Tag: ಅಧ್ಯಯನ

  • ಅಮೆರಿಕದಲ್ಲಿ ತೆರಿಗೆ ಹಣ ವೆಚ್ಚಕ್ಕೆ ನಿಯಂತ್ರಣ: ಮಸ್ಕ್‌ಗೆ ಸಿಕ್ತು ಮಹತ್ವದ ಹುದ್ದೆ

    ಅಮೆರಿಕದಲ್ಲಿ ತೆರಿಗೆ ಹಣ ವೆಚ್ಚಕ್ಕೆ ನಿಯಂತ್ರಣ: ಮಸ್ಕ್‌ಗೆ ಸಿಕ್ತು ಮಹತ್ವದ ಹುದ್ದೆ

    – ಸರ್ಕಾರಿ ಅನುದಾನದಲ್ಲಿ ನಡೆಯುತ್ತಿರುವ ಅಧ್ಯಯನಗಳಿಗೆ ಬೀಳುತ್ತಾ ಬ್ರೇಕ್‌?

    ವಾಷಿಂಗ್ಟನ್‌: ನಿರೀಕ್ಷೆಯಂತೆ ಟೆಸ್ಲಾ ಮುಖ್ಯಸ್ಥ ಎಲೋನ್‌ ಮಸ್ಕ್‌ (Elon Musk) ಅವರಿಗೆ ಟ್ರಂಪ್‌ ಸರ್ಕಾರದಲ್ಲಿ ಮಹತ್ವದ ಹುದ್ದೆ ಸಿಕ್ಕಿದೆ. ಭಾರತೀಯ-ಅಮೆರಿಕನ್ ಉದ್ಯಮಿ ವಿವೇಕ್ ರಾಮಸ್ವಾಮಿ (Vivek Ramaswamy) ಅವರೊಂದಿಗೆ ಎಲೋನ್ ಮಸ್ಕ್ ಅವರು ಸರ್ಕಾರಿ ದಕ್ಷತೆಯ ಇಲಾಖೆಯನ್ನು (Department of Government Efficiency) ಮುನ್ನಡೆಸಲಿದ್ದಾರೆ.

    ಇಬ್ಬರೂ ಸರ್ಕಾರಕ್ಕೆ ಹೊರಗಿನಿಂದ ಸಲಹೆ ಮತ್ತು ಮಾರ್ಗದರ್ಶನ ನೀಡುತ್ತಾರೆ. ಇವರಿಬ್ಬರಿಂದ ದೊಡ್ಡ ಪ್ರಮಾಣದ ರಚನಾತ್ಮಕ ಸುಧಾರಣೆಯಾಗಲಿದೆ ಎಂದು ಟ್ರಂಪ್‌ (Donald Trump) ಹೇಳಿದ್ದಾರೆ.

    Department of Government Efficiency ಇಲಾಖೆಯನ್ನು ಸಂಕ್ಷಿಪ್ತವಾಗಿ DOGE ಎಂದು ಕರೆಯಲಾಗುತ್ತಿದೆ. ಈ ಇಲಾಖೆ ರಚನೆಯಾಗುವ ಮೊದಲೇ ಅಮೆಕದಲ್ಲಿ DOGE ಫೇಮಸ್‌ ಆಗಿತ್ತು. ಇದು ಕ್ರಿಪ್ಟೋ ಕರೆನ್ಸಿಯಾಗಿದ್ದು ಹಲವು ಬಾರಿ ಮಸ್ಕ್‌ ಅವರು Dogecoin ಬಗ್ಗೆ ಪ್ರಚಾರ ಮಾಡಿದ್ದರು.

    ಏನಿದು ಸರ್ಕಾರಿ ದಕ್ಷತೆಯ ಇಲಾಖೆ?
    ಟ್ರಂಪ್‌ ಸರ್ಕಾರ ಹೊಸ ಇಲಾಖೆ ಇದಾಗಿದ್ದು ಮಸ್ಕ್‌ ಅವರು ಚುನಾವಣೆಯ ಸಮಯದಲ್ಲಿ ಇಲಾಖೆಯ ಬಗ್ಗೆ ಪ್ರಸ್ತಾಪಿಸಿದ್ದರು. ಈ ಇಲಾಖೆ ಹೇಗೆ ಕಾರ್ಯನಿರ್ವಹಿಸಲಿದೆ ಎನ್ನುವುದು ತಕ್ಷಣವೇ ಸ್ಪಷ್ಟವಾಗಿಲ್ಲ.ಆದರೂ ಟ್ರಂಪ್‌ ಪ್ರಕಾರ, ಸರ್ಕಾರಿ ಅಧಿಕಾರಶಾಹಿಯನ್ನು ಕಿತ್ತೊಗೆಯುವುದು, ಹೆಚ್ಚುವರಿ ನಿಯಮ ಮತ್ತು ವ್ಯರ್ಥ ವೆಚ್ಚಗಳನ್ನು ಕಡಿತಗೊಳಿಸಲಿದೆ. ಇದರ ಜೊತೆ ಫೆಡರಲ್ ಏಜೆನ್ಸಿಗಳನ್ನು ಪುನರ್‌ರಚಿಸಲಿದೆ.

    ಮುಖ್ಯವಾಗಿ ಈ ಇಲಾಖೆ ಅಮೆರಿಕ ಸರ್ಕಾರ ಅನುದಾನದಲ್ಲಿ ನಡೆಯುತ್ತಿರುವ ಹಲವು ಅಧ್ಯಯನಗಳಿಗೆ ಹಣಕಾಸಿನ ನೆರವು ನೀಡುವುದನ್ನು ನಿಲ್ಲಿಸುವ ಸಾಧ್ಯತೆಯಿದೆ. ಇದನ್ನೂ ಓದಿ: ಮುಂದಿನ ವರ್ಷದ ಚುನಾವಣೆಯಲ್ಲಿ ಕೆನಡಾ ಪ್ರಧಾನಿ ಟ್ರುಡೋಗೆ ಸೋಲು : ಮಸ್ಕ್‌ ಭವಿಷ್ಯ


    ಈ ಇಲಾಖೆ ಸರ್ಕಾರಿ ಹಣವನ್ನು ದುರುಪಯೋಗ ಮಾಡುವವರಿಗೆ ಶಾಕ್‌ ನೀಡಲಿದೆ. ಯಾವುದಾದರೂ ಮುಖ್ಯವಾಗಿರುವುದನ್ನು ತೆಗೆಯುತ್ತಿದ್ದೇವೆ ಎಂದು ನೀವು ಭಾವಿಸಿದರೆ ನಮಗೆ ತಿಳಿಸಿ ಎಂದು ಮಸ್ಕ್‌ ಅಮೆರಿಕ ಜನರಲ್ಲಿ ಮನವಿ ಮಾಡಿದ್ದಾರೆ.

    ಸರ್ಕಾರ ಹೇಗೆ ಪ್ರಯೋಜನಕ್ಕೆ ಬಾರದ ವಿಷಯಗಳಿಗೆ ಕೋಟ್ಯಂತರ ಡಾಲರ್‌ ಹಣವನ್ನು ಖರ್ಚು ಮಾಡುತ್ತದೆ ಎನ್ನುವುದಕ್ಕೆ ಮಸ್ಕ್‌ ಎಕ್ಸ್‌ ಬಳಕೆದಾರರೊಬ್ಬರ ಪೋಸ್ಟ್‌ ಅನ್ನು ರೀ ಪೋಸ್ಟ್‌ ಮಾಡಿ ತಿಳಿಸಿದ್ದಾರೆ.

     

    ಪೋಸ್ಟ್‌ನಲ್ಲಿ ಏನಿದೆ?
    ಅಮೆರಿಕ ತೆರಿಗೆಯ ಅಸಂಬದ್ಧ ಕಸ ಇಲ್ಲಿದೆ. ಆಡುಗಳ ಮೇಲೆ ಯೋಗದ ಪರಿಣಾಮಗಳನ್ನು ಅಧ್ಯಯನ ಮಾಡಲು 1.5 ಮಿಲಿಯನ್‌ ಡಾಲರ್‌, ಖಾಲಿ ಕಟ್ಟಡ ನಿರ್ವಹಣೆಗೆ 1.7 ಬಿಲಿಯನ್‌ ಡಾಲರ್‌, ಧೂಮಪಾನವನ್ನು ನಿಲ್ಲಿಸಲು ಪರ್ಯಾಯ ಸಂಗೀತದ ದೃಶ್ಯವನ್ನು ಪ್ರಚಾರ ಮಾಡುವ ಅಭಿಯಾನಕ್ಕೆ 5 ಮಿಲಿಯನ್ ಡಾಲರ್‌, ಕೃಷಿ ಇಲಾಖೆಯಲ್ಲಿ ಒಬ್ಬ ಪೂರ್ಣ-ಸಮಯದ ಉದ್ಯೋಗಿಯ ನೇಮಕಕ್ಕೆ 2 ಮಿಲಿಯನ್‌ ಡಾಲರ್‌ನ ಇಂಟರ್ನ್‌ಶಿಪ್‌ ಯೋಜನೆ, ಡೈರಿ ಹಸುಗಳ ಮೇಲೆ ಸಂಗೀತದ ಪರಿಣಾಮಗಳನ್ನು ಅಧ್ಯಯನ ಮಾಡಲು 1 ಮಿಲಿಯನ್ ಡಾಲರ್‌, ಮೀನಿನ ಮೇಲೆ ಮದ್ಯದ ಪರಿಣಾಮಗಳನ್ನು ಅಧ್ಯಯನ ಮಾಡಲು 1.7 ಮಿಲಿಯನ್ ಡಾಲರ್‌.

     

    ಮಸ್ಕ್‌ ಅವರು ವೆಚ್ಚ ಕಡಿತದ ಬಗ್ಗೆ ಮೊದಲಿನಿಂದಲೂ ಮಾತನಾಡಿಕೊಂಡೇ ಬಂದಿದ್ದಾರೆ. ಟ್ವಿಟ್ಟರ್‌ ಕಂಪನಿಯನ್ನು ಖರೀದಿಸಿದ ನಂತರ 90% ಉದ್ಯೋಗಿಗಳನ್ನು ಕೆಲಸದಿಂದಲೇ ತೆಗೆದುಹಾಕಿದ್ದರು. 6 ಸಾವಿರ ಮಂದಿ ಇದ್ದ ಉದ್ಯೋಗಿಗಳ ಸಂಖ್ಯೆಯನ್ನು 1 ಸಾವಿರಕ್ಕೆ ಇಳಿಸಿದ್ದರು. ಈ ವಿಚಾರ ವಿಶ್ವಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಟ್ವಿಟ್ಟರ್‌ ಸಾಮರ್ಥ್ಯ ಕುಂಠಿತವಾಗಲಿದೆ ಎಂದು ವರದಿಯಾಗಿತ್ತು. ಇದಕ್ಕೆ ಮಸ್ಕ್‌ ಟ್ವಿಟ್ಟರ್‌ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಂಚಿಕೊಳ್ಳುವ ವೇದಿಕೆ. ಇಲ್ಲಿ ಎಡಪಂಥೀಯ ಸಿದ್ಧಾಂತವನ್ನು ಹಂಚಿಕೊಳ್ಳುವವರಿಗೆ ಜಾಗ ಇಲ್ಲ. ಸಂಸ್ಥೆ ನಡೆಸಲು ಎಷ್ಟು ಉದ್ಯೋಗಿಗಳು ಬೇಕು ಅಷ್ಟು ಉದ್ಯೋಗಿಗಳು ಇದ್ದರೆ ಸಾಕು. ಅನಗತ್ಯ ಉದ್ಯೋಗಿಗಳ ಅಗತ್ಯವಿಲ್ಲ ಎಂದು ಹೇಳಿ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದರು.

     

  • ಲಂಡನ್‌ ವ್ಯಕ್ತಿಯ ದೇಹದಲ್ಲಿ ಬರೋಬ್ಬರಿ ಒಂದೂವರೆ ವರ್ಷ ಅಡಗಿತ್ತು ಕೋವಿಡ್‌ – ಅಧ್ಯಯನದಿಂದ ದೃಢ

    ಲಂಡನ್‌ ವ್ಯಕ್ತಿಯ ದೇಹದಲ್ಲಿ ಬರೋಬ್ಬರಿ ಒಂದೂವರೆ ವರ್ಷ ಅಡಗಿತ್ತು ಕೋವಿಡ್‌ – ಅಧ್ಯಯನದಿಂದ ದೃಢ

    ಲಂಡನ್: ಇಂಗ್ಲೆಂಡ್‌ನ ರೋಗಿಯೊಬ್ಬರ ದೇಹದಲ್ಲಿ ಬರೋಬ್ಬರಿ ಒಂದೂವರೆ ವರ್ಷ (505 ದಿನ) ಕೊರೊನಾ ಸೋಂಕು ಇದ್ದ ಬಗ್ಗೆ ಅಧ್ಯಯನವೊಂದು ದೃಢಪಡಿಸಿದೆ.

    ಇದು ದೀರ್ಘಾವಧಿಯ ಕೊರೊನಾ ಸೋಂಕು ಎಂದು ಖಚಿತವಾಗಿ ತಿಳಿಯಲು ಯಾವುದೇ ಮಾರ್ಗವಿಲ್ಲ. ಏಕೆಂದರೆ ಪ್ರತಿಯೊಬ್ಬರೂ ಪರೀಕ್ಷೆಗೆ ಒಳಗಾಗುವುದಿಲ್ಲ ಅಧ್ಯಯನ ತಿಳಿಸಿದೆ. ಇದನ್ನೂ ಓದಿ: ಹೊಸ ಆತಂಕ ಹುಟ್ಟಿಸಿದ ಓಮಿಕ್ರಾನ್ BA.2.12 ತಳಿ

    corona

    ಬರೋಬ್ಬರಿ 505 ದಿನ, ಇದು ನಿಸ್ಸಂಶಯವಾಗಿ ವರದಿಯಾದ ಅತಿ ದೀರ್ಘಾವಧಿಯ ಸೋಂಕು ಎಂದು ತೋರುತ್ತದೆಂದು ಗೈಸ್ ಮತ್ತು ಸೇಂಟ್ ಥಾಮಸ್ ಎನ್‌ಹೆಚ್‌ಎಸ್ ಫೌಂಡೇಶನ್ ಟ್ರಸ್ಟ್‌ನ ಸಾಂಕ್ರಾಮಿಕ ರೋಗ ತಜ್ಞ ಡಾ. ಲ್ಯೂಕ್ ಬ್ಲಾಗ್ಡನ್ ಸ್ನೆಲ್ ತಿಳಿಸಿದ್ದಾರೆ.

    ದೀರ್ಘಾವಧಿ ಇರುವ ಸೋಂಕು ಯಾವ ರೂಪಾಂತರಿ ಆಗಿರಲಿದೆ ಎಂಬ ಬಗ್ಗೆ ಅಧ್ಯಯನ ನಡೆಸಲಾಯಿತು. ಕನಿಷ್ಠ 8 ವಾರಗಳವರೆಗೆ ವೈರಸ್‌ಗೆ ಪಾಸಿಟಿವ್‌ ಇರುವ ರೋಗಿಗಳನ್ನು ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು. ಎಲ್ಲರೂ ಅಂಗಾಂಗ ಕಸಿ, ಎಚ್ಐವಿ, ಕ್ಯಾನ್ಸರ್ ಅಥವಾ ಇತರ ಕಾಯಿಲೆಗಳಿಗೆ ಚಿಕಿತ್ಸೆ ಪಡೆದಿದ್ದರಿಂದ ದುರ್ಬಲಗೊಂಡು ರೋಗನಿರೋಧಕ ಶಕ್ತಿ ಕ್ಷೀಣಿಸಿತ್ತು. ಗೌಪ್ಯತೆ ಕಾರಣಕ್ಕಾಗಿ ಅಧ್ಯಯನಕ್ಕೆ ಒಳಪಡಿಸಿದವರ ಮಾಹಿತಿ ಬಹಿರಂಗಪಡಿಸಿಲ್ಲ. ಇದನ್ನೂ ಓದಿ: ದೆಹಲಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಬೂಸ್ಟರ್‌ ಡೋಸ್‌ ಉಚಿತ

