Tag: ಅನಂತಕುಮಾರ್ ಹೆಗ್ಡೆ

  • ಮುಸ್ಕಾನ್‌ರನ್ನು ತನಿಖೆ ಮಾಡಿದರೆ ತಪ್ಪೇನೂ ಇಲ್ಲ: ಸುಮಲತಾ

    ಮುಸ್ಕಾನ್‌ರನ್ನು ತನಿಖೆ ಮಾಡಿದರೆ ತಪ್ಪೇನೂ ಇಲ್ಲ: ಸುಮಲತಾ

    ಬೆಂಗಳೂರು: ಮಂಡ್ಯದ ಮುಸ್ಕಾನ್‌ ಅವರನ್ನು ತನಿಖೆ ನಡೆಸಿದರೆ ತಪ್ಪೇನೂ ಇಲ್ಲ. ತನಿಖೆ ನಡೆದರೆ ಸತ್ಯ ಹೊರಗೆ ಬರುತ್ತದೆ ಎಂದು ಸಂಸದೆ ಸುಮಲತಾ ಅಂಬರೀಶ್ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಮುಸ್ಕಾನ್‍ಗೆ ಸಂಘಟನೆ ಸಂಪರ್ಕ ಬಗ್ಗೆ ತನಿಖೆಗೆ ಆಗ್ರಹಿಸಿ ಸಿಎಂಗೆ ಸಂಸದ ಅನಂತ್ ಕುಮಾರ್ ಹೆಗ್ಡೆ ಪತ್ರ ಬರೆದಿರುವುದಕ್ಕೆ ಪ್ರತಿಕ್ರಿಯಿಸಿದರು. ಸಂಘಟನೆಗಳು, ಸಮುದಾಯದ ಮುಖಂಡರ ಹೇಳಿಕೆಗಳಿಗೆ ಬಡವರು ಬಲಿಯಾಗುತ್ತಿದ್ದಾರೆ. ಎಲ್ಲರೂ ಶಾಂತಿಯಿಂದ ಇರಬೇಕಾಗುತ್ತದೆ. ಸರ್ಕಾರ ಸುಮ್ಮನೆ ಇಲ್ಲ. ಪ್ರಚೋದನೆ ಯಾರು ಮಾಡ್ತಾರೆ ಎಂದು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕಿದೆ ಎಂದರು.

    ತನಿಖೆ ಆಗಬೇಕು, ವೀಡಿಯೋದಲ್ಲಿ ಹೇಳಿರೋದು ನಿಜವಾ ಇಲ್ವಾ ಅಂತ ಗೊತ್ತಾಗುತ್ತದೆ. ಇನ್ನೊಬ್ರು ಆ ವೀಡಿಯೋ ನಕಲಿ ಅಂದರು. ತನಿಖೆ ಆದರೆ ಸಂಚು ಇದೆಯಾ ಇಲ್ವಾ ಎಂದು ತಿಳಿಯುತ್ತದೆ. ಮಂಡ್ಯದಲ್ಲಿ, ರಾಜ್ಯದಲ್ಲಿ ವಾತಾವರಣ ಶಾಂತಿಯಿಂದಿದೆ ಎಂದು ತಿಳಿಸಿದರು. ಇದನ್ನೂ ಓದಿ: ನನ್ನ ಮಗಳಿಗೆ ಬಂದ ಹಣವನ್ನು ಜನ ಸೇವೆಗೆ ಕೊಡ್ತೀನಿ: ಮುಸ್ಕಾನ್‌ ತಂದೆ

    ಸಮುದಾಯದ ನಾಯಕರು, ರಾಜಕೀಯ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕು. ಯಾರೂ ಶಾಂತಿ ವಾತಾವರಣ ಕೆಡಿಸುವ ಹೇಳಿಕೆ ಕೊಡಬಾರದು. ರಾಜಕೀಯ ಲಾಭಕ್ಕೆ ಹೇಳಿಕೆಗಳನ್ನು ಯಾರೂ ಕೊಡಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಮುಸ್ಕಾನ್‍ರನ್ನು ತನಿಖೆ ನಡೆಸುವಂತೆ ಸಿಎಂಗೆ ಅನಂತ್‍ಕುಮಾರ್ ಹೆಗ್ಡೆ ಪತ್ರ

    ಇದೇ ವೇಳೆ ಬಿಜೆಪಿಗೆ ಸೇರುವುದರ ಕುರಿತು ಪ್ರತಿಕ್ರಿಯಿಸಿದ ಅವರು, ಎಲೆಕ್ಷನ್‍ಗೆ ನಿಂತಾಗಿನಿಂದ ಈ ಮಾತು ಕೇಳಿಬರ್ತಿದೆ. ನನ್ನ ಜಿಲ್ಲೆಯ ಅಭಿವೃದ್ಧಿ ನನ್ನ ಉದ್ದೇಶವಾಗಿದೆ. ಈಗ ಯಾವುದೇ ಪಕ್ಷ ಸೇರಲು ತಾಂತ್ರಿಕ ಸಮಸ್ಯೆ ಇದೆ. ಜಿಲ್ಲೆಯ ಜನ ಹೇಗೆ ಹೇಳ್ತಾರೆ ಹಾಗೆ ಮಾಡುತ್ತೇನೆ. ಒಂದು ಪಕ್ಷ ಸೇರೋದಿಕ್ಕೆ ಮಂಡ್ಯದ ಜನ ಹೇಳ್ಬೇಕೇ ಹೊರತು ನಾನಾಗಿ ನಾನು ನಿರ್ಧಾರ ತಗೊಳ್ಳಕ್ಕಾಗಲ್ಲ. ಜನ ಹೇಳಿದ್ದಕ್ಕೆ ಪಕ್ಷೇತರ ಆಗಿ ಸ್ಪರ್ಧಿಸಿದ್ದೆ. ಈಗ ಜನ ಅಭಿಷೇಕ್ ಅವರನ್ನೂ ಚುನಾವಣೆಗೆ ನಿಲ್ಸಿ ಅಂತಿದಾರೆ. ಚುನಾವಣೆಗೆ ಸ್ಪರ್ಧೆ ಮಾಡುವ ನಿರ್ಧಾರ ಅಭಿಷೇಕ್‍ಗೆ ಬಿಟ್ಟಿದ್ದು ಎಂದು ಸ್ಪಷ್ಟ ಪಡಿಸಿದರು. ಇದನ್ನೂ ಓದಿ: ಕುರಾನ್ ಮೇಲೆ ದೇಶ ನಡೆಯಲ್ಲ, ತಂದೆಯ ಜೊತೆಗೆ ಮುಸ್ಕಾನ್‌ಳನ್ನು ಬಂಧಿಸಬೇಕು: ಮುತಾಲಿಕ್

  • ಎಲ್ಲಿ ವಿರೋಧ ಇರುತ್ತೋ ಅಲ್ಲಿಯೇ ಹೊಸಕಿ ಹಾಕಬೇಕು: ಮೀನುಗಾರರ ವಿರುದ್ಧ ಅನಂತಕುಮಾರ್ ಹೆಗ್ಡೆ ಕಿಡಿ

    ಎಲ್ಲಿ ವಿರೋಧ ಇರುತ್ತೋ ಅಲ್ಲಿಯೇ ಹೊಸಕಿ ಹಾಕಬೇಕು: ಮೀನುಗಾರರ ವಿರುದ್ಧ ಅನಂತಕುಮಾರ್ ಹೆಗ್ಡೆ ಕಿಡಿ

    ಕಾರವಾರ: ಎಲ್ಲಿ ವಿರೋಧ ಕಂಡುಬರುತ್ತೋ ಅಲ್ಲಿಯೇ ಹೊಸಕಿ ಹಾಕಬೇಕು ಎಂದು ಸಂಸದ ಅನಂತಕುಮಾರ್ ಹೆಗ್ಡೆ ಕಾರವಾರದ ಮೀನುಗಾರರ ವಿರುದ್ಧ ಕಿಡಿಕಾರಿದ್ದಾರೆ.

    ಸಾಗರಮಾಲಾ ಯೋಜನೆ ವಿರೋಧಿಸಿ ಕಾರವಾರದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಹೋರಾಟ ವಿಚಾರವಾಗಿ ಕುಮಟಾದಲ್ಲಿ ಮಾತನಾಡಿದ ಸಂಸದರು, ಜನರಿಗೆ, ಊರಿಗೆ ಅಭಿವೃದ್ಧಿ ಬೇಕಾಗಿದೆ. ನಮ್ಮ ಮುಂದಿನ ತಲೆಮಾರಿಗೋಸ್ಕರ ಅಭಿವೃದ್ಧಿ ಬೇಕಾಗಿದೆ. ಶಾಶ್ವತವಾಗಿ ಅಧಿಕಾರದ ಖುರ್ಚಿ ಮೇಲೆ ಕುಳಿತುಕೊಳ್ಳಲು ನಾನು ಖಂಡಿತ ಬಂದಿಲ್ಲ. ಆದರೆ ಯಾವ ಹೆಜ್ಜೆ ಇಟ್ಟಿದ್ದೀನೋ ಅದನ್ನ ಮಾಡಿಯೇ ಹೋಗುತ್ತೇನೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯದಲ್ಲೇ ಮೊದಲ ಬೃಹತ್ ವಾಣಿಜ್ಯ ಬಂದರಾಗಿ ರೂಪಗೊಳ್ಳಲಿದೆ ಕಾರವಾರ ಬಂದರು

    ಮಂಗಳೂರಿನಲ್ಲಿ, ಗೋವಾದಲ್ಲಿ ಬಂದರುಗಳು ಅಭಿವೃದ್ಧಿಯಾಗಿವೆ. ಅಲ್ಲಿನ ಮೀನುಗಾರರ ಬದುಕು ಹಾಳಾಗಿ ಹೋಗಿದೆಯಾ? ಸಾಗರಮಾಲಾ ಯೋಜನೆಯಿಂದ ರಾಜ್ಯ ಹಾಗೂ ಉತ್ತರ ಕನ್ನಡ ಜಿಲ್ಲೆಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು.

    ಸಾಗರಮಾಲಾ ಯೋಜನೆ ವಿರೋಧಿಸಿ ಕಾರವಾರದಲ್ಲಿ ಮೀನುಗಾರರು ಪ್ರತಿಭಟನೆ ನಡೆಸುತ್ತಿದ್ದು, ಕಾಮಗಾರಿ ನಿಲ್ಲಿಸುವಂತೆ ಕಾರವಾರ ತಾಲೂಕು ಬಂದ್ ಮಾಡಿದ್ದರು. ಅಷ್ಟೇ ಅಲ್ಲದೆ ಸಂಸದ ಅನಂತಕುಮಾರ್ ಹೆಗ್ಡೆ ಹಾಗೂ ಕಾರವಾರದ ಶಾಸಕಿ ರೂಪಾಲಿ ನಾಯ್ಕ ಅವರ ಭಾವಚಿತ್ರಕ್ಕೆ ಸಗಣಿ ಬಳಿದು ಚಪ್ಪಲಿ ಹಾರ ಹಾಕಿದ್ದರು. ಜೊತೆಗೆ ಅನಂತಕುಮಾರ್ ಹೆಗ್ಡೆ ಭಾವಚಿತ್ರಕ್ಕೆ ಶಾಸಕಿ ರೂಪಾಲಿ ನಾಯ್ಕ ಮುಖ ಹಾಗೂ ಶಾಸಕಿ ರೂಪಾಲಿ ನಾಯ್ಕ ಮುಖಕ್ಕೆ ಅನಂತಕುಮಾರ್ ಹೆಗ್ಡೆ ಭಾವ ಚಿತ್ರ ಅಂಟಿಸಿ ಪ್ರತಿಭಟನೆಯಲ್ಲಿ ಪ್ರದರ್ಶನ ಮಾಡಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.

    ಏನಿದು ಸಾಗರಮಾಲ? ಯೋಜನೆ ರೂಪರೇಷೆ ಏನು?
    ಸಾಗರಮಾಲಾ ಯೋಜನೆಯು ಬಂದರು ವಿಸ್ತರಣೆಯಾಗಿದ್ದು, ವಾಣಿಜ್ಯ ಬಂದರನ್ನು ರಾಷ್ಟ್ರ ಮಟ್ಟದಲ್ಲಿ ಮೇಲ್ದರ್ಜೆಗೆ ಏರಿಸುವ ಯೋಜನೆಯಾಗಿದೆ. ಸದ್ಯ ಕಾರವಾರದ ವಾಣಿಜ್ಯ ಬಂದರು ವಿಸ್ತರಣೆಗಾಗಿ ಕೇಂದ್ರ ಸರ್ಕಾರ ಸಾಗರ ಮಾಲಾ ಯೋಜನೆ ಅಡಿ ಹಣ ಬಿಡುಗಡೆ ಮಾಡಿದೆ. ಸಾಗರಮಾಲಾ ಮೂಲಕ ರಾಜ್ಯದ ಅತಿದೊಡ್ಡ ಸರ್ವಋತು ವಾಣಿಜ್ಯ ಬಂದರನ್ನಾಗಿ ರೂಪಿಸುವ ಯೋಜನೆ ಇದಾಗಿದೆ.

    ಬಂದರಿನ ಬೈತಖೋಲ್ ಭಾಗದಿಂದ ಇರುವ 250 ಮೀಟರ್ ಜಟ್ಟಿಯನ್ನು ಇನ್ನೂ 145 ಮೀಟರ್ ವಿಸ್ತರಿಸುವ ಯೋಜನೆಗೆ ಸಾಗರ ಮಾಲಾ ಯೋಜನೆಯಡಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ವಾಣಿಜ್ಯ ಬಂದರಿನಲ್ಲಿ ಹಡಗು ನಿಲ್ಲುವ 512 ಮೀಟರ್ ಉದ್ದದ ಜಟ್ಟಿ ಇದೆ. ಹಂತ ಹಂತವಾಗಿ ಬಂದರನ್ನು ವಿಸ್ತರಿಸುವ ಯೋಜನೆ ಇದಾಗಿದ್ದು, 250 ಕೋಟಿ ರೂ.ನಿಂದ 511 ಕೋಟಿ ರೂ. ತನಕ ಯೋಜನೆಯ ಒಟ್ಟು ವೆಚ್ಚ ಏರಲಿದೆ ಎನ್ನಲಾಗುತ್ತಿದೆ.

  • ಪ್ರಧಾನಿಯೇ ಜನಸೇವಕರಾದ ಮೇಲೆ ಸಂಸದರು ಯಾವ ಲೆಕ್ಕ – ಸೂಲಿಬೆಲೆ

    ಪ್ರಧಾನಿಯೇ ಜನಸೇವಕರಾದ ಮೇಲೆ ಸಂಸದರು ಯಾವ ಲೆಕ್ಕ – ಸೂಲಿಬೆಲೆ

    – ರಾಜಕಾರಣ ಇರುವುದು ಸೇವೆಗಾಗಿ, ಧಿಮಾಕಿಗಾಗಿ ಅಲ್ಲ

    ಚಿತ್ರದುರ್ಗ: ಸಂಸದರು ಗೆಲ್ಲುವ ಮುನ್ನ ಜನರೊಂದಿಗೆ ಇದ್ದಂತಹ ಔದಾರ್ಯವನ್ನು ಜನಪ್ರತಿನಿಧಿಯಾದ ಮೇಲೂ ಉಳಿಸಿಕೊಳ್ಳಬೇಕೆಂದು ಟೀಂ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

    ಕೋಟೆನಾಡು ಚಿತ್ರದುರ್ಗದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರೇ ಜನಸೇವಕರಾದ ಮೇಲೆ ಸಂಸದರು ಯಾವ ಲೆಕ್ಕ ಎಂದು ಪ್ರಶ್ನಿಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಆಸ್ಪತ್ರೆ ವಿಚಾರವಾಗಿ ಜನರು ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರನ್ನು ಭೇಟಿಯಾಗಲು ಬಂದಾಗ ಅವರು ತೋರಿಸಿರುವ ವರ್ತನೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

    ಸಂಸದರ ನಡೆಯನ್ನು ಇಡೀ ಕರ್ನಾಟಕದ ಜನತೆ ಮಾತನಾಡುತ್ತಿದ್ದು, ಸಹಜವಾಗಿ ಅದು ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಕೊನೆಪಕ್ಷ ಜನರು ಜನಪ್ರತಿನಿಧಿ ಬಳಿ ಬಂದಾಗ ಪ್ರೀತಿಯಿಂದ ಮಾತನಾಡಿಸಿ, ಈ ವಿಚಾರವಾಗಿ ಸಿಎಂ ಜೊತೆ ಮಾತನಾಡುತ್ತೇನೆಂಬ ಭರವಸೆಯಾದರೂ ನೀಡಬೇಕಿತ್ತು ಎಂದು ಸೂಲಿಬೆಲೆ ಬೇಸರ ವ್ಯಕ್ತಪಡಿಸಿದರು.

    ಬಿಜೆಪಿ ಸಂಸದರು ಯಾರು ಸಹ ತಮ್ಮ ವೈಯುಕ್ತಿಕ ವರ್ಚಸ್ಸಿನಿಂದ ಗೆದ್ದಿಲ್ಲ. ಪ್ರಧಾನಿ ಮೋದಿಯವರ ಅಭಿವೃದ್ಧಿ ಹಾಗು ಹಿಂದೂ ರಾಷ್ಟ್ರೀಯ ಚಿಂತನೆಗಳ ಆಧಾರದ ಮೇಲೆ ಗೆದ್ದಿದ್ದಾರೆ. ಘಟಬಂಧನ್ ಕಟ್ಟಿಕೊಂಡು ಕುಮಾರಸ್ವಾಮಿ ರಾಜ್ಯಕ್ಕೆ ಬಂದಾಗ ಬಿಜೆಪಿ ಸಂಸದರೆಲ್ಲರೂ ಗೆಲ್ಲುವ ಆಸೆಯನ್ನು ಬಿಟ್ಟಿದ್ದರು. ಕೇವಲ ಆರು ಅಥವಾ ಏಳು ಸೀಟು ಬರಬಹುದೆಂಬ ಲೆಕ್ಕಾಚಾರ ಶುರುವಾಗಿತ್ತು ಎಂದರು.

    ನಮ್ಮ ರಾಜ್ಯದಲ್ಲಿ ಮೋದಿ ಮುಖ ನೋಡಿ 25 ಸ್ಥಾನಗಳನ್ನು ಬಿಜೆಪಿಗೆ ನೀಡಿದ್ದಾರೆ. ಹೀಗಾಗಿ ಬಿಜೆಪಿ ಎಂಪಿಗಳು ಸಹ ಜನರಿಗೆ ಪೂರಕವಾಗಿ ಕೆಲಸ ಮಾಡಬೇಕು. ಯಾರು ಸ್ಪಷ್ಟವಾಗಿ ಸ್ವಂತ ವರ್ಚಸ್ಸಿನಿಂದ ಗೆದ್ದಿದ್ದೇನೆಂದು ಹೇಳಲು ಅರ್ಹರಿಲ್ಲ. ಜಾತಿ ಬೆಂಬಲದಿಂದ ಗೆದ್ದಿದ್ದೇನೆಂದರೆ ಮತದಾರರು ಒಪ್ಪುವುದಿಲ್ಲ ಎಂದು ಕೇಂದ್ರ ಸಚಿವ ಸದಾನಂದಗೌಡರಿಗೆ ಟಾಂಗ್ ನೀಡಿದರು.

    ಜಾತಿಗಾಗಿ ಸದಾನಂದಗೌಡರನ್ನು ಮಂತ್ರಿ ಮಾಡಿದರೆ ಮೋದಿಯೂ ಎಡವಿದಂತೆ. ಇದು ಸಂಸದರ ವಿರುದ್ಧದ ಅಪಸ್ವರ ಅಲ್ಲ. ಜನಸೇವೆಗೆ ಪೂರಕ ಸ್ಪಂದನೆ ಬೇಕೆಂಬ ಒತ್ತಾಯ. ರಾಜಕಾರಣ ಸೇವೆಗಾಗಿ ಇರವಂಥದ್ದು ಹೊರತು ಧಿಮಾಕಿಗಾಗಿ ಅಲ್ಲ. ಮೋದಿಯವರ ಪ್ರಭಾವದಿಂದ ಗೆದ್ದಿರುವ ಸಂಸದರೆಲ್ಲರೂ ಗೆಲ್ಲುವ ಮುಂಚೆ ಇದ್ದಂತಹ ಔದಾರ್ಯತೆ ಸಂಸದರಾದ ಮೇಲೂ ಮೈ ಗೂಡಿಸಿಕೊಳ್ಳಬೇಕೆಂದು ಹೇಳಿದರು.

  • ಅನಂತಕುಮಾರ್ ಹೆಗ್ಡೆ ರಾಜಕೀಯಕ್ಕೆ ಅನ್‍ಫಿಟ್: ಮಾಜಿ ಸಿಎಂ

    ಅನಂತಕುಮಾರ್ ಹೆಗ್ಡೆ ರಾಜಕೀಯಕ್ಕೆ ಅನ್‍ಫಿಟ್: ಮಾಜಿ ಸಿಎಂ

    – ಸುಮಲತಾ ಬಗ್ಗೆ ಸಚಿವ ರೇವಣ್ಣ ಹೇಳಿಕೆ ಸರಿಯಿಲ್ಲ
    – ಈಶ್ವರಪ್ಪನನ್ನು ಜನ ಹುಚ್ಚ ಅಂತಾರೆ

    ಉಡುಪಿ: ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ರಾಜಕೀಯದಲ್ಲಿ ಮುಂದುವರಿಯಲು ಯೋಗ್ಯ ವ್ಯಕ್ತಿಯಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

    ನಗರದಲ್ಲಿ ಮಾತನಾಡಿದ ಮಾಜಿ ಸಿಎಂ, ಅನಂತಕುಮಾರ್ ಹೆಗ್ಡೆ ಅವರಿಗೆ ಕಾನೂನು, ಸಂವಿಧಾನದ ಬಗ್ಗೆ ಜ್ಞಾನವಿಲ್ಲ. ಬಾಯಿಗೆ ಬಂದಂತೆ ಮಾತನಾಡುತ್ತಾನೆ. ಹೀಗಾಗಿ ಅಂತವರು ರಾಜಕಾರಣದಲ್ಲಿ ಇರಬಾರದು. ಅವರ ಬಗ್ಗೆ ಪ್ರತಿಕ್ರಿಯೆ ನೀಡದೇ ಇರುವುದು ಉತ್ತಮ ಎಂದು ಕುಟುಕಿದರು. ಇದನ್ನು ಓದಿ : ಮುಸಲ್ಮಾನನ ಮಗ ಗಾಂಧಿ ಹೇಗಾದ ಎನ್ನುವ ಪ್ರಶ್ನೆಗೆ ಕಾಂಗ್ರೆಸ್ ಉತ್ತರ ಕೊಡಲಿ: ಅನಂತಕುಮಾರ್ ಹೆಗ್ಡೆ

    ಸುಮಲತಾ ಅಂಬರೀಶ್ ಅವರ ಬಗ್ಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿಕೆ ಸರಿಯಿಲ್ಲ. ಇಟ್ ಈಸ್ ನಾಟ್ ಇನ್ ಗುಡ್ ಟೇಸ್ಟ್ ಎಂದ ಅವರು, ಮಂಡ್ಯದಲ್ಲಿ ಬಹುತೇಕ ಜೆಡಿಎಸ್ ಅಭ್ಯರ್ಥಿಯೇ ಸ್ಪರ್ಧಿಸುತ್ತಾರೆ. ಕಾಂಗ್ರೆಸ್ ಅಭ್ಯರ್ಥಿ ಇರಲ್ಲ ಎಂದು ಹೇಳಿದರು.

    ಲೋಕಸಭಾ ಚುನಾವಣೆಯಲ್ಲಿ 20 ಸೀಟು ಗೆಲ್ಲುತ್ತೇವೆ. ನಾವು ಚುನಾವಣೆ ಎದುರಿಸಲು ಸಿದ್ಧರಾಗಿದ್ದೇವೆ. ಭಾರತೀಯ ಸೇನೆಯನ್ನು ಬಿಜೆಪಿ ದುರುಪಯೋಗ ಮಾಡಿಕೊಂಡಿದೆ. ಈ ಹಿಂದೆ ಯುದ್ಧಗಳು ಆಗಿದೆ. ಪಾಕಿಸ್ತಾನದ ಜೊತೆ ಸಂಘರ್ಷ ನಡೆಯುತ್ತಲೇ ಇದೆ. ಆದರೆ ಸೇನೆಯನ್ನು ಚುನಾವಣೆಗೆ ಬಳಸಿಕೊಳ್ಳಬಾರದು. ಯೋಧರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿರುತ್ತಾರೆ. ಯಾವುದೇ ಪಕ್ಷ ಇದರ ಲಾಭ ತೆಗೆದುಕೊಳ್ಳಬಾರದು ಎಂದು ಬಿಜೆಪಿಯ ವಿರುದ್ಧ ಕಿಡಿಕಾರಿದರು.

    ನಾನು ಯಾವ ಕ್ಷೇತ್ರದಿಂದಲೂ ಸ್ಪರ್ಧಿಸುವುದಿಲ್ಲ. ಕೊಪ್ಪಳದಿಂದ ಸ್ಪರ್ಧೆಸುತ್ತೇನೆ ಎನ್ನುವುದು ಸುಳ್ಳು ಎಂದ ಅವರು, ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಈ ಹಿಂದೆ ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಸೋತಿದ್ದರು. ಆದಲೇ ರಾಜಕೀಯ ಸನ್ಯಾಸ ತಗೆದುಕೊಳ್ಳಬೇಕಿತ್ತು. ಈಗ್ಯಾಕೆ ಸವಾಲಿನ ಮಾತು. ಜನ ಈಶ್ವರಪ್ಪನನ್ನು ಹುಚ್ಚರು ಅಂತಾರೆ ಎಂದು ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಅಪ್ಪ ಮುಸ್ಲಿಂ, ಅಮ್ಮ ಕ್ರಿಶ್ಚಿಯನ್, ಮಗ ಹಿಂದು – ಜಗತ್ತಿನಲ್ಲಿ ಸಿಗದ ಹೈಬ್ರಿಡ್ ಪುತ್ರ: ಅನಂತಕುಮಾರ್ ಹೆಗ್ಡೆ ವ್ಯಂಗ್ಯ

    ಅಪ್ಪ ಮುಸ್ಲಿಂ, ಅಮ್ಮ ಕ್ರಿಶ್ಚಿಯನ್, ಮಗ ಹಿಂದು – ಜಗತ್ತಿನಲ್ಲಿ ಸಿಗದ ಹೈಬ್ರಿಡ್ ಪುತ್ರ: ಅನಂತಕುಮಾರ್ ಹೆಗ್ಡೆ ವ್ಯಂಗ್ಯ

    ಕಾರವಾರ: ದೇವಾಲಯಗಳಿಗೆ ಎಂದು ಭೇಟಿ ನೀಡದ ಕೆಲ ಮಂದಿ ಇಂದು ಮತಕ್ಕಾಗಿ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ. ಅವರ ಜಾತ್ಯಾತೀತ ಭಾವನೆ ಮತಗಳಿಗಾಗಿ ಬದಲಾಗಿದ್ದು, ಮಸೀದಿ ಹಾಗೂ ಚರ್ಚ್‍ಗೆ ಹೋಗುವವರು ದೇವಸ್ಥಾನಕ್ಕೆ ಹೋಗಿ ನಾನು ಹಿಂದು ಎನ್ನುತ್ತಿದ್ದಾರೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ವ್ಯಂಗ್ಯವಾಡಿದ್ದಾರೆ.

    ಅಪ್ಪ ಮುಸ್ಲಿಂ, ಅಮ್ಮ ಕ್ರಿಶ್ಚಿಯನ್ ಆದರೆ ಮಗ ಹಿಂದು. ಜಗತ್ತಿನಲ್ಲಿ ಸಿಗದ ಹೈಬ್ರಿಡ್ ಪುತ್ರ ಸಿಕ್ಕಿದ್ದಾರೆ. ಅಮ್ಮ ಅಪ್ಪನ ಪರಿಚಯ ಇಲ್ಲದವರು ಇಂದು ದೇವರ ಪೂಜೆ ಮಾಡುತ್ತಿದ್ದಾರೆ. ಇಂತಹ ಹೈಬ್ರಿಡ್ ಪುತ್ರರು ಬೇಕು ಎಂದರೆ ಅದು ಕಾಂಗ್ರೆಸ್ ನಲ್ಲಿ ಮಾತ್ರ ಇದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿಯನ್ನು ಪರೋಕ್ಷವಾಗಿ ಲೇವಡಿ ಮಾಡಿದರು.

    ಸಿದ್ದಾಪುರದ ಶಂಕರಮಠದಲ್ಲಿ ನಡೆದ ಕಾರ್ಯಕರ್ತರ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಜನಪರ ಸರ್ಕಾರ. 65 ವರ್ಷ ಆಡಳಿತ ನಡೆಸಿದವರು ಜನರನ್ನು ಪ್ರಾಣಿ ಸಂಗ್ರಹಾಲಯದಲ್ಲಿ ಇಟ್ಟ ರೀತಿ ನಡೆಸಿಕೊಂಡರು. ಜನರನ್ನು ಭಿಕ್ಷುಕರ ರೀತಿ ನಡೆಸಿಕೊಂಡಿದ್ದಾರೆ. ಜನರ ಭಾವನೆಗಳ ಜೊತೆ ಚಕ್ಕಂದವಾಡಿದ್ದು, ಆದರೆ ಇಂದು ನಮ್ಮ ಸರ್ಕಾರ ಜನರ ಖಾತೆಗೆ ನೇರವಾಗಿ ಹಣ ಜಮಾ ಮಾಡುವ ವ್ಯವಸ್ಥೆ ಮಾಡಿದೆ. ಕೆಲವು ಯೋಜನೆಗಳಲ್ಲಿ ರಾಜ್ಯದ ಕಂಬಳದ ಕೋಣಗಳ ಸರ್ಕಾರ ಹಣವನ್ನು ದುರುಪಯೋಗ ಮಾಡಿದೆ ಎಂದು ಆರೋಪ ಮಾಡಿದರು.

    ಲೋಕಸಭಾ ಚುನಾವಣೆಯಲ್ಲಿ ನಾವು 300 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಈ ದೇಶವನ್ನು ಭಾರತೀಯ ರಕ್ತವೇ ಆಳಬೇಕು, ವಿದೇಶಿ ಇಟಲಿ ರಕ್ತ ಬೇಡ. ನಮ್ಮ ದೇಶವನ್ನು ಇಷ್ಟು ದಿನ ಆಳಿದ ಕಾಂಗ್ರೆಸ್ ದಿವಾಳಿಯಾಗಬೇಕು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸುಮಲತಾ ಅಂಬರೀಶ್ ಸ್ಪರ್ಧೆಗೆ ನನ್ನ ಬೆಂಬಲವಿದೆ: ಎಂ.ಬಿ.ಪಾಟೀಲ್

    ಸುಮಲತಾ ಅಂಬರೀಶ್ ಸ್ಪರ್ಧೆಗೆ ನನ್ನ ಬೆಂಬಲವಿದೆ: ಎಂ.ಬಿ.ಪಾಟೀಲ್

    – ಮಂಡ್ಯ ಕ್ಷೇತ್ರ ಕಾಂಗ್ರೆಸ್‍ಗೆ ಹಂಚಿಕೆಯಾದ್ರೆ ಸುಮಲತಾ ನಮ್ಮ ಅಭ್ಯರ್ಥಿ
    – ಹಿಂದೂ, ಮುಸ್ಲಿಂ ಮಧ್ಯೆ ಜಗಳ ಹಚ್ಚೋ ಅನಂತಕುಮಾರ್ ಹೆಗ್ಡೆಗೆ ಜನ ಬುದ್ಧಿ ಕಲಿಸ್ತಾರೆ

    ಬಾಗಲಕೋಟೆ: ನಟಿ ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನನ್ನ ಬೆಂಬಲವಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

    ಜಿಲ್ಲೆ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಸೀಟು ಹಂಚಿಕೆಯಾಗಬೇಕಿದೆ. ಮಂಡ್ಯ ಕ್ಷೇತ್ರ ಜೆಡಿಎಸ್‍ಗೆ ಹೋಗುತ್ತೋ ಅಥವಾ ಕಾಂಗ್ರೆಸ್‍ಗೆ ಬರುತ್ತೋ ಗೊತ್ತಿಲ್ಲ. ಒಂದು ವೇಳೆ ಮಂಡ್ಯ ಕ್ಷೇತ್ರ ಕಾಂಗ್ರೆಸ್ಸಿಗೆ ಹಂಚಿಕೆಯಾದರೆ ಸುಮಲತಾ ಅವರೇ ನಮ್ಮ ಅಭ್ಯರ್ಥಿ. ಸುಮಲತಾ ಅಂಬರೀಶ್ ಅವರ ಹೆಸರು ಶಿಫಾರಸ್ಸಿಗೆ ನನ್ನ ಮೊದಲ ಬೆಂಬಲವಿದೆ ಎಂದು ಹೇಳಿದರು.

    ದಿವಂಗತ ಅಂಬರೀಶ್ ನನ್ನ ಆತ್ಮೀಯ ಸ್ನೇಹಿತ. ಅವರ ನಿಧನದ ಅನುಕಂಪದ ಸಹಕಾರದಿಂದ ಸುಮಲತಾ ಮಂಡ್ಯದಿಂದ ಗೆಲ್ಲುತ್ತಾರೆ. ಹೀಗಾಗಿ ಅವರಿಗೆ ನನ್ನ ಬೆಂಬಲವಿದೆ ಎಂದು ತಿಳಿಸಿದರು.

    ಹಿಂದೂ-ಮುಸ್ಲಿಮರ ಮಧ್ಯೆ ಜಗಳ ಹಚ್ಚುವ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ಅವರಿಗೆ ಕಾರವಾರ ಜನ ಬುದ್ಧಿ ಕಲಿಸುತ್ತಾರೆ. ರಾಮಕೃಷ್ಣ ಹೆಗಡೆ ಸೇರಿದಂತೆ ಹೆಗಡೆ ಮನೆತನಗಳ ಹೆಸರಿಗೆ ಅನಂತಕುಮಾರ್ ಹೆಗ್ಡೆ ಮಸಿ ಬಳಿಯುತ್ತಿದ್ದಾರೆ ಎಂದು ಕಿಡಿಕಾರಿದರು.

    ಒಂದು ವೇಳೆ ನಾನು ಕೇಂದ್ರ ಕೌಶಾಲ್ಯಾಭಿವೃದ್ಧಿ ಸಚಿವನಾಗಿದ್ದರೆ ಯುವಕರಿಗೆ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ದೊಡ್ಡ ಆಂದೋಲನವನ್ನೇ ಆರಂಭಿಸುತ್ತಿದ್ದೆ. ಆದರೆ ಸಂವಿಧಾನದ ಅರ್ಹತೆ, ಅವಕಾಶಗಳ ಆಧಾರದ ಮೇಲೆ ಲೋಕಸಭೆ ಸದಸ್ಯರಾಗಿರುವ ಅನಂತಕುಮಾರ್ ಹೆಗ್ಡೆ, ಸಂವಿಧಾನವನ್ನೇ ಬದಲಾವಣೆ ಮಾಡಲು ಹೊಟಿದ್ದಾರೆ ಎಂದು ಎಂ.ಬಿ.ಪಾಟೀಲ್ ವ್ಯಂಗ್ಯವಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಟ್ವಿಟ್ಟರ್ ವಾರ್- ವೈಯಕ್ತಿಕ ನಿಂದನೆ ವಿರುದ್ಧ ಗುಡುಗಿದ ದಿನೇಶ್ ಗುಂಡೂರಾವ್

    ಟ್ವಿಟ್ಟರ್ ವಾರ್- ವೈಯಕ್ತಿಕ ನಿಂದನೆ ವಿರುದ್ಧ ಗುಡುಗಿದ ದಿನೇಶ್ ಗುಂಡೂರಾವ್

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ತಮ್ಮ ಮೇಲೆ ವೈಯಕ್ತಿಕ ನಿಂದನೆ ಮಾಡಿದ್ದ ಕೇಂದ್ರ ಸಚಿವ ಅನಂತಕುಮಾರ್ ಹೆಗ್ಡೆ ವಿರುದ್ಧ ಗುಡುಗಿದ್ದಾರೆ.

    ಭಾನುವಾರ ಕೇಂದ್ರ ಸಚಿವರಾದ ಅನಂತಕುಮಾರ್ ಹೆಗ್ಡೆ ತಮ್ಮ ಭಾಷಣದಲ್ಲಿ ಹಿಂದೂ ಹುಡುಗಿ ಮುಟ್ಟುವ ಯುವಕನ ಕೈ ಇರಬಾರದು ಎಂಬ ಹೇಳಿಕೆಯನ್ನು ನೀಡಿದ್ದರು. ಈ ಸಂಬಂಧ ದಿನೇಶ್ ಗುಂಡೂರಾವ್, ಕೇಂದ್ರ ಸಚಿವರಾಗಿ ನಿಮ್ಮ ಸಾಧನೆ ಏನು? ಕರ್ನಾಟಕಕ್ಕೆ ನೀವು ನೀಡಿದ ಕೊಡುಗೆ ಏನು? ನಿಮ್ಮನ್ನು ಆಯ್ಕೆ ಮಾಡಿದ ಕ್ಷೇತ್ರದ ಜನರನ್ನು ನೋಡಿದ್ರೆ ನನಗೆ ನೋವಾಗುತ್ತದೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು. ಇದನ್ನೂ ಓದಿ: ಹಿಂದೂ ಹುಡುಗಿಯ ಮೈ ಮುಟ್ಟಿದ ಕೈ ಇರಬಾರದು: ಅನಂತ್ ಕುಮಾರ್ ಹೆಗ್ಡೆ

    ಈ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಅನಂತಕುಮಾರ್ ಹೆಗ್ಡೆ, ನಾನು ಈ ವ್ಯಕ್ತಿಯ ಪ್ರಶ್ನೆಗಳಿಗೆ ಖಂಡಿತ ಉತ್ತರಿಸುತ್ತೇನೆ. ಮೊದಲು ನಿಮ್ಮ ಅಭಿವೃದ್ಧಿ ಕೆಲಸ, ಸಾಧನೆಯನ್ನು ತಿಳಿಸಿ. ನನಗೆ ಗೊತ್ತಿರುವ ಹಾಗೆ ಮುಸ್ಲಿಂ ಹುಡುಗಿ ಹಿಂದೆ ಓಡಿ ಹೋದವರು ನೀವು ಎಂದು ವೈಯಕ್ತಿಕವಾಗಿ ಟೀಕಿಸಿದ್ದರು.

    ಇಂದು ಬೆಳಗ್ಗೆ ಕೇಂದ್ರ ಸಚಿವರ ಟ್ವೀಟ್ ಉತ್ತರ ನೀಡಿರುವ ದಿನೇಶ್ ಗುಂಡೂರಾವ್, ಇಂತಹ ವೈಯಕ್ತಿಕ ವಿಷಯಗಳನ್ನ ಬಳಸಿ ಕೆಳಮಟ್ಟದಲ್ಲಿ ಟೀಕಿಸುವುದನ್ನು ನಿಲ್ಲಿಸಿ. ಇದು ನಿಮ್ಮಲ್ಲಿರುವ ಸಂಸ್ಕೃತಿಯನ್ನು ತೋರಿಸುತ್ತದೆ. ಕೆಳಮಟ್ಟದಲ್ಲಿ ಟೀಕಿಸುತ್ತಿರುವ ಕೇಂದ್ರ ಸಚಿವರಿಗೆ ಹಿಂದೂ ಧರ್ಮದ ಜ್ಞಾನ ಇಲ್ಲ ಎಂಬುವುದು ತಿಳಿಯುತ್ತದೆ. ಇನ್ನು ಸಮಯವಿದ್ದು, ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಓರ್ವ ಗಣ್ಯ ವ್ಯಕ್ತಿಯಾಗಲು ಪ್ರಯತ್ನಿಸಿ ಎಂದು ಗುಡುಗಿದ್ದಾರೆ.

    ಕೇಂದ್ರ ಸಚಿವರ ಟ್ವೀಟ್‍ಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ. ರಾಜಕೀಯ ಕೆಸರೆರಚಾಟದಲ್ಲಿ ಪತ್ನಿಯರ ವಿಷಯ ಪ್ರಸ್ತಾಪಿಸಿ ನಿಂದನೆ ಮಾಡೋದು ಸರಿಯಲ್ಲ ಎಂದು ಬಹುತೇಕರು ಟ್ವೀಟ್ ಮಾಡಿದ್ರೆ, ದಿನೇಶ್ ಗುಂಡೂರಾವ್ ಅವರೇ ನಿಮ್ಮ ಸಾಧನೆಗಳನ್ನು ತಿಳಿಸಿ ಬೇರೆಯವರನ್ನು ಪ್ರಶ್ನೆ ಮಾಡಿ ಎಂದು ಕೆಲವರು ಪ್ರತಿಕ್ರಿಯೆ ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜನಾರ್ದನ ರೆಡ್ಡಿಗೆ ಲೂಟಿ ಮಾಡು ಅಂತಾ ನಾವು ಹೇಳಿಕೊಟ್ಟಿದ್ವಾ: ಸಿದ್ದರಾಮಯ್ಯ ಪ್ರಶ್ನೆ

    ಜನಾರ್ದನ ರೆಡ್ಡಿಗೆ ಲೂಟಿ ಮಾಡು ಅಂತಾ ನಾವು ಹೇಳಿಕೊಟ್ಟಿದ್ವಾ: ಸಿದ್ದರಾಮಯ್ಯ ಪ್ರಶ್ನೆ

    -ಬಿಜೆಪಿಯವರು ಮನುಷ್ಯರನ್ನೇ ದ್ವೇಷಿಸುವ ಮತಾಂಧರು

    ಚಿತ್ರದುರ್ಗ: ಮಾಜಿ ಸಚಿವ ಗಣಿಧಣಿ ಜನಾರ್ದನ ರೆಡ್ಡಿಗೆ ಲೂಟಿ ಮಾಡು, ಕಳ್ಳತನ ಮಾಡು ಅಂತಾ ನಾವು ಹೇಳಿಕೊಟ್ಟಿದ್ದೇವಾ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

    ಕಬೀರಾನಂದ ಶ್ರೀ ಮಠದ ಸಮುದಾಯ ಭವನದ ಉದ್ಘಾಟನೆಗೆ ಆಗಮಿಸಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಿಎಂ, ಜನಾರ್ದನ ರೆಡ್ಡಿ ವಿರುದ್ಧ ಸರ್ಕಾರದಿಂದ ಷಡ್ಯಂತ್ರ ನಡೆಯುತ್ತಿಲ್ಲ. ಬಿಜೆಪಿಯವರು ಮನುಷ್ಯರನ್ನೇ ದ್ವೇಷಿಸುವ ಮತಾಂಧರು. ಅವರು ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಅಂತಾ ಹೇಳುತ್ತಾರೆ. ಆದರೆ ಅವರೇ ಸಮಾಜ ಛಿದ್ರ ಮಾಡಲು ಯತ್ನಿಸುತ್ತಿದ್ದಾರೆ. ಜೆಡಿಎಸ್ ಒಂದು ಪ್ರಾದೇಶಿಕ ಪಕ್ಷ. ಕಾಂಗ್ರೆಸ್ ಕರ್ನಾಟಕದಲ್ಲಿ ಮಾತ್ರ ಪ್ರಬಲವಾಗಿದ್ದು, ನಾವು ಸಮಾಜವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

    ಚರಿತ್ರೆ ಓದಿಕೊಳ್ಳದೆ ಮಾತನಾಡುವವರ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರಿಗೆ ತಿರುಗೇಟು ಕೊಟ್ಟ ಸಿದ್ದರಾಮಯ್ಯ ಅವರು, ಅವನ್ಯಾವನೋ ಅನಂತಕುಮಾರ್ ಹೆಗ್ಡೆ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆ ಮಾಡುವುದಕ್ಕೆ ಅಂತಾನೆ. ಅವನೊಬ್ಬ ಮನುಷ್ಯನೇ, ದೇಶದ ಪ್ರಜೆ ಹೌದೋ ಅಲ್ಲವೋ ಎಂದು ಲೇವಡಿ ಮಾಡಿದರು.

    ಸಿಎಂ ಪರ ಸಿದ್ದರಾಮಯ್ಯ ಬ್ಯಾಟಿಂಗ್:
    ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆರೋಗ್ಯ ಸರಿಯಿಲ್ಲ. ಹೀಗಾಗಿ ಟಿಪ್ಪು ಜಯಂತಿಯಿಂದ ಗೈರು ಆಗಿದ್ದಾರೆ ಎಂದು ಸಮರ್ಥಿಸಿಕೊಂಡ ಮಾಜಿ ಸಿಎಂ, ಟಿಪ್ಪು ಜಯಂತಿಯಿಂದ ಜೆಡಿಎಸ್ ದೂರ ಉಳಿದಿಲ್ಲ. ಕುಮಾರಸ್ವಾಮಿ ಸಹೋದರ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹಾಸನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಕಾಮಗಾರಿ ನಡೆಯದೇ ಬಿಲ್ ತೋರಿಸಿದ್ದು ಯಾಕೆ: ಸುಳ್ಳು ಹೇಳಿದ ಅಧಿಕಾರಿಗಳಿಗೆ ಸಚಿವ ಹೆಗ್ಡೆಯಿಂದ ಕ್ಲಾಸ್

    ಕಾಮಗಾರಿ ನಡೆಯದೇ ಬಿಲ್ ತೋರಿಸಿದ್ದು ಯಾಕೆ: ಸುಳ್ಳು ಹೇಳಿದ ಅಧಿಕಾರಿಗಳಿಗೆ ಸಚಿವ ಹೆಗ್ಡೆಯಿಂದ ಕ್ಲಾಸ್

    ಕಾರವಾರ: ತಮ್ಮ ಅವಧಿಯ ಅನುದಾನದ ಕಾಮಗಾರಿಗಳನ್ನು ಪ್ರಾರಂಭಿಸದೇ ಸುಳ್ಳು ನೆಪ ಹೇಳುತ್ತಿದ್ದ ಅಧಿಕಾರಿಗಳಿಗೆ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗ್ಡೆ ತರಾಟೆಗೆ ತಗೆದುಕೊಂಡಿದ್ದಾರೆ.

    ಕಾರವಾರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮೂಲಸೌಕರ್ಯ ಯೋಜನೆಗಳ ವಿಚಕ್ಷಣ ಸಮಿತಿ ಸಭೆಯಲ್ಲಿ ಮಾತನಾಡಿದ ಸಂಸದರು, ನಿಮ್ಮ ಬೇಜವಾಬ್ದಾರಿ ಹಾಗೂ ನಿರ್ಲಕ್ಷದಿಂದ ಕಾಮಗಾರಿ ಪ್ರಾರಂಭವಾಗುತ್ತಿಲ್ಲ. ಸರ್ಕಾರಿ ಕೆಲಸ ಅಂದರೆ ಆಟ ಆಡುವುದು ಅಂದುಕೊಂಡಿದ್ದಿರಾ. ನನಗೆ ಸೂಕ್ತ ಮಾಹಿತಿ ನೀಡದೇ ಇಂದು ಕಾರವಾರದಿಂದ ಹೋಗುವಂತಿಲ್ಲ ಎಂದು ಖಡಕ್ ಆಗಿ ಸೂಚಿಸಿದರು.

    ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ 851 ವಿವಿಧ ಕಾಮಗಾರಿಗಳಲ್ಲಿ 838 ಕಾಮಗಾರಿಗಳು ಮಂಜೂರಾಗಿವೆ. ಅದರಲ್ಲಿ 796 ಕಾಮಗಾರಿಗಳಿಗೆ ಅನುಮೋದನೆ ದೊರತಿದೆ. 2012-13ರ ಅವಧಿಯಲ್ಲಿಯೇ ಅನುಮೋದನೆಗೊಂಡಿದ್ದ 55 ಕಾಮಗಾರಿಗಳು ಇಂದಿಗೂ ಪ್ರಾರಂಭಗೊಂಡಿಲ್ಲ ಯಾಕೆ ಎಂದು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.

    ಅನುಮೋಧನೆಗೊಂಡ ಕಾಮಗಾರಿಗಳಲ್ಲಿ ರಸ್ತೆ ಬದಲಿಗೆ ಚರಂಡಿಯನ್ನು ನಿರ್ಮಿಸಿ ಅಧಿಕಾರಿಗಳು ಬಿಲ್ ಮಾಡಿಕೊಂಡಿದ್ದಾರೆ. ಬೈಲಹೊಂಗಲ ಹಾಗೂ ಖಾನಾಪುರದ ಜಿಲ್ಲಾ ಪಂಚಾಯತ್ ಎಂಜಿನಿಯರ್ ಗಳು ಅನುಮೋದನೆಗೊಂಡ 37 ಕಾಮಗಾರಿಗಳಲ್ಲಿ 34 ಕಾಮಗಾರಿಗಳನ್ನು ಪ್ರಾರಂಭವೇ ಮಾಡಿಲ್ಲ. ಇನ್ನು ನಾಲ್ಕು ವರ್ಷದ ಸಂಸದ ಅವಧಿಯಲ್ಲಿ ಕೇವಲ ನಾಲ್ಕು ಕಾಮಗಾರಿಗಳನ್ನು ಮಾತ್ರ ಮುಗಿಸಿದ್ದು ಉಳಿದ ಕಾಮಗಾರಿಗಳ ಯಾವಾಗ ಪೂರ್ಣಗೊಳ್ಳುತ್ತವೆ ಎಂದು ಅಧಿಕಾರಿಗಳನ್ನು ಅನಂತ್ ಕುಮಾರ್ ಹೆಗ್ಡೆ ಖರವಾಗಿ ಪ್ರಶ್ನಿಸಿದರು.

    ಸಚಿವರು ಪ್ರಶ್ನೆಗಳಿಗೆ ಬೈಲಹೊಂಗಲ ಹಾಗೂ ಖಾನಾಪುರದ ಜಿಲ್ಲಾ ಪಂಚಾಯತ್ ಸಹಾಯಕ ಎಂಜಿನಿಯರ್ ಗಳಾದ ಜಿ.ಎಸ್.ಪಾಟೀಲ್, ಆರ್.ವಿ.ಚತುವಾಡಿಗಿ ಅವರು ಉತ್ತರ ನೀಡಲು ತಡಕಾಡಿದರು. ಇದರಿಂದ ಕೋಪಗೊಂಡ ಸಚಿವರು ಸಭೆಯಿಂದ ಹೊರ ನಡೆದು, ಮಾಹಿತಿ ತರುವಂತೆ ಸೂಚಿಸಿದರು. ಇದಲ್ಲದೇ ಕೆನರಾ ಲೋಕಸಭಾ ಕ್ಷೇತ್ರದ ಸಾಕಷ್ಟು ಕಾಮಗಾರಿಗಳಲ್ಲಿ ಕೆಲಸವೇ ಪ್ರಾರಂಭವಾಗಿಲ್ಲ. ಕೆಲವರು ಹಳೇ ಕಟ್ಟಡಗಳ ಫೋಟೋ ತೋರಿಸಿ ಬಿಲ್ ಮಾಡಿಕೊಂಡಿದ್ದಾರೆ ಎಂದು ಹೇಳಿ, ಸಮರ್ಪಕ ಉತ್ತರ ನೀಡುವವರಗೂ ಕಾರವಾರದಿಂದ ತೆರಳದಂತೆ ಅಧಿಕಾರಿಗಳಿಗೆ ಸೂಚಿಸಿದರು.

  • ಪುಟಗೋಸಿ ಬಹಳ ಮರ್ಯಾದೆ ಕಾಪಾಡುವ ವಸ್ತು, ಬಿಜೆಪಿಯಿಂದ ಅಗೌರವವಾಗಿದೆ- ಮುಖ್ಯಮಂತ್ರಿ ಚಂದ್ರು

    ಪುಟಗೋಸಿ ಬಹಳ ಮರ್ಯಾದೆ ಕಾಪಾಡುವ ವಸ್ತು, ಬಿಜೆಪಿಯಿಂದ ಅಗೌರವವಾಗಿದೆ- ಮುಖ್ಯಮಂತ್ರಿ ಚಂದ್ರು

    ತುಮಕೂರು: ಪುಟಗೋಸಿಗೆ ಬಹಳ ಮರ್ಯಾದೆ ಕಾಪಾಡುವ ವಸ್ತುವಾಗಿದ್ದು, ಬಿಜೆಪಿಯಿಂದ ಅಗೌರವವಾಗಿದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.

    ಜೆಡಿಎಸ್ ಪಕ್ಷವನ್ನು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಪುಟಗೋಸಿಗೆ ಹೋಲಿಕೆ ಮಾಡಿ ಲೇವಡಿ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಂಸ್ಕೃತಿಯನ್ನ ಎತ್ತಿಹಿಡಿಯುವ ಪಕ್ಷದ ಬಾಯಿಯಲ್ಲಿ ಪುಟಗೋಸಿ ಪದ ಬರಬಾರದು. ಪುಟಗೋಸಿ ಕೆಟ್ಟದಲ್ಲ ಅವರ ಬಾಯಿಯಿಂದ ಬಂದಂತಹ ರೀತಿ ಕೆಟ್ಟದ್ದು ಎಂದು ಕಿಡಿಕಾರಿದರು.

    ಅಂಗಾಂಗ ಮುಚ್ಚಿಕೊಳ್ಳಲು ಪುಟಗೋಸಿ ಮಹತ್ವದ ಬಗ್ಗೆ ಈಗಾಗಲೇ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಪುಟಗೋಸಿ, ಉಡುದಾರ, ಲಂಗೋಟಿ, ತುಂಡುಬಟ್ಟೆಗೆ ಅದರದ್ದೆ ಆದ ಅರ್ಥವಿದೆ ಎಂದರು. ಇದನ್ನೂ ಓದಿ: ಅನಂತಕುಮಾರ್ ಹೆಗಡೆಗೆ ಪುಟಗೋಸಿ ರವಾನಿಸಿದ ಜೆಡಿಎಸ್ ಕಾರ್ಯಕರ್ತರು

    ಪುಟಗೋಸಿಗೆ ಇವರು ಅಗೌರವ ತಂದಿದ್ದಾರೆ. ಅದು ಬಹಳ ಮರ್ಯಾದೆ ಕಾಪಾಡುವ ವಸ್ತು. ಬಿಜೆಪಿಯಿಂದ ಪುಟಗೋಸಿಗೆ ಅಗೌರವವಾಗಿದೆ. ಲಂಗೋಟಿ ಬಲು ಒಳ್ಳೇಯದಣ್ಣ ಅಂಗಾಂಗ ಮುಚ್ಚಲು ಲಂಗೋಟಿ ಬೇಕಣ್ಣ ಎಂದು ದಾಸರ ಪದ ಹಾಡಿ ಮುಖ್ಯಮಂತ್ರಿ ಚಂದ್ರು ಹಾಡಿದರು.

    ಆಗ್ನೇಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮಪ್ಪ ಪರ ಚುನಾವಣಾ ಪ್ರಚಾರಕ್ಕೆ ತುಮಕೂರಿಗೆ ಆಗಮಿಸಿದ್ದ ವೇಳೆ ಮುಖ್ಯಮಂತ್ರಿ ಚಂದ್ರು ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದರು.