ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ (Anant Ambani) ಪ್ರೀ-ವೆಡ್ಡಿಂಗ್ ಕಾರ್ಯಕ್ರಮವು ಜಾಯ್‌ನಗರದಲ್ಲಿ ಅದ್ಧೂರಿಯಾಗಿ ನಡೆದಿದೆ. ಸ್ವರ್ಗವನ್ನು ಧರೆಗಿಳಿಸಿದ ಅಂಬಾನಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. 3ನೇ ದಿನವು ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳು (Bollywood) ಮಿಂಚಿರುವ ಫೋಟೋಗಳು ನೋಡುಗರ ಗಮನ ಸೆಳೆಯುತ್ತಿದೆ.

ಅನಂತ್- ರಾಧಿಕಾ (Radhika Merchant) ಹಲವು ವರ್ಷಗಳಿಂದ ಪರಿಚಿತರು. ಆ ಪರಿಚಯವೇ ಪ್ರೀತಿಗೆ ತಿರುಗಿ ಇದೀಗ ಮದುವೆಯ ಮುದ್ರೆ ಒತ್ತಲು ಈ ಜೋಡಿ ಸಜ್ಜಾಗಿದ್ದಾರೆ. ಗುರುಹಿರಿಯರ ಸಮ್ಮತಿಯ ಮೇರೆಗೆ ಈ ಜೋಡಿ ಮದುವೆಯಾಗುತ್ತಿದ್ದಾರೆ. ಇದನ್ನೂ ಓದಿ:ಯಶ್, ದರ್ಶನ್ ಪ್ರಚಾರಕ್ಕೆ ಬರುತ್ತಾರಾ? ಸುಮಲತಾ ಸ್ಪಷ್ಟನೆ

ಅನಂತ್ ಮತ್ತು ರಾಧಿಕಾ ಮದುವೆ ಇದೇ ಜೂನ್ 12ಕ್ಕೆ ಫಿಕ್ಸ್ ಆಗಿದೆ. ಮಾರ್ಚ್ 1ರಿಂದ 3ರವರೆಗೆ ಅದ್ಧೂರಿಯಾಗಿ ತೆರೆಬಿದ್ದಿದೆ. ಅನಂತ್ ಪ್ರೀ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಸಂಗೀತ, ನೃತ್ಯ ಹೀಗೆ ವಿವಿಧ ರೀತಿಯ ಪ್ರದರ್ಶನಗಳು ರಂಗೇರಿದ್ದು, ದೇಶ-ವಿದೇಶದ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.

ಪಠಾಣ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರು ಪತ್ನಿ ಗೌರಿ ಖಾನ್ ಮತ್ತು ಮಕ್ಕಳ ಜೊತೆ ಹಾಜರಿ ಹಾಕಿದ್ದಾರೆ. ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸುವ ಮೂಲಕ ನಟ ಗಮನ ಸೆಳೆದಿದ್ದಾರೆ. 3ನೇ ದಿನವೂ ಕೂಡ ಶಾರುಖ್ ಬಿಳಿ ಬಣ್ಣದ ಶೆರ್ವಾನಿಯಲ್ಲಿ ಕಂಗೊಳಿಸಿದ್ದಾರೆ.

ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ಪತ್ನಿ ಮತ್ತು ಮಗಳು ಐಶ್ವರ್ಯ ಜೊತೆ ಅಂಬಾನಿ ಮನೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ:ಸ್ವರ್ಗವನ್ನು ಧರೆಗಿಳಿಸಿದ ಅಂಬಾನಿ ಮಗನ ಪ್ರೀ-ವೆಡ್ಡಿಂಗ್‌ನಲ್ಲಿ ಸಿನಿತಾರೆಯರ ದಂಡು

ಕ್ರಿಕೆಟಿಗ ಎಂ.ಎಸ್ ಧೋನಿ ಅವರು ಪತ್ನಿ ಸಾಕ್ಷಿ ಜೊತೆ ಸಖತ್ ಹ್ಯಾಡ್‌ಸಮ್ ಆಗಿ ಕಾಣಿಸಿಕೊಳ್ಳುವ ಮೂಲಕ ಮಹಿಳಾ ಮಣಿಯರ ಗಮನ ಸೆಳೆದಿದ್ದಾರೆ.

ಬಾಲಿವುಡ್‌ನ ಕ್ಯೂಟ್ ಕಪಲ್ ರಣ್‌ಬೀರ್ ಮತ್ತು ಆಲಿಯಾ ಭಟ್ ಲೈಟ್ ಬಣ್ಣದ ಉಡುಗೆಯಲ್ಲಿ ಸಖತ್ ಕ್ಲ್ಯಾಸಿ ಆಗಿ ಕಾಣಿಸಿಕೊಂಡಿದ್ದಾರೆ.ಇದನ್ನೂ ಓದಿ:ಮುಂಬೈನಲ್ಲಿ ಅದ್ಧೂರಿಯಾಗಿ ನಡೆಯಿತು ‘ಮಾಣಿಕ್ಯ’ ನಟಿ ಎಂಗೇಜ್‌ಮೆಂಟ್

ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ ಅವರು ಪತಿ ಸೈಫ್ ಮತ್ತು ಪುತ್ರನ ಜೊತೆ ನಿಂತು ಕ್ಯಾಮೆರಾಗೆ ಮಸ್ತ್ ಆಗಿ ಪೋಸ್ ನೀಡಿದ್ದಾರೆ.

ನಟಿ ಅನನ್ಯಾ ಪಾಂಡೆ ಅವರು ಬಾಯ್‌ಫ್ರೆಂಡ್ ಆದಿತ್ಯಾ ರಾಯ್ ಕಪೂರ್ ಜೊತೆ ಬಂದಿದ್ದು, ಕೆಂಪು ಬಣ್ಣದ ಲೆಹೆಂಗಾದಲ್ಲಿ ಮಿಂಚಿದ್ದಾರೆ.

ಶಾರುಖ್ ಖಾನ್ ಪುತ್ರಿ ಸುಹಾನಾ ಕೂಡ ಯಾವ ಹೀರೋಯಿನ್‌ಗೂ ಕಮ್ಮಿಯಿಲ್ಲದಂತೆ ಕಂಗೊಳಿಸಿದ್ದಾರೆ. ಲೈಟ್ ಬಣ್ಣ ಹಾಪ್ ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಗೆಳೆಯ ಶಿಖರ್ ಪಹರಿಯಾ ಜೊತೆ ಜಾನ್ವಿ ಕಪೂರ್ ಪ್ರಿ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಹೈಲೆಟ್ ಆಗಿದ್ದಾರೆ.

ಸಿದ್-ಕಿಯಾರಾ ಲೈಟ್ ಬಣ್ಣದ ಧಿರಿಸಿನಲ್ಲಿ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ಇಬ್ಬರ ಲುಕ್‌ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

ಸಲ್ಮಾನ್ ಖಾನ್ ಅವರು ಕಪ್ಪು ಬಣ್ಣದ ಶೆರ್ವಾನಿಯಲ್ಲಿ ಸಖತ್ ಕ್ಲಾಸ್ & ಮಾಸ್ ಆಗಿ ಕಾಣಿಸಿಕೊಂಡಿದ್ದಾರೆ.

ಕಳೆದ ಮೂರು ದಿನಗಳಿಂದ ಇಡೀ ಬಾಲಿವುಡ್ ದಂಡೇ ಗುಜರಾತ್‌ನ ಜಾಮ್‌ನಗರದಲ್ಲಿ ಬೀಡು ಬಿಟ್ಟಿತ್ತು. ಹಾಡು, ಡ್ಯಾನ್ಸ್ ಎಂದು ಸೆಲೆಬ್ರಿಟಿಗಳು ಕೂಡ ಅನಂತ್ ಪ್ರೀ- ವೆಡ್ಡಿಂಗ್‌ನಲ್ಲಿ ಹೆಜ್ಜೆ ಹಾಕುವ ಮೂಲಕ ಮನರಂಜನೆ ನೀಡಿದ್ದರು.