    covid

    ಪುನರಾವರ್ತಿತ ಪರೀಕ್ಷೆಗಳು ಅವರಲ್ಲಿ ಸೋಂಕು ಸರಾಸರಿ 73 ದಿನಗಳವರೆಗೆ ಇರುವುದನ್ನು ತೋರಿಸಿದೆ. ಇಬ್ಬರ ದೇಹದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ವೈರಸ್ ಇತ್ತು. ಈ ಹಿಂದೆ, ಆರ್‌ಟಿ-ಪಿಸಿಆರ್ ಪರೀಕ್ಷೆಯೊಂದಿಗೆ ದೃಢೀಕರಿಸಲ್ಪಟ್ಟ ದೀರ್ಘಾವಧಿಯ ಕೋವಿಡ್ ಪ್ರಕರಣವು 335 ದಿನಗಳವರೆಗೆ ಸೋಂಕು‌ ಸಕ್ರಿಯವಾಗಿತ್ತು ಎಂದು ಸಂಶೋಧಕರು ಹೇಳಿದ್ದಾರೆ. ನಿರಂತರವಾದ ಕೋವಿಡ್, ಅಪರೂಪದ ಮತ್ತು ದೀರ್ಘಾವಧಿಯ ಕೋವಿಡ್‌ಗಿಂತ ಭಿನ್ನವಾಗಿದೆ.

    ದೀರ್ಘಾವಧಿ ಕೋವಿಡ್‌ನಲ್ಲಿ, ನಿಮ್ಮ ದೇಹದಿಂದ ವೈರಸ್ ಮುಕ್ತವಾದರೂ ರೋಗಲಕ್ಷಣಗಳು ಮುಂದುವರಿಯುತ್ತವೆ ಎಂದು ಸ್ನೆಲ್ ಹೇಳಿದ್ದಾರೆ.

    2020 ರ ಆರಂಭದಲ್ಲಿ ತೀವ್ರ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿಗೆ ರೆಮ್‌ಡೆಸಿವಿರ್‌ನೊಂದಿಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ 2021 ರಲ್ಲಿ ನಿಧನರಾದರು. ರೋಗಿಯ ಇತರೆ ಹಲವು ಕಾಯಿಲೆಗಳಿದ್ದವು ಎಂದು ಸಂಶೋಧಕರು ಹೇಳಿದ್ದಾರೆ. ಇದನ್ನೂ ಓದಿ: ಪ್ರಧಾನಿ ಭೇಟಿಗೂ ಮುನ್ನ ಜಮ್ಮುವಿನಲ್ಲಿ ಎನ್‌ಕೌಂಟರ್ – 4 ಉಗ್ರರ ಹತ್ಯೆ

    ದೀರ್ಘಾವಧಿಯ ಸೋಂಕಿ ಇರುವ ಐವರು ರೋಗಿಗಳು ಬದುಕುಳಿದಿದ್ದಾರೆ. ಇಬ್ಬರು ಚಿಕಿತ್ಸೆ ಪಡೆಯದೇ ಗುಣಮುಖರಾಗಿದ್ದಾರೆ. ಇಬ್ಬರು ಚಿಕಿತ್ಸೆಯ ನಂತರ ಗುಣಮುಖರಾಗಿದ್ದರೆ, ಒಬ್ಬರಿಗೆ ಇನ್ನೂ ಕೋವಿಡ್-19 ಸಕ್ರಿಯವಾಗಿದೆ.

  • ಕೊರೊನಾ ಮೂಲ ಹುಡುಕಲು ಹೊರಟ ಡಬ್ಲ್ಯೂಹೆಚ್‍ಓ- ಚೀನಾಕ್ಕೆ ಸಂಕಷ್ಟ ಶುರು

    ಕೊರೊನಾ ಮೂಲ ಹುಡುಕಲು ಹೊರಟ ಡಬ್ಲ್ಯೂಹೆಚ್‍ಓ- ಚೀನಾಕ್ಕೆ ಸಂಕಷ್ಟ ಶುರು

    ನವದೆಹಲಿ: ವಿಶ್ವಾದ್ಯಂತ ಐದು ಲಕ್ಷ ಮಂದಿಯನ್ನು ಬಲಿ ಪಡೆದಿರುವ ಕೊರೊನಾ ಸೋಂಕಿನ ಮೂಲ ಪತ್ತೆ ಹಚ್ಚಲು ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಿದೆ. ಈ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವೊಂದು ಮುಂದಿನ ವಾರ ಚೀನಾಕ್ಕೆ ತೆರಳುವುದಾಗಿ ಡಬ್ಲ್ಯೂಹೆಚ್‍ಓ ಹೇಳಿದೆ.

    ಕೊರೊನಾ ಸೋಂಕು ಕಾಣಿಸಿಕೊಂಡು ವಿಶ್ವಕ್ಕೆ ಹರಡಿದ ಆರು ತಿಂಗಳು ಬಳಿಕ ಅಧ್ಯಯನಕ್ಕೆ ಮುಂದಾಗಿರುವ ವಿಶ್ವ ಆರೋಗ್ಯ ಸಂಸ್ಥೆಯ ತಂಡ ವುಹಾನ್‍ಗೆ ಭೇಟಿ ನೀಡಲಿದೆ. ಅಲ್ಲಿ ಕೊರೊನಾ ವೈರಸ್ ಹುಟ್ಟಿದ್ದೇಗೆ ಹಾಗೂ ಅದನ್ನು ಮಾನವನಿಗೆ ಹರಡಿದ್ದೇಗೆ ಎನ್ನುವ ಮಾಹಿತಿಯನ್ನು ಕಲೆ ಹಾಕುವ ಪ್ರಯತ್ನ ಮಾಡುತ್ತಿದೆ.

    ಸೋಂಕು ನಿಫಾ ವೈರಸ್ ಮಾದರಿಯಲ್ಲೇ, ಬಾವುಲಿಗಳ ಮೂಲಕ ಹರಡಿತೆ ಅಥವಾ ಇನ್ಯಾವ ಪ್ರಾಣಿಗಳ ಮಾರುಕಟ್ಟೆಯಿಂದ ಸೋಂಕು ಹಬ್ಬಿರಬಹುದ ಎನ್ನುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಕೂಲಂಕಷವಾಗಿ ಅಧ್ಯಯನ ನಡೆಸಲಿದೆ.

    ಕೊರೊನಾ ವೈರಸ್ ಚೀನಾ ನಿರ್ಮಿತ, ಉದ್ದೇಶ ಪೂರ್ವಕವಾಗಿ ವೈರಸ್ ಹರಡುವ ಕಾರ್ಯ ಮಾಡಿದೆ ಎಂದು ಅಮೆರಿಕಾ ಸೇರಿದಂತೆ ವಿಶ್ವದ ಹಲವು ದೇಶಗಳು ಆರೋಪಿಸಿದ್ದಾವೆ. ಅಲ್ಲದೇ ವಿಶ್ವ ಆರೋಗ್ಯ ಸಂಸ್ಥೆ ಸಭೆಯಲ್ಲಿ ಈ ಬಗ್ಗೆ ಚೀನಾ ವಿವರಣೆ ನೀಡಬೇಕು ಎಂದು ಒತ್ತಾಯಿಸಿತ್ತು.

    ಸಾಕಷ್ಟು ದೇಶಗಳು ಒತ್ತಾಯದ ಬಳಿಕ ಮಧ್ಯಂತರ ವರದಿ ನೀಡಿದ್ದ ಚೀನಾ ಪೂರ್ಣ ಪ್ರಮಾಣದ ವರದಿ ನೀಡುವ ಪ್ರಯತ್ನ ಮಾಡಿರಲಿಲ್ಲ. ಪ್ರಾಣಿಗಳ ಮಾರುಕಟ್ಟೆಯಿಂದ ವೈರಸ್ ಮಾನವನಿಗೆ ಹರಡಿದೆ ಎಂದು ತನ್ನ ವರದಿಯಲ್ಲಿ ಸಮರ್ಥಿಸಿಕೊಂಡಿತ್ತು.

