Tag: ಅನಂತಕುಮಾರ್ ಹೆಗಡೆ

  • ಲೋಕಲ್ ಟ್ರೈನ್ ಹತ್ತಿ ಬಂದ ಸಮುದಾಯ ನಮ್ಮದಲ್ಲ- ಪಕ್ಷಾಂತರರಿಗೆ ಹೆಗಡೆ ಟಾಂಗ್

    ಲೋಕಲ್ ಟ್ರೈನ್ ಹತ್ತಿ ಬಂದ ಸಮುದಾಯ ನಮ್ಮದಲ್ಲ- ಪಕ್ಷಾಂತರರಿಗೆ ಹೆಗಡೆ ಟಾಂಗ್

    ಕಾರವಾರ: ಲೋಕಲ್ ಟ್ರೈನ್ ಹತ್ತಿ ಬಂದ ಸಮುದಾಯ ನಮ್ಮದಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ಅವರು ಪಕ್ಷಾಂತರ ಮಾಡುವವರಿಗೆ ಟಾಂಗ್ ನೀಡಿದ್ದಾರೆ.

    ಇಂದು ಕಾರವಾರದ ಆಶ್ರಮ ಮಠ ರಸ್ತೆಯಲ್ಲಿನ ಹಳದಿಪುರಕರ್ ಮನೆಯಲ್ಲಿ ನಡೆದ ಗಾಂಧಿ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಲೋಕಲ್ ಟ್ರೈನ್ ಹತ್ತಿ ಬಂದ ಸಮುದಾಯ ನಮ್ಮದಲ್ಲ. ಆ ಪಕ್ಷದಲ್ಲಿ ಇರುವುದು, ಅಲ್ಲಿ ಸೀಟ್ ಕೊಟ್ಟಿಲ್ಲ ಎಂದರೆ ಈ ಪಕ್ಷಕ್ಕೆ ಬರುವುದು ಇತ್ತೀಚೆಗೆ ಶುರುವಾಗಿ ಹೋಗಿದೆ. ಆದರೆ ನಾವು ಆ ರೀತಿ ಮಾಡಿದವರಲ್ಲ. ನಮ್ಮದು ಬಲಿಷ್ಠ ಸಂಘಟನೆಯಾಗಿದ್ದು, ಪ್ರತಿಯೊಂದು ವಿಚಾರಕ್ಕೂ ಸ್ಪಷ್ಟವಾದ ನಿಲುವು ನಮ್ಮಲ್ಲಿದೆ ಎಂದು ಹೇಳಿದರು.

    ಎಲ್ಲ ಕಡೆ ಹೋದರೂ ಒಂದೇ ಮುಖ ನೋಡುತ್ತಿದ್ದೇವೆ. ಶತಾಬ್ಧಿ ಎಕ್ಸ್‍ಪ್ರೆಸ್ ಹಾಗೂ ಲೋಕಲ್ ಟ್ರೈನ್ ಯಾವುದೇ ಹತ್ತಿದರೂ ಸಹ ನಾವು ಒಂದೇ ಮುಖವನ್ನು ಕಾಣುತ್ತೇವೆ. ಈ ತರ ಟ್ರೈನ್ ಹತ್ತಿ ಬಂದಿರುವ ಸಮುದಾಯ ನಮ್ಮದಲ್ಲ ಎಂದು ಕುಟುಕಿದರು.

    ದೇಶದ ಆರ್ಥಿಕತೆ ಬಿದ್ದು ಹೋಗಿದೆ ಎಂದು ಸೋಗಲಾಡಿ ಆರ್ಥಿಕ ತಜ್ಞರ ಜಿಜ್ಞಾಸೆ ಶುರುವಾಗಿದೆ. ಸೋಗಲಾಡಿ ವಿಚಾರವಾದಿಗಳು, ಆರ್ಥಿಕ ತಜ್ಞರು ಭಾಷಣ ಬಿಗಿಯುತ್ತಿದ್ದಾರೆ. ನಾವು ರಾಜಕೀಯಕ್ಕೆ ಬರಬೇಕು ಎಂಪಿ, ಎಂಎಲ್‍ಎ ಆಗಬೇಕು, ನಮ್ಮ ಸರ್ಕಾರ ಬರಬೇಕು ಎಂದು ಪಕ್ಷ ಕಟ್ಟಿಲ್ಲ. ರಾಜಕೀಯದಲ್ಲಿ ಮೇಲಾಟಗಳು ಸಹಜ. ಆದರೆ ನಮಗೆ ನಮ್ಮದೇ ಆದ ಸ್ಪಷ್ಟತೆ ಇದೆ, ಗುರಿ ಇದೆ ಎಂದು ಟೀಕಾಕಾರ ಆರೋಪಗಳಿಗೆ ತಿರುಗೇಟು ನೀಡಿದರು.

  • ಸಸಿಕಾಂತ್ ಸೆಂಥಿಲ್ ರಾಜದ್ರೋಹ ಎಸಗಿದ್ದಾರೆ: ಅನಂತ್ ಕುಮಾರ್ ಹೆಗ್ಡೆ

    ಸಸಿಕಾಂತ್ ಸೆಂಥಿಲ್ ರಾಜದ್ರೋಹ ಎಸಗಿದ್ದಾರೆ: ಅನಂತ್ ಕುಮಾರ್ ಹೆಗ್ಡೆ

    ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ರಾಜದ್ರೋಹ ಎಸಗಿದ್ದಾರೆ ಎಂದು ಉತ್ತರ ಕನ್ನಡ ಸಂಸದ ಅನಂತ್ ಕುಮಾರ್ ಹೆಗ್ಡೆ ಆರೋಪಿಸಿದ್ದಾರೆ.

    ಟ್ವಿಟ್ಟರ್ ನಲ್ಲಿ ಸಸಿಕಾಂತ್ ಸೆಂಥಿಲ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಸಂಸದರು, ಕೇಂದ್ರ ಸರ್ಕಾರ ಸಂಸತ್‍ನಲ್ಲಿ ಬಹುಮತದಿಂದ ಕೈಗೊಂಡ ನಿರ್ಧಾರವನ್ನು ಸರ್ಕಾರಿ ಅಧಿಕಾರಿ ಪ್ರಶ್ನಿಸಬಾರದು. ಅಂತಹ ದುಸ್ಸಾಹಸಕ್ಕೆ ಸೆಂಥಿಲ್ ಕೈಹಾಕಿದ್ದಾರೆ. ಇದಕ್ಕಿಂತ ದೊಡ್ಡ ದ್ರೋಹ ಮತ್ತೊಂದಿಲ್ಲ ಎಂದು ಗುಡುಗಿದರು.

    ಸಸಿಕಾಂತ್ ಸೆಂಥಿಲ್ ಅವರ ಹೇಳಿಕೆ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ರಾಜ್ಯಪಾಲರಿಗೂ ಕ್ರಮಕೈಗೊಳ್ಳುವ ಅಧಿಕಾರವಿದೆ. ಜನರು ಕೂಡ ಇದನ್ನು ಬಯಸುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಇಂತಹ ದುಷ್ಕೃತ್ಯ ಎಸಗಿದ್ದಾರೆ. ಇದರ ಹಿಂದೆ ಇರುವ ಕೈಗಳ ಕೈವಾಡ ಬೆಳಕಿಗೆ ಬರಬೇಕು. ಹೀಗಾಗಿ ತನಿಖೆ ಅಗತ್ಯವಾಗಿದೆ ಎಂದು ಒತ್ತಾಯಿಸಿದರು.

    ಸಂವಿಧಾನ ಬದ್ಧವಾಗಿ ಕೈಗೊಂಡ ನಿರ್ಧಾರವನ್ನು ಸರ್ಕಾರಿ ಅಧಿಕಾರಿ ಪ್ರಶ್ನಿಸಿರುವುದು ಸೂಕ್ತವಲ್ಲ. ಸಸಿಕಾಂತ್ ಸೆಂಥಿಲ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ದುರಂಹಕಾರ, ಅಸಭ್ಯತೆ ಮೆರೆದಿದ್ದಾರೆ. ತಕ್ಷಣವೇ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಸಂಸದರು ಭಾನುವಾರವೂ ಟ್ವೀಟ್ ಮೂಲಕ ಸಸಿಕಾಂತ್ ಸೆಂಥಿಲ್ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಸಸಿಕಾಂತ್ ಸೆಂಥಿಲ್ ಅವರ ಪತ್ರಿಕಾ ಹೇಳಿಕೆಯ ತುಣುಕನ್ನು ಟ್ವೀಟ್ ಮಾಡಿದ್ದ ಹೆಗ್ಡೆ, ಈತ ಮಾಡಬೇಕಾದ ಮೊದಲ ಕೆಲಸವೆಂದರೆ ಕೂಡಲೇ ತನ್ನ ನಿಲುವನ್ನು ಬೆಂಬಲಿಸಿದವರೊಂದಿಗೆ ಪಾಕಿಸ್ತಾನಕ್ಕೆ ವಲಸೆ ಹೋಗುವುದು. ಇದು ಪ್ರಾಯೋಗಿಕವಾಗಿಯೂ ಸುಲಭ ಮತ್ತು ಅಂತಿಮ ಪರಿಹಾರ ಕೂಡ. ಇಲ್ಲೇ ಇದ್ದು ದೇಶ ಒಡೆಯುವ ಬದಲು, ಅಲ್ಲಿಗೆ ಹೋಗಿ ನಮ್ಮ ದೇಶ ಮತ್ತು ನಮ್ಮ ಸರ್ಕಾರದ ವಿರುದ್ಧ ನೇರ ಹೋರಾಟ ಮಾಡುವುದು ಒಳಿತು. ಇದರಲ್ಲಾದರೂ ನಿಯತ್ತು ತೋರಿಸಲಿ ಎಂದು ಹೇಳಿದ್ದರು.

  • ಸಚಿವ ಅನಂತಕುಮಾರ್ ಹೆಗಡೆ ಜೊತೆ ಶಾಸಕ ಶಿವರಾಮ್ ಹೆಬ್ಬಾರ್ ರಹಸ್ಯ ಮಾತುಕತೆ!

    ಸಚಿವ ಅನಂತಕುಮಾರ್ ಹೆಗಡೆ ಜೊತೆ ಶಾಸಕ ಶಿವರಾಮ್ ಹೆಬ್ಬಾರ್ ರಹಸ್ಯ ಮಾತುಕತೆ!

    – ಮತ್ತೆ ಶುರುವಾಯ್ತಾ ಆಪರೇಷನ್ ಕಮಲ?

    ಬೆಂಗಳೂರು: ಒಂದು ವಾರದ ಹಿಂದೆ ರಾಜ್ಯ ರಾಜಕಾರಣವನ್ನೇ ಅಲ್ಲೋಲ ಕಲ್ಲೋಲ ಮಾಡಿದ್ದ ಆಪರೇಷನ್ ಕಮಲ ಕೊನೆ ಹಂತದಲ್ಲಿ ವಿಫಲವಾಗಿತ್ತು. ಗುರುಗ್ರಾಮದ ರೆಸಾರ್ಟ್ ಸೇರಿಕೊಂಡಿದ್ದ ಬಿಜೆಪಿ ಶಾಸಕರು ತಮ್ಮ ಕ್ಷೇತ್ರದತ್ತ ಮರಳಿ ಬರ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ. ಆಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ ರೆಸಾರ್ಟ್ ಸೇರಿಕೊಂಡಿದ್ದ ಕೈ ನಾಯಕರು ತಮ್ಮ ಕ್ಷೇತ್ರಕ್ಕೆ ಹಿಂದಿರುಗಿದ್ದಾರೆ. ಇದೀಗ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಜೊತೆ ರಹಸ್ಯ ಮಾತುಕತೆ ನಡೆಸಿದ್ದಾರೆ.

