Tag: ಅನಂತನಾಗ್

  • ಕಾಶ್ಮೀರದ ಹಲವೆಡೆ ಭದ್ರತಾ ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ – ಇದುವರೆಗೆ 175ಕ್ಕೂ ಹೆಚ್ಚು ಮಂದಿ ವಶಕ್ಕೆ

    ಕಾಶ್ಮೀರದ ಹಲವೆಡೆ ಭದ್ರತಾ ಸಿಬ್ಬಂದಿ ಭರ್ಜರಿ ಕಾರ್ಯಾಚರಣೆ – ಇದುವರೆಗೆ 175ಕ್ಕೂ ಹೆಚ್ಚು ಮಂದಿ ವಶಕ್ಕೆ

    – ಉಗ್ರರಿಗೆ ಸ್ಥಳೀಯ ಮಟ್ಟದಲ್ಲಿ ಸಹಾಯ ಮಾಡುತ್ತಿದ್ದ ಹಿನ್ನೆಲೆ ವಶಕ್ಕೆ
    – 24 ಗಂಟೆಯಲ್ಲಿ ಐವರು ಉಗ್ರರ ಮನೆ ಧ್ವಂಸ

    ಶ್ರೀನಗರ: ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನೆತ್ತರು ಹರಿಸಿದ್ದ ಉಗ್ರರ ವಿರುದ್ಧ ಭಾರತೀಯ ಸೇನೆಯ (Indian Army) ಕಾರ್ಯಾಚರಣೆ ಶುರುವಾಗಿದೆ. ಕುಲ್ಗಾಮ್ ಜಿಲ್ಲೆಯ ಮುತಲ್ಹಾಮಾ ಗ್ರಾಮದಲ್ಲಿ ಉಗ್ರ ಝಾಕೀರ್ ಅಹ್ಮದ್ ಗಣಿ, ಶೋಪಿಯಾನ್‌ನ ಚೋಟಿಪೋರಾ ಗ್ರಾಮದಲ್ಲಿ ಎಲ್‌ಇಟಿ ಕಮಾಂಡರ್ ಶಾಹಿದ್ ಅಹ್ಮದ್ ಕುಟ್ಟೆ ಉಗ್ರನ ಮನೆಯನ್ನು ನೆಲಸಮಗೊಳಿಸಲಾಗಿದೆ. ಪುಲ್ವಾಮಾದ ಮರ‍್ರಾನ್ ಪ್ರದೇಶದಲ್ಲಿ ಅಹ್ಸಾನ್ ಉಲ್ ಹಕ್ ಮನೆ ಸ್ಫೋಟಿಸಿ ನಿನ್ನೆಯಷ್ಟೇ ನೆಲಸಮ ಮಾಡಲಾಗಿತ್ತು.

    ಇನ್ನೂ ಉಗ್ರರಿಗೆ ಹಣಕಾಸು ಸಹಾಯ ಮಾಡಿರುವ ಶಂಕೆಯಲ್ಲಿ ಅನಂತನಾಗ್ (Anantnag) ಜಿಲ್ಲೆಯಲ್ಲಿ 175 ಮಂದಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಇದೇ ವೇಳೆ ಕುಪ್ವಾರದಲ್ಲಿ ಕೂಂಬಿಂಗ್ ವೇಳೆ 8 ಎಕೆ 47 ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನ ಜಪ್ತಿ ಮಾಡಲಾಗಿದೆ. ಇದನ್ನೂ ಓದಿ: ಲಂಡನ್‌ನಲ್ಲಿ ಭಾರತೀಯರ ಪ್ರತಿಭಟನೆ ವೇಳೆ ಕತ್ತು ಕೊಯ್ಯುವ ಸನ್ನೆ ಮಾಡಿದ ಪಾಕ್ ಅಧಿಕಾರಿ

    ಇನ್ನೂ ಪಾಕಿಸ್ತಾನ ಪ್ರಜೆಗಳು ದೇಶ ತೊರೆಯಲು ಕೇಂದ್ರ ಸರ್ಕಾರ 48 ಗಂಟೆ ಗಡುವು ನೀಡಿತ್ತು. ಈ ಬೆನ್ನಲ್ಲೇ ಭಾರತಕ್ಕೆ ಭೇಟಿ ನೀಡಿದ ಒಟ್ಟು 191 ಪಾಕಿಸ್ತಾನಿ ಪ್ರಜೆಗಳು ಪಂಜಾಬ್‌ನ ಅಮೃತಸರದ ಅಟ್ಟಾರಿ-ವಾಘಾ ಭೂಮಾರ್ಗದ ಮೂಲಕ ವಾಪಸ್ ಮರಳಿದ್ದಾರೆ. ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ 287 ಭಾರತೀಯ ಪ್ರಜೆಗಳು ಸಹ ಹಿಂತಿರುಗಿದ್ದಾರೆ ಎಂದು ಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕರ್ನಾಟಕದಲ್ಲಿರುವ 98 ಜನ ಪಾಕಿಸ್ತಾನ ಪ್ರಜೆಗಳಿಗೂ ದೇಶ ತೊರೆಯುವಂತೆ ಸೂಚಿಸಲಾಗಿದೆ.

    ಈ ಮಧ್ಯೆ, ವಾಘಾ ಗಡಿ ಬಂದ್ ಆದ ಕಾರಣ ಪಾಕ್ ವಧು-ರಾಜಸ್ಥಾನದ ವರ ಮದುವೆ ಅತಂತ್ರಗೊಂಡಿದೆ. ಈ ಮಧ್ಯೆ, ಉಗ್ರರ ವಿರುದ್ಧ ರಾಜ್ಯಾದ್ಯಂತ ಪ್ರತಿಭಟನೆಗಳು ಮುಂದುವರಿದಿವೆ. ಇದನ್ನೂ ಓದಿ: ಪಾಕಿಸ್ತಾನದ ಲಾಹೋರ್‌ ಏರ್‌ಪೋರ್ಟ್‌ನಲ್ಲಿ ಭಾರೀ ಅಗ್ನಿ ದುರಂತ – ರನ್‌ವೇ ಬಂದ್‌, ವಿಮಾನಗಳ ಹಾರಾಟ ಸ್ಥಗಿತ

  • ಸ್ಯಾಂಡಲ್‌ವುಡ್‌ ನಟ ಅನಂತನಾಗ್‌ಗೆ ಪದ್ಮಭೂಷಣ ಪ್ರಶಸ್ತಿ

    ಸ್ಯಾಂಡಲ್‌ವುಡ್‌ ನಟ ಅನಂತನಾಗ್‌ಗೆ ಪದ್ಮಭೂಷಣ ಪ್ರಶಸ್ತಿ

    ನವದೆಹಲಿ: ಕೇಂದ್ರ ಸರ್ಕಾರ ಶನಿವಾರ ಪ್ರಕಟಿಸಿದ ಈ ಸಾಲಿನ ಅತ್ಯನ್ನತ ನಾಗರಿಕ ಸೇವಾ ಪ್ರಶಸ್ತಿ ಪದ್ಮವಿಭೂಷಣಕ್ಕೆ ಸ್ಯಾಂಡಲ್‌ವುಡ್‌ ಹಿರಿಯ ನಟ ಅನಂತ್‌ನಾಗ್‌ ಭಾಜನರಾಗಿದ್ದಾರೆ.

    ಅನಂತನಾಗ್ ಭಾರತೀಯ ಚಿತ್ರಲೋಕ ಕಂಡ ಅದ್ಭುತ ಪ್ರತಿಭೆ. ತಮ್ಮ ಸ್ವಾಬಾವಿಕ ನಟನಾಶೈಲಿಯಿಂದಲೇ ಗಮನ ಸೆಳೆಯುವ ಇವರು ಕನ್ನಡ ಮಾತ್ರವಲ್ಲದೇ ಮರಾಠಿ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ.

    6 ಫಿಲ್ಮ್ ಫೇರ್ ಮತ್ತು 5 ಕರ್ನಾಟಕ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕರ್ನಾಟಕ ರಾಜಕೀಯದಲ್ಲಿಯೂ ತಮ್ಮ ಛಾಪನ್ನು ಮೂಡಿಸಿರುವ ಇವರು 1994ರ ಜೆ.ಹೆಚ್.ಪಟೇಲ್ ಸರ್ಕಾರದಲ್ಲಿ ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಚಿವರಾಗಿ ಕೆಲಸ ಮಾಡಿದ್ದಾರೆ. ಕನ್ನಡ ಚಿತ್ರರಂಗದ ದಂತಕಥೆ ದಿ. ಶಂಕರನಾಗ್ ಇವರ ಕಿರಿಯ ಸಹೋದರ. ಇವರ ಪತ್ನಿ ಗಾಯತ್ರಿ ಕೂಡಾ ಕನ್ನಡ ಚಿತ್ರರಂಗದ ಹಿರಿಯನಟಿ.

    1972 ರಲ್ಲಿ ಕನ್ನಡ ಚಿತ್ರ `ಸಂಕಲ್ಪ’ ಮತ್ತು ಶ್ಯಾಮ ಬೆನಗಲ್‌ರ `ಅಂಕುರ್’ ಚಿತ್ರದಿಂದ ಸಿನಿಪಯಣ ಶುರು ಮಾಡಿದರು. ಅನಂತನಾಗ್ ನಟಿಸಿದ 7 ಹಿಂದಿ ಚಿತ್ರಗಳಲ್ಲಿ 6 ಚಿತ್ರಗಳನ್ನು ಶ್ಯಾಮ್ ಬೆನಗಲ್ ಅವರ ನಿರ್ದೆಶನದಲ್ಲಿ ನಟಿಸಿರುವುದು ವಿಶೇಷ. ಮುಂದೆ ಜಿ.ವಿ.ಅಯ್ಯರ್ ನಿರ್ದೇಶನದಲ್ಲಿ ಮೂಡಿಬಂದ `ಹಂಸಗೀತೆ’ ಚಿತ್ರದಲ್ಲಿ ಸಂಗೀತಗಾರ ವೆಂಕಟಸುಬ್ಬಯ್ಯನವರ ಪಾತ್ರದಲ್ಲಿ ಮಿಂಚಿದರು. ಸುಮಾರು 250 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅನಂತನಾಗ್‌ ನಟಿಸಿದ್ದಾರೆ.

  • ಜಮ್ಮು-ಕಾಶ್ಮೀರದಲ್ಲಿ ಗುಂಡಿನ ದಾಳಿ – ಅಲ್ ಖೈದಾದ ಇಬ್ಬರು ಉಗ್ರರು ಹತ್ಯೆ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಗುಂಡಿನ ದಾಳಿಗೆ ಅಲ್ ಖೈದಾ ಅಂಗಸಂಸ್ಥೆ ಅನ್ಸರ್ ಘಜ್ವತುಲ್ ಹಿಂದ್‌ನ ಇಬ್ಬರು ಭಯೋತ್ಪಾದಕರು ಹತ್ಯೆಯಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಗುಂಡಿನ ದಾಳಿಗೆ ಸಾವನ್ನಪ್ಪಿದ ಫಯಾಜ್ ಕುಮಾರ್ ಮತ್ತು ಓವೈಸ್ ಖಾನ್ ಎಂದು ಗುರುತಿಸಲಾದ ಭಯೋತ್ಪಾದಕರು ಹಲವಾರು ದಾಳಿಗಳಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಬಾಗೇವಾಡಿ ಸಾಹುಕಾರ

    ಅನಂತ್‌ನಾಗ್‌ನ ಬಿಜ್‌ಬೆಹರಾ ಪ್ರದೇಶದ ತಾಜಿವಾರದಲ್ಲಿ ಅನಂತನಾಗ್ ಪೊಲೀಸರು ಆಕಸ್ಮಿಕವಾಗಿ ಎನ್‌ಕೌಂಟರ್ ನಡೆಸಿದ್ದಾರೆ. ಈ ವೇಳೆ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವಕ್ತಾರರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ದ್ವೇಷ ರಾಜಕಾರಣಕ್ಕೆ ತಂದೆಯನ್ನು ಕಳೆದುಕೊಂಡೆ; ದೇಶವನ್ನು ಕಳೆದುಕೊಳ್ಳಲು ಬಯಸಲ್ಲ – ರಾಹುಲ್ ಗಾಂಧಿ

    ಜುಲೈ 3ರಂದು ಚೀನಿವುಡರ್ ಶ್ರೀಗುಫ್ವಾರಾದಲ್ಲಿ ಪೊಲೀಸ್ ಸಿಬ್ಬಂದಿಯ ಮೇಲೆ ನಡೆದ ದಾಳಿಯಲ್ಲಿ ಹಾಗೂ ಜೂನ್ 15 ರಂದು ಪಾದ್‌ಶಾಹಿ ಬಾಗ್‌ನಲ್ಲಿ ನಡೆದ ಗ್ರೆನೇಡ್ ದಾಳಿ ಸೇರಿದಂತೆ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಇವರು ಭಾಗಿಯಾಗಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗುಳಿಕೆನ್ನೆ ಸುಂದರಿಗೆ ತಾತನಾಗಲಿದ್ದಾರೆ ಅನಂತ್ ನಾಗ್!

    ಗುಳಿಕೆನ್ನೆ ಸುಂದರಿಗೆ ತಾತನಾಗಲಿದ್ದಾರೆ ಅನಂತ್ ನಾಗ್!

    ಪಿ.ವಾಸು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗಾಗಿ ಚಿತ್ರವೊಂದನ್ನು ನಿರ್ದೇಶನ ಮಾಡಲು ತಯಾರಾಗುತ್ತಿದ್ದಾರೆ. ಈ ಚಿತ್ರಕ್ಕೆ ಈಗಾಗಲೇ ರಚಿತಾ ರಾಮ್ ನಾಯಕಿಯಾಗಿಯೂ ಆಯ್ಕೆಯಾಗಿದ್ದಾರೆ. ಇದೀಗ ಈ ಚಿತ್ರದ ಪ್ರಮುಖವಾದ ರಚಿತಾ ತಾತನ ಪಾತ್ರಕ್ಕೆ ಅನಂತನಾಗ್ ಆಗಮನವಾಗಿದೆ!

    ಈ ಚಿತ್ರದಲ್ಲಿ ತನಗೆ ಇದುವರೆಗೂ ಸಿಗದಂಥಾ ಪಾತ್ರವೊಂದು ಸಿಕ್ಕಿದೆ ಅಂತರ ರಚಿತಾ ಖುಷಿಗೊಂಡಿದ್ದಾರೆ. ಈ ಪಾತ್ರವನ್ನೇ ಅಷ್ಟು ಸೊಗಸಾಗಿ ರೂಪಿಸಿರೋ ವಾಸು ತಾತನ ಪಾತ್ರವನ್ನೂ ಕೂಡಾ ವಿಶೇಷವಾಗಿಯೇ ಕಟ್ಟಿದ್ದಾರಂತೆ. ಅಂದಹಾಗೆ ಈ ಪಾತ್ರವನ್ನು ವಾಸು ಅನಂತ್ ನಾಗ್ ಅವರನ್ನು ಮನಸಲ್ಲಿಟ್ಟುಕೊಂಡೇ ಸೃಷ್ಟಿಸಿದ್ದರು. ಇದನ್ನು ಅನಂತ್ ಕೂಡಾ ಅಷ್ಟೇ ಪ್ರೀತಿಯಿಂದ ಒಪ್ಪಿಕೊಂಡಿದ್ದಾರೆ.

    ಈ ಚಿತ್ರದ ಮೂಲಕ ರಚಿತಾ ರಾಮ್ ಮೊದಲ ಸಲ ಶಿವರಾಜ್ ಕುಮಾರ್ ಅವರಿಗೆ ಜೋಡಿಯಾಗಿ ನಟಿಸಿದ್ದಾರೆ. ಈಗಾಗಲೇ ವಾಸು ಎಲ್ಲ ತಯಾರಿಯನ್ನೂ ಮುಗಿಸಿಕೊಂಡಿದ್ದಾರೆ. ತಾರಾಗಣದ ಆಯ್ಕೆ ಕಾರ್ಯ ಕೂಡಾ ಅಂತಿಮ ಹಂತ ತಲುಪಿಕೊಂಡಿದೆ. ಇಷ್ಟರಲ್ಲಿಯೇ ಈ ಚಿತ್ರದ ಚಿತ್ರೀಕರಣವೂ ಚಾಲೂ ಆಗಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ – ಕನ್ನಡಿಗರ ಪಾಲಿನ ಹೆಮ್ಮೆಯ ಸಿನಿಮಾ

    ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ – ಕನ್ನಡಿಗರ ಪಾಲಿನ ಹೆಮ್ಮೆಯ ಸಿನಿಮಾ

    ಕನ್ನಡ ನೆಲದಲ್ಲೇ ಇಂದು ಕನ್ನಡ ಕಳೆದು ಹೋದ ಸ್ಥಿತಿಯಲ್ಲಿದೆ. ಕರ್ನಾಟಕದಿಂದಲೇ ಕಳೆದುಹೋದ ಕಾಸರಗೋಡಿನಲ್ಲಿ ಕನ್ನಡವನ್ನು ಉಳಿಸಿಕೊಳ್ಳಲು ಹೆಣಗಾಡುವ ಕಥೆ `ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ಯದ್ದು.

    ಅದು ಕಾಸರಗೋಡಿನ ಒಂದು ಸರ್ಕಾರಿ ಶಾಲೆ. ಅದು ಶಿಥಿಲಾವಸ್ಥೆಯಲ್ಲಿದೆ ಎಂಬ ನೆಪ ಹೇಳಿ ಕೇರಳದ ಶಿಕ್ಷಣ ಅಧಿಕಾರಿಯೊಬ್ಬ ಶಾಲೆಯನ್ನು ಮುಚ್ಚಿಸುತ್ತಾನೆ. ಮಕ್ಕಳು ಮತ್ತು ಊರ ಮಂದಿ ದಿಕ್ಕು ಕಾಣದಂತಾಗುತ್ತಾರೆ. ಕಡೆಗೆ ಮಕ್ಕಳೆಲ್ಲ ಸೇರಿ ಸಮಾಜಸೇವಕ ಅನಂತಪದ್ಮನಾಭ ಪಿ. (ಅನಂತನಾಗ್) ಅವರನ್ನು ಕರೆತರುತ್ತಾರೆ. ಅನಂತ್ ಬರೋತನಕ ಮಕ್ಕಳ ಕೀಟಲೆ, ಸಣ್ಣ ವಯಸ್ಸಿನಲ್ಲೇ ಶುರುವಾಗುವ ಪ್ರೀತಿಯ ಸೆಳೆತ ಮುಂತಾದವುಗಳ ಜೊತೆಗೆ ಸಾಗುವ ಕಥೆ ಅನಂತ್ ನಾಗ್ ಅವರು ಬರುತ್ತಿದ್ದಂತೇ ಬೇರೆಯದ್ದೇ ಆಯಾಮ ಪಡೆಯುತ್ತದೆ. ಅನಂತ್ ನಾಗ್ ಕೋರ್ಟ್ ನಲ್ಲಿ ವಾದ ಮಂಡಿಸುವ ಸಂದರ್ಭದಲ್ಲಂತೂ ಎಂಥವರಿಗಾದರೂ ನಗು ಮತ್ತು ಅಳು ಒಟ್ಟೊಟ್ಟಿಗೆ ಒತ್ತರಿಸಿಕೊಂಡು ಬರುತ್ತದೆ.

    ಬಹುಶಃ ಇದೇ ಕಥೆಯನ್ನೇ ತೀರಾ ಸೀರಿಯಸ್ಸಾಗಿ ಹೇಳಿದ್ದಿದ್ದರೆ ಅದು ಮಾಮೂಲಿ ಕಲಾತ್ಮಕ ಸಿನಿಮಾವಾಗಿ ಅಥವಾ ಡಾಕ್ಯುಮೆಂಟರಿ ರೀತಿಯ ಚಿತ್ರವಾಗಿಯಷ್ಟೇ ದಾಖಲಾಗುತ್ತಿತ್ತು. ನಿರ್ದೇಶಕ ರಿಷಬ್ ಶೆಟ್ಟಿ ಗಡಿನಾಡು ಮತ್ತು ಭಾಷೆಯ ಸಮಸ್ಯೆಯನ್ನು ಹೊಂದಿರುವ ತೀರಾ ಗಂಭೀರವಾದ ವಿಚಾರವನ್ನು ಪಕ್ಕಾ ಮನರಂಜನಾ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಆ ಮೂಲಕ ರಂಜಿಸುತ್ತಲೇ ಸೀರಿಯಸ್ಸಾದ ವಿಚಾರವನ್ನು ನೋಡುಗರ ಮನಸ್ಸಿಗೆ ದಾಟಿಸಿದ್ದಾರೆ.

    ಪ್ರಮೋದ್ ಶೆಟ್ಟಿ, ಅನಂತ್ ನಾಗ್ ಮತ್ತು ಎಲ್ಲ ಮಕ್ಕಳೂ ಅದ್ಭುತವಾಗಿ ನಟಿಸಿದ್ದಾರೆ. ವೆಂಕಟೇಶ್ ಅಂಗುರಾಜ್ ಅವರ ಛಾಯಾಗ್ರಹಣ ಕಣ್ಣೆದುರೇ ಕಾಸರಗೋಡನ್ನು ಕಟ್ಟಿಕೊಟ್ಟಿದೆ. ರಾಜ್ ಬಿ. ಶೆಟ್ಟಿ ಅವರ ಸಂಭಾಷಣೆ ಮನಸ್ಸಿಗೆ ಹತ್ತಿರವಾಗಿದೆ. ಒಟ್ಟಾರೆ ಒದು ಕನ್ನಡದ ಎಲ್ಲ ಮನಸ್ಸುಗಳೂ ಮಿಸ್ ಮಾಡದೇ ನೋಡಬೇಕಿರುವ ಚಿತ್ರ ಅನ್ನೋದು ನಿಜ. ಇದನ್ನು ಓದಿ: ಪ್ರಾಥಮಿಕ ಶಾಲೆಯಲ್ಲೇ ಫೇಲ್ ಆಗಿದ್ದೆ ಅನ್ನೋದನ್ನ ಬಿಚ್ಚಿಟ್ರು ರಿಷಬ್ ಶೆಟ್ಟಿ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

     

     

  • ಆಧುನಿಕ ಜೀವನಶೈಲಿ, ಒತ್ತಡ ಸೂಕ್ಷ್ಮ ಅಂಶಗಳ ಅನಾವರಣ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’

    ಆಧುನಿಕ ಜೀವನಶೈಲಿ, ಒತ್ತಡ ಸೂಕ್ಷ್ಮ ಅಂಶಗಳ ಅನಾವರಣ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’

    ಬೆಂಗಳೂರು: ಟೈಟಲ್ ಹಾಗೂ ಟ್ರೇಲರ್ ನಿಂದಲೇ ಸ್ಯಾಂಡಲ್‍ವುಡ್ ಅಂಗಳದಲ್ಲಿ ಸೌಂಡ್ ಮಾಡಿದಂತಹ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಸಿನಿಮಾ. ಈ ಶುಭ ಶುಕ್ರವಾರ ಥಿಯೇಟರ್ ಗೆ ಲಗ್ಗೆ ಇಟ್ಟಿದೆ. ಈ ವಾರ ಗಾಂಧಿನಗರಕ್ಕೆ ಎಂಟ್ರಿಕೊಟ್ಟ `ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಹೆಸರಿನ ಪ್ರಯೋಗಾತ್ಮಕ ಸಿನಿಮಾವೊಂದನ್ನ ಕನ್ನಡ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ. ಇಂದ್ರಬಾಬು ನಿರ್ದೇಶನವಿರುವ ಅನಂತ್ ನಾಗ್ ಹಾಗೂ ರಾಧಿಕಾ ಚೇತನ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾ ಅದ್ದೂರಿಯಾಗಿ ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟಿದೆ.

    `ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಟೈಟಲ್ ಮೂಲಕವೇ ಕ್ಯೂರಿಯಾಸಿಟಿ ಮೂಡಿಸಿದಂಥಹ ಸಿನಿಮಾ. ಟ್ರೇಲರ್ ರಿಲೀಸ್ ಆದ್ಮೇಲೆ ಸಿನಿಮಾದ ನಿರೀಕ್ಷೆ ಮತ್ತೊಂದಿಷ್ಟು ಜಾಸ್ತಿಯಾಗಿತ್ತು. ಫೈನಲಿ ಇವತ್ತು ಆ ನಿರೀಕ್ಷೆಗೆ ತೆರೆಬಿದ್ದಿದೆ. ಸ್ಟೇಬಲ್ ಅಂಡ್ ಸೆಟಲ್ ಆ್ಯಕ್ಟಿಂಗ್‍ನಿಂದ ಅನಂತ್‍ನಾಗ್ ಮತ್ತೊಮ್ಮೆ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಬಾಸ್ ಪಾತ್ರದಲ್ಲಿ ಮಿಂಚಿರುವ ರಾಧಿಕಾ ಪ್ರತಿ ಫ್ರೇಮ್‍ನಲ್ಲೂ ಮುದ್ದಾಗಿ ಕಾಣಿಸಿಕೊಂಡು ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ. ಈ ಎರಡು ಕ್ಯಾರೆಕ್ಟರ್‍ಗಳು ಸಿನಿಮಾದ ಮೂಲ ಆಕರ್ಷಣೆಯಾಗಿದೆ.

    ಕಾರ್ಪೋರೇಟ್ ಬದುಕಿನ ಒದ್ದಾಟ, ಲಿವಿಂಗ್ ಟುಗೇದರ್ ರಿಲೇಷನ್‍ಶಿಪ್ ಪೀಕಲಾಟ, ಜತೆಗೆ ಓಲ್ಡೇಜ್ ಒಂಟಿತನದ ಹೋರಾಟದ ಸುತ್ತ ಸುತ್ತುವ ಈ ಸಿನಿಮಾ, ಮಾಸ್, ಆ್ಯಕ್ಷನ್, ಲವ್ ಚಿತ್ರಗಳನ್ನು ನೋಡಿ ಬೇಸರವಾದವ್ರಿಗೆ ಇಷ್ಟವಾಗುತ್ತದೆ. ರಾಮಚಂದ್ರ ಹಡಪದ ಸಂಗೀತದಲ್ಲಿ ಮೂಡಿಬಂದಿರುವ ಹಾಡುಗಳು ಹಾಗೂ ಹಿನ್ನಲೆ ಸಂಗೀತ ಪ್ರೇಕ್ಷಕರನ್ನ ಕಾಡುತ್ತವೆ.

    ಕಬ್ಬಡಿ ಸಿನಿಮಾ ಖ್ಯಾತಿಯ ಇಂದ್ರಬಾಬು ನಿರ್ದೇಶನದಲ್ಲಿ, ಹರೀಶ್ ಶೇರೆಗಾರ್, ಸುದರ್ಶನ್ ಮತ್ತು ರಾಮಮೂರ್ತಿ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿದೆ. ಆಧುನಿಕ ಜೀವನಶೈಲಿ ಮತ್ತು ಒತ್ತಡ ಎರಡು ಸೂಕ್ಷ್ಮ ಅಂಶ ಚಿತ್ರದಲ್ಲಿ ಅನಾವರಣವಾಗಿದೆ. ಒಟ್ಟಿನಲ್ಲಿ ಮೊದಲ ದಿನವೇ ಗಾಂಧಿನಗರದ ಮಂದಿ, `ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರದ ಅರ್ಥಪೂರ್ಣ ಮಹತ್ವ ತಿಳಿದುಕೊಂಡು ಸಿನಿಮಾಗೆ ಜೈ ಎಂದಿದ್ದಾರೆ.

  • ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎನ್ನುತ್ತ ಯಂಗ್ ಜನರೇಷನ್‍ಗೆ ಅನಂತನಾಗ್ ಟಕ್ಕರ್ !

    ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಎನ್ನುತ್ತ ಯಂಗ್ ಜನರೇಷನ್‍ಗೆ ಅನಂತನಾಗ್ ಟಕ್ಕರ್ !

    ಬೆಂಗಳೂರು: ಅನಂತ ನಾಗ್ ಸ್ಯಾಂಡಲ್‍ವುಡ್ ಕಂಡ ಮೇರು ಕಲಾವಿದ. ಇಂದಿಗೂ ಸಿನಿಮಾಗಳಲ್ಲಿ ನಟಿಸುತ್ತ ತಮ್ಮದೇ ಆದ ಫ್ಯಾನ್ ಫಾಲೋವರ್ಸ್ ಗಳನ್ನು ಅನಂತನಾಗ್ ಹೊಂದಿದ್ದಾರೆ. ಹಿಂದೆಯೆಲ್ಲಾ ಲವ್ವರ್ ಬಾಯ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನಂತನಾಗ್ ಇಂದು ಪೋಷಕ ಪಾತ್ರಗಳಿಗೆ ತಮ್ಮ ಅನುಭವದ ಮೂಲಕ ಜೀವ ತುಂಬುತ್ತಿದ್ದಾರೆ. ಕಥೆಯನ್ನು ನೋಡಿ ಒಪ್ಪಿಕೊಳ್ಳುವ ಅನಂತನಾಗ್ ಇಂದಿಗೂ ತಮ್ಮ ಅಮೋಘ ನಟನೆಯ ಮೂಲಕ ಅಭಿಮಾನಿಗಳನ್ನು ಮಂತ್ರ ಮುಗ್ಧರನ್ನಾಗಿಸುತ್ತಾರೆ.

    ಸದ್ಯ ನರೇಂದ್ರ ಬಾಬು ನಿರ್ದೇಶನದ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ವಿಶೇಷ ಸಿನಿಮಾದ ಮೂಲಕ ತೆರೆಯ ಮೇಲೆ ಬರಲಿದ್ದಾರೆ. ‘ಸಂತೆಯಲ್ಲಿ ನಿಂತ ಕಬೀರ’ ಎಂಬ ಪ್ರಯೋಗಾತ್ಮಕ ಸಿನಿಮಾ ನೀಡಿದ್ದ ನರೇಂದ್ರ ಬಾಬು ಅವರ ಮೂರನೇ ಚಿತ್ರ ಇದಾಗಿದ್ದು, ಸಾಕಷ್ಟು ಭರವಸೆಗಳನ್ನು ಮೂಡಿಸಿದೆ.

    ಸ್ವಂತ ವ್ಯವಹಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಇಳಿ ವಯಸ್ಸಿನ ವ್ಯಕ್ತಿಗೆ ಅನಿವಾರ್ಯ ಕಾರಣಗಳಿಂದಾಗಿ ಬೇರೆ ಕಂಪೆನಿಯಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ಬರುತ್ತದೆ. ಪರಿಸ್ಥಿತಿ ಅನುಗುಣವಾಗಿ ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ಬೇರೆ ವ್ಯಕ್ತಿಯ ಕೆಳಗೆ ಕೆಲಸ ಮಾಡಲು ಮುಂದಾಗುತ್ತಾರೆ. ಕಂಪೆನಿಯಲ್ಲಿ ಕೆಲಸ ಮಾಡುವ ಯಂಗ್ ಜನರೇಷನ್‍ನ್ನು ಎದುರಿಸುವ ಪ್ರಸಂಗ ಬರುತ್ತದೆ. ಈ ಎಲ್ಲ ತಳಮಳ, ಒತ್ತಡ, ಸವಾಲುಗಳನ್ನು ಕಥಾ ನಾಯಕ ಹೇಗೆ ಎದುರಿಸುತ್ತಾನೆ ಎಂಬುವುದು ಚಿತ್ರದ ತಿರುಳು.

    ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್ ಸಹ ಸಿನಿಮಾದಲ್ಲಿ ನಟಿಸಿದ್ದಾರೆ. ಸ್ಮಿತಾ ಪಾಟೀಲ್, ಅನಿಲ್ ಹುಲಿಯಾ, ಸಂದೀಪ್ ಅರಸ್ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಭಜನ್ ಲೋಕದ ಧೃವತಾರೆ ಗೀತಾಂಜಲಿ ರೈ ಕೂಡಾ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

    ಹಿಂದೂಸ್ಥಾನಿ ಗಾಯಕ ರಾಮಚಂದ್ರ ಹಡಪದ ಚಿತ್ರದ ಮೂರು ಹಾಡುಗಳಿಗೆ ಸಂಗೀತ ನೀಡಿದ್ದು, ರೇಬಿನ್ ಬ್ರದರ್‍ಹುಡ್ ಹಿನ್ನೆಲೆ ಸಂಗೀತವನ್ನು ಹೊಂದಿದೆ. ಪಿಕೆಹೆಚ್ ದಾಸ್ ಛಾಯಾಗ್ರಹಣ, ಹರೀಶ್ ಶೇರಿಗಾರ್, ರಾಮಮೂರ್ತಿ ಮತ್ತು ಸುದರ್ಶನ್ ಜೊತೆಯಾಗಿ ಬಂಡವಾಳ ಹಾಕಿದ್ದಾರೆ.