Tag: ಅನಂತಕುಮಾರ್ ಹೆಗಡೆ

  • ಅನಂತ್ ಕುಮಾರ್ ಹೆಗ್ಡೆ ಸಂವಿಧಾನ ಬದಲಾವಣೆ ಹೇಳಿಕೆ ನೀಡುತ್ತಿರುವುದು ಎಷ್ಟು ಸರಿ..? ಬಿಎಸ್‍ವೈಗೆ ಗ್ರಾಮಸ್ಥ ಪ್ರಶ್ನೆ

    ಅನಂತ್ ಕುಮಾರ್ ಹೆಗ್ಡೆ ಸಂವಿಧಾನ ಬದಲಾವಣೆ ಹೇಳಿಕೆ ನೀಡುತ್ತಿರುವುದು ಎಷ್ಟು ಸರಿ..? ಬಿಎಸ್‍ವೈಗೆ ಗ್ರಾಮಸ್ಥ ಪ್ರಶ್ನೆ

    ಬೆಂಗಳೂರು: ಇಂದು ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನೆಲಮಂಗಲ ತಾಲೂಕಿನ ಮೈಲನಹಳ್ಳಿಗೆ ಆಗಮಿಸಿದ್ದರು.

    ಗ್ರಾಮದಲ್ಲಿ ದಲಿತ ಸಮುದಾಯದ ಜೊತೆ ಬಹಿರಂಗ ಸಭೆಯಲ್ಲಿ ಭಾಗಿಯಾಗಿದ್ದ ಯಡಿಯೂರಪ್ಪ ಅವರಿಗೆ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರು ಸಂವಿಧಾನ ಬದಲಾವಣೆಯ ಹೇಳಿಕೆ ನೀಡುತ್ತಾರೆ ಅದು ಎಷ್ಟು ಸರಿ..? ಎಂದು ಗ್ರಾಮಸ್ಥ ಅಂಜನಮೂರ್ತಿ ಬಹಿರಂಗವಾಗಿ ಪ್ರಶ್ನೆ ಹಾಕಿದ್ದಾರೆ.

    ಅಷ್ಟೇ ಅಲ್ಲದೇ ನಿಮ್ಮ ಪಕ್ಷದ ಸಂಸದರೇ ಸಂವಿಧಾನವನ್ನು ಬದಲಾವಣೆ ಮಾಡುತ್ತೇವೆ ಅಂತಾ ಹೇಳ್ತಾರೆ. ಇಂದು ನೀವು ಅಂಬೇಡ್ಕರ್ ಜಯಂತಿ ಆಚರಣೆಯಲ್ಲಿ ಭಾಗಿಯಾಗಿದ್ದೀರಿ. ಹಾಗಾದ್ರೆ ಅನಂತ್ ಕುಮಾರ್ ಹೆಗ್ಡೆ ಅವರ ಹೇಳಿಕೆಯ ವಿಚಾರವಾಗಿ ನಿಮ್ಮದು ಹಾಗೂ ಬಿಜೆಪಿಯ ನಿಲುವೇನು ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಆಕ್ರೋಶ ಹೊರಹಾಕಿದ್ರು.

    ಅಂಜನಮೂರ್ತಿ ಪ್ರಶ್ನೆ ಕೇಳುತ್ತಿದ್ದಂತೆ ಪೊಲೀಸರು ಅವರನ್ನು ಕಾರ್ಯಕ್ರಮದಿಂದ ಹೊರಗಡೆ ಕರೆದುಕೊಂಡು ಹೋಗಲು ಮುಂದಾದ್ರು. ಕೂಡಲೇ ಯಡಿಯೂರಪ್ಪ ಪೊಲೀಸರನ್ನು ತಡೆದು, ಈ ಹಿಂದೆ ಸಾಕಷ್ಟು ಬಾರಿ ಸಂವಿಧಾನದ ತಿದ್ದುಪಡಿ ಆಗಿದೆ. ಪ್ರಪಂಚದಲ್ಲಿ ಉತ್ತಮವಾದ ಸಂವಿಧಾನವನ್ನು ಅಂಬೇಡ್ಕರ್ ಅವರು ನಮಗೆ ನೀಡಿದ್ದಾರೆ. ಈಗಾಗಲೇ ಅನಂತ್ ಕುಮಾರ್ ಹೆಗ್ಡೆ ತಮ್ಮ ಹೇಳಿಕೆಗೆ ಕ್ಷಮೆಯನ್ನು ಕೋರಿದ್ದಾರೆ ಅಂತಾ ಸಮಾಧಾನಪಡಿಸಿದ್ದಾರೆ.

  • ‘ಐದಾರು ಬಾರಿ ಗೆದ್ದರೂ ಐದು ಪೈಸೆ ಉಪಯೋಗವಿಲ್ಲ’: ಅಂಕಣದ ಬಗ್ಗೆ  ಚಕ್ರವರ್ತಿ ಸೂಲಿಬೆಲೆ ಹೇಳಿದ್ದು ಹೀಗೆ

    ‘ಐದಾರು ಬಾರಿ ಗೆದ್ದರೂ ಐದು ಪೈಸೆ ಉಪಯೋಗವಿಲ್ಲ’: ಅಂಕಣದ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹೇಳಿದ್ದು ಹೀಗೆ

    ಬೆಂಗಳೂರು: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರನ್ನು ಉದ್ದೇಶಿಸಿ ನಾನು ಅಂಕಣ ಬರೆದಿಲ್ಲ. ಐದು ಆರು ಬಾರಿ ಗೆದ್ದು ಯಾವುದೇ ಅಭಿವೃದ್ಧಿ ಮಾಡದ ಕರ್ನಾಟಕದ ಎಲ್ಲ ಜನಪ್ರತಿನಿಧಿಗಳನ್ನು ಉದ್ದೇಶಿಸಿ ಈ ಅಂಕಣವನ್ನು ನಾನು ಬರೆದಿದ್ದೇನೆ ಎಂದು ವಾಗ್ಮಿ, ಖ್ಯಾತ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

    ‘ಐದಾರು ಬಾರಿ ಗೆದ್ದರೂ ಐದು ಪೈಸೆ ಉಪಯೋಗವಿಲ್ಲ’ ಎನ್ನುವ ಶೀರ್ಷಿಕೆ ಅಡಿ ಚಕ್ರವರ್ತಿ ಸೂಲಿಬೆಲೆ ಅವರು ಪತ್ರಿಕೆಯೊಂದಕ್ಕೆ ಬುಧವಾರ ಅಂಕಣ ಬರೆದಿದ್ದರು. ಈ ಅಂಕಣದಲ್ಲಿ ಉತ್ತರ ಕರ್ನಾಟಕ ಪ್ರವಾಸೋದ್ಯಮದಲ್ಲಿ ಹಿಂದೆ ಉಳಿದಿದೆ ಯಾಕೆ ಸೇರಿದಂತೆ ಕರ್ನಾಟಕ ಪ್ರವಾಸದ್ಯೋಮ ಕ್ಷೇತ್ರ ಅಭಿವೃದ್ಧಿ ಯಾಕೆ ಆಗಿಲ್ಲ ಎನ್ನುವ ವಿಚಾರಗಳನ್ನು ಪ್ರಸ್ತಾಪ ಮಾಡಿ ಬರೆದಿದ್ದರು. ಈ ಅಂಕಣವನ್ನು ಅನಂತ್ ಕುಮಾರ್ ಹೆಗ್ಡೆ ಉದ್ದೇಶಿಸಿ ಬರೆಯಲಾಗಿದೆ ಎಂದು ಹೆಗ್ಡೆ ಅಭಿಮಾನಿಗಳು ಆರೋಪಿಸಿ ಸೂಲಿಬೆಲೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡುವ ವೇಳೆ ಅವರು ಈ ಮೇಲಿನಂತೆ ಹೇಳಿಕೆ ನೀಡಿದ್ದಾರೆ.

    ಅನಂತಕುಮಾರ್ ಹೆಗಡೆಗೆ ಸಂಬಂಧಿಸಿ ನಾನು ಈ ಅಂಕಣ ಬರೆದಿಲ್ಲ. ಐದು ಆರು ಬಾರಿ ಗೆದ್ದ ಎಲ್ಲ ಜನಪ್ರತಿನಿಧಿಗಳಿಗೂ ಅನ್ವಯಿಸುತ್ತದೆ. ಇದು ಕರ್ನಾಟಕ ಅಭಿವೃದ್ಧಿ ಕುರಿತಂತೆ ಕಳೆದ 6 ವರ್ಷಗಳಿಂದ ನಾವು ನೋಡಿದ್ದೇವೆ. 10 ವರ್ಷಗಳಿಂದ ಇಡೀ ರಾಜ್ಯದ ಬೆಳವಣೆಗೆ ಚಟುವಟಿಕೆಯನ್ನು ನೋಡಿದ್ದೇವೆ. 10 ವರ್ಷಗಳಿಂದ ಹಲವು ಸಿಎಂ ಬಂದು ಹೋಗಿದ್ದಾರೆ. ಇದೆಲ್ಲವನ್ನೂ ನೋಡಿ ನೋಡಿ ನನಗೆ ಮಾತ್ರವಲ್ಲ ಅಭಿವೃದ್ಧಿ ಬಯಸುವ ಪ್ರತಿಯೊಬ್ಬರಿಗೂ ಅಸಮಾಧಾನವಾಗಿದೆ ಎಂದು ತಿಳಿಸಿದರು.

    ಉತ್ತರ ಕನ್ನಡವನ್ನು ನೋಡಿದರೇ ಇಂದಿಗೂ ನನಗೆ ನೋವಾಗುತ್ತದೆ. ಅಭಿವೃದ್ಧಿ ಮಾಡದ, ವಿಕಾಸವಾದ ಇಲ್ಲದವರಿಗೆ ಗೌರವ ಕೊಡಲು ಸಾಧ್ಯವಿಲ್ಲ. ವಿಕಾಸವನ್ನು ಬಿಟ್ಟು ಎಲ್ಲವನ್ನೂ ಮಾತನಾಡುತ್ತಾರೆ. ನಾನು ಬರೆದ ಅಂಕಣದಿಂದ ಹೆಗ್ಡೆ ಅವರ ಅಭಿಮಾನಿಗಳು ಕೆರಳಿದ್ರೆ ಕೆರಳಲಿ ನನಗೆ ಸಂತೋಷ. ಈ ಮೂಲಕವಾದರೂ ಉತ್ತರ ಕನ್ನಡ ಅಭಿವೃದ್ಧಿಯಾಗಲಿ ಎಂದರು.

    ನೀರಿರುವ ಬಾವಿಯಲ್ಲಿ ನೀರು ಸೇದಿ ಮನೆಗೆ ತೆಗೆದುಕೊಂಡು ಹೋಗುವುದಕ್ಕೆ ಸಚಿವ ಸ್ಥಾನ ಕೊಟ್ಟಿದ್ದಲ್ಲ. ನೀರು, ಸಂಪತ್ತನ್ನು ಸೃಷ್ಟಿಸಿಕೊಳ್ಳಲು ನರೇಂದ್ರ ಮೋದಿ ಅವರು ಸಚಿವ ಸ್ಥಾನ ಕೊಟ್ಟಿದ್ದಾರೆ. ನನಗೆ ಇತ್ತೀಚೆಗೆ ರಾಜಕೀಯ ನಾಯಕರ ಮೇಲೆ ನಿರೀಕ್ಷೆ ಕಳೆದು ಹೋಗಿದೆ. ಐದೈದು ಬಾರಿ ಶಾಸಕರಾಗಿ, ಸಂಸದರಾಗಿ ಆಯ್ಕೆಯಾದವರ ಕ್ಷೇತ್ರಗಳಿಗೆ ನಾನು ಹೋಗಿ ನೋಡಿದ್ದೇನೆ. ಬಹಳ ಬೇಸರವಾಗುತ್ತದೆ. ಜನರು ಯಾಕೆ ಇವರನ್ನು ಪ್ರತಿ ಬಾರಿ ವೋಟು ನೀಡಿ ಗೆಲ್ಲಿಸಬೇಕು? ಅಭಿವೃದ್ಧಿ, ವಿಕಾಸ ಮಾಡದೇ ಇರುವರಿಗೆ ಗೌರವ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಸೂಲಿಬೆಲೆ ಬೇಸರ ವ್ಯಕ್ತಪಡಿಸಿದರು.

    ನಾನು ನಿರಂತರವಾಗಿ ನಾನು ಗ್ರಾಮೀಣ ಅಭಿವೃದ್ಧಿ, ಹಣಕಾಸು ವಿಚಾರ, ಮದ್ಯ ನಿಷೇಧದ ಬಗ್ಗೆ ಬರೆದಿದ್ದೇನೆ. ಆದರೂ ಯಾವುದು ಬೆಳವಣಿಗೆ ಆಗಿಲ್ಲ. ಇತ್ತೀಚಿಗೆ ಟೂರಿಸಂ ಅಭಿವೃದ್ಧಿ ಬಗ್ಗೆ ಬರೆದಿದ್ದೇನೆ. ಇದು ಅಗತ್ಯವಾದ ಸಂಗತಿಯಾಗಿದೆ. ಉತ್ತರ ಕನ್ನಡದಲ್ಲಿ ಗೆದ್ದು ಬಂದ ಸಂಸದ, ಶಾಸಕರ ನಿರ್ಲಕ್ಷ್ಯದಿಂದಾಗಿ ಪ್ರವಾಸೋದ್ಯಮ ಇನ್ನೂ ಅಭಿವೃದ್ಧಿಯಾಗಿಲ್ಲ. ಈ ವಿಚಾರವನ್ನು ಗಮನದಲ್ಲಿ ಇಟ್ಟುಕೊಂಡು ಬರೆದಿದ್ದೇನೆ. ಬರೀ ಅನಂತಕುಮಾರ್ ಹೆಗಡೆ ಒಬ್ಬರ ಬಗ್ಗೆ ಮಾತ್ರ ನಾನು ಹೇಳಿದ್ದಲ್ಲ. ಅಲ್ಲಿ ಆಯ್ಕೆ ಆಗಿರುವ ಎಲ್ಲ ರಾಜಕೀಯ ನಾಯಕರಿಗೆ ಇದು ಅನ್ವಯಿಸುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದರು.

    ಚುನಾವಣೆಯ ಸಂದರ್ಭದಲ್ಲಿ ಧರ್ಮ ಜಾತಿ ನೆಪವಾಗುತ್ತದೆ. ವಿಕಾಸದ ಬಗ್ಗೆ ಮಾತನಾಡುವುದಕ್ಕೆ ಬದಲು ಧರ್ಮದ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು. ನಾನು ನಾಗರಿಕನಾಗಿ ಶಾಶ್ವತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತು ಕರ್ನಾಟಕದ ಅಭಿವೃದ್ಧಿಗೋಸ್ಕರ ನನ್ನ ಕೊಡುಗೆ ಎಷ್ಟು ಕೊಡಲು ಆಗುತ್ತದೋ ಅಷ್ಟನ್ನು ನೀಡಲು ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

    https://www.youtube.com/watch?v=W443FWFfOAk

    https://www.youtube.com/watch?v=Ph2IOPiR9vQ

  • ತಪರಾಕಿ ಸಿದ್ದರಾಮಯ್ಯನವರೇ ಸಾಕಾ, ಬೇಕಾ?-ಸಿಎಂ ವಿರುದ್ಧ ಅನಂತ್ ಕುಮಾರ್ ಹೆಗಡೆ ಕಿಡಿ

    ತಪರಾಕಿ ಸಿದ್ದರಾಮಯ್ಯನವರೇ ಸಾಕಾ, ಬೇಕಾ?-ಸಿಎಂ ವಿರುದ್ಧ ಅನಂತ್ ಕುಮಾರ್ ಹೆಗಡೆ ಕಿಡಿ

    ಕಾರವಾರ: ಶಿರಸಿ ಗಲಾಟೆ ಸಂಬಂಧ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ವೊಂದನ್ನು ಹಾಕಿ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದಾರೆ.

    ಇಷ್ಟು ಸಾಕಾ ಇನ್ನೂ ಬೇಕಾ ತಪರಾಕಿ ಸಿದ್ದರಾಮಯ್ಯನವರೇ? ಹೇಮಂತ್ ನಿಂಬಾಳ್ಕರ್, ರಾಮಲಿಂಗಾರೆಡ್ಡಿ ಹಾಗೂ ಕೆಂಪಯ್ಯರಂಥ ಜನರಿದ್ದರೆ ಮುಂದಿದೆ ನೋಡಿ ಮಾರಿಹಬ್ಬ. ಪ್ರತಿಭಟನೆ ವೇಳೆ ಬಂಧಿರಾಗಿದ್ದ ಎಲ್ಲರಿಗೂ ನ್ಯಾಯಾಲಯ ಜಾಮೀನು ನೀಡಿದ್ದು, ಇದು ಪ್ರಜಾಪ್ರಭುತ್ವದ ವಿಜಯ ಎಂದು ಪೋಸ್ಟ್ ಹಾಕಿದ್ದಾರೆ.

