Tag: ಅನಂತಕುಮಾರ ಹೆಗ್ಡೆ

  • ಬಿಜೆಪಿ ಗೋಡ್ಸೆಯನ್ನು ಎಂದೂ ಒಪ್ಪಿಕೊಂಡಿಲ್ಲ, ಗೋಡ್ಸೆ ಸಮಾಜಕ್ಕೆ ಕಪ್ಪು ಚುಕ್ಕಿ – ಶೆಟ್ಟರ್

    ಬಿಜೆಪಿ ಗೋಡ್ಸೆಯನ್ನು ಎಂದೂ ಒಪ್ಪಿಕೊಂಡಿಲ್ಲ, ಗೋಡ್ಸೆ ಸಮಾಜಕ್ಕೆ ಕಪ್ಪು ಚುಕ್ಕಿ – ಶೆಟ್ಟರ್

    ಹುಬ್ಬಳ್ಳಿ: ಬಿಜೆಪಿ ಎಂದೂ ಗೋಡ್ಸೆಯನ್ನು ಒಪ್ಪಿಕೊಂಡಿಲ್ಲ. ಗೋಡ್ಸೆ ಸಮಾಜಕ್ಕೆ ಒಂದು ಕಪ್ಪು ಚುಕ್ಕೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಡ್ಸೆ ಮತ್ತು ಬಿಜೆಪಿ ಕುರಿತು ರಾಹುಲ್ ಗಾಂಧಿ ಟ್ವೀಟ್ ವಿಚಾರ ಬಗ್ಗೆ ಪ್ರತಿಕ್ರಿಯಿಸಿ ಗೋಡ್ಸೆಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

    ಗೋಡ್ಸೆ ಬಗ್ಗೆ ನಳಿನ್‍ಕುಮಾರ್ ಕಟೀಲ್ ಮತ್ತು ಅನಂತಕುಮಾರ ಹೆಗ್ಡೆ ಅವರ ಟ್ವೀಟ್ ಮಾಡಿರುವುದಕ್ಕೆ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಸವಾಲ್ ಹಾಕಿರುವ ವಿಚಾರ ಬಗ್ಗೆ ಕೇಳಿದಾಗ ಅವರು ಏನ್ ಟ್ವೀಟ್ ಮಾಡಿದ್ದಾರೆ ಎಂದು ನಾನು ನೋಡಿಲ್ಲ. ಇದರ ಬಗ್ಗೆ ಕೇಳಲು ಸಿದ್ದರಾಮಯ್ಯ ಅವರಿಗೆ ನೈತಿಕತೆ ಇಲ್ಲ ಎಂದು ವಾಗ್ದಾಳಿ ಮಾಡಿದರು.

    ನಾನು ಕೇಳಿದ ಯಾವ ಪ್ರಶ್ನೆಗೂ ಸಿದ್ದರಾಮಯ್ಯ ಉತ್ತರ ನೀಡಿಲ್ಲ. ಕಾವೇರಿ ಅನಧಿಕೃತ ವಾಸದ ಬಗ್ಗೆ ಪ್ರಶ್ನೆ ಕೇಳಿದ್ದೆ ಅದರ ಬಗ್ಗೆ ಯಾವ ಉತ್ತರವನ್ನು ನೀಡಿಲ್ಲ. ಸಿದ್ದರಾಮಯ್ಯ ಅಭಿವೃದ್ಧಿಯಲ್ಲಿಯೂ ದ್ವೇಷದ ರಾಜಕಾರಣ ಮಾಡುತ್ತಾರೆ. ಇಂದು ಹುಬ್ಬಳ್ಳಿ-ಧಾರವಾಡದಲ್ಲಿರುವ ಕುಡಿಯುವ ನೀರಿನ ಸಮಸ್ಯೆಗೆ ಸಿದ್ದರಾಮಯ್ಯ ಕಾರಣ. ಹಾವಿಗೆ ದ್ವೇಷ 12 ವರ್ಷ ಆದರೆ ಸಿದ್ದರಾಮಯ್ಯಗೆ ಜೀವ ಇರೋವರೆಗೂ ದ್ವೇಷ ಇರುತ್ತದೆ. ಮಾನ ಮರ್ಯಾದೆ ನಾಚಿಕೆ ಇಲ್ಲದ ಮನುಷ್ಯ ಎಂದರೆ ಅದು ಸಿದ್ದರಾಮಯ್ಯ ಎಂದು ಕಿಡಿಕಾರಿದರು.

    ಇದೇ ವೇಳೆ ಸಚಿವ ಡಿ.ಕೆ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡ ಅವರು, ಸಂಶಿ ಗ್ರಾಮದಲ್ಲಿ ನಿರಂತರ ಜ್ಯೋತಿ ಯೋಜನೆಗೆ ಡಿಕೆಶಿ ಚಾಲನೆ ಕೊಟ್ಟಿದ್ದರು. ಆದರೆ ನಿರಂತರವೂ ಇಲ್ಲ ಜ್ಯೋತಿಯೂ ಇಲ್ಲ. ಧಾರವಾಡ ಪೇಡ ಹೇಗೆ ಸಿಹಿಯಿದೆ ಆ ರೀತಿ ಕುಂದಗೋಳ ಅಭಿವೃದ್ಧಿ ಮಾಡುತ್ತೇವೆ ಎಂದು ಡಿಕೆಶಿ ಹೇಳುತ್ತಾರೆ. ಹಾಗಾದರೆ ಈ ಹಿಂದೆ ಏನ್ ಅಭಿವೃದ್ಧಿ ಮಾಡಿದ್ದೀರಾ? ಬಳ್ಳಾರಿ ಉಸ್ತುವಾರಿಯಾಗಿ ಬೈ ಎಲೆಕ್ಷನ್ ಗೆದ್ದ ನೀವು ಬಳ್ಳಾರಿಯಲ್ಲಿ ಹಣ ಹಂಚುವುದು ಬಿಟ್ಟರೆ ಬೇರೆನೂ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

  • ಅನಂತಕುಮಾರ್ ಹೆಗಡೆ ಒಬ್ಬ ಬ್ರಿಟಿಷ್, ಹಿಂದೂಗಳನ್ನು ಡಿವೈಡ್ ಮಾಡಲು ಹೊರಟ್ಟಿದ್ದಾರೆ: ಆಸ್ನೋಟಿಕರ್

    ಅನಂತಕುಮಾರ್ ಹೆಗಡೆ ಒಬ್ಬ ಬ್ರಿಟಿಷ್, ಹಿಂದೂಗಳನ್ನು ಡಿವೈಡ್ ಮಾಡಲು ಹೊರಟ್ಟಿದ್ದಾರೆ: ಆಸ್ನೋಟಿಕರ್

    ಕಾರವಾರ: ಕೇಂದ್ರ ಕೌಶಲ್ಯಾಭಿವೃದ್ಧಿ ಖಾತೆಯ ಸಚಿವ ಅನಂತಕುಮಾರ್ ಹೆಗ್ಡೆ ಒಬ್ಬ ಬ್ರಿಟಿಷ್. ಹಿಂದೂಗಳನ್ನು ವಿಭಜನೆ ಮಾಡಲು ಹೊರಟ್ಟಿದ್ದಾರೆ ಎಂದು ಮಾಜಿ ಶಾಸಕ ಆನಂದ್ ಆಸ್ನೋಟಿಕರ್ ಗಂಭೀರ ಆರೋಪವನ್ನ ಮಾಡಿದ್ದಾರೆ.

    ಇಂದು ಕಾರವಾರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಆಸ್ನೋಟಿಕರ್, ರಾಜಕಾರಣದ ಲಾಭ ಪಡೆಯಲು, ಜನರ ಮತ ಪಡೆಯಲು ಯಾವ ಮಟ್ಟಕ್ಕೆ ಬೇಕಾದ್ರೂ ಇಳಿಯಲು ಅನಂತಕುಮಾರ ಹೆಗಡೆ ತಯಾರಿದ್ದಾರೆ. ಅನಂತ್ ಕುಮಾರ್ ಹೆಗಡೆ ಒಬ್ಬ ನೀಚ ಎನ್ನೋದನ್ನ ಈಗಲೂ ಸಮರ್ಥನೆ ಮಾಡಿಕೊಳ್ಳುತ್ತೆನೆ. ಒಂದು ವೇಳೆ ಕ್ಷಮೆ ಕೇಳಬೇಕೆಂದರೆ ಹಿಂದುಳಿದ ವರ್ಗದ ನಾಯಕ ಬಿಜೆಪಿ ಜಿಲ್ಲಾ ಅಧ್ಯಕ್ಷ ಕೆ.ಜಿ ನಾಯಕ್ ರವರಲ್ಲಿ ಕೇಳುತ್ತೇನೆ ಆದರೆ ಬಿಜೆಪಿಯವರಲ್ಲಿ ಅಲ್ಲ ಎಂದರು.

    ರಾಜ್ಯಕ್ಕೆ ರೆಸಾರ್ಟ್ ರಾಜಕಾರಣವನ್ನ ಪರಿಚಯಿಸಿದವರು ಬಿಜೆಪಿಗರು. ಅದರಲ್ಲಿ ರೆಸಾರ್ಟ್ ರಾಜಕಾರಣದ ಮುಖ್ಯ ರೂವಾರಿಯನ್ನ ಕೇಂದ್ರ ಸಂಸದೀಯ ಸಚಿವ ಅನಂತಕುಮಾರ್ ವಹಿಸಿದ್ದರು. ಅಂದು ಒಂದು ನಯಾ ಪೈಸೆಯನ್ನೂ ಪಡೆದುಕೊಂಡಿಲ್ಲ ಎಂಬುದಾಗಿ ಯಡಿಯೂರಪ್ಪ, ಜನಾರ್ದನ ರೆಡ್ಡಿ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಿ ಹೇಳಲಿ ಎಂದು ಬಹಿರಂಗ ಸವಾಲು ಹಾಕಿದರು.

  • ಅನಂತಕುಮಾರ್ ಹೆಗ್ಡೆ ಬೆಂಗಾವಲು ವಾಹನಕ್ಕೆ ಲಾರಿ ಗುದ್ದಿದ ಪ್ರಕರಣ: ಟ್ವಿಟ್ಟರ್ ನಲ್ಲಿ ಬಿಜೆಪಿಗೆ ತಿರುಗೇಟು ಕೊಟ್ಟ ಸಿಎಂ

    ಅನಂತಕುಮಾರ್ ಹೆಗ್ಡೆ ಬೆಂಗಾವಲು ವಾಹನಕ್ಕೆ ಲಾರಿ ಗುದ್ದಿದ ಪ್ರಕರಣ: ಟ್ವಿಟ್ಟರ್ ನಲ್ಲಿ ಬಿಜೆಪಿಗೆ ತಿರುಗೇಟು ಕೊಟ್ಟ ಸಿಎಂ

    ಬೆಂಗಳೂರು: ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗಡೆ ಬೆಂಗಾವಲು ವಾಹನಕ್ಕೆ ಲಾರಿ ಗುದ್ದಿದ ಪ್ರಕರಣ ಸಂಬಂಧ ಬುಧವಾರ ಸಿಎಂ ಸಿದ್ದರಾಮಯ್ಯ ಮತ್ತು ಬಿಜೆಪಿ ನಡುವೆ ಮತ್ತೊಂದು ಸುತ್ತಿನ ಟ್ವಿಟ್ಟರ್ ವಾರ್ ನಡೆದಿದೆ. ಇದನ್ನೂ ಓದಿ:ಕೇಂದ್ರ ಸಚಿವರ ಕಾರ್ ಅಪಘಾತಕ್ಕೆ ಹಾವೇರಿ ಎಸ್‍ಪಿ ಸ್ಪಷ್ಟನೆ

    ಲಾರಿ ಕೊಪ್ಪ ಬಿಜೆಪಿ ಘಟಕದ ಅಧ್ಯಕ್ಷ ನಾಗೇಶ್ ಅನ್ನೋರಿಗೆ ಸೇರಿದ್ದು ಎಂಬ ಮಾಹಿತಿಯನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ಕರ್ನಾಟಕ ಬಿಜೆಪಿಯಲ್ಲಿರುವ ನಾಯಕತ್ವ ಕೊರತೆಯ ಲಾಭ ಪಡೆಯಲು ಹೆಗಡೆ ಹವಣಿಸ್ತಿದ್ದಾರೆ. ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮತ್ತು ಸಂಸದ ಪ್ರತಾಪ್ ಸಿಂಹ ಬಿಜೆಪಿ ಸಿಎಂ ಅಭ್ಯರ್ಥಿ ಯಡಿಯೂರಪ್ಪರನ್ನು ಮೀರಿ ಬೆಳೆಯಲು ಯತ್ನಿಸ್ತಿದ್ದಾರೆ. ಹೀಗಾಗಿ ಸಣ್ಣ ಘಟನೆಯನ್ನು ಬಳಸಿಕೊಂಡು ಹೆಗಡೆ ಯಡಿಯೂರಪ್ಪರನ್ನು ಸೈಡ್‍ಲೈನ್ ಮಾಡಲು ಯತ್ನಿಸ್ತಿದ್ದಾರೆ ಅಂತ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ನಾನು ಅನಂತ್‌ಕುಮಾರ್‌ ಹೆಗ್ಡೆ, ಪ್ರತಾಪ್ ಸಿಂಹಗಿಂತಲೂ ಪಕ್ಕಾ ಹಿಂದೂ : ಸಿಎಂ

    ನಿಮಗಿದು ಸಣ್ಣ ಘಟನೆನಾ..? ಡಿಕ್ಕಿಯಲ್ಲಿ ಏಳು ಮಂದಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ನಿಮ್ಮ ನಿರ್ಲಕ್ಷ್ಯ ಖಂಡನೀಯ. ಪಾರದರ್ಶಕ ತನಿಖೆ ಬದಲಿಗೆ ರಾಜಕೀಯ ಮಾಡ್ತಿದ್ದೀರಿ. ನಿಮಗೆ ನಾಚಿಕೆ ಆಗ್ಬೇಕು ಅಂತ ಬಿಜೆಪಿ ತಿರುಗೇಟು ನೀಡಿದೆ. ಇದನ್ನೂ ಓದಿ: ಸಚಿವ ಅನಂತ್ ಕುಮಾರ್ ಹೆಗ್ಡೆ ಕಾರ್ ಅಪಘಾತ- ಸಿಎಂಗೆ ಸಂಸದ ಪ್ರತಾಪ್ ಸಿಂಹ ಸವಾಲ್

    https://youtu.be/CIkpZUPuKO8

    https://youtu.be/cwbDP5ViV3U

  • ಅನಂತಕುಮಾರ್ ಹೆಗ್ಡೆ ನಾಲಿಗೆ ಕಡಿದು ತಂದವರಿಗೆ 1 ಕೋಟಿ ರೂ. ಬಹುಮಾನ: ಮಾಜಿ ಜಿ.ಪಂ. ಸದಸ್ಯ

    ಅನಂತಕುಮಾರ್ ಹೆಗ್ಡೆ ನಾಲಿಗೆ ಕಡಿದು ತಂದವರಿಗೆ 1 ಕೋಟಿ ರೂ. ಬಹುಮಾನ: ಮಾಜಿ ಜಿ.ಪಂ. ಸದಸ್ಯ

    ಕಲಬುರಗಿ: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗ್ಡೆ ನಾಲಿಗೆ ಕಡಿದು ತಂದವರಿಗೆ ಒಂದು ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು ಎಂದು ನಗರದಲ್ಲಿ ಮಾಜಿ ಜಿಪಂ ಸದಸ್ಯ ಗುರುಶಾಂತ್ ಪಟ್ಟೇದಾರ್ ವಿವಾದ್ಮಾತಕ ಹೇಳಿಕೆ ನೀಡಿದ್ದಾರೆ.

    ಜನವರಿ 26ರೊಳಗೆ ಅನಂತಕುಮಾರ್ ಹೆಗ್ಡೆ ಅವರ ನಾಲಿಗೆಯನ್ನು ಕಡಿದು ತಂದು ಕೊಡಬೇಕು ಎಂದು ಷರತ್ತು ಹಾಕಿದ್ದಾರೆ. ಗುರುಶಾಂತ್ ಪಟ್ಟೇದಾರ್ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬುರ (ಬಿ) ಮಾಜಿ ಜಿಪಂ ಸದಸ್ಯರಾಗಿದ್ದಾರೆ.

    ಈ ದೇಶದ ಎಲ್ಲ ಜನರು ಶಾಂತಿಯಿಂದ ಬದುಕುತ್ತಿದ್ದಾರೆ. ಆದರೆ ಬಿಜೆಪಿ ಕೇಂದ್ರ ಮಂತ್ರಿಗಳಾದ ಅನಂತಕುಮಾರ್ ಹೆಗ್ಡೆ ವಿವಾದಾತ್ಮಕ ಹೇಳಿಕೆಯನ್ನು ನೀಡುವ ಮೂಲಕ ದೇಶದಲ್ಲಿರುವ ಜಾತ್ಯಾತೀತರಿಗೆ ಅವಮಾನ ಮಾಡಿದ್ದಾರೆ. ಭಾರತೀಯ ಸಂವಿಧಾನದ ವಿರೋಧ ಮಾಡುವವರೆಲ್ಲ ದೇಶದ್ರೋಹಿಗಳು. ವಿವಾದಾತ್ಮಕ ಹೇಳಿಕೆಗಳನ್ನು ನೀಡುವ ಮಂತ್ರಿಗಳ ಮೇಲೆ ಪ್ರಧಾನಿ ಮೋದಿಯವರು ಹಿಡಿತ ಕಾಯ್ದುಕೊಳ್ಳಬೇಕು ಎಂದು ಗುರುಶಾಂತ್ ಪಟ್ಟೇದಾರ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಕೊಪ್ಪಳ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನಂತಕುಮಾರ್ ಹೆಗ್ಡೆ ಅಪ್ಪ-ಅಮ್ಮ ಯಾರೆಂಬುದು ಗೊತ್ತಿಲ್ಲದವರು ಜಾತ್ಯಾತೀತರು ಎಂದು ಹೇಳಿಕೆಯನ್ನು ನೀಡಿದ್ದರು. ಸಚಿವರ ಈ ಹೇಳಿಕೆಗೆ ಕೌಂಟರ್ ಆಗಿ ಪಟ್ಟೇದಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

  • ಅನಂತಕುಮಾರ ಹೆಗ್ಡೆ ಗ್ರಾಮ ಪಂಚಾಯ್ತಿ ಸದಸ್ಯನಾಗಲೂ ನಾಲಾಯಕ್: ಸಿಎಂ

    ಅನಂತಕುಮಾರ ಹೆಗ್ಡೆ ಗ್ರಾಮ ಪಂಚಾಯ್ತಿ ಸದಸ್ಯನಾಗಲೂ ನಾಲಾಯಕ್: ಸಿಎಂ

    ಧಾರವಾಡ: ಕೇಂದ್ರ ಸಚಿವ ಅನಂತಕುಮಾರ ಹೆಗ್ಡೆ ಗ್ರಾಮ ಪಂಚಾಯ್ತಿ ಸದಸ್ಯನಾಗಲೂ ನಾಲಾಯಕ್ ಎಂದು ಜಿಲ್ಲೆಯ ಗರಗ ಗ್ರಾಮದಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

    ಅನಂತಕುಮಾರ ಹೆಗ್ಡೆ ಅವರಿಗೆ ಎರಡು ಮುಖವಿದೆ. ಅಂಬೇಡ್ಕರ್ ಬರೆದ ಸಂವಿಧಾನದ ಬಗ್ಗೆ ಯಾವತ್ತೂ ಗೌರವ ಇಲ್ಲ. ಅದನ್ನ ಬದಲಾವಣೆ ಮಾಡೋಕೆ ಆರ್‍ಎಸ್‍ಎಸ್ ಪ್ಲಾನ್ ಮಾಡುತ್ತಿದೆ. ಭಾರತವನ್ನು ಕೇವಲ ಹಿಂದೂಸ್ತಾನವನ್ನು ಮಾಡೋದು, ಏಕರೂಪ ಸಂಹಿತೆ ತರಿಸೋದು, ರಾಮ ಮಂದಿರ ಕಟ್ಟೊದೇ ಅವರ ಉದ್ದೇಶವಾಗಿದೆ. ಅವರಷ್ಟು ಕೀಳುಮಟ್ಟಕ್ಕೆ ಹೋಗಿ ನಾನು ಮಾತನಾಡಲ್ಲ. ನಮಗೆ ಸಂಸದೀಯ ಮತ್ತು ಸಂಸ್ಕೃತಿ ಭಾಷೆ ಗೊತ್ತಿದೆ ಅಂತ ಸಿಎಂ ಕಿಡಿಕಾರಿದ್ರು.

    ಉತ್ತರ ಕನ್ನಡ ಜಿಲ್ಲೆಯ ಎಂಪಿ ಅನಂತಕುಮಾರ ಹೆಗ್ಡೆ, ಕುಮಟಾ ಮತ್ತು ಹೊನ್ನಾವರದಲ್ಲಿ ಬೆಂಕಿ ಹಚ್ಚಿಬಿಡಿ ಅಂತಾ ಹೇಳ್ತಾರೆ. ರಾಜ್ಯ ಸರ್ಕಾರ ಈ ಗಲಭೆಯನ್ನು ನಿಯಂತ್ರಿಸಲು 144 ಸೆಕ್ಷನ್ ಜಾರಿಗೊಳಿಸಿ ನಿಯಂತ್ರಿಸಿತು. ಆಗ ಹಗ್ಡೆ ಸಿದ್ದರಾಮಯ್ಯನವರೇ ತಪರಾಕಿ ಸಾಕಾ, ಇನ್ನೂ ಬೇಕಾ. ಮುಂದೆ ಕಾದಿದೆ ಮಾರಿಹಬ್ಬ ಅಂತ ಹೇಳಿದ್ರು. ಮಾರಿಹಬ್ಬದಲ್ಲಿ ಪ್ರಾಣಿ ಬಲಿಯನ್ನು ನೀಡ್ತಾರೆ. ಆದ್ರೆ ಇವರು ಮನುಷ್ಯರನ್ನೇ ಬಲಿ ಕೊಡ್ತಾರೆ. ಇವರಿಗೆ ಮನುಷ್ಯತ್ವ, ಮಾನವೀಯತೆ ಎಂಬುದೇ ಇಲ್ಲ. ಇಂತಹವರು ಯಾವ ಸಮಾಜ ಬದಲಾವಣೆ ಮಾಡುತ್ತಾರೆ ಎಂದು ಹೇಳಿದ್ರು.

    ಬಿಜೆಪಿ ನಾಯಕರು ಎಲ್ಲಾ ಕಡೆ ಸುಳ್ಳು ಹೇಳುತ್ತಾ ತಮಟೆ ಬಾರಿಸುತ್ತಿದ್ದಾರೆ. ಧೈರ್ಯ ಇದ್ದರೆ ಒಂದೇ ವೇದಿಕೆ ಮೇಲೆ ಬನ್ನಿ ಯಡಿಯೂರಪ್ಪನವರೇ ಎಂದು ಆಹ್ವಾನ ನೀಡಿದ್ರು. ಅನೇಕ ಆರೋಪಗಳನ್ನ ಮಾಡೋ ಶೆಟ್ಟರ್ ಅಧೀವೇಶನದಲ್ಲಿ ನಾಪತ್ತೆಯಾದರೆ, ವಿಧಾನ ಪರಿಷತ್‍ನಲ್ಲಿ ಕೂಡಾ ಈಶ್ವರಪ್ಪ ಗೈರಾಗಿದ್ರೆ ಇಂತಹವರನ್ನು ಧೈರ್ಯಶಾಲಿ ಅನ್ಬೇಕೋ, ಹೇಡಿಗಳು ಅನ್ಬೇಕೋ ಎಂದರು. ಮತ್ತೆ ಫೆಬ್ರವರಿಯಲ್ಲಿ ಬಜೆಟ್ ಮಂಡನೆ ಮಾಡ್ತೇನೆ. ಆಗ ಬಂದು ಹೇಳಲಿ ಎಂದು ಬಿಜೆಪಿ ನಾಯಕರಿಗೆ ಸಿಎಂ ಸವಾಲ್ ಹಾಕಿದ್ರು.