Tag: ಅನಾವರಣ

  • ಸ್ಯಾಮ್‍ಸಂಗ್ ನ ನೂತನ ಗೆಲಾಕ್ಸಿ ಆನ್ 8 ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಸ್ಯಾಮ್‍ಸಂಗ್ ನ ನೂತನ ಗೆಲಾಕ್ಸಿ ಆನ್ 8 ಸ್ಮಾರ್ಟ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಭಾರತದ ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಿಕಾ ಕಂಪೆನಿಯಾದ ಸ್ಯಾಮ್‍ಸಂಗ್ ತನ್ನ ಬಜೆಟ್ ಗಾತ್ರದ ನೂತನ ಸ್ಯಾಮ್‍ಸಂಗ್ ಗೆಲಾಕ್ಸಿ ಆನ್ 8 ಸ್ಮಾರ್ಟ್ ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

    ನೂತನ ಗೆಲಕ್ಸಿ ಆನ್ 8 ಸ್ಮಾರ್ಟ್ ಫೋನ್ ಸೆಲ್ಫಿಗಾಗಿ 16ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 16ಎಂಪಿ+5ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾ ಹೊಂದಿದೆ. ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಈ ಫೋನ್ ಲಭ್ಯವಿದೆ.

    ಬೆಲೆಎಷ್ಟು?
    4ಜಿಬಿ RAM/64 ಜಿಬಿ ಆಂತರಿಕ ಮೆಮೊರಿ ಹೊಂದಿರು ಸ್ಯಾಮ್‍ಸಂಗ್ ಗ್ಯಾಲಕ್ಸಿ ಆನ್ 8 ಬೆಲೆ 16,990 ರೂ. ಆಗಿದೆ. ಸದ್ಯ ಕೇವಲ ಆನ್‍ಲೈನ್ ಶಾಪಿಂಗ್ ತಾಣ ಫ್ಲಿಪ್‍ಕಾರ್ಟ್ ನಲ್ಲಿ ಮಾತ್ರ ಈ ಫೋನ್ ಖರೀದಿಗೆ ಸಿಗಲಿದೆ.

    ಫೋನಿನ ಗುಣ ವೈಶಿಷ್ಟ್ಯಗಳು:
    ಡಿಸ್ಪ್ಲೇ: 6 ಇಂಚಿನ ಸೂಪರ್ ಅಮೊಲೆಡ್ ಇನ್ಫಿನಿಟಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720X1480 ಪಿಕ್ಸೆಲ್, 18.5:9 ಅನುಪಾತ ) ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ, ವಿತ್ ಮೆಮೊರಿ ಕಾರ್ಡ್ ಸೌಲಭ್ಯ,

    ಪ್ಲಾಟ್‍ ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.0 (ಓರಿಯೋ), ಕ್ವಾಲಕಂ ಸ್ನ್ಯಾಪ್ ಡ್ರಾಗನ್ 450 ಅಕ್ಟಾ ಕೋರ್ ಪ್ರೊಸೆಸರ್ 1.6 ಗೀಗಾಹಟ್ರ್ಸ್ ಸ್ಪೀಡ್, 4 ಜಿಬಿ RAM/64 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದ್ದು, 256 ಜಿಬಿ ವಿಸ್ತರಣಾ ಸಾಮರ್ಥ್ಯ ಹೊಂದಿದೆ.

    ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
    ಮುಂಭಾಗ 16ಎಂಪಿ, ಸಾಫ್ಟ್ ಟೋನ್ ಸೆಲ್ಫಿ ಲೈಟ್ ವಿತ್ ಆಟೋ ಫೇಸ್ ಡಿಟೆಕ್ಷನ್, ಹೆಚ್‍ಡಿಆರ್ ಕ್ಯಾಮೆರಾ, ಹಿಂಭಾಗ 16ಎಂಪಿ+5ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದ್ದು ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸರ್, 3,500 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

    https://www.youtube.com/watch?v=deIjcKYsvlw

  • ಶೀಘ್ರವೇ ದೇಶೀಯ ಮಾರುಕಟ್ಟೆಗೆ ಕ್ಸಿಯೋಮಿಯ ಎಂಐ ಎ2 ಬಿಡುಗಡೆ: ಗುಣವೈಶಿಷ್ಟ್ಯ ಏನು?

    ಶೀಘ್ರವೇ ದೇಶೀಯ ಮಾರುಕಟ್ಟೆಗೆ ಕ್ಸಿಯೋಮಿಯ ಎಂಐ ಎ2 ಬಿಡುಗಡೆ: ಗುಣವೈಶಿಷ್ಟ್ಯ ಏನು?

    ನವದೆಹಲಿ: ಬಜೆಟ್ ಸ್ಮಾರ್ಟ್ ಫೋನ್‍ಗಳ ತಯಾರಿಕಾ ಸಂಸ್ಥೆಯಾದ ಕ್ಸಿಯೋಮಿ ತನ್ನ ನೂತನ ಎಂಐ ಎ2 ಆವೃತ್ತಿಯನ್ನು ಭಾರತದ ಮಾರುಕಟ್ಟೆಗೆ ಆಗಸ್ಟ್ 8 ರಂದು ಬಿಡುಗಡೆ ಮಾಡಲಿದೆ.

    ನೂತನ ರೆಡ್‍ಮೀ ಎಂಐ ಎ2 ಸ್ಮಾರ್ಟ್ ಫೋನ್‍ನಲ್ಲಿ ಅತ್ಯುತ್ತಮ ಸೆಲ್ಫಿಗಾಗಿ 20ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 12ಎಂಪಿ+20ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾವಿದೆ. ರೆಡ್, ಬ್ಲೂ, ಗೋಲ್ಡ್, ರೋಸ್ ಗೋಲ್ಡ್ ಹಾಗೂ ಬ್ಲಾಕ್ ಕಲರ್ ಗಳಲ್ಲಿ ಈ ಫೋನ್ ಲಭ್ಯವಿದೆ.

    ರೆಡ್‍ಮಿ ಎಂಐ ಎ2 ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 158.7 x 75.4 x 7.3 ಮಿ.ಮೀ., 166 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ), 5.99 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080X2160 ಪಿಕ್ಸೆಲ್, 18:9 ಅನುಪಾತ 403ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನ್ಯಾಪ್ ಡ್ರಾಗನ್ 660 ಅಕ್ಟಾ ಕೋರ್ ಪ್ರೊಸೆಸರ್, 2.2 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 512 ಗ್ರಾಫಿಕ್ಸ್ ಪ್ರೊಸೆಸರ್, ಎಂಐ 10 ಆವೃತ್ತಿ ಅಪ್‍ಡೇಟೆಡ್, 4 ಜಿಬಿ RAM/64 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದ್ದು, ಯಾವುದೇ ವಿಸ್ತರಣಾ ಸಾಮರ್ಥ್ಯ ಇಲ್ಲ.

    ಕ್ಯಾಮೆರಾ:
    ಮುಂಭಾಗ 20ಎಂಪಿ, ಸಾಫ್ಟ್ ಟೋನ್ ಸೆಲ್ಫಿ ಲೈಟ್ ವಿತ್ ಆಟೋ ಫೇಸ್ ಡಿಟೆಕ್ಷನ್, ಹೆಚ್‍ಡಿಆರ್ ಕ್ಯಾಮೆರಾ, ಹಿಂಭಾಗ 12ಎಂಪಿ+20ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಬ್ಯಾಕ್‍ಗ್ರೌಂಡ್ ಬ್ಲರ್ ಫೀಚರ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್, ಟಚ್ ಫೋಕಸ್.

    ಇತರೆ ಫೀಚರ್ ಗಳು: ಫೇಸ್ ಡಿಟೆಕ್ಷನ್ ಅನ್‍ಲಾಕ್, ಫಿಂಗರ್ ಪ್ರಿಂಟ್, 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸಾಮರ್ಥ್ಯ ಹಾಗೂ 5 ವೋಟ್ಸ್ ನ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.

  • ನೋಕಿಯಾದ ನೂತನ 3.1 ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನೋಕಿಯಾದ ನೂತನ 3.1 ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಆಂಡ್ರಾಯ್ಡ್ ಆವೃತ್ತಿಯಲ್ಲಿ ಹೆಸರು ಗಳಿಸಲು ನೋಕಿಯಾ ಬಜೆಟ್ ಗಾತ್ರದಲ್ಲಿ ತನ್ನ ನೂತನ ಆವೃತ್ತಿಯ ನೋಕಿಯಾ 3.1 ಸ್ಮಾರ್ಟ್ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ಈ ಮೊದಲು ನೋಕಿಯಾ ಕಂಪೆನಿ ಇದೇ ವರ್ಷ ಮೇ ತಿಂಗಳಲ್ಲಿ ರಷ್ಯಾದ ಮಾಸ್ಕೋ ನಗರದಲ್ಲಿ ಬಜೆಟ್ ಗಾತ್ರದ ನೂತನ ಆವೃತ್ತಿಯ ಸ್ಮಾರ್ಟ್ ಫೋನ್‍ಗಳನ್ನು ಪರಿಚಯಿಸಿತ್ತು. ಇಂದು ಇದೇ ಆವೃತ್ತಿಯ ಸ್ಮಾರ್ಟ್ ಫೋನ್‍ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ.

    ನೂತನ ನೋಕಿಯಾ 3.1 ಸ್ಮಾರ್ಟ್ ಫೋನ್ ನಲ್ಲಿ ಸೆಲ್ಫಿಗಾಗಿ 8 ಎಂಪಿ ಸ್ಮಾರ್ಟ್ ಟೋನ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 13 ಎಂಪಿ ಹೊಂದಿರುವ ಕ್ಯಾಮೆರಾವಿದೆ. ಬ್ಲೂ ಕಾಪರ್, ಬ್ಲಾಕ್ ಕ್ರೋಮ್ ಮತ್ತು ಬಿಳಿ ಬಣ್ಣಗಳಲ್ಲಿ ಫೋನ್ ಲಭ್ಯವಿದೆ. ಜುಲೈ 21 ರಿಂದ ಪೇಟಿಎಂ ಮಾಲ್ ಆ್ಯಪ್ ಹಾಗೂ ನೋಕಿಯಾ ವೆಬ್‍ಸೈಟ್‍ಗಳಲ್ಲಿ ಈ ನೂತನ ಫೋನ್ ಸಿಗಲಿದೆ.

    ಬೆಲೆ ಎಷ್ಟು?
    2ಜಿಬಿ RAM/16 ಜಿಬಿ ಆಂತರಿಕ ಮೆಮೊರಿಯ ಫೋನಿಗೆ 10,499 ಆಗಿದ್ದು, ಕೇವಲ ಒಂದೇ ಒಂದು ಆವೃತ್ತಿ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

    ನೋಕಿಯಾ 3.1 ಸ್ಮಾರ್ಟ್ ಫೋನಿನ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 146.25 x 68.65 x 8.70ಮಿ.ಮೀ., 138.30 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 5.20 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್ (720X1440 ಪಿಕ್ಸೆಲ್, 18:9 ಅನುಪಾತ 310ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಆಕ್ಟಾ ಕೋರ್ ಪ್ರೊಸೆಸರ್, 1.5 ಗೀಗಾಹಟ್ರ್ಸ್ ಮೀಡಿಯಟೆಕ್ ಎಂಟಿ6750, 128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 2ಜಿಬಿ RAM/16 ಜಿಬಿ ಆಂತರಿಕ ಮೆಮೊರಿ.

    ಕ್ಯಾಮೆರಾ ಹಾಗೂ ಇತರೆ ಫ್ಯೂಚರ್ ಗಳು:
    ಮುಂಭಾಗ 8ಎಂಪಿ ಕ್ಯಾಮೆರಾ, ಹಿಂಭಾಗ 13 ಎಂಪಿ ಆಟೋ ಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಫೋಕಸ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್, 2,990 ಎಂಎಹೆಚ್ ಸಾಮರ್ಥ್ಯದ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.

  • 4,999ಕ್ಕೆ 4,000 ಎಂಎಎಚ್ ಬ್ಯಾಟರಿ, 4ಜಿ ಡ್ಯುಯಲ್ ಸಿಮ್ ಫೋನ್ ಲಭ್ಯ

    4,999ಕ್ಕೆ 4,000 ಎಂಎಎಚ್ ಬ್ಯಾಟರಿ, 4ಜಿ ಡ್ಯುಯಲ್ ಸಿಮ್ ಫೋನ್ ಲಭ್ಯ

    ನವದೆಹಲಿ: ಇಂಟೆಕ್ಸ್ ಕಂಪೆನಿಯು 4,999 ರೂ.ಗೆ ಇಂಡೋ-5 ಡ್ಯುಯಲ್ ಸಿಮ್ ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

    ಆಂಡ್ರಾಯ್ಡ್ ನೂಗಟ್ ಓಎಸ್ ಹೊಂದಿರುವ ಫೋನ್ ಆಫ್‍ಲೈನ್ ಮತ್ತು ಆನ್‍ಲೈನ್ ಸ್ಟೋರ್ ನಲ್ಲಿ ಲಭ್ಯವಿರಲಿದೆ.

    ಇಂಟೆಕ್ಸ್ ಇಂಡೋ-5 ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 146.4 x 72.2 x 10.1 ಮಿ.ಮೀ., 162 ಗ್ರಾಂ ತೂಕ, ಡ್ಯುಯಲ್ ಸಿಮ್(ಮೈಕ್ರೋ ಸಿಮ್) 5 ಇಂಚಿನ ಐಪಿಸಿ ಎಲ್‍ಸಿಡಿ ಡ್ರ್ಯಾಗೊಂಟ್ರೈಲ್ ಟಚ್ ಸ್ಕ್ರೀನ್(720×1280 ಪಿಕ್ಸೆಲ್, 294ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 7(ನೂಗಟ್), 1.25 ಗೀಗಾಹಟ್ರ್ಸ್ ಕ್ವಾಡ್ ಕೋರ್ ಪ್ರೊಸೆಸರ್, 2ಜಿಬಿ RAM/16 ಜಿಬಿ ಆಂತರಿಕ ಮೆಮೊರಿ, ಹೆಚ್ಚುವರಿ ಮೆಮೊರಿ 128 ಜಿಬಿವರೆಗೆ ವಿಸ್ತರಣೆ ಮಾಡಬಹುದು.

    ಕ್ಯಾಮೆರಾ:
    ಮುಂದುಗಡೆ 8ಎಂಪಿ ಕ್ಯಾಮೆರಾ, ಹಿಂಭಾಗ 8ಎಂಪಿ ಹೆಚ್‍ಡಿಆರ್ ಜೊತೆಗೆ, ವಿಡಿಯೋ ರೆಕಾರ್ಡಿಂಗ್, ಟಚ್ ಫೋಕಸ್, ಪನೊರಮಾ ಸೌಲಭ್ಯ ಇದೆ.

    ಇತರೆ:
    2.5 ಕಾರ್ನಿಂಗ್ ಗ್ಲಾಸ್, 4ಜಿ ವೋಲ್ಟ್, ವೈ-ಫೈ, ಬ್ಲೂಟೂತ್4.0, ಜಿಪಿಎಸ್, 4,000 ಎಂಎಹೆಚ್ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

  • ಕ್ಸಿಯೋಮಿ ಎಂಐ 6 ಪ್ರೋ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಕ್ಸಿಯೋಮಿ ಎಂಐ 6 ಪ್ರೋ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಬೀಜಿಂಗ್: ಬಜೆಟ್ ಸ್ಮಾರ್ಟ್ ಫೋನ್‍ಗಳ ತಯಾರಿಕಾ ಸಂಸ್ಥೆಯಾದ ಕ್ಸಿಯೋಮಿ ತನ್ನ ನೂತನ 6 ಪ್ರೋ ಫೋನನ್ನು ಬಿಡುಗಡೆಗೊಳಿಸಿದೆ.

    ರೆಡ್‍ಮೀ 6 ಪ್ರೋ ಫೋನ್‍ನಲ್ಲಿ ಅತ್ಯುತ್ತಮ ಸೆಲ್ಫಿಗಾಗಿ 5ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 12ಎಂಪಿ+5ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾವಿದೆ. ರೆಡ್, ಗೋಲ್ಡ್, ರೋಸ್ ಗೋಲ್ಡ್ , ಬ್ಲೂ ಹಾಗೂ  ಬ್ಲಾಕ್ ಕಲರ್ ಗಳಲ್ಲಿ ಈ ಫೋನ್ ಲಭ್ಯವಿದೆ. ಜೂನ್ 26ರಿಂದ ಚೀನಾ ಆನ್‍ಲೈನ್ ಮಾರುಕಟ್ಟೆಯಲ್ಲಿ ಈ ಫೋನ್ ಲಭ್ಯವಿರಲಿದೆ. ಭಾರತದಲ್ಲಿ ಈ ಫೋನ್ ಯಾವಾಗ ಬಿಡುಗಡೆಯಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.

    ಬೆಲೆ ಎಷ್ಟು?
    3ಜಿಬಿ RAM/32 ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಯುವಾನ್ 999 (ಅಂದಾಜು 10,400 ರೂ.), 4ಜಿಬಿ RAM/34ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಯುವಾನ್ 1,199 (ಅಂದಾಜು 12,500 ರೂ.) ಹಾಗೂ 4ಜಿಬಿ RAM/64ಜಿಬಿ ಆಂತರಿಕ ಮೆಮೊರಿಯ ಫೋನಿಗೆ ಯುವಾನ್ 1,299 (ಅಂದಾಜು 13,500 ರೂ.) ಬೆಲೆ ನಿಗದಿ ಮಾಡಿದೆ.

    ರೆಡ್‍ಮಿ 6 ಪ್ರೋ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 149.33 X 71.68 X 8.75ಮಿ.ಮೀ., 178 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 5.84 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(2280X1080 ಪಿಕ್ಸೆಲ್, 19:9 ಅನುಪಾತ 432ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಎಂಎಸ್‍ಎಂ 8953 ಸ್ನ್ಯಾಪ್ ಡ್ರಾಗನ್ 625 ಆಕ್ಟಾ ಕೋರ್ ಪ್ರೊಸೆಸರ್ 2.0 ಗೀಗಾಹಟ್ರ್ಸ್-ಕಾರ್ಟೆಕ್ಸ್-ಎ53ಸಿಪಿಯು, ಅಡ್ರಿನೋ 506 ಗ್ರಾಫಿಕ್ಸ್ ಪ್ರೊಸೆಸರ್, ಎಂಐ 10 ಆವೃತ್ತಿ ಅಪ್‍ಡೇಟೆಡ್, 256 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ ,3ಜಿಬಿ RAM/32 ಜಿಬಿ, 4ಜಿಬಿ RAM/32 ಜಿಬಿ ಹಾಗೂ 4ಜಿಬಿ RAM/64 ಜಿಬಿ ಆಂತರಿಕ ಮೆಮೊರಿ.

    ಕ್ಯಾಮೆರಾ:
    ಮುಂಭಾಗ 5ಎಂಪಿ, ಸಾಪ್ಟ್ ಟೋನ್ ಸೇಲ್ಪಿ ಲೈಟ್ ವಿತ್ ಆಟೋ ಪೇಸ್ ಡಿಟೆಕ್ಷನ್, ಹೆಚ್‍ಡಿಆರ್ ಕ್ಯಾಮೆರಾ, ಹಿಂಭಾಗ 12ಎಂಪಿ+5ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಬ್ಯಾಕ್‍ಗ್ರೌಂಡ್ ಬ್ಲರ್ ಪ್ಯೂಚರ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್, ಟಚ್ ಫೋಕಸ್.

    ಇತರೆ ಪ್ಯೂಚರ್ ಗಳು: ಫೇಸ್ ಡಿಟೆಕ್ಷನ್ ಅನ್‍ಲಾಕ್, ಫಿಂಗರ್ ಪ್ರಿಂಟ್, 4000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ, ಹಾಗೂ 5ವೋಟ್ಸ್ ನ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.