ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ (Rashmika Mandanna) ಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಚಿತ್ರರಂಗದಲ್ಲಿ ಬೇರೆ ಯಾವುದೇ ನಟಿ ಮಾಡಿರದ ಸಾಧನೆಯನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳ ಸಕ್ಸಸ್‌ನಿಂದ ಗಲ್ಲಾಪೆಟ್ಟಿಗೆಯಲ್ಲಿ 500 ಕೋಟಿ ಕಲೆಕ್ಷನ್ ಮಾಡಿ ದಾಖಲೆ ಬರೆದಿದ್ದಾರೆ. ಇದನ್ನೂ ಓದಿ:ಈಗಲೂ ರಶ್ಮಿಕಾ ಕರ್ನಾಟಕದ ಪರ ಇದ್ದೀನಿ ಅಂದ್ರೆ ನಾನು ತುಟಿ ಬಿಚ್ಚಲ್ಲ: ಶಾಸಕ ರವಿ ಗಣಿಗ ಕಿಡಿ
ರಶ್ಮಿಕಾ ಮಂದಣ್ಣ ಹೀರೋಗಳ ಪಾಲಿಗೆ ಲಕ್ಕಿ ನಟಿ ಎಂಬುದು ಮತ್ತೆ ಪ್ರೂವ್ ಆಗಿದೆ. ಅವರು ಸಿನಿಮಾದಲ್ಲಿ ನಟಿಸುತ್ತಾರೆ ಎಂದರೆ ಆ ಚಿತ್ರ ಹಿಟ್ ಎಂದೇ ಅರ್ಥ. ಇದೀಗ ಅವರು ನಟಿಸಿರುವ ಸತತ 3 ಸಿನಿಮಾಗಳು 500 ಕೋಟಿ ರೂ. ಕ್ಲಬ್ ಮಾಡಿದೆ. ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳ ಹಿಟ್ ಮೂಲಕ ಸಕ್ಸಸ್‌ಫುಲ್ ನಟಿಯಾಗಿದ್ದಾರೆ.
ಹಿಂದಿ ವರ್ಷನ್‌ನಲ್ಲಿ ರಣ್‌ಬೀರ್ ಕಪೂರ್ ಜೊತೆಗಿನ ‘ಅನಿಮಲ್’ (Animal) 556.36 ಕೋಟಿ ರೂ, ಅಲ್ಲು ಅರ್ಜುನ್ ಜೊತೆಗಿನ ‘ಪುಷ್ಪ 2’ (Pushpa 2) 830 ಕೋಟಿ ರೂ, ವಿಕ್ಕಿ ಕೌಶಲ್ ಜೊತೆಗಿನ ‘ಛಾವಾ’ (Chhaava) 516 ಕೋಟಿ ರೂ. ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇದುವರೆಗೂ ಬೇರೆ ಯಾವುದೇ ನಟಿ ಮಾಡಿರದ ಸಾಧನೆಯನ್ನು ರಶ್ಮಿಕಾ ಮಾಡಿದ್ದಾರೆ.
ಬಾಲಿವುಡ್ ಅಷ್ಟೇ ಅಲ್ಲ ದೇಶ ವಿದೇಶದಲ್ಲೂ ತೆರೆಕಂಡು ಗಲ್ಲಾಪೆಟ್ಟಿಗೆಯಲ್ಲಿ ಸೌಂಡ್ ಮಾಡಿದ ‘ಧೂಮ್ ಸಿರೀಸ್ ಪಾರ್ಟ್-4’ (Dhoom 4) ಯಾವಾಗ ಅನೌನ್ಸ್ ಆಗುತ್ತೆ, ಸಿನಿಮಾದ ಹೀರೋ ಯಾರಾಗ್ತಾರೆ ಅಂತಾ ಕಾಯ್ತಿದ್ದ ಫ್ಯಾನ್ಸ್ ಸಂಭ್ರಮಪಡುವ ಸುದ್ದಿಯೊಂದು ಸಿಕ್ಕಿದೆ. ಇನ್ನೊಂದು ವಿಶೇಷ ಅಂದರೆ, ನಟ ರಣಬೀರ್ ಕಪೂರ್ (Ranbir Kapoor) ಹುಟ್ಟುಹಬ್ಬದ ದಿನವೇ (ಸೆ.28) ಈ ಗುಡ್ ನ್ಯೂಸ್ ಸಿಕ್ಕಿರೋದು ಅಭಿಮಾನಿಗಳಿಗೆ ಡಬಲ್ ಧಮಾಕ.
ವೆರಿ ಸಕ್ಸಸ್‌ಫುಲ್ ಧೂಮ್ ಸಿರೀಸ್‌ನ ಮುಂದುವರೆದ ಭಾಗ-4 ಸಿನಿಮಾದ ಬಗ್ಗೆ ಇದ್ದ ಕನ್ಫೂಷನ್ಸ್ ಈಗ ಕ್ಲಿಯರ್ ಆಗಿವೆ. ಸಿನಿಮಾದ ನಾಯಕ ರಣಬೀರ್ ಕಪೂರ್ ಅಂತ ಚಿತ್ರತಂಡ ಘೋಷಣೆ ಮಾಡಿದೆ. ಅದ್ರಲ್ಲೂ ಈ ಸಿನಿಮಾ ರಣಬೀರ್ ಕೆರಿಯರ್‌ನ 25ನೇ ಚಿತ್ರ ಅನ್ನೋದು ಮತ್ತೊಂದು ವಿಶೇಷ. ರಣಬೀರ್ ಕಪೂರ್ ಹುಟ್ಟುಹಬ್ಬದ ಗಿಫ್ಟ್ ಆಗಿ ಅಭಿಮಾನಿಗಳ ಸಂಭ್ರಮ ದುಪ್ಪಟ್ಟು ಮಾಡಿದೆ.
ಭಾರತೀಯ ಚಿತ್ರರಂಗದಲ್ಲಿ ‘ಧೂಮ್-4’ ಮೇಲೆ ಕಂಡಾಪಟ್ಟಿ ನಿರೀಕ್ಷೆಗಳನ್ನ ಇಟ್ಟುಕೊಂಡವರಿಗೆ ಬೆಂಕಿ ನ್ಯೂಸ್‌ವೊಂದು ಸಿಕ್ಕಿದೆ. ಅನಿಮಲ್ ಸಕ್ಸಸ್‌ನ ನಂತರ ರಣಬೀರ್ ಮೈಥಾಲಾಜಿಕಲ್ ರಾಮಾಯಣ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ರಾಮಾಯಣ ಬಳಿಕ ಬಿಗ್ ಬಜೆಟ್‌ನ ಧೂಮ್-4 ಚಿತ್ರದಲ್ಲಿ ರಣಬೀರ್ ಭಾಗಿಯಾಗಲಿದ್ದಾರೆ. ಈಗಾಗಲೇ ಮೂರು ಭಾಗಗಳಲ್ಲಿ ಕಮಾಲ್ ಮಾಡಿರುವ ಧೂಮ್ ಮೇಲೆ ನಿರೀಕ್ಷೆ ಇಟ್ಟುಕೊಂಡಿದೆ ಭಕ್ತಗಣ.
ಧೂಮ್, ಧೂಮ್-2 ಹಾಗೂ ಧೂಮ್-3 ವಿಭಿನ್ನ ರೀತಿಯ ಮೇಕಿಂಗ್, ಸಾಂಗ್ಸ್ ಮೂಲಕ ಅಟ್ರ್ಯಾಕ್ಟ್ ಮಾಡಿದೆ. ಇದೀಗ ಧೂಮ್-4 ವಿಭಿನ್ನ ರೀತಿಯ ಎಂಟರ್‌ಟೈನ್ಮೆಂಟ್ ನೀಡೋಕೆ ಭಾರೀ ತಯಾರಿ ಮಾಡಿಕೊಳ್ಳುತ್ತಿದೆ. ಸದ್ಯ ರಣಬೀರ್ ನಾಯಕ ಅನ್ನೋ ಮಾಹಿತಿ ಹಂಚಿಕೊಂಡಿದೆ ಚಿತ್ರತಂಡ. ಇನ್ನು ಮುಂದಿನ ದಿನಗಳಲ್ಲಿ ಚಿತ್ರದ ಕಂಪ್ಲೀಟ್ ಮಾಹಿತಿ ಹಂಚಿಕೊಳ್ಳಲಿದೆ ಚಿತ್ರತಂಡ.
ಬಾಲಿವುಡ್ ನಟಿ ತೃಪ್ತಿ ದಿಮ್ರಿ (Triptii Dimri) ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ಅನಿಮಲ್’ ಚಿತ್ರದ ನಂತರ ಬೇಡಿಕೆಯ ನಟಿಯಾಗಿರುವ ತೃಪ್ತಿ ಮದುವೆ (Wedding) ಬಗ್ಗೆ ಮಾತನಾಡಿದ್ದಾರೆ. ನಿಮ್ಮ ಮಗಳು ಮದುವೆ ಆಗಲ್ಲ ಎಂದು ಕೊಂಕು ಮಾತನಾಡಿದ ಸಂಬಂಧಿಕರ ನಡೆಯ ನಟಿ ಮೌನ ಮುರಿದಿದ್ದಾರೆ. ಇದನ್ನೂ ಓದಿ:ಮತ್ತೊಂದು ಬಾಲಿವುಡ್ ಪ್ರಾಜೆಕ್ಟ್ ಒಪ್ಪಿಕೊಂಡ ನಟಿ- ‘ಆಶಿಕಿ 2’ ಹೀರೋಗೆ ಸಮಂತಾ ಜೋಡಿ
ಸಿನಿಮಾವೊಂದರ ಪ್ರಚಾರ ಕಾರ್ಯದ ವೇಳೆ, ವೈಯಕ್ತಿಕ ವಿಚಾರದ ಬಗ್ಗೆ ಮಾತನಾಡಿದ್ದಾರೆ. ನಿಮ್ಮ ಮಗಳು ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಮುಂದೊಂದು ದಿನ ನಿಮ್ಮ ಮಗಳಿಗೆ ಮದುವೆ ಆಗೋದಿಲ್ಲ ನೋಡಿ ಎಂದು ಸಂಬಂಧಿಕರು ಪೋಷಕರಿಗೆ ಹೇಳಿದನ್ನು ನಟಿ ಸ್ಮರಿಸಿದ್ದಾರೆ. ಆದರೆ ಇಂದು ಯಾರ ಟೀಕೆಗೂ ಮಣಿಯದೆ ನಾಯಕಿಯಾಗಿ ತೃಪ್ತಿ ಸೈ ಎನಿಸಿಕೊಂಡಿದ್ದಾರೆ. ಯಶಸ್ಸಿನ ಮೂಲಕ ಕೊಂಕು ಮಾತುಗಳಿಗೆ ಉತ್ತರ ನೀಡಿದ್ದಾರೆ.
ಇನ್ನೂ 2017ರಲ್ಲಿ ‘ಮೋಮ್’ ಸಿನಿಮಾದಲ್ಲಿ ಹಿರಿಯ ನಟಿ ಶ್ರೀದೇವಿ ಜೊತೆ ತೃಪ್ತಿ ನಟಿಸಿದರು. ಪೋಷಕ ಪಾತ್ರಕ್ಕೆ ಜೀವ ತುಂಬಿದ್ದರು. 2018ರಲ್ಲಿ ‘ಲೈಲಾ ಮಜ್ನು’ ಸಿನಿಮಾದಲ್ಲಿ ನಾಯಕಿಯಾಗಿ ಗಮನ ಸೆಳೆದರು. ಅಲ್ಲಿಂದ ನಟಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದರೂ ಕೂಡ ಅವರಿಗೆ ‘ಅನಿಮಲ್’ ಸಿನಿಮಾದ ನಟನೆಗಾಗಿ ಯಶಸ್ಸು ಸಿಕ್ಕಿತು. ರಣ್‌ಬೀರ್ ಕಪೂರ್‌ಗೆ ಮತ್ತೋರ್ವ ನಾಯಕಿಯಾಗಿ ನಟಿಸಿದರು.
ಪ್ರಸ್ತುತ ರಾಜ್‌ಕುಮಾರ್ ರಾವ್ ಜೊತೆಗಿನ ಸಿನಿಮಾ, ಕಾರ್ತಿಕ್ ಆರ್ಯನ್ ಜೊತೆಗಿ ಚಿತ್ರ ಸೇರಿದಂತೆ ಹಲವು ಸಿನಿಮಾಗಳಿವೆ. ತೆಲುಗಿನಲ್ಲಿ ನಟಿಸಲು ಕೂಡ ಆಫರ್ಸ್ ಅರಸಿ ಬರುತ್ತಿವೆ.
ತಮಿಳಿನ ಸ್ಟಾರ್ ನಟ ವಿಜಯ್ ದಳಪತಿ (Vijay Thalapathy) ಕೊನೆಯ ಸಿನಿಮಾ ಕುರಿತು ಇದೀಗ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಕನ್ನಡದ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣದ ಸಿನಿಮಾದಲ್ಲಿ ವಿಜಯ್ ಕಡೆಯದಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಚಿತ್ರದಲ್ಲಿ ಬಾಬಿ ಡಿಯೋಲ್ (Bobby Deol) ವಿಲನ್ ಆಗಿ ಅಬ್ಬರಿಸಲಿದ್ದಾರೆ ಎಂಬ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಹೀರೋ ಆದ ‘ಶ್ರೀಗೌರಿ’ ಸೀರಿಯಲ್ ವಿಲನ್- ‘ಪೀಟರ್’ ಚಿತ್ರಕ್ಕೆ ಡಾಲಿ, ವಿಜಯ್ ಸೇತುಪತಿ ಸಾಥ್
ವಿಜಯ್ ನಟನೆಯ 69ನೇ ಸಿನಿಮಾದಲ್ಲಿ ‘ಅನಿಮಲ್’ (Animal) ಖ್ಯಾತಿಯ ನಟ ಬಾಬಿ ಡಿಯೋಲ್ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಿರುವ ನಟನನ್ನು ಚಿತ್ರತಂಡ ಸಂಪರ್ಕಿಸಿದೆ. ವಿಜಯ್ ಸಿನಿಮಾದಲ್ಲಿ ನಟಿಸುವ ಕುರಿತು ಬಾಬಿ ಡಿಯೋಲ್ ಜೊತೆ ಒಂದು ಹಂತದ ಮಾತುಕತೆಯಾಗಿದ್ದು, ಕಥೆ ಮತ್ತು ಪಾತ್ರದ ಕುರಿತು ಚರ್ಚೆಯಾಗಿದೆ ಎನ್ನಲಾಗಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಎಂಬುದನ್ನು ಚಿತ್ರತಂಡ ಅಧಿಕೃತವಾಗಿ ತಿಳಿಸುವವರೆಗೂ ಕಾದುನೋಡಬೇಕಿದೆ.
ಅಂದಹಾಗೆ, ‘ದಳಪತಿ 69’ ಮೇಲೆ ಬಲು ನಿರೀಕ್ಷೆ ಇರೋದ್ರಿಂದ ಭರ್ತಿ 500 ಕೋಟಿಯಲ್ಲಿ ಚಿತ್ರ ತಯಾರಾಗುತ್ತಿದೆ. ತಮಿಳು ಚಿತ್ರಪ್ರೇಮಿಗಳ ಪಾಲಿನ ಮಾಸ್ ಮ್ಯಾನ್ ಇನ್ಮುಂದೆ ಬಣ್ಣ ಹಚ್ಚೋದಿಲ್ಲ ಅನ್ನುವ ಕೊರಗಿನ ಮಧ್ಯೆ ದಳಪತಿ 69 ಮೇಲೆ ನಿರೀಕ್ಷೆಯಂತೂ ದುಪ್ಪಟ್ಟಾಗಿದೆ. ಈ ನಡುವೆ ಇನ್ನೊಂದು ವಿಷಯ ಭಾರೀ ಆಶ್ಚರ್ಯ ಹುಟ್ಟಿಸಿದೆ. ಅದುವೇ ವಿಜಯ್ ಸಂಭಾವನೆ.
ಇನ್ನೂ ದಳಪತಿ 69 ಚಿತ್ರಕ್ಕೆ ವಿಜಯ್ ಭರ್ತಿ 275 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾಂತೆ. ಚಿತ್ರದ ಬಜೆಟ್‌ನ ಅರ್ಧ ಭಾಗದಷ್ಟು ವಿಜಯ್ ಸಂಭಾವನೆ ಇರುತ್ತದೆ ಎಂದು ಸುದ್ದಿಯಾಗಿದೆ. ಹಿಂದಿನ ‘ದಿ ಗೋಟ್’ ಚಿತ್ರಕ್ಕೆ ವಿಜಯ್ ಬರೋಬ್ಬರಿ 200 ಕೋಟಿ ಸಂಭಾವನೆ ಪಡೆದಿದ್ದರು ಎಂಬ ವದಂತಿ ಇದೆ. ಈ ಬೆನ್ನಲ್ಲೇ ಅದಕ್ಕಿಂತಲೂ ಹೆಚ್ಚು 275 ಕೋಟಿ ಹಣ ಸಂಭಾವನೆ ರೂಪದಲ್ಲಿ ವಿಜಯ್ ಪಡೆಯಲಿದ್ದಾರೆ ಎಂಬುದೇ ಕುತೂಹಲದ ಸಂಗತಿ.
2026ರ ತಮಿಳುನಾಡು ವಿಧಾನಸಭೆ ಚುನಾವಣೆಗೆ ವಿಜಯ್ ಅಣಿಯಾಗುತ್ತಿದ್ದಾರೆ. ಸ್ವಂತ ಪಕ್ಷ ಸ್ಥಾಪಿಸಿ ರಾಜಕೀಯಕ್ಕೆ ಎಂಟ್ರಿಯಾಗಿದ್ದಾರೆ. ಲೋಗೋ ಮತ್ತಿತರ ಕೆಲಸಗಳನ್ನ ಮಾಡಿಕೊಂಡು ಬಂದಿದ್ದಾರೆ. ಈ ನಡುವೆ ವರ್ಷ ಕಳೆಯುವದರೊಳಗೆ ವಿಜಯ್ ಒಪ್ಪಿಕೊಂಡ 69ನೇ ಚಿತ್ರ ಮುಗಿಸಿ ಕೊಡಬೇಕಾಗಿದೆ. ಹೀಗಾಗಿ ಶೀಘ್ರದಲ್ಲೇ ‘ದಳಪತಿ 69’ ಚಿತ್ರೀಕರಣ ಶುರುವಾಗಲಿದೆ ಎಂಬ ಮಾಹಿತಿ ಇದೆ. ಇನ್ನು ವಿಜಯ್ ಪಡೆದುಕೊಳ್ತಿರುವ 275 ಕೋಟಿ ಸಂಭಾವನೆ ಸುದ್ದಿಯಂತೂ ಇನ್ನುಳಿದ ಸ್ಟಾರ್ ನಟರಿಗೆ ಆಶ್ಚರ್ಯ ಮೂಡಿಸಿದೆ. ಇಲ್ಲಿಯವರೆಗೆ 200 ಕೋಟಿ ಸಂಭಾವನೆಯನ್ನ ಭಾರತದಲ್ಲಿ ಸ್ಟಾರ್ ನಟರು ನೇರವಾಗಿ ಪಡೆದಿರಲಿಲ್ಲ. ಶೇರ್ ರೂಪದಲ್ಲಿ ಬಂದಿರೋ ಆದಾಯದಲ್ಲಿ ಲೆಕ್ಕ ಚುಕ್ತಾ ಮಾಡಿಕೊಳ್ತಿದ್ದರು. ಅದನ್ನೇ ಸಂಭಾವನೆಯಾಗಿ ಲಾಭ ಗಳಿಸಿಸುತ್ತಿದ್ದ ಹಲವರು ನಟರ ಉದಾಹರಣೆ ಇದೆ. ಆದರೆ ಈಗ ವಿಜಯ್ ಭರ್ತಿ 275 ಕೋಟಿ ಮೊತ್ತದ ರೂಪದಲ್ಲೇ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ವಿಷಯ ಭಾರೀ ಚರ್ಚೆಗೀಡು ಮಾಡಿದೆ.
‘ಅನಿಮಲ್’ (Animal) ಖ್ಯಾತಿಯ ತೃಪ್ತಿ ದಿಮ್ರಿ (Tripti Dimri) ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಮತ್ತೊಂದು ರೊಮ್ಯಾಂಟಿಕ್ ಚಿತ್ರವೊಂದನ್ನು ಒಪ್ಪಿಕೊಂಡಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆ ಡ್ಯುಯೆಟ್ ಹಾಡಲು ನಟಿ ರೆಡಿಯಾಗಿದ್ದಾರೆ.
ರಣ್‌ಬೀರ್ ಕಪೂರ್ ಜೊತೆ ಬೋಲ್ಡ್ ಪಾತ್ರದಲ್ಲಿ ನಟಿಸಿದ ಬಳಿಕ ತೃಪ್ತಿಗೆ ಹೆಚ್ಚೆಚ್ಚು ಹಾಟ್ & ಬೋಲ್ಡ್ ಪಾತ್ರಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ವಿಕ್ಕಿ ಕೌಶಲ್ ಜೊತೆ ಗುಡ್ ನ್ಯೂಸ್ ಚಿತ್ರ, ರಾಜ್‌ಕುಮಾರ್ ರಾವ್ ಜೊತೆ ‘ವಿಕ್ಕಿ ವಿದ್ಯಾ ಕಾ ವೋ ವಾಲಾ ವಿಡಿಯೋ’ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ:ಮೀಟೂ ಬಗ್ಗೆ ಹೊಸ ಬಾಂಬ್ ಸಿಡಿಸಿದ ಶ್ರದ್ಧಾ ಶ್ರೀನಾಥ್!
ಈ ಬೆನ್ನಲ್ಲೇ, ಲವರ್ ಬಾಯ್ ಕಾರ್ತಿಕ್ ಆರ್ಯನ್ ಹೊಸ ಚಿತ್ರಕ್ಕೆ ತೃಪ್ತಿ ನಾಯಕಿಯಾಗಿದ್ದು, ಇದೇ ಸೆ.24ರಿಂದ ಚಿತ್ರೀಕರಣ ಶುರುವಾಗಲಿದೆ. ಮುಂಬೈನಲ್ಲಿ ನಡೆಯಲಿರುವ ಈ ಚಿತ್ರದ ಶೂಟಿಂಗ್‌ಗೆ ಕಾರ್ತಿಕ್ ಜೊತೆ ನಟಿ ಭಾಗಿಯಾಗಲಿದ್ದಾರೆ. ಈ ಚಿತ್ರವನ್ನು ಅನುರಾಗ್ ಬಸು ನಿರ್ದೇಶನ ಮಾಡಲಿದ್ದಾರೆ.
ವಿಭಿನ್ನವಾಗಿರುವ ಲವ್ ಸ್ಟೋರಿ ಇದಾಗಿದ್ದು, ಎಂದೂ ಕಾಣಿಸಿಕೊಂಡಿದ ಡಿಫರೆಂಟ್ ರೋಲ್‌ಗೆ ತೃಪ್ತಿ ಜೀವ ತುಂಬಲಿದ್ದಾರೆ. ಇದೇ ಮೊದಲ ಬಾರಿಗೆ ಕಾರ್ತಿಕ್ ಮತ್ತು ತೃಪ್ತಿ ಜೊತೆಯಾಗುತ್ತಿರೋದ್ರಿಂದ ಸಿನಿಮಾ ಕುರಿತು ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.
‘ಕಲ್ಕಿ’ (Kalki 2898 AD) ಸಿನಿಮಾದ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಪ್ರಭಾಸ್ ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ನಡುವೆ ಪ್ರಭಾಸ್ (Prabhas) ಮುಂಬರುವ ಸಿನಿಮಾ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಪ್ರಭಾಸ್‌ಗೆ ವಿಲನ್ ಆಗಿ ನಟಿ ತ್ರಿಷಾ ಕಾಣಿಸಿಕೊಳ್ಳಲಿದ್ದಾರೆ.
ತ್ರಿಷಾಗೆ (Trisha) ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಾಗಿದೆ. ಸಿನಿಮಾದಿಂದ ಸಿನಿಮಾಗೆ ಬಗೆ ಬಗೆಯ ಪಾತ್ರಗಳನ್ನು ನಟಿ ಆಯ್ಕೆ ಮಾಡಿಕೊಳ್ತಿದ್ದಾರೆ. ‘ಸ್ಪಿರಿಟ್’ (Spirit) ಸಿನಿಮಾದಲ್ಲಿ ಪ್ರಭಾಸ್ ಡಬಲ್ ರೋಲ್‌ನಲ್ಲಿ ನಟಿಸುತ್ತಿದ್ದಾರೆ. ಹೀರೋ ಮತ್ತು ವಿಲನ್ ಎರಡು ಪಾತ್ರಕ್ಕೆ ಪ್ರಭಾಸ್ ಜೀವ ತುಂಬಲಿದ್ದಾರೆ. ಇದನ್ನೂ ಓದಿ:‘ಸ್ತ್ರೀ 2’ ಚಿತ್ರದಿಂದ ಗೆಲುವಿನ ಟ್ರ್ಯಾಕ್‌ಗೆ ಮರಳಿದ ಶ್ರದ್ಧಾ ಕಪೂರ್
ವಿಲನ್ ಪ್ರಭಾಸ್ ಪಾತ್ರಕ್ಕೆ ತ್ರಿಷಾ ಜೋಡಿಯಾಗ್ತಿದ್ದಾರಂತೆ. ಅವರು ಕೂಡ ಲೇಡಿ ವಿಲನ್ ಆಗಿ ಮಿಂಚಲಿದ್ದಾರೆ ಎಂಬುದು ಸದ್ಯ ಹರಿದಾಡುತ್ತಿರುವ ಸುದ್ದಿ. ಈ ವಿಚಾರ ನಿಜನಾ? ಎಂಬುದನ್ನು ಚಿತ್ರತಂಡವೇ ಸ್ಪಷ್ಟನೆ ನೀಡಬೇಕಿದೆ. ಇದನ್ನೂ ಓದಿ:ಜೀವಂತ ಇದ್ದಾಗಲೇ ಶ್ರೇಯಸ್ ತಲ್ಪಾಡೆ ಸಾವಿನ ಸುದ್ದಿ ವೈರಲ್- ಮೌನ ಮುರಿದ ನಟ
ಇನ್ನೂ ತ್ರಿಷಾರನ್ನು ಈಗಾಗಲೇ ‘ಅನಿಮಲ್’ (Animal) ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಭೇಟಿಯಾಗಿ ಸಿನಿಮಾದ ಕಥೆ ಹೇಳಿದ್ದಾರೆ. ಸಿನಿಮಾ ಕುರಿತು ಮಾತುಕತೆಯಾಗಿದ್ದು, ಸದ್ಯದಲ್ಲೇ ಚಿತ್ರತಂಡ ಈ ಕುರಿತು ಘೋಷಣೆ ಮಾಡಬೇಕಿದೆ. ಸದ್ಯ ‘ಸ್ಪಿರಿಟ್’ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ.
ಪ್ರಭಾಸ್ ಮತ್ತು ತ್ರಿಷಾ ಇಬ್ಬರೂ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. `ದಿ ರಾಜಾ ಸಾಬ್’ ಸಿನಿಮಾದ ಬಳಿಕ ಸಂದೀಪ್ ರೆಡ್ಡಿ ವಂಗಾ ಜೊತೆ ಚಿತ್ರತಂಡ ಸೇರಿಕೊಳ್ಳಲಿದ್ದಾರೆ ಪ್ರಭಾಸ್. ಸದ್ಯ ಈ ಚಿತ್ರದ ಅಪ್‌ಡೇಟ್ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.
ಅನಿಮಲ್ (Animal), ಭೂಲ್ ಭುಲಯ್ಯ 2 ಸಿನಿಮಾ ನಿರ್ಮಾಪಕ ಕೃಷ್ಣ ಕುಮಾರ್ (Krishna Kumar) ಅವರ ಏಕೈಕ ಪುತ್ರಿ ತಿಶಾ ಕುಮಾರ್ (Tishaa Kumar) 20ನೇ ವಯಸ್ಸಿಗೆ ವಿಧಿವಶರಾಗಿದ್ದಾರೆ. ಕ್ಯಾನ್ಸರ್‌ನಿಂದ (Cancer) ಬಳಲುತ್ತಿದ್ದ ತಿಶಾ ಜು.18ರಂದು ನಿಧನರಾಗಿದ್ದಾರೆ ಎಂದು ಕುಟುಂಬಸ್ಥರು ಅಧಿಕೃತವಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ಭವಿಷ್ಯದ ದೃಷ್ಟಿಯಿಂದ ಇಬ್ಬರೂ ಬೇರೆಯಾಗುತ್ತಿದ್ದೇವೆ: ಡಿವೋರ್ಸ್ ಖಚಿತಪಡಿಸಿದ ನತಾಶಾ
ಕ್ಯಾನ್ಸರ್‌ನಿಂದ ಬಳುತ್ತಿದ್ದ ತಿಶಾಗೆ ಕುಟುಂಬಸ್ಥರು ಜರ್ಮನಿಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದರು ಗುರುವಾರದಂದು (ಜು.18) ಚಿಕಿತ್ಸೆ ಫಲಕಾರಿಯಾಗದೇ ತಿಶಾ ನಿಧನರಾಗಿದ್ದಾರೆ. ಈಗ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ತರುವ ಪ್ರಯತ್ನ ನಡೆಯುತ್ತಿದೆ. ಪುತ್ರಿಯ ನಿಧನ ಕೃಷ್ಣ ಕುಮಾರ್ ದಂಪತಿಗೆ ಆಪ್ತರಿಗೆ ಆಘಾತವುಂಟು ಮಾಡಿದೆ.
ಟಿ- ಸೀರಿಸ್‌ನ ನಿರ್ಮಾಣ ಸಂಸ್ಥೆಯ ಭಾಗವಾಗಿರುವ ಕೃಷ್ಣ ಕುಮಾರ್ ಅವರ ತಂಡದಿಂದ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ. ನಿರ್ಮಾಪಕ ಕೃಷ್ಣ ಕುಮಾರ್ ಪುತ್ರಿ ತಿಶಾ ನಿಧನರಾಗಿದ್ದಾರೆ. ಅನಾರೋಗ್ಯದ ವಿರುದ್ಧ ತಿಶಾ ಹೋರಾಡುತ್ತಿದ್ದರು. ಸಂಕಷ್ಟದ ಸಮಯದಲ್ಲಿ ಖಾಸಗಿತನವನ್ನು ಗೌರವಿಸಿ ಎಂದು ಮನವಿ ಮಾಡಿದ್ದಾರೆ.
ಬಾಲಿವುಡ್ (Bollywood) ನಟ ಸಿದ್ಧಾಂತ್ ಕಾರ್ಣಿಕ್ (Siddhant Karnick) ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಮಯದಲ್ಲಿ ತಮಗೂ ಕೂಡ ಕಾಸ್ಟಿಂಗ್ ಕೌಚ್ ಅನುಭವ ಆಗಿತ್ತು ಎಂದು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಅವಕಾಶಕ್ಕಾಗಿ ರಾಜಿಯಾಗಬೇಕು ಎಂದು ವ್ಯಕ್ತಿಯೊಬ್ಬ ಒತ್ತಾಯಿಸಿದ್ದ ಎಂದು ಹೇಳಿದ್ದಾರೆ. ಇದನ್ನೂ ಓದಿ:‘ಬ್ಯಾಡ್ ನ್ಯೂಸ್’ ಚಿತ್ರದ 27 ಸೆಕೆಂಡ್‌ನ ಕಿಸ್ಸಿಂಗ್ ದೃಶ್ಯಕ್ಕೆ ಕತ್ತರಿ ಹಾಕಿದ ಸೆನ್ಸಾರ್ ಬೋರ್ಡ್
2005ರಲ್ಲಿ ನಾನು ಚಿತ್ರರಂಗಕ್ಕೆ ಕಾಲಿಟ್ಟ ವೇಳೆ ನಡೆದ ಘಟನೆಯಾಗಿದ್ದು, ಆಗ ನನಗೆ 22 ವರ್ಷ ವಯಸ್ಸುಯಾಗಿತ್ತು. ಚಿತ್ರತಂಡ ವ್ಯಕ್ತಿಯೊಬ್ಬನನ್ನು ನಾನು ಭೇಟಿಯಾದೆ. ನನ್ನ ವಿವರಗಳನ್ನು ಹಿಡಿದು ರಾತ್ರಿ 10:30ಕ್ಕೆ ಮನೆಗೆ ಬರುವಂತೆ ಆ ವ್ಯಕ್ತಿ ಹೇಳಿದ್ದರು. ನನಗೆ ಸ್ವಲ್ಪ ವಿಚಿತ್ರ ಎನಿಸಿತು. ಆದರೆ ಅವರ ಮನೆಯಲ್ಲಿ ಫ್ಯಾಮಿಲಿ ಫೋಟೋ ನೋಡಿದ ಬಳಿಕ ಅದು ಸುರಕ್ಷಿತ ಜಾಗ ಎನಿಸಿತು.
ಸಿನಿಮಾರಂಗದ ನಿಯಮಗಳ ಬಗ್ಗೆ ಆತ ವಿವರಿಸಿದರು. ಬಳಿಕ ರಾಜಿಯಾಗಬೇಕು ಎಂದರು. ರಾಜಿಯಾಗುವ ತನಕ ಸಿನಿಮಾ ಆಫರ್ ಸಿಗುವುದಿಲ್ಲ ಎಂದು ಮಾತನಾಡಿದರು. ನಾನು ಆಗ ಚಿಕ್ಕವನಾಗಿದ್ದೆ. ಆತ ನನ್ನ ಹತ್ತಿರಕ್ಕೆ ಬಂದ. ಆಗ ನಾನು ಇದಕ್ಕೆಲ್ಲ ಸಿದ್ಧನಿಲ್ಲ ಅಂತ ಹೇಳಿದಕ್ಕೆ, ನನ್ನ ವೃತ್ತಿಜೀವನವನ್ನು ನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದ. ನಾನು ಅದಕ್ಕೆಲ್ಲ ಹೆದರಿಕೊಳ್ಳದೆ ಅವರ ಮನೆಯಿಂದ ಹೊರಬಂದೆ ಎಂದು ಸಿದ್ಧಾಂತ್ ಕಾರ್ಣಿಕ್ ಮಾತನಾಡಿದ್ದಾರೆ.
ಅಂದಹಾಗೆ, ಅನಿಮಲ್ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಎದುರು ಸಿದ್ಧಾಂತ್ ವಿಲನ್ ಆಗಿ ನಟಿಸಿದ್ದರು. ಆದಿಪುರುಷ್, ಹೇ ಮೇರಾ ಇಂಡಿಯಾ ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸೀರಿಯಲ್‌ನಲ್ಲಿಯೂ ನಟ ಕಾಣಿಸಿಕೊಂಡಿದ್ದಾರೆ.
‘ಅನಿಮಲ್’ ಸಿನಿಮಾದಲ್ಲಿ ರಣ್‌ಬೀರ್ ಕಪೂರ್ ಜೊತೆ ತೃಪ್ತಿ ದಿಮ್ರಿ ಹಸಿ ಬಿಸಿ ದೃಶ್ಯಗಳಲ್ಲಿ ನಟಿಸಿದ್ದರು. ಈ ಸಿನಿಮಾದ ಸಕ್ಸಸ್ ನಂತರ ಸೌತ್ ಮತ್ತು ಬಾಲಿವುಡ್‌ನಲ್ಲಿ ನಟಿಗೆ ಬೇಡಿಕೆ ಹೆಚ್ಚಾಗಿದೆ. ಈಗ ಮತ್ತೊಂದು ಬಂಪರ್ ಆಫರ್ ಅನ್ನು ನಟಿ ಗಿಟ್ಟಿಸಿಕೊಂಡಿದ್ದಾರೆ.
ಆನಂದ್ ಎಲ್ ರೈ ನಿರ್ದೇಶನದ ಹೊಸ ಚಿತ್ರದಲ್ಲಿ ತಮಿಳು ನಟ ಧನುಷ್‌ಗೆ ತೃಪ್ತಿ ನಾಯಕಿಯಾಗ್ತಿದ್ದಾರೆ. ಇದೊಂದು ದುರಂತ ಪ್ರೇಮ ಕಥೆಯಾಗಿದ್ದು, ತೃಪ್ತಿ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಎಂದೂ ನಟಿಸಿರದ ವಿಭಿನ್ನ ಪಾತ್ರಕ್ಕೆ ನಟಿ ಜೀವ ತುಂಬಲಿದ್ದಾರೆ.
ಇನ್ನೂ ‘ಪುಷ್ಪ 2’ (Pushpa 2) ಸಿನಿಮಾದಲ್ಲಿ ಅಲ್ಲು ಅರ್ಜುನ್ ಜೊತೆ ತೃಪ್ತಿ ಸ್ಪೆಷಲ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಾರ್ತಿಕ್ ಆರ್ಯನ್ ಜೊತೆಗಿನ ಹೊಸ ಸಿನಿಮಾ ಸೇರಿದಂತೆ ಹಲವು ಪ್ರಾಜೆಕ್ಟ್‌ಗಳು ನಟಿಯ ಕೈಯಲ್ಲಿವೆ.
‘ಪುಷ್ಪ’ ಬ್ಯೂಟಿ ರಶ್ಮಿಕಾ ಮಂದಣ್ಣ (Rashmika Mandanna) ಟಾಪ್ ನಟಿಯರಲ್ಲಿ ಒಬ್ಬರಾಗಿ ಸೌತ್ ಮತ್ತು ಬಾಲಿವುಡ್‌ನಲ್ಲಿ ಗುರುತಿಸಿಕೊಳ್ತಿದ್ದಾರೆ. ಇದೀಗ ಮಾತೃ ಭಾಷೆಯಲ್ಲಿ ರಶ್ಮಿಕಾ ಮಾತನಾಡಿ ಕೊಡಗಿನ ಜನರ ಮನಗೆದ್ದಿದ್ದಾರೆ. ಹುಟ್ಟೂರಿನ ಜನರಿಗೆ ನಟಿ ಪ್ರೀತಿಯಿಂದ ಮನವಿಯೊಂದನ್ನು ಮಾಡಿದ್ದಾರೆ.
ಎಲ್ಲರಿಗೂ ನಮಸ್ಕಾರ, ಕೊಡಗಿನಲ್ಲಿ ಫ್ರೆಂಡ್ ಮದುವೆಗೆ ಬಂದ್ದೀನಿ. ಕೊಡಗಿನಲ್ಲಿರುವಾಗ ನಿಮ್ಮ ಜೊತೆ ಮಾತನಾಡೋದು ಖುಷಿ ವಿಚಾರ ಹೀಗಾಗಿ ಈ ವಿಡಿಯೋ ಮಾಡಿದ್ದೇನೆ. ನಿಮ್ಮ ಆಶೀರ್ವಾದಿಂದ ಇಷ್ಟು ಮುಂದೆ ಬಂದಿದ್ದೀನಿ. ಈಗಲೂ ನಾನು ಕಾವೇರಮ್ಮ ಮತ್ತು ಇಗ್ಗುತಪ್ಪ ಆಶೀರ್ವಾದಿಂದ ಮುಂದುವರಿಯುತ್ತಿದ್ದೇನೆ. ನೀವು ಯಾವಾಗಲೂ ನನಗೆ ಸಪೋರ್ಟ್ ಮಾಡಿದ್ದೀರಾ. ಇನ್ನಷ್ಟು ಹಾರ್ಡ್ ವರ್ಕ್ ಮಾಡಿ ನಾನು ಮುಂದೆ ಮತ್ತಷ್ಟು ಸಾಧಿಸುತ್ತೇನೆ ಎಂದು ಪ್ರಾಮಿಸ್ ಮಾಡುತ್ತೇನೆ. ನಿಮ್ಮೆಲ್ಲರ ಬೆಂಬಲಕ್ಕೆ ಥ್ಯಾಂಕ್ಸ್. ನೀವು ಯಾವಾಗಲೂ ನಮ್ಮ ಮನಸ್ಸಲ್ಲಿ ಇರುತ್ತೀರಾ ಎಂದು ನಟಿ ಧನ್ಯವಾದ ತಿಳಿಸಿದ್ದಾರೆ. ನಟಿ ಶೇರ್ ಮಾಡಿರುವ ಈ ವಿಡಿಯೋ ಕೊಡಗು ಜನರ ಮನಗೆದ್ದಿದೆ. ನಮ್ಮ ಬೆಂಬಲ ಎಂದಿಗೂ ನಿಮಗಿದೆ ಎಂದಿದ್ದಾರೆ.