ನಾನು ಭಾರತದಲ್ಲಿ ಅತ್ಯುತ್ತಮ ಸಮಯವನ್ನು ಕಳೆದಿದ್ದೇನೆ. ನನಗೆ ಕೇವಲ ಎರಡು ದಿನಗಳು ಮಾತ್ರ ಇದ್ದವು, ಆದರೆ ನಾನು ಹೊರಟ ಏಕೈಕ ಕಾರಣವೆಂದರೆ ನನ್ನ ಮಕ್ಕಳು ನನಗಾಗಿ ಕಾಯುತ್ತಿದ್ದರು. ನಾನು ಹಿಂದಿರುಗಲೇಬೇಕಿತ್ತು ಎಂದು ಸೋಷಿಯಲ್ ಮೀಡಿಯಾ ಲೈವ್‌ನಲ್ಲಿ ಗಾಯಕಿ ಹೇಳಿದ್ದಾರೆ.

























ಅನಂತ್ (Ananth Ambani) ಮತ್ತು ರಾಧಿಕಾ ಮದುವೆ ಇದೇ ಜೂನ್ 12ಕ್ಕೆ ಫಿಕ್ಸ್ ಆಗಿದೆ. ಮಾರ್ಚ್ 1ರಿಂದ 3ರವರೆಗೆ ವಿವಾಹ ಪೂರ್ವ ಕಾರ್ಯಕ್ರಮ ನಡೆಯುತ್ತಿವೆ. ಅದಕ್ಕಾಗಿ ಗುಜರಾತ್‌ನ ಜಾಮ್‌ನಗರವನ್ನು ಸಿಂಗರಿಸಲಾಗಿದೆ. ಅನಂತ್ ಪ್ರೀ-ವೆಡ್ಡಿಂಗ್ ಮದುವೆ ಸಂಗೀತ, ನೃತ್ಯ ಹೀಗೆ ವಿವಿಧ ರೀತಿಯ ಪ್ರದರ್ಶನಗಳು ನಡೆಯುತ್ತಿದೆ. ಇದನ್ನೂ ಓದಿ:
ಅನಂತ್ ಅಂಬಾನಿ ಪ್ರೀ-ವೆಡ್ಡಿಂಗ್‌ನ ಮುಖ್ಯ ಆಕರ್ಷಣೆ ಎಂದರೆ ಸುಪ್ರಸಿದ್ಧ ಗಾಯಕಿ ರಿಯಾನಾ ಅವರ ಸಂಗೀತ ಕಾರ್ಯಕ್ರಮ. ಅನಂತ್-ರಾಧಿಕಾ ಪ್ರೀ-ವೆಡ್ಡಿಂಗ್ ಕಾರ್ಯಕ್ರಮದ ಸುಂದರ ಸಂಜೆಗೆ ರಿಯಾನಾ ಗಾಯನ ಕಿಕ್ ಕೊಟ್ಟಿದೆ. ಕಾರ್ಯಕ್ರಮದಲ್ಲಿ ಹಾಡಲು ರಿಯಾನಾ, ಬರೋಬ್ಬರಿ 74 ಕೋಟಿ ರೂ. ಸಂಭಾವನೆ ಪಡೆದು ಎಲ್ಲರ ಹುಬ್ಬೇರಿಸಿದ್ದಾರೆ. ಇದನ್ನೂ ಓದಿ:
ಅನಂತ್ ಅಂಬಾನಿ ಮದುವೆಯಾಗಿ ಅದ್ಧೂರಿ ದೇಗುಲ ನಿರ್ಮಿಸಲಾಗಿದೆ. ಸೊಗಸಾಗಿ ಕೆತ್ತನೆ ಮಾಡಿದ ಸ್ಥಂಭಗಳು, ಕಲಾಕೃತಿಗಳು ಹಾಗೂ ಕರಕುಶಲವಸ್ತುಗಳು ಇಲ್ಲಿ ಕಾಣಬಹುದು. ಇದನ್ನೂ ಓದಿ:














