Tag: ಅನನ್ಯ ಭಟ್

  • ಪ್ರಪಂಚದಲ್ಲಿ ಒಂದೇ ರೀತಿ 7 ಜನ ಇರ್ತಾರೆ, ಫೋಟೋಗಳಿಗೆ ಸಾಮ್ಯತೆ ಇರಬಹುದು: ಸುಜಾತ ಭಟ್‌

    ಪ್ರಪಂಚದಲ್ಲಿ ಒಂದೇ ರೀತಿ 7 ಜನ ಇರ್ತಾರೆ, ಫೋಟೋಗಳಿಗೆ ಸಾಮ್ಯತೆ ಇರಬಹುದು: ಸುಜಾತ ಭಟ್‌

    ಬೆಂಗಳೂರು: ಪ್ರಪಂಚದಲ್ಲಿ 7 ಜನ ಒಂದೇ ರೀತಿಯಲ್ಲಿ ಇರುತ್ತಾರೆ. ಅದರಲ್ಲಿ ಅನನ್ಯ ಭಟ್‌ (Ananya Bhat) ವಾಸಂತಿ (Vasanthi) ಫೋಟೋಗಳಿಗೆ ಸಾಮ್ಯತೆ ಇರಬಹುದು ಅಷ್ಟೇ ಎಂದು ಸುಜಾತ ಭಟ್‌ (Sujatha Bhat) ಹೇಳಿದ್ದಾರೆ.

    ವಾಸಂತಿ ಅವರ ಸಹೋದರ ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ಸುಜಾತ ಭಟ್‌ ಪ್ರತಿಕ್ರಿಯಿಸಿದ್ದಾರೆ. ಎರಡು ಫೋಟೋದಲ್ಲಿರುವ ಡ್ರೆಸ್‌ (Dress) ಒಂದೇ ರೀತಿ ಇದೆಯಲ್ವಾ ಎಂಬ ಆರೋಪಕ್ಕೆ 7 ಜನರ ಜೊತೆಗೂ ಒಂದೇ ರೀತಿಯ ಡ್ರೆಸ್‌ ಇರಬಹುದಲ್ವಾ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: Exclusive ಸುಜಾತ ಭಟ್‌ ತೋರಿಸಿದ ಫೋಟೋ ನನ್ನ ತಂಗಿಯದ್ದು: ಸಹೋದರ ವಿಜಯ್

    ಸುಜಾತ ಭಟ್‌ ಹೇಳಿದ್ದೇನು?
    ನನಗೂ ವಿಜಯಗೂ ಯಾವುದೇ ಸಂಬಂಧ ಇಲ್ಲ. ನಾನು ಯಾವುದೇ ಫೋಟೋ ಕಳವು ಮಾಡಿಲ್ಲ. ನಾನು ತೋರಿಸಿದ್ದು ನನ್ನ ಮಗಳ ಫೋಟೋ. ಬೇರೆಯವರ ಫೋಟೋ ತೋರಿಸಿ ನನಗೆ ಏನಾಗಬೇಕು. ನನಗೆ ಪ್ರಜ್ಞೆ ಇದೆ.

    ಪ್ರಪಂಚದಲ್ಲಿ 7 ಜನ ಒಂದೇ ರೀತಿಯಲ್ಲಿ ಇರುತ್ತಾರೆ. ಅದರಲ್ಲಿ ಅನನ್ಯ – ವಾಸಂತಿ ಫೋಟೋ ಸಾಮ್ಯತೆ ಇರಬಹುದು ಅಷ್ಟೇ. ಒಂದೇ ರೀತಿಯ ಡ್ರೆಸ್‌ ಹಾಕಿರಬಹುದು. ನನಗೂ ರಂಗಪ್ರಸಾದ್ ಜೊತೆ ಲೀವಿಂಗ್ ರಿಲೇಷನ್‌ಶಿಪ್‌ ಇತ್ತು. ಇದನ್ನೂ ಓದಿ: ನೂರಾರು, ಸಾವಿರಾರು ಹೆಣ ಹೂತಿದ್ದೇನೆ ಎನ್ನುವುದು ಸುಳ್ಳು: ಮಾಸ್ಕ್‌ಮ್ಯಾನ್ಜೊತೆ ಕೆಲಸ ಮಾಡಿದ್ದ ಕೆಲಸಗಾರ

    ರಂಗಪ್ರಸಾದ್ ಸಾಯೋವರೆಗೂ ನಾನೇ ಅವರನ್ನು ನೋಡಿಕೊಂಡಿದ್ದೇನೆ. ರಂಗಪ್ರಸಾದ್ ಮತ್ತು ಶ್ರೀವತ್ಸರನ್ನು ಹುಡುಕಿಕೊಂಡು ಪೊಲೀಸರು ಬಂದಿದ್ದರು. ಆ ಸಂದರ್ಭದಲ್ಲಿ ನಾನೇ ಅವರಿಗೆ ಆಶ್ರಯ ನೀಡಿದ್ದೇನೆ. ನನಗೆ ವಾಸಂತಿ ಯಾರು ಎನ್ನುವುದೇ ಗೊತ್ತಿಲ್ಲ.ನಾನು ಆಕೆಯನ್ನು ನೋಡಿಯೇ ಇಲ್ಲ.

     

  • ಅನನ್ಯ ಭಟ್ ಕಂಠದಲ್ಲಿ ‘ಪೆಂಟಗನ್’ ಸಿನಿಮಾದ ಥೀಮ್ ಸಾಂಗ್ ರಿಲೀಸ್

    ಅನನ್ಯ ಭಟ್ ಕಂಠದಲ್ಲಿ ‘ಪೆಂಟಗನ್’ ಸಿನಿಮಾದ ಥೀಮ್ ಸಾಂಗ್ ರಿಲೀಸ್

    ಗುರು ದೇಶಪಾಂಡೆ (Guru Deshpande) ಸಾರಥ್ಯದಲ್ಲಿ ಮೂಡಿ ಬಂದ ‘ಪೆಂಟಗನ್’ ಸಿನಿಮಾದ ಥೀಮ್ ಸಾಂಗ್ (Theme Song) ಇಂದು ರಿಲೀಸ್ ಆಗಿದೆ. ಖ್ಯಾತ ಗಾಯಕಿ ಅನನ್ಯ ಭಟ್ (Ananya Bhatt) ಕಂಠಸಿರಿಯಲ್ಲಿ ಮೂಡಿ ಬಂದ ಗೀತೆಗೆ ಮಣಿಕಾಂತ್ ಕದ್ರಿ (Manikanth Kadri) ಸಂಗೀತ ಸಂಯೋಜನೆ ಮಾಡಿದ್ದಾರೆ. ನಿರ್ದೇಶಕ ರಾಘು ಶಿವಮೊಗ್ಗ (Raghu Shivamogga) ಸಾಹಿತ್ಯದಲ್ಲಿ ಈ ಹಾಡು ಮೂಡಿ ಬಂದಿದೆ. ಐದು ಕಥೆಗಳನ್ನು ಬೆಸೆಯುವಂತಹ ಮತ್ತು ಆ ಆಶಯವನ್ನು ಹಿಡಿದಿಡುವಂತಹ ಗೀತೆ ಇದಾಗಿದೆ.

    ಈಗಾಗಲೇ ಪೆಂಟಗನ್ (Pentagon) ಸಿನಿಮಾ ಟ್ರೈಲರ್ (Trailer) ರಿಲೀಸ್ ಆಗಿದ್ದು, ದಕ್ಷಿಣ ಭಾರತದ ಸಾಕಷ್ಟು ಕಲಾವಿದರು ಮತ್ತು ತಂತ್ರಜ್ಞರು ಟ್ರೈಲರ್ ಕುರಿತು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಟ್ರೈಲರ್ ಲಿಂಕ್ ಅನ್ನು ಸೋಷಿಯಲ್ ಮೀಡಿಯಾಗಳಲ್ಲೂ ಹಂಚಿಕೊಂಡಿದ್ದಾರೆ. ಅದರಲ್ಲೂ ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ (Rishabh Shetty), ತೆಲುಗಿನ ಖ್ಯಾತ ನಿರ್ದೇಶಕ ಅನಿಲ್ ರವಿಪುಡಿ (Anil Ravipudi), ನಿರ್ದೇಶಕರಾದ ತರುಣ್ ಸುಧೀರ್, ಶಶಾಂಕ್ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

    ಐದು ಜನ ನಿರ್ದೇಶಕರು, ಐದು ಕಥೆಗಳು, ಐದು ಜನ ಬರಹಗಾರರು, ಐದು ಹೀರೋಗಳು ಹೀಗೆ ಐದೈದು ವಿಷಯಗಳನ್ನು ಪೆಂಟಗನ್ ಚಿತ್ರದಲ್ಲಿ ಹೇಳಲು ಹೊರಟಿದೆ ಚಿತ್ರತಂಡ. ಎಲ್ಲ ವಯಸ್ಸಿನವರಿಗೂ ಇಷ್ಟವಾಗುವಂತಹ ಕಥೆಗಳನ್ನು ಒಳಗೊಂಡಿರುವ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಲಾಗಿದೆ ಎಂದಿದ್ದಾರೆ ಗುರು ದೇಶಪಾಂಡೆ.

    ಪ್ರತಿಭಾವಂತ ನಿರ್ದೇಶಕರುಗಳಾದ ರಾಘು ಶಿವಮೊಗ್ಗ, ಆಕಾಶ್ ಶ್ರೀವತ್ಸ, ಚಂದ್ರ ಮೋಹನ್, ಕಿರಣ್ ಕುಮಾರ್ ಹಾಗೂ ಮತ್ತೊಂದು ಕಥೆಗೆ ಗುರು ದೇಶಪಾಂಡೆ ಅವರೇ ನಿರ್ದೇಶನ ಮಾಡಿದ್ದಾರೆ. ಪ್ರಕಾಶ್ ಬೆಳವಾಡಿ, ಕಿಶೋರ್ (Kishore), ರವಿಶಂಕರ್ ಸೇರಿದಂತೆ ಹೆಸರಾಂತ ನಟರೇ ತಾರಾ ಬಳಗದಲ್ಲಿ ಇದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಜನರ ಗಮನ ಸೆಳೆದಿವೆ.

    ಇದು ಪ್ರಯೋಗಾತ್ಮಕ ಸಿನಿಮಾವಲ್ಲ, ಪಕ್ಕಾ ಕಮರ್ಷಿಯಲ್ ಚಿತ್ರ. ನೋಡುಗನಿಗೆ ಏನೆಲ್ಲ ಬೇಕಿದೆಯೋ ಎಲ್ಲವನ್ನೂ ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ. ಹೊಸ ಆಲೋಚನೆಯ ನಿರ್ದೇಶಕರು, ಬರಹಗಾರರು ಮತ್ತು ಹೊಸ ಕಲಾವಿದರು ಕೂಡ ಸಿನಿಮಾದ ಭಾಗವಾಗಿದ್ದಾರೆ. ಹಾಗಾಗಿ ಪ್ರೇಕ್ಷಕರಿಗೆ ಈ ಸಿನಿಮಾ ಹೊಸ ಅನುಭವನ್ನು ನೀಡಲಿದೆ ಎನ್ನುತ್ತಾರೆ ಗುರು ದೇಶಪಾಂಡೆ.

  • ‘ಕಾಂತಾರ’ ಸಿನಿಮಾದ ಸಿಂಗಾರ ಸಿರಿಯೆ ಹಾಡಿನಲ್ಲಿ ರಿಷಭ್ ಶೆಟ್ಟಿ ಮಸ್ತ್ ಮಸ್ತ್

    ‘ಕಾಂತಾರ’ ಸಿನಿಮಾದ ಸಿಂಗಾರ ಸಿರಿಯೆ ಹಾಡಿನಲ್ಲಿ ರಿಷಭ್ ಶೆಟ್ಟಿ ಮಸ್ತ್ ಮಸ್ತ್

    ಹೊಂಬಾಳೆ ಫಿಲಂಸ್ ಮೂಲಕ ವಿಜಯ್ ಕಿರಗಂದೂರು ಅವರು ನಿರ್ಮಿಸಿರುವ ಹಾಗೂ ರಿಷಭ್ ಶೆಟ್ಟಿ ನಾಯಕರಾಗಿ ನಟಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾದ ಹಾಡು ರಿಲೀಸ್ ಆಗಲಿದೆ ಎಂದು ಹೇಳಲಾಗಿತ್ತು. ಅದರಂತೆಯೇ ಈ  ಚಿತ್ರದ ‘ಸಿಂಗಾರ ಸಿರಿಯೆ’ ಎಂಬ ಅದ್ಭುತ ಹಾಡು ಸ್ವಾತಂತ್ರ್ಯ ಅಮೃತ ಮಹೋತ್ಸವದ ಸುಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿನಲ್ಲಿ ರಿಷಭ್ ಕಂಡು ಅಭಿಮಾನಿಗಳು ಮಸ್ತ್ ಮಸ್ತ್‍ ಎಂದು ಅವರದ್ದೇ ಶೈಲಿಯ ಡೈಲಾಗ್ ಹೇಳುತ್ತಿದ್ದಾರೆ.

    ಅಜನೀಶ್ ಲೋಕನಾಥ್ ಸಂಗೀತ ನೀಡಿ, ಪ್ರಮೋದ್ ಮರವಂತೆ ಬರೆದಿರುವ “ಸಿಂಗಾರ ಸಿರಿಯೆ” ಹಾಡಿನಲ್ಲಿ ಕರುನಾಡ ಸಂಸ್ಕ್ರತಿಯ ಭವ್ಯ ಪರಂಪರೆಯನ್ನು ಮನಮುಟ್ಟುವಂತೆ ತೋರಿದ್ದಾರೆ ನಿರ್ದೇಶಕ ರಿಷಬ್ ಶೆಟ್ಟಿ. ಹಲವು ಜನಪದ ನೃತ್ಯಗಳ ಹಿನ್ನೆಲೆಯಲ್ಲಿ ನಾಯಕ, ನಾಯಕಿಗೆ ಪ್ರೇಮದ ವಿಷಯ ತಿಳಿಸುವ ರೀತಿ ಈ ಹಾಡಿನಲ್ಲಿ ಸೊಗಸಾಗಿ ಮೂಡಿಬಂದಿದೆ.  ಅಲ್ಲದೇ ಹಾಡಿನ ಕಾನ್ಸೆಪ್ಟ್ ಕೂಡ ನೋಡುಗರಿಗೆ ಹಿಡಿಸಿದೆ. ಹೀಗಾಗಿ ಈ ಗೀತೆಯನ್ನು ಅಭಿಮಾನಿಗಳು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಇದನ್ನೂ ಓದಿ:ಬಾರ್ಸಿಲೋನದಲ್ಲಿ ನಯನತಾರಾ- ವಿಘ್ನೇಶ್ ಶಿವನ್ ದಂಪತಿ

    ವಿಜಯ್ ಪ್ರಕಾಶ್,   ಅನನ್ಯ ಭಟ್ ಹಾಗೂ ಪನ್ನಾರ್ ವಲ್ಟುರ್ ಅವರ ಇಂಪಾದ ಗಾಯನ ಹಾಡಿನ ಶ್ರೀಮಂತಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ ಅವರ ಅಭಿನಯ ಅದ್ಭುತವಾಗಿದೆ. ಹಾಡು ಬಿಡುಗಡೆಯಾದ ಕೆಲವೇ ಹೊತ್ತಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ವೀಕ್ಷಣೆಯಾಗಿ ಎಲ್ಲರ ಮೆಚ್ಚುಗೆ ಪಡೆಯುತ್ತಿದೆ. ಚಿತ್ರ ಯಾವಾಗ ತೆರೆಗೆ ಬರುವುದೊ? ಎಂಬ ಕಾತುರ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಮಹಾಶಿವರಾತ್ರಿ ದಿನಕ್ಕೆ ಅನನ್ಯ ಭಟ್ ಹಾಡಿರುವ ಶಿವ ಶಿವ ಹಾಡು ರಿಲೀಸ್

    ಮಹಾಶಿವರಾತ್ರಿ ದಿನಕ್ಕೆ ಅನನ್ಯ ಭಟ್ ಹಾಡಿರುವ ಶಿವ ಶಿವ ಹಾಡು ರಿಲೀಸ್

    ಮತ್ತೊಂದು ಶಿವನ ಹಾಡಿಗೆ ಗಾಯಕಿ ಅನನ್ಯ ಭಟ್ ದನಿಯಾಗಿದ್ದಾರೆ. ಈಗಾಗಲೇ ‘ಸೋಜಿಗಾದ ಸೂಜಿ ಮಲ್ಲಿಗೆ’ ಹಾಡು ಕೋಟ್ಯಂತರ ಅಭಿಮಾನಿಗಳನ್ನು ತಲುಪಿದೆ. ಅದರಲ್ಲೂ ಜಗ್ಗಿ ವಾಸುದೇವ ಅವರ ಶಿವರಾತ್ರಿ ಕಾರ್ಯಕ್ರಮದಲ್ಲಿ ಈ ಭಕ್ತಿಗೀತೆಯನ್ನು ಹಾಡಿದ ನಂತರ ಅದು ಕರ್ನಾಟಕದಾಚೆಯೂ ಜನಪ್ರಿಯವಾಗಿತ್ತು. ಈಗ ಮತ್ತೊಂದು ಶಿವರಾತ್ರಿ ಬಂದಿದೆ. ಈ ಶಿವರಾತ್ರಿಗಾಗಿ ಅವರ ಕಂಠಸಿರಿಯಲ್ಲಿ ಮೂಡಿ ಬಂದ ‘ಶಿವ ಶಿವ’ ಹಾಡು ಫೆ.28ರಂದು ರಿಲೀಸ್ ಆಗುತ್ತಿದೆ. ಇದನ್ನೂ ಓದಿ : ನಟ ಚೇತನ್ ಬಂಧನ ಅಕ್ರಮ: ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ

    ಅಂದಹಾಗೆ ಈ ಗೀತೆಯು ಪ್ರಜ್ವಲ್ ದೇವರಾಜ್ ನಟನೆಯ ‘ವೀರಂ’ ಚಿತ್ರದಲ್ಲಿದ್ದು, ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯದಲ್ಲಿ ಮೂಡಿ ಬಂದಿದೆ. ಅನೂಪ್ ಸೀಳೀನ್ ಇದರ ಸಂಗೀತ ನಿರ್ದೇಶಕರು. ಇದನ್ನೂ ಓದಿ : ಕೆಜಿಎಫ್ 2 ನಿರ್ಮಾಪಕರಿಗೇ ಚಮಕ್ ಕೊಟ್ಟ ಫ್ಯಾನ್ಸ್ : ಮೋದಿ ಪತ್ರದ ಅಸಲಿಯತ್ತೇನು?

    “ಚಿತ್ರಕಥೆಗೂ ಮತ್ತು ಹಾಡಿಗೂ ಸಂಬಂಧವಿದೆ. ನಾಯಕನ ಸಹೋದರಿ ಶಿವನ ಭಕ್ತೆ. ಆಕೆ ಎದುರಿಸುವ ಕಷ್ಟಕ್ಕೆ ಶಿವ ಸ್ಪಂದಿಸಲಿಲ್ಲ ಎನ್ನುವ ನೋವಿಗಾಗಿ ಹಾಡಿದ ಗೀತೆ ಇದಾಗಿದೆ’ ಅಂತಾರೆ ಶಶಿಧರ್ ಕೆ.ಎಂ. ಇದನ್ನೂ ಓದಿ : ಅಶರೀರವಾಣಿ ಆಲ್ಬಂಗೆ ನೀನಾಸಂ ಸತೀಶ್ ಸಿಂಗರ್ : ಮಗಳೊಂದಿಗೆ ಹಾಡಿದ ಸ್ಟಾರ್ ನಟ

    ಹತ್ತು ಹಲವು ವಿಶೇಷತೆಗಳನ್ನು ಹೊತ್ತು ಬರುತ್ತಿರುವ ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್, ಡಾ.ವಿಷ್ಣುವರ್ಧನ್ ಅವರ ಅಭಿಮಾನಿಯಾಗಿ ನಟಿಸಿದ್ದಾರೆ. ಸಿನಿಮಾದ ಟೈಟಲ್ ಹೇಳುವಂತೆ ವೀರನಾಗಿಯೇ ಪ್ರಜ್ವಲ್ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಜ್ವಲ್ ಜತೆಯಾಗಿ ರಚಿತಾ ರಾಮ್ ನಟಿಸಿದ್ದು, ಹಿರಿಯ ನಟಿ ಶ್ರುತಿ ಸೇರಿದಂತೆ ಹೆಸರಾಂತ ತಾರಾ ಬಳಗವೇ ಸಿನಿಮಾದಲ್ಲಿದೆ. ಕುಮಾರ್ ರಾಜ್ ಈ ಸಿನಿಮಾದ ನಿರ್ದೇಶಕರು.

  • 7 ಲಕ್ಷಕ್ಕೆ ಸುಪಾರಿ, 1 ಲಕ್ಷ ಅಡ್ವಾನ್ಸ್‌ – ಗಾಯಕಿ ಅನನ್ಯ ಭಟ್ ತಂದೆ ಅರೆಸ್ಟ್

    7 ಲಕ್ಷಕ್ಕೆ ಸುಪಾರಿ, 1 ಲಕ್ಷ ಅಡ್ವಾನ್ಸ್‌ – ಗಾಯಕಿ ಅನನ್ಯ ಭಟ್ ತಂದೆ ಅರೆಸ್ಟ್

    – ಪ್ರೊ. ಕಿರಿಕ್‍ಗೆ ಬೇಸತ್ತು ಸುಪಾರಿ ಕೊಟ್ಟಿದ್ದ ವಿಶ್ವನಾಥ್ ಭಟ್
    – ಸೆ.20ರಂದು ಮೈಸೂರಿನ ನಿವೇದಿತಾ ನಗರದಲ್ಲಿ ಕೊಲೆ

    ಮೈಸೂರು: ಒಂದು ತಿಂಗಳ ಹಿಂದೆ ಮೈಸೂರಿನಲ್ಲಿ ನಡೆದ ನಿಗೂಢ ಕೊಲೆ ರಹಸ್ಯ ಬಯಲಾಗಿದೆ. ಸುಪಾರಿ ಹಂತಕರ ಹೆಡೆಮುರಿ ಕಟ್ಟುವಲ್ಲಿ ಮೈಸೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಸ್ಯಾಂಡಲ್‍ವುಡ್ ಖ್ಯಾತ ಹಿನ್ನಲೆ ಗಾಯಕಿ ಅನನ್ಯಭಟ್ ತಂದೆ ವಿಶ್ವನಾಥ್ ಭಟ್ ಕೊಲೆಯ ಕಿಂಗ್ ಪಿನ್ ಆಗಿದ್ದಾನೆ. ತನ್ನ ವ್ಯವಹಾರಕ್ಕೆ ಅಡ್ಡಿಯಾದ ವ್ಯಕ್ತಿಯ ಕೊಲೆಗೆ 7 ಲಕ್ಷ ಸುಪಾರಿ ಕೊಟ್ಟ ಅನನ್ಯ ಭಟ್ ತಂದೆ ಇದೀಗ ಪೊಲೀಸರ ಅತಿಥಿ.

    ಸೆಪ್ಟೆಂಬರ್ 20 ರಂದು ಮೈಸೂರಿನ ನಿವೇದಿತ ನಗರದಲ್ಲಿ ನಿವೃತ್ತ ಪ್ರಾಂಶುಪಾಲರಾದ ಪರಶಿವಮೂರ್ತಿ ಅವರ ಭೀಕರ ಹತ್ಯೆ ನಡೆದಿತ್ತು. ಈ ಪ್ರಕರಣವನ್ನು ಮೈಸೂರಿನ ಸರಸ್ವತಿ ಪುರಂ ಪೊಲೀಸರು ಭೇದಿಸಿದ್ದು,  ವಿಶ್ವನಾಥ್ ಸೇರಿದಂತೆ 5 ಆರೋಪಿಗಳನ್ನು ಬಂಧಿಸಲಾಗಿದೆ. ಸುಪಾರಿ ಹಂತಕ ನಾಗೇಶ್, ಸುಪಾರಿ ಹಂತಕನಿಗೆ ಸಹಕರಿಸಿದ ನಿರಂಜನ್, ವಿಶ್ವನಾಥ್ ಸ್ಕೆಚ್‍ಗೆ ಸಹಕರಿಸಿದ ಶಿಕ್ಷಕರಾದ ಸಿದ್ದರಾಜು ಹಾಗೂ ಪರಶಿವ ಬಂಧಿತ ಆರೋಪಿಗಳು.

    ಕೊಲೆ ಮಾಡಿಸಿದ್ದು ಯಾಕೆ?
    ಎನ್.ಆರ್.ಮೊಹಲ್ಲಾದಲ್ಲಿರುವ ವಿಶ್ವಚೇತನ ಸಂಸ್ಕೃತ ಪಾಠಶಾಲೆಯ ಮುಖ್ಯ ಶಿಕ್ಷಕರಾಗಿದ್ದ ವಿಶ್ವನಾಥ್‍ಗೆ ಕಾರ್ಯದರ್ಶಿಯಾಗಿದ್ದ ಪರಶಿವಮೂರ್ತಿ ಸಾಕಷ್ಟು ಕಿರುಕುಳ ಕೊಡುತ್ತಿದ್ದರು. ಪ್ರತಿ ತಿಂಗಳ ವೇತನದಲ್ಲಿ ಹಾಗೂ ಸರ್ಕಾರದಿಂದ ಬರುವ ಅನುದಾನದಲ್ಲಿ ಪಾಲುಕೊಡುವುದು ಸೇರಿದಂತೆ ಕೆಲವು ಹಣಕಾಸಿನ ವಿಚಾರದಲ್ಲಿ ಇಬ್ಬರ ನಡುವೆ ವೈಮನಸ್ಸು ಆರಂಭವಾಗಿತ್ತು.

    ಪರಶಿವಮೂರ್ತಿಯನ್ನ ಮುಗಿಸಿದರೆ ತೊಂದರೆ ತಪ್ಪುತ್ತದೆ ಎಂದು ನಿರ್ಧರಿಸಿದ ವಿಶ್ವನಾಥ್ ಸಹ ಶಿಕ್ಷಕರಾದ ಪರಶಿವ ಜೊತೆ ಸಮಾಲೋಚಿಸಿ ಕೊಲೆ ಮಾಡಿಸುವ ನಿರ್ಧಾರಕ್ಕೆ ಬಂದಿದ್ದಾನೆ. ಇಬ್ಬರು ಸಮಾಲೋಚನೆ ನಡೆಸಿ ಮತ್ತೊಂದು ಸಂಸ್ಕೃತ ಪಾಠಶಾಲೆಯಲ್ಲಿ ಮುಖ್ಯ ಶಿಕ್ಷಕನಾಗಿದ್ದ ಸಿದ್ದರಾಜು ಜೊತೆ ಈ ವಿಚಾರವನ್ನು ಚರ್ಚಿಸಿದ್ದಾರೆ.

    ಮೂವರು ಸೇರಿ ತೀರ್ಮಾನಕ್ಕೆ ಬಂದು ಕೊಲೆಗೆ ಸಂಚು ರೂಪಿಸಿ, ಮೈಸೂರು ತಾಲೂಕಿನ ಭೂಗತಹಳ್ಳಿ ನಿವಾಸಿ ನಾಗೇಶ್ ಗೆ ಸುಪಾರಿ ಕೊಟ್ಟಿದ್ದಾರೆ. ಸುಪಾರಿಗೆ ಒಪ್ಪಿಗೆ ಪಡೆದು ಒಂದು ಲಕ್ಷ ಮುಂಗಡ ಪಡೆದ ನಾಗೇಶ್ ತನ್ನ ಸ್ನೇಹಿತ ನಿರಂಜನ್ ಜೊತೆ ಸೇರಿ ಸೆಪ್ಟೆಂಬರ್ 20 ರಂದು ಕೊಲೆ ಮಾಡಿ ಪರಾರಿಯಾಗಿದ್ದ.

    ಸಿಕ್ಕಿಬಿದ್ದಿದ್ದು ಹೇಗೆ?
    ಕೌಟುಂಬಿಕ ವಿಚಾರದಲ್ಲಿ ಪತ್ನಿಯಿಂದ ಪ್ರತ್ಯೇಕವಾಗಿ ನಿವೇದಿತ ನಗರದಲ್ಲಿ ಒಂಟಿಯಾಗಿ ವಾಸವಿದ್ದ ಪರಶಿವಮೂರ್ತಿ ಸಾಕಷ್ಟು ಬಡ್ಡಿ ವ್ಯವಹಾರ ಮಾಡುತ್ತಿದ್ದರು. ಅಲ್ಲದೆ ಮಹಿಳೆಯರ ಜೊತೆ ಲೈಂಗಿಕ ಸಂಪರ್ಕ ಇತ್ತು. ಬಡ್ಡಿ ವ್ಯವಹಾರದಲ್ಲಿ ಕೊಲೆ ನಡೆದಿರಬಹುದೆಂದು ಪೊಲೀಸರು ಆರಂಭದಲ್ಲಿ ಶಂಕಿಸಿದ್ದರು. ಕೊಲೆ ಕೇಸ್‍ನ ವಿಚಾರಣೆ ವೇಳೆ ಸಂಸ್ಕೃತ ಶಾಲೆಯ ಹಳೆಯ ಪ್ರಕರಣ ಮುನ್ನೆಲೆಗೆ ಬಂದಿದೆ. ಶಾಲೆಯ ಕೇಸ್ ಆಧರಿಸಿ ಪೊಲೀಸರು ವಿಶ್ವನಾಥ್ ಭಟ್ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ವಿಶ್ವನಾಥ್ ಭಟ್ ಕೊಲೆ ರಹಸ್ಯವನ್ನು ಹೇಳಿದ್ದಾನೆ.

    ಸಂಪರ್ಕ ಕಡಿತ:
    ವಿಶ್ವನಾಥ್ ಜೊತೆಗಿನ ಸಂಪರ್ಕವನ್ನ ಗಾಯಕಿ ಅನನ್ಯಭಟ್ ಎರಡು ವರ್ಷಗಳ ಹಿಂದೆಯೇ ಕಡಿದುಕೊಂಡಿದ್ದಾರೆ. ಅನನ್ಯಭಟ್‌ಗೂ ಈ ಹತ್ಯೆಗೂ ಯಾವುದೇ ಸಂಬಂಧವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಈ ವಿಚಾರದ ಬಗ್ಗೆ ಅನನ್ಯ ಭಟ್‌ ಪ್ರತಿಕ್ರಿಯಿಸಿ, ನನಗೂ ಅಷ್ಟಾಗಿ ಈ ವಿಚಾರದ ಬಗ್ಗೆ ಗೊತ್ತಿಲ್ಲ. ಟೋಟಲ್ ಇನ್ಫಾರ್ಮೆಷನ್‌ ನನಗೂ ಇಲ್ಲ. ನನಗೂ ಗೊತ್ತಿಲ್ಲ ಏನು ಅಂತ ಎಂದು ತಿಳಿಸಿದ್ದಾರೆ.

  • ‘ಸೋಜುಗದ ಸೂಜು ಮಲ್ಲಿಗೆ’ ಗಾಯಕಿ ಅನನ್ಯ ಭಟ್ ತಂದೆಯ ಬಂಧನ

    ‘ಸೋಜುಗದ ಸೂಜು ಮಲ್ಲಿಗೆ’ ಗಾಯಕಿ ಅನನ್ಯ ಭಟ್ ತಂದೆಯ ಬಂಧನ

    ಮೈಸೂರು: ಸೋಜುಗದ ಸೂಜು ಮಲ್ಲಿಗೆ ಗಾಯಕಿ ಅನನ್ಯ ಭಟ್ ತಂದೆಯನ್ನ ಮೈಸೂರಿನಲ್ಲಿ ಬಂಧಿಸಲಾಗಿದೆ.

    ನಿವೃತ್ತ ಪ್ರೊಫೆಸರ್ ಪರಶಿವಮೂರ್ತಿ ಕೊಲೆ ಪ್ರಕರಣದಲ್ಲಿ ವಿಶ್ವನಾಥ್ ಭಟ್ (52) ಬಂಧನವಾಗಿದೆ.   7 ಲಕ್ಷಕ್ಕೆ ಕೊಲೆಗೆ ಸುಪಾರಿ ನೀಡಿದ್ದಕ್ಕೆ ಆರೋಪಕ್ಕೆ ಬಲವಾದ ಸಾಕ್ಷ್ಯಗಳು ಸಿಕ್ಕಿದ ಹಿನ್ನೆಲೆಯಲ್ಲಿ  ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ತಂದೆಯಿಂದ ದೂರವಾಗಿ ಎರಡು ವರ್ಷಗಳಿಂದ ಅನನ್ಯ ಭಟ್ ತಾಯಿ ಜೊತೆ ಪ್ರತ್ಯೇಕವಾಗಿ ವಾಸವಾಗಿದ್ದಾರೆ.

    ಏನಿದು ಪ್ರಕರಣ?: ಸೆಪ್ಟೆಂಬರ್ 20, 2020ರಂದು ಮೈಸೂರಿನ ನಿವೇದಿತಾ ನಗರದಲ್ಲಿ ಪರಶಿವಮೂರ್ತಿ ಕೊಲೆಯಾಗಿತ್ತು. ಘಟನೆಗೆ ಸಂಬಂಧ ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಕೊಲೆಗೆ ವಿಶ್ವನಾಥ್ ಭಟ್ ಸುಪಾರಿ ನೀಡಿರುವ ವಿಷಯ ಬೆಳಕಿಗೆ ಬಂದಿದೆ. ಈ ಕೊಲೆಗೆ ವಿಶ್ವನಾಥ್ ಭಟ್ ಗೆ ಗೆಳೆಯ ಸಿದ್ದರಾಜು ಸಾಥ್ ನೀಡಿದ್ದನು.

    ಸುಪಾರಿ ನೀಡಿದ್ಯಾಕೆ? : ವಿಶ್ವನಾಥ್ ಭಟ್ ಮತ್ತು ಪರಶಿವಮೂರ್ತಿ ಸಹದ್ಯೋಗಿಗಳು. ಸಂಸ್ಕೃತ ಪಾಠ ಶಾಲೆಯ ಕಾರ್ಯದರ್ಶಿಯಾಗಿದ್ದ ಪರಶಿವಮೂರ್ತಿ ಪ್ರತಿ ತಿಂಗಳು ಕಮಿಷನ್ ಗಾಗಿ ಪೀಡಿಸುತ್ತಿದ್ದನು. ಜೊತೆಗೆ ಅವಾಚ್ಯ ಪದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದನು ಎಂದು ತಿಳಿದು ಬಂದಿದೆ. ಪರಶಿವಮೂರ್ತಿಯ ಕಿರುಕುಳದಿಂದ ಬೇಸತ್ತ ವಿಶ್ವನಾಥ್ ಭಟ್ ಕೊಲೆಗೆ ಸುಪಾರಿ ನೀಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.