Tag: ಅನಿತಾ

  • ಅನ್ಯಧರ್ಮದ ಹುಡುಗನನ್ನು ಹುಚ್ಚಿಯಂತೆ ಪ್ರೀತಿಸಿದ್ದಕ್ಕೆ ವಿಷಾದವಿದೆ: ‘ವೀರ ಕನ್ನಡಿಗ’ ನಟಿ

    ಅನ್ಯಧರ್ಮದ ಹುಡುಗನನ್ನು ಹುಚ್ಚಿಯಂತೆ ಪ್ರೀತಿಸಿದ್ದಕ್ಕೆ ವಿಷಾದವಿದೆ: ‘ವೀರ ಕನ್ನಡಿಗ’ ನಟಿ

    ನ್ನಡದ ‘ವೀರ ಕನ್ನಡಿಗ’ ನಟಿ ಅನಿತಾ ಹಸನಂದಾನಿ (Anita hassanandani) ಅವರು ರೋಹಿತ್ ರೆಡ್ಡಿ ಜೊತೆ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ಇದೀಗ ಇತ್ತೀಚಿನ ಸಂದರ್ಶನವೊಂದರಲ್ಲಿ ಮದುವೆಗೂ ಮುನ್ನ ಪ್ರೀತಿಸಿದ ಅನ್ಯಧರ್ಮದ ಹುಡುಗನ ಜೊತೆಗಿನ ಬ್ರೇಕಪ್ (Breakup) ಬಗ್ಗೆ ಮಾತನಾಡಿದ್ದಾರೆ. ಅನ್ಯಧರ್ಮದ ಹುಡುಗನನ್ನು ಹುಚ್ಚಿಯಂತೆ ಪ್ರೀತಿಸಿದ್ದಕ್ಕೆ ವಿಷಾದವಿದೆ ಎಂದು ನಟಿ ಹೇಳಿದ್ದಾರೆ. ಇದನ್ನೂ ಓದಿ:ತಿರುಪತಿ ಲಡ್ಡು ವಿವಾದ: ತಿಮ್ಮಪ್ಪನ ಕ್ಷಮೆ ಕೋರಿ 11 ದಿನಗಳ ಉಪವಾಸ ಕೈಗೊಂಡ ಪವನ್ ಕಲ್ಯಾಣ್

    ಅನಿತಾ ಈ ಹಿಂದಿನ ಪ್ರೇಮಕಥೆಯನ್ನು ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ನನ್ನ ಬದುಕಿನಲ್ಲಿ ಬಂದ ಕೆಲವು ಪ್ರಮುಖ ವ್ಯಕ್ತಿಗಳ ಪೈಕಿ ಎಜಾಜ್ ಖಾನ್ ಕೂಡ ಒಬ್ಬರು, ನಾನು ಅವರನ್ನು ಹುಚ್ಚಿಯಂತೆ ಪ್ರೀತಿ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ಆದರೆ ನಮ್ಮ ಪ್ರೀತಿಗೆ ಧರ್ಮ ಅಡ್ಡಿ ಬಂತು, ನನ್ನ ತಾಯಿ ನಮ್ಮ ಸಂಬಂಧಕ್ಕೆ ವಿರುದ್ಧವಾಗಿದ್ದರು ಎಂದು ಹೇಳಿದ್ದಾರೆ. ಅವನು ಮುಸ್ಲಿಂ ಮತ್ತು ನಾನು ಹಿಂದೂ ನಮ್ಮ ನಡುವೆ ಪರಸ್ಪರ ಕಾಳಜಿ ಇತ್ತು ಆದರೂ ಸಂಬಂಧ ಉಳಿಯಲಿಲ್ಲ. ಅಂದು ಎಜಾಜ್ ಅವರಿಂದ ದೂರವಾಗುವುದು ತುಂಬಾ ಕಷ್ಟವಾಗಿತ್ತು. ಆ ನೋವಿನಿಂದ ಹೊರಬರಲು ನನಗೆ ಒಂದು ವರ್ಷವೇ ಬೇಕಾಯಿತು ಎಂದು ಹೇಳಿದ್ದಾರೆ.

    ಯಾರಾದರೂ ನಿಮ್ಮನ್ನು ಬದಲಾಯಿಸಲು ಪ್ರಯತ್ನ ಮಾಡಿದರೆ ಅದು ಪ್ರೀತಿ ಅಲ್ಲವೇ ಅಲ್ಲ ಎಂದಿದ್ದಾರೆ ಅನಿತಾ. ನಾನು ಅವನಿಗೋಸ್ಕರ ನನ್ನನ್ನು ತುಂಬಾ ಬದಲಿಸಿಕೊಂಡಿದ್ದೆ ಎಂದಿದ್ದಾರೆ. ಕೈತುಂಬಾ ಅವಕಾಶಗಳಿರುವ ಸಮಯದಲ್ಲಿ ಆ ವ್ಯಕ್ತಿಗೋಸ್ಕರ ನಾನು ಎಲ್ಲವನ್ನೂ ತ್ಯಾಗ ಮಾಡಿದೆ. ಈ ವಿಚಾರದಲ್ಲಿ ನನಗೆ ಈಗಲೂ ಬೇಸರವಿದೆ ಎಂದು ಕೂಡ ಹೇಳಿದ್ದಾರೆ. ಪ್ರೀತಿಸುವ ವ್ಯಕ್ತಿಗಾಗಿ ನಾವು ನಮ್ಮನ್ನು ಬದಲಿಸಿಕೊಳ್ಳಬಾರದು. ಬದಲಾಯಿಸಲು ಪ್ರಯತ್ನ ಮಾಡುವವರ ಜೊತೆ ನಾವು ಯಾವತ್ತೂ ಕೂಡ ಇರಬಾರದು ಎಂದಿದ್ದಾರೆ.

    ಅಂದಹಾಗೆ, ಜನಪ್ರಿಯ ಹಿಂದಿ ಸೀರಿಯಲ್ ‘ಕಾವ್ಯಾಂಜಲಿ’ ಸೀರಿಯಲ್‌ನಲ್ಲಿ ನಾಯಕಿಯಾಗಿ ಅನಿತಾ ನಟಿಸಿದ್ದರು. ಇದೇ ಸೀರಿಯಲ್‌ನ ಸಹನಟ ಎಜಾಜ್ ಖಾನ್ ಜೊತೆ ಅನಿತಾಗೆ ಲವ್ ಆಗಿತ್ತು. ವೈಯಕ್ತಿಕ ಕಾರಣಗಳಿಂದ 2007ರಲ್ಲಿ ಇಬ್ಬರೂ ದೂರವಾದರು. ಬಳಿಕ 2013ರಲ್ಲಿ ರೋಹಿತ್ ರೆಡ್ಡಿ ಜೊತೆ ನಟಿ ಮದುವೆಯಾದರು. ಇದೀಗ ಇಬ್ಬರ ದಾಂಪತ್ಯಕ್ಕೆ ಗಂಡು ಮಗು ಸಾಕ್ಷಿಯಾಗಿದ್ದಾನೆ.

  • ಚಂದನ್- ನಿವೇದಿತಾ ವಿಚ್ಚೇದನಕ್ಕೆ ನಿಜವಾದ ಕಾರಣ ರಿವೀಲ್!

    ಚಂದನ್- ನಿವೇದಿತಾ ವಿಚ್ಚೇದನಕ್ಕೆ ನಿಜವಾದ ಕಾರಣ ರಿವೀಲ್!

    ನ್ನಡ ರ‍್ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ (Chandan Shetty- Niveditha Gowda) ಅವರ ವಿಚ್ಛೇದನ ಶುಕ್ರವಾರ ಭಾರೀ ಸುದ್ದಿಯಾಗಿತ್ತು. ಚಂದನವನದಲ್ಲಿ ಕ್ಯೂಟ್ ಕಪಲ್ ಆಗಿದ್ದ ದಂಪತಿ ಏಕಾಏಕಿ ಬೇರೆಯಾಗಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿತು. ಅಲ್ಲದೇ ಹಲವರು ಇದಕ್ಕೆ ಕಾರಣವನ್ನೂ ಹುಡುಕಲು ಮುಂದಾಗಿದ್ದರು. ಈ ಸಂಬಂಧ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ಚರ್ಚೆಗಳು ಕೂಡ ನಡೆದವು. ಆದರೆ ಇದೀಗ ಚಂದನ್ ಪರ ವಕೀಲೆ ಅನಿತಾ ಅವರು ವಿಚ್ಛೇದನಕ್ಕೆ ನಿಜವಾದ ಕಾರಣ ಏನು ಎಂಬುದನ್ನು ರಿವೀಲ್ ಮಾಡಿದ್ದಾರೆ.

    ವಕೀಲೆ ಅನಿತಾ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಒಂದು ವರ್ಷದಿಂದ ದೂರ ಇರುವುದನ್ನೇ ತೋರಿಸಿ ಪರಸ್ಪರ ಮ್ಯೂಚುವಲ್ ಅಂಡರ್ ಸ್ಟಾಂಡಿಂಗ್ ಮೂಲಕ ವಿಚ್ಛೇದನ ಪಡೆದಿದ್ದಾರೆ. ಪತಿ-ಪತ್ನಿಯಾಗಿ ಮುಂದುವರಿಯಲು ಪರಸ್ಪರ ಹೊಂದಾಣಿಕೆ ಇಲ್ಲದಿರುವುದೇ ಮುಖ್ಯ ಕಾರಣ ಕೊಟ್ಟು ವಿಚ್ಛೇದನ ಪಡೆದಿದ್ದಾರೆ ಎಂದರು. ಇದನ್ನೂ ಓದಿ: ಡಿವೋರ್ಸ್ ವಿಚಾರ ಅಧಿಕೃತವಾಗಿ ಬಹಿರಂಗಪಡಿಸಿದ ಚಂದನ್- ನಿವೇದಿತಾ

    ಡಿವೋರ್ಸ್‌ ಪ್ರೊಸೆಸ್‌ ಬೇಗ ಆಗಿದ್ದೇಗೆ..?: ಸಂಧಾನ ಮಾಡುವ ಪ್ರಯತ್ನ ಮಾಡಿದರೂ ಇಬ್ಬರೂ ಯಾವುದೇ ಕಾರಣಕ್ಕೂ ಡಿವೋರ್ಸ್ ಪರಿಹಾರದ ಮಾತಿಗೇ ಬರಲಿಲ್ಲ. ಉತ್ತಮ ಫ್ರೆಂಡ್ಸ್ ಆಗಿ ಮುಂದುವರಿಯಲು ಇಚ್ಛಿಸಿದ್ದಾರೆ. ಆದರೆ ಗಂಡ-ಹೆಂಡತಿಯಾಗಲು ಇಷ್ಟಪಡಲಿಲ್ಲ. ಡಿಸ್ಪ್ಯೂಟ್ ಇದ್ದಲ್ಲಿ ಪ್ರೊಸೆಸ್ ತಡವಾಗುತ್ತೆ. ಆದರೆ ಇವರ ಕೇಸ್ ನಲ್ಲಿ ಇಬ್ಬರದ್ದೂ ಒಂದೇ ಮಾತಾಗಿತ್ತು. 13-ಬಿ ಪ್ರಕಾರ ವಿಚ್ಛೇದನ ಧಾವೆಯಲ್ಲಿ ಒಂದು ವರ್ಷದಿಂದ ಪರಸ್ಪರ ದೂರ ಇರುವುದು ಹಾಗೂ ಹೊಂದಾಣಿಕೆ ಇಲ್ಲದಿರೋದನ್ನ ತೋರಿಸಿದ್ದರಿಂದ ವಿಚ್ಛೇದನದ ಪ್ರೊಸೆಸ್ ಬೇಗ ಆಗಿದೆ ಎಂದು ಹೇಳಿದರು.

    ಕಳೆದ ಮೂರು ತಿಂಗಳಿಂದ ಸಮಯಾವಕಾಶ ಕೊಟ್ಟು ಕೌನ್ಸೆಲಿಂಗ್ ಕೂಡ ಮಾಡಲಾಯಿತು. ಆದರೂ ಇಬ್ಬರ ನಿರ್ಧಾರ ಒಂದೇ ಇರೋದ್ರಿಂದ ಜೂನ್ 7 ರ ಶುಕ್ರವಾರದಂದು ವಿಚ್ಛೇದನ ಪ್ರಕ್ರಿಯೆ ಸಂಪೂರ್ಣವಾಗಿದೆ ಎಂದು ಅನಿತಾ ತಿಳಿಸಿದರು.

    ಬಿಗ್ ಬಾಸ್ ಕನ್ನಡ ಸೀಸನ್ 5ರ ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿ, ಸ್ನೇಹ ನಂತರ ಪ್ರೀತಿಯಾಗಿ ಬದಲಾಯಿತು. ಬಳಿಕ 2017ರಲ್ಲಿ ಮೈಸೂರಿನ ಯುವ ದಸರಾ ವೇದಿಕೆಯಲ್ಲಿ ನಿವೇದಿತಾಗೆ ಚಂದನ್ ಶೆಟ್ಟಿ ಅವರು ಪ್ರಪ್ರೋಸ್ ಮಾಡಿದ್ದರು. ಅಲ್ಲದೇ 2020 ಫೆಬ್ರವರಿಯಲ್ಲಿ ಇಬ್ಬರೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

    ಇದಾದ ಬಳಿಕ ಚೆನ್ನಾಗಿಯೇ ಇದ್ದ ಜೋಡಿ, ಸೊಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದರು. ನಿವೇದಿತಾ ರಿಯಾಲಿ ಶೋದಲ್ಲಿ ಕೂಡ ಕೆಲ ಸಮಯದ ಹಿಂದೆ ಕಾಣಿಸಿಕೊಂಡಿದ್ದರು. ಸದ್ಯ ಮೂವಿಯಲ್ಲಿ ಬ್ಯುಸಿಯಾಗಿದ್ದಾರೆ ಎಂದು ಹೇಳಲಾಗಿತ್ತು. ಈ ನಡುವೆ ಶುಕ್ರವಾರ ದಿಢೀರ್ ಎಂದು ಶಾಂತಿನಗರದ ಫ್ಯಾಮಿಲಿ ಕೋರ್ಟ್‍ಗೆ ಹಾಜರಾಗಿ ಅಭಿಮಾನಿಗಳಿಗೆ ಶಾಕ್ ನೀಡಿ ಗೊಂದಲಕ್ಕೀಡು ಮಾಡಿದ್ದರು. ನಂತರ ಸಂಜೆಯ ವೇಳೆಗೆ ಇಬ್ಬರೂ ತಮ್ಮ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುವ ಮೂಲಕ ವಿಚ್ಛೇದನ ವಿಚಾರವನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದರು.

  • ಮಗನ ಮದ್ವೆಗೆ ಖರ್ಚು ಮಾಡಬೇಕಿದ್ದ 5.5 ಕೋಟಿ ವೆಚ್ಚದಲ್ಲಿ 2 ಕ್ಷೇತ್ರಕ್ಕೆ ಆಹಾರ ಕಿಟ್ ವಿತರಣೆ: ಎಚ್‍ಡಿಕೆ

    ಮಗನ ಮದ್ವೆಗೆ ಖರ್ಚು ಮಾಡಬೇಕಿದ್ದ 5.5 ಕೋಟಿ ವೆಚ್ಚದಲ್ಲಿ 2 ಕ್ಷೇತ್ರಕ್ಕೆ ಆಹಾರ ಕಿಟ್ ವಿತರಣೆ: ಎಚ್‍ಡಿಕೆ

    – ನನ್ನ ಆಸೆಯಂತೆ ಮಗನ ವಿವಾಹ ನಡೆದಿಲ್ಲ
    – ನಿಖಿಲ್, ರೇವತಿಯಿಂದ ಕಿಟ್ ವಿತರಣೆಗೆ ಚಾಲನೆ

    ರಾಮನಗರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕುಟುಂಬಸ್ಥರು ರಾಮನಗರ ಮತ್ತು ಚನ್ನಪಟ್ಟಣ ಜನರಿಗೆ ದಿನಸಿ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ರಾಮನಗರದ ಮಂಜುನಾಥ ಕನ್ವೆನ್ಷನ್ ಹಾಲ್‍ನಲ್ಲಿ ದಿನಸಿ ಕಿಟ್ ವಿತರಣೆ ಮಾಡಲು ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಸೊಸೆ ರೇವತಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೊದಲ ಬಾರಿಗೆ ಕುಟುಂಬದ ಜೊತೆ ನಿಖಿಲ್ ಪತ್ನಿ ರೇವತಿ ಕೂಡ ಆಗಮಿಸಿದ್ದರು. ಸುಮಾರು 60 ಸಾವಿರ ಬಡ ಕುಟುಂಬಳಿಗೆ ಅಕ್ಕಿ, ಬೇಳೆ ಸಕ್ಕರೆ ಇರುವ ಕಿಟ್‍ಗಳನ್ನ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

    ಈ ವೇಳೆ ಮಾಧ್ಯಮಗಳ ಜೊತೆ ಕುಮಾರಸ್ವಾಮಿ, ಸುಮಾರು 1 ಲಕ್ಷದ 4 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ನಡೆಯಲಿದೆ. ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರಗಳ ಎಲ್ಲಾ ಮನೆಗಳಿಗೂ ಈ ಆಹಾರ ಕಿಟ್ ತಲುಪಲಿದೆ. ನನ್ನ ಮಗನ ಮದುವೆಯನ್ನು ರಾಮನಗರದಲ್ಲಿ ಮಾಡಬೇಕೆಂಬ ನನ್ನ ಆಸೆ ನಡೆಯಲಿಲ್ಲ. ಈ ಹಿನ್ನೆಲೆಯಲ್ಲಿ ಮದುವೆಗೆ ನಾನು ಏನು ಹಣ ವೆಚ್ಚ ಮಾಡಬೇಕು ಎಂದುಕೊಂಡಿದ್ದೆನೋ, ಆ ವೆಚ್ಚವನ್ನ ಎರಡು ಕ್ಷೇತ್ರಗಳಿಗೆ ವಿನಿಯೋಗ ಮಾಡುತ್ತಿದ್ದೇನೆ. ಐದೂವರೆ ಕೋಟಿ ವೆಚ್ಚದ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ. ಹೀಗಾಗಿ ಮಗ ಮತ್ತು ಸೊಸೆಯನ್ನು ಕರೆದುಕೊಂಡು ಆಹಾರ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ಕೊಡಿಸಿದ್ದೇನೆ. ಕ್ಷೇತ್ರದ ಶಾಸಕರು ಅವರವರ ಮನೆಗೆ ತಲುಪಿಸುವ ಕೆಲಸವನ್ನು ಈಗಾಗಲೇ ಶುರು ಮಾಡಿದ್ದಾರೆ ಎಂದು ತಿಳಿಸಿದರು.

    ಕೊರೊನಾದಿಂದ ಬಡವರ ಆರ್ಥಿಕ ಸ್ಥಿತಿ ಕೆಳಗೆ ಇಳಿದಿದೆ. ಬಡವರಿಗೆ ಇಂತಹ ಸಮಯದಲ್ಲಿ ಹಣ ಖರ್ಚು ಮಾಡುವುದು ಸರ್ಕಾರದ ಕರ್ತವ್ಯ. ಚಿತ್ರದುರ್ಗದ ಓರ್ವ ಮಹಿಳೆ ಈರುಳ್ಳಿ ಚೀಲದ ಮುಂದೆ ನಿಂತು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಯಡಿಯೂರಪ್ಪ ಅವರ ಮನವಿಗೆ ಸ್ಪಂದಿಸಿವುದಾಗಿ ಹೇಳಿದ್ದಾರೆ. ರಾಜ್ಯದ ಹಲವು ರೈತರ ಸಮಸ್ಯೆಗಳು ಕೂಡ ಇದೆ ರೀತಿ ಇದೆ. ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ರೈತರ ಸಮಸ್ಯೆಗಳಿಗೆ ಸ್ಪಂದನೆ ಮಾಡಬೇಕು. ರೈತರ ನೆರವಿಗೆ ಅಂತ ಸರ್ಕಾರದ ಅಧಿಕಾರಿಗಳು 450 ಕೋಟಿ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ಪರಿಹಾರವನ್ನಾದರೂ ಸರ್ಕಾರ ಬಿಡುಗಡೆ ಮಾಡಲಿ ಎಂದು ಕುಮಾರಸ್ವಾಮಿ ಸಿಎಂಗೆ ಮನವಿ ಮಾಡಿದರು.

    ರಾಜ್ಯದಲ್ಲಿ ಇನ್ನೂ 15 ದಿನಗಳ ಕಾಲ ಲಾಕ್‍ಡೌನ್ ಮುಂದುವರಿಸುವ ಬಗ್ಗೆ ಮಾಹಿತಿ ಇದೆ. ರಾಜ್ಯದ ಜನರಿಗೆ ಮನೆ ಬಾಡಿಗೆ, ವಿದ್ಯುತ್ ಬಿಲ್ ಹಾಗೂ ಶಾಲೆಯ ಶುಲ್ಕ ಕಟ್ಟಲು ವಿನಾಯಿತಿ ನೀಡಬೇಕು. ಸರ್ಕಾರ ತಗೆದುಕೊಳ್ಳುವ ನಿರ್ಣಯಗಳು ಬಡವರ ಪರವಾಗಿ ಇರಬೇಕು. ಕೇಂದ್ರ ಸರ್ಕಾರ 50 ಸಾವಿರ ಕೋಟಿ ಮ್ಯೂಚುಯಲ್ ಫಂಡ್ ತೆಗೆದುಕೊಂಡಿದೆ. ಇದು ಕೇವಲ ಉದ್ಯಮಿಗಳಿಗೆ ಮಾತ್ರ ಅನುಕೂಲವಾಗುತ್ತದೆ. ಅಂಬಾನಿ ಹಾಗೂ ಟಾಟಾ ಅಂತವರಿಗೆ ಮಾತ್ರ ಈ ಮ್ಯೂಚುಯಲ್ ಫಂಡ್ ಉಪಯೋಗವಾಗುತ್ತೆ. ಸಣ್ಣ ಕಾರ್ಖಾನೆ ನಡೆಸುವವರಿಗೆ ಇದು ನೆರವಾಗುವುದಿಲ್ಲ. ಸರ್ಕಾರ ಬಡವರಿಗೆ ಅನುಕೂಲವಾಗುವಂತೆ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

  • ಸಪ್ತಪದಿ ತುಳಿದ ನಟ ಸುಮಂತ್ ಶೈಲೇಂದ್ರ

    ಸಪ್ತಪದಿ ತುಳಿದ ನಟ ಸುಮಂತ್ ಶೈಲೇಂದ್ರ

    ಬೆಂಗಳೂರು: ಇಂದು ಸ್ಯಾಂಡಲ್‍ವುಡ್‍ನ ಎರಡು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಒಂದು ಕಡೆ ದೂದ್ ಪೇಡ ದಿಗಂತ್ ಹಾಗೂ ಐಂದ್ರಿತಾ ರೇ ಮದುವೆಯಾಗಿದ್ದು, ಮತ್ತೊಂದೆಡೆ ನಟ ಸುಮಂತ್ ಶೈಲೇಂದ್ರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಸುಮಂತ್ ಶೈಲೇಂದ್ರ ಅವರು ಖ್ಯಾತ ನಿರ್ಮಾಪಕ ಶೈಲೇಂದ್ರ ಬಾಬು ಅವರ ಮಗನಾಗಿದ್ದು, ಶ್ರೀನಿವಾಸ್ ಮತ್ತು ಚಂದ್ರಕಲಾ ಅವರ ಪುತ್ರಿ ಅನಿತಾ ಅವರನ್ನು ಸುಮಂತ್ ಇಂದು ವರಿಸಿದ್ದಾರೆ. ಇಂದು ಬೆಳಗ್ಗೆ ಸುಮಾರು 9.30ರ ಮುಹೂರ್ತದಲ್ಲಿ ಮದುವೆಯಾಗಿದ್ದಾರೆ.

    ಮಂಗಳವಾರ ವಸಂತನಗರದಲ್ಲಿರುವ ಬೆಂಗಳೂರು ಮೇನ್ ಪ್ಯಾಲೇಸ್ ನಲ್ಲಿ ಸುಮಂತ್ ಮತ್ತು ಅನಿತಾ ಅವರ ಆರತಕ್ಷತೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಸುಮಂತ್ ಮತ್ತು ಅನಿತಾ ಅವರ ಆರತಕ್ಷತೆ ಕಾರ್ಯಕ್ರಮದಲ್ಲಿ ನವಜೋಡಿ ಒಂದೇ ಬಣ್ಣದ ಬಟ್ಟೆ ಧರಿಸಿದ್ದು, ಅದ್ಧೂರಿಯಾಗಿ ಮಿಂಚಿದ್ದರು. ದೇವರಾಜ್, ಪ್ರಜ್ವಲ್, ಪ್ರಣವ್, ನಾದಬ್ರಹ್ಮ ಹಂಸಲೇಖ, ಹಿರಿಯ ನಿರ್ದೇಶಕ ಎಸ್. ವಿ ರಾಜೇಂದ್ರ ಸಿಂಗ್ ಬಾಬು, ಇನ್ನಿತರ ಸಿನಿಮಾ ರಂಗದವರು ಮತ್ತು ಆತ್ಮೀಯರು ಆಗಮಿಸಿ ನವಜೋಡಿಗೆ ಶುಭ ಕೋರಿದರು.

    ಸುಮಂತ್ ‘ಆಟ’ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ನೀಡಿದ್ದು, ನಂತರ ರಾಧಿಕಾ ಪಂಡಿತ್ ಅವರ ಜೊತೆ ‘ದಿಲ್‍ವಾಲಾ’ ಹಾಗೂ ಕೃತಿ ಕರಬಂಧ ಜೊತೆ ‘ತಿರುಪತಿ ಎಕ್ಸ್‌ಪ್ರೆಸ್‌’ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv