Tag: ಅನಂತಕುಮಾರ್ ಹೆಗ್ಡೆ

  • ಅನಂತಕುಮಾರ್ ಹೆಗ್ಡೆ ಪೊಲೀಸ್ ಬೆಂಗಾವಲು ಕಾರಿಗೆ ಡಿಕ್ಕಿ ಹೊಡೆದ ಲಾರಿಯ ಒಡೆತನದ ಬಗ್ಗೆ ಒಂದಿಷ್ಟು ಮಾಹಿತಿ

    ಅನಂತಕುಮಾರ್ ಹೆಗ್ಡೆ ಪೊಲೀಸ್ ಬೆಂಗಾವಲು ಕಾರಿಗೆ ಡಿಕ್ಕಿ ಹೊಡೆದ ಲಾರಿಯ ಒಡೆತನದ ಬಗ್ಗೆ ಒಂದಿಷ್ಟು ಮಾಹಿತಿ

    ಚಿಕ್ಕಮಗಳೂರು: ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಕಾರಿಗೆ ಅಪಘಾತ ಮಾಡಿದ KA 18 A 8733 ಸಂಖ್ಯೆಯ ಲಾರಿ ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ನಾಜೀರ್ ಅಹಮದ್ ಸನ್ ಆಫ್ ನೂರಹಮದ್ ಎಂಬವರಿಗೆ ಸೇರಿದ ಲಾರಿ ಆಗಿದೆ.

    ನಾಜೀರ್ ಆಹಮದ್ ಈ ಲಾರಿಯನ್ನ ಖರೀದಿಸುವ ಮುನ್ನ ಕೊಪ್ಪ ತಾಲೂಕಿನ ಆಹಾರ ಇಲಾಖೆಯ ಅಧಿಕಾರಿ ರಮೇಶ್ ಸಹೋದರ ನಾಗೇಶ್ ಎಂಬವರ ಹೆಸರಿನಲ್ಲಿತ್ತು. ನಾಗೇಶ್ ಈ ಗಾಡಿಯನ್ನ ಫೆಬ್ರವರಿ 16, 2018 ರಂದು ಎನ್.ಆರ್.ಪುರ ತಾಲೂಕಿನ ಬೆಳಗುಳ ನಿವಾಸಿ ನಾಜೀರ್ ಎಂಬವರಿಗೆ ಮಾರಿದ್ದಾರೆ. ಲಾರಿಯ ಮೂಲ ಮಾಲೀಕ ನಾಗೇಶ್ ಕೊಪ್ಪ ಬಿಜೆಪಿ ಘಟಕದ ಅಧ್ಯಕ್ಷರಾಗಿದ್ದಾರೆ.

    ಅಂದು ಲಾರಿಗೆ ನೀಡುವಷ್ಟು ಹಣ ಇಲ್ಲದ ನಾಜೀರ್ ಎರಡು ಲಕ್ಷ ನೀಡಿ ಲಾರಿಯನ್ನ ಖರೀದಿಸಿದ್ದರು. ಲಾರಿ ಮೇಲೆ 2.91 ಲಕ್ಷ ಲೋನ್ ಇತ್ತು. ಗಾಡಿ ಖರೀದಿಸಿದ ನಾಜೀರ್ ಹಣಕ್ಕಾಗಿ ಬೇರೆ ಫೈನಾನ್ಸ್ ನಲ್ಲಿ ಸಾಲ ಕೇಳಿದ್ದ. ಅಲ್ಲಿ ಹಣ ಸಿಕ್ಕ ಮೇಲೆ ಲಾರಿ ನಾಗೇಶ್ ಹೆಸರಿನಲ್ಲಿದ್ದಾಗ ಶ್ರೀರಾಮ ಫೈನಾನ್ಸ್ ನಲ್ಲಿ ಇದ್ದ ಹಣವನ್ನ ಕಟ್ಟಿದ್ದಾರೆ.

    ಆದರೆ ಶ್ರೀರಾಮ ಫೈನಾನ್ಸ್ ಹೆಡ್ ಆಫೀಸ್ ಬಾಂಬೆಯಲ್ಲಿರೋದ್ರಿಂದ ಲೋನ್ ಕ್ಲಿಯರ್ ಆಗಿ ಬರೋದು ತಡವಾಗಿದೆ. ಲೋನ್ ಕ್ಲೀಯರ್ ಆಗಿ ಬಂದ ನಂತರ ಲಾರಿ ಮಾಲೀಕ ನಾಜೀರ್ ಏಪ್ರಿಲ್ 13, 2018 ರಂದು ಬಂದು ಲಾರಿ ಮಾಲೀಕ ನಾಗೇಶ್‍ಗೆ ಬಾಕಿ ಕೊಡಬೇಕಿದ್ದ ಹಣವನ್ನ ನೀಡಿ ಫಾರಂ 29-30 ಕ್ಕೆ ಸಹಿ ಹಾಕಿಸಿಕೊಂಡು ಎಲ್ಲಾ ಡಾಕ್ಯೂಮೆಂಟ್ ಪಡೆದುಕೊಂಡು ಬಂದಿದ್ದಾರೆ. ಆದರೆ ಡಾಕ್ಯೂಮೆಂಟ್ ತೆಗೆದುಕೊಂಡು ಬಂದ ನಾಜೀರ್ ಗಾಡಿಯನ್ನು ತನ್ನ ಹೆಸರಿಗೆ ಆರ್ ಟಿಓ ಕಚೇರಿಯಲ್ಲಿ ವರ್ಗಾವಣೆ ಮಾಡಿಸಿಕೊಂಡಿಲ್ಲ. ಲಾರಿ ಇನ್ನು ನಾಗೇಶ್ ಹೆಸರಿನಲ್ಲೇ ಇದೆ. ಆದರೆ ನಾಗೇಶ್ ಗಾಡಿ ಮಾರಾಟ ಮಾಡಿ ಮೂರು ತಿಂಗಳಾಗಿದೆ.

  • ನಾನು ಅನಂತ್‌ಕುಮಾರ್‌ ಹೆಗ್ಡೆ, ಪ್ರತಾಪ್ ಸಿಂಹಗಿಂತಲೂ ಪಕ್ಕಾ ಹಿಂದೂ : ಸಿಎಂ

    ನಾನು ಅನಂತ್‌ಕುಮಾರ್‌ ಹೆಗ್ಡೆ, ಪ್ರತಾಪ್ ಸಿಂಹಗಿಂತಲೂ ಪಕ್ಕಾ ಹಿಂದೂ : ಸಿಎಂ

    ಮೈಸೂರು: ನಾನು ಅನಂತ್‌ಕುಮಾರ್‌ ಹೆಗ್ಡೆ, ಪ್ರತಾಪ್ ಸಿಂಹಗಿಂತಲೂ ಪಕ್ಕಾ ಹಿಂದೂ. ನಾನು ಜಾತ್ಯಾತೀತ ಹಿಂದು. ಅವರೆಲ್ಲರೂ ಕೋಮುವಾದಿ ಹಿಂದೂಗಳು ಎಂದು ಸಿಎಂ ಸಿದ್ದರಾಮಯ್ಯನವರು ಪ್ರತಿಕ್ರಿಯಿಸಿದ್ದಾರೆ.

    ಪ್ರತಾಪ್ ಸಿಂಹ ಅವರ ಆರೋಪದ ಬಗ್ಗೆ ಮಾತನಾಡಿದ ಸಿಎಂ, ಘಟನೆ ಎಲ್ಲಿ ನಡೆದಿದೆ ಎನ್ನುವುದು ನನಗೆ ಗೊತ್ತಿಲ್ಲ. ಓವರ್ ಸ್ಪೀಡ್ ನಿಂದ ಇಲ್ಲ ಅಜಾಗರೂಕತೆಯಿಂದ ಅಪಘಾತಗಳು ಸಂಭವಿಸುತ್ತವೆ. ಈ ರೀತಿ ಕ್ರಿಮಿನಲ್ ಆಲೋಚನೆಗಳು ಮಾಡಬಾರದು ಎಂದು ತಿರುಗೇಟು ನೀಡಿದರು. ಇದನ್ನೂ ಓದಿ: ಸಚಿವ ಅನಂತ್ ಕುಮಾರ್ ಹೆಗ್ಡೆ ಕಾರ್ ಅಪಘಾತ- ಸಿಎಂಗೆ ಸಂಸದ ಪ್ರತಾಪ್ ಸಿಂಹ ಸವಾಲ್

    ಉತ್ತರ ಕರ್ನಾಟಕದಿಂದ ಕೆಲವು ಮುಖಂಡರು ನಿನ್ನೆ ಭೇಟಿ ಮಾಡಿ ಬಾದಾಮಿಯಿಂದ ಸ್ಪರ್ಧಿಸುವಂತೆ ಒತ್ತಾಯ ಮಾಡಿದ್ದಾರೆ. ಬಾದಾಮಿ ಕ್ಷೇತ್ರದಲ್ಲಿ ಸ್ವಲ್ಪ ಗೊಂದಲ ಇದೆ ಹಾಗಾಗಿ ಅಭ್ಯರ್ಥಿ ನಿರ್ಧಾರವನ್ನು ಕಾಯ್ದಿರಿಸಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹತ್ಯೆಗೆ ಯತ್ನ !

    ಇದೇ ವೇಳೆ ಸಿಎಂ ನಾಡಿನ ಜನತೆಗೆ ಬಸವ ಜಯಂತಿಯ ಶುಭಾಶಯಗಳನ್ನು ಕೋರಿದರು.

  • ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ವಿರುದ್ಧ ಬೌ..ಬೌ.., ಹಚ್..ಹಚ್.. ಪ್ರತಿಭಟನೆ

    ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ವಿರುದ್ಧ ಬೌ..ಬೌ.., ಹಚ್..ಹಚ್.. ಪ್ರತಿಭಟನೆ

    ಬೆಳಗಾವಿ: ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ವಿರುದ್ಧ ದಲಿತ ಸಂಘಟನೆಗಳಿಂದ ವಿಶಿಶ್ಟ ಬೌ..ಬೌ.., ಹಚ್..ಹಚ್ ಪ್ರತಿಭಟನೆ ನಡೆಸಲಾಯಿತು.

    ಚಿಕ್ಕೋಡಿ ಪಟ್ಟಣದ ಪ್ರವಾಸಿ ಮಂದಿರ ಎದುರು ಜಮಾಯಿಸಿದ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ಅನಂತಕುಮಾರ್ ಹೆಗ್ಡೆ ಅವರನ್ನ ನಾಯಿಗೆ ಹೋಲಿಸಿ ಹಚ್ ಹಚ್ ಎಂದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಚಿಕ್ಕೋಡಿ ತಾಲೂಕಿನ ವಿವಿಧ ಕಾರ್ಯಕ್ರಮ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಸಚಿವ ಹೆಗ್ಡೆ ಭಾಗಿಯಾಗಲಿದ್ದಾರೆ ಎಂದು ಸುದ್ದಿ ತಿಳಿದು ಕಪ್ಪು ಬಾವುಟ ಪ್ರದರ್ಶನ ಮಾಡಲು ದಲಿತ ಸಂಘಟನೆಗಳ ಕಾರ್ಯಕರತರು ಮುಂದಾಗಿದ್ದರು.

    ಕೆಲ ಸಮಯದ ಬಳಿಕ ಸಚಿವರು ಕಾರ್ಯಕ್ರಮಕ್ಕೆ ಆಗಮಿಸುತ್ತಿಲ್ಲ ಎಂಬ ವಿಷಯ ತಿಳಿದ ಕಾರ್ಯಕರ್ತರು, ಗೋ ಬ್ಯಾಕ್, ಗೋ ಬ್ಯಾಕ್ ಅಂತಾ ಸಚಿವ ಹೆಗ್ಡೆ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು. ಸಂವಿಧಾನ ಬದಲಾಯಿಸಲು ನಾವು ಬಂದಿದ್ದು ಹಾಗೂ ಬೀದಿಯಲ್ಲಿ ಬೊಗಳುವ ನಾಯಿಗೆ ತಲೆ ಕೆಡಿಸಿಕೊಳಲ್ಲ ಎಂದು ಸಚಿವ ಹೆಗ್ಡೆ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಲಾಯಿತು. ಇನ್ನೂ ಈ ಸಂದರ್ಭದಲ್ಲಿ ನೈತಿಕತೆ ಇದ್ದರೆ ಸಚಿವ ಅನಂತಕುಮಾರ್ ಹೆಗ್ಡೆ ರಾಜೀನಾಮೆ ನೀಡಬೇಕು ಎಂದು ಮುಖಂಡರು ಆಗ್ರಹಿಸಿದರು.

  • ಅವಾಜ್ ಹಾಕೋಕೆ ನಾನೇನು ಅನಂತಕುಮಾರ್ ಹೆಗ್ಡೆನಾ..? ಶಾಸಕ ಜಮೀರ್ ಅಹ್ಮದ್

    ಅವಾಜ್ ಹಾಕೋಕೆ ನಾನೇನು ಅನಂತಕುಮಾರ್ ಹೆಗ್ಡೆನಾ..? ಶಾಸಕ ಜಮೀರ್ ಅಹ್ಮದ್

    ಬೆಂಗಳೂರು: ಅವಾಜ್ ಹಾಕೋಕೆ ನಾನೇನು ಅನಂತ್ ಕುಮಾರ್ ಹೆಗ್ಡೆನಾ..? ನಾನು ತುಂಬಾ ಚಿಕ್ಕವನು, ಅವಾಜ್ ಹಾಕೋದನ್ನು ಅನಂತ್‍ಕುಮಾರ್ ಅವರಿಗೆ ಬಿಟ್ಟಿದ್ದೇವೆ ಎಂದು ವ್ಯಂಗ್ಯ ಮಾಡಿದರು.

    ಫೇಸ್ ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜಮೀರ್ ಅಹ್ಮದ್‍ರ ವಿವಾದಾತ್ಮಕ ಹೇಳಿಕೆಯೊಂದು ವೈರಲ್ ಆಗಿದ್ದರ ಬಗ್ಗೆ ಸ್ಪಷ್ಟನೆ ನೀಡುವಾಗ ಕೇಂದ್ರ ಸಚಿವರಿಗೆ ಟಾಂಗ್ ನೀಡಿದ್ದಾರೆ. ನಾನು ಯಾವುದೇ ರೀತಿಯಲ್ಲಿ ಯಾರಿಗೂ ಅವಾಜ್ ಹಾಕಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಟಿಪ್ಪು ಜಯತಿ ಆಚರಣೆಯ ಒಂದು ತಿಂಗಳು ಮೊದಲ ನೀಡಿದ್ದು, ಹಾಗಾಗಿ ಅಷ್ಟಾಗಿ ನನಗೆ ನೆನಪಿಲ್ಲ ಅಂತಾ ಅಂದ್ರು.

    ಟಿಪ್ಪು ಜಯಂತಿ ಆಚರಣೆ ಸಮೀಪವಿದ್ದಾಗ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದರು. ಈ ಮೊದಲು ಬಿ.ಎಸ್.ಯಡಿಯೂರಪ್ಪ ಅವರು ಕೆಜೆಪಿ ಪಕ್ಷದಲ್ಲಿದ್ದಾಗ ನಾಲ್ಕೈದು ಸ್ಥಳಗಳಲ್ಲಿ ಟಿಪ್ಪು ಜಯಂತಿ ಆಚರಣೆಯಲ್ಲಿ ಭಾಗಿಯಾಗಿದ್ದರು. ಜಗದೀಶ್ ಶೆಟ್ಟರ್, ಆರ್.ಅಶೋಕ್ ಮತ್ತು ಬಿಎಸ್‍ವೈ ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಬಿಜೆಪಿ ರಾಜಕೀಯ ಕಾರಣಗಳಿಂದ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದೆ. ಆ ಸಂದರ್ಭದಲ್ಲಿ ನಾನು ಹೇಳಿದ ಮಾತುಗಳು ಇಂದು ವೈರಲ್ ಆಗಿವೆ ಅಂತಾ ಹೇಳಿದರು.

    https://www.youtube.com/watch?v=Ec0gfbLSDmE

  • ಸಿದ್ದರಾಮಯ್ಯ ಗಂಡೋ, ಹೆಣ್ಣೋ ಎಂಬ ಸಂಶಯ: ಈಶ್ವರಪ್ಪ

    ಸಿದ್ದರಾಮಯ್ಯ ಗಂಡೋ, ಹೆಣ್ಣೋ ಎಂಬ ಸಂಶಯ: ಈಶ್ವರಪ್ಪ

    ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ಗಂಡೋ ಹೆಣ್ಣೋ ಎಂಬ ಸಂಶಯ ಇದೆ ಎಂದು ಬಿಜೆಪಿಯ ವಿರೋಧ ಪಕ್ಷದ ನಾಯಕ ಈಶ್ವರಪ್ಪ ನಾಲಿಗೆ ಹರಿಬಿಟ್ಟಿದ್ದಾರೆ.

    ಜಿಲ್ಲೆಯಲ್ಲಿ ಸಭೆಯೊಂದರಲ್ಲಿ ಮಾತನಾಡಿದ ಈಶ್ವರಪ್ಪ, ಸಿದ್ದರಾಮಯ್ಯ ಗಂಡೋ, ಹೆಣ್ಣೋ? ಎಂಬ ಸಂಶಯ ಇದೆ. ಸಮಾಜ ಕಲ್ಯಾಣ ಇಲಾಖೆಯ ಸಚಿವ ಆಂಜನೇಯನನ್ನು ಗಂಡು ಅಂತಾ ಕರೀಬೇಕೋ ಹೆಣ್ಣು ಅಂತಾ ಕರೀಬೇಕೋ ಅಂತಾ ಗೊತ್ತಿಲ್ಲ ಎಂದು ವ್ಯಂಗ್ಯವಾಗಿ ಮಾತನಾಡಿದರು.

    ಆಂಜನೇಯ ಸಿಎಂ ಅವರ ನಾಯಿ. ಯಾವಾಗಲೂ ಅವರ ಬಾಲ ಹಿಡಿದುಕೊಂಡು ಹೋಗುತ್ತಿರುತ್ತಾರೆ. ಅವರ ಬಾಲ ಅಲ್ಲಾಡಿಸುವುದು ಇನ್ನೂ ನಾಲ್ಕೈದು ತಿಂಗಳು ಮಾತ್ರ ಎಂದು ಬಾಯಿಗೆ ಬಂದಂತೆ ಮಾತಾಡಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ ಕುಮ್ಮಕ್ಕಿನಿಂದ ಪೊಲೀಸರು ಇನ್ನೊಂದು ಕೇಸ್ ಹಾಕಿದ್ರೆ ನಾವು ಜಂಗಿ ಕುಸ್ತಿ ಆಡೋಕೆ ರೆಡಿ ಇದ್ದೇವೆ. ಬಡವರ ದುಡ್ಡಿನಿಂದ ನಿಮಗೆ ಸಂಬಳ ನೀಡುತ್ತಿರುವುದು. ಕಾಂಗ್ರೆಸ್ ಕುಮ್ಮಕ್ಕಿನಿಂದ ಕೇಸ್ ಹಾಕಿದ್ರೆ ಎಚ್ಚರಿಕೆ ಎಂದು ಎಸ್‍ಪಿ ಲಕ್ಷ್ಮಣ್ ನಿಂಬರಗಿ ವಿರುದ್ಧ ಆಕ್ರೋಶದಿಂದ ಹೇಳಿದ್ದಾರೆ.

    ಶುಕ್ರವಾರ ಬೆಳಗಾವಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ನಾಲಗೆ ಹರಿಬಿಟ್ಟು, ಸಿದ್ದರಾಮಯ್ಯ ವೋಟಿಗಾಗಿ ಯಾರ ಬೂಟು ನೆಕ್ಕೋಕೂ ರೆಡಿಯಾಗಿರುತ್ತಾರೆ ಅಂತೆಲ್ಲಾ ಬಾಯಿಗೆ ಬಂದಂತೆ ಮಾತನಾಡಿದ್ದರು.

    ಇದನ್ನು ಓದಿ: ‘ನಾನು ಗಂಡು, ನನಗೆ ಎರಡು ಮಕ್ಕಳಿವೆ.., ಬೇಕಾದ್ರೆ ನಿನ್ನ ಮನೆಗೆ ಬಂದು ತೋರಿಸ್ತೀನಿ’ ಎಂದ ಜೆಡಿಎಸ್ ಶಾಸಕ

    ಇದನ್ನು ಓದಿ: ತಲೆ ತಿರುಕ, ಬುರುಡೆ ದಾಸ ಸಿಎಂರಿಂದ ರಾಜ್ಯಕ್ಕೆ ಮೋಸವಾಗ್ತಿದೆ: ಬಿಎಸ್‍ವೈ