ಅನಾವರಣ (Anavarana) ಸಿನಿಮಾದ ಹಾಡುಗಳು ಈಗಾಗಲೇ ಭಾರೀ ಸದ್ದು ಮಾಡುತ್ತಿದ್ದು, ಇದೀಗ ಮೊದಲ ನೋಟ ಬಿಡುಗಡೆಯಾಗಿದೆ. ಪ್ರೀತಿ, ಕೊಲೆ ಕುಟುಂಬ, ಎಮೋಷನ್ ಜೊತೆಗೆ ಸಸ್ಪೆನ್ಸ್ ಅಂಶಗಳಿಂದ ಕೂಡಿರುವ ಚಿತ್ರದ ಟ್ರೈಲರ್ (Trailer) ನ್ನು ಕಿಚ್ಚ ಸುದೀಪ್ ಬಿಡುಗಡೆ ಮಾಡಿ ಶುಭಾಶಯ ಕೋರಿದ್ದಾರೆ.
ಕಿಚ್ಚ ಸುದೀಪ್ (Kiccha Sudeep) ಮಾತನಾಡಿ, ರಾಮಚಂದ್ರ, ಅದ್ವೈತ್ ಪ್ರಭಾಕರ್ ನಿರ್ಮಾಣ ಮಾಡಿರುವ, ಮೊದಲ ಬಾರಿಗೆ ಮಂಜು ಹರಿ ನಿರ್ದೇಶನ ಮಾಡಿರುವ, ಅರ್ಜುನ್ ಯೋಗಿ (Arjun Yogi) ನಟನೆಯ ಅನಾವರಣ ಸಿನಿಮಾದ ಟ್ರೈಲರ್ ನೋಡಿದೆ. ಅವರ ತಂಡಕ್ಕೆ ಅವರ ಪರಿಶ್ರಮಕ್ಕೆ ಒಳ್ಳೆದಾಗಲಿ. ಟ್ರೈಲರ್ ನೋಡ್ತಾ ಇರಬೇಕಾದ್ರೆ ಬಹಳ ಪರಿಚಯಸ್ಥರು ತುಂಬ ಜನ ಸಿನಿಮಾದಲ್ಲಿದ್ದಾರೆ. ಎಲ್ಲರಿಗೂ ಒಳ್ಳೆದಾಗಲಿ ಎಂದರು.
ಫ್ಯಾಮಿಲಿ ಡ್ರಾಮಾ ಜೊತೆಗೆ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಅನಾವರಣ ಸಿನಿಮಾ ಡಿಸೆಂಬರ್ ನಲ್ಲಿ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಹರೀಶ್ ಕುಮಾರ್ ಹಾಗೂ ಮಂಜುನಾಥ್ ಪಿಳ್ಳಪ್ಪ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ರಂಗ ಕಲಾವಿದರು ನಿರ್ದೇಶಕರು ಆಗಿರುವ ಹರೀಶ್ ಕುಮಾರ್ ಹಾಗೂ ಮಂಜುನಾಥ್ ಪಿಳ್ಳಪ್ಪ ಇಬ್ಬರು ಅನಾವರಣ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ 40ಕ್ಕೂ ಹೆಚ್ಚು ಕಿರು ಚಿತ್ರಗಳನ್ನು ಮಾಡಿರುವ ಅನುಭವ ಈ ಇಬ್ಬರು ನಿರ್ದೇಶಕರಿಗಿದೆ.
ನಮ್ಮ ಸಿನಿಮಾ ಬ್ಯಾನರ್ ನಡಿ ಅದ್ವೈತ್ ಪ್ರಭಾಕರ್, ಆರ್.ರಾಮಚಂದ್ರ, ಸತ್ಯ ರಾಣಿ ಜಿ ಮತ್ತು ರಚನಾ ಬಿ. ಹೆಚ್ ನಿರ್ಮಾಣಗೊಂಡಿರುವ ಅನಾವರಣ ಸಿನಿಮಾದಲ್ಲಿ ಅರ್ಜುನ್ ಯೋಗಿ, ಸಾರಿಕಾ ರಾವ್ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದು, ಗೌರೀಶ್ ಅಕ್ಕಿ, ನಂದ ಗೋಪಾಲ್, ಹೊನ್ನವಳ್ಳಿ ಕೃಷ್ಣ, ರಥಸಪ್ತಮಿ ಅರವಿಂದ್, ಕಾಮಿಡಿ ಕಿಲಾಡಿ ಸೂರಜ್, ಸೂರ್ಯ, ಸಂತು, ವಾಣಿ, ರಾಜೇಶ್ವರಿ, ಕಮಲಾ, ಯುಕ್ತಾ, ಧರಣಿ ಕುಮಾರ್, ಸಿದ್ದೀ ವಿನಾಯಕ, ಗಿರೀಶ್ ಯು.ಬಿ, ಶಿವರಾಜ್, ರಂಗೋಲಿ ವಿಜಿ, ರಾಜುಹಾಸನ್, ಬೇಬಿ ದೃತಿ ಶುತ್ವ ಮತ್ತು ಅಭಿ ತಾರಾಬಳಗದಲ್ಲಿದ್ದಾರೆ.
ವೆಂಕಿ ಸಂಕಲನ, ಡಾ.ವಿ.ನಾಗೇಂದ್ರ ಪ್ರಸಾದ್ ಮತ್ತು ಶಶಿಕುಮಾರ್ ಬೆಳಕವಾಡಿ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಹಿನ್ನಲೆ ಸಂಗೀತ ಬಿ.ಆರ್.ಹೇಮಂತ್ ಕುಮಾರ್, ವಿಶಾಲ್ ಸಿ ಕೃಷ್ಣ ಸಂಗೀತ, ನಂದಕುಮಾರ್ ಛಾಯಾಗ್ರಹಣ, ಮದನ್ ಹರಿಣಿ ಮತ್ತು ರಾಮ್ಜ್ ನೃತ್ಯ ಸಂಯೋಜನೆ ಸಿನಿಮಾಕ್ಕಿದೆ.
ನಮ್ಮ ಸಿನಿಮಾ ಬ್ಯಾನರ್ ನಡಿ ಅದ್ವೈತ್ ಪ್ರಭಾಕರ್, ಆರ್.ರಾಮಚಂದ್ರ, ಸತ್ಯ ರಾಣಿ ಜಿ & ರಚನಾ ಬಿ. ಹೆಚ್ ನಿರ್ಮಾಣದ ‘ಅನಾವರಣ’ (Anavarana) ಸಿನಿಮಾದ ಎರಡನೇ ಹಾಡು (Song) ಬಿಡುಗಡೆಯಾಗಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಏನಾಗಿದೆ ಎಂಬ ಪ್ರೇಮಗೀತೆಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಇದೀಗ ಅನಾವರಣ ಸಿನಿಮಾದ ರೀ ದೇವರೇ ಎಂಬ ಮತ್ತೊಂದು ಗಾನಬಜಾನ ಬಿಡುಗಡೆಯಾಗಿದೆ. ಗಂಡ ಹೆಂಡತಿ ನಡುವಿನ ಮೆಲೋಡಿ ಮಸ್ತಿಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದು, ಹರೀಶ್ ಕುಮಾರ್ ಬಿ.ಕೆ ಹಾಗೂ ಮೇಘನಾ ಕುಲಕರ್ಣಿ ಜೋಶಿ ಕಂಠ ಕುಣಿಸಿದ್ದಾರೆ. ಅರ್ಜುನ್ ಯೋಗಿ ಹಾಗೂ ಸಾರಿಕಾ ರಾವ್ ರೀ ದೇವರೇ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಅರ್ಜುನ್ ಯೋಗಿ (Arjun Yogi), ಸಾರಿಕಾ ರಾವ್ (Sarika Rao) ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದು, ಗೌರೀಶ್ ಅಕ್ಕಿ, ನಂದ ಗೋಪಾಲ್, ಹೊನ್ನವಳ್ಳಿ ಕೃಷ್ಣ, ರಥಸಪ್ತಮಿ ಅರವಿಂದ್, ಕಾಮಿಡಿ ಕಿಲಾಡಿ ಸೂರಜ್, ಸೂರ್ಯ, ಸಂತು, ವಾಣಿ, ರಾಜೇಶ್ವರಿ, ಕಮಲಾ, ಯುಕ್ತಾ, ಧರಣಿ ಕುಮಾರ್, ಸಿದ್ದೀ ವಿನಾಯಕ, ಗಿರೀಶ್ ಯು.ಬಿ, ಶಿವರಾಜ್, ರಂಗೋಲಿ ವಿಜಿ.. ಬೇಬಿ ದೃತಿ ಶುತ್ವ ಮತ್ತು ಅಭಿ ತಾರಾಬಳಗದಲ್ಲಿದ್ದಾರೆ. ರಂಗ ಕಲಾವಿದರು ನಿರ್ದೇಶಕರು ಆಗಿರುವ ಹರೀಶ್ ಕುಮಾರ್ ಹಾಗೂ ಮಂಜುನಾಥ್ ಪಿಳ್ಳಪ್ಪ ಇಬ್ಬರು ಅನಾವರಣ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಈಗಾಗಲೇ 40ಕ್ಕೂ ಹೆಚ್ಚು ಕಿರು ಚಿತ್ರಗಳನ್ನು ಮಾಡಿರುವ ಅನುಭವ ಈ ಇಬ್ಬರು ನಿರ್ದೇಶಕರಿಗಿದೆ.
ವೆಂಕಿ UDV ಸಂಕಲನ, ಡಾ.ವಿ.ನಾಗೇಂದ್ರ ಪ್ರಸಾದ್ ಮತ್ತು ಶಶಿಕುಮಾರ್ ಬೆಳಕವಾಡಿ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ಹಿನ್ನಲೆ ಸಂಗೀತ ಬಿ.ಆರ್.ಹೇಮಂತ್ ಕುಮಾರ್, ವಿಶಾಲ್ ಸಿ ಕೃಷ್ಣ ಸಂಗೀತ, ನಂದಕುಮಾರ್ ಛಾಯಾಗ್ರಹಣ, ಮದನ್ ಹರಿಣಿ ಮತ್ತು ರಾಮ್ಜ್ ನೃತ್ಯ ಸಂಯೋಜನೆ ಸಿನಿಮಾಕ್ಕಿದೆ. ಫ್ಯಾಮಿಲಿ ಡ್ರಾಮಾ ಜೊತೆಗೆ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಅನಾವರಣ ಸಿನಿಮಾ ಡಿಸೆಂಬರ್ 1ಕ್ಕೆ ರಾಜ್ಯಾದ್ಯಂತ ರಿಲೀಸ್ ಆಗಲಿದ್ದು, ವಿಜಯ್ ಸಿನಿಮಾಸ್ ಬಿಡುಗಡೆ ಮಾಡಲಿದ್ದಾರೆ.
ನಟ ಅರ್ಜುನ್ ಯೋಗಿ ಕಿರುತೆರೆಯಲ್ಲಂತೂ ಬಹಳಷ್ಟು ಹೆಸರು ಮಾಡಿದರು. ವರ್ಷಗಳ ಕಾಲ ಕಿರುತೆರೆಯಲ್ಲಿ ಅಭಿನಯಿಸಿ ತಮ್ಮ ನಟನೆಯ ಮೂಲಕ ಕಿರುತೆರೆ ಪ್ರಿಯರನ್ನು ರಂಜಿಸಿದ್ದಲ್ಲದೆ ಬೆಳ್ಳಿತೆರೆಯಲ್ಲೂ ಅದ್ಭುತಗಳಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿ ತಮ್ಮ ಅಭಿನಯ ಶಕ್ತಿಯನ್ನು ತೋರಿಸಿದರು. ಧಾರಾವಾಹಿ ಅಷ್ಟೇ ಅಲ್ಲದೆ ಕೆಲವು ರಿಯಾಲಿಟಿ ಶೋಗಳಲ್ಲಿಯೂ ಇವರು ಚೆನ್ನಾಗಿ ಹೆಸರು ಮಾಡಿದ್ದಾರೆ.
ನಮ್ಮ ಸಿನಿಮಾ ಬ್ಯಾನರ್ ನಡಿ ಅದ್ವೈತ್ ಪ್ರಭಾಕರ್, ಆರ್. ರಾಮಚಂದ್ರ, ಸತ್ಯ ರಾಣಿ ಜಿ ಮತ್ತು ರಚನಾ ಬಿ. ಹೆಚ್ ನಿರ್ಮಾಣದ ‘ಅನಾವರಣ’ (Anavarana) ಸಿನಿಮಾದ ಮೊದಲ ಹಾಡು ರಿಲೀಸ್ ಆಗಿದೆ. ಏನಾಗಿದೆ ಎಂಬ ಪ್ರೇಮಗೀತೆಗೆ ಶಶಿಕುಮಾರ್ ಬೆಳವಾಡಿ ಸಾಹಿತ್ಯ ಬರೆದಿದ್ದು, ವಿಶಾಲ್ ಸಿ ಕೃಷ್ಣ ಟ್ಯೂನ್ ಹಾಕಿದ್ದಾರೆ. ಅರ್ಜುನ್ ಯೋಗಿ (Arjun Yogi), ಸಾರಿಕಾ ರಾವ್ (Sarika Rao) ಹಾಡಿನಲ್ಲಿ ಮಿಂಚಿದ್ದಾರೆ.
ನಿರ್ದೇಶಕ ಹರೀಶ್ ಕುಮಾರ್ (Harish Kumar) ಮಾತನಾಡಿ, ಇದು ನಮ್ಮ ಹಲವಾರು ವರ್ಷದ ಕನಸು. ನಾನು 15 ವರ್ಷ ರಂಗಭೂಮಿಯಲ್ಲಿ ದುಡಿದೆವು. ಸಿನಿಮಾ ಸೆಳೆತ ಬಂತು. 40 ಕಿರುಚಿತ್ರ ನಿರ್ದೇಶಿಸಿದ್ದೇವೆ. ನಮ್ಮ ಕಥೆ ಒಳ್ಳೆ ಒಮ್ಮತ ಬಂತು. ಹೀಗಾಗಿ ಚಿತ್ರ ಮಾಡಲು ಹೆಜ್ಜೆ ಇಟ್ಟೆವು. ಚಿತ್ರದಲ್ಲಿ ಬರುವ ಹಲವಾರು ವಿಶೇಷತೆಗಳ ಅನಾವರಣ. ನಮ್ಮ ನಿರ್ದೇಶಕರ ಪಯಣಕ್ಕೆ ಅನಾವರಣ. ಒಳ್ಳೆ ಸಾಹಿತ್ಯದ ಅನಾವರಣ, ಇಬ್ಬರು ಬೆನ್ನುತಟ್ಟಿದ ನಿರ್ಮಾಪಕ ಅನಾವರಣ.. ನಮ್ಮದೇ ಕಥೆ ಅನಿಸುವ ಸಿನಿಮಾವಿದು ಎಂದರು. ನಿರ್ದೇಶಕ ಮಂಜುನಾಥ್ ಮಾತನಾಡಿ, ತುಂಬಾ ಪ್ರೀತಿ ಮಾಡುವವರು, ತುಂಬಾ ಪ್ರೀತಿಯಾದರೆ ಯಾವ ರೀತಿ, ಕಾಟ, ಭಾದೆ ಇರುತ್ತದೆ ಅನ್ನುವುದನ್ನು ಸಿನಿಮಾದಲ್ಲಿ ತೋರಿಸಿದ್ದೇವೆ ಎಂದರು.
ಅರ್ಜುನ್ ಯೋಗಿ ಮಾತನಾಡಿ, ನನ್ನ ಹಿಂದಿನ ಸಿನಿಮಾ ಚೇಸ್ ನೋಡಿ ಕಾಲ್ ಮಾಡಿದ್ದರು. ಚಿತ್ರ ರಿಲೀಸ್ ದಿನ ನಮ್ಮ ಕೆಲಸ ನೋಡಿ ಮೆಚ್ಚಿ ಇನ್ನೊಂದು ಕೆಲಸ ಕೊಡ್ತಾರೆ ಅದೇ ಖುಷಿ ವಿಚಾರ. ಅನಾವರಣ ಚಿತ್ರಕ್ಕೆ ಇಬ್ಬರು ನಿರ್ದೇಶಕರು. ಅವರು ಏನ್ ಕಥೆ ಹೇಳಿದ್ದರು ಅದಕ್ಕಿಂತ ದುಪ್ಪಟ್ಟಾಗಿ ಸಿನಿಮಾ ಮೂಡಿಬಂದಿದೆ. ಗ್ಲಿಂಪ್ಸ್, ಟ್ರೇಲರ್ ನೋಡಿದ್ದೇನೆ. ಈ ತಂಡ ಗೆದ್ದರೆ ಇನ್ನೊಂದಿಷ್ಟು ಸಿನಿಮಾಗಳು ಹುಟ್ಟಿಕೊಳ್ಳುತ್ತದೆ. ತುಂಬಾ ಚೆನ್ನಾಗಿ ಕಥೆ ಕಟ್ಟಿದ್ದಾರೆ. ನನಗೆ ಬಹಳ ಇಷ್ಟವಾಗಿದೆ. ನಾನು ಸಾಫ್ಟ್ ವೇರ್ ಇಂಜಿನಿಯರ್ ಪಾತ್ರ. ಒಂದೊಳ್ಳೆ ತಂಡದ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ ಎಂದರು.
ನಟಿ ಸಾರಿಕಾ ಮಾತನಾಡಿ, ತುಂಬಾ ಪೊಸೆಸಿವ್ ನೆಸ್ ಆಗಿರುವ ಹುಡುಗಿ ಪಾತ್ರ ನನ್ನದು. ನಿಮಗೆ ಎಲ್ಲರಿಗೂ ಕೋಪ ಬರುತ್ತದೆ ಅಂತಹ ಕಾರೆಕ್ಟರ್. ಗಂಡ ಎಲ್ಲಿ ಹೋಗಲಿ ಬಿಡ್ಲಿ ಅವನಿಗೆ ಅಷ್ಟು ಟಾರ್ಚರ್ ಕೊಟ್ಟಾಗಿ ಬಿಟ್ಟಿದ್ದೇನೆ. ಶೂಟಿಂಗ್ ಸೆಟ್ ನಲ್ಲಿ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದೇನೆ. ಶೂಟಿಂಗ್ ಅನಿಸುತ್ತನೆ ಇರಲಿಲ್ಲ. ಹಾಲಿಡೇ ತರ ಇತ್ತು. ಮಂಜು ಸರ್ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ. ನಿಮ್ಮ ಆಶೀರ್ವಾದ ನಮ್ಮ ಇಡೀ ತಂಡದ ಮೇಲೆ ಇರಬೇಕು ಎಂದರು.
ಅರ್ಜುನ್ ಯೋಗಿ, ಸಾರಿಕಾ ರಾವ್ ನಾಯಕ ಹಾಗೂ ನಾಯಕಿಯಾಗಿ ನಟಿಸಿದ್ದು, ,ಗೌರೀಶ್ ಅಕ್ಕಿ, ನಂದ ಗೋಪಾಲ್, ಹೊನ್ನವಳ್ಳಿ ಕೃಷ್ಣ, ರತಸಪ್ತಮಿ ಅರವಿಂದ್, ಕಾಮಿಡಿ ಕಿಲಾಡಿ ಸೂರಜ್, ಸೂರ್ಯ, ಸಂತು, ವಾಣಿ, ರಾಜೇಶ್ವರಿ, ಕಮಲಾ ತಾರಾಬಳಗದಲ್ಲಿದ್ದಾರೆ. ಆಗಿದೆ. ಹರೀಶ್ ಕುಮಾರ್, ಮಂಜುನಾಥ್ ಪಿಳ್ಳಪ್ಪ ಇಬ್ಬರು ಅನಾವರಣ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ವೆಂಕಿ ಸಂಕಲನ, ಶಶಿಕುಮಾರ್ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನ, ವಿಶಾಲ್ ಸಿ ಕೃಷ್ಣ ಸಿನಿಮಾಕ್ಕಿದೆ. ಫ್ಯಾಮಿಲಿ ಡ್ರಾಮಾ ಜೊತೆಗೆ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಅನಾವರಣ ಶೂಟಿಂಗ್ ಮುಗಿಸಿ ಸೆನ್ಸಾರ್ ಅಂಗಳ ಹೋಗಲು ರೆಡಿಯಾಗಿದೆ.
ನವದೆಹಲಿ: ಮಂಗಳವಾರದಂದು ಪ್ರಧಾನಿ ನರೇಂದ್ರ ಮೋದಿ ಅವರು ಬರೋಬ್ಬರಿ 800 ಕೆ.ಜಿ ತೂಕದ, 670 ಪುಟಗಳನ್ನು ಹೊಂದಿರುವ ಹಿಂದೂಗಳ ಪವಿತ್ರ ಗಂಥವಾದ ಭಗವದ್ಗೀತೆಯನ್ನು ದೆಹಲಿಯ ಇಸ್ಕಾನ್ ದೇವಾಲಯದ ಆವರಣದಲ್ಲಿ ಅನಾವರಣಗೊಳಿಸಲಿದ್ದಾರೆ.
ದೆಹಲಿಯ ಪೂರ್ವ ಕೈಲಾಸ್ ಪ್ರದೇಶದಲ್ಲಿರುವ ಇಸ್ಕಾನ್ ದೇವಸ್ಥಾನದ ಆವರಣದಲ್ಲಿ ನಾಳೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮೋದಿ ಅವರು ಬೃಹತ್ ಭಗವದ್ಗೀತೆ ಗ್ರಂಥವನ್ನು ಅನಾವರಣ ಮಾಡಲಿದ್ದಾರೆ. ಈ ಬೃಹತ್ ಭಗವದ್ಗೀತೆಯೂ 670 ಪುಟಗಳನ್ನು ಹೊಂದಿದ್ದು, 2.8 ಮೀಟರ್ ಎತ್ತರ ಮತ್ತು 2 ಮೀಟರ್ ಉದ್ದವಿದೆ. ಆದರಿಂದ ಅತಿದೊಡ್ಡ ಮುದ್ರಿತ ಪವಿತ್ರ ಗ್ರಂಥ ಎಂಬ ಹೆಗ್ಗಳಿಕೆ ಪಡೆಯಲಿದೆ.
ವಿಶ್ವದೆಲ್ಲೆಡೆ ಸುಮಾರು 400 ಕ್ಕೂ ಹೆಚ್ಚು ಕೃಷ್ಣ ದೇಗುಲ ಹಾಗೂ 100ಕ್ಕೂ ಹೆಚ್ಚು ಸಸ್ಯಾಹಾರಿ ರೆಸ್ಟೊರೆಂಟ್ ಗಳನ್ನು ಇಸ್ಕಾನ್ ಸಂಸ್ಥೆ ನಡೆಸುತ್ತಿದೆ. ವಿಶೇಷವಾಗಿ ಈ ಭಗವದ್ಗೀತೆಯ ಕಾಗದವು ವಾಟರ್ ಪ್ರೂಫ್ ಆಗಿದ್ದು, ಈ ಪವಿತ್ರ ಗ್ರಂಥವು 18 ಸೂಕ್ಷ್ಮ ವರ್ಣಚಿತ್ರಗಳ ಒಂದು ಕಲಾತ್ಮಕ ಸ್ಪರ್ಶದಿಂದ ಮತ್ತು ಸೊಗಸಾದ ವಿನ್ಯಾಸವನ್ನು ಹೊಂದಿದೆ. ಅಷ್ಟೇ ಅಲ್ಲದೆ ಯೂಪೊ ಸಿಂಥೆಟಿಕ್ ಲೇಪಿತ ಮಿಲನ್ ಬಳಸಿ ಇಟಲಿಯ ಮಿಲಾನ್‍ನಲ್ಲಿ ಗ್ರಂಥವನ್ನು ಮುದ್ರಿಸಲಾಗಿದೆ ಎಂದು ಇಸ್ಕಾನ್ ಮೂಲಗಳು ತಿಳಿಸಿವೆ.
ನವದೆಹಲಿ: ಭಾರತದ ಬಜೆಟ್ ಸ್ಮಾರ್ಟ್ ಫೋನ್‍ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕ್ಸಿಯೋಮಿಯು ರೆಡ್‍ಮಿ ನೋಟ್ 6 ಪ್ರೋ ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ನೂತನ ರೆಡ್‍ಮಿ ನೋಟ್ 6 ಪ್ರೋ ಆವೃತ್ತಿಯಲ್ಲಿ ಸೆಲ್ಫಿಗಾಗಿ 20+2 ಎಂಪಿ ಹೆಚ್‍ಡಿಆರ್ ಸೂಪರ್ ಪಿಕ್ಸೆಲ್ ಕ್ಯಾಮೆರಾ, ಹಿಂದುಗಡೆ 12+5 ಎಂಪಿ ಹೆಚ್‍ಡಿಆರ್ ಜೊತೆಗೆ ಡ್ಯುಯಲ್ ಟೋನ್ ಫ್ಲಾಶ್ ಹೊಂದಿದೆ.
ಎಂಐ ಆನ್‍ಲೈನ್ ಹಾಗೂ ಆಫ್‍ಲೈನ್ ಮತ್ತು ಫ್ಲಿಪ್‍ಕಾರ್ಟ್, ಅಮೆಜಾನ್ ಜಾಲತಾಣಗಳಲ್ಲಿ ಶುಕ್ರವಾರ ಮಧ್ಯಾಹ್ನ 12 ರಿಂದಲೇ ಸಿಗಲಿವೆ. ಇದೇ ದಿನ ಕ್ಸಿಯೋಮಿ ವಿಶೇಷ ಆಫರ್ ನೀಡಿದ್ದು, ನೂತನ ಸ್ಮಾರ್ಟ್ ಫೋನ್ ಗಳ 4ಜಿಬಿ ಹಾಗೂ 6ಜಿಬಿ ರ‍್ಯಾಮ್ ಗಳ ಮೇಲೆ 1 ಸಾವಿರ ರೂಪಾಯಿಯನ್ನು ಸಹ ಕಡಿತಗೊಳಿಸಿದೆ. ಈ ಆಫರ್ ಶುಕ್ರವಾರ ಖರೀದಿಸುವ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ.
ರೆಡ್‍ಮಿ ನೋಟ್ 6 ಪ್ರೋ ಗುಣವೈಶಿಷ್ಟ್ಯಗಳು: ಬೆಲೆ ಎಷ್ಟು?
4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಗೆ 13,999 ರೂಪಾಯಿ ಹಾಗೂ 6 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಗೆ 15,999 ರೂಪಾಯಿ ಬೆಲೆಯನ್ನು ನಿಗಪಡಿಸಿದ್ದು, ಬ್ಲಾಕ್, ಬ್ಲ್ಯೂ, ರೋಸ್ ಗೋಲ್ಡ್ ಹಾಗೂ ರೆಡ್ ಬಣ್ಣಗಳಲ್ಲಿ ಲಭ್ಯವಿರಲಿದೆ.
ಬಾಡಿ ಮತ್ತು ಡಿಸ್ಪ್ಲೇ:
157.9 X 76.4 X 8.3 ಮಿ.ಮೀ., 182 ಗ್ರಾಂ ತೂಕ, ಹೈಬ್ರಿಡ್ ಡ್ಯುಯಲ್ ಸಿಮ್(ನ್ಯಾನೋ ಸಿಮ್ – ಡ್ಯುಯಲ್ ಸ್ಟ್ಯಾಂಡ್-ಬೈ), 6.26 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080 X 2280ಪಿಕ್ಸೆಲ್, 19:9 ಅನುಪಾತ 403ಪಿಪಿಐ)
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನಾಪ್ ಡ್ರಾಗನ್ 636 ಅಕ್ಟಾ ಕೋರ್ ಪ್ರೊಸೆಸರ್, 1.8 ಗೀಗಾಹರ್ಟ್ಸ್ ಸ್ಪೀಡ್, ಅಡ್ರಿನೋ 508 ಗ್ರಾಫಿಕ್ ಪ್ರೋಸೆಸರ್, ಎಂಐ 9.0 ಆವೃತ್ತಿ ಅಪ್‍ಡೇಟೆಡ್, 4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ ಹಾಗೂ 6 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದೆ. ಹೆಚ್ಚುವರಿ 256 ಜಿಬಿ ವರೆಗೆ ವಿಸ್ತರಿಸಬಹುದು.
At #Xiaomi, we have been continuously improving our low-light camera capabilities to provide the best possible results.
With the #RedmiNote6Pro, we’ve introduced a wider aperture. The large 1.4μm sensor allows 25% more light intake, resulting in clearer photos, even in low-light pic.twitter.com/Grq6p5qz3h
ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
ಮುಂಭಾಗ 20+2 ಎಂಪಿ ಡ್ಯುಯಲ್ ಕ್ಯಾಮೆರಾ ಹೊಂದಿದ್ದು ಸಾಫ್ಟ್ ಟೋನ್ ಸೆಲ್ಫಿ ಕ್ಯಾಮೆರಾ, ಹಿಂದುಗಡೆ 12+5 ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಫಿಂಗರ್ ಪ್ರಿಂಟ್ ಸೆನ್ಸರ್, ಗೊರಿಲ್ಲಾ ಗ್ಲಾಸ್ ಪ್ರೋಟೆಕ್ಷನ್, ಜೊತೆಗೆ 4,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.
ನವದೆಹಲಿ: ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಯಾದ ಮೊಟೊರೊಲ ಭಾರತದಲ್ಲಿ ತನ್ನ ನೂತನ ಮೊಟೊ 6 ಫ್ಲಸ್ ಆವೃತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆಮಾಡಿದೆ.
ನೂತನ ಮೊಟೊ 6 ಪ್ಲಸ್ ಆವೃತ್ತಿಯಲ್ಲಿ ಸೆಲ್ಫಿಗಾಗಿ 8 ಎಂಪಿ ಹೆಚ್‍ಡಿಆರ್ ಕ್ಯಾಮೆರಾ, ಹಿಂದುಗಡೆ 12+5 ಎಂಪಿ ಹೆಚ್‍ಡಿಆರ್ ಜೊತೆಗೆ ಡ್ಯುಯಲ್ ಟೋನ್ ಫ್ಲಾಶ್ ಹೊಂದಿದೆ. ಗೋಲ್ಡ್, ಡೀಪ್ ಇಂಡಿಗೋ ಹಾಗೂ ನಿಮ್‍ಬಸ್ ಬಣ್ಣಗಳಲ್ಲಿ ಫೋನ್ ಲಭ್ಯವಿದ್ದು, ಮೊಟೊರೊಲ ಆಫ್‍ಲೈನ್, ಆನ್‍ಲೈನ್ ಸ್ಟೋರ್ ಹಾಗೂ ಅಮೇಜಾನ್ ಜಾಲತಾಣದಲ್ಲಿ ಸಿಗಲಿದೆ.
ಮೊಟೊ 6 ಪ್ಲಸ್ ಫೋನಿನ ಮೇಲೆ ಪೇಟಿಎಂ ಗ್ರಾಹಕರು 3,000 ರೂಪಾಯಿಗಳ ಕ್ಯಾಶ್ ಡಿಸ್ಕೌಂಟ್ ನೀಡಲಾಗಿದ್ದು, ಗ್ರಾಹಕರು ಆಫ್‍ಲೈನ್ ಮಾರುಕಟ್ಟೆಗಳಲ್ಲಿ ಪೇಟಿಎಂ ಆ್ಯಪ್ ಮೂಲಕ ಹಣ ಪಾವತಿಸಿದರೆ, ತಕ್ಷಣವೇ ಡಿಸ್ಕೌಂಟ್ ಹಣ ಖಾತೆಗೆ ವರ್ಗಾವಣೆಗೊಳ್ಳುತ್ತದೆ.
ಇದಲ್ಲದೇ ಜಿಯೋ ಆ್ಯಪ್ ಗ್ರಾಹಕರು ಸಹ 4,500 ರೂಪಾಯಿ ವರೆಗಿನ ಕ್ಯಾಶ್ ಡಿಸ್ಕೌಂಟ್ ಇದೆ. ಗ್ರಾಹಕರು ಜಿಯೋದ 198 ಹಾಗೂ 299 ರೂಪಾಯಿಗಳನ್ನು ರೀಚಾರ್ಜ್ ಮಾಡಿಸಿದರೆ ಕೂಡಲೇ 2,200 ರೂಪಾಯಿ ಕ್ಯಾಶ್ ಡಿಸ್ಕೌಂಟ್ ಜೊತೆಗೆ, 1,250 ರೂಪಾಯಿ ಮೌಲ್ಯದ ಕ್ಲಿಯರ್ ಟ್ರಿಪ್ ಕ್ಯಾಶ್‍ಬ್ಯಾಕ್ ವೋಚರ್ ಹಾಗೂ 1,000 ರೂಪಾಯಿ ಮೌಲ್ಯದ Ajio.com ಡಿಸ್ಕೌಂಟ್ ವೋಚರ್ ಪಡೆದುಕೊಳ್ಳಬಹುದು.
ಮೊಟೊ 6 ಪ್ಲಸ್ ಫೋನಿನ ಗುಣವೈಶಿಷ್ಟ್ಯಗಳು: ಬೆಲೆ ಎಷ್ಟು?
6 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಗೆ 22,499 ರೂಪಾಯಿ ಬೆಲೆ ನಿಗದಿ ಪಡಿಸಿದೆ. ಭಾರತದಲ್ಲಿ ಒಂದೇ ಆವೃತ್ತಿ ಲಭ್ಯವಿರಲಿದೆ.
ಬಾಡಿ ಮತ್ತು ಡಿಸ್ಪ್ಲೇ:
160 x 75.5 x 8 ಮಿ.ಮೀ., 167 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ), 5.9 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್ (1080×2160 ಪಿಕ್ಸೆಲ್, 18:9 ಅನುಪಾತ 409ಪಿಪಿಐ)
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.0 (ಓರಿಯೋ), ಸ್ನ್ಯಾಪ್ ಡ್ರಾಗನ್ 636 ಅಕ್ಟಾ ಕೋರ್ ಪ್ರೊಸೆಸರ್, 2.2 ಗೀಗಾಹರ್ಟ್ಸ್ ಸ್ಪೀಡ್, ಅಡ್ರಿನೊ 508 ಗ್ರಾಫಿಕ್ ಪ್ರೊಸೆಸರ್, 6 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ, ಹೆಚ್ಚುವರಿಯಾಗಿ 256 ಜಿಬಿ ವರೆಗೆ ವಿಸ್ತರಿಸಬಹುದು.
ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
ಮುಂಭಾಗ 8 ಎಂಪಿ, ಸಾಫ್ಟ್ ಟೋನ್ ಸೆಲ್ಫಿ ಕ್ಯಾಮೆರಾ, ಹಿಂಭಾಗ 12+5 ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸರ್, 3,200 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಹಾಗೂ 15 ವೋಟ್ಸ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.
Say hello to the all the new #motog6plus! Packed with a smart dual rear camera system & google lens, blazing-fast 6 GB RAM, a large 15 cm (5.9) full HD+ 18:9 max vision display & more, it is now available in stores and on Amazon India for Rs.22,499. pic.twitter.com/AjJtnYDF12
ನವದೆಹಲಿ: ಭಾರತದ ಬಜೆಟ್ ಸ್ಮಾರ್ಟ್ ಫೋನ್‍ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಕ್ಸಿಯೋಮಿಯು ತನ್ನ 6 ಸಿರೀಸ್ ನ ಎಂಐ 6ಎ, ಎಂಐ 6 ಹಾಗೂ ಎಂಐ 6 ಪ್ರೋ ಫೋನ್ ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ಕ್ಸಿಯೋಮಿಯ 6ಎ, 6 ಹಾಗೂ 6 ಪ್ರೋ ಫೋನುಗಳು ಎಂಐ ಆನ್‍ಲೈನ್ ಹಾಗೂ ಆಫ್‍ಲೈನ್ ಸ್ಟೋರ್ ಮತ್ತು ಅಮೇಜಾನ್ ಜಾಲತಾಣಗಳಲ್ಲಿ ಸೆಪ್ಟೆಂಬರ್ 11 ರಿಂದ ಲಭ್ಯವಿರಲಿದೆ.
ರೆಡ್‍ಮಿ ಎಂಐ 6ಎ ಗುಣವೈಶಿಷ್ಟ್ಯಗಳು:
ಬೆಲೆ ಎಷ್ಟು?
2 ಜಿಬಿ ರ‍್ಯಾಮ್/16 ಜಿಬಿ ಆಂತರಿಕ ಮೆಮೊರಿಗೆ 5,999 ರೂಪಾಯಿ ಹಾಗೂ 3 ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿಗೆ 6,999 ರೂಪಾಯಿ ಬೆಲೆಯನ್ನು ನಿಗಪಡಿಸಿದ್ದು, ಗ್ರೇ, ಬ್ಲೂ, ಗೋಲ್ಡ್ ಹಾಗೂ ರೋಸ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿರಲಿದೆ.
ಬಾಡಿ ಮತ್ತು ಡಿಸ್ಪ್ಲೇ:
147.5 x 71.5 x 8.3 ಮಿ.ಮೀ., 145 ಗ್ರಾಂ ತೂಕ, ಹೈಬ್ರಿಡ್ ಡ್ಯುಯಲ್ ಸಿಮ್(ನ್ಯಾನೋ ಸಿಮ್ – ಡ್ಯುಯಲ್ ಸ್ಟ್ಯಾಂಡ್-ಬೈ), 5.45 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720×1440 ಪಿಕ್ಸೆಲ್, 18:9 ಅನುಪಾತ 295ಪಿಪಿಐ)
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1 (ಓರಿಯೋ), ಮೀಡಿಯಾಟೆಕ್ ಹೀಲಿಯೋ ಎ22, ಕ್ವಾಡ್ ಕೋರ್ ಪ್ರೊಸೆಸರ್, 2.0 ಗೀಗಾಹರ್ಟ್ಸ್ ಸ್ಪೀಡ್, ಎಂಐ 9.0 ಆವೃತ್ತಿ ಅಪ್‍ಡೇಟೆಡ್, 2 ಜಿಬಿ ರ‍್ಯಾಮ್/16 ಜಿಬಿ ಆಂತರಿಕ ಮೆಮೊರಿ ಹಾಗೂ 3 ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದೆ. ಹೆಚ್ಚುವರಿ 256 ಜಿಬಿ ವರೆಗೆ ವಿಸ್ತರಿಸಬಹುದು.
ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
ಮುಂಭಾಗ 5 ಎಂಪಿ, ಸಾಫ್ಟ್ ಟೋನ್ ಸೆಲ್ಫಿ ಕ್ಯಾಮೆರಾ, ಹಿಂಭಾಗ 13 ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಜೊತೆಗೆ 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸೌಲಭ್ಯವನ್ನು ಹೊಂದಿದೆ.
ಬೆಲೆ ಎಷ್ಟು?
3 ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿಗೆ 7,999 ರೂಪಾಯಿ ಹಾಗೂ 4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಗೆ 9,499 ರೂಪಾಯಿ ಬೆಲೆಯನ್ನು ನಿಗದಿಪಡಿಸಿದೆ. ಗ್ರೇ, ಬ್ಲೂ, ಗೋಲ್ಡ್ ಹಾಗೂ ರೋಸ್ ಗೋಲ್ಡ್ ಬಣ್ಣಗಳಲ್ಲಿ ಲಭ್ಯವಿರಲಿದೆ.
ಬಾಡಿ ಮತ್ತು ಡಿಸ್ಪ್ಲೇ:
147.5 x 71.5 x 8.3 ಮಿ.ಮೀ., 146 ಗ್ರಾಂ ತೂಕ, ಹೈಬ್ರಿಡ್ ಡ್ಯುಯಲ್ ಸಿಮ್(ನ್ಯಾನೋ ಸಿಮ್ – ಡ್ಯುಯಲ್ ಸ್ಟ್ಯಾಂಡ್-ಬೈ), 5.45 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(720×1440 ಪಿಕ್ಸೆಲ್, 18:9 ಅನುಪಾತ 295 ಪಿಪಿಐ)
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1 (ಓರಿಯೋ), ಮೀಡಿಯಾಟೆಕ್ 6762 ಅಕ್ಟಾ ಕೋರ್ ಪ್ರೊಸೆಸರ್, 2.0 ಗೀಗಾಹರ್ಟ್ಸ್ ಸ್ಪೀಡ್, ಪವರ್ ವಿಆರ್ ಜೆ8320 ಗ್ರಾಫಿಕ್ಸ್ ಪ್ರೊಸೆಸರ್, ಎಂಐ 9 ಆವೃತ್ತಿ ಅಪ್‍ಡೇಟೆಡ್, 3 ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿ ಹಾಗೂ 4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, ಹೆಚ್ಚುವರಿ 256 ಜಿಬಿ ವರೆಗೆ ವಿಸ್ತರಣೆ ಮಾಡಬಹುದು.
ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
ಮುಂಭಾಗ 5 ಎಂಪಿ, ಸಾಫ್ಟ್ ಟೋನ್ ಸೆಲ್ಫಿ ಕ್ಯಾಮೆರಾ, ಹಿಂಭಾಗ 12ಎಂಪಿ+5ಎಂಪಿ ಡ್ಯುಯೆಲ್ ಕ್ಯಾಮೆರಾ ಜೊತೆಗೆ ಆಟೋಮ್ಯಾಟಿಕ್ ಹೆಚ್‍ಡಿಆರ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಇದಲ್ಲದೇ ಫಿಂಗರ್ ಪ್ರಿಂಟ್ ಸೆನ್ಸರ್ ಜೊತೆಗೆ 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಹಾಗೂ 5 ವೋಟ್ಸ್ ನ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸೌಲಭ್ಯವನ್ನು ಹೊಂದಿದೆ.
Introducing the all-new #Redmi6 – 12MP + 5MP AI dual camera, 1.25μm pixels – Helio P22, 12nm octa-core processor – 5.45" HD+ 18:9 full-screen display – Fingerprint sensor, AI face unlock
ಬೆಲೆ ಎಷ್ಟು?
3 ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿಗೆ 10,999 ರೂಪಾಯಿ ಹಾಗೂ 4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿಗೆ 12,999 ರೂಪಾಯಿ ಬೆಲೆ ನಿಗದಿಪಡಿಸಿದೆ. ಬ್ಲಾಕ್, ಬ್ಲೂ ಹಾಗೂ ಗೋಲ್ಡ್ ಬಣ್ಣಗಳಲ್ಲಿ ನೂತನ ಫೋನ್ ಲಭ್ಯವಿರಲಿದೆ.
ಬಾಡಿ ಮತ್ತು ಡಿಸ್ಪ್ಲೇ:
149.3 x 71.7 x 8.8 ಮಿ.ಮೀ., 178 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್ – ಡ್ಯುಯಲ್ ಸ್ಟ್ಯಾಂಡ್-ಬೈ), 5.84 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080×2280 ಪಿಕ್ಸೆಲ್, 19:9 ಅನುಪಾತ 432ಪಿಪಿಐ)
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನ್ಯಾಪ್ ಡ್ರಾಗನ್ 625 ಅಕ್ಟಾ ಕೋರ್ ಪ್ರೊಸೆಸರ್, 2.0 ಗೀಗಾಹರ್ಟ್ಸ್ ಸ್ಪೀಡ್, ಅಡ್ರಿನೋ 506 ಗ್ರಾಫಿಕ್ಸ್ ಪ್ರೊಸೆಸರ್, 3 ಜಿಬಿ ರ‍್ಯಾಮ್/32 ಜಿಬಿ ಆಂತರಿಕ ಮೆಮೊರಿ ಹಾಗೂ 4 ಜಿಬಿ ರ‍್ಯಾಮ್/64 ಜಿಬಿ ಆಂತರಿಕ ಮೆಮೊರಿ ಹೊಂದಿದ್ದು, ಹೆಚ್ಚುವರಿ 256 ಜಿಬಿವರೆಗೆ ವಿಸ್ತರಿಸಬಹುದು.
ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
ಮುಂಭಾಗ 5 ಎಂಪಿ, ಸಾಫ್ಟ್ ಟೋನ್ ಸೆಲ್ಫಿ ಲೈಟ್ ವಿತ್ ಆಟೋ ಫೇಸ್ ಡಿಟೆಕ್ಷನ್, ಹೆಚ್‍ಡಿಆರ್ ಕ್ಯಾಮೆರಾ, ಹಿಂಭಾಗ 12ಎಂಪಿ+5 ಎಂಪಿ ಡ್ಯುಯೆಲ್ ಕ್ಯಾಮೆರಾ ಜೊತೆಗೆ ಆಟೋಮ್ಯಾಟಿಕ್ ಹೆಚ್‍ಡಿಆರ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಹೊಂದಿದೆ. ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸರ್, 4,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಹಾಗೂ 5 ವೋಟ್ಸ್ ನ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.
ನವದೆಹಲಿ: ಸ್ಯಾಮ್‍ಸಂಗ್ ತನ್ನ ನೂತನ ಹೈ ಎಂಡ್ ಮಾದರಿಯ ಗೆಲಾಕ್ಸಿ ನೋಟ್ 9 ಸ್ಮಾರ್ಟ್ ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.
ನೂತನ ಗೆಲಾಕ್ಸಿ ನೋಟ್ 9 ಸ್ಮಾರ್ಟ್ ಫೋನ್ ಸೆಲ್ಫಿಗಾಗಿ 8ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 12ಎಂಪಿ+12ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾ ಹೊಂದಿದೆ. ತಾಮ್ರ, ನೇರಳೆ, ಸಮುದ್ರ ನೀಲಿ, ಕಪ್ಪು ಬಣ್ಣದಲ್ಲಿ ಈ ಫೋನ್ ಲಭ್ಯವಿದೆ.
ಬೆಲೆಎಷ್ಟು?
6ಜಿಬಿ RAM/128 ಜಿಬಿ ಆಂತರಿಕ ಮೆಮೊರಿ ಮಾದರಿಗೆ 67,900 ರೂ. ಆಗಿದ್ದು, 8ಜಿಬಿ RAM/512 ಜಿಬಿ ಆಂತರಿಕ ಮೆಮೊರಿ ಮಾದರಿಗೆ 84,900 ರೂ. ನಿಗದಿಯಾಗಿದೆ. ಆನ್‍ಲೈನ್ ಹಾಗೂ ಆಫ್‍ಲೈನ್ ಮಾರುಕಟ್ಟೆಗಳೆರಡರಲ್ಲೂ ನೂತನ ಸ್ಯಾಮಸಂಗ್ ಗೆಲಾಕ್ಸಿ ನೋಟ್ 9 ಸ್ಮಾರ್ಟ್ ಫೋನ್ ಖರೀದಿಗೆ ಸಿಗಲಿದೆ.
ಸ್ಯಾಮಸಂಗ್ ಗೆಲಾಕ್ಸಿ ನೋಟ್ 9ಫೋನಿನ ಗುಣ ವೈಶಿಷ್ಟ್ಯಗಳು: ಬಾಡಿ ಮತ್ತು ಡಿಸ್ಪ್ಲೇ: 161.9 x 76.4 x 8.8 ಮಿ.ಮೀ., 201 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ), 6.4 ಇಂಚಿನ ಸೂಪರ್ ಅಮೊಲೆಡ್ ಇನ್ಫಿನಿಟಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1440×2960 ಪಿಕ್ಸೆಲ್, 18.5:9 ಅನುಪಾತ 516ಪಿಪಿಐ)
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1 (ಓರಿಯೋ), ಎಕ್ಸಿನೋಸ್ 9810 ಅಕ್ಟಾ ಕೋರ್ ಪ್ರೊಸೆಸರ್ 2.8 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 630 ಗ್ರಾಫಿಕ್ ಪ್ರೊಸೆಸರ್ ಹೊಂದಿದ್ದು, 6ಜಿಬಿ RAM/128 ಜಿಬಿ ಆಂತರಿಕ ಮೆಮೊರಿ ಹಾಗೂ 8ಜಿಬಿ RAM/512 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದ್ದು, ಯಾವುದೇ ವಿಸ್ತರಣಾ ಸಾಮರ್ಥ್ಯ ಇಲ್ಲ.
ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
ಮುಂಭಾಗ 8ಎಂಪಿ, ಆಟೋ ಎಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂಭಾಗ 12ಎಂಪಿ+12ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸರ್, ಐರಿಸ್ ಸೆನ್ಸರ್ ಹೊಂದಿದೆ. 4,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು ಜೊತೆಗೆ ಫಾಸ್ಟ್ ಚಾರ್ಜಿಂಗ್(ಕ್ವಿಕ್ ಚಾರ್ಜ್ 2.0) ಸೌಲಭ್ಯವನ್ನು ಹೊಂದಿದೆ.
ನವದೆಹಲಿ: ಬಜೆಟ್ ಸ್ಮಾರ್ಟ್ ಫೋನ್‍ಗಳ ತಯಾರಿಕಾ ಸಂಸ್ಥೆಯಾದ ಕ್ಸಿಯೋಮಿ ತನ್ನ ನೂತನ ಎಂಐ ಎ2 ಆವೃತ್ತಿಯನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಮಾಡಿದೆ.
ನೂತನ ರೆಡ್‍ಮೀ ಎಂಐ ಎ2 ಸ್ಮಾರ್ಟ್ ಫೋನ್‍ನಲ್ಲಿ ಅತ್ಯುತ್ತಮ ಸೆಲ್ಫಿಗಾಗಿ 20ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 12ಎಂಪಿ+20ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾವಿದೆ. ರೆಡ್, ಬ್ಲೂ, ಗೋಲ್ಡ್, ರೋಸ್ ಗೋಲ್ಡ್ ಹಾಗೂ ಬ್ಲಾಕ್ ಕಲರ್ ಗಳಲ್ಲಿ ಈ ಫೋನ್ ಲಭ್ಯವಿದೆ.
ಬೆಲೆ ಎಷ್ಟು?
ನೂತನ 6 ಜಿಬಿ RAM/64 ಜಿಬಿ ಆವೃತ್ತಿಗೆ 16,990 ಬೆಲೆ ನಿಗದಿಪಡಿಸಿದ್ದು, ಎಂಐ ವೆಬ್‍ಸೈಟ್ ಹಾಗೂ ಅಮೇಜಾನ್ ವೆಬ್‍ಸೈಟ್ ನಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಯಿಂದ ಲಭ್ಯವಿರಲಿದೆ.
ರೆಡ್‍ಮಿ ಎಂಐ ಎ2 ಗುಣ ವೈಶಿಷ್ಟ್ಯಗಳು: ಬಾಡಿ ಮತ್ತು ಡಿಸ್ಪ್ಲೇ: 158.7 x 75.4 x 7.3 ಮಿ.ಮೀ., 166 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ), 5.99 ಇಂಚಿನ ಐಪಿಸಿ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080X2160 ಪಿಕ್ಸೆಲ್, 18:9 ಅನುಪಾತ 403ಪಿಪಿಐ)
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಸ್ನ್ಯಾಪ್ ಡ್ರಾಗನ್ 660 ಅಕ್ಟಾ ಕೋರ್ ಪ್ರೊಸೆಸರ್, 2.2 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 512 ಗ್ರಾಫಿಕ್ಸ್ ಪ್ರೊಸೆಸರ್, ಎಂಐ 10 ಆವೃತ್ತಿ ಅಪ್‍ಡೇಟೆಡ್, 4 ಜಿಬಿ RAM/64 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದ್ದು, ಯಾವುದೇ ವಿಸ್ತರಣಾ ಸಾಮರ್ಥ್ಯ ಇಲ್ಲ.
ಕ್ಯಾಮೆರಾ:
ಮುಂಭಾಗ 20ಎಂಪಿ, ಸಾಫ್ಟ್ ಟೋನ್ ಸೆಲ್ಫಿ ಲೈಟ್ ವಿತ್ ಆಟೋ ಫೇಸ್ ಡಿಟೆಕ್ಷನ್, ಹೆಚ್‍ಡಿಆರ್ ಕ್ಯಾಮೆರಾ, ಹಿಂಭಾಗ 12ಎಂಪಿ+20ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಬ್ಯಾಕ್‍ಗ್ರೌಂಡ್ ಬ್ಲರ್ ಫೀಚರ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್, ಟಚ್ ಫೋಕಸ್.
ಇತರೆ ಫೀಚರ್ ಗಳು: ಫೇಸ್ ಡಿಟೆಕ್ಷನ್ ಅನ್‍ಲಾಕ್, ಫಿಂಗರ್ ಪ್ರಿಂಟ್, 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸಾಮರ್ಥ್ಯ ಹಾಗೂ 5 ವೋಟ್ಸ್ ನ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದೆ.
ನವದೆಹಲಿ: ಲಿನೊವೋ ಒಡೆತನದ ಮೊಟೊರೊಲ ಸ್ಮಾರ್ಟ್ ಫೋನ್ ತಯಾರಿಕಾ ಸಂಸ್ಥೆಯು ತನ್ನ ನೂತನ ಜೆಡ್ 3, 5ಜಿ ಆವೃತ್ತಿಯ ನೂತನ ಸ್ಮಾಟ್ ಫೋನನ್ನು ಅಮೇರಿಕಾದ ಚಿಕಾಗೋದಲ್ಲಿ ಅನಾವರಣಗೊಳಿಸಿದೆ.
ವಿಶ್ವದ ಹಳೆಯ ಮೊಬೈಲ್ ತಯಾರಿಕಾ ಸಂಸ್ಥೆಯಾದ ಮೊಟೊರೊಲಾ ಸದ್ಯ ಲಿನೊವೋ ಕಂಪೆನಿಯ ಒಡೆತನದಲ್ಲಿ ಸ್ಮಾರ್ಟ್ ಫೋನ್‍ಗಳನ್ನು ತಯಾರಿಸುತ್ತಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಂತೆ ನೂತನ ಫೀಚರ್ ಹೊಂದಿರುವ ಮೊಟೊರೊಲಾ ಈಗ ತನ್ನ 5ಜಿ ಆವೃತ್ತಿಯ ನೂತನ ಮೊಟೊರೊಲಾ ಜೆಡ್ 3 ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆಮಾಡಿದೆ.
ಮೊಟೊರೊಲಾ ಜೆಡ್ 3, 5ಜಿ ಸ್ಮಾರ್ಟ್ ಫೋನ್‍ನಲ್ಲಿ ಸೆಲ್ಫಿಗಾಗಿ 8ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 12ಎಂಪಿ+12ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾವಿದೆ. ಸೆರಾಮಿಕ್ ಬ್ಲಾಕ್ ಬಣ್ಣಗಳಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿದೆ. 2019ರ ವೇಳೆಗೆ ಭಾರತದಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿರಲಿದೆ ಎನ್ನಲಾಗಿದೆ.
ಬೆಲೆ ಎಷ್ಟು?
4ಜಿಬಿ RAM/64 ಜಿಬಿ ಆಂತರಿಕ ಮೆಮೊರಿಯ ಸ್ಮಾರ್ಟ್ ಫೋನಿಗೆ ಅಮೆರಿಕಾದಲ್ಲಿ 480 ಡಾಲರ್ ನಿಗದಿಪಡಿಸಿದೆ. (ಅಂದಾಜು 32,000 ರೂಪಾಯಿ)
ಜೆಡ್ 3 ಸ್ಮಾರ್ಟ್ ಫೋನಿನ ಗುಣ ವೈಶಿಷ್ಟ್ಯಗಳು: ಬಾಡಿ ಮತ್ತು ಡಿಸ್ಪ್ಲೇ: 156.5 x 76.5 x 6.8 ಮಿ.ಮೀ., 156 ಗ್ರಾಂ ತೂಕ, 5ಜಿ ಆವೃತ್ತಿಯ ಸಿಂಗಲ್ ಸಿಮ್(ನ್ಯಾನೋ ಸಿಮ್) ವಿತ್ ಮೆಮೊರಿ ಕಾರ್ಡ್ ಸೌಲಭ್ಯ, 6.1 ಇಂಚಿನ ಸೂಪರ್ ಅಮಾಲಾಯಿಡ್ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1080×160 ಪಿಕ್ಸೆಲ್, 18:9 ಅನುಪಾತ 402ಪಿಪಿಐ)
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ 8.1 (ಓರಿಯೋ), ಕ್ವಾಲಕಂ ಎಂಎಸ್‍ಎಂ 8998 ಸ್ನ್ಯಾಪ್ ಡ್ರಾಗನ್ 835 ಆಕ್ಟಾ ಕೋರ್ ಪ್ರೊಸೆಸರ್ 2.35 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 540 ಗ್ರಾಫಿಕ್ಸ್ ಪ್ರೊಸೆಸರ್, 1 ಟಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 4ಜಿಬಿ RAM/64 ಜಿಬಿ ಆಂತರಿಕ ಮೆಮೊರಿ ಹೊಂದಿದೆ.
ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
ಮುಂಭಾಗ 8ಎಂಪಿ ಹೆಚ್‍ಡಿಆರ್ ಕ್ಯಾಮೆರಾ, ಹಿಂಭಾಗ 12ಎಂಪಿ+12ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಆಟೋ ಬ್ಯಾಕ್‍ಗ್ರೌಂಡ್ ಬ್ಲರ್ ಪ್ಯೂಚರ್ ಹಾಗೂ ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದ್ದು, ಮುಂಭಾಗ ಹಾಗೂ ಹಿಂಭಾಗದಲ್ಲಿ ಗೊರಿಲ್ಲಾ ಸ್ಕ್ರೀನ್ ಪ್ರೊಟೆಕ್ಷನ್, ಫೇಸ್ ಡಿಟೆಕ್ಷನ್ ಅನ್‍ಲಾಕ್, ಫಿಂಗರ್ ಪ್ರಿಂಟ್ ಲಾಕ್ ಹಾಗೂ 3,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿಯನ್ನು ಹೊಂದಿದೆ.