    ಯಲ್ಲಾಪುರ ಸರ್ಕಾರಿ ವಸತಿಗೃಹದಲ್ಲಿ ಇಬ್ಬರು ನಾಯಕರು ತಮ್ಮ ಬೆಂಬಲಿಗರನ್ನು ಹೊರ ಕಳುಹಿಸಿ ಸಮಾಲೋಚನೆ ನಡೆಸಿದ್ದಾರೆ. ಈ ಹಿಂದೆ ಆಪರೇಷನ್ ಕಮಲಕ್ಕೆ ಒಳಗಾಗಬಹುದು ಅನ್ನೊ ಪಟ್ಟಿಯಲ್ಲಿ ಶಿವರಾಮ್ ಹೆಬ್ಬಾರ್ ಅವರ ಹೆಸರು ಕೇಳಿ ಬಂದಿತ್ತು. ಕೈ ಅತೃಪ್ತ ಶಾಸಕರು ಮುಂಬೈ ಸೇರಿಕೊಂಡಾಗ ಶಿವರಾಮ್ ಹೆಬ್ಬಾರ್ ಸಹ ಕೆಲ ದಿನ ಅಜ್ಞಾತಸ್ಥಳದಲ್ಲಿದ್ದರು. ಈ ವೇಳೆ ಆಪರೇಷನ್ ಕಮಲದಡಿ ಶಿವರಾಮ್ ಹೆಬ್ಬಾರ್ ಹೆಸರು ಕೇಳಿ ಬಂದಿತ್ತು.

    ಆಪರೇಷನ್ ಕಮಲ ವಿಫಲ ಬಳಿಕ ಕಾಣಿಸಿಕೊಂಡಿದ್ದ ಶಾಸಕರು, ನಾನು ಕುಟುಂಬದ ಜೊತೆ ಅಂಡಮಾನ್ ನಿಕೋಬಾರ್ ಪ್ರವಾಸಕ್ಕೆ ತೆರಳಿದ್ದೆ. ಅಭಿಮಾನಿಗಳು ಬಿಜೆಪಿಗೆ ಹೋಗಿ ಎಂದು ಹೇಳುತ್ತಾರೆ. ಅದು ಅವರ ಅಭಿಮಾನ. ಆದರೆ ಈ ಕ್ಷಣದವರೆಗೆ ಯಾವುದೇ ನಿರ್ಧಾರ ಮಾಡಿಲ್ಲ ಊಹಾಪೋಹದ ಸುದ್ದಿಗಳಿಗೆ ನಾವು ಬೆಲೆ ಕೊಡುವುದಿಲ್ಲ. ಮಾಧ್ಯಮಗಳಲ್ಲಿ ಕಪೋಲಕಲ್ಪಿತ ಸುದ್ದಿಗಳು ಬರುತ್ತಿವೆ. ಅದಕ್ಕೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಎಂದು ಹೇಳಿದ್ದರು.

    https://www.youtube.com/watch?v=t8hUU62B-gc

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸೂಲಿಬೆಲೆ ಲೋಕಸಭಾ ಚುನಾವಣೆಗೆ ನಿಲ್ತಾರಾ: ಸಚಿವ ಹೆಗಡೆ ಉತ್ತರ ಕೊಟ್ಟಿದ್ದು ಹೀಗೆ

    ಸೂಲಿಬೆಲೆ ಲೋಕಸಭಾ ಚುನಾವಣೆಗೆ ನಿಲ್ತಾರಾ: ಸಚಿವ ಹೆಗಡೆ ಉತ್ತರ ಕೊಟ್ಟಿದ್ದು ಹೀಗೆ

    ಕಾರವಾರ: ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧ ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

    ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಉತ್ತರಕನ್ನಡದಿಂದ ಚಕ್ರವರ್ತಿ ಸೂಲಿಬೆಲೆ ಕಣಕ್ಕೆ ಇಳಿಯುತ್ತಾರಾ ಎನ್ನುವ ಮಾಧ್ಯಮಗಳ ಪ್ರಶ್ನೆಗೆ ನಾನೊಬ್ಬ ಪಕ್ಷದ ಕಾರ್ಯಕರ್ತ, ಪಕ್ಷ ಏನು ತೀರ್ಮಾನ ಕೈಗೊಳ್ಳುತ್ತದೆಯೋ ಅದಕ್ಕೆ ಬದ್ಧವಾಗಿರುವೆ ಎಂದು ಪ್ರತಿಕ್ರಿಯಿಸಿದ್ದಾರೆ.

    ಸಿಎಂ ವಿರುದ್ಧ ಕಿಡಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಂತೆ, ಮುಖ್ಯಮಂತ್ರಿ ಕುಮಾರಸ್ವಾಮಿ ದುರಾಡಳಿತ ನಡೆಸುತಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಶಾಸಕರಿಗೆ ಹಣ ನೀಡುತ್ತಿಲ್ಲ, ಶಾಸಕರು ಕ್ಷೇತ್ರಾಭಿವೃದ್ಧಿಗೆ ಹಣ ಕೇಳಿದರೆ ರೈತರ ಸಾಲ ಮನ್ನಾ ಮಾಡಿದ್ದೇವೆ, ಅಭಿವೃದ್ಧಿಗೆ ಹಣ ಇಲ್ಲವೆಂದು ದುರಹಂಕಾರದಿಂದ ಉತ್ತರಿಸುತ್ತಾರೆ. ಹೀಗಾಗಿ ಸಾರ್ವಜನಿಕ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿದೆ. ಕೇಂದ್ರಸರ್ಕಾರ ವಿವಿಧ ಅನುದಾನ ನೀಡುತ್ತಿದೆ ಅಷ್ಟೇ ಅಲ್ಲದೇ ಕಂದಾಯ ಇಲಾಖೆಯಿಂದ ಆದಾಯವಿದೆ. ಆದರೂ ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ ಎಂದರೆ ನಾಚಿಕೆಗೇಡು. ಈ ವಿಚಾರದಲ್ಲಿ ಸರ್ಕಾರ ತಲೆ ತಗ್ಗಿಸಬೇಕು ಎಂದು ಎಚ್‍ಡಿಕೆ ವಿರುದ್ಧ ವಾಗ್ದಾಳಿ ನಡೆಸಿದರು.

    ಕರ್ನಾಟಕದ ಪುರಸಭೆ, ನಗರಸಭಾ ಚುನಾವಣಾ ಪ್ರಕ್ರಿಯೆಗಳು ಇಂದು ನಡೆದಿದೆ. ಈ ಬಾರಿ ದಾಖಲೆಯ ಮಟ್ಟದಲ್ಲಿ ಬಿಜೆಪಿ ಅತ್ಯಧಿಕ ಸ್ಥಾನ ಗೆಲ್ಲುವ ವಿಶ್ವಾಸವಿದೆ. ಈ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿತ್ತು ಆದರೆ ಈಗ ಮಿಶ್ರ ಪಕ್ಷಗಳು ಅಧಿಕಾರದಲ್ಲಿದೆ. ಅಭಿವೃದ್ಧಿ ಕೇವಲ ಫೈಲ್‍ಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಮಾತ್ರ ಕಣ್ಣಿಸುತ್ತಿರುವುದು ಬಿಟ್ಟರೆ ಅಭಿವೃದ್ಧಿ ಬಹುತೇಕ ಸಾರ್ವಜನಿಕರಿಗೆ ಒಂದು ಮರಿಚೀಕೆಯಾಗಿದೆ. ಕರ್ನಾಟಕದಲ್ಲಿರುವ ನಗರದ ಅವ್ಯವಸ್ಥೆ ಯಾರಿಗೂ ಬೇಡ. ಹಾಗಾಗಿ ಕರ್ನಾಟಕದ ನಗರ ಪ್ರದೇಶದಲ್ಲಿರುವ ಜನತೆ ಈ ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕೆಂದು ನಿರ್ಧರಿಸಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕರ ನಗರಾಭಿವೃದ್ಧಿ ಮಾಡಬೇಕೆಂದು ಯೋಜನೆ ಇತ್ತು ಎಂದರು.

    ಕರಾವಳಿ ಭಾಗದಲ್ಲಿ ಆರ್‍ಎಸ್‍ಎಸ್ ಹಿನ್ನೆಲೆಯಿರುವವರಿಗೆ ಟಿಕೆಟ್ ನೀಡಲಾಗಿದೆ ಎನ್ನುವ ಆರೋಪ ಸರಿಯಲ್ಲ. ಯಾರು ಅರ್ಹರಿದ್ದಾರೋ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿ ಆರ್‍ಎಸ್‍ಎಸ್ ಎಂದು ಪಕ್ಷದ ಕಾರ್ಯಕರ್ತರನ್ನು ವಿಂಗಡಿಸುವುದು ಸರಿಯಲ್ಲ ಎಂದರು.

     

    ಕೊನೆಯದಾಗಿ ಅಟಲ್ ಅವರನ್ನು ನೆನೆದು ಅವರು ತಮ್ಮನ್ನು ತಾವು ಒಂದು ದೇಶದ ಆಸ್ತಿಯೆಂದು ಪರಿಗಣಿಸಿದರು. ವೈಯಕ್ತಿಕ ಬದುಕಿಗೆ ಅವಕಾಶವೇ ನೀಡುತ್ತಿರಲಿಲ್ಲ. ಅವರ ತೀರಿಕೊಂಡ ನಂತರ ಅವರ ಅಸ್ಥಿಯನ್ನ ದೇಶದ ಎಲ್ಲಾ ನದಿಗಳಲ್ಲೂ ಬಿಡಬೇಕು ಎಂಬುದು ಅವರ ಅಪೇಕ್ಷೆ ಯಾಗಿತ್ತು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪುಕ್ಕಟೆ ಉಪವಾಸ ಕೂತಿದ್ದಕ್ಕೆ ನಮಗೆ ಸ್ವಾತಂತ್ರ್ಯ ಬಂದಿಲ್ಲ: ಅನಂತಕುಮಾರ್ ಹೆಗಡೆ

    ಪುಕ್ಕಟೆ ಉಪವಾಸ ಕೂತಿದ್ದಕ್ಕೆ ನಮಗೆ ಸ್ವಾತಂತ್ರ್ಯ ಬಂದಿಲ್ಲ: ಅನಂತಕುಮಾರ್ ಹೆಗಡೆ

    ದಾವಣಗೆರೆ: ಪುಕ್ಕಟೆ ಉಪವಾಸ ಕೂತಿದ್ದಕ್ಕೆ ನಮಗೆ ಸ್ವಾತಂತ್ರ್ಯ ಬಂದಿಲ್ಲ. ಅಸಂಖ್ಯಾತ ಜನರ ರಕ್ತ ಚೆಲ್ಲಿ ಹೋರಾಟ ಮಾಡಿದ ಫಲದಿಂದ ಸಿಕ್ಕಿದೆ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ನಗರದ ನಡೆದ ಎಸ್.ಎಸ್. ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಸಭೆ ನಮೋ ಭಾರತ-ಮಿಷನ್ 365+ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ಕೇವಲ ಸರ್ಕಾರಿ ಕಚೇರಿಯಲ್ಲಿನ ಮೂರು ಫೋಟೋಗಳಿಂದ ಸ್ವಾತಂತ್ರ್ಯ ದೊರೆತಿಲ್ಲ. ದೇಶದ ಸ್ವಾತಂತ್ರ್ಯಕ್ಕೆ ಏಕೀಕೃತ ರೂಪ ಕೊಟ್ಟಿದ್ದು ಸರ್ದಾರ್ ವಲ್ಲಭಭಾಯ್ ಪಟೇಲ್ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಎಂದು ತಿಳಿಸಿದರು.

    ರಾಜಕಾರಣ ಬಗ್ಗೆ ಹೇಳಲು ಹೇಸಿಗೆಯಾಗುವಂತೆ ಮಾಡಿದ್ದು ಒಂದು ರಾಜಕಾರಣದ ಕುಟುಂಬ. ದೇಶ ರಾಜಕೀಯದಲ್ಲಿ ಅವರು 70 ವರ್ಷಗಳ ಕಾಲ ಹೊಲಸು ಆಳ್ವಿಕೆಯನ್ನು ತೋರಿಸಿದರು. ಅವರು ದೇಶ ಕಾಯುವ ಸೈನಿಕರ ಕೈಯಲ್ಲಿ ಬಂದೂಕು ಕೊಡದೆ, ವೈರಿಗಳ ಮಧ್ಯೆ ಬಿಟ್ಟರು. ನಾವು ಹೊರದೇಶದಲ್ಲಿ ಮೋಜು, ಮಸ್ತಿ ಮಾಡಿದ ಪ್ರಧಾನಿಯನ್ನು ನೋಡಿದ್ದೇವೆ. ಅದು ಮನೆ ಮುರುಕ ಹಾಗೂ ಇಚ್ಛಾಶಕ್ತಿ ಇಲ್ಲದಿರುವ ಸರ್ಕಾರ ಎಂದು ನೆಹರು ಕುಟುಂಬದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

    ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಂತರದಲ್ಲಿ ಮನೆ ಮುರುಕ ಸರ್ಕಾರ ಆಡಳಿತಕ್ಕೆ ಬಂತು. ಈಗ ಬಿಜೆಪಿ ಅಧಿಕಾರದಲ್ಲಿದೇ ಮತ್ತೇ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕು ಎನ್ನುವುದು ದೇಶದ ಜನರ ಅಭಿಪ್ರಾಯವಾಗಿದೆ. ಒಂದು ಕಡೆ ಅಪ್ರಭುದ್ಧತೆಯ ಪ್ರತೀಕ, ಮತ್ತೊಂದು ಕಡೆ ಪ್ರಭುತ್ವದ ಮೇರು ಪರ್ವತ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕಾಲೆಳೆದು ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳಿದರು.

    ಸತ್ಯ ಹೇಳಿದರೆ ಕೆಲವರು ಮೂಗು ಮುರಿಯುತ್ತಾರೆ. ಮತ್ತೊಂದು ಕಡೆ ಶಬ್ಧಗಳ ಅರ್ಥ ತಿಳಿಯದೇ ಬುದ್ಧಿ ಜೀವಿಗಳ ವ್ಯಭಿಚಾರವನ್ನು ಮಾಧ್ಯಮಗಳು ಮಾಡುತ್ತಿವೆ ಎಂದು ಮಾಧ್ಯಮವದರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

    ಕುರ್ಚಿ ಖಾಲಿ ಖಾಲಿ:
    ಉದ್ಘಾಟನೆ ಕಾರ್ಯಕ್ರಮಕ್ಕೆ ಸಚಿವ ಅನಂತಕುಮಾರ್ ಹೆಗಡೆ ಬರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುತ್ತಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಒಂದು ಸಾವಿರ ಕುರ್ಚಿಗಳಲ್ಲಿ ಅರ್ಧಕ್ಕೂ ಹೆಚ್ಚು ಖಾಲಿ ಉಳಿದಿದ್ದವು. ಆದರೆ ಸಭಾಂಗಣದ ಒಳಗೆ ಹೊರಗೆ 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನೇಮಿಸಲಾಗಿತ್ತು.

    ಹೆಗಡೆ ವಿರುದ್ಧ ಪ್ರತಿಭಟನೆ:
    ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕಾರ್ಯಕ್ರಮಕ್ಕೆ ಬರುವುದನ್ನು ವಿರೋಧಿಸಿ ದಲಿತ ಸಂಘಟನೆಗಳು ನಗರದ ಜಿಲ್ಲಾ ಪಂಚಾಯಿತ್ ಕಚೇರಿ ಬಳಿ ಇರುವ ಸರ್ಕೀಟ್ ಹೌಸ್ ಬಳಿ ಪ್ರತಿಭಟನೆ ನಡೆಸಿದ್ದವು. ಹೀಗಾಗಿ 20ಕ್ಕೂ ಹೆಚ್ಚು ಜನ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.

  • ಅನಂತಕುಮಾರ ಹೆಗಡೆ ಕಾಲಿನ ಹೆಬ್ಬೆರಳಿಗಿರುವಷ್ಟೂ ಬೆಲೆ ಆನಂದ್ ಅಸ್ನೋಟಿಕರ್ ಗೆ ಇಲ್ಲ: ಬಿಜೆಪಿ ಮುಖಂಡ

    ಅನಂತಕುಮಾರ ಹೆಗಡೆ ಕಾಲಿನ ಹೆಬ್ಬೆರಳಿಗಿರುವಷ್ಟೂ ಬೆಲೆ ಆನಂದ್ ಅಸ್ನೋಟಿಕರ್ ಗೆ ಇಲ್ಲ: ಬಿಜೆಪಿ ಮುಖಂಡ

    ಕಾರವಾರ: ಮಾಜಿ ಶಾಸಕ ಆನಂದ್ ಅಸ್ನೋಟಿಕರ್ ಒಬ್ಬ ಪರಮನೀಚ, ಆತನಿಗೆ ಅನಂತಕುಮಾರ್ ಹೆಗಡೆ ಕಾಲಿನ ಹೆಬ್ಬೆರಳಿಗಿರುವಷ್ಟೂ ಬೆಲೆಯಿಲ್ಲ ಎಂದು ಬಿಜೆಪಿ ಮುಖಂಡ ಸುನಿಲ್ ಹೆಗಡೆ ಕಿಡಿಕಾರಿದ್ದಾರೆ. ಕಾರವಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸಚಿವ ಅನಂತಕುಮಾರ ಓರ್ವ ನೀಚ ರಾಜಕಾರಣಿ ಎಂದು ಹೇಳಿದ್ದ ಆನಂದ್ ಅಸ್ನೋಟಿಕರ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ರು.

    ಉದ್ಯಮಿಯಾಗಿರುವ ಆನಂದ್ ಅಸ್ನೋಟಿಕರ್ ಸ್ವಹಿತ ಸಾಧನೆಗಾಗಿ ಕಾಂಗ್ರೆಸ್ ದೃಷ್ಟಿಯಲ್ಲಿ ಒಳ್ಳೆಯವರೆನಿಸಿಕೊಳ್ಳಲು ಈ ರೀತಿಯ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಆದರೆ ವಸಂತ ಅಸ್ನೋಟಿಕರ್ ಬಳಿಕ ಸಿಂಪತಿ ಮೇಲೆ ಚುನಾವಣೆಯಲ್ಲಿ ಆರಿಸಿ ಬಂದ ಆನಂದ್ ಪಕ್ಷದಿಂದ ಪಕ್ಷವನ್ನ ಬದಲಾವಣೆ ಮಾಡುತ್ತಾ ಆರಿಸಿದ ಮತದಾರರಿಗೂ ನಿಷ್ಠಾವಂತರಾಗಿರದೇ ಪ್ರಜಾಪ್ರಭುತ್ವವನ್ನ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ದೇಶದ ನೀಚ ಮಂತ್ರಿ ಅಂದ್ರೆ ಅನಂತಕುಮಾರ್ ಹೆಗಡೆ-ಆನಂದ್ ಅಸ್ನೋಟಿಕರ್

    ಗೋವಾದ ಕ್ಯಾಸಿನೋ ಒಂದರಲ್ಲಿ ತೆವಲನ್ನ ತೀರಿಸಿಕೊಳ್ಳಲು ಹೋಗಿದ್ದ ಆನಂದ್ ಅಸ್ನೋಟಿಕರ್ ಅಲ್ಲಿನ ಬೌನ್ಸರ್ ಗಳಿಂದ ಹೊಡೆತ ತಿಂದು ಬಂದಿದ್ದರು. ಸಚಿವ ಅನಂತಕುಮಾರ್ ವಿರುದ್ಧ ಮಾತನಾಡುವ ಯಾವುದೇ ನೈತಿಕತೆ ಆನಂದ್ ಅಸ್ನೋಟಿಕರ್ ಗೆ ಇಲ್ಲ ಎಂದು ಮಾಜಿ ಶಾಸಕ ಸುನಿಲ್ ಹೆಗಡೆ ಟೀಕಿಸಿದ್ರು.

    ಸಚಿವ, ಸಂಸದ ಅನಂತಕುಮಾರ್ ಹೆಗಡೆ ಹೋರಾಟಗಳ ಮೂಲಕವೇ ತಮ್ಮನ್ನ ತಾವು ಗುರುತಿಸಿಕೊಂಡು ಬಂದಿರುವವರು. ಅನಂತಕುಮಾರ್ ಯಾರೋ ಹಾರಿಸಿದ ಧ್ವಜವನ್ನ ಹಾರಿಸಿ ಹೆಸರು ಪಡೆದುಕೊಂಡಿದ್ದಾರೆ ಅಂತಾ ತುಚ್ಛವಾಗಿ ಮಾತನಾಡಿರುವುದು ಸರಿಯಲ್ಲ. ಇನ್ನು ಶಿರಸಿ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಸಚಿವ ಅನಂತಕುಮಾರ್ ಹಲ್ಲೆ ಮಾಡಿದ್ದರು ಎನ್ನುವ ಕುರಿತು ದಾಖಲೆಗಳಿದ್ದರೆ ಅದನ್ನ ಬಿಡುಗಡೆ ಮಾಡಲೀ ಅಂತಾ ಬಿಜೆಪಿ ಆನಂದ್ ಅಸ್ನೋಟಿಕರ್ ಗೆ ಬಹಿರಂಗ ಸವಾಲನ್ನು ಹಾಕಿದರು.

  • ದೇಶದ ನೀಚ ಮಂತ್ರಿ ಅಂದ್ರೆ ಅನಂತಕುಮಾರ್ ಹೆಗಡೆ-ಆನಂದ್ ಅಸ್ನೋಟಿಕರ್

    ದೇಶದ ನೀಚ ಮಂತ್ರಿ ಅಂದ್ರೆ ಅನಂತಕುಮಾರ್ ಹೆಗಡೆ-ಆನಂದ್ ಅಸ್ನೋಟಿಕರ್

    ಕಾರವಾರ: ಭಾರತ ದೇಶದ ಅತ್ಯಂತ ನೀಚ ಮಂತ್ರಿ ಅಂದ್ರೆ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಎಂದು ಮಾಜಿ ಸಚಿವ ಆನಂದ್ ಅಸ್ನೋಟಿಕರ್ ಹೇಳಿದ್ದಾರೆ.

    ಹುಬ್ಬಳ್ಳಿಯಲ್ಲಿ ಯಾರೋ ಹಾರಿಸಿರುವ ಧ್ವಜವನ್ನು ನಾನು ಹಾರಿಸಿದ್ದೇನೆಂದು ಹೇಳುವ ಮೂಲಕ ತಾವು ಆರ್‍ಎಸ್‍ಎಸ್‍ನಲ್ಲಿ ದೊಡ್ಡ ಕೆಲಸ ಮಾಡಿದ್ದೇನೆ ಎಂದು ಅನಂತಕುಮಾರ್ ಹೆಗಡೆ ಹೇಳಿಕೊಳ್ಳುತ್ತಾರೆ. ಅದು ಹೇಗೆ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೋ ಗೊತ್ತಿಲ್ಲ. ಜೀವನದಲ್ಲಿಯೇ ಹೆಗಡೆಗೆ ಮಂತ್ರಿ ಸ್ಥಾನ ಸಿಗುತ್ತಿರಲಿಲ್ಲ. ಇರಲಿ ಎಂದು ಕರುಣೆ ತೋರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಚಿವ ಸ್ಥಾನ ನೀಡಿದ್ದಾರೆ ಎಂದು ಅವನು, ಇವನು ಅಂತಾ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

    ಅನಂತಕುಮಾರ್ ಹೆಗಡೆಗೆ ಸಚಿವ ಸ್ಥಾನ ನೀಡಿದ್ದಕ್ಕೆ ಅಮಿತ್ ಶಾ ಇಂದು ಪಶ್ಚಾತ್ತಾಪ ಪಡುತ್ತಿದ್ದಾರೆ. ಅಮಿತ್ ಶಾ ಬಿಸಿ ತುಪ್ಪವನ್ನು ಬಾಯಿಗೆ ಹಾಕಿಕೊಂಡಿದ್ದು, ನುಂಗುವ ಹಾಗಿಲ್ಲೂ ಇತ್ತ ಉಗುಳುವ ಹಾಗಿಲ್ಲ ಎಂಬ ಪರಿಸ್ಥಿತಿಯಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ರು.

    ಅನಂತಕುಮಾರ್ ಹೆಗಡೆಗೆ ಹಿರಿಯರಿಗೆ ಗೌರವ ಕೊಡುವುದು ಗೊತ್ತಿಲ್ಲ. ಈ ಹಿಂದೆ ವೈದ್ಯರ ಮೇಲೆಯೂ ಹಲ್ಲೆ ನಡೆಸಿದ್ದು, ಎಲ್ಲರಿಗೂ ಗೊತ್ತಿದೆ. ಈ ಬಾರಿ ಚುನಾವಣೆಯಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ವಿರೋಧ ಮಾಡಿದ್ದರು. ಹಲವು ಬಾರಿ ಕಾಗೇರಿಯವರನ್ನು ಅವಮಾನಿಸಿದ್ದು, ಒಮ್ಮೆ ಚಪ್ಪಲಿಯಲ್ಲಿಯೇ ಹೊಡೆದಿದ್ದರು. ನಾನು ಕಂಡ ಅತ್ಯಂತ ನೀಚ ಸಂಸದ ಅನಂತಕುಮಾರ್ ಹೆಗಡೆ ಎಂದು ಅಸ್ನೋಟಿಕರ್ ಆಕ್ರೋಶ ಹೊರಹಾಕಿದರು.

  • ಅನಂತಕುಮಾರ್ ಹೆಗಡೆಗೆ ಪುಟಗೋಸಿ ರವಾನಿಸಿದ ಜೆಡಿಎಸ್ ಕಾರ್ಯಕರ್ತರು

    ಅನಂತಕುಮಾರ್ ಹೆಗಡೆಗೆ ಪುಟಗೋಸಿ ರವಾನಿಸಿದ ಜೆಡಿಎಸ್ ಕಾರ್ಯಕರ್ತರು

    ಮಂಡ್ಯ: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರಿಗೆ ಪುಟಗೋಸಿ ಕಳುಹಿಸುವ ಮೂಲಕ ಜೆಡಿಎಸ್ ಕಾರ್ಯಕರ್ತರು ಆಕ್ರೋಶವನ್ನು ಹೊರಹಾಕಿದ್ದಾರೆ.

    ಇಂದು ಮಂಡ್ಯದ ಪೋಸ್ಟ್ ಆಫೀಸ್ ಬಳಿ ಆಗಮಿಸಿದ ಜೆಡಿಎಸ್ ಕಾರ್ಯಕರ್ತರು ಅನಂತಕುಮಾರ್ ಹೆಗಡೆ ಅವರಿಗೆ ಪುಟಗೋಸಿಗಳನ್ನು ಕೊರಿಯರ್ ಮಾಡಿದ್ದಾರೆ. ಈ ಹಿಂದೆ ಅನಂತಕುಮಾರ್ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ನಡೆದ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಜೆಡಿಎಸ್ ಪುಟಗೋಸಿ ಪಕ್ಷ ಅಂತಾ ಲೇವಡಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಮಂಡ್ಯದ ಕಾರ್ಯಕರ್ತರ ಕೇಂದ್ರ ಸಚಿವರಿಗೆ ಬಣ್ಣ ಬಣ್ಣದ ಪುಟಗೋಸಿಗಳನ್ನು ರವಾನಿಸಿದ್ದಾರೆ.

    ಅನಂತಕುಮಾರ ಹೆಗಡೆ ಅವರು ಕರ್ನಾಟಕದ ಪ್ರಾದೇಶಿಕ ಪಕ್ಷವನ್ನು ಪುಟಗೋಸಿಗೆ ಹೋಲಿಕೆ ಮಾಡಿದ್ದಾರೆ. ಪುಟಗೋಸಿ ಬಳಕೆ ಸಚಿವರಿಗೆ ಗೊತ್ತಿಲ್ಲ ಎಂಬಂತೆ ಕಾಣುತ್ತಿಲ್ಲ. ಎಲ್ಲರೂ ಪುಟಗೋಸಿ ಹಾಕಿಕೊಂಡು ಜೀವನ ಮಾಡುತ್ತಿದ್ದು, ಅದು ಜನರ ಮಾನವನ್ನು ಮುಚ್ಚುತ್ತದೆ. ಕೇಂದ್ರ ಸಚಿವರಾಗಿ ಇಂತಹ ಪದ ಪ್ರಯೋಗ ಮಾಡಬಾರದು. ಇನ್ನು ಮುಂದೆ ಜೆಡಿಎಸ್ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ ಅಂತಾ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಇಂದು ಪುಟಗೋಸಿ ಪಕ್ಷಕ್ಕೆ ಸಲಾಂ ಹೊಡೆಯುವ ಪರಿಸ್ಥಿತಿಗೆ ಬಂದಿದೆ: ಅನಂತಕುಮಾರ್ ಹೆಗಡೆ

  • ಕಾಂಗ್ರೆಸ್ ಇಂದು ಪುಟಗೋಸಿ ಪಕ್ಷಕ್ಕೆ ಸಲಾಂ ಹೊಡೆಯುವ ಪರಿಸ್ಥಿತಿಗೆ ಬಂದಿದೆ: ಅನಂತಕುಮಾರ್ ಹೆಗಡೆ

    ಕಾಂಗ್ರೆಸ್ ಇಂದು ಪುಟಗೋಸಿ ಪಕ್ಷಕ್ಕೆ ಸಲಾಂ ಹೊಡೆಯುವ ಪರಿಸ್ಥಿತಿಗೆ ಬಂದಿದೆ: ಅನಂತಕುಮಾರ್ ಹೆಗಡೆ

    ಕಾರವಾರ: ದೇಶದ ಅತಿ ದೊಡ್ಡ ಪಕ್ಷ ಕಾಂಗ್ರೆಸ್‍ಗೆ ಇಂದು ರಾಜ್ಯದ ಪುಟಗೋಸಿ ಪಾರ್ಟಿಗೆ ಬಗ್ಗಿ ಸಲಾಂ ಹೊಡೆಯುವ ದಯನೀಯ ಪರಿಸ್ಥಿತಿಗೆ ಬಂದಿದೆ ಅಂತಾ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ್ ಹೆಗಡೆ ಲೇವಡಿ ಮಾಡಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಹವ್ಯಕ ಭವನದಲ್ಲಿ ನಡೆದ ಶಾಸಕರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಕೇಂದ್ರ ಸಚಿವರು, ಸದ್ಯ ಜಿಲ್ಲೆಯಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಂಡಿದೆ. ಮುಂದಿನ ದಿನಗಳಲ್ಲಿ ಆರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಇವತ್ತಲ್ಲ ನಾಳೆ ಕಾಂಗ್ರೆಸ್ ನಾಯಕ ಆರ್.ವಿ.ದೇಶಪಾಂಡೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಧ್ವಜ ಹಾರಿಸಬೇಕಿದೆ ಅಂತಾ ಅಂದ್ರು.

    ಭಟ್ಕಳದಲ್ಲಿ ಹೇಗೆ ಬಿಜೆಪಿ ಗೆಲ್ಲಬೇಕು ಎಂದು ಹಠ ಇತ್ತೋ ಹಾಗೆ ಇಂದು ಹಳಿಯಾಳ ಕ್ಷೇತ್ರದಲ್ಲಿಯೂ ಬಿಜೆಪಿ ಭಾವುಟ ಹಾರಾಡಬೇಕಿದೆ. ಮುಂದಿನ ದಿನಗಳಲ್ಲಿ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಬಿಜೆಪಿ ಸೇರ್ತಾರೋ ಅಥವಾ ನಮ್ಮ ಪಕ್ಷದ ಹೊಸ ಅಭ್ಯರ್ಥಿ ಬರುತ್ತಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಉತ್ತರ ಕನ್ನಡ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಧ್ವಜ ಹಾರೋವರೆಗೂ ನಾನು ರಾಜಕೀಯ ನಿವೃತ್ತಿ ಪಡೆಯಲ್ಲ ಅಂತಾ ಅನಂತಕುಮಾರ್ ಹೆಗಡೆ ಶಪಥ ಮಾಡಿದ್ರು.

  • ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹತ್ಯೆಗೆ ಯತ್ನ !

    ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹತ್ಯೆಗೆ ಯತ್ನ !

    – ಸಚಿವರ ಕಾರು ಬದಲು ಬೆಂಗಾವಲು ವಾಹನಕ್ಕೆ ಲಾರಿ ಡಿಕ್ಕಿ

    ಹಾವೇರಿ: ವಿರೋಧಿಗಳಬ ಬಗ್ಗೆ ಮಾತಾಡಿ ಅವರ ಕಣ್ಣಿಗೆ ತುತ್ತಾಗಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮಂಗಳವಾರ ರಾತ್ರಿ ನಡೆದ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದು ನನನ್ನ ಕೊಲೆಯ ಯತ್ನ ಅಂತಾ ಸಚಿವರು ಆರೋಪಿಸಿದ್ದಾರೆ.

    ಶಿರಸಿಯಿಂದ ಬೆಂಗಳೂರಿಗೆ ಅನಂತಕುಮಾರ್ ಹೆಗಡೆ ಕಾರ್ ನಲ್ಲಿ ಬರುತ್ತಿದ್ದಾಗ ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನ ಹಲಗೇರಿ ಬಳಿ ಲಾರಿಯೊಂದು ಏಕಾಏಕಿ ಡಿಕ್ಕಿ ಹೊಡೆಯಲು ನೋಡಿದೆ. ಆದ್ರೆ ಸಚಿವರ ಕಾರು 140 ಕಿ.ಮೀ. ಸ್ಪೀಡ್‍ನಲ್ಲಿದ್ದು, ಕೂದಲೆಳೆ ಅಂತರದಲ್ಲಿ ಪಾಸ್ ಆದ ಕಾರಣ ಹಿಂದೆ ಬರ್ತಿದ್ದ ಬೆಂಗಾವಲು ಕಾರ್‍ಗೆ ಲಾರಿ ಡಿಕ್ಕಿ ಹೊಡೆದಿದೆ.

    ಬೆಂಗಾವಲು ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಅದ್ರಲ್ಲಿದ್ದ ಎಎಸ್‍ಐ ಪ್ರಭು ತಳವಾರ ಕಾಲಿಗೆ ಗಾಯವಾಗಿದೆ. ಕೂಡಲೇ ಬೆಂಗಾವಲು ಸಿಬ್ಬಂದಿ, ಪರಾರಿ ಆಗ್ತಿದ್ದ ಲಾರಿ ಚಾಲಕನನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಲಾರಿ ಚಾಲಕನನ್ನ ನಾಸೀರ್ ಎಂದು ಗುರುತಿಸಿದ್ದು, ಪೊಲೀಸರು ವಿಚಾರಣೆ ನಡೆಸಿದ್ದಾರೆ.

    ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಟ್ವಿಟ್ಟರ್‍ನಲ್ಲಿ ಆರೋಪಿಸಿರುವ ಪ್ರಕಾರ, ಇದು ಹತ್ಯಾ ಯತ್ನ. ತಮ್ಮ ಬರುವಿಕೆಗಾಗಿಯೇ ರಾಂಗ್ ಸೈಡ್‍ನಲ್ಲಿ ಲಾರಿಯನ್ನು ನಿಲ್ಲಿಸಿಕೊಳ್ಳಲಾಗಿತ್ತು. ತಾವಿದ್ದ ಕಾರುಗಳು ಬರುತ್ತಿದ್ದಂತೆ ಲಾರಿ ಚಾಲಕ ಉದ್ದೇಶವಪೂರ್ವಕವಾಗಿ ತಮ್ಮ ಮೇಲೆ ಹರಿಸಲು ನೋಡಿದ. ಆದ್ರೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದೇನೆ. ಈ ಬಗ್ಗೆ ಪೊಲೀಸರು ಸೂಕ್ತ ರೀತಿಯಲ್ಲಿ ವಿಚಾರಣೆ ಕೈಗೊಂಡು, ಸತ್ಯ ಬಯಲುಮಾಡಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ. ಇನ್ನು ಸಚಿವರ ಪಿಎ ಕೂಡ ಇದೇ ಅರ್ಥದ ಮಾತುಗಳನ್ನ ಆಡಿದ್ದಾರೆ.

    https://twitter.com/AnantkumarH/status/986309901902204928