Tag: ಅನಂತಕುಮಾರ್

  • ತುರ್ತು ಪರಿಸ್ಥಿತಿ ವೇಳೆ ಜೈಲಿಗೆ ಹೋಗಿದ್ದ ಅನಂತ ಕುಮಾರ್: ಸಾಧನೆಯ ಅನಂತ ಪಥ ಓದಿ

    ತುರ್ತು ಪರಿಸ್ಥಿತಿ ವೇಳೆ ಜೈಲಿಗೆ ಹೋಗಿದ್ದ ಅನಂತ ಕುಮಾರ್: ಸಾಧನೆಯ ಅನಂತ ಪಥ ಓದಿ

    ಬೆಂಗಳೂರು: ದಿವಂಗತ ಕೇಂದ್ರ ಸಚಿವ ಅನಂತ ಕುಮಾರ್ ಭಾರತೀಯ ಜನತಾ ಪಕ್ಷದಿಂದ ನಿರಂತರ ಗೆಲುವಿನೂಂದಿಗೆ ಕೇಂದ್ರ ಸರ್ಕಾರದ ಅನೇಕ ಹುದ್ದೆಗಳನ್ನು ಅಲಂಕರಿಸಿದ್ದ ಪ್ರಭಾವಿ ರಾಜಕಾರಣಿಯಾಗಿದ್ದರು.

    ರಾಜಕೀಯ ಜೀವನವೇ ವರ್ಣ ರಂಜಿತ. ಬಿಜೆಪಿಯ ಕಟ್ಟಾ ಅನುಯಾಯಿ, ಆರ್‍ಎಸ್‍ಎಸ್ ತತ್ವ ಸಿದ್ಧಾಂತದ ಪ್ರತಿಪಾದಕಾರಾಗಿದ್ದ ಅನಂತ ಕುಮಾರ್ ತಮ್ಮ ರಾಜಕೀಯ ಜೀವನದಲ್ಲಿ ಎಂದೂ ಕಪ್ಪು ಚುಕ್ಕೆ ಬಾರದಂತೆ ನಡೆದುಕೊಂಡಿದ್ದರು. ಭಾರತೀಯ ಜನತಾ ಪಕ್ಷದ ಅನಂತ ಕುಮಾರ್, ಒಬ್ಬ ಯಶಸ್ವಿ ರಾಜಕಾರಣಿ. ಕರ್ನಾಟಕದ ದಕ್ಷಿಣ ಬೆಂಗಳೂರು ಚುನಾವಣಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ರಾಜಕೀಯ ಪಟು ಕೂಡ ಆಗಿದ್ದರು.


    ಜನನ, ಬಾಲ್ಯ, ಹಾಗೂ ವಿದ್ಯಾಭ್ಯಾಸ
    ಅನಂತ ಕುಮಾರ್ ಅವರು ಜುಲೈ 22 1959ರಲ್ಲಿ ಜನಿಸಿದ್ದರು. ತಂದೆ ಶ್ರೀ ಎಚ್.ಎನ್. ನಾರಾಯಣ ಶಾಸ್ತ್ರಿ ಮತ್ತು ತಾಯಿ ಗಿರಿಜಾ. ಅನಂತ ಕುಮಾರ್ ತೇಜಸ್ವಿನಿ ಅವರನ್ನು ಮದುವೆಯಾಗಿದ್ದು ಇವರಿಗೆ ಐಶ್ವರ್ಯ ಮತ್ತು ವಿಜೇತಾ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

    ವ್ಯಾಸಂಗ: ಬಿಎ, ಎಲ್‍ಎಲ್‍ಎಮ್ (ಕಾನೂನು ಪದವಿ), ಹುಬ್ಬಳ್ಳಿಯ ಕೆ.ಎಸ್. ಆರ್ಟ್ಸ್ ಕಾಲೇಜಿನಲ್ಲಿ ಬಿ.ಎ ಪದವಿ, ಎಲ್.ಎಲ್.ಎಮ್ [ಲಾ] ಪದವಿ, ಜೆ.ಎಸ್.ಎಸ್. ಲಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಬಾಲ್ಯದಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಅನಂತ ಕುಮಾರ್ ಅವರು ಆರ್‍ಎಸ್‍ಎಸ್ ತತ್ವಗಳಿಂದ ಪ್ರೇರಿತರಾಗಿದ್ದು, ವಿದ್ಯಾರ್ಥಿಯಾಗಿದ್ದಾಗಲೇ ಎಬಿವಿಪಿಯಲ್ಲಿ ಸಕ್ರಿಯರಾಗಿದ್ದರು.

    ರಾಜಕೀಯ ಜೀವನ
    1985 ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾಗಿ ಆಯ್ಕೆಯಾಗಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿಂದ ಮುಂದೆ ಜನತಾಪಾರ್ಟಿಯ ದೊಡ್ಡ ಹುದ್ದೆಗಳಿಗೆ ಆಯ್ಕೆಯಾದರು. 1985-87 ಎಬಿವಿಪಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದು, ಈ ವೇಳೆ ತುರ್ತು-ಪರಿಸ್ಥಿತಿಯ ಸಂದರ್ಭದಲ್ಲಿ ಅವರನ್ನು 40 ದಿನ ಸೆರೆಮನೆವಾಸದಲ್ಲಿ ಇರಿಸಲಾಗಿತ್ತು. ತಮ್ಮ ಚಿಕ್ಕವಯಸ್ಸಿನಲ್ಲೇ ಕರ್ನಾಟಕ ವಲಯದ ಬಿಜೆಪಿಯ ಜನರಲ್ ಸೆಕ್ರೆಟರಿಯಾಗಿ ಕಾರ್ಯನಿರ್ವಹಿಸಿದ್ದರು.

    ಬಿಜೆಪಿಯ ಯುವ-ಮೋರ್ಚದಲ್ಲಿ ಅನಂತಕುಮಾರ್ ನಡೆಸಿದ ಕಾರ್ಯವೈಖರಿಯನ್ನು ಗಮನಿಸಿ 1996 ರಲ್ಲಿ ರಾಷ್ಟ್ರಮಟ್ಟದ ರಾಜಕೀಯವಲಯದಲ್ಲಿ ಕಾರ್ಯದರ್ಶಿಯನ್ನಾಗಿ ಮಾಡಿದ್ದರು. ರಾಮಜನ್ಮಭೂಮಿಯ ಕಾರಣಕ್ಕೆ ಹೋರಾಟದಲ್ಲಿ ಕರ್ನಾಟಕದಿಂದ ಅನಂತಕುಮಾರ್ ಅವರನ್ನು ಆಯ್ಕೆ ಮಾಡಿ ಪ್ರತಿನಿಧಿಸಿದ್ದರು. 1996 ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಮೊದಲ ಪ್ರಯತ್ನದಲ್ಲೇ ಸಂಸದರಾಗಿ ಅನಂತಕುಮಾರ್ ಆಯ್ಕೆಯಾಗಿದ್ದರು.

    1998 ರಲ್ಲಿ ಮತ್ತೆ ಅನಂತ ಕುಮಾರ್ ಪುನರ್ ಆಯ್ಕೆಯಾಗಿದ್ದು, 1998 ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ನಾಗರೀಕ ವಿಮಾನಯಾನ ಮಂತ್ರಿ ಸ್ಥಾನ ಪಡೆದುಕೊಂಡಿದ್ದರು. ಅಟಲ್ ಸರ್ಕಾರದ ಮಂತ್ರಿ ಮಂಡಲದಲ್ಲಿ ಕಿರಿಯ ವಯಸ್ಸಿನ ಮಂತ್ರಿಯಾಗಿದ್ದು, ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ರವರ ಮಂತ್ರಿಮಂಡಲದಲ್ಲಿ ವಿಮಾನಯಾನ ಇಲಾಖೆಯ ಸಚಿವರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು. ಅತಿ ಚಿಕ್ಕಪ್ರಾಯದ ಮಂತ್ರಿಯಾಗಿ ಆಯ್ಕೆ ಎಂಬ ಪ್ರಶಂಸೆಗೆ ಭಾಜನರಾಗಿದ್ದರು. 1999 ರಲ್ಲಿ ಮತ್ತೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಮರು ಆಯ್ಕೆಯಾಗಿದ್ದರು.

    ವಾಜಪೇಯಿ ಸರ್ಕಾರದಲ್ಲಿ ಮತ್ತೆ ಮಂತ್ರಿ ಸ್ಥಾನ ಪಡೆದುಕೊಂಡಿದ್ದು, ಪ್ರವಾಸೋದ್ಯಮ, ಕ್ರೀಡೆ, ಯುವಜನ ಮತ್ತು ಸಂಸ್ಕೃತಿ, ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಅನಂತ ಕುಮಾರ್ ಅವರು 2004ರಲ್ಲಿ ನಾಲ್ಕನೇ ಬಾರಿಗೆ ಮತ್ತೆ ಆಯ್ಕೆಯಾಗಿದ್ದರು. 1996ರಿಂದ 2014ರವರೆಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸತತ 6 ಬಾರಿ ಆಯ್ಕೆಯಾಗಿದ್ದರು.

    * 1982-85 – ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯದರ್ಶಿ
    * 1985-87 – ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ರಾಷ್ಟ್ರೀಯ ಕಾರ್ಯದರ್ಶಿ
    * 1987-88 – ಭಾರತೀಯ ಜನತಾ ಪಾರ್ಟಿಯ ಕಾರ್ಯದರ್ಶಿ
    * 1988-95 – ಭಾರತೀಯ ಜನತಾ ಪಕ್ಷದ ಜನರಲ್ ಸೆಕ್ರೆಟರಿ
    * 1995-98 – ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ

    * 1996 – ಬಿಜೆಪಿಯಿಂದ ಲೋಕ ಸಭೆಗೆ ಆಯ್ಕೆ
    * 1996-97 – ಇಂಡಿಯನ್ ಇನ್ಸ್ಟಿಟ್ಯೂಟ್ ನ ಸೈನ್ಸ್ ಸದಸ್ಯರು
    * 1996-97 – ಕೆಂದ್ರ ಕೈಗಾರಿಕಾ ಸಚಿವಾಲಯದ ಸಂಸದೀಯ ಸಲಹಾ ಸಮಿತಿಯ ಸದಸ್ಯ
    * 1996-97 – ಕೇಂದ್ರ ರೈಲ್ವೆ ಸಚಿವಾಲಯದ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯ
    * 1998 – ಮತ್ತೆ ಲೋಕಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆ
    * 1998-99 – ಕೇಂದ್ರ ವಿಮಾನ ಯಾನ ಸಚಿವರಾಗಿ ಯಶಸ್ವಿ ಕಾರ್ಯ

    * 1999-ಅಕ್ಟೋಬರ್99 – ಪ್ರವಾಸೋದ್ಯಮ ಇಲಾಖೆ ಸಚಿವ (ಹೆಚ್ಚುವರಿ)
    * 1999 – ಲೋಕ ಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಮತ್ತೆ ಆಯ್ಕೆ
    * 1999-2000 – ಸಂಸ್ಕೃತಿ, ಯುವಜನ ಮತ್ತು ಕ್ರೀಡಾ ಸಚಿವ- ಕ್ಯಾಬಿನೆಟ್
    * 2000-2001 – ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ

    * 2001 – ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಮತ್ತು ಬಡತನ ನಿರ್ಮೂಲನಾ ಸಚಿವ- (ಗ್ರಾಮೀಣಾಭಿವೃದ್ಧಿ ಸಚಿವ)
    * 2003-04 – ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ
    * 2004 – ಲೋಕಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆ
    * 2004 – ಕಲ್ಲಿದ್ದಲು ಮತ್ತು ಉಕ್ಕು ಸಮಿತಿ ಅಧ್ಯಕ್ಷ
    * 2004 – ಸಂಸದೀಯ ಸಾಮಾನ್ಯ ಸಂಗತಿಗಳ ಸಮಿತಿಯ ಸದಸ್ಯ
    * 2005 – ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ
    * 2007 – ಕೇಂದ್ರ ಸಂಸದೀಯ ಹಣಕಾಸ ಸಮಿತಿ ಅಧ್ಯಕ್ಷ
    * 2007 – ಕೇಂದ್ರ ಸಲಹಾ ಸಮಿತಿ ಸದಸ್ಯ
    * 2009 – ಲೋಕಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆ
    * 2013 – ಲೋಕಸಭೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಆಯ್ಕೆ-(ರಸಗೊಬ್ಬರ ಹಾಗೂ ಸಂಸದೀಯ ಸಚಿವ)

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

    https://www.youtube.com/watch?v=O6nPdRwhMSg

  • ಕೇಂದ್ರದಲ್ಲಿ ಯಾವುದೇ ಸರ್ಕಾರವಿದ್ದರೂ ಕರ್ನಾಟಕವನ್ನು ಸಮರ್ಥಿಸಿಕೊಳ್ತಿದ್ರು: ಸಿದ್ದರಾಮಯ್ಯ

    ಕೇಂದ್ರದಲ್ಲಿ ಯಾವುದೇ ಸರ್ಕಾರವಿದ್ದರೂ ಕರ್ನಾಟಕವನ್ನು ಸಮರ್ಥಿಸಿಕೊಳ್ತಿದ್ರು: ಸಿದ್ದರಾಮಯ್ಯ

    ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ಅವರ ಅಗಲಿಕೆಯಿಂದ ರಾಷ್ಟ್ರ ರಾಜಕಾರಣಕ್ಕೆ ಬಹಳ ನಷ್ಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರ ಸಚಿವರಾಗಿದ್ದ ಅನಂತ ಕುಮಾರ್ ಅವರು ಅಕಾಲಿಕೆ ಮರಣಕ್ಕೆ ತುತ್ತಾಗಿದ್ದಾರೆ. ಅವರೊಬ್ಬರು ಸಜ್ಜನ ಮತ್ತು ಸುಸಂಸ್ಕೃತ ರಾಜಕಾರಣಿಯಾಗಿದ್ದರು. ಬಹಳ ಚಿಕ್ಕ ವಯಸ್ಸಿನಲ್ಲಿಯೇ ಸಾರ್ವಜನಿಕ ಬದುಕಿನಲ್ಲಿ ತಮ್ಮನ್ನು ತೊಡಗಿಸಿಕೊಂಡು ಇಂದು ರಾಷ್ಟ್ರ ಮಟ್ಟದ ರಾಜಕಾರಣದವರೆಗೂ ಹೋಗಿದ್ದರು ಎಂದು ಹೇಳಿದ್ದಾರೆ.

    ಎಬಿವಿಪಿಯಿಂದ ಪ್ರಾರಂಭ ಮಾಡಿ, ಆರ್‍ಎಸ್‍ಎಸ್ ಜೊತೆ ಸಂಬಂಧ ಇಟ್ಟುಕೊಂಡು ಅಲ್ಲಿ ಬೆಳೆದು ರಾಷ್ಟ್ರ ರಾಜಕಾರಣಕ್ಕೆ ತಮ್ಮದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ. ಒಬ್ಬ ಉತ್ತಮ ಆಡಳಿತಗಾರ, ಕರ್ನಾಟಕದ ಬೆಳವಣಿಗೆಯ ಬಗ್ಗೆ ಅಪಾರವಾದ ಕಾಳಜಿ ಇಟ್ಟುಕೊಂಡಿದ್ದರು, ಕೇಂದ್ರ ಸರ್ಕಾರದಲ್ಲಿ ಇವರು ಯಾವಾಗ ಮಂತ್ರಿಯಾಗಿದ್ದರು ಆಗ ಕರ್ನಾಟಕದ ಯಾವುದೇ ಸಮಸ್ಯೆ ಬಂದರೂ ಕೂಡ ಕೇಂದ್ರ ಸರ್ಕಾರದಲ್ಲಿ ಕರ್ನಾಟಕವನ್ನು ಬಹಳ ಸಮರ್ಥಿಸುತ್ತಿದ್ದರು ಅಂತ ಸಿದ್ದರಾಮಯ್ಯ ಅವರು ಅನಂತಕುಮಾರ್ ಬಗ್ಗೆ ತಿಳಿಸಿದ್ದಾರೆ.

    ಅನಂತಕುಮಾರ್ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತಿದ್ದರು. ಅವರು ನಮ್ಮನೆಲ್ಲಾ ಇವತ್ತು ಅಗಲಿದ್ದಾರೆ. ಇನ್ನು ಅವರಿಗೆ ಚಿಕ್ಕವಯಸ್ಸು, ಆದರೆ ಬಹಳ ದೀರ್ಘ ಕಾಲ ರಾಜಕಾರಣದಲ್ಲಿ ಇರಬೇಕಿತ್ತು. ಇವತ್ತು ಅವರ ಅಗಲಿಕೆಯಿಂದ ರಾಷ್ಟ್ರ ರಾಜಕಾರಣದಲ್ಲಿ ಬಹಳ ನಷ್ಟವಾಗಿದೆ. ನಾವು ಅವರು ಬೇರೆ ಬೇರೆ ಪಕ್ಷವಾಗಿದ್ದರು ನಮ್ಮ ನಡುವೆ ಸ್ನೇಹ ಇತ್ತು. ಅವರು ಒಬ್ಬ ಒಳ್ಳೆಯ ಸ್ನೇಹ ಜೀವಿಯಾಗಿದ್ದಾರೆ. ಸ್ನೇಹಿತರಿಗೆ ಮತ್ತು ಕುಟುಂಬದವರಿಗೆ ಅವರ ಸಾವಿನ ದುಃಖವನ್ನು ಭರಿಸುವಂತ ಶಕ್ತಿ ಕೊಡಲಿ ಮತ್ತು ಅವರ ಆತ್ಮಕ್ಕೆ ಚಿರಶಾಂತಿ ಕೊಡಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ ಎಂದು ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

    ಇಂದು ಬೆಳಗ್ಗೆ ನಸುಕಿನ ಜಾವ ಅನಾರೋಗ್ಯದ ಹಿನ್ನೆಲೆಯಲ್ಲಿ ಅನಂತಕುಮಾರ್ ಅವರು ನಿಧನರಾಗಿದ್ದಾರೆ. ಮಂಗಳವಾರ ಅನಂತಕುಮಾರ್ ಅವರ ಅಂತ್ಯಕ್ತಿಯೆ ನಡೆಯಲಿದೆ. ನಾಳೆ ಬೆಳಗ್ಗೆ ಸುಮಾರು 10ಕ್ಕೆ ನ್ಯಾಷನಲ್ ಕಾಲೇಜು ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಗರದ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅನಂತಕುಮಾರ್ ಅವರ ಅಂತ್ಯಕ್ರೀಯೆ ನಡೆಯಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

    https://www.youtube.com/watch?v=97HUSauRH8U

  • ಅನಂತಕುಮಾರ್, ಬಿಎಸ್‍ವೈ, ನನ್ನನ್ನು ನೋಡಿ ಸೆಟ್ ದೋಸೆ ಅಂತಿದ್ರು: ಈಶ್ವರಪ್ಪ

    ಅನಂತಕುಮಾರ್, ಬಿಎಸ್‍ವೈ, ನನ್ನನ್ನು ನೋಡಿ ಸೆಟ್ ದೋಸೆ ಅಂತಿದ್ರು: ಈಶ್ವರಪ್ಪ

    ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಮಾಜಿ ಶಾಸಕರು ಮತ್ತು ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರು ಸಂತಾಪ ಸೂಚಿಸಿದ್ದಾರೆ.

    ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮಾಜಿ ಡಿಸಿಎಂ. ಕೆ.ಎಸ್. ಈಶ್ವರಪ್ಪ ಅವರು, ನಾನು, ಕೇಂದ್ರ ಸಚಿವ ಅನಂತಕುಮಾರ್ ಮತ್ತು ಬಿಎಸ್ ಯಡಿಯೂರಪ್ಪ ಮೂವರು ವಿಧಾನಸಭೆಯಲ್ಲಿ ಒಂದೇ ಬೆಂಚಿನಲ್ಲಿ ಕುಳಿತುಕೊಂಡು ಏನೇನು ಕೆಲಸ-ಕಾರ್ಯ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದೆವು ಎಂದು ನೆನಪಿಸಿಕೊಂಡರು.

    ಇಂದು ರಾಜ್ಯದ ಮೂಲೆ ಮೂಲೆಗಳಲ್ಲಿ ಸಂಘಟನೆ ಬೆಳೆಯಬೇಕಾದರೆ ಅನಂತಕುಮಾರ್ ತುಂಬಾ ಶ್ರಮ ಪಟ್ಟಿದ್ದಾರೆ. ಅನಂತಕುಮಾರ್ ಜೊತೆ ಕಂಡಂತಹ ವಿಶೇಷ ಗುಣ ಎಂದರೆ ಅದು ಸ್ನೇಹವಾಗಿದೆ. ಸಾಮಾನ್ಯರಲ್ಲಿ ಸಾಮಾನ್ಯರು ಅವರು, ಸ್ನೇಹಿತರಾದರೆ 10-20 ವರ್ಷದ ಬಳಿಕವೂ ಅವರಿಗೆ ಗೌರವ ಕೊಟ್ಟು ಹೆಸರು ಹಿಡಿದು ಕರೆಯುತ್ತಿದ್ದರು.

    ವಿರೋಧ, ಆಡಳಿತ ಪಕ್ಷದಲ್ಲಿ ಇದ್ದೇವೆ ಅನ್ನೋದನ್ನ ಬಿಟ್ಟು ಅವರು ಕ್ಷೇತ್ರ ಮತ್ತು ದೇಶ ಅಭಿವೃದ್ಧಿ ಮಾಡಬೇಕು ಎಂದುಕೊಂಡಿದ್ದರು. ಅದರಂತೆಯೇ ಎಲ್ಲರ ಜೊತೆ ಸ್ನೇಹದಿಂದ ಇದ್ದು ಎಲ್ಲ ಕೆಲಸಗಳನ್ನು ಮಾಡುತ್ತಿದ್ದರು. ಸಮಾಜದ ಪ್ರಮುಖ ನಾಯಕರ ಬಗ್ಗೆ ನಮಗೆಲ್ಲ ವೈಯಕ್ತಿಕವಾಗಿ ಹೇಳುತ್ತಿದ್ದರು. ನಿಜಕ್ಕೂ ಅನಂತಕುಮಾರ್ ಅವರನ್ನು ಎಷ್ಟು ವರ್ಣನೆ ಮಾಡಿದರೂ ಸಾಲದು ಎಂದು ಹೇಳಿದರು.

    ನಾನು, ಕೇಂದ್ರ ಸಚಿವ ಅನಂತಕುಮಾರ್ ಮತ್ತು ಬಿಎಸ್ ಯಡಿಯೂರಪ್ಪ ಮೂವರು ಒಟ್ಟಿಗೆ ಇದ್ದದ್ದನ್ನು ನೋಡಿ ಎಲ್ಲರೂ ಸೆಟ್ ದೋಸೆ ಎಂದು ಕರೆಯುತ್ತಿದ್ದರು. ಪ್ರೀತಿಯಿಂದ ಇದ್ದ ಅವರು ಸಾಮಾನ್ಯ ಜನರ ಮನಸ್ಸನ್ನು ಗೆಲ್ಲುತ್ತಿದ್ದರು. ಯಾವ ಖಾತೆಯನ್ನು ಕೊಟ್ಟರು ಅವರು ನಿಭಾಯಿಸುತ್ತಿದ್ದರು ಎಂದು ಅವರ ಬಗ್ಗೆ ಈಶ್ವರಪ್ಪ ಅವರು ಅವರ ಜೊತೆಗಿನ ಒಡನಾಡವನ್ನು ಹಂಚಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

    https://www.youtube.com/watch?v=uK_SiBW5Ly0

  • ಸಮರ್ಥ ಆಡಳಿತಾಧಿಕಾರಿ, ಬಿಜೆಪಿಯ ದೊಡ್ಡ ಆಸ್ತಿ ಅನಂತ ಕುಮಾರ್- ಪ್ರಧಾನಿ ಮೋದಿ

    ಸಮರ್ಥ ಆಡಳಿತಾಧಿಕಾರಿ, ಬಿಜೆಪಿಯ ದೊಡ್ಡ ಆಸ್ತಿ ಅನಂತ ಕುಮಾರ್- ಪ್ರಧಾನಿ ಮೋದಿ

    ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

    ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ, ಕರ್ನಾಟಕ ಬಿಜೆಪಿಯ ಹಿರಿಯ ಮುಖಂಡ ಎಚ್.ಎನ್. ಅನಂತಕುಮಾರ್ (59) ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಇಂದು ನಸುಕಿನ ಜಾವ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

    ಪ್ರಧಾನಿ ಮೋದಿ ಅವರು ಶೋಕ ಸಂದೇಶವನ್ನು ಟ್ವೀಟ್ ಮಾಡುವ ಮೂಲಕ ಅನಂತಕುಮಾರ್ ಅಗಲಿಕೆಗೆ  ಸಂತಾಪ ಸೂಚಿಸಿದ್ದಾರೆ. “ಅನಂತಕುಮಾರ್ ಜೀ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅವರ ಪತ್ನಿ ಡಾ. ತೇಜಸ್ವಿನಿ ಜೊತೆ ಮಾತನಾಡಿದ್ದೇನೆ. ಅವರ ಕುಟುಂಬದವರಿಗೆ, ಸ್ನೇಹಿತರಿಗೆ ಮತ್ತು ಬೆಂಬಲಿಗರಿಗೆ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಪ್ರಾರ್ಥನೆ ಮಾಡಿಕೊಳ್ಳುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

    “ಅನಂತ ಕುಮಾರ್ ಜೀ ಅವರು ಒಬ್ಬ ಸಮರ್ಥ ಆಡಳಿತಾಧಿಕಾರಿಯಾಗಿದ್ದು, ಅನೇಕ ಸಚಿವ ಖಾತೆಗಳನ್ನು ನಿರ್ವಹಿಸಿದ್ದರು. ಬಿಜೆಪಿ ಸಂಘಟನೆಗೆ ದೊಡ್ಡ ಆಸ್ತಿಯಾಗಿದ್ದು, ಅವರು ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಕ್ಷವನ್ನು ಬಲಪಡಿಸಲು ಕಠಿಣ ಶ್ರಮ ಪಟ್ಟಿದ್ದರು.” ಎಂದು ಅವರ ಬಗ್ಗೆ ಹೇಳಿದ್ದಾರೆ.

    ನನ್ನ ಸಹೋದ್ಯೋಗಿ ಮತ್ತು ಸ್ನೇಹಿತ ಶ್ರೀ ಅನಂತ್ ಕುಮಾರ್ ಜಿ ಅಗಲಿಕೆಯಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಅವರು ಚಿಕ್ಕ ವಯಸ್ಸಿನಲ್ಲೇ ರಾಜಕೀಯ ಜೀವನವನ್ನು ಪ್ರವೇಶಿಸಿದ್ದರು. ಅನಂತ ಕುಮಾರ್ ಅವರು ಶ್ರದ್ಧೆ ಮತ್ತು ಸಹಾನುಭೂತಿಯಿಂದ ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.

    ಇತ್ತೀಚೆಗೆ ತೀವ್ರ ಅನಾರೋಗ್ಯಪೀಡಿತರಾಗಿದ್ದ ಅನಂತಕುಮಾರ್ ಅವರನ್ನು ಕಳೆದ ಎರಡು ದಿನಗಳಿಂದ ವೆಂಟಿಲೇಟರ್‍ನಲ್ಲಿ ಇಡಲಾಗಿತ್ತು. ಅನಂತಕುಮಾರ್ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇಂದು ಬೆಳಗ್ಗೆ ಪ್ರಧಾನಿ ಮೋದಿ ಬೆಂಗಳೂರಿಗೆ ಬರಲಿದ್ದಾರೆ. ಬೆಳಗ್ಗೆ 9 ಗಂಟೆಯ ನಂತರ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆಗೆ ಸಿದ್ಧತೆ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಮನಸ್ಸು, ಹೃದಯ ತುಂಬಾ ಭಾರವಾಗಿದೆ- ಸ್ನೇಹಿತನಿಗೆ ಡಿವಿಎಸ್  ಕಂಬನಿ

    ಮನಸ್ಸು, ಹೃದಯ ತುಂಬಾ ಭಾರವಾಗಿದೆ- ಸ್ನೇಹಿತನಿಗೆ ಡಿವಿಎಸ್ ಕಂಬನಿ

    ಬೆಂಗಳೂರು: ಮನಸ್ಸು, ಹೃದಯ ತುಂಬಾ ಭಾರವಾಗಿದೆ ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಅನಂತ ಕುಮಾರ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

    ಮನಸ್ಸು , ಹೃದಯ ತುಂಬಾ ಭಾರವಾಗಿದೆ.ಪ್ರೀತಿಯ ಸ್ನೇಹಿತ , ಸಹೋದರ , ಅನಂತಕುಮಾರ್ ಇನ್ನಿಲ್ಲವೆಂಬ ಸತ್ಯ ಎಷ್ಟೊಂದು ಕಠೋರ ಎಂದು ಬರೆದು ಡಿವಿಎಸ್ ಟ್ವೀಟ್ ಮಾಡಿದ್ದಾರೆ.

     

    ಟ್ವೀಟ್ ಮಾಡುವುದರ ಜೊತೆಗೆ ಡಿವಿಎಸ್ ಫೇಸ್ ಬುಕ್ ಮತ್ತು ಟ್ವಿಟ್ಟರ್ ಖಾತೆ ಪ್ರೊಫೈಲ್ ಕಪ್ಪು ಬಣ್ಣದ ಫೋಟೋವನ್ನು ಹಾಕಿದ್ದಾರೆ.

    ನನ್ನ 32 ವರ್ಷದ ರಾಜಕೀಯ ಕ್ಷೇತ್ರದಲ್ಲಿನ ಗೆಳೆಯ ಅನಂತ ಕುಮಾರ್ ಇನ್ನಿಲ್ಲ ಎಂದು ಇದೀಗ ತಿಳಿದು ಈ ಬೆಳಗ್ಗಿನ ಜಾವ ತೀವ್ರ ಆಘಾತವಾಗಿದೆ. ಅನಂತ್ ಇಲ್ಲದ ಬಿಜೆಪಿಯನ್ನು ಊಹಿಸಲಿಕ್ಕೂ ಆಗುವುದಿಲ್ಲ ಎಂದು ಬಿಜೆಪಿ ಮುಖಂಡ, ರಾಜಾಜಿನಗರದ ಶಾಸಕ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

     

     

    ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅನಂತಕುಮಾರ್ ಅವರು ಸೋಮವಾರ ನಸುಕಿನ ಜಾವ ಎರಡು ಗಂಟೆ ಸುಮಾರಿಗೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇತ್ತೀಚೆಗೆ ತೀವ್ರ ಅನಾರೋಗ್ಯಪೀಡಿತರಾಗಿದ್ದ ಅನಂತಕುಮಾರ್ ಅವರನ್ನು ಕಳೆದ ಎರಡು ದಿನಗಳಿಂದ ವೆಂಟಿಲೇಟರ್ನಲ್ಲಿ ಇಡಲಾಗಿತ್ತು. ಅನಂತಕುಮಾರ್ ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

    ಇಂದು ಬೆಳಗ್ಗೆ ಪ್ರಧಾನಿ ಮೋದಿ ಬೆಂಗಳೂರಿಗೆ ಬರಲಿದ್ದಾರೆ.  ನಾಳೆ  ಬೆಳಗ್ಗೆ  ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಏರ್ ಶೋ ಯಾವುದೇ ಕಾರಣಕ್ಕೂ ಸ್ಥಳಾಂತರಗೊಳ್ಳುವುದಿಲ್ಲ: ಕೇಂದ್ರ ಸಚಿವ ಅನಂತ್ ಕುಮಾರ್

    ಏರ್ ಶೋ ಯಾವುದೇ ಕಾರಣಕ್ಕೂ ಸ್ಥಳಾಂತರಗೊಳ್ಳುವುದಿಲ್ಲ: ಕೇಂದ್ರ ಸಚಿವ ಅನಂತ್ ಕುಮಾರ್

    ಬೆಂಗಳೂರು: ನಗರದಲ್ಲಿ ನಡೆಯುತ್ತಿದ್ದ ಏರ್ ಶೋ ಯಾವುದೇ ಕಾರಣಕ್ಕೂ ಲಕ್ನೋಗೆ ಸ್ಥಳಾಂತರಗೊಳ್ಳುವುದಿಲ್ಲವೆಂದು ರಾಸಾಯನಿಕ ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಅನಂತಕುಮಾರ್ ಸ್ಪಷ್ಟನೆ ನೀಡಿದ್ದಾರೆ.

    ಏರ್ ಶೋ ಕುರಿತು ಉಂಟಾಗಿರುವ ಗೊಂದಲಕ್ಕೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ ಅವರು, 2019ರಲ್ಲಿ ಬೆಂಗಳೂರಿನಲ್ಲಿ ನಡೆಯುವ ಏರ್ ಶೋ ಲಕ್ನೋಗೆ ಸ್ಥಳಾಂತರಗೊಳ್ಳುವುದಿಲ್ಲವೆಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೇ ಈ ವಿಚಾರವಾಗಿ ನಾನು ಸಹ ಖುದ್ದು ರಕ್ಷಣಾ ಸಚಿವರಾದ ನಿರ್ಮಲಾ ಸೀತಾರಾಮನ್‍ರವರೊಂದಿಗೆ ಮಾತನಾಡಿದ್ದೇನೆ. ಅವರು ಸಹ ಸ್ಥಳಾಂತರಗೊಳ್ಳುವ ಯಾವುದೇ ನಿರ್ಧಾವಿಲ್ಲವೆಂದು ಹೇಳಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಏರ್ ಶೋ ಲಕ್ನೋಗೆ ಶಿಫ್ಟ್ ಆಗಲ್ಲ: ಬಿಎಸ್‍ವೈ

    ಏರ್ ಶೋ ಸ್ಥಳಾಂತರ ಕುರಿತು ಎದ್ದಿರುವ ಊಹಾಪೋಹಗಳಿಗೆ ಜನರು ಕಿವಿಗೊಡಬಾರದು, ಕಳೆದ ಬಾರಿಯೂ ಸಹ ಇಂತಹುದೇ ಗೊಂದಲ ಏರ್ಪಟ್ಟಿತ್ತು. ಕೇಂದ್ರ ಸರ್ಕಾರವು ಸ್ಥಳಾಂತರ ಕುರಿತು ಎಲ್ಲಿಯೂ ಮಾಹಿತಿ ನೀಡಿಲ್ಲ. 2019ರಲ್ಲಿ ನಡೆಯುವ ಏರ್ ಶೋ ಬೆಂಗಳೂರಿನಲ್ಲೇ ನಡೆಯಲಿದೆ ಎಂದು ಹೇಳಿದ್ದಾರೆ.

    ಏರ್ ಶೋ ಲಕ್ನೋಗೆ ಸ್ಥಳಾಂತರವಾಗುತ್ತಿದೆ ಎನ್ನುವ ಸುದ್ದಿ ಪ್ರಕಟವಾದ ಬೆನ್ನಲ್ಲೆ ಕಾಂಗ್ರೆಸ್, ಬಿಜೆಪಿ ನಾಯಕರ ನಡುವೆ ವಾಕ್ಸಮರ ಆರಂಭವಾಗಿತ್ತು. ಅಷ್ಟೇ ಅಲ್ಲದೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಪ್ರಧಾನಿ ಮೋದಿಗೆ ಪತ್ರ ಬರೆದು ಯಾವುದೇ ಕಾರಣಕ್ಕೂ ಲಕ್ನೋಗೆ ಸ್ಥಳಾಂತರ ಮಾಡಬಾರದು ಎಂದು ಮನವಿ ಮಾಡಿದ್ದರು. ಇದನ್ನೂ ಓದಿ: ಏರ್ ಶೋ ಉಳಿಸಿಕೊಳ್ಳಲು ಅಖಾಡಕ್ಕೆ ಇಳಿದ ಎಚ್‍ಡಿಕೆ-ಮೋದಿಗೆ ಪತ್ರ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಸೋನಿಯಾಜೀ ಲೆಕ್ಕದಲ್ಲಿ ವೀಕ್: ಕೇಂದ್ರ ಸಚಿವ ಅನಂತಕುಮಾರ್

    ಸೋನಿಯಾಜೀ ಲೆಕ್ಕದಲ್ಲಿ ವೀಕ್: ಕೇಂದ್ರ ಸಚಿವ ಅನಂತಕುಮಾರ್

    ನವದೆಹಲಿ: ಬುಧವಾರ ಸಂಸತ್ ಕಲಾಪದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್, ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿಯವರು ಲೆಕ್ಕದಲ್ಲಿ ವೀಕ್ ಇದ್ದಾರೆ ಎಂದು ವ್ಯಂಗ್ಯಭರಿತ ಮಾತುಗಳನ್ನಾಡಿದ್ದಾರೆ.

    ಶುಕ್ರವಾರ ಸಂಸತ್‍ನಲ್ಲಿ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಅವಿಶ್ವಾಸವನ್ನು ಮಂಡಿಸಲು ಮನವಿ ಮಾಡಿಕೊಂಡಿದ್ದಾರೆ. ಸಂಸತ್‍ನಲ್ಲಿ ನಮಗೆ ಬಹುಮತವಿಲ್ಲ ಅಂತಾ ಹೇಳಿದ್ದು ಯಾರು? ಶುಕ್ರವಾರ ಅವಿಶ್ವಾಸ ಗೊತ್ತುವಳಿಯಲ್ಲಿ ನಾವು ಜಯ ಸಾಧಿಸಲಿದ್ದೇವೆ ಎಂದು ಅನಂತಕುಮಾರ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಸೋನಿಯಾ ಜಿಯವರು ಲೆಕ್ಕದಲ್ಲಿ ಬಹಳ ವೀಕ್ ಆಗಿದ್ದಾರೆ. ಅವರು 1996ರ ಲೆಕ್ಕಾಚಾರವನ್ನು ಹಾಕುತ್ತಿರಬಹುದೇನೊ? ಎಂದು ಪ್ರಶ್ನಿಸಿ, ಅಂದಿನ ಲೆಕ್ಕಾಚಾರ ಎನಾಯಿತು ಎಂದು ನಾವು-ನೀವೆಲ್ಲಾ ನೋಡಿದ್ದೇವೆ. ಆದರೆ ಇಂದು ಮೋದಿ ಸರ್ಕಾರಕ್ಕೆ ಸಂಸತ್ತಿನ ಒಳಗೂ ಮತ್ತು ಹೊರಗೂ ಸಹ ಬೆಂಬಲವಿದೆ. ನಮಗೆ ಎಲ್ಲ ಕಡೆಯಿಂದಲೂ ಬೆಂಬಲ ಸಿಗುವುದನ್ನು ನೀವು ನೋಡುತ್ತೀರಿ ಎಂದು ತಿಳಿಸಿದ್ದಾರೆ.

    ಸೋನಿಯಾ ಗಾಂಧಿ ಹೇಳಿಕೆ ಏನು?
    ಬುಧವಾರ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ, ಕಾಂಗ್ರೆಸ್, ಸಮಾಜವಾದಿ ಪಾರ್ಟಿ(ಎಸ್‍ಪಿ), ತೆಲಗು ದೇಶಂ ಪಾರ್ಟಿ (ಟಿಡಿಪಿ) ಮತ್ತು ನ್ಯಾಷನಲ್ ಕಾನ್ಫರೆನ್ಸ್ ಲೋಕಸಭೆಯಲ್ಲಿ ಅವಿಶ್ವಾಸ ಗೊತ್ತುವಳಿಯನ್ನು ಮಂಡಿಸಿದ್ದವು. ಇವರ ಈ ಮಂಡನೆಯನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ರವರು ಅಂಗೀಕರಿಸಿ, ಶುಕ್ರವಾರ ಇದರ ಮೇಲೆ ಚರ್ಚೆ ನಡೆಸಲು ದಿನಾಂಕವನ್ನು ನಿಗದಿಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸೋನಿಯಾ ಗಾಂಧಿಯವರು ನಮಗೆ ಬಹುಮತ ಇಲ್ಲವೆಂದು ಯಾರು ಹೇಳಿದ್ದು? ಎಂದು ಪ್ರಶ್ನಿಸಿ, ಶುಕ್ರವಾರ ನಾವು ಜಯ ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

    ಬಿಜೆಪಿ ನೇತೃತ್ವದ ಎನ್‍ಡಿಯ ಮೈತ್ರಿ ಒಕ್ಕೂಟದಲ್ಲಿ ಒಟ್ಟು 312 ಮಂದಿ ಸದಸ್ಯರನ್ನು ಹೊಂದಿದೆ. ಅಲ್ಲದೇ ಲೋಕಸಭೆಯ 535 ಸದಸ್ಯರ ಪೈಕಿ 274 ಸದಸ್ಯರನ್ನು ಬಿಜೆಪಿಯೇ ಹೊಂದಿದೆ. ಸರ್ಕಾರ ರಚಿಸಲು ಬಿಜೆಪಿಗೆ ಒಟ್ಟು 268 ಸ್ಥಾನಗಳು ಅವಶ್ಯಕವಾಗಿದೆ.

    ಶಿವಸೇನೆಯ ಮುಖ್ಯಸ್ಥರಾದ ಉದ್ದವ್ ಠಾಕ್ರೆಯವರು ನಿರ್ಧಾರದ ಮೇಲೆ ಸೇನೆಯ ಸದಸ್ಯರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಶುಕ್ರವಾರ ನಡೆಯುವ ಅಧಿವೇಶನದಲ್ಲಿ ಎಐಡಿಎಂಕೆ ಹಾಗೂ ನವೀನ್ ಪಟ್ನಾಯಕ್ ರ ಬಿಜು ಜನತ ದಳ ಸಂಸತ್‍ನಿಂದ ದೂರ ಉಳಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

  • ಜಯನಗರ ಸೋಲಿನ ಬಳಿಕ ಅನಂತ್‍ಕುಮಾರ್ ಗೆ  ‘ಶಾ’ ಫುಲ್ ಕ್ಲಾಸ್!

    ಜಯನಗರ ಸೋಲಿನ ಬಳಿಕ ಅನಂತ್‍ಕುಮಾರ್ ಗೆ ‘ಶಾ’ ಫುಲ್ ಕ್ಲಾಸ್!

    ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಸೋಲಿನ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಕೇಂದ್ರ ಸಚಿವ ಅನಂತ್‍ಕುಮಾರ್ ಅವರಿಗೆ ದೂರವಾಣಿಯಲ್ಲಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    ರಾಜರಾಜೇಶ್ವರಿ ನಗರದ ಬಳಿಕ ಇಂದು ಜಯನಗಗರ ವಿಧಾನಸಭಾ ಕ್ಷೇತ್ರದ ಚುನಾವಣೆಯ ಸೋಲು ಬಿಜೆಪಿಗೆ ತೀವ್ರ ಮುಜುಗರವನ್ನು ಉಂಟು ಮಾಡಿದೆ. ಆದರೂ ರಾಜ್ಯ ಬಿಜೆಪಿ ನಾಯಕರು ಸೇರಿದಂತೆ ಕೇಂದ್ರ ಸಚಿವರು ಅಲ್ಪ ಮತಗಳಿಂದ ಸೋಲು ಕಂಡಿದೆ ಅಂತಾ ಸಮರ್ಥಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಅಮಿತ್ ಶಾ ನೇರವಾಗಿ ದೂರವಾಣಿ ಮೂಲಕ ಅನಂತಕುಮಾರ್ ಅವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಅಂತಾ ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.

    ದೂರವಾಣಿಯಲ್ಲಿ ಅಮಿತ್ ಶಾ ಹೇಳಿದ್ದೇನು?:
    1. ಸ್ಥಳೀಯ ಕಾರ್ಪೋರೇಟರ್‍ಗಳನ್ನು ನಿಭಾಯಿಸುವಲ್ಲಿ ವಿಫಲ.
    2. ಟಿಕೆಟ್ ಸಿಗದೇ ಹೈಕಮಾಂಡ್ ವಿರುದ್ಧ ಮುನಿಸಿಕೊಂಡಿದ್ದ ಕಾರ್ಪೋರೇಟರ್‍ಗಳನ್ನು ಸರಿಯಾಗಿ ನಡೆಸಿಕೊಂಡಿಲ್ಲ.
    3. ಈ ಹಿಂದೆ ನಡೆಸಿದ್ದ ಚುನಾವಣಾ ರಣತಂತ್ರಗಳನ್ನು ಈ ಚುನಾವಣೆಯಲ್ಲಿ ಯಾಕೆ ಅಳವಡಿಸಿಲ್ಲ.
    4. ಶಾಸಕರಾಗಿದ್ದ ವಿಜಯ್ ಕುಮಾರ್ ಸಾವಿನ ಅನುಕಂಪದ ಅಲೆಯಲ್ಲಿ ಸುಲಭವಾಗಿ ಗೆಲ್ಲಬಹುದಿತ್ತು.
    5. ಆದರೆ ವೈಯಕ್ತಿಕ ಪ್ರತಿಷ್ಠೆ, ಪ್ರಾದೇಶಿಕ ನಾಯಕರ ಹೊಂದಾಣಿಕೆ ಕೊರೆತೆಯಿಂದ ನಮಗೆ ಸೋಲಾಗಿದೆ.
    6. ರಾಜರಾಜೇಶ್ವರಿ ಬಳಿಕ ಜಯನಗರ ಕ್ಷೇತ್ರದ ಸೋಲಿನಿಂದಲೂ ಪಕ್ಷಕ್ಕೆ ಮುಜುಗರ ಆಗಿದೆ.

    ಜಯನಗರ ವಿಧಾನಸಭಾ ಕ್ಷೇತ್ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಡಿಯಲ್ಲಿಯೇ ಬರುತ್ತದೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಅನಂತಕುಮಾರ್ ಜಯನಗರದಲ್ಲಿ ಬಿಜೆಪಿ ಸೋಲಿನ ಬಳಿಕ ಫೇಸ್‍ಬುಕ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    ಜಯನಗರ ಸೋಲನ್ನು ನಾವು ಸ್ವೀಕರಿಸುತ್ತೇವೆ. ಆದರೂ ನಮ್ಮ ಅಭರ್ಥಿ ಪ್ರಹ್ಲಾದ್ ಬಾಬು ಅಲ್ಪ ಮತಗಳ ಅಂತರದಿಂದ ಸೋತಿದ್ದಾರೆ. ಕೊನೆ ಕ್ಷಣದಲ್ಲಿ ಅಪವಿತ್ರ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್-ಜೆಡಿಎಸ್ ಒಂದಾಗಿದ್ದರಿಂದ ನಮ್ಮ ಸೋಲು ಆಗಿದೆ. ಚುನಾವಣೆಗಾಗಿ ಕೆಲಸ ಮಾಡಿದ ಪಕ್ಷದ ಎಲ್ಲ ಕಾರ್ಯಕರ್ತರಿಗೂ ನನ್ನ ಧನ್ಯವಾದಗಳನ್ನು ತಿಳಿಸುತ್ತೇನೆ ಅಂತಾ ಫೇಸ್‍ಬುಕ್‍ನಲ್ಲಿ ಬರೆದುಕೊಂಡಿದ್ದಾರೆ.

  • ಬಿಜೆಪಿ ಹೈಕಮಾಂಡ್‍ನಿಂದ ಅನಂತ್‍ಕುಮಾರ್, ಅಶೋಕ್‍ಗೆ ಅಗ್ನಿಪರೀಕ್ಷೆ!

    ಬಿಜೆಪಿ ಹೈಕಮಾಂಡ್‍ನಿಂದ ಅನಂತ್‍ಕುಮಾರ್, ಅಶೋಕ್‍ಗೆ ಅಗ್ನಿಪರೀಕ್ಷೆ!

    ಬೆಂಗಳೂರು: ಬಿಜೆಪಿ ಕರ್ನಾಟಕದಲ್ಲಿ ಅಧಿಕಾರ ಹಿಡಿಯಬೇಕೆಂದು ಪ್ರಯತ್ನ ಮಾಡುತ್ತಿದೆ. ಹೀಗಾಗಿ ಅಷ್ಟೇ ಚುರುಕಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಹ ಹೊಸ ಲೆಕ್ಕಾಚಾರಗಳ ಮೂಲಕ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗ್ತಿದ್ದಾರೆ.

    ಬೆಂಗಳೂರು ಗೆಲ್ಲಲು ಅಮಿತ್ ಶಾ ಪ್ಲಾನ್ ಮಾಡಿಕೊಂಡಿದ್ದು, ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಎರಡು ಸಮಾವೇಶಗಳನ್ನು ಆಯೋಜನೆ ಮಾಡಲಾಗಿದೆ. ಮೇ 3 ಮತ್ತು 8 ರಂದು ಮೋದಿ ಬೆಂಗಳೂರಿನಲ್ಲಿ ನಡೆಯುವ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಎರಡು ಸಮಾವೇಶಗಳ ಮೂಲಕ ಬೆಂಗಳೂರಿನಲ್ಲಿ 20 ಕ್ಷೇತ್ರಗಳನ್ನು ಗೆಲ್ಲುವುದು ಅಮಿತ್ ಶಾ ಪ್ಲಾನ್ ಆಗಿದೆ. ಇದನ್ನೂ ಓದಿ: ಕೊಪ್ಪಳದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅಮಿತ್ ಶಾ ಫುಲ್ ಕ್ಲಾಸ್

    ಬೆಂಗಳೂರಿನಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲಿಸುವ ಗುರಿಯನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಮತ್ತು ಮಾಜಿ ಡಿಸಿಎಂ ಆರ್. ಅಶೋಕ್ ಅವರಿಗೆ ನೀಡಲಾಗಿದೆ. ಬೆಂಗಳೂರಿನಲ್ಲಿ 20 ಸೀಟ್ ಗಳನ್ನು ಗೆಲ್ಲಿಸುವುದಕ್ಕಾಗಿ ಅನಂತ್ ಕುಮಾರ್, ಅಶೋಕ್ ಇಬ್ಬರಿಗೂ ಅಮಿತ್ ಶಾ ಕಟ್ಟಾಜ್ಞೆ ಮಾಡಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಸಮಾವೇಶ 2, ಸೀಟು 20 ಅಮಿತ್ ಶಾ ಮಾಸ್ಟರ್ ಪ್ಲಾನ್!

  • ವರುಣಾ ಅಭ್ಯರ್ಥಿ ಯಾರಾಗ್ತಾರೆ ಅನ್ನೋದನ್ನು ಕಾದು ನೋಡಿ: ಅನಂತ್ ಕುಮಾರ್

    ವರುಣಾ ಅಭ್ಯರ್ಥಿ ಯಾರಾಗ್ತಾರೆ ಅನ್ನೋದನ್ನು ಕಾದು ನೋಡಿ: ಅನಂತ್ ಕುಮಾರ್

    ಬೆಂಗಳೂರು: ವರುಣಾ ಕ್ಷೇತ್ರದಲ್ಲಿ ವಿಜಯೇಂದ್ರ ಅವರಿಗೆ ಟಿಕೆಟ್ ಕೈ ತಪ್ಪಿದ ವಿಚಾರಕ್ಕೆ ನನ್ನ ಹೆಸರನ್ನು ಯಾಕೆ ಥಳಕು ಹಾಕ್ತೀರಾ? ಊಹಾತ್ಮಕವಾಗಿ ಯಾರೋ ಬಾಯಿಗೆ ಬಂದ ಹಾಗೆ ಮಾತನಾಡಿದ್ರೆ ಅದಕ್ಕೆ ನಾನು ಏನು ಮಾಡಲಿ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಪ್ರಶ್ನಿಸಿದ್ದಾರೆ.

    ಬಿಎಸ್‍ವೈ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ತಪ್ಪಲು ಅನಂತ್ ಕುಮಾರ್ ಕಾರಣ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ವರುಣಾ ಕ್ಷೇತ್ರಕ್ಕೆ ಅಧಿಕೃತವಾಗಿ ಇಲ್ಲಿಯವರೆಗೆ ಟಿಕೆಟ್ ಘೋಷಣೆಯಾಗಿಲ್ಲ ಉಹಾ ಪೋಹಗಳನ್ನು, ಕಲ್ಪನೆಗಳನ್ನು ಕಟ್ಟಿಕೊಳ್ಳಬಾರದು ಎಂದು ತಿಳಿಸಿದರು.

    ಈ ವೇಳೆ ಆ ಕ್ಷೇತ್ರದ ಅಭ್ಯರ್ಥಿ ಯಾರಾಗುತ್ತಾರೆ ಎಂದು ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ, ಅಭ್ಯರ್ಥಿ ಯಾರಾಗಬಹುದು ಎನ್ನುವುದನ್ನು ಕಾದುನೋಡಿ ಎಂದು ತಿಳಿಸಿದರು.