Tag: ಅನಂತಕುಮಾರ್

  • ಬಿಡುಗಡೆಯಾದ 72 ಕ್ಷೇತ್ರಗಳ ಪೈಕಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲುತ್ತೆ: ಬಿಎಸ್‍ವೈ ಹೇಳ್ತಾರೆ ಓದಿ

    ಬಿಡುಗಡೆಯಾದ 72 ಕ್ಷೇತ್ರಗಳ ಪೈಕಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲುತ್ತೆ: ಬಿಎಸ್‍ವೈ ಹೇಳ್ತಾರೆ ಓದಿ

    ಬೆಂಗಳೂರು: ಮೊದಲನೇ ಪಟ್ಟಿಯಲ್ಲಿ ಘೋಷಣೆಯಾಗಿರುವ 72 ಕ್ಷೇತ್ರಗಳ ಪೈಕಿ ಚುನಾವಣೆಯಲ್ಲಿ 65ಕ್ಕೂ ಹೆಚ್ಚು ಕ್ಷೇತ್ರಗಳನ್ನ ಗೆದ್ದೆ ಗೆಲ್ಲುತ್ತೇವೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

    ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಬಿಜೆಪಿ ಚುನಾವಣೆ ನಿರ್ವಹಣಾ ಕಾರ್ಯಗಾರವನ್ನು ಆಯೋಜನೆ ಮಾಡಿತ್ತು. ಈ ವೇಳೆ ಮಾತನಾಡಿದ ಅವರು, ಇನ್ನೆರೆಡು ದಿನಗಳಲ್ಲಿ ಎರಡನೇ ಪಟ್ಟಿ ಬಿಡುಗಡೆ ಯಾಗಲಿದ್ದು 80ಕ್ಕೂ ಹೆಚ್ಚು ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಲಾಗುವುದು. ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಒಬ್ಬರನ್ನು ಬಿಟ್ಟರೆ ಬೇರೆ ಯಾರು ನಾಯಕರಿಲ್ಲ. ಅದರೆ ಬಿಜೆಪಿಯಲ್ಲಿ ಸಾಲು ಸಾಲು ನಾಯಕರಿದ್ದಾರೆ. ಈ ಬಾರಿ ಬಿಜೆಪಿಯಲ್ಲಿ ಕಾರ್ಯಕರ್ತರು ಹೆಚ್ಚಿನ ಶ್ರಮವನ್ನು ವಹಿಸಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಹೇಳಿದರು.

    ಶೋಭಾ ಕರಂದ್ಲಾಜೆ ಮಾತನಾಡಿ, ಬಿಎಸ್‍ವೈ ನಮ್ಮ ಮುಖ್ಯ ಮಂತ್ರಿಯಾಗುತ್ತಿರುವುದು ನಮ್ಮೆಲ್ಲರ ಅದೃಷ್ಟ. ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಅಭ್ಯರ್ಥಿ ಬಿಎಸ್‍ವೈ ಎಂದು ಮೊದಲೇ ಘೋಷಿಸಿದೆ. ಈ ಬಾರಿ ಚುನಾವಣೆಯಲ್ಲಿ ನಾನು ಸ್ಪರ್ಧೆಯನ್ನು ಮಾಡುತ್ತಿಲ್ಲ ಹಾಗಾಗಿ ನಮಗೆಲ್ಲಾ ಚುನಾವಣೆ ನಿರ್ವಹಣಾ ಸಮಿತಿ ಜವಬ್ದಾರಿ ನೀಡಿದ್ದಾರೆ ಎಂದು ತಿಳಿಸಿದರು.

    ಮಳೆಗಾಲದಲ್ಲಿ ಅಣಬೆ ಹುಟ್ಟುವಂತೆ ಚುನಾವಣಾ ಸಂದರ್ಭದಲ್ಲಿ ಹಲವಾರು ಪಕ್ಷಗಳು ಹುಟ್ಟುತ್ತವೆ. ಚುನಾವಣೆ ಮುಗಿಯುತ್ತಲೇ ಮಕಾಡೆ ಮಲಗುತ್ತವೆ. ಆದರೆ ಬಿಜೆಪಿ ಪಕ್ಷ ಹಾಗಲ್ಲ ಯಾವಾಗಲೂ ಸಹ ಬಂಡೆಯಂತೆ ಸದೃಢವಾಗಿ ನಿಂತಿರುತ್ತದೆ ಎಂದು ಹೇಳಿದರು.

    ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್, ಕಾಂಗ್ರೆಸ್‍ನಲ್ಲಿ ಪ್ರಜಾತಂತ್ರ ಇಲ್ಲ. ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ ಹೀಗೆ ಕಾಂಗ್ರೆಸ್‍ನಲ್ಲಿ ಅಜೀವ ಅಧ್ಯಕ್ಷರಿದ್ದಾರೆ ಎಂದು ಲೇವಡಿ ಮಾಡಿದರು.

    ಪ್ರಧಾನಿಯವರು ಎಲ್ಲ ಬಿಜೆಪಿ ಸಂಸದರ ಜೊತೆ ದೂರವಾಣಿಯಲ್ಲಿ ಮಾತನಾಡಿ, ಕಾಂಗ್ರೆಸ್‍ನಲ್ಲಿ ಪ್ರಜಾತಂತ್ರ ಇಲ್ಲ. ಅಲ್ಲಿ ಇರುವವರೆಲ್ಲಾ ಅಜೀವ ಅಧ್ಯಕ್ಷರು. ಕಾಂಗ್ರೆಸ್ ಪಕ್ಷದಿಂದ ಪ್ರಜಾತಂತ್ರವನ್ನು ಉಳಿಸಲು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿಯೂ ಉಪವಾಸ ಸತ್ಯಾಗ್ರಹವನ್ನು ಕೈಗೊಳ್ಳಲು ಸೂಚಿಸಿದ್ದಾರೆ ಎಂದು ತಿಳಿಸಿದರು.

    ಕಾಂಗ್ರೆಸ್ ಅಸಹಿಷ್ಣುತೆ ರಾಜಕಾರಣವನ್ನು ಮಾಡುತ್ತಿದೆ. ದೇಶದ 21 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಮಾಡುತ್ತಿದೆ. ಈ ಬಾರಿ ಅದು ದಕ್ಷಿಣದ ದೊಡ್ಡ ರಾಜ್ಯವಾದ ಕರ್ನಾಟಕವನ್ನು ಸೇರಿಸಿ 22 ರಾಜ್ಯ ಮಾಡುತ್ತೇವೆ. ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಶತಸಿದ್ಧ ಎಂದು ಹೇಳಿದರು.\

     

  • ನನ್ನ ಮುಂದೆ ನಿಲ್ಬೇಡ, ಹೊಡೆದ್ ಬಿಡ್ತೀನಿ – ಅನಂತ್ ಕುಮಾರ್ ಆಪ್ತ ವಿರುದ್ಧ ಸೋಮಣ್ಣ ಕೆಂಡಾಮಂಡಲ

    ನನ್ನ ಮುಂದೆ ನಿಲ್ಬೇಡ, ಹೊಡೆದ್ ಬಿಡ್ತೀನಿ – ಅನಂತ್ ಕುಮಾರ್ ಆಪ್ತ ವಿರುದ್ಧ ಸೋಮಣ್ಣ ಕೆಂಡಾಮಂಡಲ

    ಬೆಂಗಳೂರು: ಬಿಜೆಪಿ ಮುಖಂಡ ವಿ. ಸೋಮಣ್ಣ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಟಿಕೆಟ್ ತಪ್ಪಲಿದೆ ಅಂತಾ ರಾಜಕೀಯ ವಲಯದಲ್ಲಿ ಕೇಳಿ ಬರುತ್ತದೆ. ಈ ಸಂಬಂಧ ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ಸಭೆ ನಡೆದಿತ್ತು. ಸಭೆಯಿಂದ ಹೊರ ಬಂದ ಬಳಿಕ ವಿ.ಸೋಮಣ್ಣ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುತ್ತಿದ್ದರು.

    ಈ ವೇಳೆ ಸ್ಥಳಕ್ಕಾಗಮಿಸಿದ ಕೇಂದ್ರ ಸಚಿವ ಅನಂತಕುಮಾರ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಬಿಕೆ ಶಿವಕುಮಾರ್ ಮೇಲೆ ಸಾರ್ವಜನಿಕವಾಗಿ ಕಿಡಿಕಾರಿದ್ರು. ನನ್ನ ಮುಂದೆ ನಿಲ್ಬೇಡ, ಹೊಡೆದ್ ಬಿಡ್ತೀನಿ. ನಿಂಗೆ ಮುಂದೈತೆ ಮಾರಿಹಬ್ಬ ಅಂತ ಆವೇಶಭರಿತ ಮಾತುಗಳನ್ನಾಡಿದ್ರು. ಇದನ್ನೂ ಓದಿ: ಮೊದಲು ಹನೂರು, ಅಮೇಲೆ ಗುಂಡ್ಲುಪೇಟೆ, ಬಳಿಕ ಹನೂರು, ಈಗ ಗೋವಿಂದರಾಜನಗರ?-ಸೋಮಣ್ಣಗೆ ಸಿಗುತ್ತಾ ಬಿಜೆಪಿ ಟಿಕೆಟ್?

    ಭಾನುವಾರ ಕೇಂದ್ರ ಸಚಿವ ಅನಂತ್‍ಕುಮಾರ್ ಮನೆಯಲ್ಲಿ ನಡೆದ ಸಭೆಯಲ್ಲಿ ಸೋಮಣ್ಣ ಅವರನ್ನು ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಿಂದ ಕಣಕ್ಕೆ ಇಳಿಯುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ನಿಮಗೆ ಇನ್ನು 4 ವರ್ಷ ಪರಿಷತ್ ಸದಸ್ಯ ಸ್ಥಾನ ಇದೆ. ನಮ್ಮ ಸರ್ಕಾರ ಬಂದ್ರೆ ಸಚಿವರಾಗುವುದು ಗ್ಯಾರೆಂಟಿ, ನೀವು ಗೋವಿಂದರಾಜನಗರದಲ್ಲಿ ಸ್ಪರ್ಧೆ ಮಾಡಿ, ಇಲ್ಲ ಈ ಎಲೆಕ್ಷನ್ ನಲ್ಲಿ ಸುಮ್ಮನಿದ್ದು ಬಿಡಿ ಎಂದ ಅನಂತಕುಮಾರ್ ಹೇಳಿದ್ದಾರೆ ಎನ್ನಲಾಗುತ್ತಿದೆ. ಈ ವಿಷಯವಾಗಿಯೇ ಸಾರ್ವಜನಿಕವಾಗಿ ಅನಂತಕುಮಾರ್ ಆಪ್ತನ ಮೇಲೆ ತಮ್ಮ ಕೋಪವನ್ನು ತೋರಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಹನೂರು ಕ್ಷೇತ್ರದಿಂದಲೇ ಸ್ವರ್ಧಿಸುವ ಬಯಕೆ, ಯಾವುದೇ ಷರತ್ತು ಇಲ್ಲದೇ ಪರಿಮಳಾ ನಾಗಪ್ಪ ಪಕ್ಷಕ್ಕೆ ಬರಲಿ: ಮಾಜಿ ಸಚಿವ ವಿ.ಸೋಮಣ್ಣ

    ಅನಂತಕುಮಾರ್ ಅವರು ನೀಡಿದ ಸಲಹೆಯನ್ನು ಸೋಮಣ್ಣ ಬಹುತೇಕ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತ ಇನ್ನೇರೆಡು ದಿನಗಳಲ್ಲಿ ಚುನಾವಣೆ ಸ್ಪರ್ಧೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಅಂತಾ ಸೋಮಣ್ಣ ಹೈಕಮಾಂಡ್ ಗೆ ತಿಳಿಸಿದ್ದಾರೆ ಅಂತಾ ಹೇಳಲಾಗಿದೆ.

  • ಮೊದಲು ಹನೂರು, ಅಮೇಲೆ ಗುಂಡ್ಲುಪೇಟೆ, ಬಳಿಕ ಹನೂರು, ಈಗ ಗೋವಿಂದರಾಜನಗರ?-ಸೋಮಣ್ಣಗೆ ಸಿಗುತ್ತಾ ಬಿಜೆಪಿ ಟಿಕೆಟ್?

    ಮೊದಲು ಹನೂರು, ಅಮೇಲೆ ಗುಂಡ್ಲುಪೇಟೆ, ಬಳಿಕ ಹನೂರು, ಈಗ ಗೋವಿಂದರಾಜನಗರ?-ಸೋಮಣ್ಣಗೆ ಸಿಗುತ್ತಾ ಬಿಜೆಪಿ ಟಿಕೆಟ್?

    ಬೆಂಗಳೂರು: ವಿಧಾನಸಭಾ ಚುನಾವಣೆಗಾಗಿ ಟಿಕೆಟ್ ಆಕಾಂಕ್ಷಿಗಳು ತಮ್ಮ ಪಕ್ಷಗಳ ಬಾಗಿಲನ್ನು ನಿರಂತರವಾಗಿ ತಟ್ಟುತ್ತಿದ್ದಾರೆ. ಇತ್ತ ಬಿಜೆಪಿ ಸಹ ಇದೇ ತಿಂಗಳ ಎರಡನೇ ವಾರದಂದು ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ ಅಂತಾ ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಟಿಕೆಟ್ ಆಕಾಂಕ್ಷಿಗಳು ಹೈಕಮಾಂಡ್ ನಾಯಕರ ಜೊತೆ ರಹಸ್ಯ ಮಾತುಕತೆಯನ್ನ ನಡೆಸುತ್ತಿದ್ದಾರೆ.

    ಮಾಜಿ ಸಚಿವ ಹಾಗು ಬಿಜೆಪಿ ಮುಖಂಡ ವಿ.ಸೋಮಣ್ಣ ಮಾತ್ರ ತಮಗೆ ಯಾವ ಕ್ಷೇತ್ರದಿಂದ ಟಿಕೆಟ್ ಲಭಿಸಲಿದೆ ಎಂಬುದರ ಗೊಂದಲದಲ್ಲಿ ಇದ್ದಾರಂತೆ. ಈ ಹಿಂದೆ ಸೋಮಣ್ಣ ಹನೂರು ಕ್ಷೇತ್ರದಿಂದ ಸ್ಪರ್ಧೆಗೆ ಇಳಿಯಲಿದ್ದಾರೆ ಅಂತಾ ಹೇಳಲಾಗಿತ್ತು. ಆದ್ರೆ ನಂತರ ಗುಂಡ್ಲುಪೇಟೆ ಕ್ಷೇತ್ರದಿಂದ ಟಿಕೆಟ್ ಸಿಗಲಿದೆ ಎಂಬ ಸುದ್ದಿಯೊಂದು ಬಿಜೆಪಿ ಅಂಗಳದಲ್ಲಿ ಕೇಳಿ ಬಂದಿತ್ತು. ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಹನೂರು ಕ್ಷೇತ್ರವೇ ಫಿಕ್ಸ್ ಅಂತಾ ಸಹ ತಿಳಿದು ಬಂದಿತ್ತು. ಇದನ್ನೂ ಓದಿ: ಹನೂರು ಕ್ಷೇತ್ರದಿಂದಲೇ ಸ್ವರ್ಧಿಸುವ ಬಯಕೆ, ಯಾವುದೇ ಷರತ್ತು ಇಲ್ಲದೇ ಪರಿಮಳಾ ನಾಗಪ್ಪ ಪಕ್ಷಕ್ಕೆ ಬರಲಿ: ಮಾಜಿ ಸಚಿವ ವಿ.ಸೋಮಣ್ಣ

    ಭಾನುವಾರ ಕೇಂದ್ರ ಸಚಿವ ಅನಂತಕುಮಾರ್ ಮನೆಯಲ್ಲಿ ನಡೆದ ಸಭೆಯಲ್ಲಿ ಸೋಮಣ್ಣ ಅವರನ್ನು ಬೆಂಗಳೂರಿನ ಗೋವಿಂದರಾಜನಗರ ಕ್ಷೇತ್ರದಿಂದ ಕಣಕ್ಕೆ ಇಳಿಯುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ. ನಿಮಗೆ ಇನ್ನು 4 ವರ್ಷ ಪರಿಷತ್ ಸದಸ್ಯ ಸ್ಥಾನ ಇದೆ. ನಮ್ಮ ಸರ್ಕಾರ ಬಂದ್ರೆ ಸಚಿವರಾಗುವುದು ಗ್ಯಾರೆಂಟಿ, ನೀವು ಗೋವಿಂದರಾಜನಗದಲ್ಲಿ ಸ್ಪರ್ಧೆ ಮಾಡಿ, ಇಲ್ಲ ಈ ಎಲೆಕ್ಷನ್ ನಲ್ಲಿ ಸುಮ್ಮನಿದ್ದು ಬಿಡಿ ಎಂದ ಅನಂತಕುಮಾರ್ ಹೇಳಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸರ್ವೆ ಬಿಜೆಪಿಗೆ ಎಚ್ಚರಿಕೆ ಗಂಟೆ: ವಿ.ಸೋಮಣ್ಣ

    ಅನಂತಕುಮಾರ್ ಅವರು ನೀಡಿದ ಸಲಹೆಯನ್ನು ಸೋಮಣ್ಣ ಬಹುತೇಕ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಇತ್ತ ಇನ್ನೇರೆಡು ದಿನಗಳಲ್ಲಿ ಚುನಾವಣೆ ಸ್ಪರ್ಧೆ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತೇನೆ ಅಂತಾ ಸೋಮಣ್ಣ ಹೈಕಮಾಂಡ್ ಗೆ ತಿಳಿಸಿದ್ದಾರೆ ಎಂದು ಪಬ್ಲಿಕ್ ಟಿವಿ ಮೂಲಗಳು ತಿಳಿಸಿವೆ.

  • EVMಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಹೆಚ್‍ಡಿಡಿ-ಕೇಂದ್ರ ಸಚಿವ ಅನಂತಕುಮಾರ್ ವಿರುದ್ಧ ಗರಂ

    EVMಗಳ ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಹೆಚ್‍ಡಿಡಿ-ಕೇಂದ್ರ ಸಚಿವ ಅನಂತಕುಮಾರ್ ವಿರುದ್ಧ ಗರಂ

    ಬೆಂಗಳೂರು: ಚುನಾವಣೆಯಲ್ಲಿ ಬಳಸುವ ಇವಿಎಂ ಯಂತ್ರಗಳ ಬಗ್ಗೆ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ದೇವೇಗೌಡ್ರು ಅಸಮಧಾನವನ್ನು ವ್ಯಕ್ತಪಡಿಸಿದ್ದಾರೆ.

    ರಾಜ್ಯದ ಜನತೆಗೆ ಯುಗಾದಿ ಹಬ್ಬದ ಶುಭಾಶಯ ತಿಳಿಸಿ ಮಾತನಾಡಿದ ದೇವೇಗೌಡ್ರು, ಇವಿಎಂನ ಬಳಕೆ ಬಗ್ಗೆ ಸಾಕಷ್ಟು ಅನುಮಾನವಿದ್ದು, ಇದು ಬೇಡ ಅನ್ನೋದು ನಮ್ಮ ಪಕ್ಷದ ವಾದ. 2008ರಲ್ಲಿಯೇ ನಮ್ಮ ಪಕ್ಷದಿಂದ ಚುನಾವಣೆ ಆಯೋಗಕ್ಕೆ ಇವಿಎಂ ಬಳಕೆ ಬಗ್ಗೆ ದೂರು ನೀಡಿದ್ದೇವೆ ಅಂತಾ ಅಂದ್ರು.

    ಅನಂತಕುಮಾರ್ ವಿರುದ್ಧ ಗರಂ: ಟಿಕೆಟ್ ವಿಚಾರದಲ್ಲಿ ದೇವೇಗೌಡರ ಕುಟುಂಬದಲ್ಲಿ ಗೊಂದಲ ಇದೆ ಎಂದಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿರುಗೇಟು ನೀಡಿದ್ರು. ಗೊಂದಲ ನಿವಾರಣೆ ಮಾಡಿ ಅಂತ ನಾವೇನು ಅನಂತ್ ಕುಮಾರ್ ಅವ್ರನ್ನ ಕೇಳಿದ್ವಾ? ಪಂಚಾಯ್ತಿ ಮಾಡಿ ಅಂತ ಅವರ ಮನೆಯ ಬಾಗಿಲಿಗೆ ಹೋಗಿಲ್ಲ. ನಮ್ಮ ಕುಟುಂಬದ ವಿಚಾರ ಅವರಿಗ್ಯಾಕೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು. ಈ ಹಿಂದೆ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ನಮ್ಮ ಮನೆ ಬಾಗಿಲಿಗೆ ಬಂದಿದ್ರು. ಪಕ್ಷ ಬಿಟ್ಟು ಬರ್ತೀವಿ ಒಂದು ಮಂತ್ರಿ ಸ್ಥಾನಕೊಡಿ ಅಂತ ಅಂತ ಅನಂತ್ ಕುಮಾರ್ ಗೆ ಟಾಂಗ್ ಕೊಟ್ಟರು.

    ಬಂಡಾಯ ಜೆಡಿಎಸ್ ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳದ ಸ್ಪೀಕರ್ ಕೋಳಿವಾಡ್ ಅವರ ಮೇಲೆ ಮಾಜಿ ಪಿಎಂ ದೇವೇಗೌಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಬಂಡಾಯ ಶಾಸಕರ ವಿರುದ್ದ ಸ್ಪೀಕರ್ ಅವರಿಗೆ ದೂರು ನೀಡಲಾಗಿದೆ. ಒಂದು ವರ್ಷ ಕಳೆದರು ಇನ್ನು ಸ್ಪೀಕರ್ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಒಂದು ವರ್ಷ ಬೇಕಾ ಕ್ರಮ ತೆಗೆದುಕೊಳ್ಳಲು ಅಂತ ಪ್ರಶ್ನೆ ಮಾಡಿದ್ರು. ನೋಡೋಣ ಸ್ಪೀಕರ್ ಏನ್ ಕ್ರಮ ತೆಗೆದುಕೊಳ್ತಾರೆ ಅಂತ ಅಸಮಾಧಾನ ಹೊರ ಹಾಕಿದ್ರು.