    ಆರು ತಿಂಗಳ ವ್ಯಾಪ್ತಿ ಮೀರಿ ಸೋಂಕು ಹಬ್ಬುತ್ತಿದೆ. ಒಂದು ಕೋಟಿ ಹನ್ನೇಡು ಲಕ್ಷಕ್ಕಿಂತ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಐದು ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿಗೆ ಲಸಿಕೆ ಇಲ್ಲದ ಕಾರಣ ಇದು ಮತ್ತಷ್ಟು ವೇಗವಾಗಿ ಹರಡುವ ಸಾಧ್ಯತೆಗಳಿದೆ ಎನ್ನಲಾಗಿದೆ.

  • “ಸೋಂಕಿತರ ಸಂಪರ್ಕದಲ್ಲಿರುವ ಎಲ್ಲರನ್ನೂ ಪರೀಕ್ಷೆಗೊಳಪಡಿಸಬೇಕಿಲ್ಲ”

    “ಸೋಂಕಿತರ ಸಂಪರ್ಕದಲ್ಲಿರುವ ಎಲ್ಲರನ್ನೂ ಪರೀಕ್ಷೆಗೊಳಪಡಿಸಬೇಕಿಲ್ಲ”

    – ಹೊಸ ಅಧ್ಯಯನ ವರದಿಯಲ್ಲಿ ಬಹಿರಂಗ

    ನವದೆಹಲಿ: ಕೊರೊನಾ ಸೋಂಕಿತರ ಸಂಪರ್ಕದಲ್ಲಿದ್ದ ಎಲ್ಲ ವ್ಯಕ್ತಿಗಳ ಪರೀಕ್ಷೆ ನಡೆಸುವ ಅಗತ್ಯವಿಲ್ಲ, ಸಂಪರ್ಕಿತ ವ್ಯಕ್ತಿಯಲ್ಲಿ ರೋಗದ ಲಕ್ಷಣಗಳು ಕಂಡು ಬಂದ್ದಲ್ಲಿ ಮಾತ್ರ ಮೂರು ದಿನಗಳ ಬಳಿಕ ಕೊರೊನಾ ಟೆಸ್ಟ್ ನಡೆಸಬೇಕು ಎಂದು ಹೊಸ ಅಧ್ಯಯನ ವರದಿಯೊಂದು ಹೇಳಿದೆ.

    ವಿಶ್ವಾದ್ಯಂತ ಮಹಾಮಾರಿ ಕೊರೊನಾ ರಣಕೇಕೆ ಮುಂದುವರಿದಿದ್ದು, ಈ ಬಗ್ಗೆ ಹಲವು ಅಧ್ಯಯನಗಳು ನಡೆಯುತ್ತಲೇ ಇವೆ. ಈ ಪೈಕಿ ಕೊರೊನಾ ಸೋಂಕು ಪರೀಕ್ಷೆ ಸಂಬಂಧ ಹೊಸ ಅಧ್ಯಯನ ವರದಿವೊಂದು ಪ್ರಕಟವಾಗಿದೆ. ಅನ್ನಲ್ಸ್ ಆಫ್ ಇಂಟರ್ನಲ್ ಮೆಡಿಸನ್ ಜನರಲ್ ನಲ್ಲಿ ಸಂಶೋಧನಾ ವರದಿ ಪ್ರಕಟವಾಗಿದ್ದು, RT – PCR ದತ್ತಾಂಶ ಆಧರಿಸಿ ಸಂಶೋಧನಾ ವರದಿ ಪ್ರಕಟಿಸಲಾಗಿದೆ.

    ಈ ವರದಿ ಪ್ರಕಾರ, ಕೊರೊನಾ ಸೋಂಕಿತರ ಸಂಪರ್ಕಕ್ಕೆ ಬಂದವರಿಗೆ ಕೂಡಲೇ ಕೊರೊನಾ ಪರೀಕ್ಷೆ ನಡೆಸಬಾರದು, ಒಂದು ವೇಳೆ ಎಲ್ಲರಿಗೂ ಪರೀಕ್ಷೆ ನಡೆಸಿದರೆ ಬಹುತೇಕ ವರದಿಗಳು ನೆಗೆಟಿವ್ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.

    ಸೋಂಕಿತ ಸಂಪರ್ಕದಲ್ಲಿದ್ದ ವ್ಯಕ್ತಿಗೆ ರೋಗದ ಗುಣಲಕ್ಷಣಗಳು ಕಾಣಿಸಿಕೊಂಡರೆ ಮಾತ್ರ ಪರೀಕ್ಷೆ ನಡೆಸಬೇಕು ರೋಗದ ಲಕ್ಷಣಗಳು ಕಾಣಿಸಿಕೊಂಡ ಮೂರು ದಿನಗಳ ಬಳಿಕ ಕೊರೊನಾ ಟೆಸ್ಟ್ ಮಾಡುವುದು ಉತ್ತಮ ಇದರಿಂದ ನಿಖರವಾದ ರಿಸಲ್ಟ್ ಪಡೆಯಬಹುದು ಎಂದು ವರದಿಯಲ್ಲಿ ಹೇಳಿದೆ.

    ಸೋಂಕು ಹರಡುವುದನ್ನು ತಡೆಯಲು ಕೊರೊನಾ ಪೀಡಿತ ವ್ಯಕ್ತಿಯ ಸಂಪರ್ಕದಲ್ಲಿರಯವ ಎಲ್ಲರನ್ನೂ ಕೂಡಲೇ ಪರೀಕ್ಷೆಗೆ ಒಳಪಡಿಸುವುದು ಸರಿಯಾದ ಕ್ರಮ ಅಲ್ಲ ಎಂದು ವರದಿಯಲ್ಲಿ ಸ್ಪಷ್ಟಪಡಿಸಲಾಗಿದೆ.

  • ಕಾಲಿನ ಬೆರಳುಗಳಲ್ಲಿ ಉರಿಯೂತ ಕೊರೊನಾದ ಹೊಸ ಲಕ್ಷಣ – ತಜ್ಞರ ಮಾಹಿತಿ

    ಕಾಲಿನ ಬೆರಳುಗಳಲ್ಲಿ ಉರಿಯೂತ ಕೊರೊನಾದ ಹೊಸ ಲಕ್ಷಣ – ತಜ್ಞರ ಮಾಹಿತಿ

    ನವದೆಹಲಿ: ಕೆಮ್ಮು, ನೆಗಡಿ, ಜ್ವರ, ಅಸ್ವಸ್ಥತೆ ಸೇರಿ ಹಲವು ಗುಣ ಲಕ್ಷಣಗಳನ್ನು ಹೊಂದಿರುವ ಕೊರೊನಾ ವೈರಸ್ ಸೋಂಕಿನ ಪಟ್ಟಿಗೆ ಮತ್ತೊಂದು ಹೊಸ ಲಕ್ಷಣವೊಂದು ಸೇರ್ಪಡೆಗೊಂಡಿದೆ. ಕಾಲು ಅಥಾವ ಕಾಲಿನ ಬೆರಳುಗಳಲ್ಲಿ ಉರಿಯೂತ ಕಂಡು ಬಂದರೆ ಅದು ಕೊರೊನಾ ವೈರಸ್‍ನ ಮತ್ತೊಂದು ಲಕ್ಷಣ ಎಂದು ತಜ್ಞರು ಹೇಳಿದ್ದಾರೆ.

    ಯುರೋಪ್ ಮತ್ತು ಅಮೆರಿಕದ ಚರ್ಮರೋಗದ ತಜ್ಞರು ಕೊರೊನಾ ವೈರಸ್ ಸೋಂಕಿನ ಹೊಸ ಲಕ್ಷಣವೊಂದನ್ನು ಗುರುತಿಸಿದ್ದಾರೆ. ನಿರಂತರ ಅಧ್ಯಯನದ ಬಳಿಕ ಈ ತಿರ್ಮಾನಕ್ಕೆ ಬರಲಾಗಿದೆ. ಇಟಲಿಯಲ್ಲಿ ಕೆಲವು ಮಕ್ಕಳು ಮತ್ತು ಮಧ್ಯವಯಸ್ಕ ರೋಗಿಗಳ ಬೆರಳು ಮತ್ತು ಕಾಲುಗಳಲ್ಲಿ ಉರಿಯೂತ ಕಂಡ ಬಳಿಕ ಈ ಬಗ್ಗೆ ಅಧ್ಯಯನ ನಡೆಸಲಾಗಿತ್ತು. ಈ ವೇಳೆ ಹೊಸ ಲಕ್ಷಣದ ಬಗ್ಗೆ ಮಾಹಿತಿ ತಿಳಿದುಬಂದಿದೆ.

    ಈ ಸ್ಥಿತಿಯನ್ನು ಫ್ರಾಸ್ಟ್ ಬೈಟ್ ಅಥವಾ ಪೆರ್ನಿಯೊ ಎಂದು ವೈದ್ಯರು ಕರೆದಿದ್ದಾರೆ. ಚಳಿ ಹೆಚ್ಚಿರುವ ಪ್ರದೇಶದಲ್ಲಿ ವಾಸಿಸುವ ಜನರ ಕಾಲುಗಳಲ್ಲಿ ಹೀಗೆ ಉರಿಯೂತ ಕಂಡುಬರುತ್ತದೆ. ಕಾಲಿನ ಬೆರಳುಗಳಲ್ಲಿನ ರಕ್ತನಾಳಗಳಲ್ಲಿ ಉಲ್ಬಣಗೊಳ್ಳುವ ಉರಿಯೂತ ಗಂಭೀರವಾದ ಸೆಳೆತವನ್ನು ಹೊಂದಿರುತ್ತದೆ.

    ಇಟಲಿಯಲ್ಲಿ ಕೋವಿಡ್-19 ರೋಗಿಗಳ ಹೆಚ್ಚಿನ ಸಾಂದ್ರತೆಯಿರುವ ಪ್ರದೇಶಗಳಲ್ಲಿ ಚರ್ಮರೋಗ ತಜ್ಞರು ಕಾಲು ಅಥವಾ ಕಾಲಿನ ಬೆರಳುಗಳಲ್ಲಿ ಉರಿಯೂತ ಸಮಸ್ಯ ಹೆಚ್ಚು ಪ್ರಚಲಿತದಲ್ಲಿ ಇರುವುದನ್ನು ಪತ್ತೆ ಮಾಡಿದ್ದಾರೆ. ಹೀಗಾಗಿ ಈ ಸ್ಥಿತಿಗೆ ‘ಕೋವಿಡ್ ಟೋಸ್’ ಎಂದು ಅಡ್ಡ ಹೆಸರು ಇಟ್ಟಿದ್ದಾರೆ. ಅಮೆರಿಕನ್ ಅಕಾಡೆಮಿ ಆಫ್ ಡರ್ಮಾಟಾಲಜಿಸ್ಟ್ ಗೆ ಸಂಬಂಧಿಸಿದ ವೈದ್ಯರು ಕಾಲಿನ ಬೆರಳಲ್ಲಿ ಉರಿಯೂತ ಕಂಡು ಬಂದರೆ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಸಲಹೆ ನೀಡಿದ್ದಾರೆ.

  • ವುಹಾನ್ ಮಾರುಕಟ್ಟೆಯ ಸೀಗಡಿ ಮಾರುತ್ತಿದ್ದ ಮಹಿಳೆ ಕೊರೊನಾ ‘ಝೀರೋ ಪೇಶೆಂಟ್’

    ವುಹಾನ್ ಮಾರುಕಟ್ಟೆಯ ಸೀಗಡಿ ಮಾರುತ್ತಿದ್ದ ಮಹಿಳೆ ಕೊರೊನಾ ‘ಝೀರೋ ಪೇಶೆಂಟ್’

    – ಕೊರೊನಾ ಮೊದಲು ಬಂದಿದ್ದು ಈ ಮಹಿಳೆಗೆ
    – ಅಧ್ಯಯನ ವರದಿ ಆಧಾರಿಸಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟ

    ಬೀಜಿಂಗ್/ ಲಂಡನ್: ವಿಶ್ವಾದ್ಯಂತ ನಡುಕ ಹುಟ್ಟಿಸಿರುವ ಕೊರೊನಾ ವೈರಸ್ ತಗಲಿದ ಮೊದಲು ರೋಗಿ ಯಾರು ಎನ್ನುವುದು ಈಗ ಬೆಳಕಿಗೆ ಬಂದಿದೆ.

    ವುಹಾನ್ ನಲ್ಲಿ ಸೀಗಡಿ ಮಾರಾಟ ಮಾಡುತ್ತಿದ್ದ 57 ವರ್ಷದ ‘ವೀ’ ಎಂಬಾಕೆ ಮೊದಲ ಕೊರೊನಾ ಸಂತ್ರಸ್ತೆ ಎಂದು ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆ ಈ ವರದಿ ಮಾಡಿದೆ.

    ಆಸ್ಟ್ರೇಲಿಯಾದ ಸಿಡ್ನಿ ವಿಶ್ವ ವಿದ್ಯಾಲಯದ ಸ್ಕೂಲ್ ಲೈಫ್ ಆಂಡ್ ಎನ್ವಿರಾನ್ಮೆಂಟ್ ಸೈನ್ಸ್ ಪ್ರೊಫೆಸರ್ ಎಡ್ವರ್ಡ್ ಹೋಮ್ಸ್, ಚೀನಾದ ಶಾಂಘೈ ವಿಶ್ವವಿದ್ಯಾಲಯದ ಪಬ್ಲಿಕ್ ಹೆಲ್ತ್ ಕ್ಲಿನಿಕಲ್ ಕೇಂದ್ರದ ಪ್ರೊಫೆಸರ್ ಜಾಂಗ್ ಯಂಗ್‍ಜೆನ್ ಶಾಂಘೈ ಫುಡಾನ್ ವಿಶ್ವವಿದ್ಯಾಲಯದ ‘ಸೆಲ್’ ಜರ್ನಲ್ ಗೆ ಬರೆದ ಅಧ್ಯಯನ ವರದಿಯನ್ನು ಆಧಾರಿಸಿ ಪತ್ರಿಕೆ ವರದಿ ಮಾಡಿದೆ.

    ಪತ್ರಿಕೆಯ ಪ್ರಕಾರ, ಡಿಸೆಂಬರ್ 10 ರಂದು ಸಿಗಡಿಯನ್ನು ಹುನಾನ್ ಸಮುದ್ರ ಆಹಾರ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾಗ ಈಕೆಗೆ ಜ್ವರ ಬಂದಿದೆ. ಈಕೆ ಕ್ಲಿನಿಕ್‍ಗೆ ಹೋದಾಗ ಸಾಮಾನ್ಯ ಜ್ವರ ಎಂದು ಭಾವಿಸಿ ವೈದ್ಯರು ಇಂಜೆಕ್ಷನ್ ನೀಡಿದ್ದಾರೆ. ಇಂಜೆಕ್ಷನ್ ನೀಡಿದರೂ ಈಕೆಯ ಜ್ವರ ಜಾಸ್ತಿಯಾಗಿ ನಿತ್ರಾಣಗೊಂಡ ಕಾರಣ ಡಿಸೆಂಬರ್ 16 ರಂದು ವುಹಾನ್ ನಗರದಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಇದನ್ನೂ ಓದಿ: ವುಹಾನ್‍ನಲ್ಲಿ 1,500 ವಿವಿಧ ವೈರಸ್ ರಕ್ಷಣೆ – ಬಿರುಗಾಳಿ ಎಬ್ಬಿಸಿದ ಚೀನಾ ಡೈಲಿ ಟ್ವೀಟ್

    ಈ ಪ್ರದೇಶದ ಅತಿ ದೊಡ್ಡ ಆಸ್ಪತ್ರೆಯಾಗಿರುವ ವುಹಾನ್ ಮೆಡಿಕಲ್ ಆಸ್ಪತ್ರೆಗೆ ದಾಖಲಾಗಿ ಆಕೆ ರೋಗದ ಲಕ್ಷಣ ತಿಳಿಸಿದ್ದಾಳೆ. ಈಕೆ ದಾಖಲಾದ ನಂತರ ಮತ್ತಷ್ಟು ರೋಗಿಗಳು ಆಸ್ಪತ್ರೆಗೆ ಅಡ್ಮಿಟ್ ಆಗಿ ಈಕೆ ಹೇಳಿದ ರೋಗ ಲಕ್ಷಣವನ್ನೇ ತಿಳಿಸಿದ್ದಾರೆ. ಈ ಕಾರಣಕ್ಕಾಗಿ ಈಕೆಯನ್ನು ‘ಝೀರೋ ಪೇಶೆಂಟ್’ ಎಂದು ಕರೆಯಲಾಗುತ್ತದೆ. ಈಕೆಯನ್ನು ಡಿಸೆಂಬರ್, ಜನವರಿವರೆಗೆ ಕ್ವಾರೆಂಟೈನ್ ನಲ್ಲಿ ಇಡಲಾಗಿತ್ತು.

    ವುಹಾನ್ ಮುನ್ಸಿಪಲ್ ಹೆಲ್ತ್ ಕಮಿಷನ್ ವೀ ಸಹ ಈ ವಿಚಾರ ದೃಢಪಡಿಸಿದೆ. ವೀ ಮೊದಲ ರೋಗಿಯಾಗಿದ್ದರೆ ವುಹಾನ್ ಮಾರುಕಟ್ಟೆಗೆ ನೇರ ಸಂಬಂಧ ಹೊಂದಿದ್ದ 27 ಮಂದಿಗಳು ಕೊರೊನಾ ಪಾಸಿಟಿವ್ ಆಗಿದ್ದರು ಎಂದು ತಿಳಿಸಿದೆ.

    ಮೊದಲ ರೋಗಿ ವೀ ಆರೋಗ್ಯ ಜನವರಿಯಲ್ಲಿ ಸುಧಾರಣೆಯಾಗಿತ್ತು. ವೀ ಮೊದಲ ರೋಗಿಯೇ ಎಂದು ನಿಖರವಾಗಿ ಹೇಳುವುದಿಲ್ಲ. ಆದರೆ ಮೊದಲ ಬಾರಿಗೆ ಆಕೆ ಆಸ್ಪತ್ರೆಗೆ ದಾಖಲಾಗಿ ರೋಗ ಲಕ್ಷಣ ತಿಳಿಸಿದ ಪರಿಣಾಮ ಆಕೆಗೆ ‘ಪೇಶೆಂಟ್ ಝೀರೋ’ ಹೆಸರನ್ನು ನೀಡಲಾಗಿದೆ.

    ವುಹಾನ್ ನಗರದಲ್ಲಿರುವ ವೆಟ್ ಮಾರುಕಟ್ಟೆಯಿಂದ(ಜೀವಂತ ಪಕ್ಷಿ, ಪ್ರಾಣಿಗಳನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಕತ್ತರಿಸಿ ವಿತರಿಸುವ ಸ್ಥಳ) ವೈರಸ್ ಬಂದಿದೆಯೋ ಅಥವಾ ವೈರಲಾಜಿ ಲ್ಯಾಬ್‍ನಿಂದ ವೈರಸ್ ಸೋರಿಕೆಯಾಗಿದೆಯೇ ಎನ್ನುವುದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಲೇ ಇದೆ. ಈಗ ವೆಟ್ ಮಾರ್ಕೆಟ್ ನಲ್ಲಿರುವ ಪ್ರಾಣಿಗಳಿಂದ ವೈರಸ್ ಹರಡಿರಬಹುದು ಎನ್ನುವ ವಾದಕ್ಕೆ ಕೆಲ ಆಧಾರ ಸಿಕ್ಕಿದೆ.

  • ಅಧ್ಯಯನಕ್ಕೆ ತರಿಸಿದ್ದ ಮೃತ ದೇಹಕ್ಕೆ ಪೂಜೆ ಸಲ್ಲಿಸಿದ ಮೆಡಿಕಲ್ ವಿದ್ಯಾರ್ಥಿಗಳು

    ಅಧ್ಯಯನಕ್ಕೆ ತರಿಸಿದ್ದ ಮೃತ ದೇಹಕ್ಕೆ ಪೂಜೆ ಸಲ್ಲಿಸಿದ ಮೆಡಿಕಲ್ ವಿದ್ಯಾರ್ಥಿಗಳು

    ತುಮಕೂರು: ಅಧ್ಯಯನದ ಉದ್ದೇಶದಿಂದ ತರಿಸಿಕೊಳ್ಳಲಾದ ಮೃತದೇಹಕ್ಕೆ ವೈದ್ಯಕೀಯ ವಿದ್ಯಾರ್ಥಿಗಳು ಹಾರ ಹಾಕಿ ವಿಶೇಷವಾಗಿ ಬರಮಾಡಿಕೊಂಡ ಅಪರೂಪದ ಘಟನೆ ತುಮಕೂರಿನ ಶ್ರೀದೇವಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ.

    ಬೆಳಗಾವಿ ಹಾರೋಗೇರಿ ಪಟ್ಟಣದಿಂದ ತರಿಸಿಕೊಳ್ಳಲಾದ ವ್ಯಕ್ತಿಯೊಬ್ಬರ ಮೃತದೇಹಕ್ಕೆ ಶ್ರೀದೇವಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹೂವಿನ ಹಾರ ಹಾಕಿ ಪೂಜೆ ಸಲ್ಲಿಸಿದರು. ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣದ ನಿವಾಸಿ ಹಣಮಂತ ಸಿದ್ದಪ್ಪ ಬೀರಾದಾರ ಪಾಟೀಲ (76) ಎಂಬುವರು ಇತ್ತೀಚೆಗೆ ಅನಾರೋಗ್ಯದಿಂದ ನಿಧನರಾಗಿದ್ದರು.

    ಶ್ರೀದೇವಿ ಮೆಡಿಕಲ್ ಕಾಲೇಜು ಆಡಳಿತ ಮಂಡಳಿಯ ಮನವಿಯಂತೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಎಸ್.ಜಿ.ವಿ. ಆಯುರ್ವೇದಿಕ್ ಮೆಡಿಕಲ್ ಕಾಲೇಜ್, ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಹಾಗೂ ಹಾರೂಗೇರಿಯ ಶರಣ ವಿಚಾರ ವಾಹಿನಿಯ ಮುಖಾಂತರ ಪಾಟೀಲರ ಮೃತದೇಹವನ್ನು ತುಮಕೂರಿಗೆ ತರಿಸಿಕೊಳ್ಳಲಾಯಿತು.

    ಈ ವೇಳೆ ವಿದ್ಯಾರ್ಥಿಗಳು ಪೂಜೆ ಸಲ್ಲಿಸಿ ಬಳಿಕ ಶರೀರ ರಚನಾ ವಿಭಾಗಕ್ಕೆ ಗೌರವಪೂರ್ವಕವಾಗಿ ಸಾಗಿಸಲಾಯ್ತು. ಮೃತಪಟ್ಟ ನಂತರ ತನ್ನ ದೇಹವನ್ನು ವೈದ್ಯಕೀಯ ಅಧ್ಯಯನಕ್ಕಾಗಿ ದಾನ ಮಾಡಬೇಕೆಂಬ ಇಂಗಿತವನ್ನು ಹಣಮಂತ ಸಿದ್ದಪ್ಪ ಬಿರಾದಾರ್ ಪಾಟೀಲ್ ಅವರು ಬದುಕಿದ್ದಾಗಲೇ ವ್ಯಕ್ತಪಡಿಸಿದ್ದರು.

