Tag: ಅನಂತ್

  • ಮಗ 118 ಕೆಜಿ ತೂಕ ಇಳಿಸಿಕೊಂಡ ಗುಟ್ಟು ಬಿಚ್ಚಿಟ್ಟ ನೀತಾ ಅಂಬಾನಿ

    ಮಗ 118 ಕೆಜಿ ತೂಕ ಇಳಿಸಿಕೊಂಡ ಗುಟ್ಟು ಬಿಚ್ಚಿಟ್ಟ ನೀತಾ ಅಂಬಾನಿ

    ಮುಂಬೈ: ಐಪಿಎಎಲ್ ಮುಂಬೈ ಇಂಡಿಯನ್ಸ್ ತಂಡದ ಮಾಲೀಕರಾಗಿರುವ ನೀತಾ ಅಂಬಾನಿ ತಮ್ಮ ಮಗ ಅನಂತ್ ತೂಕ ಕಳೆದುಕೊಂಡ ಬಗೆಗಿನ ಗುಟ್ಟನ್ನು ಖಾಸಗಿ ಮಾಧ್ಯಮ ಸಮಾರಂಭದಲ್ಲಿ ತಿಳಿಸಿದ್ದಾರೆ.

    2013 ರಲ್ಲಿ ತಮ್ಮ ಮಾಲೀಕತ್ವದ ಮುಂಬೈ ಇಂಡಿಯನ್ಸ್ ತಂಡ ಪ್ರಶಸ್ತಿಯನ್ನು ಗೆದ್ದು ಕೊಂಡಿತ್ತು. ಈ ವೇಳೆ ಅನಂತ್ ಜೊತೆ ಟ್ರೋಫಿ ಸ್ವೀಕರಿಸಲು ಸೂಚಿಸಿದ್ದೆ. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮಗನ ತೂಕವನ್ನು ನೋಡಿ ಜನ ಟ್ರೋಲ್ ಮಾಡಲು ಆರಂಭಿಸಿದರು.

    ಟ್ರೋಲ್ ಆದ ಬಳಿಕ ನಮ್ಮ ಬಳಿ ಬಂದ ಅನಂತ್ ದೇಹದ ತೂಕ ಇಳಿಸಿಕೊಳ್ಳುವ ನಿರ್ಧಾರ ತಿಳಿಸಿದ್ದ. ಆದರೆ ಆತನ ಇಷ್ಟದಂತೆ ಮಾಡಲು ಸಮ್ಮತಿಸಿದೆ. ನಂತರ ಅನಂತ್ ಜಾಮ್ ನಗರದಲ್ಲಿ 500 ದಿನಗಳ ಕಾಲ ಉಳಿದುಕೊಂಡು ಪ್ರತಿನಿತ್ಯ 23 ಕಿಮೀ ನಡೆಯುವ ಮೂಲಕ ನೈಸರ್ಗಿಕವಾಗಿ ತಮ್ಮ ತೂಕವನ್ನು ಇಳಿಸಿಕೊಂಡಿದ್ದಾನೆ ಎಂದು ತಿಳಿಸಿದರು.

    ಇದೇ ವೇಳೆ ತಮ್ಮ ಮಕ್ಕಳಿಗೆ ಅವರ ಬಾಳಸಂಗಾತಿ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ನೀಡಿರುವುದಾಗಿ ಹೇಳಿದರು.

    ಕಾರ್ಯಕ್ರಮದಲ್ಲಿ ದೇಶದ ಶೈಕ್ಷಣಿಕ ವ್ಯವಸ್ಥೆ ಬಗ್ಗೆ ಮಾತನಾಡಿದ ಅವರು, ನಮಗೇ ಹೊಸ ಹೊಸ ಅನ್ವೇಷಣೆ ಹಾಗೂ ಕಡಿಮೆ ಖರ್ಚಿನಲ್ಲಿ ಸಕಾರಗೊಳ್ಳುವ ಪರಿಣಾಮಕಾರಿ ವಿಧಾನಗಳ ಅಗತ್ಯವಿದೆ. ದೇಶದ 14-16 ವಯಸ್ಸಿನ ಹಲವು ಮಕ್ಕಳಿಗೆ ತಮ್ಮ ಮಾತೃಭಾಷೆಯಲ್ಲಿ ಸರಳ ವಾಕ್ಯವನ್ನು ಓದಲು ಬರುವುದಿಲ್ಲ. ರಿಲಯನ್ಸ್ ಫೌಂಡೇಶನ್ ಶೈಕ್ಷಣಿಕ ಕಾರ್ಯಕ್ರಮ ಮುಖಾಂತರ ಈಗಾಗಲೇ 1.2 ಕೋಟಿ ಮಕ್ಕಳಿಗೆ ಸಹಾಯ ಮಾಡಲಾಗಿದೆ. ನನ್ನ ಮುಂದಿನ ಜೀವನವನ್ನು ಭಾರತದ 20 ಮಕ್ಕಳಿಗೆ ಮೂಡಿಪಾಗಿಡುತ್ತೇನೆ. ಶಿಕ್ಷಕಿಯಾಗಿ ನನ್ನ ವೃತ್ತಿ ಜೀವನ ಆರಂಭ ಮಾಡಿದ್ದೆ, ಒಂದು ಬಾರಿ ಶಿಕ್ಷಕರಾದರೆ ಜೀವನ ಪರ್ಯಾಂತ ಶಿಕ್ಷಕರಾಗಿಯೇ ಇರುತ್ತಾರೆ. ತಾನು ಇದೇ ಕೆಲಸವನ್ನು ಮಾಡಿರುವುದಾಗಿ ತಿಳಿಸಿದರು.