Tag: ಅನಂತಕುಮಾರ್ ಹೆಗಡೆ

  • ದೇಶದ ನೀತಿ, ನಿಯತ್ತನ್ನ‌ ಕುಲಗೆಡಿಸಿದ್ದೇ ಕಾಂಗ್ರೆಸ್ – ನಾನು ಇರೋವರೆಗೆ ಅವ್ರಿಗೆ ನೆಮ್ಮದಿ ಕೊಡಲ್ಲ: ಅನಂತಕುಮಾರ್

    – ಕಾಂಗ್ರೆಸ್ ನಾಯಕರು ಯಾರನ್ನ ಕೇಳಿದ್ರೂ ಕರಿಮಣಿ ಮಾಲಿಕ ನಾನಲ್ಲ ಅಂತಿದ್ದಾರೆ: ಸಂಸದ

    ಕಾರವಾರ: ನಾನು ಇರೋತನಕ ಕಾಂಗ್ರೆಸ್‌ಗೆ (Congress) ನೆಮ್ಮದಿ ಕೊಡೋದಿಲ್ಲ, ಕಾಂಗ್ರೆಸ್ ನಾಯಕರು ಯಾರನ್ನ ಕೇಳಿದ್ರೂ ಕರಿಮಣಿ ಮಾಲಿಕ ನಾನಲ್ಲ ಅಂತಿದ್ದಾರೆ, ರಾಹುಲ್ ಗಾಂಧಿ ಆಲೂಗಡ್ಡೆಯಿಂದ ಬಂಗಾರ ತೆಗಿತಿದ್ದಾನೆ ಎಂದು ಸಂಸದ ಅನಂತಕುಮಾರ್ ಹೆಗಡೆ (Ananth Kumar Hegde) ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದ್ದಾರೆ.

    ಕಾರವಾರದ ಬಿಜೆಪಿ (BJP) ಕಚೇರಿಯಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಯಾರನ್ನ ಕೇಳಿದ್ರೂ ಕರಿಮಣಿ ಮಾಲಿಕ ನಾನಲ್ಲ ಅಂತಿದ್ದಾರೆ ಎಂದು ಕುಟುಕಿದ್ದಾರೆ.

    ಕ್ರಾಂತಿ ಆದ್ರೇನೆ ಶಾಂತಿ ಸಿಗೋದು:
    ದೇಶವನ್ನ ಲೂಟಿ ಮಾಡಿದ್ದು ಕಾಂಗ್ರೆಸ್, ಮಹಿಳಾ ವಿರೋಧಿ ಕಾಂಗ್ರೆಸ್, ಈ ದೇಶದಲ್ಲಿ ಕಾಂಗ್ರೆಸ್ ಮಾಡಿರುವ ಅವಾಂತರಗಳನ್ನ ನೋಡಿದ್ರೆ ಯಾರಿಗೂ ನಿದ್ದೆ ಬರಲ್ಲ. ವೈಯಕ್ತಿಕ ಬದುಕಿರಲಿ, ರಾಜಕೀಯವಿರಲಿ ನೀತಿ, ನಿಯತ್ತು ಇರಲೇಬೇಕು. ಇಲ್ಲವಾದಲ್ಲಿ ವ್ಯಕ್ತಿತ್ವ ಬೆಳೆಯೋದಕ್ಕೆ ಸಾಧ್ಯವೇ ಇಲ್ಲ. ದೇಶದ ನೀತಿ, ನೀಯತ್ತನ್ನ‌ ಕುಲಗೆಡಿಸಿದ್ದೇ ಕಾಂಗ್ರೆಸ್ (Congress), ಅವರಿಗೆ ನೀತಿ ಇಲ್ಲ, ನೀಯತ್ತಂತೂ ಮೊದಲೇ ಇಲ್ಲ. ಕ್ರಾಂತಿ ಆದ್ರೇನೆ ಶಾಂತಿ ಸಿಗೋದು ಮತ್ತೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

    ಜಿ20 ಕಾರ್ಯಕ್ರಮದ ಬಳಿಕ ಇಡೀ ಜಗತ್ತೇ ಭಾರತವನ್ನ ಹೊಗಳಿತು, ಆದ್ರೆ ರಾಹುಲ್ ಗಾಂಧಿ ಎಲ್ಲಿದ್ರು ಯಾರಿಗೂ ಗೊತ್ತಿಲ್ಲ. ರಾಹುಲ್ ಗಾಂಧಿ ಆಲೂಗಡ್ಡೆಯಿಂದ ಬಂಗಾರ ತೆಗಿತಿದ್ದಾನೆ. ಪ್ರಬಲ ವಿರೋಧ ಪಕ್ಷವಾಗಿಯೂ ಕಾಂಗ್ರೆಸ್ ಇಲ್ಲ, ನೈತಿಕವಾಗಿ ಕಾಂಗ್ರೆಸ್‌ಗೆ ನೆಲೆಯೇ ಇಲ್ಲ, ಸಂಘಟನಾತ್ಮಕವಾಗಿಯೂ ಇಲ್ಲ. ಪ್ರಧಾನಿ ಮೋದಿ (Narendra Modi) ಸರ್ಕಾರ ಬರುವ ಮುನ್ನ ಕಾಂಗ್ರೆಸ್ ಅಧಿಕಾರ ಮಾಡಿತ್ತು. ಕುರುಡರಿಗೆ ಯಾವತ್ತೂ ಹೆಚ್ಚಿಗೆ ತಿಳಿಸಬೇಕಾದ ಅವಶ್ಯಕತೆ ಇರೋದಿಲ್ಲ, ಆದ್ರೆ ಪೂರ್ವಾಗ್ರಹ ಪೀಡಿತ ಕುರುಡರಿಗೆ ಹೇಳಿದ್ರೂ ಒಪ್ಪೋದಿಲ್ಲ, ಸತ್ಯ ಎದ್ದು ಕೂರುವಾಗ, ಒಳಗೆ ಸುಳ್ಳು ಇಡೀ ಜಗತ್ತನ್ನ ಓಡಾಡಿಕೊಂಡು ಬಂದ್ದಿತ್ತಂತೆ, ಹಾಗೇ ಕಾಂಗ್ರೆಸ್‌ ಅವರದ್ದು ಎಂದು ವಾಗ್ದಾಳಿ ನಡೆಸಿದ್ದಾರೆ.

    ಇನ್ನೂ ನಿಜಕ್ಕೂ ಸಿದ್ರಾಮಯ್ಯ ಅವರಿಗೆ ಧಮ್ ಇದ್ರೆ ಕರ್ನಾಟಕದ ಆರ್ಥಿಕತೆಯ ಬಗ್ಗೆ ಶ್ವೇತಪತ್ರ ಹೊರಡಿಸಲಿ, ಕಾಂಗ್ರೆಸ್ ಸರ್ಕಾರದಲ್ಲಿ ಎಂಎಲ್‌ಎಗಳಿಗೆ ಕೊಡಲೂ‌ ದುಡ್ಡಿಲ್ಲ, ಇಂತಹ ದಯನೀಯ ಸ್ಥಿತಿಯನ್ನು ಕಾಂಗ್ರೆಸ್‌ ಒಂದು ವರ್ಷದಲ್ಲಿ ತಂದಿಟ್ಟಿದೆ. ಆದ್ರೆ ನಮ್ಮ ಪಕ್ಷದಲ್ಲಿ ಅಭ್ಯರ್ಥಿ ಯಾರೇ ಇರಲಿ ಬಿಜೆಪಿ ಗೆಲುವು ಸಾಧಿಸಬೇಕು ಉತ್ತರ ಕನ್ನಡ ಜಿಲ್ಲೆಯ ಪ್ರತಿಯೊಬ್ಬ ವ್ಯಕ್ತಿ ಬಿಜೆಪಿಗೆ ಮತ ನೀಡಲು ಸಿದ್ಧ‌ರಿದ್ದಾರೆ. ಹಾಗಾಗಿ ನಮ್ಮ ಪಕ್ಷದಿಂದ 21 ಜನ ಆಕಾಂಕ್ಷಿಗಳಾಗಿ ಅರ್ಜಿ ಹಾಕಿದ್ರು, ಕಾಂಗ್ರೆಸ್ ನಲ್ಲಿ ಈವರೆಗೂ ಯಾರೂ ಅರ್ಜಿ ಹಾಕಿಲ್ಲ ಎಂದರು.

  • ಸಂವಿಧಾನ ತಿದ್ದುಪಡಿ ಹೇಳಿಕೆ – ಅನಂತಕುಮಾರ್ ಹೆಗಡೆ ಹೇಳಿಕೆಗೆ ರಾಜ್ಯ ಬಿಜೆಪಿಯಿಂದಲೇ ವಿರೋಧ

    ಸಂವಿಧಾನ ತಿದ್ದುಪಡಿ ಹೇಳಿಕೆ – ಅನಂತಕುಮಾರ್ ಹೆಗಡೆ ಹೇಳಿಕೆಗೆ ರಾಜ್ಯ ಬಿಜೆಪಿಯಿಂದಲೇ ವಿರೋಧ

    ಕಾರವಾರ: ಸಂಸದ ಅನಂತಕುಮಾರ್ ಹೆಗಡೆ (Ananth Kumar Hegde) ಅವರು ಇತ್ತೀಚೆಗೆ ನೀಡಿದ್ದ ಸಂವಿಧಾನ ತಿದ್ದುಪಡಿ ಹೇಳಿಕೆಗೆ ಖುದ್ದು ರಾಜ್ಯ ಬಿಜೆಪಿಯೇ ವಿರೋಧ ವ್ಯಕ್ತಪಡಿಸಿದೆ‌.

    ಈ ಕುರಿತು ಎಕ್ಸ್ ಪ್ರತಿಕ್ರಿಯಿಸಿರುವ ರಾಜ್ಯ ಬಿಜೆಪಿ ಘಟಕ (BJP Karnataka), ಸಂಸದ ಅನಂತಕುಮಾರ್‌ ಹೆಗಡೆ ಅವರ ಸಂವಿಧಾನದ ಬಗೆಗಿನ ಹೇಳಿಕೆಗಳು ಅವರ ವೈಯಕ್ತಿಕ ಅಭಿಪ್ರಾಯಗಳೇ ಹೊರತು ಪಕ್ಷದ ನಿಲುವನ್ನು ಬಿಂಬಿಸುವುದಿಲ್ಲ, ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ. ಬಿಜೆಪಿ ರಾಷ್ಟ್ರದ ಸಂವಿಧಾನವನ್ನು (Constitution) ಎತ್ತಿಹಿಡಿಯುವ ಅಚಲವಾದ ಬದ್ಧತೆಯನ್ನು ಹೊಂದಿದೆ. ಅವರ ಹೇಳಿಕೆಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಪಕ್ಷವು ಸೂಚಿಸಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಸೋಮವಾರವೇ ಬಿಜೆಪಿಯ 2ನೇ ಪಟ್ಟಿ ರಿಲೀಸ್? – ರಾಜ್ಯದ 15 ಅಭ್ಯರ್ಥಿಗಳ ಹೆಸರು ಘೋಷಣೆ ಸಾಧ್ಯತೆ

    ಅನಂತಕುಮಾರ್‌ ಹೆಗಡೆ ಹೇಳಿದ್ದೇನು?
    ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಹಲಗೇರಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಸಂವಿಧಾನ ತಿದ್ದುಪಡಿ ಮಾಡೋದಾದ್ರೆ ಬಹುಮತ ಅವಶ್ಯ, ಕಾಂಗ್ರೆಸ್‌ನವರು ಸಂವಿಧಾನದ ಮೂಲರೂಪವನ್ನ ತಿರುಚಿದ್ರು, ಅದರಲ್ಲಿ ಬೇಡದೇ ಇರೋದನ್ನೆಲ್ಲ ತುರುಕಿದ್ರು, ಇಡೀ ಹಿಂದೂ ಸಮಾಜವನ್ನ ಧಮನಿಸೋ ರೀತಿ ಕಾನೂನು ತಂದಿಟ್ಟಿದ್ದರು. ಇದೆಲ್ಲವೂ ಬದಲಾಗಬೇಕಿದ್ದರೇ ಈ ಅಲ್ಪಮತದಲ್ಲಿ ಆಗುವುದಿಲ್ಲ, ಎರಡೂ ಕಡೆ 2/3 ಬಹುಮತ ಬೇಕಾಗುತ್ತೆ. ಕಾಂಗ್ರೆಸ್‌ನವರು ಜಾಸ್ತಿ ಆದಾಗ ಏನೇ ತಿದ್ದುಪಡಿ ತರೋದಿದ್ರೂ ರಾಜ್ಯಸಭೆಯಲ್ಲಿ ಪಾಸ್ ಆಗಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರ ಕದ್ದುಮುಚ್ಚಿ ತಮಿಳುನಾಡಿಗೆ ನೀರು ಹರಿಸುತ್ತಿದೆ: ಹೆಚ್‍ಡಿಕೆ ಗರಂ

    ಸಿಎಎಗೆ ರಾಜ್ಯಗಳಿಂದ ಒಪ್ಪಿಗೆ ಬಂದಿಲ್ಲ, ಸಿಎಎ ತರದಿದ್ರೆ ದೇಶದಲ್ಲಿ ಕಾನೂನು ಸುವ್ಯವಸ್ಥೆ ನಮ್ಮ ಕೈಲಿ ಇರಲ್ಲ, ಇದೊಂದು ದೇಶದ್ರೋಹಿಗಳ ಆಡಂಬರ ಆಗುತ್ತೆ. ಎಲ್ಲಾ ಕಡೆ 2/3 ಮೆಜಾರಿಟಿ ಬರಲಿ, ಆಮೇಲೆ ನೋಡಿ ಮಾರಿಜಾತ್ರೆ ಹೇಗಿರುತ್ತೆ ಅಂತ. ಜಾತ್ರೆಗೆ ಒಂದು ಕಳೆ ಬರೋದು ಅಷ್ಟರ ನಂತರ, ಗೆದ್ದ ನಂತರ ನಾವು ಮೇಲೆ ಹೋಗಿಬಿಡುತ್ತೇವೆ, ಗ್ರಾಮ ಪಂಚಾಯತಿ, ಲೋಕಸಭೆ, ವಿಧಾನಸಭೆ ಯಾವುದೇ ಇರಲಿ, ನಾನೇ ಅನ್ನೋದು ಬಂದುಬಿಡುತ್ತೆ, ನಾನೇ ದೇವ್ರು ಅನ್ನೋ ಭಾವನೆ ಬಂದುಬಿಡುತ್ತೆ, ಪತನ ಶುರುವಾಗೋದೇ ಅಲ್ಲಿಂದ. ಹಿಂದಿನ ಬಾರಿ 68% ವೋಟು ನಮಗೆ ಬಂದಿತ್ತು. ಒಟ್ಟು ಹಿಂದೂಗಳ 85% ವೋಟ್‌ ಈ ಕ್ಷೇತ್ರದಲ್ಲಿ ಬಂದಿತ್ತು. ಒಂದು 10% ಸೋಡಾಬಾಟ್ಲಿ ಇರ್ತಾವೆ, ಅದಕ್ಕೆ ನಾವು ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಯಾರೂ ಇಲ್ಲ ಅಂದ್ರೆ ಕುಸ್ತಿ ಯಾರ್ ಹತ್ರ ಆಡೋದು? ನಮ್ಮ ದೇಶ ಸರಿ ಆಗಬೇಕು ಅಂದ್ರೆ ನಮ್ಮವರಿಂದಲೇ ಹೊರತು ಬೇರೆ ಅವರಿಂದ ಸಾಧ್ಯವಿಲ್ಲ.

    ಕಾಂಗ್ರೆಸ್‌ನ ಈ ದೇಶದ್ರೋಹಿ ಸರ್ಕಾರ ಹೋಗಬೇಕು. ಜಾತ್ಯತೀತರು ಇದನ್ನ ತೀರ್ಮಾನ ಮಾಡಿಲ್ಲ, ತೀರ್ಮಾನ ಮಾಡಿದವರು ನಮ್ಮ ಹಿಂದೂಗಳು, ಈ ಬಾರಿ ಮೋದಿಯವರು 400ಕ್ಕೂ ಹೆಚ್ಚು ಸೀಟ್ ಗೆಲ್ಲಬೇಕು ಅಂದ್ರು, 400 ಯಾಕೆ? ನಮಗೆ ಲೋಕಸಭೆಯಲ್ಲಿ ಬಹುಮತ ಇದೆ, ರಾಜ್ಯಸಭೆಯಲ್ಲಿ ಇಲ್ಲ, ಸಂವಿಧಾನ ತಿದ್ದುಪಡಿ ಆಗಬೇಕಾದ್ರೆ ಮೆಜಾರಿಟಿ ಬರಬೇಕು ಎಂದು ಸಂಸದ ಅನಂತಕುಮಾರ್ ಹೆಗಡೆ ಹೇಳಿದ್ದರು.

  • ಕೇಂದ್ರ ಸರ್ಕಾರ ಅವರಪ್ಪನ ಮನೆ ಆಸ್ತಿನಾ? – ಸಂಸದ ಅನಂತಕುಮಾರ್‌ ವಿರುದ್ಧ ಯತೀಂದ್ರ ಗುಡುಗು

    ಕೇಂದ್ರ ಸರ್ಕಾರ ಅವರಪ್ಪನ ಮನೆ ಆಸ್ತಿನಾ? – ಸಂಸದ ಅನಂತಕುಮಾರ್‌ ವಿರುದ್ಧ ಯತೀಂದ್ರ ಗುಡುಗು

    ಗದಗ: ಕೇಂದ್ರ ಸರ್ಕಾರ ಅವರಪ್ಪನ ಮನೆ ಆಸ್ತಿನಾ? ಕರ್ನಾಟಕ ಜನರು ಕಟ್ಟಿದ ತೆರಿಗೆ ಹಣ ಅದು ಎಂದು ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ (Yathindra Siddaramaiah), ಸಂಸದ ಅನಂತಕುಮಾರ್‌ ಹೆಗಡೆ ವಿರುದ್ಧ ಗುಡುಗಿದ್ದಾರೆ.

    ʻಕೇಂದ್ರ ಸರ್ಕಾರದ ಹಣ ಅವರಪ್ಪನ ಮನೆ ಆಸ್ತೀನಾ?ʼ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ವಾಗ್ದಾಳಿ ನಡೆಸಿದ್ದ ಸಂಸದ ಅನಂತಕುಮಾರ್‌ ಹೆಗಡೆ (AnanthKumar Hegde) ವಿರುದ್ಧ ಯತೀಂದ್ರ ಹರಿಹಾಯ್ದಿದ್ದಾರೆ. ಕರ್ನಾಟಕದ ಜನರು ಕಟ್ಟಿದ ತೆರಿಗೆ ಹಣ ಅದು, ಕೇಂದ್ರ ಸರ್ಕಾರ ಎಲ್ಲರಿಗೂ‌ ನ್ಯಾಯವಾಗಿ ಹಂಚಿಕೆ ಮಾಡಲಿ ಅಂತ ಕೇಳ್ತಿದ್ದೇವೆ. ಹಿಂದುಳಿದ ರಾಜ್ಯಗಳಿಗೆ ಹೆಚ್ಚಿನ ಅನುದಾನ ಕೊಡಿ, ನಾವು ಬೇಡ ಅನ್ನೊದಿಲ್ಲ. ಆದ್ರೆ ನಮಗೆ ಅನ್ಯಾಯ ಆಗ್ತಿದೆ, ಅದನ್ನ ಸರಿಪಡಿಸಿಕೊಡಿ. ನಾವು 1 ರೂಪಾಯಿ ಕೊಟ್ರೆ, ನಮಗೆ 12 ಅಥವಾ 13 ಪೈಸೆ ಅಷ್ಟೇ ಬರ್ತಿದೆ, 25 ಪೈಸೆಯನ್ನಾದ್ರೂ ಕೊಡಿ ಅಂತ ಕೇಳ್ತಿದ್ದೇವೆ ಅಂತ ಹೇಳಿದ್ದಾರೆ.

    ಅಲ್ಲದೇ ಹಿಂದೂ ದೇವಾಲಯಗಳ ಹಣ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅಂತಾ ಸುಳ್ಳು ಆರೋಪ ಮಾಡ್ತಿದ್ದಾರೆ. ಅದು ಫೇಕ್ ನ್ಯೂಸ್ ಅಂತ ಸರ್ಕಾರ ಸ್ಪಷ್ಟೀಕರಣ ಕೊಟ್ಟಿದೆ. ಸಚಿವ ರಾಮಲಿಂಗಾರೆಡ್ಡಿ ಅವರು ಫೇಸ್ಬುಕ್, ಎಕ್ಸ್‌ ಖಾತೆಗಳಲ್ಲಿ ಈ ಬಗ್ಗೆ ಸಂದೇಶ ಹಂಚಿಕೊಂಡಿದ್ದಾರೆ. ದೇವಾಲಯಗಳ ಹಣ ದೇವಾಲಯಗಳಿಗೇ ಉಪಯೋಗಿಸುತ್ತೇವೆ. ಬೇರೆ ಯಾವ ಸಂಸ್ಥೆಗೆ ಉಪಯೋಗಿಸುವುದಿಲ್ಲ ಅಂತ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಆದ್ರೂ ಬಿಜೆಪಿಯವರು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಅಂತಹವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಅಂತ ಆಗ್ರಹಿಸಿದ್ದಾರೆ. ದನ್ನೂ ಓದಿ: ಇತರರ ಗ್ಯಾರಂಟಿಗಳು ಎಲ್ಲಿ ಕೊನೆಗೊಳ್ಳುತ್ತೆ, ಅಲ್ಲಿಂದ ಮೋದಿ ಗ್ಯಾರಂಟಿ ಆರಂಭವಾಗುತ್ತೆ: ಪ್ರಧಾನಿ ಅಭಯ

    ವಿಧಾನ ಪರಿಷತ್ ನಲ್ಲಿ ಬಹುಮತ ಇರಲಿಲ್ಲ. ಹಾಗಾಗಿ ಧಾರ್ಮಿಕ ತಿದ್ದುಪಡಿ ಮಸೂದೆ ಅಂಗೀಕಾರ ಆಗಲಿಲ್ಲ. ಸಿ-ದರ್ಜೆ ದೇವಾಲಯಗಳಿಗೆ ಹೆಚ್ಚಿನ ಹಣ ಬರಬೇಕು. ಯಾವ ದೇವಸ್ಥಾನದಲ್ಲಿ ಆದಾಯ ಹೆಚ್ಚಿರುತ್ತೋ ಆ ದೇವಾಲಯಗಳ ಹಣ ಸಿ-ದರ್ಜೆಯ ದೇವಾಲಯಗಳಿಗೆ ಬಳಕೆ ಮಾಡಬೇಕು ಎಂಬುದು ಸರ್ಕಾರದ ಉದ್ದೇಶವಾಗಿತ್ತು. ತಮ್ಮ ರಾಜಕೀಯಕ್ಕೋಸ್ಕರ ನಿಜವಾಗಿಯೂ ಹಿಂದೂಗಳಿಗೆ ನೋವುಂಟು ಮಾಡ್ತಿರೋದು ಬಿಜೆಪಿ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಈಗ ನಡೆಯುವುದು ಗ್ಯಾರಂಟಿ ಬೇಕಾ? ಬೇಡವಾ? ಎನ್ನುವ ಚುನಾವಣೆ: ಹೆಚ್.ಸಿ.ಬಾಲಕೃಷ್ಣ

    ಇನ್ನೂ ಮೈಸೂರು ಲೋಕಸಭಾ ಕ್ಷೇತ್ರದಿಂದ ಟಿಕೆಟ್‌ ಸಿಗುತ್ತಾ ಅನ್ನೋ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಾನು ಮೈಸೂರು ಕ್ಷೇತ್ರದಿಂದ ಟಿಕೆಟ್‌ ಕೊಡಿ ಅಂತ ಕೇಳಿಕೊಂಡಿಲ್ಲ. ಲೋಕಸಭಾ ಆಕಾಂಕ್ಷಿ ನಾನಲ್ಲ, ಮೈಸೂರಿಗೆ ಯಾರು ಸೂಕ್ತ ಅಭ್ಯರ್ಥಿ ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಹೇಳಿದ್ದಾರೆ.

  • ಇಸ್ಲಾಂ ಇರೋವರೆಗೂ ಜಗತ್ತಿಗೆ ನೆಮ್ಮದಿಯಿಲ್ಲ: ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ

    ಇಸ್ಲಾಂ ಇರೋವರೆಗೂ ಜಗತ್ತಿಗೆ ನೆಮ್ಮದಿಯಿಲ್ಲ: ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ

    – ಮೂಲ ಸೌಕರ್ಯವೇ ಅಭಿವೃದ್ಧಿ ಅಂದುಕೊಂಡ್ರೆ ನಮ್ಮಂತಹ ಮೂರ್ಖರು ಮತ್ತೊಬ್ಬರಿಲ್ಲ
    – ಮತ್ತೆ ನಾಲಿಗೆ ಹರಿಬಿಟ್ಟ ಸಂಸದ

    ಕಾರವಾರ: ಎಲ್ಲಿಯವರೆಗೆ ಇಸ್ಲಾಂ ಇರುತ್ತದೆಯೋ, ಅಲ್ಲಿಯವರೆಗೆ ಜಗತ್ತಿಗೆ ನೆಮ್ಮದಿಯಿಲ್ಲ ಎಂದು ಸಂಸದ ಅನಂತಕುಮಾರ್ ಹೆಗಡೆ (Ananth Kumar Hegde) ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಬನವಾಸಿಯಲ್ಲಿ ನಡೆದ ಬಿಜೆಪಿ (BJP) ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಈ ಕಾಲಘಟ್ಟದಲ್ಲಿ ಹಿಂದೂ ಧರ್ಮ, ದೇಶ ಉಳಿಯಲು ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಬೇಕಾಗಿದೆ. ಬಿಜೆಪಿ ಮತ್ತು ಸಂಘ ಪರಿವಾರ ಇದ್ದಲ್ಲಿ ಜಗತ್ತಿಗೆ ನೆಮ್ಮದಿ ಸಿಗಲಿದೆ. ನಾವು ಇಲ್ಲದಿದ್ದರೆ ಜಗತ್ತಿನಲ್ಲಿ ನೆಮ್ಮದಿ ಇಲ್ಲ. ಹಿಂದುತ್ವವು ನಮ್ಮ ದೇಶದ ಉಸಿರಾಗಿದೆ. ಕಾಂಗ್ರೆಸ್‍ನವರು (Congress) ಲೋಕಸಭಾ ಚುನಾವಣೆಗೂ (Lok Sabha Election 2024) ಮುನ್ನ ಬಿಜೆಪಿಯ ಉತ್ಸಾಹ ನೋಡಿ ಶಸ್ತ್ರ ತ್ಯಜಿಸಿದ್ದಾರೆ. ವೈಚಾರಿಕವಾಗಿ ನಾವು ಚುನಾವಣೆ ಗೆದ್ದು ತೋರಿಸಬೇಕಿದೆ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ಕೆಲವೇ ಕ್ಷಣಗಳಲ್ಲಿ ಬಜೆಟ್‌ ಮಂಡನೆ – ಕೈ ಶಾಸಕರು ಕಾಂಗ್ರೆಸ್‌ ಪಕ್ಷದ ಶಾಲು ಧರಿಸಲು ಸೂಚನೆ!

    ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನಮ್ಮವರಿಗೆ ಏಕವಚನದಲ್ಲಿ ಮಾತನಾಡಿದ್ದು ನೋಡಿ ಸುಮ್ಮನಿರಲು ಸಾಧ್ಯವಿಲ್ಲ. ಅವರಿಗೆ ಮಗನೇ ಎನ್ನದೇ ಬೇರೆನು ಹೇಳಲು ಸಾಧ್ಯ? ಅಪ್ಪ ಅಂತಲೋ, ಅಜ್ಜ ಅಂತಲೋ, ಮಾಮಾ ಅಂತಲೋ ಕರೆಯಲು ಸಾಧ್ಯವೇ? ಯುದ್ಧ ಕಾಲದಲ್ಲಿ ಯಾವ ಭಾಷೆಯಲ್ಲಿ ಮಾತನಾಡಬೇಕೋ ಅದನ್ನೇ ಬಳಸಬೇಕು. ಅಲ್ಲಿ ಶಾಸ್ತ್ರೀಯ ಸಂಗೀತ ಬಳಸಲು ಸಾಧ್ಯವಿಲ್ಲ. ಮಸೀದಿಯ ಬಗ್ಗೆ ಹೇಳಿಕೆ ನೀಡಿದ್ದಕ್ಕೆ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಕ್ಕೆ ಸಿಎಂಗೆ ಥ್ಯಾಂಕ್ಸ್ ಹೇಳಿದ್ದೇನೆ. ತುಂಬಾ ವರ್ಷ ಆಗಿತ್ತು, ಕೇಸ್ ಇರದೆ ಒಂದು ರೀತಿಯ ಮುಜುಗುರ ಉಂಟಾಗಿತ್ತು. ಏನೋ ಕಳೆದುಕೊಂಡಂತೆ ಅನಿಸುತ್ತಿತ್ತು. ಈಗ ಪುನಃ ಮತ್ತೆ ಬಂದ ಅನುಭವ ಆಗುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

    ನನ್ನ ಅಧಿಕಾರವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಪ್ರಚಾರಕ್ಕಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಸಾಮಾಜಿಕ, ಸಾಂಸ್ಕೃತಿಕವಾಗಿ ಎಲ್ಲಾ ದೃಷ್ಠಿಯಿಂದ ಅಭಿವೃದ್ಧಿ ಹೊಂದಿದಾಗ ಮಾತ್ರ ಸಂಪೂರ್ಣ ಅಭಿವೃದ್ಧಿ ಹೊಂದಿದಂತೆ. ಕೇವಲ ಮೂಲ ಸೌಕರ್ಯವೇ ಅಭಿವೃದ್ಧಿ ಅಂದುಕೊಂಡರೆ ನಮ್ಮಂತಹ ಮೂರ್ಖರು ಮತ್ತೊಬ್ಬರಿಲ್ಲ ಎಂದು ಲೇವಡಿ ಮಾಡಿದ್ದಾರೆ.

    ರಾಜಕೀಯ ಅಂದ್ಮೇಲೆ ವಲಸೆ ಪ್ರಕ್ರಿಯೆ ಸಹಜವಾಗಿರುವ ಸಂಗತಿ. ಇತ್ತೀಚಿನ ದಿನಗಳಲ್ಲಿ ಯಾವ ರೀತಿಯಲ್ಲಿ ರಾಜಕೀಯ ದೊಂಬರಾಟ ನಡೆಯುತ್ತಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ. ಅದೆಲ್ಲವನ್ನೂ ಬದಿಗಿಟ್ಟು ಸಂಘಟನೆಯ ಕಡೆಗೆ ಗಮನಹರಿಸೋಣ. ಮುಂಬರುವ ಲೋಕಸಭಾ ಮಹಾ ಸಂಘರ್ಷದಲ್ಲಿ ನಾವೆಲ್ಲರೂ ಒಟ್ಟಾಗಿ ದುಡಿಯೋಣ ಎಂದು ಕಾರ್ಯಕರ್ತರಿಗೆ ಕರೆಕೊಟ್ಟಿದ್ದಾರೆ.

    ಕಳೆದ ಐದು ವರ್ಷಗಳಲ್ಲಿ ಸಂಸತ್ತಿನಲ್ಲಿ ಒಂದೇ ಒಂದು ಪ್ರಶ್ನೆ ಕೇಳಿಲ್ಲ ಎಂಬ ವಿಚಾರವಾಗಿ, ಪತ್ರಿಕಾ ಪ್ರಕಟಣೆ ಹೊರಡಿಸಿ ಸ್ಪಷ್ಟನೆ ನೀಡಿದ್ದಾರೆ. 17ನೇ ಲೋಕಸಭಾ ಅಧಿವೇಶನದಲ್ಲಿ ಒಟ್ಟು 18 ಪ್ರಶ್ನೆಗಳನ್ನು ಕೇಳಿದ್ದಾಗಿ ಅದರಲ್ಲಿ ಉಲ್ಲೇಖಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಉದ್ಯೋಗಾವಕಾಶಗಳು, ವಿದ್ಯಾರ್ಥಿಗಳ ಪಠ್ಯಕ್ರಮ, ವಾಯು ಮಾಲಿನ್ಯ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುತ್ತಿರುವ ನ್ಯುಮೋನಿಯಾ, ಕ್ಯಾನ್ಸರ್ ಹಾಗೂ ಉಡಾನ ಯೋಜನೆಯ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದೇನೆ. ಲೋಕಸಭಾ ವೆಬ್‍ಸೈಟ್‍ನಲ್ಲಿ ಈ ಕುರಿತು ವಿಸ್ತ್ರತ ಮಾಹಿತಿ ಲಭ್ಯವಿದೆ. ಕೇಳಿದ ಪ್ರಶ್ನೆಗಳು ಹಾಗೂ ಅದಕ್ಕೆ ಸಚಿವರು ನೀಡಿದ ಉತ್ತರವನ್ನು ದಾಖಲೆ ಸಹಿತ ಸಾರ್ವಜನಿಕರು ವೀಕ್ಷಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಇನ್ಮುಂದೆ ಆನ್‌ಲೈನ್‌ನಲ್ಲೇ ಸಿಗಲಿದೆ ಮ್ಯಾರೇಜ್ ಸರ್ಟಿಫಿಕೇಟ್ – ಪಡೆಯೋದು ಹೇಗೆ?

  • ಅನಂತ್‌ಕುಮಾರ್ ಹೆಗಡೆ ಒಬ್ಬ ಹುಚ್ಚ: ಮಧು ಬಂಗಾರಪ್ಪ

    ಅನಂತ್‌ಕುಮಾರ್ ಹೆಗಡೆ ಒಬ್ಬ ಹುಚ್ಚ: ಮಧು ಬಂಗಾರಪ್ಪ

    ಕಾರವಾರ: ಸಂಸದ ಅನಂತ್‌ಕುಮಾರ್ ಹೆಗಡೆ (Anantkumar Hegde) ಒಬ್ಬ ಹುಚ್ಚ. ಅವನಿಗೆ ಸಂಸ್ಕೃತಿ ಇಲ್ಲ. ಅವನ ಬಗ್ಗೆ ಮಾತಾಡಲು ನನಗೆ ಹುಚ್ಚು ಹಿಡಿದಿಲ್ಲ ಎಂದು ಅನಂತ್‌ಕುಮಾರ್ ಹೆಗಡೆ ವಿರುದ್ಧ ಸಚಿವ ಮಧು ಬಂಗಾರಪ್ಪ (Madhu Bangarappa) ಕಿಡಿಕಾರಿದ್ದಾರೆ.

    ಶಿರಸಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಜನರಿಂದ ಮತ ಪಡೆದು ಜನರಿಗೆ ದ್ರೋಹ ಮಾಡಿದ ಮೊದಲ ವ್ಯಕ್ತಿ ಅನಂತ್‌ಕುಮಾರ್ ಹೆಗಡೆ. ನಾಲ್ಕು ವರ್ಷ ಕೂತ್ಕೊಳೋದು, ಆಮೇಲೆ ಜನರ ವಿಶ್ವಾಸಕ್ಕೆ ಮೋಸ ಮಾಡೋದು. ಪ್ರಜಾಪ್ರಭುತ್ವದ ಬಗ್ಗೆ ವಿರೋಧ ಮಾಡಿದವರಿಗೆ ನಾವು ಧಿಕ್ಕಾರ ಮಾಡಲೇಬೇಕು. ಜನ ಅವನನ್ನು ಬದಲಾವಣೆ ಮಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ರಾಮಲಲ್ಲಾ ವಿಗ್ರಹ ಕೆತ್ತನೆಗೆ ಬಳಸಿರುವ ಕಪ್ಪು ಶಿಲೆ ಸಿಕ್ಕ ಜಾಗದಲ್ಲೇ ರಾಮಮಂದಿರ – ಜ.22 ಕ್ಕೆ ಭೂಮಿಪೂಜೆ

    ಬಿಜೆಪಿ (BJP) ಅವನಿಗೆ ಟಿಕೆಟ್ ಕೊಡ್ಬೇಕು. ಆಗ ನಾವು ಅವರನ್ನ ಉಪಚಾರ ಮಾಡೋಕೆ ಬರುತ್ತೇವೆ. ನಾನು ಕೂಡ ಸೋತಿದ್ದೇನೆ. ಆದರೆ ಮಾನ ಮರ್ಯಾದೆ ಬಿಟ್ಟು ಈ ಥರ ಮಾಡೋದನ್ನ ಮಾಡಿಲ್ಲ. ಮನುಷ್ಯನೇ ಅಲ್ಲ ಅವನು, ತಲೆಕೆಟ್ಟಿರೋ ವ್ಯಕ್ತಿ. ಮಾನ ಮರ್ಯಾದೆ ಇಲ್ಲದಿರೋ ವ್ಯಕ್ತಿ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಶ್ರೀರಾಮನ ಪ್ರಾಣಪ್ರತಿಷ್ಠೆಗೆ ಮೋದಿ ಕಠಿಣ ವ್ರತ – ಪ್ರತಿದಿನ 1 ಗಂಟೆ ವಿಶೇಷ ಮಂತ್ರ ಪಠಣ

  • ಸಂಸದ ಅನಂತಕುಮಾರ್ ಹೆಗಡೆ ಕುಂಭಕರ್ಣನಿದ್ದಂತೆ: ಕಾಂಗ್ರೆಸ್ ಕಿಡಿ

    ಸಂಸದ ಅನಂತಕುಮಾರ್ ಹೆಗಡೆ ಕುಂಭಕರ್ಣನಿದ್ದಂತೆ: ಕಾಂಗ್ರೆಸ್ ಕಿಡಿ

    ಬೆಂಗಳೂರು: ಸಂಸದ ಅನಂತಕುಮಾರ್ ಹೆಗಡೆ (Ananthkumar Hegde) ಕುಂಭಕರ್ಣನಿದ್ದಂತೆ. ನಾಲ್ಕೂವರೆ ವರ್ಷ ಮಲಗುವುದು, ಚುನಾವಣೆ ಬಂದಾಗ ಏಳುವುದು ಎಂದು ಕಾಂಗ್ರೆಸ್ (Congress) ಟ್ವೀಟ್ ಮೂಲಕ ವ್ಯಂಗ್ಯವಾಡಿದೆ.

    ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ಕುರಿತು ಕಾಂಗ್ರೆಸ್ (Congress) ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ. ದಲಿತ, ಹಿಂದುಳಿದ ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಏಳಿಗೆಯನ್ನು ಸಹಿಸದ ವಿಕೃತ ಮನಸ್ಥಿತಿಯ ಪರಂಪರೆಯನ್ನು ಮುಂದುವರಿಸುವ ಅನಂತ್ ಕುಮಾರ್ ಹೆಗಡೆಯಂತಹ ಕ್ರಿಮಿ ಕೀಟಗಳು ಈ ದೇಶಕ್ಕೆ ಕ್ಯಾನ್ಸರ್‌ನಂತೆ ಕಾಡುತ್ತವೆ. ಈ ಕ್ಯಾನ್ಸರ್‌ಗೆ ಸಂವಿಧಾನದಲ್ಲಿ ಔಷಧವಿದೆ ಎಂದು ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ಕೋಚಿಮುಲ್‌ ನೇಮಕಾತಿ ಅಕ್ರಮ – ಶಾಸಕರ ಶಿಫಾರಸು ಪತ್ರ ನೀಡಿದ ಅಭ್ಯರ್ಥಿಗಳಿಗೆ ಇಡಿ ಶಾಕ್‌

    ಕಾಂಗ್ರೆಸ್ ಪಕ್ಷದ ಬಗ್ಗೆ, ಸಿದ್ದರಾಮಯ್ಯ ಅವರ ಬಗ್ಗೆ ತನ್ನ ಕೊಳಕು ನಾಲಿಗೆ ಹರಿಬಿಡುವ ಮೊದಲು ಸಂಸದನಾಗಿ ತನ್ನ ಸಾಧನೆ ಏನು ಎಂಬುದನ್ನು ಜನತೆಗೆ ತಿಳಿಸಲಿ. ಈ ಅಸಹ್ಯದ ವ್ಯಕ್ತಿಯಲ್ಲಿ ಪುರೋಹಿತಶಾಹಿಯ ಅಹಂಕಾರ ಮಿತಿ ಮೀರಿ ನರ್ತಿಸುತ್ತಿದೆ. ಈ ಅಹಂಕಾರದ ಮದ ಇಳಿಸುವ ತಾಕತ್ತು ಕನ್ನಡಿಗರಿಗೆ ಇದೆ ಎಂದು ಹರಿಹಾಯ್ದಿದೆ. ಇದನ್ನೂ ಓದಿ: ʻಸ್ವಚ್ಛತೀರ್ಥ ಅಭಿಯಾನʼಕ್ಕೆ ರಾಜ್ಯ ನಾಯಕರು ಸಾಥ್‌ – ಹುಬ್ಬಳ್ಳಿಯಲ್ಲಿ ದೇವಸ್ಥಾನ ಸ್ವಚ್ಛಗೊಳಿಸಿದ ಪ್ರಹ್ಲಾದ್‌ ಜೋಶಿ

  • ರಾಮಮಂದಿರಕ್ಕೆ ಹೋಗಿ ಪಾಪ ತೊಳೆದುಕೊಂಡು ಬನ್ನಿ – ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್

    ರಾಮಮಂದಿರಕ್ಕೆ ಹೋಗಿ ಪಾಪ ತೊಳೆದುಕೊಂಡು ಬನ್ನಿ – ಸಿದ್ದರಾಮಯ್ಯಗೆ ಈಶ್ವರಪ್ಪ ಟಾಂಗ್

    ಶಿವಮೊಗ್ಗ: ಸಿದ್ದರಾಮಯ್ಯನವರು (Siddaramaiah) ನಿಮಿಷಕ್ಕೊಂದು ಮಾತನಾಡ್ತಾರೆ. ನಿಮ್ಮ ಹೆಸರಿನಲ್ಲಿ ಸಿದ್ದ, ರಾಮ ಎರಡೂ ಇದೆ. ನೀವೇಕೆ ಬಿಜೆಪಿ ರಾಮಮಂದಿರ ಅಂತ ಅಂದುಕೊಳ್ತೀರಾ? ರಾಮಮಂದಿರಕ್ಕೆ ಹೋಗಿ ನಿಮ್ಮ ಪಾಪ ತೊಳೆದುಕೊಂಡು ಬನ್ನಿ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ (KS Eshwarappa), ಸಿಎಂ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಶಿವಮೊಗ್ಗದಲ್ಲಿ (Shivamogga) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನಂತಕುಮಾರ್ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿದ್ದಾರೆ. ಅನಂತಕುಮಾರ್ ಹೇಳಿರೋದ್ರಲ್ಲಿ ತಪ್ಪಿಲ್ಲ. ಏಕೆಂದರೆ ಮಂಡ್ಯದ ಶ್ರೀರಂಗಪಟ್ಟಣ, ಕಾರವಾರ ಜಿಲ್ಲೆಯಲ್ಲಿ ದೇವಸ್ಥಾನ ಒಡೆದು ಮಸೀದಿ (Mosque) ಕಟ್ಟಿದ್ದಾರೆ. ಇದನ್ನು ಎಲ್ಲಾ ಭಾರತೀಯರು ಸ್ವಾಗತ ಮಾಡಬೇಕಾ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಬಾಬರಿ ಮಸೀದಿಯಂತೆ ಭಟ್ಕಳದ ಚಿನ್ನದ ಪಳ್ಳಿಯೂ ನಿರ್ನಾಮ ಆಗುತ್ತೆ – ಅನಂತಕುಮಾರ್ ಹೆಗಡೆ ಎಚ್ಚರಿಕೆ

    ಸಿದ್ದರಾಮಯ್ಯ ಅವರು ಮೋದಿ (Modi) ಬಗ್ಗೆ ಏಕವಚನದಲ್ಲಿ ಮಾತನಾಡ್ತಾರೆ. ಒಮ್ಮೆ ಅಯೋಧ್ಯೆಗೆ ಹೋಗಲ್ಲ ಅಂದಿದ್ದರು. ಈಗ ಜ.22ರ ನಂತರ ಹೋಗ್ತೀನಿ ಅಂತಾರೆ. ನಿಮಿಷಕ್ಕೊಂದು ಮಾತನಾಡ್ತಾರೆ. ನಿಮ್ಮ ಹೆಸರಿನಲ್ಲಿ ಸಿದ್ದ ರಾಮ ಎರಡೂ ಇದೆ, ರಾಮ ಮಂದಿರಕ್ಕೆ ಹೋಗಿ ನಿಮ್ಮ ಪಾಪ ಕಳೆದುಕೊಂಡು ಬನ್ನಿ ಎಂದು ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ರಾಮಮಂದಿರಕ್ಕಾಗಿ 44 ವರ್ಷಗಳಿಂದ ಊಟ ತ್ಯಾಗ, ಮೌನ ವ್ರತ – ಪ್ರಾಣಪ್ರತಿಷ್ಠೆಗೆ ಆಹ್ವಾನ ಸಿಗದೇ ಮೌನಿ ಬಾಬಾ ನಿರಾಸೆ

    ನೀವೇಕೆ ಅಯೋಧ್ಯೆಯಲ್ಲಿರೋದು ಬಿಜೆಪಿ ರಾಮಮಂದಿರ (Ram Mandir) ಅಂದುಕೊಳ್ತೀರಾ? ನಾವು ಈ ವಿಷಯದಲ್ಲಿ ರಾಜಕಾರಣ ಮಾಡ್ತಿಲ್ಲ. ಇಡೀ ವಿಶ್ವದ ಹಿಂದೂಗಳನ್ನು ಒಂದು ಮಾಡಲು ಶ್ರೀರಾಮ ಇರೋದು. ಯಾವ ರೀತಿ ರಾಜಕಾರಣ ಮಾಡ್ತಿದ್ದೇವೆ ಅಂತಾ ನೀವು ಹೇಳಿದ್ರೆ ನಾವು ತಿದ್ದಿಕೊಳ್ಳುವ ಪ್ರಯತ್ನ ಮಾಡ್ತೇವೆ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಇಂಟರ್‌ನೆಟ್‌ನಲ್ಲಿ ಹುಡುಕಿ ಪ್ಲ್ಯಾನ್- ರಿಮೂವರ್ ಕುಡಿಸಿ ಮಗು ಹತ್ಯೆಗೈದಿದ್ದ ಮಹಿಳೆ ಅರೆಸ್ಟ್

    ಹಾವೇರಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಹಾವೇರಿಯ ಲಾಡ್ಜ್‌ವೊಂದರಲ್ಲಿ ಮಹಿಳೆಯ ಮೇಲೆ ಏಳು ಜನ ಅತ್ಯಾಚಾರ ಮಾಡಿದ್ದಾರೆ. ಇವರನ್ನು ಮನುಷ್ಯರೆಂದು ಕರೆಯಬೇಕಾ? ಯಾವುದೇ ಧರ್ಮದ ಹೆಣ್ಣು ಮಗಳಾಗಲಿ ಇಂತಹ ನೀಚ ಕೃತ್ಯ ನಡೆಯಬಾರದು. ಗೃಹ ಸಚಿವರು ಇಂತಹ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.ಇದನ್ನೂ ಓದಿ: ಕಾಲಿಗೆ ಬಿದ್ದು ಬೇಡಿಕೊಂಡರೂ ಬಿಡದೇ ಅತ್ಯಾಚಾರ ಮಾಡಿದ್ರು – ಘಟನೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಸಂತ್ರಸ್ತೆ 

  • ಬಾಬರಿ ಮಸೀದಿಯಂತೆ ಭಟ್ಕಳದ ಚಿನ್ನದ ಪಳ್ಳಿಯೂ ನಿರ್ನಾಮ ಆಗುತ್ತೆ – ಅನಂತಕುಮಾರ್ ಹೆಗಡೆ ಎಚ್ಚರಿಕೆ

    ಬಾಬರಿ ಮಸೀದಿಯಂತೆ ಭಟ್ಕಳದ ಚಿನ್ನದ ಪಳ್ಳಿಯೂ ನಿರ್ನಾಮ ಆಗುತ್ತೆ – ಅನಂತಕುಮಾರ್ ಹೆಗಡೆ ಎಚ್ಚರಿಕೆ

    ಕಾರವಾರ: ಬಾಬರಿ ಮಸೀದಿ (Babri Masjid) ನಿರ್ನಾಮ ಆದಂತೆ ಭಟ್ಕಳದ ಚಿನ್ನದ ಪಳ್ಳಿಯೂ ಅದರ ಸಾಲಿಗೆ ಸೇರಲಿದೆ. ಇದನ್ನು ಬೆದರಿಕೆ ಅಂತ ಬೇಕಾದ್ರೆ ತಿಳಿಯಿರಿ, ಬಾಬರಿ ಮಸೀದಿಯಂತೆ ಭಟ್ಕಳದ ಮಸೀದಿಯನ್ನೂ ನಿರ್ನಾಮ ಮಾಡುವುದು ಗ್ಯಾರಂಟಿ ಎಂದು ಸಂಸದ ಅನಂತಕುಮಾರ್ ಹೆಗಡೆ (Anantkumar Hegde) ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

    ಕುಮಟಾದಲ್ಲಿ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಸದರು, ಬಾಬರಿ ಮಸೀದಿಯಂತೆ ಭಟ್ಕಳದ ಮಸೀದಿಯನ್ನೂ (Mosque) ನಿರ್ನಾಮ ಮಾಡುವುದು ಗ್ಯಾರಂಟಿ. ಇದು ಅನಂತಕುಮಾರ ಹೆಗಡೆ ತೀರ್ಮಾನವಲ್ಲ, ಹಿಂದೂ ಸಮಾಜದ ತೀರ್ಮಾನ ಎಂದು ಹೇಳಿದ್ದಾರೆ. ಇದನ್ನೂ ಓದಿ: ಗ್ಯಾರಂಟಿಗಳ ಪ್ರತಿ ಪೈಸೆಯೂ ನಿಮ್ಮ ಬದುಕಿಗೆ ಸದುಪಯೋಗವಾಗಬೇಕು: ಸಿದ್ದರಾಮಯ್ಯ

    ಶಿರಸಿಯ ಸಿಪಿ ಬಜಾರ್‌ನಲ್ಲಿರುವ ಮಸೀದಿ, ಅದು ವಿಜಯ ವಿಠ್ಠಲ ದೇವಸ್ಥಾನ, ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಕೂಡು ಮಾರುತಿ ದೇವಸ್ಥಾನ. ಇದೇ ರೀತಿ ದೇಶದ ಹಳ್ಳಿಯ ಮೂಲೆ-ಮೂಲೆಗಳಲ್ಲಿ ಅಪಮಾನಗೊಂಡಿರುವ ಅನೇಕ ಸಂಕೇತಗಳಿವೆ, ಅದನ್ನು ಕಿತ್ತುಹಾಕುವ ತನಕ ಹಿಂದೂ ಸಮಾಜ ಸುಮ್ಮನೆ ಕೂರಲ್ಲ. ಈಗ ರಣಭೈರವ ಎದ್ದಾಗಿದೆ. ಮತ್ತೆ ಕೂರುವ ಪ್ರಶ್ನೆಯೇ ಇಲ್ಲ. ಹಿಂದೂ ಧರ್ಮ ಯಾರ ಋಣವನ್ನು ಇಟ್ಟುಕೊಳ್ಳುವ ಧರ್ಮವಲ್ಲ, ಸಾವಿರ ವರ್ಷಗಳ ಸೇಡನ್ನು ತೀರಿಸಿಕೊಳ್ಳದಿದ್ದರೇ ಇದು ಹಿಂದೂ ರಕ್ತವೇ ಅಲ್ಲ ಎಂದು ಕೆಂಡ ಕಾರಿದ್ದಾರೆ.

    ಜಾತಿ ಹೆಸರಲ್ಲಿ ಹಿಂದೂ ಸಮಾಜ ಒಡೆದರು: ಇಂದಿಗೂ ಮೂರ್ಖ ರಾಮಯ್ಯನಂತಹವರು ಹಿಂದೂ ಸಮಾಜ ಒಡೆಯುತ್ತಿದ್ದಾರೆ. ಶತಮಾನಗಳು ಕಳೆದ ಬಳಿಕವೂ ಹಿಂದೂ ಸಮಾಜ ಒಡೆಯುವ ಕೆಲಸ ಆಗಬಾರದು. ಮತ್ತೆ ನಾವೇ ಪ್ರತ್ನಿಸಿದರೂ ಸಮಾಜ ಒಡೆಯದಂತೆ ಸದೃಢಗೊಳಿಸಬೇಕು ಎಂದು ಕರೆ ನೀಡಿದ್ದಾರೆ.

    ಕಾಂಗ್ರೆಸ್ ನಮ್ಮ ವಿರೋಧಿ ಅಲ್ವೆ ಅಲ್ಲ, ಅವರು ಹಿಂದೂ ವಿರೋಧಿಗಳು, ಸನಾತನ ಧರ್ಮ ವಿರೋಧಿಗಳು. ಕಾಂಗ್ರೆಸ್ ನಮ್ಮ ವಿರೋಧಿ ಅಲ್ಲ, ಆದ್ರೆ ಸಿದ್ಧರಾಮಯ್ಯ ನಮ್ಮ ವಿರೋಧಿ. ಅಲ್ಪಸಂಖ್ಯಾತರ ವೋಟಿಗೆ ಹರಾಜಾಗಿ ಹೊದವರು ನಮ್ಮ ವಿರೋಧಿಗಳು ಎಂದು ಅಸಮಾಧನಾ ಹೊರಹಾಕಿದ್ದಾರೆ. ಇದನ್ನೂ ಓದಿ: ಕೈ ನಾಯಕರಿಗೆ ರಾಮನ ಮೇಲಿನ ಭಕ್ತಿಗಿಂತ, ಹೈಕಮಾಂಡ್ ಮೇಲಿನ ಭಯವೇ ಜಾಸ್ತಿ: ಅಶೋಕ್‌ ವ್ಯಂಗ್ಯ

    ಕೆಲವರು ರಾಮಮಂದಿರ ಆಮಂತ್ರಣ ನಮಗೆ ಬಂದಿಲ್ಲ ಅಂದರು, ಬಂದಮೇಲೆ ಕಾರ್ಯಕ್ರಮಕ್ಕೆ ಹೋಗಲ್ಲ ಅಂದರು. ಈಗ ಹೋಗ್ತೀನಿ ಅಂತಿದ್ದಾರೆ. ಇದು ಹಿಂದೂ ಸಮಾಜದ ದಮ್ಮು, ತಾಕತ್ತು ಎಂದು ಟಾಂಗ್‌ ಕೊಟ್ಟಿದ್ದಾರೆ.

  • ಸಿದ್ದರಾಮಯ್ಯ ಧಮ್ ಇದ್ರೆ ಹಿಂದೂ ರಾಷ್ಟ್ರ ಆಗೋದನ್ನ ತಡೆಯಲಿ: ಸಂಸದ ಅನಂತಕುಮಾರ್ ಹೆಗಡೆ

    ಸಿದ್ದರಾಮಯ್ಯ ಧಮ್ ಇದ್ರೆ ಹಿಂದೂ ರಾಷ್ಟ್ರ ಆಗೋದನ್ನ ತಡೆಯಲಿ: ಸಂಸದ ಅನಂತಕುಮಾರ್ ಹೆಗಡೆ

    ಕಾರವಾರ: ಸಿದ್ದರಾಮಯ್ಯನವರಿಗೆ (Siddaramaiah) ಧಮ್ ಇದ್ರೆ ಹಿಂದೂ ರಾಷ್ಟ್ರ ಆಗೋದನ್ನ ತಡೆಯಲಿ. ಹಿಜಬ್‌ನ ಹಿಂದೆ ತಿರುಗುವ ಈ ಸರ್ಕಾರಕ್ಕೆ ಹೆಚ್ಚು ದಿನ ಉಳಿಗಾಲವಿಲ್ಲ. ಸಿದ್ದರಾಮಯ್ಯನ ಸರ್ಕಾರ ಹುಚ್ಚು ಮಹಮ್ಮದ್‌ನ ಸರ್ಕಾರ ಎಂದು ಬಿಜೆಪಿ ಸಂಸದ ಅನಂತಕುಮಾರ್ ಹೆಗಡೆ (Ananth Kumar Hegade) ಕಿಡಿಕಾರಿದ್ದಾರೆ.

    ಶಿರಸಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಲ್ಪಸಂಖ್ಯಾತರ ವೋಟುಗಳು ಇಲ್ಲದೇ ಕಾಂಗ್ರೆಸ್ ಬದುಕಲು ಸಾಧ್ಯವಿಲ್ಲ. ಯಾವತ್ತೂ ಕಾಂಗ್ರೆಸ್ ಬಹುಸಂಖ್ಯಾತರ ರಾಜಕಾರಣ ಮಾಡಿಲ್ಲ. ಮನಸ್ಸಿಗೆ ಬಂದಂತೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇದನ್ನೂ ಓದಿ: ಉಡುಪಿ ಶ್ರೀಕೃಷ್ಣನ ದರ್ಶನ ಪಡೆದ ಪೂಜಾ ಗಾಂಧಿ ದಂಪತಿ

    ಈ ರಾಜ್ಯದ ಜನತೆ ತೆಗೆದಿಟ್ಟ ವ್ಯಕ್ತಿ ಟಿಪ್ಪು. ಈ ರಾಜ್ಯವನ್ನು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ತೊಂದರೆಗೀಡು ಮಾಡಿದ ವ್ಯಕ್ತಿ. ಅವನ ಹೆಸರನ್ನೇ ತೆಗದುಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತೆ ಎಂದರೇ ಕಾಂಗ್ರೆಸ್‌ಗೆ ಮುಂದಿನ ದಿನ ಜನತೆ ಹೇಗೆ ಉತ್ತರ ಕೊಡುತ್ತಾರೆ ಎಂಬುದನ್ನು ಯೋಚನೆ ಮಾಡಬೇಕು ಎಂದು ತಿಳಿಸಿದ್ದಾರೆ.

    ಹಿಜಬ್ ವಿಷಯದಲ್ಲಿ ಸಿದ್ದರಾಮಯ್ಯ ಅವರ, ಯಾರು ಬೇಕಾದ್ರು ಏನು ಬೇಕಾದ್ರು ಡ್ರೆಸ್ ಹಾಕಿಕೊಂಡು ಹೋಗಬಹುದು ಎಂಬ ಹೇಳಿಕೆ ಮುಂದಿನ ದಿನ ಆತಂಕಕಾರಿ ಬೆಳವಣಿಗೆಗೆ ಕಾರಣ ಆಗುತ್ತೆ. ನಮ್ಮವರು ಕೇಸರಿ ಶಾಲು ಹಾಕಿಕೊಂಡು ಹೋಗ್ತಾರೆ. ಅವರು ಹಿಜಬ್ ಹಾಕಿಕೊಂಡು ಹೋಗ್ತಾರೆ. ಒಂದು ಚೌಕಟ್ಟಿನ ಕಲ್ಪನೆ ಸರ್ಕಾರಕ್ಕೆ ಇಲ್ಲಾ ಎಂದಾದರೇ ಸರ್ಕಾರ ಇದೆ ಎಂದು ಅನಿಸುವುದಿಲ್ಲ. ಸಿದ್ದರಾಮಯ್ಯನವರಿಗೆ ಧಮ್‌ ಇದ್ರೆ ಹಿಂದೂ ರಾಷ್ಟ್ರ ಆಗೋದನ್ನ ತಡೆಯಲಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ಬೈರತಿ ಸುರೇಶ್‌ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

    ಸಿದ್ದರಾಮಯ್ಯನ ದುರಂಹಕಾರಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಕರ್ನಾಟಕದಲ್ಲಿ ಹಿಂದೂ ವಿರೋಧಿ ಸರ್ಕಾರ ಇರಲು ಸಾಧ್ಯವೇ ಇಲ್ಲ. ಕಾಂಗ್ರೆಸ್‌ನವರು ಬದುಕಬೇಕು ಎಂದರೆ ಮುಸ್ಲಿಮರ ಹಿಜಬ್‌ನ್ನು ಹಿಡಿದುಕೊಂಡೇ ವೋಟು ತಗೋಬೇಕು. ಹಿಜಬ್‌ನ ಹಿಂದೆ ತಿರುಗುವ ಈ ಸರ್ಕಾರಕ್ಕೆ ಹೆಚ್ಚು ದಿನ ಉಳಿಗಾಲವಿಲ್ಲ. ಕರ್ನಾಟಕದಲ್ಲಿ ಮುಂದಿನ ದಿನದಲ್ಲಿ ಬಿಜೆಪಿ ಬರುತ್ತದೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

    ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯನ್ನು ಖಂಡಿಸಿದ ಅವರು, ಆರ್ಥಿಕ ಸುಭದ್ರತೆಯ ಕಲ್ಪನೆಯೇ ಇಲ್ಲದಂಥ ಕೆಲವರು ಮಾಡಿದಂತಹ ಉಪದ್ರವ ಇದು. ಜನರಿಗೂ ಸಹ ಇದು ಬೇಕಾಗಿಲ್ಲ. ಇದರ ಪರಿಣಾಮ ಅಭಿವೃದ್ಧಿಗೆ ಹಣವಿಲ್ಲ. ಸಾಲ ತಂದು ಈ ಸರ್ಕಾರ ಫ್ರೀ ಬೀಸ್ ಕೊಟ್ಟಿರುವುದು ಹುಚ್ಚು ಮಹಮ್ಮದ್‌ನ ಸರ್ಕಾರವಾಗಿದೆ. ರಾಮಮಂದಿರ ಉದ್ಘಾಟನೆ ಆಗುತ್ತಿರುವುದು ಇದು ಹಿಂದೂ ಸಮಾಜದ ವಿಜಯ. ಇದು ಹಿಂದೂ ಸಮಾಜದ ನಿರ್ಮಾಣದ ಮೊದಲ ಹೆಜ್ಜೆಯ ಗುರುತು ಎಂದಿದ್ದಾರೆ. ಇದನ್ನೂ ಓದಿ: ಕಲುಷಿತ ಕಾಂಗ್ರೆಸ್‌ಗೆ ಹಿಂದುತ್ವ ರುಚಿಸಲ್ಲ, ವಿದೇಶಿ ಜೀನ್ಸ್‌ ಎಂದೂ ಭಾರತೀಯತೆಯನ್ನು ಒಪ್ಪಲ್ಲ: ಜೆಡಿಎಸ್‌ ಕಿಡಿ

  • ಲತಾ ಮಂಗೇಶ್ಕರ್ ಶವದ ಮೇಲೆ ಉಗುಳುವುದು, ಶಾರೂಖ್ ಹೀನ ಮನಸ್ಥಿತಿಯನ್ನು ತೋರಿಸುತ್ತದೆ: ಅನಂತಕುಮಾರ್ ಹೆಗಡೆ ಕಿಡಿ

    ಲತಾ ಮಂಗೇಶ್ಕರ್ ಶವದ ಮೇಲೆ ಉಗುಳುವುದು, ಶಾರೂಖ್ ಹೀನ ಮನಸ್ಥಿತಿಯನ್ನು ತೋರಿಸುತ್ತದೆ: ಅನಂತಕುಮಾರ್ ಹೆಗಡೆ ಕಿಡಿ

    ಕಾರವಾರ: ಭಾರತ ರತ್ನ ಲತಾ ಮಂಗೇಶ್ಕರ್ ಅಂತಿಮ ದರ್ಶನ ಪಡೆಯುವ ವೇಳೆ ಶ್ರದ್ಧಾಂಜಲಿ ಸಲ್ಲಿಸಲು ಆಗಮಿಸಿದ್ದ ಶಾರೂಖ್ ಖಾನ್ ಮಾಸ್ಕ್ ತೆಗೆದು ಲತಾ ಮಂಗೇಶ್ಕರ್ ಮೃತದೇಹದ ಮೇಲೆ ಉಗುಳಿದ್ದಾರೆ. ಶಾರುಖ್ ಖಾನ್‍ರವರು ಶ್ರದ್ಧಾಂಜಲಿ ಸಲ್ಲಿಸುತ್ತಿರುವ ವೀಡಿಯೋವನ್ನು ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬಾಲಿವುಡ್ ಖಾನ್‍ಗಳ ದರಿದ್ರ ಮನಸ್ಥಿತಿಯೇ ಹೀಗೆ, ತಮ್ಮ ಅಸಹಜ ನಡವಳಿಕೆಯಿಂದ ದೇಶದ ಗಮನ ತಮ್ಮತ್ತ ಸೆಳೆಯುವುದು, ಪ್ರಚಾರದ ತೆವಲಾಗಿದೆ. ಸಂಪ್ರದಾಯದ ಹೆಸರಿನಲ್ಲಿ ಅನಿಷ್ಟಗಳನ್ನು ಮಾಡುವುದು, ರಾಷ್ಟ್ರಧ್ವಜವನ್ನು ಹೊದಿಸಿದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಶವದ ಮೇಲೆ ಉಗುಳುವುದು, ಅವರ ಹೀನ ಮನಸ್ಥಿತಿಯನ್ನು ತೋರಿಸುತ್ತದೆ. ಇವುಗಳನ್ನು ಬುಡಸಮೇತ ಕಿತ್ತುಹಾಕೋ ತನಕ ಹೀಗೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಶಾರೂಖ್ ಜೊತೆ ಪ್ರಾರ್ಥನೆ ಮಾಡಿದ್ದು ಪತ್ನಿ ಗೌರಿ ಖಾನ್ ಅಲ್ಲ

    ವೀಡಿಯೋದಲ್ಲಿ ಏನಿದೆ?: ಲತಾ ಮಂಗೇಶ್ಕರ್ ಅವರ ಮೃತದೇಹದ ಎದುರಿನಲ್ಲಿ ನಿಂತು ಪ್ರಾರ್ಥನೆ ಮಾಡುವಾಗ ಶಾರೂಖ್ ಖಾನ್ ಅವರು ಮಾಸ್ಕ್ ಧರಿಸಿದ್ದರು. ಗಾಯಕಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಪ್ರಾರ್ಥನೆ ಮಾಡಿದರು. ಬಳಿಕ ಮಾಸ್ಕ್ ತೆಗೆದು ಪಾರ್ಥಿವ ಶರೀರದ ಕಡೆಗೆ ಗಾಳಿ ಊದಿದರು. ಮುಸ್ಲಿಂ ಸಮುದಾಯದಲ್ಲಿ ಈ ರೀತಿ ಮಾಡುವ ಪದ್ಧತಿ ಇದೆ. ಆದರೆ ಅವರು ಗಾಳಿ ಊದಿದ್ದನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ಲತಾಜೀ ಪಾರ್ಥಿವ ಶರೀರಕ್ಕೆ ಶಾರೂಖ್ ಖಾನ್ ಉಗಿದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಲತಾ ಮಂಗೇಶ್ಕರ್ ಅವರನ್ನು ಸಚಿನ್ ತೆಂಡೂಲ್ಕರ್ ಏನೆಂದು ಕರೆಯುತ್ತಿದ್ದರು ಗೊತ್ತಾ?