Tag: ಅಧ್ಯಕ್ಷ

  • ಮೋದಿ ಸಂಪುಟದಲ್ಲಿ ನಡ್ಡಾಗೆ ಸ್ಥಾನ – ಯಾರಾಗ್ತಾರೆ ಬಿಜೆಪಿ ಮುಂದಿನ ಅಧ್ಯಕ್ಷ?

    ಮೋದಿ ಸಂಪುಟದಲ್ಲಿ ನಡ್ಡಾಗೆ ಸ್ಥಾನ – ಯಾರಾಗ್ತಾರೆ ಬಿಜೆಪಿ ಮುಂದಿನ ಅಧ್ಯಕ್ಷ?

    ನವದೆಹಲಿ: ಜೆಪಿ ನಡ್ಡಾ (JP Nadda) ಅವರು ಮೋದಿ ಸಂಪುಟದಲ್ಲಿ (Modi Cabinet) ಸ್ಥಾನ ಪಡೆದ ಹಿನ್ನೆಲೆಯಲ್ಲಿ ಮುಂದಿನ ಬಿಜೆಪಿ (BJP) ರಾಷ್ಟ್ರೀಯ ಅಧ್ಯಕ್ಷ ಯಾರಾಗುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.

    ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಪ್ರಕಾಶ್‌ ನಡ್ಡಾ ಅವರು ಭಾನುವಾರ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಶಾಸಕರಾಗಿದ್ದ ಇವರು ಸಿಎಂ ಪ್ರೇಮ್‌ ಕುಮಾರ್‌ ಧುಮಲ್‌ ಸರ್ಕಾರದಲ್ಲಿ ಅರಣ್ಯ ಮತ್ತು ವಿಜ್ಞಾನ, ತಂತ್ರಜ್ಞಾನ ಖಾತೆಯ ಸಚಿವರಾಗಿದ್ದರು.

    ಮೋದಿ ಸರ್ಕಾರ ಬಂದ ನಂತರ 2014-2019ರ ಅವಧಿಯಲ್ಲಿ ನಡ್ಡಾ ಅವರಿಗೆ ಕೇಂದ್ರ ಆರೋಗ್ಯ ಖಾತೆಯನ್ನು ನೀಡಲಾಗಿತ್ತು. ಅಮಿತ್‌ ಶಾ ಮೋದಿ ಸಂಪುಟದ ಸೇರಿದ ಬಳಿಕ 2020ರಲ್ಲಿ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ (National President) ಮಾಡಲಾಗಿತ್ತು. ನಡ್ಡಾ ಅವಧಿ 2022ರಲ್ಲೇ ಅಂತ್ಯವಾಗಿದ್ದರೂ ಲೋಕಸಭಾ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಅವಧಿಯನ್ನು 2024ರವರೆಗೆ ವಿಸ್ತರಿಸಲಾಗಿತ್ತು. ಇದನ್ನೂ ಓದಿ: ಬರೋಬ್ಬರಿ 25 ವರ್ಷದ ಬಳಿಕ ಜೆಡಿಎಸ್‌ಗೆ ಕೇಂದ್ರದಲ್ಲಿ ಮಂತ್ರಿ ಸ್ಥಾನ!

    ಬಿಜೆಪಿ (BJP) ನಿಯಮದ ಪ್ರಕಾರ ಪಕ್ಷದ ಅಧ್ಯಕ್ಷ ಸ್ಥಾನ ಮತ್ತು ಮಂತ್ರಿಗಿರಿ ಎರಡನ್ನು ಒಬ್ಬರೇ ನಿರ್ವಹಿಸುವಂತಿಲ್ಲ. ಹೀಗಾಗಿ ಈಗ ನಡ್ಡಾ ಮರಳಿ ಮೋದಿ ಕ್ಯಾಬಿನೆಟ್‌ ಸೇರಿದ ಹಿನ್ನೆಲೆಯಲ್ಲಿ ಮುಂದಿನ ಬಿಜೆಪಿ ಅಧ್ಯಕ್ಷ ಯಾರು ಎನ್ನುವ ಕುತೂಹಲ ಹೆಚ್ಚಾಗಿದೆ.

    ಅಧ್ಯಕ್ಷ ಸ್ಥಾನಕ್ಕೆ ಮಧ್ಯಪ್ರದೇಶ ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ ಹೆಸರು ಕೇಳಿ ಬಂದಿತ್ತಾದರೂ ಅವರು ಮೋದಿ ಕ್ಯಾಬಿನೆಟ್‌ನಲ್ಲಿದ್ದಾರೆ.  ಇದನ್ನೂ ಓದಿ: ಆಂಧ್ರದಲ್ಲಿ NDAಗೆ ಭದ್ರಬುನಾದಿ ಹಾಕಿದ ಪವನ್‌ ಕಲ್ಯಾಣ್‌ – ಇವರು ‘ತೂಫಾನ್‌’ ಎಂದ ಮೋದಿ

    ಚುನಾವಣಾ ಪ್ರಚಾರದ ಸಮಯದಲ್ಲಿ ಬಿಜೆಪಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಬೆಂಬಲ ಅಗತ್ಯವಿಲ್ಲ ಎಂದು ನಡ್ಡಾ ಹೇಳಿದ್ದು ಪಕ್ಷದ ಒಳಗಡೆಯೇ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿ ಮುಂದಿನ ಅಧ್ಯಕ್ಷ ಆರ್‌ಎಸ್‌ಎಸ್‌ನಿಂದ ಆಯ್ಕೆ ಆದವರು ಅಥವಾ ಆರ್‌ಎಸ್‌ಎಸ್‌ ಮತ್ತು ಬಿಜೆಪಿ ಜೊತೆ ಉತ್ತಮ ಸಂಬಂಧ ಹೊಂದಿರುವ ವ್ಯಕ್ತಿ ಆಗಬಹುದು ಎಂದು ಹೇಳಲಾಗುತ್ತಿದೆ.

  • ಚಲನಚಿತ್ರ ಅಕಾಡೆಮಿಗೆ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾ ಅಧ್ಯಕ್ಷರಾಗಿ ನೇಮಕ

    ಚಲನಚಿತ್ರ ಅಕಾಡೆಮಿಗೆ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾ ಅಧ್ಯಕ್ಷರಾಗಿ ನೇಮಕ

    ರ್ನಾಟಕ ಚಲನಚಿತ್ರ ಅಕಾಡೆಮಿಗೆ (Chalanachitra Academy) ಅಧ್ಯಕ್ಷರಾಗಿ (President) ಹಾಸ್ಯ ನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾರನ್ನು (Sadhu Kokila) ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ. ನಿಗಮ ಮಂಡಳಿಗೆ 44 ಜನರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇಮಕ ಮಾಡಿದ್ದು, ಅದರಲ್ಲಿ ಚಲನಚಿತ್ರ ಅಕಾಡೆಮಿಯು ಸೇರಿದೆ.

    ಹಲವು ದಿನಗಳಿಂದ ಅಧ್ಯಕ್ಷ ಗಾದೆಗೆ ಹಲವಾರು ಹೆಸರುಗಳು ಕೇಳಿ ಬಂದಿದ್ದವು, ಅದರಲ್ಲಿ ಸಾಧು ಕೋಕಿಲಾ ಹೆಸರೂ ಇತ್ತು. ಸಿದ್ದರಾಮಯ್ಯನವರಿಗೆ ಆಪ್ತರಾಗಿರುವ ಮತ್ತು ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಸಾಧು ಕೋಕಿಲಾ ಅವರನ್ನೇ ಅಧ್ಯಕ್ಷರನ್ನಾಗಿ ಮಾಡುತ್ತಾರೆ ಎನ್ನುವ ಮಾತೂ ಕೇಳಿ ಬಂದಿತ್ತು. ಅದೇ ನಿಜವಾಗಿದೆ.

    ಹಾಸ್ಯ ನಟರಾಗಿ, ಸಂಗೀತ ನಿರ್ದೇಶಕರಾಗಿ ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿರುವ ಸಾಧು ಕೋಕಿಲಾ, ನಿರ್ಮಾಪಕರಾಗಿ, ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರೆ. ಕಿರುತೆರೆ, ಹಿರಿತೆರೆಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಆಯ್ಕೆ ಸೂಕ್ತ ಎನ್ನುವುದು ಹಲವರ ಅಭಿಪ್ರಾಯ. ಇಂದು ಅಕಾಡೆಮಿಯ ವತಿಯಿಂದ ಚಿತ್ರೋತ್ಸವ ನಡೆಯಲಿದೆ. ಇಂದು ಅವರು ಅಧಿಕಾರ ವಹಿಸುತ್ತಾರಾ ಕಾದು ನೋಡಬೇಕು.

  • ಕರ್ನಾಟಕ ಫಿಲ್ಮ್ ಚೇಂಬರ್ ಚುನಾವಣೆ : ಮತದಾನ ಪ್ರಾರಂಭ

    ಕರ್ನಾಟಕ ಫಿಲ್ಮ್ ಚೇಂಬರ್ ಚುನಾವಣೆ : ಮತದಾನ ಪ್ರಾರಂಭ

    ರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Film Chamber) ಚುನಾವಣೆ (Election) ಪ್ರಕ್ರಿಯೆ ಶುರುವಾಗಿದೆ. ಬೆಳಗ್ಗೆಯಿಂದ 65ನೇ ವಾರ್ಷಿಕ ಸಭೆ ಆರಂಭವಾಯಿತು. ಹಲವಾರು ಚರ್ಚೆಗಳನ್ನು ಈ ಸಂದರ್ಭದಲ್ಲಿ ಮಾಡಲಾಯಿತು. ನಂತರ ಮಧ್ಯಾಹ್ನ 2 ಗಂಟೆ ಮತದಾನ ಪ್ರಕ್ರಿಯೆ ನಡೆದಿದ್ದು ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ. ಇಂದೇ ರಾತ್ರಿ ಫಲಿತಾಂಶ ಹೊರ ಬೀಳಲಿದೆ.

    ಈ ಬಾರಿ ಅಧ್ಯಕ್ಷ (President) ಸ್ಥಾನಕ್ಕೆ ನಾಲ್ವರ ಮಧ್ಯ ತೀವ್ರ ಸ್ಪರ್ಧೆ ನಡೆದಿದ್ದು ಶಿಲ್ಪಾ ಶ್ರೀನಿವಾಸ್, ಮಾರ್ಸ್ ಸುರೇಶ್, ಎಂ.ಎನ್. ಸುರೇಶ್ ಮತ್ತು ಎ.ಗಣೇಶ್ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ. ನಾಲ್ಕು ಬಣಗಳ ನಡುವೆ ತುರುಸಿನ ಮತದಾನ ನಡೆಯುತ್ತಿದೆ. ಇಂದು ರಾತ್ರಿ ವಿಜಯ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂದು ಕಾದು ನೋಡಬೇಕು.

     

    ಅಧ್ಯಕ್ಷ, ಉಪಾಧ್ಯಕ್ಷ, ಕಾರ್ಯದರ್ಶಿ ಸೇರಿದಂತೆ ಹಲವು ಸ್ಥಾನಗಳಿಗೂ ಇಂದು ಚುನಾವಣೆ ನಡೆದಿದೆ. ಕರ್ನಾಟಕ ಚಲಚಿತ್ರ ವಾಣಿಜ್ಯ ಮಂಡಳಿಯ ಸದಸ್ಯರು ಇಂದು ಇವರುಗಳನ್ನು ಮತದಾನ ಮಾಡುವ ಮೂಲಕ ಆಯ್ಕೆ ಮಾಡಲಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಂಗಾಪುರದ ಅಧ್ಯಕ್ಷರಾಗಿ ಭಾರತೀಯ ಮೂಲದ ಥರ್ಮನ್ ಷಣ್ಮುಗರತ್ನಂ ಪ್ರಮಾಣ ವಚನ

    ಸಿಂಗಾಪುರದ ಅಧ್ಯಕ್ಷರಾಗಿ ಭಾರತೀಯ ಮೂಲದ ಥರ್ಮನ್ ಷಣ್ಮುಗರತ್ನಂ ಪ್ರಮಾಣ ವಚನ

    ಸಿಂಗಾಪುರ: ಇಲ್ಲಿನ ನೂತನ ಅಧ್ಯಕ್ಷರಾಗಿ ಭಾರತೀಯ ಮೂಲದ 66 ವರ್ಷದ ಥರ್ಮನ್ ಷಣ್ಮುಗರತ್ನಂ (Tharman Shanmugaratnam) ಅವರು ಇಂದು (ಗುರುವಾರ) ಪ್ರಮಾಣವಚನ ಸ್ವೀಕರಿಸಿದರು.

    ಸಿಂಗಾಪುರದ ಅರ್ಥಶಾಸ್ತ್ರಜ್ಞರಾಗಿರುವ ಇವರು ಸಿಂಗಾಪುರದ (Singapore President) 9ನೇ ಅಧ್ಯಕ್ಷರಾಗಿ ಆಯ್ಕೆಯಾದರು. ಸಿಂಗಾಪುರದ ಅಧ್ಯಕ್ಷರ ಅಧಿಕೃತ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಮೂಲದ ಮುಖ್ಯ ನ್ಯಾಯಮೂರ್ತಿ ಸುಂದರೇಶ್ ಮೆನನ್ ಅವರು ಥರ್ಮನ್‌ ಅವರಿಗೆ ಪ್ರಮಾಣ ವಚನ ಬೋಧಿಸಿದರು.

    ಥರ್ಮನ್ ಅವರು ಆರು ವರ್ಷಗಳ ಅಧ್ಯಕ್ಷರಾಗಿ ಸೇವೆ ಸಲ್ಲಿಸಲಿದ್ದಾರೆ. ಸಮಾರಂಭದಲ್ಲಿ ಪ್ರಧಾನಿ ಲೀ ಸೈನ್ ಲೂಂಗ್, ಸಂಪುಟ ಸದಸ್ಯರು, ಸಂಸದರು, ಉನ್ನತ ಅಧಿಕಾರಿಗಳು ಮತ್ತು ರಾಜತಾಂತ್ರಿಕ ಸದಸ್ಯರು ಉಪಸ್ಥಿತರಿದ್ದರು. ಇದನ್ನೂ ಓದಿ: INDIA ಒಕ್ಕೂಟವು ಸನಾತನ ಧರ್ಮವನ್ನು ನಾಶ ಮಾಡಲು ಬಯಸಿದೆ: ಮೋದಿ ವಾಗ್ದಾಳಿ

    ಪ್ರಧಾನಿ ನರೇಂದ್ರ ಮೋದಿ ಅವರು ಥರ್ಮನ್ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಅಲ್ಲದೆ ಭಾರತ ಹಾಗೂ ಸಿಂಗಾಪುರ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಬಲಪಡಿಸಲು ಷಣ್ಮುಗರತ್ನಂ ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

    ಕಳೆದ ಶುಕ್ರವಾರ ನಡೆದ ಸಿಂಗಾಪುರ ಅಧ್ಯಕ್ಷೀಯ ಚುನಾವಣೆಯಲ್ಲಿ ಷಣ್ಮುಗರತ್ನಂ ಅವರು ಚೀನಾ ಮೂಲದ ಇಬ್ಬರು ಪ್ರತಿಸ್ಪರ್ಧಿಗಳನ್ನು ಸೋಲಿಸಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಿಂಗಾಪುರ ಅಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲದ ಷಣ್ಮುಗರತ್ನಂಗೆ ಮೋದಿ ಅಭಿನಂದನೆ – ಯಾರಿವರು?

    ಸಿಂಗಾಪುರ ಅಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲದ ಷಣ್ಮುಗರತ್ನಂಗೆ ಮೋದಿ ಅಭಿನಂದನೆ – ಯಾರಿವರು?

    ಸಿಂಗಾಪುರ: ಸಿಂಗಾಪುರದ (Singapore) ನೂತನ ಅಧ್ಯಕ್ಷರಾಗಿ (President) ಆಯ್ಕೆಯಾಗಿರುವ ಭಾರತೀಯ ಮೂಲದ ಥರ್ಮನ್ ಷಣ್ಮುಗರತ್ನಂ (Tharman Shanmugaratnam) ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.

    ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಮೋದಿ, ಅಧ್ಯಕ್ಷರಾಗಿ ಆಯ್ಕೆಯಾದ ನಿಮಗೆ ಅಭಿನಂದನೆಗಳು. ಭಾರತ ಹಾಗೂ ಸಿಂಗಾಪುರ ನಡುವಿನ ಕಾರ್ಯತಂತ್ರ ಪಾಲುದಾರಿಕೆಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ನಿಮ್ಮೊಂದಿಗೆ ಕಾರ್ಯನಿರ್ವಹಿಸಲು ಬಯಸುತ್ತೇವೆ ಎಂದಿದ್ದಾರೆ.

    ಶುಕ್ರವಾರ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಥರ್ಮನ್ ಷಣ್ಮುಗರತ್ನಂ ಭರ್ಜರಿ ಗೆಲುವು ಸಾಧಿಸಿ ಸಿಂಗಾಪುರದ 9ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

    ಷಣ್ಮುಗರತ್ನಂ ಯಾರು?
    ತಮಿಳುನಾಡು ಮೂಲದ ತಂದೆ ಹಾಗೂ ಚೀನಾ ಮೂಲದ ತಾಯಿಗೆ ಥರ್ಮನ್ ಷಣ್ಮುಗರತ್ನಂ 1957ರ ಫೆಬ್ರವರಿ 25ರಂದು ಸಿಂಗಾಪುರದಲ್ಲಿ ಜನಿಸಿದರು. ಅವರ ತಂದೆ ಕನಕರತ್ನಂ ಷಣ್ಮುಗರತ್ನಂ ಅವರು ಹೆಸರಾಂತ ರೋಗಶಾಸ್ತ್ರಜ್ಞ ಹಾಗೂ ಕ್ಯಾನ್ಸರ್ ಸಂಶೋಧಕರು. ತಾಯಿ ಗೃಹಿಣಿಯಾಗಿದ್ದರು.

    ಥರ್ಮನ್ ಅವರು ಆಂಗ್ಲೋ-ಚೈನೀಸ್ ಶಾಲೆಯಲ್ಲಿ ವ್ಯಾಸಂಗ ಮಾಡಿ, ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಪಡೆದಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ವುಲ್ಫ್‌ಸನ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಮಾಸ್ಟರ್ ಆಫ್ ಫಿಲಾಸಫಿ ಪದವಿಯನ್ನು ಪೂರ್ಣಗೊಳಿಸಿದರು. ಇದನ್ನೂ ಓದಿ: ಹೆಚ್‌ಡಿಕೆ ಆಸ್ಪತ್ರೆಯಿಂದ ಡಿಸ್ಚಾರ್ಜ್‌ – ಅಭಿಮಾನಿಯಿಂದ ಕುಂಕುಮ ಅಕ್ಷತೆ ಸ್ವೀಕರಿಸಿದ ಮಾಜಿ ಸಿಎಂ

    ನಂತರ ಅವರು ಹಾರ್ವರ್ಡ್ ವಿಶ್ವವಿದ್ಯಾನಿಲಯದ ಹಾರ್ವರ್ಡ್ ಕೆನಡಿ ಶಾಲೆಯಲ್ಲಿ ಮಾಸ್ಟರ್ ಇನ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಪದವಿಯನ್ನು ಪೂರ್ಣಗೊಳಿಸಿದರು. ಶಾಲಾ ಜೀವನದಲ್ಲಿ ಅವರು ಸಕ್ರಿಯ ಕ್ರೀಡಾಪಟುವಾಗಿದ್ದರು.

    ವೃತ್ತಿಯಲ್ಲಿ ಅರ್ಥಶಾಸ್ತ್ರಜ್ಞರಾಗಿದ್ದು, ಮುಖ್ಯವಾಗಿ ಆರ್ಥಿಕ ಮತ್ತು ಸಾಮಾಜಿಕ ನೀತಿಗಳಿಗೆ ಸಂಬಂಧಿಸಿದ ಸಾರ್ವಜನಿಕ ಸೇವಾ ಪಾತ್ರಗಳಲ್ಲಿ ತಮ್ಮ ವೃತ್ತಿ ಜೀವನವನ್ನು ಕಳೆದಿದ್ದಾರೆ. ಅವರು ವಿವಿಧ ಉನ್ನತ ಮಟ್ಟದ ಅಂತಾರಾಷ್ಟ್ರೀಯ ಮಂಡಳಿಗಳು ಮತ್ತು ಪ್ಯಾನೆಲ್‌ಗಳನ್ನು ಸಹ ಮುನ್ನಡೆಸಿದ್ದಾರೆ. 2011-2023 ರಲ್ಲಿ ವಾಸ್ತವಿಕ ಕೇಂದ್ರ ಬ್ಯಾಂಕ್ ಸಿಂಗಾಪುರದ ಹಣಕಾಸು ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. 2019-2023 ರ ನಡುವೆ ಸಿಂಗಾಪುರ ಹೂಡಿಕೆ ನಿಗಮದ ಉಪಾಧ್ಯಕ್ಷರಾಗಿದ್ದರು. ಇದನ್ನೂ ಓದಿ: ಬಹುಪತ್ನಿತ್ವ ನಿಷೇಧ – ಮಸೂದೆ ಮಂಡನೆಗೆ ಮುಂದಾದ ಅಸ್ಸಾಂ ಸರ್ಕಾರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಿರುಪತಿ ದೇವಸ್ಥಾನ ಮಂಡಳಿಗೆ ಅಧ್ಯಕ್ಷರಾಗಿ ಭೂಮನ ಕರುಣಾಕರ ರೆಡ್ಡಿ ನೇಮಕ

    ತಿರುಪತಿ ದೇವಸ್ಥಾನ ಮಂಡಳಿಗೆ ಅಧ್ಯಕ್ಷರಾಗಿ ಭೂಮನ ಕರುಣಾಕರ ರೆಡ್ಡಿ ನೇಮಕ

    ಅಮರಾವತಿ: ತಿರುಮಲ ತಿರುಪತಿ ದೇವಸ್ಥಾನ (TTD) ಮಂಡಳಿಗೆ ನೂತನ ಅಧ್ಯಕ್ಷರ ನೇಮಕ ಮಾಡಲಾಗಿದೆ. ಟಿಟಿಡಿ ನೂತನ ಅಧ್ಯಕ್ಷರಾಗಿ ಭೂಮನ ಕರುಣಾಕರ ರೆಡ್ಡಿ (Bhumana Karunakar Reddy) ನೇಮಕವಾಗಿದ್ದಾರೆ.

    ತಿರುಪತಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಭೂಮನ ಕರುಣಾಕರ ರೆಡ್ಡಿ, ಆಗಸ್ಟ್ 8 ರಿಂದ ಟಿಟಿಡಿ ಮಂಡಳಿಗೆ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಕನಸು ಭಗ್ನಗೊಂಡ ಹೆಚ್‌ಡಿಕೆ, ಭಗ್ನಪ್ರೇಮಿಯಂತೆ ವ್ಯಾಘ್ರರಾಗಿದ್ದಾರೆ: ದಿನೇಶ್‌ ಗುಂಡೂರಾವ್‌ ತಿರುಗೇಟು

    ಇದೀಗ ದೇವಾಲಯಕ್ಕೆ ಶೀಘ್ರವೇ ಪದಾಧಿಕಾರಿಗಳ ಆಯ್ಕೆ ಮಾಡುವುದಾಗಿ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಕಾಂಗ್ರೆಸ್ ಸುಳ್ಳು ಹೇಳುವ ಸ್ಪರ್ಧೆಗಿಳಿದಿದೆ: ಪ್ರಹ್ಲಾದ್ ಜೋಶಿ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅನ್ಯಕೋಮಿನ ಸದಸ್ಯನಿಗೆ ದಕ್ಕಿದ ಅಧ್ಯಕ್ಷ ಸ್ಥಾನ – 19 ಗ್ರಾಪಂ ಸದಸ್ಯರಿಂದ ಸಾಮೂಹಿಕ ರಾಜೀನಾಮೆ

    ಅನ್ಯಕೋಮಿನ ಸದಸ್ಯನಿಗೆ ದಕ್ಕಿದ ಅಧ್ಯಕ್ಷ ಸ್ಥಾನ – 19 ಗ್ರಾಪಂ ಸದಸ್ಯರಿಂದ ಸಾಮೂಹಿಕ ರಾಜೀನಾಮೆ

    ರಾಯಚೂರು: ಸಿಂಧನೂರು (Sindhanur) ತಾಲೂಕಿನ ಆರ್‌ಹೆಚ್ ಕ್ಯಾಂಪ್-1ರಲ್ಲಿ ಮುಸ್ಲಿಂ ಸಮುದಾಯದ (Muslim Community) ಸದಸ್ಯ ಅಧ್ಯಕ್ಷನಾಗಿ ಆಯ್ಕೆಯಾಗಿರುವ ಹಿನ್ನೆಲೆ ಸಾಮಾನ್ಯ ವರ್ಗದ 19 ಜನ ಸದಸ್ಯರು ಸಾಮೂಹಿಕ ರಾಜೀನಾಮೆ (Mass Resignation) ನೀಡಿದ್ದಾರೆ.

    ಸಾಮಾನ್ಯ ವರ್ಗಕ್ಕೆ ಸಿಕ್ಕ ಮೀಸಲಾತಿ ಅಲ್ಪಸಂಖ್ಯಾತ ಸದಸ್ಯನ ಪಾಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಗ್ರಾಮ ಪಂಚಾಯತ್‌ನ (Grama Panchayat) 19 ಜನ ಸದಸ್ಯರು ರಾಜೀನಾಮೆ ನೀಡಿದ್ದಾರೆ. ಒಟ್ಟು 38 ಸದಸ್ಯ ಸ್ಥಾನ ಹೊಂದಿರುವ ಆರ್‌ಹೆಚ್ ಕ್ಯಾಂಪ್-1 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಂಗ್ಲಾ ವಲಸಿಗರು ವಾಸಿಸುವ ಒಟ್ಟು 6 ಆರ್‌ಹೆಚ್ ಕ್ಯಾಂಪ್‌ಗಳನ್ನು ಒಳಗೊಂಡಿವೆ. 38 ಸ್ಥಾನಗಳಲ್ಲಿ 30 ಜನ ಸಾಮಾನ್ಯ ವರ್ಗ, 7 ಎಸ್ಸಿಎಸ್ಟಿ ಹಾಗೂ ಹಿಂದುಳಿದವರ್ಗ ಮತ್ತು ಒಬ್ಬರು ಅಲ್ಪಸಂಖ್ಯಾತ ಸದಸ್ಯರಿದ್ದಾರೆ. ಇದನ್ನೂ ಓದಿ: ಮೋದಿ ಮತ್ತೆ ಪ್ರಧಾನಿಯಾಗಲಿ: ಅಮರನಾಥ ಯಾತ್ರೆ ಮಾಡಿ ಶೋಭಾ ಕರಂದ್ಲಾಜೆ ವಿಶೇಷ ಪೂಜೆ

    ಹೀಗಾಗಿ 15 ವರ್ಷಗಳ ಬಳಿಕ ಸಾಮಾನ್ಯ ವರ್ಗಕ್ಕೆ ಸಿಕ್ಕ ಮೀಸಲಾತಿ ಕೈತಪ್ಪಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆಗಸ್ಟ್ 3 ರಂದು ನಡೆದ ಅಧ್ಯಕ್ಷ ಸ್ಥಾನ ಚುನಾವಣೆಯಲ್ಲಿ ರಾಜಕೀಯ ಒತ್ತಡಕ್ಕೆ ಕೆಲವರು ಮನಸ್ಸಿಲ್ಲದೆ ಮತ ಹಾಕಿದ್ದಾರೆ ಎಂದು ಆರೋಪಿಸಿರುವ ಸದಸ್ಯರು ಅಧ್ಯಕ್ಷ ಸ್ಥಾನದ ಆಯ್ಕೆ ರದ್ದುಗೊಳಿಸಿ ಪುನರ್ ಆಯ್ಕೆ ಮಾಡುವಂತೆ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕಳಪೆ ಊಟ ಕೊಟ್ಟರೆ ವಾರ್ಡನ್‍ಗೆ ತಿನ್ನಿಸಿ, ಹೊಡೆಯಿರಿ – ಶಾಸಕರ ಹೇಳಿಕೆ ವೈರಲ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಲನಚಿತ್ರ ನಿರ್ದೇಶಕರ ಸಂಘಕ್ಕೆ ಎನ್ನಾರ್.ಕೆ. ವಿಶ್ವನಾಥ್ ಅಧ್ಯಕ್ಷ

    ಚಲನಚಿತ್ರ ನಿರ್ದೇಶಕರ ಸಂಘಕ್ಕೆ ಎನ್ನಾರ್.ಕೆ. ವಿಶ್ವನಾಥ್ ಅಧ್ಯಕ್ಷ

    ರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ (Directors Association) ನೂತನ ಅಧ್ಯಕ್ಷರಾಗಿ ಮಂಗಳೂರು ಮೂಲದ ಎನ್ನಾರೆ.ಕೆ. ವಿಶ್ವನಾಥ್ (NRK Vishwanath) ಆಯ್ಕೆಯಾಗಿದ್ದಾರೆ. ಪತ್ರಕರ್ತರಾಗಿಯೂ ಗುರುತಿಸಿಕೊಂಡಿರುವ ಎನ್ನಾರ್ ಕೆ. ವಿಶ್ವನಾಥ್ ಹಲವು ದಶಕಗಳಿಂದ ಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ.

    ಸಲ್ಲದ ಕಾರಣಗಳಿಂದಾಗಿ ನಿರ್ದೇಶಕರ ಸುದ್ದಿಯಲ್ಲಿರುತ್ತಿತ್ತು. ಪದಾಧಿಕಾರಿಗಳ ಆಯ್ಕೆಯಲ್ಲಿ ಗೊಂದಲವಿತ್ತು. ಕೆಲ ಅಧ್ಯಕ್ಷರ (President) ವಿರುದ್ಧ ಅಧಿಕಾರ ದುರುಪಯೋಗದ ಆರೋಪವೂ ಕೇಳಿ ಬಂದಿತ್ತು. ನಿರ್ದೇಶಕರ ಸಂಘದಲ್ಲಿನ ಗೊಂದಲಗಳಿಂದಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಎನ್.ಆರ್. ನಂಜುಂಡೇಗೌಡ ರಾಜೀನಾಮೆ ನೀಡಿದ್ದರು. ಇದನ್ನೂ ಓದಿ:ಡಿವೋರ್ಸ್ ಆಗಿ ಒಂದು ವಾರ ಕಳೆದಿಲ್ಲ ಹೆಂಡ್ತಿ ಬೇಕು ಎಂದ ಸುಶ್ಮಿತಾ ಸೇನ್ ಅಣ್ಣ

    ರಾಜೀನಾಮೆ ನೀಡಿದ ಸ್ಥಾನಕ್ಕೆ ಚುನಾವಣೆಯಲ್ಲಿ ಅತ್ಯಧಿಕ ಮತಗಳಿಂದ ವಿಜೇತರಾಗಿದ್ದ ವಿಶ್ವನಾಥ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ನಾಗೇಂದ್ರ ಅರಸ್ ಮತ್ತು ಜಗದೀಶ್ ಕೊಪ್ಪ ಉಪಾಧ್ಯಕ್ಷರಾಗಿ, ವಿಶಾಲ್ ಧೀರಜ್ ಕಾರ್ಯದರ್ಶಿಯಾಗಿ, ಮಳವಳ್ಳಿ ಸಾಯಿಕೃಷ್ಣ ಜಂಟಿ ಕಾರ್ಯದರ್ಶಿಯಾಗಿ ಸಮಿತಿಯಲ್ಲಿದ್ದಾರೆ.

  • 3ನೇ ಅವಧಿಗೆ ಚೀನಾದ ಅಧ್ಯಕ್ಷನಾಗಿ ಕ್ಸಿ ಜಿನ್‌ಪಿಂಗ್ ಆಯ್ಕೆ

    3ನೇ ಅವಧಿಗೆ ಚೀನಾದ ಅಧ್ಯಕ್ಷನಾಗಿ ಕ್ಸಿ ಜಿನ್‌ಪಿಂಗ್ ಆಯ್ಕೆ

    ಬೀಜಿಂಗ್: ಚೀನಾದ ಅಧ್ಯಕ್ಷನಾಗಿ (China President) ಕ್ಸಿ ಜಿನ್‌ಪಿಂಗ್ (Xi Jinping) 3ನೇ ಅವಧಿಗೆ ಮತ್ತೆ ಆಯ್ಕೆಯಾಗಿದ್ದು, ಈ ಮೂಲಕ ಅವರು ದಾಖಲೆ ಸೃಷ್ಟಿಸಿದ್ದಾರೆ.

    ಸಂಸತ್ತಿನ ಸುಮಾರು 3,000 ಸದಸ್ಯರು ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್‌ನ ಜಿನ್‌ಪಿಂಗ್‌ಗೆ ಚೀನಾದ ಅಧ್ಯಕ್ಷರಾಗಲು ಸರ್ವಾನುಮತದಿಂದ ಮತ ಹಾಕಿದ್ದಾರೆ. ಚುನಾವಣೆಯಲ್ಲಿ ಕ್ಸಿಗೆ ಪ್ರತಿಸ್ಪರ್ಧಿಯಾಗಿ ಯಾವುದೇ ಅಭ್ಯರ್ಥಿ ಇರಲಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಆತಂಕ ಸೃಷ್ಟಿಸಿರುವ H3N2ಗೆ ರಾಜ್ಯದಲ್ಲಿ ಮೊದಲಿ ಬಲಿ

    ಚೀನಾದ ಹೊಸ ಸಂಸತ್ತಿನ ಅಧ್ಯಕ್ಷರಾಗಿ ಝಾವೊ ಲೆಜಿ ಮತ್ತು ಹೊಸ ಉಪಾಧ್ಯಕ್ಷರಾಗಿ ಹಾನ್ ಝೆಂಗ್ ಅವರನ್ನು ಆಯ್ಕೆ ಮಾಡಲಾಗಿದೆ. ಅವರಿಬ್ಬರೂ ಕ್ಸಿ ಅವರ ಹಿಂದಿನ ಪಾಲಿಟ್‌ಬ್ಯುರೊ ಸ್ಥಾಯಿ ಸಮಿತಿಯ ಪಕ್ಷದ ನಾಯಕರ ತಂಡದಲ್ಲಿದ್ದರು ಎನ್ನಲಾಗಿದೆ.

    ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಕ್ಸಿ ಜಿನ್‌ಪಿಂಗ್ ಅವರು ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ 3ನೇ ಬಾರಿ 5 ವರ್ಷಗಳ ಅವಧಿಗೆ ಮರು ಆಯ್ಕೆಯಾಗಿದ್ದು, ಈ ಮೂಲಕ ದಾಖಲೆ ಸೃಷ್ಟಿಸಿದ್ದರು. ಇದೀಗ ಕ್ಸಿ ಅವರು ಮಾವೋ ಝೆಡಾಂಗ್ ನಂತರ ದೇಶದ ಅತ್ಯಂತ ಶಕ್ತಿಶಾಲಿ ನಾಯಕರಾಗಿ ತಮ್ಮ ಹಿಡಿತವನ್ನು ಬಿಗಿಗೊಳಿಸುತ್ತಿದ್ದಾರೆ. ಇದನ್ನೂ ಓದಿ: ಚರ್ಚ್ ಮೇಲೆ ಗುಂಡಿನ ದಾಳಿ 7 ಮಂದಿ ಸಾವು- ಹಲವರಿಗೆ ಗಾಯ

  • Breaking- ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಅಶೋಕ್ ಕಶ್ಯಪ್ ನೇಮಕ

    Breaking- ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾಗಿ ಅಶೋಕ್ ಕಶ್ಯಪ್ ನೇಮಕ

    ಸುನೀಲ್ ಪುರಾಣಿಕ್ ಅವರಿಂದ ತೆರುವಾಗಿದ್ದ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸ್ಥಾನವನ್ನು ಭರ್ತಿ ಮಾಡಲಾಗಿದ್ದು, ಕನ್ನಡದ ಖ್ಯಾತ ಸಿನಿಮಾಟೋಗ್ರಾಫರ್ ಅಶೋಕ್ ಕಶ್ಯಪ್ (Ashok Kashyap) ಅವರನ್ನು ನೇಮಕ ಮಾಡಿ, ಸರಕಾರ ಆದೇಶ ಹೊರಡಿಸಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವ್ಯಾಪ್ತಿಯ ಕರ್ನಾಟಕ ಚಲನಚಿತ್ರ ಅಕಾಡೆಮಿ (Academy), ಬೆಂಗಳೂರು ಇದರ ಅಧ್ಯಕ್ಷರ ಹುದ್ದೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಮೂರು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ನೇಮಿಸಿ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಈ ಆದೇಶವನ್ನು ಹೊರಡಿಸಿದ್ದಾರೆ.

    ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿರುವ ಅಶೋಕ್ ಕಶ್ಯಪ್, ಲಿಫ್ಟ್ ಕೊಡ್ಲಾ, ಧ್ವಜ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಅಶೋಕ್ ಅವರು ಕರ್ನಾಟಕ ಚಲನಚಿತ್ರ ಅಕಾಡಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿ, ರಾಷ್ಟ್ರ ಪ್ರಶಸ್ತಿ ಪಡೆದ ತಲೆದಂಡ ಸಿನಿಮಾಗೆ ಅಶೋಕ್ ಕಶ್ಯಪ್ ಅವರೇ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ ಎನ್ನುವುದು ವಿಶೇಷ. ಇದನ್ನೂ ಓದಿ:ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ವಿಜಯ್ ದೇವರಕೊಂಡ- ರಶ್ಮಿಕಾ

    ಜಗ್ಗೇಶ್, ಉಪೇಂದ್ರ, ಪ್ರಿಯಾಮಣಿ ಸೇರಿದಂತೆ ಕನ್ನಡದ ಅನೇಕ ಸ್ಟಾರ್ ನಟರ ಚಿತ್ರಗಳಿಗೆ ಕ್ಯಾಮೆರಾ ಕೆಲಸ ಮಾಡಿದ ಹೆಗ್ಗಳಿಕೆ ಅಶೋಕ್ ಅವರದ್ದು. ಅಲ್ಲದೇ ಅನೇಕ ಧಾರಾವಾಹಿಗಳಿಗೆ ಕೆಲಸ ಕೂಡ ಮಾಡಿದ್ದಾರೆ. ಇವರದ್ದೇ ನಿರ್ಮಾಣ ಸಂಸ್ಥೆಯಿಂದ ಧಾರಾವಾಹಿಗಳು ಕೂಡ ನಿರ್ಮಾಣವಾಗಿವೆ. ಸಿನಿಮಾಟೋಗ್ರಾಫರ್, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಸಿನಿಮಾ ರಂಗದಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿದ್ದಾರೆ. ಭಾರತೀಯ ಸಿನಿಮಾ ರಂಗದ ಅತ್ಯುತ್ತಮ ಸಿನಿಮಾಟೋಗ್ರಾಫರ್ ಗಳಲ್ಲಿ ಇವರು ಒಬ್ಬರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]