Tag: ಅನಾನಿಮಸ್

  • ರಷ್ಯಾ ವಿರುದ್ಧ ವಿಶ್ವದ ಟೆಕ್ಕಿಗಳಿಂದ `ಸೈಬರ್ ವಾರ್’ ಘೋಷಣೆ!

    ರಷ್ಯಾ ವಿರುದ್ಧ ವಿಶ್ವದ ಟೆಕ್ಕಿಗಳಿಂದ `ಸೈಬರ್ ವಾರ್’ ಘೋಷಣೆ!

    ವಾಷಿಂಗ್ಟನ್: ರಷ್ಯಾ ಉಕ್ರೇನ್ ವಿರುದ್ಧ ನಿನ್ನೆಯಿಂದ ದಾಳಿ ಮಾಡುತ್ತಿದೆ. ಇದೇ ಸಂದರ್ಭದಲ್ಲಿ ರಷ್ಯಾ ಸರ್ಕಾರದ ವಿರುದ್ಧ ವಿಶ್ವದಾದ್ಯಂತ ಟೆಕ್ಕಿಗಳು `ಸೈಬರ್ ವಾರ್’ ಘೋಷಣೆ ಮಾಡಿದ್ದಾರೆ.

    ಅನಾನಿಮಸ್ ಹ್ಯಾಕಿಂಗ್ ಗ್ರೂಪ್, ರಷ್ಯಾ ಸರ್ಕಾರದ ವಿರುದ್ಧ ಸೈಬರ್ ವಾರ್ ಮಾಡುವುದಾಗಿ ನಿನ್ನೆ ರಾತ್ರಿ ಘೋಷಿಸಿದೆ. ಬ್ರಿಟನ್‍ನಲ್ಲಿ ಪ್ರಸಾರವಾಗುವ ಕ್ರೆಮ್ಲಿನ್ ಬೆಂಬಲಿತ ಟಿವಿ ಚಾನೆಲ್ RT ವೆವ್‍ ಸೆಟ್ ಅನ್ನು ಹ್ಯಾಕ್ ಮಾಡಿದೆ. ಸಂಬಂಧಪಟ್ಟವರು ವೆವ್‍ ಸೆಟ್ ಪ್ರವೇಶಿಸಲು ಪ್ರಯತ್ನಿಸಿದಾಗ, ಇನ್‍ಆಕ್ಷೆಸಬಲ್ ಆಗಿದೆ. ಅಲ್ಲದೇ ವೆವ್‍ ಸೆಟ್ ಎರರ್ ಎಂದು ತೋರಿಸಿದೆ. ಇದನ್ನೂ ಓದಿ: ರಷ್ಯಾ ದಾಳಿಯಿಂದ ರಕ್ಷಿಸಿಕೊಳ್ಳಲು ಭೂಗತ ಹ್ಯಾಕರ್‌ಗೆ ಉಕ್ರೇನ್ ಕರೆ!

    Hacking Collective Anonymous Declares 'Cyber War' Against Vladimir Putin's Government

    ಪುಟಿನ್ ಸರ್ಕಾರದ ವಿರುದ್ಧ ‘ಅನಾನಿಮಸ್’ ಸೈಬರ್ ವಾರ್ ಘೋಷಣೆ ಮಾಡಿದ್ದು, ರಷ್ಯಾದ ಪ್ರಚಾರ ಕೇಂದ್ರ RT ನ್ಯೂಸ್ ವೆವ್‍ ಸೆಟ್ ತೆಗೆದುಕೊಳ್ಳಲಾಗಿದೆ ಎಂದು ಬರೆದು ಟ್ವೀಟ್ ಮಾಡಲಾಗಿದೆ. ‘ಅನಾನಿಮಸ್’ ಈ ಹಿಂದೆ ಕು ಕ್ಲುಕ್ಸ್ ಕ್ಲಾನ್ ಮತ್ತು ಇಸ್ಲಾಮಿಕ್ ಉಗ್ರಗಾಮಿಗಳ ಗುಂಪಿಗೆ ಸೇರಿದವರನ್ನು ಗುರಿಯಾಗಿಸಿಕೊಂಡಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ಜನರು ಈ ಕುರಿತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ನೆಟ್ಟಿಗರೊಬ್ಬರು, ಥ್ಯಾಂಕ್ಸ್ `ಅನಾನಿಮಸ್’, ಅವರ ಹಣಕಾಸು ಬರಿದಾಗುತ್ತೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೀವು ಅದ್ಭುತ, ಧನ್ಯವಾದಗಳು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಥ್ಯಾಂಕ್ಸ್, ಲವ್ ಯೂ, ಇದು ನಿಜವಾಗಿಯೂ ಖುಷಿಯಾದ ವಿಷಯ ಎಂದು ಹೇಳಿದ್ದಾರೆ.

    ಪ್ರಸ್ತುತ ಈ ಹ್ಯಾಕರ್ಸ್ ‘ಅನಾನಿಮಸ್’ ಎಂದು ಹೆಸರಿಟ್ಟುಕೊಂಡಿದ್ದಾರೆ. ಅವರನ್ನು ಗೈ ಫಾಕ್ಸ್ ಮುಖವಾಡಗಳಿಂದ ಗುರುತಿಸಲಾಗುತ್ತದೆ. ಕಳೆದ ವರ್ಷ ಜುಲೈನಲ್ಲಿ, ಟೆಸ್ಲಾ ಸಂಸ್ಥಾಪಕ ಎಲೋನ್ ಮಸ್ಕ್ ಅವರಿಗೂ ಹ್ಯಾಕರ್‍ಗಳು ಎಚ್ಚರಿಕೆ ನೀಡಿದ್ದರು. ಕ್ರಿಪ್ಟೋಕರೆನ್ಸಿ ಮಾರುಕಟ್ಟೆಗಳ ಮೇಲೆ ಹೆಚ್ಚಿನ ಅಧಿಕಾರವನ್ನು ಹೊಂದಿದ್ದೇವೆ ಎಂಬ ಮಸ್ಕ್ ಹೇಳಿಕೆಯನ್ನು ಗುರಿಯಾಗಿಸಿಕೊಂಡು ಅನಾನಿಮಸ್ ಎಚ್ಚರಿಕೆ ನೀಡಿತ್ತು. ಇದನ್ನೂ ಓದಿ:  ವೈದ್ಯ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳು ಉಕ್ರೇನ್, ರಷ್ಯಾಗೇ ಹೆಚ್ಚಾಗಿ ಯಾಕೆ ಹೋಗ್ತಾರೆ ಗೊತ್ತಾ?

    ಸೈಬರ್ ಯುದ್ಧ ಘೋಷಣೆಯಾಗಿದ್ದು, ಮುಂದಿನ ದಿನಗಳಲ್ಲಿ ರಷ್ಯಾವನ್ನು ವ್ಯವಸ್ಥಿತ ಹ್ಯಾಕಿಂಗ್ ಪ್ರಯತ್ನಗಳಿಗೆ ಒಳಪಡಿಸುವ ನಿರೀಕ್ಷೆಯನ್ನು ಹುಟ್ಟುಹಾಕಲಾಗಿದೆ.

  • ಅನಾನಿಮಸ್ ಅಂತಾ ಹೇಳಲು ಪೇಚಾಡಿದ ಟ್ರಂಪ್- ವಿಡಿಯೋ ನೋಡಿ

    ಅನಾನಿಮಸ್ ಅಂತಾ ಹೇಳಲು ಪೇಚಾಡಿದ ಟ್ರಂಪ್- ವಿಡಿಯೋ ನೋಡಿ

    ವಾಷಿಂಗ್ಟನ್: ಅನಾನಿಮಸ್ ಪದವನ್ನು ಉಚ್ಚರಿಸಲು ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪರದಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮೊಂಟಾನಾದಲ್ಲಿ ಟ್ರಂಪ್ ಬೆಂಬಲಿಗರ ಸಭೆ ನಡೆದಿತ್ತು. ಈ ವೇಳೆ ತಮ್ಮ ಸರ್ಕಾರದ ವಿರುದ್ಧ ಸೆಪ್ಟೆಂಬರ್ 5ರಂದು ನ್ಯೂಯಾರ್ಕ್ ಟೈಮ್ಸ್ ಸಂಪಾದಕೀಯ ಪುಟದಲ್ಲಿ ಲೇಖನವೊಂದು ಪ್ರಕಟಿಸಿತ್ತು. ಹೀಗಾಗಿ ಅದರ ವಿರುದ್ಧ ಧ್ವನಿ ಎತ್ತಿದ ಟ್ರಂಪ್ ವಾಗ್ದಾಳಿ ನಡೆಸಿದ್ದರು.

    ಅನಾಮದೇಯ ಹೆಸರಿನಲ್ಲಿ ಪ್ರಕಟವಾಗಿದ್ದ ಲೇಖನವೆಂದು ಹೇಳಲು ಮುಂದಾದ ಟ್ರಂಪ್, ‘ಅನಾನಿಮಸ್’ ಎನ್ನುವ ಪದವನ್ನು ಎರಡು ಬಾರಿ ಉಚ್ಚರಿಸಿದರು. ಆದರೆ ಸ್ಪಷ್ಟವಾಗಿ ಹೇಳಲು ಆಗಲಿಲ್ಲ. ಕಾರ್ಯಕ್ರಮದಲ್ಲಿ ಸೆರೆಯಾಗಿದ್ದ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಟ್ವಿಟ್ಟರ್‍ನಲ್ಲಿ ವಿಡಿಯೋ ಶೇರ್ ಮಾಡಿಕೊಂಡು ವ್ಯಂಗ್ಯವಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv