Tag: ಅನಂತ್ ಅಂಬಾನಿ

  • ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ; ತೆಂಡೂಲ್ಕರ್‌, ಜಾನ್‌ ಸೀನಾ ಭಾಗಿ

    ಅನಂತ್‌ ಅಂಬಾನಿ-ರಾಧಿಕಾ ಮರ್ಚೆಂಟ್‌ ವಿವಾಹ; ತೆಂಡೂಲ್ಕರ್‌, ಜಾನ್‌ ಸೀನಾ ಭಾಗಿ

    ಮುಂಬೈ: ಉದ್ಯಮಿ ಮುಕೇಶ್‌ ಅಂಬಾನಿ (Mukesh Ambani) ಅವರ ಪುತ್ರ ಅನಂತ್‌ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್‌ (Anant Ambani-Radhika Merchant Wedding) ಅವರ ಅದ್ಧೂರಿ ವಿವಾಹಕ್ಕೆ ಗಣ್ಯರು, ತಾರಾಗಣ ಸಾಕ್ಷಿಯಾಗಿದೆ. ಇಲ್ಲಿನ ಜಿಯೋ ವರ್ಲ್ಡ್‌ ಕನ್ವೆನ್ಷನ್‌ ಸೆಂಟರ್‌ನಲ್ಲಿ ನಡೆಯುತ್ತಿರುವ ವಿವಾಹ ಸಮಾರಂಭಕ್ಕೆ ಕ್ರಿಕೆಟ್‌ ದೇವರು ಸಚಿನ್‌ ತೆಂಡೂಲ್ಕರ್‌ (Sachin Tendulkar), ಡಬ್ಲ್ಯೂಡಬ್ಲ್ಯೂಇ ಸ್ಟಾರ್‌ ಜಾನ್‌ ಸೀನಾ ಆಗಮಿಸಿದ್ದಾರೆ.

    ಕುಟುಂಬದವರೊಂದಿಗೆ ತೆಂಡೂಲ್ಕರ್‌ ವಿವಾಹ ಸಮಾರಂಭಕ್ಕೆ ಆಗಮಿಸಿದ್ದಾರೆ. ಭಾರೀ ಮಳೆಯ ನಡುವೆ ಮಾಜಿ ಕ್ರಿಕೆಟಿಗ ಕಾರಿನಿಂದ ಇಳಿಯುತ್ತಿರುವ ದೃಶ್ಯ ಕ್ಯಾಮೆರಾಗಳ ಕಣ್ಣಲ್ಲಿ ಸೆರೆಯಾಗಿದೆ. ಮಧ್ಯರಾತ್ರಿಯ ಸುಮಾರಿಗೆ, ಬಾಲಿವುಡ್‌ ಸೂಪರ್ ಸ್ಟಾರ್ ಶಾರುಖ್ ಖಾನ್ ಮದುವೆಯಲ್ಲಿ ಪಾಲ್ಗೊಳ್ಳಲು ಮುಂಬೈಗೆ ಬಂದಿಳಿದಿದ್ದರು. ಇದನ್ನೂ ಓದಿ: ಅಂಬಾನಿ ಮಗನ ಮದುವೆಯಲ್ಲಿ ರಾಕಿ ಭಾಯ್- ಯಶ್‌ ಗೆಟಪ್‌ಗೆ ಫ್ಯಾನ್ಸ್‌ ಫಿದಾ

    ಅನಂತ್‌-ರಾಧಿಕಾ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಜಾನ್‌ ಸೀನಾ (John Cena) ಕೂಡ ಮುಂಬೈಗೆ ಶುಕ್ರವಾರ ಬಂದಿಳಿದರು. ಆ ಮೂಲಕ ಭಾರತದ ಮೇಲಿನ ತಮ್ಮ ಪ್ರೀತಿಯನ್ನು ಡಬ್ಲ್ಯೂಡಬ್ಲ್ಯೂಇ ಸ್ಟಾರ್‌ ವ್ಯಕ್ತಪಡಿಸಿದ್ದಾರೆ.

    ಅಲ್ಲದೇ, ಬಿಹಾರ್‌ ಮಾಜಿ ಸಿಎಂ ಲಾಲು ಪ್ರಸಾದ್‌ ಯಾದವ್‌ ಕುಟುಂಬ, ಸಮಾಜವಾದಿ ಪಕ್ಷದ ಅಖಿಲೇಶ್‌ ಯಾದವ್‌, ಕನ್ನಡದ ಸ್ಟಾರ್‌ ನಟ ಯಶ್‌-ರಾಧಿಕಾ ಪಂಡಿತ್‌ ದಂಪತಿ ಸೇರಿದಂತೆ ಅನೇಕ ಗಣ್ಯರು, ಸೆಲೆಬ್ರಿಟಿಗಳು ಅಂಬಾನಿ ಪುತ್ರನಿಗೆ ಶುಭಕೋರಲು ಆಗಮಿಸಿದ್ದಾರೆ. ಇದನ್ನೂ ಓದಿ: ನನ್ನ ಭೇಟಿಗೆ ಬರುವವರು ಕಡ್ಡಾಯವಾಗಿ ಆಧಾರ್‌ ತನ್ನಿ: ಕಂಗನಾ ರಣಾವತ್‌!

  • ಅನಂತ್, ರಾಧಿಕಾ ಸಂಗೀತ ಕಾರ್ಯಕ್ರಮಕ್ಕೆ ಜಸ್ಟಿನ್‌ ಬೀಬರ್‌ಗೆ 83 ಕೋಟಿ ಸಂಭಾವನೆ

    ಅನಂತ್, ರಾಧಿಕಾ ಸಂಗೀತ ಕಾರ್ಯಕ್ರಮಕ್ಕೆ ಜಸ್ಟಿನ್‌ ಬೀಬರ್‌ಗೆ 83 ಕೋಟಿ ಸಂಭಾವನೆ

    ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ (Anant Ambani) ಮದುವೆ ಇದೇ ಜುಲೈ 12ರಂದು ಜರುಗಲಿದೆ. ಇಂದು (ಜು.5) ನಡೆಯಲಿರುವ ಸಂಗೀತ ಕಾರ್ಯಕ್ರಮದಲ್ಲಿ ಕೆನಡಾದ ಖ್ಯಾತ ಗಾಯಕ ಜಸ್ಟಿನ್ ಬೀಬರ್ (Justin Bieber) ಕೂಡ ಹಾಜರಿ ಹಾಕಿದ್ದಾರೆ. ಇದೀಗ ಈ ಕಾರ್ಯಕ್ರಮದಲ್ಲಿ ಹಾಡಲು 83 ಕೋಟಿ ರೂ. ಸಂಭಾವನೆ ಚಾರ್ಜ್ ಮಾಡಿದ್ದಾರೆ.

    ಜು.4ರಂದು ಜಸ್ಟಿನ್ ಬೀಬರ್ ಅವರು ಮುಂಬೈಗೆ ಬಂದಿಳಿದಿದ್ದಾರೆ. 30 ವರ್ಷದ ಈ ಗಾಯಕ ಒಂದು ದಿನದ ಕಾರ್ಯಕ್ರಮಕ್ಕೆ ಚಾರ್ಜ್ ಮಾಡುತ್ತಿರುವ ಹಣದ ಮೊತ್ತ ಕೇಳಿ ಅನೇಕರು ಶಾಕ್ ಆಗಿದ್ದಾರೆ. 10 ಮಿಲಿಯನ್ ಅಮೆರಿಕನ್ ಡಾಲರ್ ಚಾರ್ಜ್ ಮಾಡಿದ್ದಾರೆ. ಅಂದರೆ ಭಾರತದ ರೂಪಾಯಿಗೆ ಅವರ ಸಂಭಾವನೆ ಬರೋಬ್ಬರಿ 83.51 ಕೋಟಿ ರೂ. ಆಗಲಿದೆ. ಇದನ್ನೂ ಓದಿ:ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ನಟಿ ಹಿನಾ ಖಾನ್ ಕೂದಲಿಗೆ ಬಿತ್ತು ಕತ್ತರಿ

    ಜಸ್ಟಿನ್ ಬೀಬರ್ ಸಂಗೀತ ಕಾರ್ಯಕ್ರಮಕ್ಕೆ ವಿಶ್ವದ ಎಲ್ಲಾ ಕಡೆ ಭಾರೀ ಬೇಡಿಕೆಯಿದೆ. ಹಾಗಾಗಿ ಅಂಬಾನಿ ಮನೆ ಮದುವೆಗೂ ಹಾಡಲು ಅವರಿಗೆ ಬುಲಾವ್ ಬಂದಿದೆ. ಇದನ್ನೂ ಓದಿ:‘ಲವ್‌ಸ್ಟೋರಿ’ ನಿರ್ದೇಶಕನ ಸಿನಿಮಾದಲ್ಲಿ ನ್ಯಾಚುರಲ್ ಸ್ಟಾರ್ ನಾನಿ

    ಅಂದಹಾಗೆ, ಅನಂತ್ ಮತ್ತು ರಾಧಿಕಾ (Radhika Merchant) ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈಗ ಎರಡು ಕುಟುಂಬದ ಸಮ್ಮತಿ ಪಡೆದು ಮದುವೆಯ ಮುದ್ರೆ ಒತ್ತಲು ಸಜ್ಜಾಗಿದ್ದಾರೆ.

  • ಅಕ್ಷಯ್ ಕುಮಾರ್‌ ಮನೆಗೆ ಭೇಟಿ- ಮದುವೆ ಆಮಂತ್ರಣ ನೀಡಿದ ಅನಂತ್ ಅಂಬಾನಿ

    ಅಕ್ಷಯ್ ಕುಮಾರ್‌ ಮನೆಗೆ ಭೇಟಿ- ಮದುವೆ ಆಮಂತ್ರಣ ನೀಡಿದ ಅನಂತ್ ಅಂಬಾನಿ

    ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿ ಮುಖೇಶ್ ಅಂಬಾನಿ (Mukesh Ambani) ಪುತ್ರ ಅನಂತ್ ಅಂಬಾನಿ ಮದುವೆಗೆ ಭರ್ಜರಿ ತಯಾರಿ ನಡೆಯುತ್ತಿದೆ. ಬಾಲಿವುಡ್‌ನ ಸ್ಟಾರ್ ನಟ, ನಟಿಯರಿಗೆ ಆಮಂತ್ರಣ ಕೊಡೋದ್ರಲ್ಲಿ ಅನಂತ್ ಬ್ಯುಸಿಯಾಗಿದ್ದಾರೆ. ಇದೀಗ ಅಕ್ಷಯ್ ಕುಮಾರ್ (Akshay Kumar) ಮನೆಗೆ ತೆರಳಿ ಅಂಬಾನಿ ಪುತ್ರ ಮದುವೆ ಆಮಂತ್ರಣ ನೀಡಿದ್ದಾರೆ.

    ನಟ ಅಕ್ಷಯ್ ಮನೆಗೆ ಅನಂತ್ (Anant Ambani) ಭೇಟಿ ನೀಡಿ ಮದುವೆ ಆಹ್ವಾನ ನೀಡಿದ್ದಾರೆ. ಇದಕ್ಕೂ ಕಾಜೋಲ್ ಮತ್ತು ಅಜಯ್ ದೇವಗನ್ ದಂಪತಿಗೂ ಕೂಡ ಆಮಂತ್ರಣ ನೀಡಲಾಗಿದೆ. ಹೀಗೆ ಸಾಕಷ್ಟು ಸ್ಟಾರ್ ಸೆಲೆಬ್ರಿಟಿಗಳಿಗೆ ಮದುವೆ ಆಹ್ವಾನ ನೀಡುತ್ತಿದ್ದಾರೆ. ಇದನ್ನೂ ಓದಿ:ಮದುವೆ ಬಳಿಕ 25 ಕೋಟಿ ಬೆಲೆ ಬಾಳುವ ಮನೆಗೆ ಸೋನಾಕ್ಷಿ ಸಿನ್ಹಾ ಶಿಫ್ಟ್

    ಜುಲೈ 12ರಂದು ಮುಂಬೈನ ಜೀಯೋ ವರ್ಲ್ಡ್ ಸೆಂಟರ್‌ನಲ್ಲಿ ಅನಂತ್ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ನಡೆಯಲಿದೆ. ಅದಕ್ಕಾಗಿ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.

    ಅನಂತ್ ಅಂಬಾನಿ ಮತ್ತು ರಾಧಿಕಾ ಬಾಲ್ಯದಿಂದ ಸ್ನೇಹಿತರು. ಹಲವು ವರ್ಷಗಳ ಪ್ರೀತಿಗೆ ಮದುವೆಯ ಮುನ್ನುಡಿ ಬರೆಯಲು ಸಜ್ಜಾಗಿದ್ದಾರೆ. ಇತ್ತೀಚೆಗೆ ಇಟಲಿಯಲ್ಲಿ ಅದ್ಧೂರಿಯಾಗಿ ವಿವಾಹ ಪೂರ್ವ ಕಾರ್ಯಕ್ರಮ ಮಾಡಲಾಯಿತು. ಈ ಸಮಾರಂಭದಲ್ಲಿ ಬಾಲಿವುಡ್ ಕಲಾವಿದರ ದಂಡೇ ಭಾಗಿಯಾಗಿತ್ತು.

  • ಅಂಬಾನಿ ಮನೆ ಮಗನ ಪ್ರಿ ವೆಡ್ಡಿಂಗ್‌ನಲ್ಲಿ ಸೆಲೆಬ್ರಿಟಿಗಳ ದಂಡು

    ಅಂಬಾನಿ ಮನೆ ಮಗನ ಪ್ರಿ ವೆಡ್ಡಿಂಗ್‌ನಲ್ಲಿ ಸೆಲೆಬ್ರಿಟಿಗಳ ದಂಡು

    ವಿಶ್ವದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾಗಿರುವ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ (Radhika Merchant) ಪ್ರಿ ವೆಡ್ಡಿಂಗ್ ಪಾರ್ಟಿ (Pre- Wedding) ಅದ್ಧೂರಿಯಾಗಿ ಜರುಗಿದೆ. ಇಟಲಿಯಲ್ಲಿ ನಡೆದ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಸೆಲೆಬ್ರಿಟಿಗಳ ದಂಡೇ ಹರಿದು ಬಂದಿದೆ.

    ಅಂಬಾನಿ ಮಗನ ಮನೆ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ (Shah rukh Khan) ಮತ್ತು ರಣ್‌ಬೀರ್ ಕಪೂರ್ (Ranbir Kapoor) ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಜಾನ್ವಿ ಕಪೂರ್, ಆಲಿಯಾ ಭಟ್‌, ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಜೋಡಿ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಇದನ್ನೂ ಓದಿ:ಇಳಯರಾಜ ಬಯೋಪಿಕ್ ಹೊಸ ಪೋಸ್ಟರ್ ರಿಲೀಸ್ ಮಾಡಿದ ಧನುಷ್

    ಇನ್ನೂ ಶಾರುಖ್ ಪುತ್ರಿ ಸುಹಾನಾ ಖಾನ್ ಸ್ಟೈಲೀಶ್ ಆಗಿ ಕಾಣಿಸಿಕೊಂಡಿದ್ದಾರೆ. ಸುಹಾನಾ ಜೊತೆ ಶನಾಯಾ ಕಪೂರ್, ಅನನ್ಯಾ ಪಾಂಡೆ ಕೂಡ ಮಸ್ತ್ ಆಗಿ ಫೋಟೋಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟ ‘ಅರಸು’ ನಟಿ- ತೆಲುಗಿಗೆ ಮೀರಾ ಜಾಸ್ಮಿನ್ ಕಮ್‌‌ ಬ್ಯಾಕ್

    ಅಂದಹಾಗೆ, ಅನಂತ್ ಮತ್ತು ರಾಧಿಕಾ ಮದುವೆ ಜುಲೈ 12ರಂದು ನಡೆಯಲಿದೆ. ಜುಲೈ 12ರಿಂದ ಜುಲೈ 14ರವರೆಗೆ ಮದುವೆ ಕಾರ್ಯಕ್ರಮಗಳು ಜರುಗಲಿದೆ.

    ನಗರದ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಹಿಂದೂ ವೈದಿಕ ಸಂಪ್ರದಾಯದಂತೆ ವಿವಾಹ ಸಮಾರಂಭ ನಡೆಯಲಿದೆ ಎಂದು ವರದಿಯಾಗಿದೆ.

  • ಮೇ 28ರಂದು ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್- ಇಟಲಿಯತ್ತ ಬಾಲಿವುಡ್ ಸ್ಟಾರ್ಸ್

    ಮೇ 28ರಂದು ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್- ಇಟಲಿಯತ್ತ ಬಾಲಿವುಡ್ ಸ್ಟಾರ್ಸ್

    ಮುಕೇಶ್ ಅಂಬಾನಿ (Mukesh Ambani) ಪುತ್ರ ಅನಂತ್ ಅಂಬಾನಿ (Anant Ambani) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ನಾಳೆ ಇಟಾಲಿಯಲ್ಲಿ ನಡೆಯಲಿರುವ (ಮೇ 28) 2ನೇ ಪ್ರಿ ವೆಡ್ಡಿಂಗ್ (Pre Wedding) ಕಾರ್ಯಕ್ರಮಕ್ಕೆ ಭರ್ಜರಿ ತಯಾರಿ ಆಗಿದೆ. ಇದೀಗ ಬಾಲಿವುಡ್ ಸ್ಟಾರ್‌ಗಳು ಅಂಬಾನಿ ಕುಟುಂಬದ ಫಂಕ್ಷನ್‌ನಲ್ಲಿ ಭಾಗಿಯಾಗುತ್ತಿದ್ದು, ಆಲಿಯಾ ಭಟ್ (Alia Bhatt) ಸೇರಿದಂತೆ ಅನೇಕರು ಇಟಲಿಗೆ ಹಾರಿದ್ದಾರೆ.

    ಆಲಿಯಾ ಭಟ್ ಮತ್ತು ರಣಬೀರ್ ಕಪೂರ್, ಮಗಳು ರಾಹಾ ಕಪೂರ್, ಹಾಗೆಯೇ ರಣವೀರ್ ಸಿಂಗ್, ಸಲ್ಮಾನ್ ಖಾನ್, ಮಾಜಿ ಕ್ರಿಕೆಟ್ ಎಂ.ಎಸ್ ಧೋನಿ, ಪತ್ನಿ ಸಾಕ್ಷಿ ಧೋನಿ ಮತ್ತು ಅವರ ಮಗಳು ಈಗಾಗಲೇ ಇಟಲಿಗೆ ತೆರಳಿದ್ದಾರೆ. ಇವರೆಲ್ಲರೂ ಮುಂಬೈನ ಖಾಸಗಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಶಶಿಕುಮಾರ್ ಪುತ್ರನ ‘ಕಾದಾಡಿ’ ಸಿನಿಮಾದ ಲಿರಿಕಲ್ ಸಾಂಗ್ ರಿಲೀಸ್

    ಮೇ 28 ರಿಂದ 30ರವರೆಗೆ ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್ ನಡೆಯಲಿದೆ. ಐಷಾರಾಮಿ ಕ್ರೂಸ್‌ನಲ್ಲಿ (ಬೃಹತ್ ಹಡಗು) 800 ಅತಿಥಿಗಳಿಗಾಗಿ ಪಾರ್ಟಿ ಆಯೋಜನೆ ಮಾಡಲಾಗಿದೆ. ಇದು ಮೂರು ದಿನಗಳಲ್ಲಿ ಇಟಲಿಯಿಂದ ದಕ್ಷಿಣ ಫ್ರಾನ್ಸ್‌ ತನಕ ಸುಮಾರು 4380 ಕಿ.ಮೀ ಚಲಿಸಲಿದೆ ಎನ್ನಲಾಗಿದೆ. ಈ ಬಾರಿಯೂ ನಡೆಯಲಿರುವ ಪ್ರಿ ವೆಡ್ಡಿಂಗ್ ಸಂಭ್ರಮಾಚರಣೆ ವಿಶೇಷವಾಗಿರಲಿದೆ.

    ಅಂದಹಾಗೆ, ಇದೇ ವರ್ಷ ಮಾರ್ಚ್ನಲ್ಲಿ ಗುಜರಾತಿನ ಜಾಮ್‌ನಗರದಲ್ಲಿ ಅದ್ಧೂರಿಯಾಗಿ ಅನಂತ್ ಮತ್ತು ರಾಧಿಕಾ (Radhika Merchant) ಮೊದಲ ಪ್ರಿ ವೆಡ್ಡಿಂಗ್ ಕಾರ್ಯಕ್ರಮ ನೆರವೇರಿತ್ತು. ಬಾಲಿವುಡ್‌ನ ಹಲವು ಸ್ಟಾರ್‌ಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

  • ಲಂಡನ್ ಅಲ್ಲ, ಭಾರತದಲ್ಲೇ ಅಂಬಾನಿ ಪುತ್ರನ ವಿವಾಹ

    ಲಂಡನ್ ಅಲ್ಲ, ಭಾರತದಲ್ಲೇ ಅಂಬಾನಿ ಪುತ್ರನ ವಿವಾಹ

    ಹೆಸರಾಂತ ಉದ್ಯಮಿ, ಶ್ರೀಮಂತ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ (Anant Ambani) ವಿವಾಹ ಲಂಡನ್ ನಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತು. ಲಂಡನ್ ನ ಪ್ರತಿಷ್ಠಿತ ಸ್ಟೋಕ್ ಪಾರ್ಕ್ ಎಸ್ಟೇಟ್ ಅನ್ನು ಮದುವೆಗಾಗಿ (Wedding) ಆಯ್ಕೆ ಮಾಡಲಾಗಿದೆ ಎನ್ನುವ ಸುದ್ದಿಯೂ ಜೋರಾಗಿ ಕೇಳಿ ಬಂದಿತ್ತು. ಆದರೆ, ಲಂಡನ್ ಬದಲಾಗಿ ಭಾರತದಲ್ಲೇ ಮಗನ ಮದುವೆ ಮಾಡಲು ಮುಖೇಶ್ ಅಂಬಾನಿ ನಿರ್ಧಾರ ಮಾಡಿದ್ದಾರೆ.

    ಸ್ಟೋಕ್ ಪಾರ್ಕ್ ಅನ್ನು ಬ್ರಿಟನ್ ನ ಐಕಾನಿಕ್ ಕಂಟ್ರಿ ಕ್ಲಬ್ ಮತ್ತು ಐಷಾರಾಮಿ ಗಾಲ್ಫ್ ರೆಸಾರ್ಟ್ ಪಾರ್ಕನ್ನು ಮಖೇಶ್ ಒಡೆತನದ ರಿಲಯನ್ಸ್ ಇಂಡಸ್ಟ್ರಿಯು 592 ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿ ಮಾಡಿದೆ. ಅದೇ ಪಾರ್ಕ್ ನಲ್ಲೇ ಮಗನ ಮದುವೆ ಮಾಡಲಿದ್ದಾರೆ ಎಂದು ವರದಿಯಾಗಿತ್ತು.

    ಈ ಸ್ಟೋಕ್ ಪಾರ್ಕ್ 49 ಐಷಾರಾಮಿ ಬೆಡ್ ರೂಮ್ ಹೊಂದಿರುವ ಹೋಟೆಲ್ ಕೂಡ ಆಗಿದ್ದು, 14 ಎಕರೆ ಜಾಗವನ್ನು ಹೊಂದಿದೆ. ರಾಣಿ ಎಲಿಜಬೆತ್ 1 ಇದೇ ಜಾಗದಲ್ಲಿ ವಾಸವಿದ್ದರೂ ಎಂದು ಹೇಳಲಾಗುತ್ತಿದೆ. ಹಾಗಾಗಿ ಈ ಜಾಗಕ್ಕೆ ಅಷ್ಟೊಂದು ಮಹತ್ವ ಬಂದಿದೆ. ಈ ಜಾಗದಲ್ಲೇ ಅಂಬಾನಿ ಪುತ್ರನ ವಿವಾಹವನ್ನು ಅದ್ಧೂರಿಯಾಗಿ ಮಾಡಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

    ಇತ್ತೀಚೆಗಷ್ಟೇ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ (Radhika Merchant) ಜೋಡಿಯ ಮದುವೆ ಪೂರ್ವ ಕಾರ್ಯಗಳು ಅದ್ಧೂರಿಯಾಗಿ ನಡೆದಿವೆ. ಗುಜರಾತ್ ನ ಜಾಮ್ ನಗರದಲ್ಲಿ ಮೂರು ದಿನಗಳ ಕಾಲ ನಡೆದ ಕಾರ್ಯಕ್ರಮಕ್ಕೆ ಅಂದಾಜು 1200 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಜಗತ್ತಿನ ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮದುವೆಗೂ ಕೂಡ ಅನೇಕರು ಭಾಗಿ ಆಗುವ ಸಾಧ್ಯತೆ ಇದೆ.  ಈ ಮದುವೆ ಮುಂಬೈನಲ್ಲಿ (Mumbai) ನಡೆಯಲಿದೆ.

  • ಅನಂತ್ ಅಂಬಾನಿ ಹುಟ್ಟುಹಬ್ಬದಲ್ಲಿ ಕುಣಿದು ಕುಪ್ಪಳಿಸಿದ ಸಲ್ಮಾನ್

    ಅನಂತ್ ಅಂಬಾನಿ ಹುಟ್ಟುಹಬ್ಬದಲ್ಲಿ ಕುಣಿದು ಕುಪ್ಪಳಿಸಿದ ಸಲ್ಮಾನ್

    ಭಾರತದ ಅತ್ಯಂತ ಶ್ರೀಮಂತ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ (Anant Ambani) ಹುಟ್ಟು ಹಬ್ಬ ನಿನ್ನೆ ರಾತ್ರಿ ಅದ್ಧೂರಿಯಾಗಿ ಜಾಮ್ ನಗರದಲ್ಲಿ ನಡೆದಿದೆ. ಸಾಕಷ್ಟು ಸೆಲೆಬ್ರಿಟಿಗಳು ಈ ಹುಟ್ಟು ಹಬ್ಬಕ್ಕೆ  (Birthday) ಸಾಕ್ಷಿಯಾಗಿದ್ದರು. ಅದರಲ್ಲೂ ಬಾಲಿವುಡ್ ನಟ ಸಲ್ಮಾನ್ ಖಾನ್ ಹಾಡಿ, ಕುಣಿದು ಕುಪ್ಪಳಿಸಿದ್ದಾರೆ.

    ಜಾಮ್ ನಗರದಲ್ಲಿ ಅನಂತ್ ಅವರ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಬಾಲಿವುಡ್ ನ ಅನೇಕ ತಾರೆಯರು ಇದರಲ್ಲಿ ಪಾಲ್ಗೊಂಡಿದ್ದಾರೆ.  ಹುಟ್ಟು ಹಬ್ಬದಲ್ಲಿ ಪಾಲ್ಗೊಳ್ಳುವುದಕ್ಕಾಗಿಯೇ ನಿನ್ನೆ ಜಾಮ್ ನಗರಕ್ಕೆ ಬಾಲಿವುಡ್ ನಟರಾದ ಸಲ್ಮಾನ್ ಖಾನ್ (Salman Khan), ಜಾನ್ವಿ ಕಪೂರ್, ಓರಿ ಸೇರಿದಂತೆ ಹಲವರು  ಬಂದಿಳಿದಿದ್ದರು. ಜಾಮ್ ನಗರದ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಫೋಟೋ ಮತ್ತು  ವಿಡಿಯೋಗಳು ವೈರಲ್ ಆಗಿದ್ದವು.

     

    ಈ ಹಿಂದೆ ಅನಂತ್ ಅವರ ಪ್ರಿವೆಡ್ಡಿಂಗ್ ಕಾರ್ಯಕ್ರಮಕ್ಕೆ ಅನೇಕ ಸಿನಿಮಾ ತಾರೆಯರು, ಕ್ರಿಕೆಟ್ ಆಟಗಾರರು, ಮಾಡೆಲಿಂಗ್ ಕ್ಷೇತ್ರದವರು ಹಾಗೂ ಸಂಗೀತ ಕ್ಷೇತ್ರದ ಅನೇಕರು ಭಾಗಿಯಾಗಿ ಶುಭ ಹಾರೈಸಿದ್ದರು. ಈಗ ಹುಟ್ಟು ಹಬ್ಬಕ್ಕೂ ಆಯಾ ಕ್ಷೇತ್ರ ಸೆಲೆಬ್ರಿಟಿಗಳು ಸಾಕ್ಷಿಯಾಗಲು ಬರುತ್ತಿದ್ದಾರೆ.

  • ಅನಂತ್ ಅಂಬಾನಿ ಹುಟ್ಟು ಹಬ್ಬಕ್ಕೆ ಸಲ್ಮಾನ್ ಅತಿಥಿ

    ಅನಂತ್ ಅಂಬಾನಿ ಹುಟ್ಟು ಹಬ್ಬಕ್ಕೆ ಸಲ್ಮಾನ್ ಅತಿಥಿ

    ಗತ್ತಿನ ಶ್ರೀಮಂತರ ಪಟ್ಟಿಯಲ್ಲಿರುವ ಭಾರತದ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ (Anant Ambani) ನಾಳೆ ಅದ್ದೂರಿಯಾಗಿ ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುತ್ತಿದ್ದಾರೆ. ಜಾಮ್ ನಗರದಲ್ಲಿ ಇವರ ಹುಟ್ಟು ಹಬ್ಬದ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ಬಾಲಿವುಡ್ ನ ಅನೇಕ ತಾರೆಯರು ಇದರಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

    ಹುಟ್ಟು ಹಬ್ಬವನ್ನು ಆಚರಿಸುವುದಕ್ಕಾಗಿ ಈಗಾಗಲೇ ಜಾಮ್ ನಗರಕ್ಕೆ ಬಾಲಿವುಡ್ ನಟರಾದ ಸಲ್ಮಾನ್ ಖಾನ್ (Salman Khan), ಜಾನ್ವಿ ಕಪೂರ್, ಓರಿ ಸೇರಿದಂತೆ ಹಲವರು ಜಾಮ್ ನಗರದ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಫೋಟೋ ಮತ್ತು  ವಿಡಿಯೋಗಳು ವೈರಲ್ ಆಗಿವೆ.

     

    ಈ ಹಿಂದೆ ಅನಂತ್ ಅವರ ಪ್ರಿವೆಡ್ಡಿಂಗ್ ಕಾರ್ಯಕ್ರಮಕ್ಕೆ ಅನೇಕ ಸಿನಿಮಾ ತಾರೆಯರು, ಕ್ರಿಕೆಟ್ ಆಟಗಾರರು, ಮಾಡೆಲಿಂಗ್ ಕ್ಷೇತ್ರದವರು ಹಾಗೂ ಸಂಗೀತ ಕ್ಷೇತ್ರದ ಅನೇಕರು ಭಾಗಿಯಾಗಿ ಶುಭ ಹಾರೈಸಿದ್ದರು. ಈಗ ಹುಟ್ಟು ಹಬ್ಬಕ್ಕೂ ಆಯಾ ಕ್ಷೇತ್ರ ಸೆಲೆಬ್ರಿಟಿಗಳು ಸಾಕ್ಷಿಯಾಗಲು ಬರುತ್ತಿದ್ದಾರೆ.

  • ಅನಂತ್‌ ಅಂಬಾನಿ ಕೈಯಲ್ಲಿದ್ದ ವಾಚ್‌ಗೆ ಮನಸೋತ ಜುಕರ್‌ಬರ್ಗ್‌ ದಂಪತಿ!

    ಅನಂತ್‌ ಅಂಬಾನಿ ಕೈಯಲ್ಲಿದ್ದ ವಾಚ್‌ಗೆ ಮನಸೋತ ಜುಕರ್‌ಬರ್ಗ್‌ ದಂಪತಿ!

    ಗಾಂಧೀನಗರ: ಗುಜರಾತ್‌ನ ಜಾಮ್‌ನಗರದಲ್ಲಿ ಅನಂತ್ ಅಂಬಾನಿ (Anant Ambani) ಮತ್ತು ರಾಧಿಕಾ ಮರ್ಚೆಂಟ್ (Radhika Merchant) ಅವರ ವಿವಾಹಪೂರ್ವ ವೈಭವದ ಆಚರಣೆ ಮನೆ ಮಾಡಿದ. ಈ ನಡುವೆ ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ( Meta CEO Mark Zuckerberg) ಮತ್ತು ಪತ್ನಿ ಪ್ರಿಸ್ಸಿಲ್ಲಾ ಚಾನ್ (Priscilla Chan) ಅವರು ಅನಂತ್ ಅಂಬಾನಿಯ ದುಬಾರಿ ಬೆಲೆಯ ವಾಚ್ ಬಗ್ಗೆ ವಿಚಾರಿಸಿರುವುದು ಅತಿಥಿಗಳ ಗಮನವನ್ನು ಸೆಳೆದಿದೆ.

    ಹೌದು. ಮಾರ್ಕ್ ಜುಕರ್‌ಬರ್ಗ್ ತಮ್ಮ ಪತ್ನಿ ಪ್ರಿಸ್ಸಿಲ್ಲಾ ಚಾನ್ ಜೊತೆ ಅನಂತ್ ಅಂಬಾನಿ ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಭಾಗಿ ಆದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಜುಕರ್‌ಬರ್ಗ್ ಪತ್ನಿ ಪ್ರಿಸ್ಸಿಲ್ಲಾ ಚಾನ್ ಅವರು ಅನಂತ್ ಅಂಬಾನಿ ಅವರ ಕೈಯಲ್ಲಿರುವ ದುಬಾರಿ ವಾಚ್‌ (Watch) ನೋಡಿ ಮಾರುಹೋಗಿದ್ದಾರೆ. ಇದನ್ನೂ ಓದಿ: ಪುತ್ರ ಅನಂತ್ ಪ್ರೀ-ವೆಡ್ಡಿಂಗ್‌ನಲ್ಲಿ ನೀತಾ ಅಂಬಾನಿ ಡ್ಯಾನ್ಸ್

    ವೀಡಿಯೋದಲ್ಲಿ ಏನಿದೆ..?: ಜುಕರ್‌ಬರ್ಗ್ ಮತ್ತು ಅವರ ಪತ್ನಿ ಪ್ರಿಸ್ಸಿಲ್ಲಾ ಅವರೊಂದಿಗೆ ವರ ಅನಂತ್ ಅವರು ನಿಂತುಕೊಂಡು ಮಾತನಾಡುತ್ತಿದ್ದರು. ಹೀಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಜುಕರ್‌ ಬರ್ಗ್‌ ಅವರ ಪತ್ನಿಯ ಕಣ್ಣಿಗೆ ಅನಂತ್‌ ಅವರ ವಾಚ್‌ ಬಿದ್ದಿದೆ. ಅಲ್ಲದೆ ಅವರಿಗೆ ತುಂಬಾ ಇಷ್ಟವಾಗುತ್ತೆ. ಹೀಗಾಗಿ ಅವರು ವಾಚ್‌ ತುಂಬಾ ಅದ್ಭುತವಾಗಿದೆ ಎಂದು ಹೇಳುತ್ತಾರೆ. ಈ ವೇಳೆ ಜುಕರ್‌ ಬರ್ಗ್‌ ಅವರು.. ಹೌದು. ತುಂಬಾ ಚೆನ್ನಾಗಿದೆ. ನಾನು ಈಗಾಗಲೇ ಅವರಿಗೆ ಹೇಳಿದೆ ಎನ್ನುತ್ತಾರೆ. ಈ ವೇಳೆ ಪ್ರಿಸಿಲ್ಲಾ, ಈ ವಾಚ್​​ ಅನ್ನು ಯಾವ ಕಂಪನಿ ತಯಾರಿಸಿದೆ? ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಅನಂತ್, ರಿಶಾರ್​ ಮಿಲ್ ಕಂಪನಿ ಎಂದು ಹೇಳಿದ್ದಾರೆ.

    ಅನಂತ್ ಕೈಯಲ್ಲಿದ್ದ ವಾಚ್ ನೋಡಿ ಜುಕರ್​​ಬರ್ಗ್ ಅವರ ಮನಸ್ಸು ಬದಲಾಗಿದೆ. ಹೀಗಾಗಿ ಮಾತು ಮುಂದವರಿಸಿದ ಅವರು, ನಿಮಗೆ ಗೊತ್ತಾ ನಾನು ಎಂದಿಗೂ ವಾಚ್​​ಗಳನ್ನು ಖರೀದಿಸಲು ಬಯಸಲಿಲ್ಲ. ಆದರೆ ಅನಂತ್‌ ಅವರ ಕೈಯಲ್ಲಿದ್ದ ವಾಚ್ ನೋಡಿ ನನ್ನ ಮನಸ್ಸು ಬದಲಾಯಿತು. ವಾಚ್ ಚೆನ್ನಾಗಿ ಕಾಣುತ್ತದೆ ಎಂದಿದ್ದಾರೆ. ಈ ವೀಡಿಯೋಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗುತ್ತಿದೆ. ಅಲ್ಲದೆ ಹಲವಾರು ಪರ-ವಿರೋಧ ಕಾಮೆಂಟ್‌ಗಳು ಬರುತ್ತಿವೆ.

    ವಾಚ್‌ ಬೆಲೆ ಕೇಳಿದ್ರೆ ಶಾಕ್‌ ಆಗ್ತೀರಿ: ರಿಶಾರ್​ ಮಿಲ್ (Richard Mille) ಅತ್ಯಂತ ದುಬಾರಿ ವಾಚ್​​ಗಳನ್ನು ತಯಾರಿಸುತ್ತದೆ. ಇದು ಸ್ವಿಜರ್​ಲೆಂಡ್​ನ ಕಂಪನಿ ಆಗಿದೆ. ಅನಂತ್ ಅಂಬಾನಿ ಕೈಯಲ್ಲಿದ್ದ ವಾಚ್​ ಬೆಲೆ ಬರೋಬ್ಬರಿ 14 ಕೋಟಿ ರೂಪಾಯಿ ಎನ್ನಲಾಗಿದೆ.

  • ಪುತ್ರ ಅನಂತ್ ಪ್ರೀ-ವೆಡ್ಡಿಂಗ್‌ನಲ್ಲಿ ನೀತಾ ಅಂಬಾನಿ ಡ್ಯಾನ್ಸ್

    ಪುತ್ರ ಅನಂತ್ ಪ್ರೀ-ವೆಡ್ಡಿಂಗ್‌ನಲ್ಲಿ ನೀತಾ ಅಂಬಾನಿ ಡ್ಯಾನ್ಸ್

    ವಿಶ್ವದ ಟಾಪ್ ಶ್ರೀಮಂತರಲ್ಲಿ ಒಬ್ಬರಾದ ಮುಖೇಶ್ ಅಂಬಾನಿ- ನೀತಾ ಅಂಬಾನಿ (Nita Ambani) ಪುತ್ರ ಅನಂತ್ ಅಂಬಾನಿ (Anant Ambani) ಪ್ರೀ-ವೆಡ್ಡಿಂಗ್ ಕಾರ್ಯಕ್ರಮವು ಜಾಯ್‌ನಗರದಲ್ಲಿ ಅದ್ಧೂರಿಯಾಗಿ ನಡೆದಿದೆ. ಸ್ವರ್ಗವನ್ನು ಧರೆಗಿಳಿಸಿದ ಅಂಬಾನಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಇದೀಗ ಮಗ-ಸೊಸೆಗಾಗಿ ಕಾರ್ಯಕ್ರಮದಲ್ಲಿ ನೀತಾ ಅಂಬಾನಿ ಡ್ಯಾನ್ಸ್ ಮಾಡಿದ್ದಾರೆ.

    ನೀತಾ ಅಂಬಾನಿಯವರು ಮಗ ಹಾಗೂ ಸೊಸೆಗಾಗಿ ಅವರ ದಾಂಪತ್ಯ ಜೀವನ ಚೆನ್ನಾಗಿರಲಿ ಎಂದು ಪ್ರಾರ್ಥಿಸಿ ಮಾತೆ ಅಂಬೆಗಾಗಿ ಮಾಡುವ ವಿಶ್ವಾಂಭರಿ ಸ್ತುತಿಯನ್ನು (Vishwambhari Stuti) ಮಾಡಿದ್ದಾರೆ. ನೀತಾ (Nita Ambani) ಅವರ ನೃತ್ಯ, ಅಭಿನಯ ಅದ್ಭುತವಾಗಿ ಮೂಡಿ ಬಂದಿದೆ. ಇದನ್ನೂ ಓದಿ:ಅನಂತ್ ಅಂಬಾನಿ ಪ್ರೀ-ವೆಡ್ಡಿಂಗ್‌ನಲ್ಲಿ 3ನೇ ದಿನ ಸೆಲೆಬ್ರಿಟಿಗಳು ಮಿಂಚಿದ್ದು ಹೀಗೆ

    ಮುಖೇಶ್ ಅವರ ಪತ್ನಿ ನೀತಾ ಅಂಬಾನಿ ಶಾಸ್ತ್ರೀಯ ನೃತ್ಯಗಾರರೊಂದಿಗೆ ವಿಶ್ವಂಭರಿ ಸ್ತುತಿಯಲ್ಲಿ ಪ್ರದರ್ಶನ ನೀಡಿರುವುದು ನೋಡುಗರಿಗೆ ಖುಷಿ ಕೊಟ್ಟಿದೆ. ಈ ಸಂದರ್ಭದಲ್ಲಿ, ನೀತಾ ಅಂಬಾನಿ ಕೆಂಪು ಕಲರ್ ಸೀರೆಯಲ್ಲಿ ಹೈಲೆಟ್ ಆಗಿದ್ದಾರೆ. ನೀತಾ ಅಂಬಾನಿ ಅವರ ಈ ಡ್ಯಾನ್ಸ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಅನಂತ್- ರಾಧಿಕಾ (Radhika Merchant) ಹಲವು ವರ್ಷಗಳಿಂದ ಪರಿಚಿತರು. ಆ ಪರಿಚಯವೇ ಪ್ರೀತಿಗೆ ತಿರುಗಿ ಇದೀಗ ಮದುವೆಯ ಮುದ್ರೆ ಒತ್ತಲು ಈ ಜೋಡಿ ಸಜ್ಜಾಗಿದ್ದಾರೆ. ಗುರುಹಿರಿಯರ ಸಮ್ಮತಿಯ ಮೇರೆಗೆ ಈ ಜೋಡಿ ಮದುವೆಯಾಗುತ್ತಿದ್ದಾರೆ.

    ಅನಂತ್ ಮತ್ತು ರಾಧಿಕಾ ಮದುವೆ ಇದೇ ಜೂನ್ 12ಕ್ಕೆ ಫಿಕ್ಸ್ ಆಗಿದೆ. ಮಾರ್ಚ್ 1ರಿಂದ 3ರವರೆಗೆ ವಿವಾಹ ಪೂರ್ವ ಕಾರ್ಯಕ್ರಮ ಅದ್ಧೂರಿಯಾಗಿ ತೆರೆಬಿದ್ದಿದೆ. ಅನಂತ್ ಪ್ರೀ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಸಂಗೀತ, ನೃತ್ಯ ಹೀಗೆ ವಿವಿಧ ರೀತಿಯ ಪ್ರದರ್ಶನಗಳು ರಂಗೇರಿದ್ದು, ದೇಶ-ವಿದೇಶದ ಸೆಲೆಬ್ರಿಟಿಗಳು ಭಾಗಿಯಾಗಿದ್ದರು.