ಬಾಕ್ಸ್ ಆಫೀಸಿನಲ್ಲಿ ಅನಿಮಲ್ (Animal) ಸಿನಿಮಾ ಕೋಟಿ ಕೋಟಿ ಬಾಚುತ್ತಿದ್ದಂತೆಯೇ ರಶ್ಮಿಕಾ (Rashmika Mandanna) ಖದರ್ ಬದಲಾಗಿ ಬಿಟ್ಟಿದೆ. ರಶ್ಮಿಕಾ ಮತ್ತು ರಣಬೀರ್ ಕಪೂರ್ ಜೋಡಿಯ ಕುರಿತಂತೆ ಸಾಕಷ್ಟು ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ಈ ಹೊಗಳಿಕೆಯ ಬೆನ್ನಲ್ಲೇ ಪುಷ್ಪ 2 ಕಥೆಯಲ್ಲಿ ಒಂದಷ್ಟು ಬದಲಾವಣೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಪುಷ್ಪ 2 ಸಿನಿಮಾದ ಸ್ಟೋರಿಯಲ್ಲಿ ರಶ್ಮಿಕಾಗೆ ಕಡಿಮೆ ದೃಶ್ಯಗಳು ಇದ್ದವಂತೆ. ಅವುಗಳನ್ನು ಈಗ ಹೆಚ್ಚಿಸಲಾಗಿದೆ ಎನ್ನುವುದು ಲೆಟೆಸ್ಟ್ ಸಮಾಚಾರ.

ಇದರ ಜೊತೆಗೆ ಪುಷ್ಪ ಸಿನಿಮಾದ ‘ವೂಂ ಅಂಟಾವ ಮಾವ..’ ಹಾಡಿ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು. ಈ ಹಾಡೇ ಪಷ್ಪ ಸಿನಿಮಾಗೆ ಜನರನ್ನೂ ಕರೆತಂದಿದ್ದು. ಸೋಷಿಯಲ್ ಮೀಡಿಯಾದಲ್ಲಂತೂ ಕೋಟ್ಯಂತರ ಜನರು ರೀಲ್ಸ್ ಮಾಡಿದ್ದರು. ಈ ಹಾಡಿಗೆ ಸಮಂತಾ (Samantha) ಸಖತ್ತಾಗಿಯೇ ಸೊಂಟ ಬಳುಕಿಸಿದ್ದರು. ಈ ಯಶಸ್ಸನ್ನು ಮತ್ತೊಂದು ಬಾರಿ ಬಳಸಿಕೊಳ್ಳಲು ನಿರ್ದೇಶಕರು ಪ್ಲ್ಯಾನ್ ಮಾಡಿದ್ದಾರೆ. ಪುಷ್ಪ 2 ಸಿನಿಮಾದಲ್ಲೂ ಐಟಂ ಸಾಂಗ್ (Item Song) ವೊಂದಿದ್ದು, ಅದಕ್ಕೆ ಸಮಂತಾ ಅವರೇ ಡ್ಯಾನ್ಸ್ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಡಾನ್ಸ್ ಮಾಸ್ಟರ್ ಮತ್ತು ನಿರ್ದೇಶಕರು ಸಮಂತಾ ಜೊತೆ ಒಂದು ಸುತ್ತಿನ ಮಾತುಕತೆ ಕೂಡ ನಡೆಸಿದ್ದಾರೆ. ಸಮಂತಾ ಕೂಡ ಆ ಹಾಡಿನಲ್ಲಿ ಭಾಗಿಯಾಗಲು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯದಲ್ಲೇ ಶೂಟಿಂಗ್ ಕೂಡ ಶುರು ಮಾಡಲಿದ್ದಾರಂತೆ ಸಮಂತ.
ನಿರ್ದೇಶಕ ಸುಕುಮಾರ್- ಐಕಾನ್ ಸ್ಟಾರ್ ಅಲ್ಲು ಅರ್ಜುನ್ (Allu Arjun) ಮತ್ತೊಮ್ಮೆ ಬಾಕ್ಸಾಫೀಸ್ ಬ್ಯಾಂಗ್ ಮಾಡೋದಿಕ್ಕೆ ಭರ್ಜರಿಯಾಗಿ ಸಜ್ಜಾಗ್ತಿದ್ದಾರೆ. ಪುಷ್ಪ ಮೂಲಕ ದಕ್ಷಿಣ ಧ್ರುವದಿಂದ ಉತ್ತರ ಧ್ರುವದವರೆಗೂ ಧಮಾಕ ಎಬ್ಬಿಸಿದ್ದ ಈ ಜೋಡಿ ಸೀಕ್ವೆಲ್ ಮೂಲಕ ಬೆಳ್ಳಿತೆರೆಯಲ್ಲಿ ಕಮಾಲ್ ಮಾಡಲು ಹೊರಟಿದೆ. ಪುಷ್ಪ 2 (Pushpa 2) ಸಣ್ಣ ಟೀಸರ್ ಹಂಗಾಮ ಕ್ರಿಯೇಟ್ ಮಾಡಿದೆ. ಕಾಣೆಯಾಗಿದ್ದ ಪುಷ್ಪ ಹೊಸ ಅವತಾರದಲ್ಲಿ ಪ್ರತ್ಯಕ್ಷನಾಗುವ ಮೂಲಕ ಇನ್ಮುಂದೆ ನನ್ನಂದೇ ರೂಲ್ ಎಂಬ ಸಂದೇಶ ರವಾನಿಸಿದ್ದಾನೆ. ಪುಷ್ಪ ಸೀಕ್ವೆಲ್ ಎಂಟ್ರಿ ಯಾವಾಗ ಎನ್ನುತ್ತಿದ್ದ ಫ್ಯಾನ್ಸ್‌ಗೆ ಚಿತ್ರತಂಡ ಸರ್ಪ್ರೈಸ್ ನೀಡಿದೆ.










ರಶ್ಮಿಕಾ ಬಾಲಿವುಡ್‌ಗೆ ಕಾಲಿಟ್ಟು ಹಲವು ವರ್ಷ ಕಳೆದಿದೆ. ‘ಮಿಷನ್ ಮಜ್ನೂ’ ಹಾಗೂ ‘ಗುಡ್‌ಬೈ’ ಸಿನಿಮಾ ಬಂದಿತ್ತು. ಅಷ್ಟೇ ಬೇಗ ಸಿನಿಮಾ ಮಕಾಡೆ ಮಲಗಿತ್ತು. ರಶ್ಮಿಕಾ ಸುದ್ದಿಯಾದರು. ಆದರೆ ಸದ್ದು ಮಾಡಲಿಲ್ಲ. ಕಾರಣ ಅದರಲ್ಲಿ ಇದ್ದದ್ದೇ ಅಷ್ಟು ಅವಕಾಶ. ಅಷ್ಟೇ ಪಾತ್ರ. ಇನ್ನೇನು ಮಾಡೋಕಾಗುತ್ತೆ? ಸಾನ್ವಿ ಸೈಲೆಂಟ್ ಸುನಾಮಿಯಂತಿದ್ದರು. ಆದರೆ ‘ಅನಿಮಲ್’ ಸಿನಿಮಾ ನೋಡಿದವರು ಮಾತ್ರ, ದಿಸ್ ಈಸ್ ಕ್ರಶ್ಮಿಕಾ ಪಕ್ಕಾ ರಶ್ಮಿಕಾ. ರಿಯಲ್ ಟ್ಯಾಲೆಂಟೆಡ್ ಗರ್ಲ್ ಹೀಗೆ ಶಹಬ್ಬಾಶ್‌ಗಿರಿ ಕೊಡುತ್ತಿದ್ದಾರೆ. ರಣ್‌ಬೀರ್ ಪತ್ನಿ ಆಲಿಯಾ ಭಟ್ (Aliaa Bhatt) ಕೂಡ ಶ್ರೀವಲ್ಲಿ ನಟನೆ ನೋಡಿ ಬೆರಗಾಗಿದ್ದಾರೆ. ರಶ್ಮಿಕಾ ಮಂದಣ್ಣಗೆ ಭೇಷ್ ಎಂದಿದ್ದಾರೆ.
ಸ್ಯಾಂಡಲ್‌ವುಡ್, ಕಾಲಿವುಡ್, ಟಾಲಿವುಡ್‌ನಿಂದ ನೇರ ಬಾಲಿವುಡ್‌ಗೆ ಹೋದ ಹುಡುಗಿಗೆ ಗೆಲುವು ದಕ್ಕಿರಲಿಲ್ಲ. ಈಗ ಒಂದೇ ಸಲಕ್ಕೆ ಜಾಕ್‌ಪಾಟ್ ಹೊಡೆದಿದೆ. ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ರಣಬೀರ್ (Ranbir Kapoor) ಹೀರೋ ಬಂಪರ್ ಹಿಟ್. ‘ಕಿರಿಕ್ ಪಾರ್ಟಿ’ ಸಾನ್ವಿ ಈಗ ಅನಿಮಲ್ ಗೀತಾಂಜಲಿ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಇದನ್ನೂ ಓದಿ:



ಟ್ರೈಲರ್ ನೋಡಿದ ಪ್ರೇಕ್ಷಕರು ಕೂಡ ಈ ಚಿತ್ರದ ಸೂಪರ್ ಹಿಟ್ ಆಗುತ್ತೆ ಎಂದೆಲ್ಲಾ ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ. ಅಂದಹಾಗೆ ರಣ್‌ಬೀರ್‌ಗೆ ನಾಯಕಿಯಾಗಿ ಕೊಡಗಿನ ಚೆಲುವೆ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಅನಿಮಲ್ ಟ್ರೈಲರ್ ಪ್ರಭಾಸ್ (Prabhas) ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:
ಅರ್ಜುನ್ ರೆಡ್ಡಿ, ಕಬೀರ್ ಸಿಂಗ್ ಚಿತ್ರಗಳನ್ನ ಹಿಟ್ ಕೊಟ್ಟ ಸಂದೀಪ್ ರೆಡ್ಡಿ ವಂಗಾ ಅವರು ಅನಿಮಲ್‌ಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ರಿಲೀಸ್ ಬಳಿಕ ಪ್ರಭಾಸ್ ಜೊತೆ ‘ಸ್ಪಿರಿಟ್’ ಎಂಬ ಸಿನಿಮಾ ಮಾಡಲಿದ್ದಾರೆ.