  • ಹುಟ್ಟಿದ ಮೂರೇ ದಿನಕ್ಕೆ ಹಾಲು ಕೊಡುತ್ತಿರುವ ಮೇಕೆ ಮರಿ

    ಹುಟ್ಟಿದ ಮೂರೇ ದಿನಕ್ಕೆ ಹಾಲು ಕೊಡುತ್ತಿರುವ ಮೇಕೆ ಮರಿ

    ಬಾಗಲಕೋಟೆ: ಹುಟ್ಟಿದ ಮೂರೇ ದಿನಕ್ಕೆ ಮೇಕೆ ಮರಿಯೊಂದು ಹಾಲು ಕೊಡುವ ಮೂಲಕ ಪಶುವೈದ್ಯಕೀಯ ಲೋಕದಲ್ಲಿ ಅಚ್ಚರಿ ಮೂಡಿಸಿದೆ.

    ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದ ಹನಮಂತ ದಾಸನ್ನವರ ಎಂಬವರ ಮನೆಯಲ್ಲಿ ಇರುವ ಮೇಕೆ ಮರಿ ನಿತ್ಯ ಒಂದು ಕಪ್ ನಷ್ಟು ಹಾಲು ಕೊಡುತ್ತಿದೆ. ಮೇ 10 ರಂದು ಜನಿಸಿರುವ ಮೇಕೆ ಮರಿ ಹುಟ್ಟಿದ ಮೂರನೇ ದಿನದಲ್ಲಿ ಹಾಲು ಕೊಡುತ್ತಿದೆ.

    ಇಂದಿಗೂ ಒಂದು ಕಪ್ ಹಾಲು ಕೊಡುತ್ತಿದೆ. ಈ ವಿಷಯ ತಿಳಿದು ಗ್ರಾಮಕ್ಕೆ ಭೇಟಿ ನೀಡಿರುವ ಇಲಾಖೆ ಪ್ರಭಾರ ಡಿಡಿ ಡಾ. ಆರ್.ಎಸ್ ಪದರಾ ನೇತೃತ್ವದಲ್ಲಿ ಅಧಿಕಾರಿಗಳು ಮೇಕೆ ಮರಿ ಆರೋಗ್ಯ ತಪಾಸಣೆ ಮಾಡಿದ್ದಾರೆ. ಅಲ್ಲದೆ ಹಾಲು ಕೊಡುವುದನ್ನು ಕಂಡು ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ.

    ಸದ್ಯ ಮೇಕೆ ಮರಿಯ 10 ಎಂಎಂ ಹಾಲು ಸಂಗ್ರಹಿಸಿರುವ ಅಧಿಕಾರಿಗಳು ಹುಟ್ಟಿದ ಮೂರೇ ದಿನಕ್ಕೆ ಹಾಲು ಕೊಡುವ ಬಗ್ಗೆ ಅಧ್ಯಯನ ನಡೆಸಲು ಬೆಂಗಳೂರು ಪ್ರಯೋಗಾಲಯಕ್ಕೆ ಮೇಕೆ ಮರಿ ಹಾಲನ್ನು ಕಳುಹಿಸಿದ್ದಾರೆ.

  • ಬರ ಅಧ್ಯಯನಕ್ಕೆ ಬಂದಿದ್ದ ಕೇಂದ್ರದ ತಂಡಕ್ಕೆ, ಸರ್ಕಾರಿ ಶಾಲೆಯಲ್ಲಿ ಭರ್ಜರಿ ಬಾಡೂಟ ಹಾಕಿಸಿದ ಜಿಲ್ಲಾಧಿಕಾರಿ

    ಬರ ಅಧ್ಯಯನಕ್ಕೆ ಬಂದಿದ್ದ ಕೇಂದ್ರದ ತಂಡಕ್ಕೆ, ಸರ್ಕಾರಿ ಶಾಲೆಯಲ್ಲಿ ಭರ್ಜರಿ ಬಾಡೂಟ ಹಾಕಿಸಿದ ಜಿಲ್ಲಾಧಿಕಾರಿ

    ದಾವಣಗೆರೆ: ಜಿಲ್ಲೆಯ ಹರಪ್ಪನಹಳ್ಳಿಯಲ್ಲಿ ಬರ ಅಧ್ಯಯನಕ್ಕೆಂದು ಕೇಂದ್ರದಿಂದ ಬಂದಿದ್ದ ತಂಡವನ್ನು ಮೆಚ್ಚಿಸಲು ಜಿಲ್ಲಾಧಿಕಾರಿಗಳು ಸರ್ಕಾರಿ ಶಾಲೆಯಲ್ಲಿ ಭರ್ಜರಿ ಬಾಡೂಟ ಹಾಕಿಸಿದ್ದಾರೆ.

    ಹೌದು, ಬರಗಾಲ ಪೀಡಿತ ತಾಲೂಕು ಎಂದೇ ಹೆಸರು ಪಡೆದಿರುವ ಹರಪ್ಪನಹಳ್ಳಿ ಪಟ್ಟಣಕ್ಕೆ ಭಾನುವಾರ ಕೇಂದ್ರದ ಬರ ಅಧ್ಯಯನ ತಂಡ ಭೇಟಿ ನೀಡಿತ್ತು. ಈ ವೇಳೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಧಿಕಾರಿಗಳನ್ನು ಮೆಚ್ಚಿಸಲು ಸರ್ಕಾರಿ ಶಾಲೆಯಲ್ಲೇ ಭರ್ಜರಿ ಬಾಡೂಟವನ್ನು ಹಾಕಿಸಿದ್ದಾರೆ.

    ಜಿಲ್ಲಾಧಿಕಾರಿಗಳ ಸೂಚನೆಯಂತೆ ಹರಪ್ಪನಹಳ್ಳಿ ಪಟ್ಟಣದ ನಜೀರ್ ನಗರದ ಮೋರಾರ್ಜಿ ವಸತಿಯುತ ಶಾಲೆಯಲ್ಲಿ ಕೇಂದ್ರ ಅಧಿಕಾರಿಗಳಿಗೆಂದೇ ಬಾಡೂಟ ಸಿದ್ದಪಡಿಸಿದ್ದರು. ಇದರಲ್ಲಿ ಚಿಕನ್ ಮಸಾಲ, ಮಟನ್ ಚಾಪ್ಸ್, ಎಗ್ ಮಸಾಲ, ರೋಟಿ ಹಾಗೂ ರಾಗಿಮುದ್ದೆಯನ್ನು ಮಾಡಿಸಿದ್ದರು.

    ಜಿಲ್ಲಾಧಿಕಾರಿಗಳ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ರೈತರು, ತಾಲೂಕಿನ ಬರ ಅಧ್ಯಯನಕ್ಕಿಂತ ಕೇಂದ್ರದ ತಂಡಕ್ಕೆ ಬಾಡೂಟವೇ ಪ್ರಮುಖವಾಗಿತ್ತು. ಕೇವಲ ಎರಡು ಮೂರು ಕಡೆ ಪರಿಶೀಲನೆ ನಡೆಸಿ, ಹೋದ್ಯಾ ಪುಟ್ಟ, ಬಂದ್ಯಾ ಪುಟ್ಟ ಎಂಬಂತೆ ಅಧ್ಯಯನ ಮಾಡಿದ್ದಾರೆ. ಕಳೆದ ಬಾರಿಯೂ ಇದೇ ರೀತಿ ಅಧ್ಯಯನ ಮಾಡಿಕೊಂಡು ಹೋಗಿದ್ದರು. ಆದರೆ ರೈತರಿಗೆ ಪರಿಹಾರ ನೀಡುವಲ್ಲಿ ವಿಫಲವಾಗಿದ್ದರು. ಈಗ ಪುನಃ ಅದೇ ರೀತಿ ಈ ಬಾರಿಯೂ ಮಾಡಿಕೊಂಡು ಹೋಗುತ್ತಿದ್ದಾರೆಂದು ಅಸಮಾಧಾನ ಹೊರಹಾಕಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಒಂದೂವರೆ ತಿಂಗಳ ಹಿಂದೆಯೇ ಕೊಡಗಿನಲ್ಲಿ ಭೂಕಂಪ: ವಿಜ್ಞಾನಿಗಳು ಹೇಳೋದು ಏನು? ವಿಡಿಯೋ

    ಒಂದೂವರೆ ತಿಂಗಳ ಹಿಂದೆಯೇ ಕೊಡಗಿನಲ್ಲಿ ಭೂಕಂಪ: ವಿಜ್ಞಾನಿಗಳು ಹೇಳೋದು ಏನು? ವಿಡಿಯೋ

    ಬೆಂಗಳೂರು: ಕೊಡಗು ಜಿಲ್ಲೆಯಲ್ಲಿ ನಡೆದ ಭೀಕರ ಜಲ ಪ್ರಳಯವಾಗುವ ಮುನ್ನ ಒಂದೂವರೆ ತಿಂಗಳ ಮೊದಲು ಭೂಕಂಪವಾಗಿತ್ತು ಎನ್ನುವ ಮಾಹಿತಿ ಈಗ ಲಭ್ಯವಾಗಿದೆ.

    ಜುಲೈ 9ರ ಮಧ್ಯಾಹ್ನ 12.52ಕ್ಕೆ ಕೊಡಗು ಜಿಲ್ಲೆಯ 10 ಕಿ.ಮೀ ಆಳದಲ್ಲಿ ಭೂಕಂಪನವಾಗಿದೆ. ರಿಕ್ಟರ್ ಮಾಪನದಲ್ಲಿ 3.4 ತೀವ್ರತೆ ದಾಖಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿತ್ತು. ಈ ಸಂಬಂಧ ಅದೇ ದಿನ ಸಂಜೆ 4.58ಕ್ಕೆ ಭೂಕಂಪ ನಡೆದ ಸ್ಥಳದ ಮಾಹಿತಿಯನ್ನು ಟ್ವೀಟ್ ಮಾಡಿ ತಿಳಿಸಿತ್ತು.

    ಆದರೆ ಹವಾಮಾನ ಇಲಾಖೆಯ ವರದಿಯನ್ನು ಅಲ್ಲಗಳೆದಿರುವ ಭೂಗರ್ಭ ಶಾಸ್ತ್ರಜ್ಞರಾದ ಪ್ರಕಾಶ್‍ರವರು ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿ, ಇದು ಭೂಕಂಪನದಿಂದಾಗಿ ಸಂಭವಿಸಿದ ಘಟನೆಯಲ್ಲ, ಜಲಪ್ರಳಯದಿಂದಾಗಿ ಸಂಭವಿಸಿದ ಅವಘಡವಾಗಿದೆ. ಭೂಕಂಪನದ ಬಗ್ಗೆ ಹವಾಮಾನ ಇಲಾಖೆಗೆ ಹೇಗೆ ಮಾಹಿತಿಗಳು ಲಭ್ಯವಾಗಿವೆ ಎಂದು ತಿಳಿದುಬಂದಿಲ್ಲ. ಒಂದು ವೇಳೆ ಭೂಕಂಪನವಾಗಿದ್ದರೆ, ನಮ್ಮ ಹಾರಂಗಿ, ಗೌರಿಬಿದನೂರು ಹಾಗೂ ಹೈದರಬಾದ್ ನಲ್ಲಿರುವ ಭೂಕಂಪ ಮಾಪನ ಕೇಂದ್ರದಲ್ಲಿ ದಾಖಲಾಗುತಿತ್ತು. ಅಲ್ಲದೇ ಅರಬ್ ಹಾಗೂ ಅಮೆರಿಕ ದೇಶಗಳಲ್ಲಿ ವಿಶ್ವದ ಯಾವುದೇ ಭಾಗಗಳಲ್ಲಿ ಭೂಕಂಪನ ಉಂಟಾದರೆ, ಪತ್ತೆಹಚ್ಚುವ ಕೇಂದ್ರಗಳಲ್ಲಿಯೂ ಈ ಬಗ್ಗೆ ವರದಿಯಾಗಿಲ್ಲ. ಒಂದು ವೇಳೆ ವರದಿಯಾಗಿದ್ದರೆ ಕೂಡಲೇ ಅಮೆರಿಕ ಭೂಗರ್ಭ ಇಲಾಖೆಯು ನಮಗೆ ಇ-ಮೇಲ್ ಅಥವಾ ಮೆಸೇಜ್ ಮೂಲಕ 15 ನಿಮಿಷಗಳೊಳಗೆ ಮಾಹಿತಿಯನ್ನು ತಲುಪಿಸುತ್ತವೆ ಎಂದು ತಿಳಿಸಿದರು.

    ಈ ಮೊದಲು 1924ರಲ್ಲಿ ಕೂರ್ಗ್ ಹಾಗೂ ಕೇರಳದಲ್ಲಿ ಈ ರೀತಿ ಭೂ-ಕುಸಿತ ಉಂಟಾಗಿತ್ತು, ಇದಕ್ಕೆ ಕಾರಣವನ್ನು ಹುಡುಕುತ್ತಾ ಹೊರಟಾಗ ಹವಾಯ್ ದ್ವೀಪದಲ್ಲಿ ಪ್ರಬಲವಾದ ಜ್ವಾಲಾಮುಖಿ ಉಂಟಾಗಿದ್ದರಿಂದ ಸುಮಾರು 28 ದಿನಗಳು ಲಾವಾರಸ ಹೊರ ಬಂದಿತ್ತು. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಇಲ್ಲೂ ಭೂ-ಕುಸಿತವಾಗಿತ್ತು. ಆದರೆ ಅಂದು ಜನವಸತಿ ಕಡಿಮೆಯಿದ್ದರಿಂದ ಯಾವುದೇ ತೊಂದರೆಯಾಗಿರಲಿಲ್ಲವೆಂದು ಹೇಳಿದರು.

    ಭೂ-ಕುಸಿತಗಳ ಬಗ್ಗೆ ಅಧ್ಯಯನ ನಡೆಸಲು, ಭಾರತೀಯ ಭೂ-ವೈಜ್ಞಾನಿಕ ಸಮೀಕ್ಷೆ ಸಂಸ್ಥೆಯಲ್ಲಿ ಪ್ರತ್ಯೇಕವಾದ ವಿಭಾಗವನ್ನು ಹೊಂದಿದೆ. ಇಲ್ಲಿ ಪರಿಣಿತ ಅಧಿಕಾರಿಗಳು ಭೂ-ಕುಸಿತಗಳ ಬಗ್ಗೆ ನಿರಂತರ ಅಧ್ಯಯನ ಮಾಡುತ್ತಿರುತ್ತಾರೆ. ಬುಧವಾರ ನಾವು ಸಂಪಾಜೆ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ. ಭೂ-ಕುಸಿತದ ಬಗ್ಗೆಯೂ ಸಹ ಅಧ್ಯಯನ ನಡೆಯುತ್ತಿದ್ದು, ಎರಡು ತಿಂಗಳ ಒಳಗಡೆ ನಿಖರ ವರದಿಯನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು.

    ಈ ವೇಳೆ ಸಾರ್ವಜನಿಕರು ಗುಡ್ಡಗಾಡು ಪ್ರದೇಶಗಳಲ್ಲಿ ಮನೆ ಕಟ್ಟಿಕೊಳ್ಳುತ್ತಿರುವುದು ದಿನೇ ದಿನೇ ಹೆಚ್ಚುತ್ತಿದೆ. ಕೊಡಗಿನಲ್ಲಿ 50, 60 ಡಿಗ್ರಿ ಇಳಿಜಾರು ಪ್ರದೇಶಗಳಲ್ಲಿರುವ ಗುಡ್ಡಗಾಡು ಪ್ರದೇಶಗಳು ಒಂದಲ್ಲ ಒಂದು ದಿನ ಕುಸಿಯುವುದು ಖಂಡಿತ. ಹೀಗಾಗಿ ಜನರು ಸಮತಟ್ಟವಾದ ಭೂ ಪ್ರದೇಶಗಳಲ್ಲಿ ವಾಸಸ್ಥಳಗಳನ್ನು ಕಟ್ಟಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv