • ಕಪಿಲ್ ದೇವ್ – 219
    • ರವೀಂದ್ರ ಜಡೇಜಾ – 210*

    ಪ್ರತ್ಯೇಕ ದೇಶಗಳ ವಿರುದ್ಧ 100+ ವಿಕೆಟ್‌ ಪಡೆದ ಮೊದಲ ಭಾರತೀಯ ಅಶ್ವಿನ್‌:

    • ಆರ್‌.ಅಶ್ವಿನ್‌ – ಆಸ್ಟ್ರೇಲಿಯಾ ವಿರುದ್ಧ – 22 ಪಂದ್ಯ – 114 ವಿಕೆಟ್‌
    • ಅನಿಲ್‌ ಕುಂಬ್ಳೆ – ಆಸ್ಟ್ರೇಲಿಯಾ ವಿರುದ್ಧ – 20 ಪಂದ್ಯ – 111 ವಿಕೆಟ್‌
    • ಆರ್‌.ಅಶ್ವಿನ್‌ – ಇಂಗ್ಲೆಂಡ್‌ ವಿರುದ್ಧ – 23 ಪಂದ್ಯ – 102 ವಿಕೆಟ್‌
    • ಕಪಿಲ್‌ ದೇವ್‌ – ಪಾಕಿಸ್ತಾನ ವಿರುದ್ಧ – 29 ಪಂದ್ಯ – 99 ವಿಕೆಟ್‌

  • IND vs ENG, 1st Test: ಕುಂಬ್ಳೆ-ಹರ್ಭಜನ್‌ ದಾಖಲೆ ಉಡೀಸ್‌ ಮಾಡಿದ ಜಡೇಜಾ-ಅಶ್ವಿನ್‌ ಜೋಡಿ

    IND vs ENG, 1st Test: ಕುಂಬ್ಳೆ-ಹರ್ಭಜನ್‌ ದಾಖಲೆ ಉಡೀಸ್‌ ಮಾಡಿದ ಜಡೇಜಾ-ಅಶ್ವಿನ್‌ ಜೋಡಿ

    ಹೈದರಾಬಾದ್: ಗುರುವಾರ ಹೈದರಾಬಾದ್‌ನಲ್ಲಿ (Hyderabad) ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ಸ್ಪಿನ್ನರ್‌ಗಳಾದ ಆರ್. ಅಶ್ವಿನ್ (R.Ashwin) ಮತ್ತು ರವೀಂದ್ರ ಜಡೇಜಾ (Ravindra Jadeja) ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ಬೌಲಿಂಗ್ ಜೋಡಿ ಎನಿಸಿಕೊಂಡಿದ್ದಾರೆ.

    ಈ ಜೋಡಿ 54 ಪಂದ್ಯಗಳಲ್ಲಿ 501 ವಿಕೆಟ್‌ಗಳನ್ನು ಗಳಿಸಿದ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಅವರ ದಾಖಲೆ ಮುರಿದು 504 ವಿಕೆಟ್‌ಗಳನ್ನು ಪಡೆದಿದೆ. ಇದನ್ನೂ ಓದಿ: ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ಬೆಚ್ಚಿದ ಆಂಗ್ಲ ಪಡೆ – ಮೊದಲ ದಿನದಾಟದಲ್ಲೇ 246 ರನ್‍ಗೆ ಆಲೌಟ್‌ !

    138 ಟೆಸ್ಟ್ ಪಂದ್ಯಗಳಲ್ಲಿ 1,039 ವಿಕೆಟ್‌ಗಳನ್ನು ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಜೋಡಿ ಕಬಳಿಸಿದೆ. ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆಯನ್ನು ಈ ಜೋಡಿ ಬರೆದಿದೆ. ಮಿಚೆಲ್ ಸ್ಟಾರ್ಕ್ ಮತ್ತು ನಾಥನ್ ಲಿಯಾನ್ 81 ಟೆಸ್ಟ್‌ಗಳಲ್ಲಿ 643 ವಿಕೆಟ್‌ಗಳನ್ನು ಪಡೆದು ದಾಖಲೆಯಲ್ಲಿ ನಂತರದ ಸ್ಥಾನದಲ್ಲಿದ್ದಾರೆ.

    ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದಿನಿಂದ ಆರಂಭಗೊಂಡ ಟೀಂ ಇಂಡಿಯಾ (Team India) ಹಾಗೂ ಇಂಗ್ಲೆಂಡ್ (England) ವಿರುದ್ಧದ ಮೊದಲ ಟೆಸ್ಟ್ ಪಂದ್ಯದ (IND vs ENG 1st Test) ಮೊದಲ ಇನ್ನಿಂಗ್ಸ್‌ನ 64.3 ಓವರ್‌ಗಳಲ್ಲಿ 246 ರನ್‍ಗಳಿಗೆ ಪ್ರವಾಸಿ ತಂಡ ಸರ್ವಪತನ ಕಂಡಿದೆ. ಇದನ್ನೂ ಓದಿ: ಬಾಕ್ಸಿಂಗ್‌ಗೆ ಮೇರಿಕೋಮ್‌ ನಿವೃತ್ತಿ ಘೋಷಣೆ

    ಟೆಸ್ಟ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಭಾರತದ ಬೌಲಿಂಗ್‌ ಜೋಡಿ
    ಅಶ್ವಿನ್/ಜಡೇಜಾ – 504 ವಿಕೆಟ್
    ಕುಂಬ್ಳೆ/ಹರ್ಭಜನ್ – 501
    ಜಹೀರ್/ ಹರ್ಭಜನ್ – 474
    ಅಶ್ವಿನ್/ ಉಮೇಶ್ – 431
    ಕುಂಬ್ಳೆ/ ಶ್ರೀನಾಥ್ – 412