    ಶಿರಸಿಯಲ್ಲಿ ಮೊನ್ನೆಯ ದಿನ ಪೊಲೀಸರಿಂದ ಪ್ರೇರಿತ ಗಲಭೆಯಲ್ಲಿ ಬಂಧಿತರಾಗಿದ್ದ 62 ಮಂದಿ ಮುಗ್ಧರನ್ನು ಶಿರಸಿ ನ್ಯಾಯಾಲಯ ಇಂದು ಜಾಮೀನು ಪಡೆದು ಬಿಡುಗಡೆಗೆ ಆದೇಶಿಸಿದೆ. ಕೇವಲ ಒಂದೂವರೆ ದಿನದಲ್ಲಿ ಬಿಡುಗಡೆಯ ಆದೇಶ ಪಡೆದ ಕ್ರಮವು ಐತಿಹಾಸಿಕವಾಗಿದ್ದು, ಈ ತೀರ್ಪು ಪೊಲೀಸ್ ಸಮವಸ್ತ್ರದಲ್ಲಿ ದಾದಾಗಿರಿ ಮಾಡಲು ಹೊರಟಿದ್ದ ನಿಂಬಾಳ್ಕರ್ ಎಂಬ ಹುಂಬ ಅಧಿಕಾರಿಗೆ ತೀವ್ರವಾದ ಕಪಾಳ ಮೋಕ್ಷ ಮಾಡಿದಂತಾಗಿದೆ. ಮನಬಂದಂತೆ ಸೆಕ್ಷನ್ 307 ಜರುಗಿಸಿ ವಿಕೃತ ಪಭುತ್ವ ಸಾಧಿಸಲು ಹೊರಟರೆ ಈ ದೇಶದ ಕಾನೂನು ಸುಮ್ಮನೆ ಕೂರುವುದಿಲ್ಲ ಎಂದು ಇಂದಿನ ನ್ಯಾಯಾಲಯದ ತೀರ್ಮಾನ ಸ್ಪಷ್ಟವಾಗಿ ತಿಳಿಸಿದೆ. ಇದು ಪ್ರಜಾಪ್ರಭುತ್ವದ ವಿಜಯ ಎಂದು ಹೇಳಿದ್ದಾರೆ.

    ಸನ್ಮಾನ್ಯ ಸಿದ್ದರಾಮಯ್ಯನವರೇ ನಿಮ್ಮ ಮುಖವನ್ನು ಮತ್ತೊಮ್ಮೆ ಕನ್ನಡಿ ಮುಂದೆ ನೋಡಿಕೊಳ್ಳಿ. ನಿಮ್ಮ ಒಡ್ಡೋಲಗದ ಸಹೋದ್ಯೋಗಿಗಳು ಸಹ ನಿಮ್ಮನ್ನು ನಡು ನೀರಿನಲ್ಲಿ ಕೈ ಬಿಟ್ಟು ಹೋಗುವ ದಿನ ದೂರವಿಲ್ಲ. ವಿದ್ರೋಹಿಗಳ ಬೆಂಬಲಕ್ಕೆ ನಿಂತು ದೇಶಭಕ್ತರನ್ನು ಸದೆಬಡಿಯುವ ನಿಮ್ಮ ಯೋಜನೆಗೆ, ನಿಮ್ಮ ಅಮೂಲ್ಯ ಸಲಹೆಗಾರನಾಗಲಿ ಅಥವಾ ನಾಲಾಯಕ್ ಗೃಹ ಮಂತ್ರಿಯಾಗಲಿ ಇನ್ನೇನು ತಾನೇ ಕಿಸಿಯಲು ಸಾಧ್ಯ? ನಮ್ಮ ಹೋರಾಟಕ್ಕೆ ಇಂದಿನ ಈ ತೀರ್ಪು ಬಹು ದೊಡ್ಡ ನೈತಿಕ ಬೆಂಬಲ ನೀಡಿ ಹೋರಾಟದ ಕಿಚ್ಚನ್ನು ಇನ್ನಷ್ಟು ಹೆಚ್ಚಿಸಿದೆ. ಬರುವ ದಿನಗಳಲ್ಲಿ ಹೋರಾಟ ತೀವ್ರಗೊಳ್ಳಲಿದ್ದು ಕೋಮುವಾದಿ, ಜಾತಿವಾದಿ ಹುಂಬ ಸರ್ಕಾರವಲ್ಲದೆ, ದೇಶದೊಳಗೆ ಇರುವ ವಿದ್ರೋಹಿಗಳಿಗೆ ಸಹ ನಮ್ಮ ಸಂಘಟಿತ ರುಚಿ ತೋರಿಸಲಿದ್ದೇವೆ. ಹುಂಬ ಧೈರ್ಯವಿದ್ದರೆ ಎದುರಿಸಲಿ ಎಂದು ಆಕ್ರೋಶದಿಂದ ಬರೆದಿದ್ದಾರೆ.

    ನ್ಯಾಯಾಲಯದಲ್ಲಿ ನಮ್ಮ ದೇಶ ಭಕ್ತರ ಪರವಾಗಿ ವಾದಿಸಿ ನ್ಯಾಯ ದೊರೆಕಿಸಿಕೊಟ್ಟ ಅಷ್ಟು ವಕೀಲ ವೃಂದದವರಿಗೆ ನನ್ನ ಬಹುದೊಡ್ಡ ಧನ್ಯವಾದಗಳು. ದೇಶ ಕಟ್ಟುವ ಕೆಲಸದಲ್ಲಿ ಜೊತೆಯಾದ ಎಲ್ಲರಿಗೂ ನನ್ನ ಅನಂತ ವಂದನೆಗಳನ್ನು ಎಂದು ಕೊನೆಯಲ್ಲಿ ತಿಳಿಸಿದ್ದಾರೆ.

     

  • ಕಿವುಡ, ಮೂಕ ಮಕ್ಕಳನ್ನು 3 ಗಂಟೆ ಕಾಯಿಸಿ ಕೊನೆಗೆ ಕಾರ್ಯಕ್ರಮ ರದ್ದು ಮಾಡಿದ್ರು ಅನಂತಕುಮಾರ್ ಹೆಗಡೆ

    ಕಿವುಡ, ಮೂಕ ಮಕ್ಕಳನ್ನು 3 ಗಂಟೆ ಕಾಯಿಸಿ ಕೊನೆಗೆ ಕಾರ್ಯಕ್ರಮ ರದ್ದು ಮಾಡಿದ್ರು ಅನಂತಕುಮಾರ್ ಹೆಗಡೆ

    ಧಾರವಾಡ: ಪ್ರಧಾನಿ ಮೋದಿ ಅವರ ಹುಟ್ಟುಹಬ್ಬದ ದಿನಾಚರಣೆ ಹಿನ್ನೆಲೆಯಲ್ಲಿ ಕಿವುಡ ಮತ್ತು ಮೂಕ ಮಕ್ಕಳ ಸಂಸ್ಥೆಗೆ ಭೇಟಿ ನೀಡಬೇಕಿದ್ದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಭೇಟಿ ನೀಡದೇ ಮಕ್ಕಳನ್ನು 3 ತಾಸು ಕಾಯಿಸಿ ಕೊನೆಗೆ ಕಾರ್ಯಕ್ರಮ ರದ್ದುಮಾಡಿದ್ದಾರೆ.

    ಭಾನುವಾರ ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಹನುಮಂತ ಕೊಟಬಾಗಿ ಕೇಂದ್ರ ಸಚಿವರ ಕಾರ್ಯಕ್ರಮವನ್ನು ನಿಗಧಿ ಮಾಡಿದ್ದರು. ಹೀಗಾಗಿ ಮಕ್ಕಳು ಮತ್ತು ಸಂಸ್ಥೆಯ ಅಧಿಕಾರಿಗಳು ಸಕಲ ಸಿದ್ಧತೆಗಳ ನ್ನು ಮಾಡಿಕೊಂಡಿದ್ದರು. ಈ ಸಂಬಂಧ ಸಚಿವರು ವಾಟ್ಸಪ್ ಮಾಡಿ ಭೇಟಿ ನೀಡುವುದಾಗಿ ಹನುಮಂತ ಅವರಿಗೆ ತಿಳಿಸಿದ್ದರು.

    ಇನ್ನೂ ಮಾತಿನಂತೆ ವಿಕಲಚೇತನ ಮಕ್ಕಳನ್ನು ಭೇಟಿಯಾಗಲು ಬರದೇ ಸಚಿವರು ನೇರವಾಗಿ ಹುಬ್ಬಳ್ಳಿಯಿಂದ ಬೆಳಗಾವಿಗೆ ತೆರಳಿದ್ದಾರೆ. ನಾವು ಬೆಳಗ್ಗೆ 7 ಗಂಟೆಯಿಂದ ಸಚಿವರಿಗಾಗಿ ಕಾದಿದ್ದೇವೆ. ನನಗೆ 85 ವರ್ಷ ಆಗಿದ್ದು, ಸಚಿವರು ನಮ್ಮ ಸಂಸ್ಥೆಗೆ ಬರ್ತಾರೆ ಎಂದು ನಾನು ಸಹ ಬೆಳಗ್ಗೆಯೇ ಬಂದಿದ್ದೇನೆ. ಆದರೆ ಏನು ಮಾಡಕಾಗುತ್ತದೆ ಎಂದು ಕಿವುಡ ಮಕ್ಕಳ ಶಾಲೆಯ ಸಂಸ್ಥೆ ಅಧ್ಯಕ್ಷ ಮೇಗೂರು ತಮ್ಮ ಅಸಮಧಾನವನ್ನು ವ್ಯಕ್ತಪಡಿಸಿದರು.

  • ಮತ್ತೆ ಮಾಧ್ಯಮಗಳ ಮೇಲೆ ಕಿಡಿಕಾರಿದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ

    ಮತ್ತೆ ಮಾಧ್ಯಮಗಳ ಮೇಲೆ ಕಿಡಿಕಾರಿದ ಕೇಂದ್ರ ಸಚಿವ ಅನಂತಕುಮಾರ ಹೆಗಡೆ

    ಕಾರವಾರ: ಕೆಲವು ಮಾಧ್ಯಮಗಳು ಬೇಡದ ಪ್ರಚಾರ ಮಾಡುತ್ತಿವೆ. ನೀವು ಏನು ಬೇಕಾದರೂ ಬರೆದುಕೊಳ್ಳಿ. ಏನು ಬೇಕಾದರೂ ಹಾಕಿಕೊಳ್ಳಿ.ಅದರಿಂದ ನನಗೇನೂ ತೊಂದರೆಯಿಲ್ಲ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ  ಮತ್ತೆ ಮಾಧ್ಯಮಗಳ ವಿರುದ್ಧ ಕಿಡಿಕಾರಿದ್ದಾರೆ.

    ಹೊನ್ನಾವರ ಕಾರ್ಯಕರ್ತರ ಅಭಿನಂದನಾ ಸಭೆಯಲ್ಲಿ ತಮ್ಮ ಹೇಳಿಕೆಯನ್ನ ಮತ್ತೊಮ್ಮೆ ಸಮರ್ಥಿಸಿಕೊಂಡ ಅವರು, ವಾರಗಟ್ಟಲೇ ಸುದ್ದಿ ಮಾಡಿ ನನಗೆ ಅಪಪ್ರಚಾರ, ಪ್ರಚಾರವೇ ಮಾಡಲಿ. ಎಲ್ಲವನ್ನ ನುಂಗಿ ನೀರು ಕುಡಿಯುವ ಶಕ್ತಿ ನನಗಿದೆ ಎಂದು ಹೇಳಿದರು.

    ಸೋಮವಾರ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು ಉತ್ತರ ಕನ್ನಡ ಜಿಲ್ಲೆಯ ಮಾಧ್ಯಮಮಿತ್ರರರು ಹೊರತು ಪಡಿಸಿ ರಾಜ್ಯಮಟ್ಟದಲ್ಲಿ ಈಗ ಎಡಬಿಡಂಗಿ ಮಾಧ್ಯಮ ಮಿತ್ರರು ಇದ್ದಾರೆ. ಅವರಿಗೆ ಮಾಧ್ಯಮ ಕೌಶಲ್ಯವೇ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದರು.

    https://youtu.be/j3pQfXA7x5c

    https://youtu.be/70m67nYmDvQ