Tag: ಅಧೀರ

  • `ಬಾಹುಬಲಿ’ ಪ್ರಭಾಸ್ ಚಿತ್ರಕ್ಕೆ ಸಂಜಯ್ ದತ್ ಎಂಟ್ರಿ

    `ಬಾಹುಬಲಿ’ ಪ್ರಭಾಸ್ ಚಿತ್ರಕ್ಕೆ ಸಂಜಯ್ ದತ್ ಎಂಟ್ರಿ

    `ಕೆಜಿಎಫ್ 2′ (Kgf 2) ಸಿನಿಮಾದ ಸಕ್ಸಸ್ ನಂತರ ಸಂಜಯ್ ದತ್ ಹೆಚ್ಚೆಚ್ಚು ದಕ್ಷಿಣ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ಧ್ರುವ ಸರ್ಜಾ ನಟನೆಯ `ಕೆಡಿ’ (KD) ನಂತರ ಇದೀಗ ಸಂಜಯ್ ದತ್ ಟಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಪ್ರಭಾಸ್ ಜೊತೆಗೆ ಹೊಸ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಬಾಲಿವುಡ್‌ನಲ್ಲಿ (Bollywood) ನಟನಾಗಿ ಮಿಂಚಿದವರು ಸಂಜಯ್ ದತ್, ಕನ್ನಡದ `ಕೆಜಿಎಫ್’ 2ನಲ್ಲಿ (Kgf 2) ಯಶ್‌ಗೆ ವಿಲನ್ ಆಗಿ ಮಿಂಚಿದ್ದರು. ಇದಾದ ಬಳಿಕ ಸಂಜಯ್ ದತ್ ಈಗ ಭರ್ಜರಿ ಡಿಮ್ಯಾಂಡ್‌ನಲ್ಲಿ ಸೌತ್ ಸಿನಿಮಾ ರಂಗದತ್ತ ಮುಖ ಮಾಡಿದ್ದಾರೆ. ಇತ್ತೀಚೆಗೆ ಧ್ರುವ ಸರ್ಜಾ ಜೊತೆ `ಕೆಡಿ’, ನಂತರ ತಮಿಳಿನ ನಟ ವಿಜಯ್ ಸಿನಿಮಾದಲ್ಲೂ ಸಂಜಯ್ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಈ ಬೆನ್ನಲ್ಲೇ ಪ್ರಭಾಸ್ ಸಿನಿಮಾಗೆ ಅಧೀರ ಸಾಥ್ ಕೊಡುತ್ತಿದ್ದಾರೆ. ಇದನ್ನೂ ಓದಿ: ನನ್ನ- ಮಹೇಶ್ ಬಾಬು ನಡುವಿನ ಜಗಳಕ್ಕೆ ಕಾರಣ ಯಾರು ಎಂದು ಬಿಚ್ಚಿಟ್ಟ ನಮ್ರತಾ ಶಿರೋಡ್ಕರ್

    ಮಾರುತಿ (Maruti) ನಿರ್ದೇಶನದ ಹೊಸ ಚಿತ್ರದಲ್ಲಿ ಪ್ರಭಾಸ್ ಈಗಾಗಲೇ ನಟಿಸಿದ್ದು, ಈ ಚಿತ್ರದಲ್ಲಿ ಸಂಜಯ್ ದತ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆದರೆ ಈ ಬಾರಿ ವಿಲನ್ ಆಗಿ ಕಾಣಿಸಿಕೊಳ್ಳುತ್ತಿಲ್ಲ, ಬದಲಾಗಿ ಬಹುಮುಖ್ಯ ಪಾತ್ರದಲ್ಲಿ ಡಾರ್ಲಿಂಗ್ ನಟನಿಗೆ ಸಾಥ್ ನೀಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಾನೇಕೆ ಡ್ರಗ್ಸ್ ತಗೆದುಕೊಳ್ಳುತ್ತಿದ್ದೆ? ಅಸಲಿ ಕಾರಣ ಬಿಚ್ಚಿಟ್ಟ ಸಂಜಯ್ ದತ್

    ನಾನೇಕೆ ಡ್ರಗ್ಸ್ ತಗೆದುಕೊಳ್ಳುತ್ತಿದ್ದೆ? ಅಸಲಿ ಕಾರಣ ಬಿಚ್ಚಿಟ್ಟ ಸಂಜಯ್ ದತ್

    ಕೆಜಿಎಫ್ 2 ಸಿನಿಮಾ ರಿಲೀಸ್ ಆಗುತ್ತಿದ್ದಂತೆಯೇ ಸಂಜಯ್ ದತ್ ಮತ್ತೆ ಪುಟಿದೆದ್ದಾರೆ. ಕೆಜಿಎಫ್ 2 ಸಿನಿಮಾದ ಅಧಿರ ಪಾತ್ರವನ್ನು ಅಭಿಮಾನಿಗಳು ಕೊಂಡಾಡುತ್ತಿದ್ದಂತೆಯೇ ಅವರು ಮತ್ತೆ ಅಭಿಮಾನಿಗಳ ಎದುರು ತಮ್ಮನ್ನು ತಾವು ತೆರೆದುಕೊಳ್ಳುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಅವರು ತಮ್ಮ ಖಾಸಗಿ ಜೀವನದ ಬಗ್ಗೆ ಮಾತನಾಡಿದ್ದಾರೆ. ಇದನ್ನೂ ಓದಿ : ‘ದಿ ಡೆಲ್ಲಿ ಫೈಲ್ಸ್’ : 1984ರ ಗಲಭೆಯೇ ಕಥಾವಸ್ತು ಎಂದ ವಿವೇಕ್ ಅಗ್ನಿಹೋತ್ರಿ

    ಸಂಜಯ್ ದತ್ ಬದುಕು ಹೂವಿನ ಹಾಸಿಗೆಯಲ್ಲಿ ಪವಡಿಸಿದ್ದಲ್ಲ. ನಾನಾ ರೀತಿಯ ಏರುಪೇರುಗಳನ್ನು ಕಂಡಿದೆ. ಅದರಲ್ಲೂ ಎಕೆ 47 ಗನ್ ಇಟ್ಟುಕೊಂಡಿದ್ದು, ಡ್ರಗ್ಸ್ ತಗೆದುಕೊಳ್ಳುತ್ತಿದ್ದದ್ದು, ಜೈಲಿಗೆ ಹೋಗಿ ಬಂದದ್ದು, ತಮ್ಮ ತಂದೆ ತಾಯಿಗೆ ಬೇಡವಾದ ಮಗನಾಗಿದ್ದು ಹೀಗೆ ಹತ್ತಾರ ಎಡರುತೊಡರುಗಳನ್ನು ಸಂಜಯ್ ದಾಟಿಕೊಂಡು ಬಂದಿದ್ದಾರೆ. ಅವೆಲ್ಲದಕ್ಕೂ ಕಾರಣವನ್ನು ಅವರು ಕೊಟ್ಟಿದ್ದಾರೆ. ಹಾಗಂತ ಅದು ಸರಿಯಾದ ನಡೆಯೂ ಅಲ್ಲ ಎಂದು ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ಇದನ್ನೂ ಓದಿ : ಅಜ್ಞಾತವಾಸಿಯಾದ ರಂಗಾಯಣ ರಘು ಮತ್ತು ಪಾವನಾ

    ಸಂಜಯ್ ಮೊದಲ ಬಾರಿಗೆ ಡ್ರಗ್ಸ್ ತಗೆದುಕೊಂಡಿದ್ದು ತಮ್ಮ ತಂದೆಯವರು ಬೈದರು ಎನ್ನುವ ಕಾರಣಕ್ಕಾಗಿ ಅಂತೆ. ಎರಡನೇ ಬಾರಿಗೆ ಡ್ರಗ್ಸ್ ತಗೆದುಕೊಂಡಿದ್ದು ಅವರ ತಾಯಿಯ ಕಾರಣಕ್ಕಾಗಿ ಅಂತೆ. ಅವತ್ತು ಅವರು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲವಂತೆ ಹಾಗಾಗಿ ಡ್ರಗ್ಸ್ ಮೂಲಕ ತಮ್ಮನ್ನು ತಾವು ಹಿಡಿದಿಟ್ಟುಕೊಳ್ಳುವ ಸಲುವಾಗಿ ಹಾಗೆಲ್ಲ ಮಾಡಿದ್ದಾರಂತೆ. ಇದನ್ನೂ ಓದಿ : ಲಾಕಪ್ ನಲ್ಲಿ ಗಳಗಳನೆ ಅತ್ತ ಪೂನಂ: ಈ ನಟಿಗೆ ಅದೆಂಥ ಅವಮಾನ?

    ‘ಹಲವು ವರ್ಷಗಳ ಕಾಲ ನಾನು ನನ್ನ ಲೀವಿಂಗ್ ರೂಮ್ ಮತ್ತು ಶೌಚಗೃಹವನ್ನು ಬಿಟ್ಟು ಆಚೆ ಬಂದಿಲ್ಲ. ಡ್ರಗ್ಸ್ ನನ್ನ ಊಟವಾಗಿತ್ತು. ಅದೇ ನನ್ನ ಸಂಗಾತಿ ಕೂಡ ಆಗಿತ್ತು. ನನ್ನಲ್ಲಿ ಅನೇಕ ನೋವುಗಳು ಇದ್ದವು. ಅವುಗಳನ್ನು ದಾಟಿಕೊಳ್ಳಲು ನಾನು ಹಾಗೆಲ್ಲ ಮಾಡಬೇಕಾಯಿತು. ಅದಕ್ಕಾಗಿ ನಾನು ನನ್ನ ಜೀವನವನ್ನೇ ಹಾಳುಮಾಡಿಕೊಂಡಿದ್ದೇನೆ’ ಎಂದಿದ್ದಾರೆ ಸಂಜಯ್. ಇದನ್ನೂ ಓದಿ : ಪುನೀತ್ ಬ್ಯಾನರ್ ಗಾಗಿ ನಡೆಯಿತು ಮಾರಾಮಾರಿ : ರಾಡ್ ಹಿಡಿದುಕೊಂಡು ಗಲಾಟೆ

    ಹುಡುಗಿಯರನ್ನು ಮಾತನಾಡಿಸಲು ಅವರು ಹಿಂಜರಿಯುತ್ತಿದ್ದರಂತೆ. ಹುಡುಗಿಯರ ಜತೆ ಮಾತನಾಡುವ ಸಂದರ್ಭ ಬಂದಾಗ ಅವರು ಡ್ರಗ್ಸ್ ತಗೆದುಕೊಳ್ಳುತ್ತಿದ್ದಂತೆ. ಹಾಗೆ ಮಾಡಿದರೆ ಮಾತ್ರ ಅವರಿಗೆ ಧೈರ್ಯ ಬರುತ್ತಿತ್ತಂತೆ. ಹಾಗೆ ಅವರು ಮೈಂಡ್ ಸೆಟ್ ಮಾಡಿಕೊಂಡಿದ್ದರಂತೆ. ಆಗ ಮಾಡಿದ್ದೆಲ್ಲವೂ ಸರಿಯಾಗಿ ಇರಲಲ್ಲ ಎಂದು ನೊಂದುಕೊಂಡಿದ್ದಾರೆ.

  • ಕ್ಯಾನ್ಸರ್ ಗೆದ್ದ ಅಧೀರ: ಮಕ್ಕಳ ಹುಟ್ಟುಹಬ್ಬದ ದಿನವೇ ಗುಡ್‌ನ್ಯೂಸ್

    ಕ್ಯಾನ್ಸರ್ ಗೆದ್ದ ಅಧೀರ: ಮಕ್ಕಳ ಹುಟ್ಟುಹಬ್ಬದ ದಿನವೇ ಗುಡ್‌ನ್ಯೂಸ್

    ಬಾಲಿವುಡ್ ನಟ ಸಂಜಯ್ ದತ್ `ಕೆಜಿಎಫ್ 2′ ಚಿತ್ರದ ಅಧೀರನಾಗಿ ಚಿತ್ರರಂಗದಲ್ಲಿ ಮತ್ತಷ್ಟು ಸೌಂಡ್‌ ಮಾಡ್ತಿದ್ದಾರೆ. ರಾಕಿಭಾಯ್ ಮುಂದೆ ಅಧೀರನಾಗಿ ಮಿಂಚ್ತಿದ್ದಾರೆ. ಅಭಿಮಾನಿಗಳು ಅಧೀರನ ಆರ್ಭಟ ನೋಡಿ ಅಪ್ಪಿ ಒಪ್ಪಿಕೊಂಡಿದ್ದಾರೆ. ಇದರ ಮಧ್ಯೆ ತಮ್ಮ ಕರಾಳ ದಿನಗಳ ಕುರಿತು ಸಂಜಯ್ ಮೆಲುಕು ಹಾಕಿದ್ದಾರೆ. ತನಗೆ ಕ್ಯಾನ್ಸರ್‌ ಇದೆ ಎಂದು ತಿಳಿದಾಗ ಗಂಟೆಗಟ್ಟಲೆ ಅತ್ತಿದ್ರಂತೆ ನಟ ಸಂಜಯ್ ದತ್.

    `ಕೆಜಿಎಫ್ 2′ ಖ್ಯಾತಿಯ ಸಂಜಯ್ ದತ್‌ಗೆ ಕ್ಯಾನ್ಸರ್‌ ಇದೆ ಎಂದು ತಿಳಿದಾಗ ಗಂಟೆಗಟ್ಟಲೇ ಅತ್ತಿದ್ರಂತೆ. ಆಗಸ್ಟ್ 2020 ಲಾಕ್‌ಡೌನ್ ವೇಳೆಯಲ್ಲಿ 4ನೇ ಹಂತದ ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿದ್ದರಂತೆ. ತಮ್ಮ ಕುಟುಂಬದ ಪರಿಸ್ಥಿತಿ ನೋಡಿ ಗಂಟೆಗಟ್ಟಲೆ ಕಣ್ಣೀರು ಹಾಕಿದ್ರಂತೆ. ತನ್ನ ಕ್ಯಾನ್ಸರ್‌ ಸಮಸ್ಯೆಯನ್ನ ಚಾಲೆಂಜ್‌ ಆಗಿ ತೆಗೆದುಕೊಂಡು ತಾನು ಹೇಗೆ ಕ್ಯಾನ್ಸರ್‌ ಗೆದ್ದು ಬಂದೆ ಅಂತಾ ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ:ಅಭಿಮಾನಿಗಳಲ್ಲಿ ಲವ್ಲಿಸ್ಟಾರ್ ಪ್ರೇಮ್ ಕಳಕಳಿಯ ಮನವಿ

    ಸಂಜಯ್‌ ದತ್ ದುಬೈನಲ್ಲಿ ಕೀಮೋಥೆರಪಿ ಚಿಕಿತ್ಸೆ ಪಡೆದುಕೊಂಡಿದ್ದು,‌ ಪ್ರತಿದಿನ ಸತತ ಎರಡು ಗಂಟೆಗಳ ಕಾಲ ಬ್ಯಾಡ್ಮಿಂಟನ್ ಆಡುವುದು, ಒಂದು ಗಂಟೆಗಳ ಕಾಲ ಸೈಕ್ಲಿಂಗ್ ಮಾಡಿದರಿಂದ ಕ್ಯಾನ್ಸರ್ ಮುಕ್ತರಾಗಿದ್ದು, ಸಂಕಷ್ಟದ ಪರಿಸ್ಥಿತಿಯಲ್ಲಿ ಗಟ್ಟಿಯಾಗಿ ನಿಂತು ಕ್ಯಾನ್ಸರ್‌ ಎದುರಿಸಿದರು. ಬಳಿಕ ಸಂಜಯ್ ದತ್ ಅವರ ಮಕ್ಕಳ ಹುಟ್ಟುಹಬ್ಬದ ದಿನದೆಂದೇ ಕ್ಯಾನ್ಸರ್‌ನಿಂದ ಗುಣಮುಖರಾಗಿದ್ದರ ಕುರಿತು ವೈದ್ಯರಿಂದ ಗುಡ್ ನ್ಯೂಸ್ ಸಿಕ್ಕಿತ್ತು. ಹೀಗೆ ಕ್ಯಾನ್ಸರ್‌ನಿಂದ ಬಳಲಿದ ಕಷ್ಟದ ದಿನವನ್ನು ಸಂಜಯ್ ದತ್ ಹೇಗೆ ಎದುರಿಸಿದರು ಅಂತಾ ಮೆಲಕು ಹಾಕಿದ್ದಾರೆ.

  • ಕೆಜಿಎಫ್ ಅಧೀರನ ಭೇಟಿಯಾದ ಕಂಗನಾ ರಣಾವತ್

    ಕೆಜಿಎಫ್ ಅಧೀರನ ಭೇಟಿಯಾದ ಕಂಗನಾ ರಣಾವತ್

    – ಭೇಟಿ ವೇಳೆ ನಡೆದ ಮಾತುಕತೆಯೇನು?

    ಹೈದರಾಬಾದ್: ಸದ್ಯ ಸುದ್ದಿಯಲ್ಲಿರುವ  ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಕೆಜಿಎಫ್ ಅಧೀರ ಸಂಜಯ್ ದತ್ ಅವರನ್ನು ಭೇಟಿಯಾಗಿದ್ದಾರೆ.

    ಹೌದು. ಇಂದು ಬೆಳಗ್ಗೆ ಭೇಟಿಯಾಗಿರುವ ಕಂಗನಾ ಸಂಜಯ್ ದತ್ ಅವರನ್ನು ನೋಡಿ ಅಚ್ಚರಿಯೊಂದಿಗೆ ಖುಷಿಯಾಗಿದ್ದಾರೆ. ಅಲ್ಲದೆ ಅವರ ಆರೋಗ್ಯ ಇನ್ನಷ್ಟು ವೃದ್ಧಿಸಲು ಪ್ರಾರ್ಥೊಸೋಣ ಎಂದು ತಿಳಿಸಿದ್ದಾರೆ.

    ಈ ಸಂಬಂಧ ಟ್ವೀಟ್ ಮಾಡಿರುವ ಕಂಗನಾ, ಹೈದರಾಬಾದ್‍ನ ಹೋಟೆಲಿನಲ್ಲಿ ತಂಗಿರುವ ಸುದ್ದಿ ತಿಳಿದು ನಾನು ಇಂದು ಬೆಳಗ್ಗೆ ಸಂಜು ಅವರನ್ನು ನೋಡಲು ತೆರಳಿದೆ. ಈ ವೇಳೆ ಅವರ ಆರೋಗ್ಯವನ್ನು ವಿಚಾರಿಸಿದೆ. ಅವರು ಇನ್ನಷ್ಟು ಸುಂದರ ಹಾಗೂ ಆರೋಗ್ಯವಂತರಾಗಿರುವುದನ್ನು ಕಂಡು ನಿಜಕ್ಕೂ ನನಗೆ ಅಚ್ಚರಿಯಾಯಿತು. ನಾವೆಲ್ಲರೂ ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸೋಣ ಎಂದು ಬರೆದುಕೊಂಡಿದ್ದಾರೆ.

    ಆಗಸ್ಟ್ 8ರಂದು ಎದೆನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡು ನಟ ಸಂಜಯ್ ಅವರು ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಇವರ ಕೊರೊನಾ ಪರೀಕ್ಷೆ ನಡೆಸಿದ್ದು, ವರದಿಯಲ್ಲಿ ನೆಗೆಟಿವ್ ಎಂದು ಬಂದಿತ್ತು. ಕೊರೊನಾ ಅಲ್ಲದ ಕಾರಣ ಅವರಿಗೆ ನಾನ್ ಕೋವಿಡ್ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

    ಆ ನಂತರ ನಟಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವ ವಿಚಾರ ಬಹಿರಂಗವಾಗಿತ್ತು. ಈ ಸಂಬಂಧ ಟ್ವೀಟ್ ಮಾಡಿದ್ದ ಅಧೀರ, ಸಿನಿಮಾದಿಂದ ಸಣ್ಣ ಬ್ರೇಕ್ ಪಡೆದುಕೊಳ್ಳುವುದಾಗಿ ತಿಳಿಸಿದ್ದರು. ನನಗೆ ಚಿಕಿತ್ಸೆ ಮಾಡಿಸಿಕೊಳ್ಳಬೇಕಿದ್ದು, ಸ್ನೇಹಿತರು ಕುಟುಂಬಸ್ಥರು ನನ್ನ ಜೊತೆಗಿದ್ದಾರೆ. ಹೀಗಾಗಿ ನನ್ನ ಆತ್ಮೀಯರು ಏನೂ ಯೋಚನೆ ಮಾಡಬೇಡಿ. ಅಲ್ಲದೆ ವದಂತಿಗಳನ್ನು ಕೂಡ ನಂಬಬೇಡಿ. ನಿಮ್ಮೆಲ್ಲರ ಹಾರೈಕೆಯಿಂದ ನಾನು ಅತೀ ಶೀಘ್ರವೇ ಹುಷಾರಾಗಿ ನಿಮ್ಮ ಮುಂದೆ ಬರುತ್ತೇನೆ ಎಂದು ಬರೆದುಕೊಂಡಿದ್ದರು.

    ಕ್ಯಾನ್ಸರ್ ಚಿಕಿತ್ಸೆಯ ನಂತರ ಕೆಜಿಎಫ್-2ಗಾಗಿ ನಟ ಸಂಜಯ್ ದತ್ ಅವರು ತಯಾರಿ ಮಾಡಿಕೊಳ್ಳುತ್ತಿರುವ ಸಂದೇಶ ನೀಡಿದ್ದರು. ಸ್ಟೈಲಿಶ್ ಲುಕ್‍ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದ ಸಂಜಯ್, ಮೂರು ಫೋಟೋಗಳು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಧೀರನಿಗಾಗಿ ತಯಾರಿ ಎಂದು ಬರೆದುಕೊಂಡಿದ್ದರು. ಈ ಮೂಲಕ ನವೆಂಬರ್ ನಲ್ಲಿ ಆರಂಭವಾಗಲಿರುವ ಕೆಜಿಎಫ್-2 ಅಧೀರನ ಶೂಟಿಂಗ್ ಸಿದ್ಧವಾಗಿದ್ದೇನೆ ಎಂಬ ಸಂದೇಶವನ್ನು ರವಾನೆ ಮಾಡಿದ್ದರು. ಈ ಸುದ್ದಿ ತಿಳಿದ ಅಧೀರನ ಅಭಿಮಾನಿಗಳು ಫುಲ್ ಖುಷ್ ಆಗಿದ್ದರು.

  • ಕ್ಯಾನ್ಸರ್ ಚಿಕಿತ್ಸೆಯ ಬಳಿಕ ಕೆಜಿಎಫ್-2 ಶೂಟಿಂಗ್‍ಗೆ ‘ಅಧೀರ’ ರೆಡಿ

    ಕ್ಯಾನ್ಸರ್ ಚಿಕಿತ್ಸೆಯ ಬಳಿಕ ಕೆಜಿಎಫ್-2 ಶೂಟಿಂಗ್‍ಗೆ ‘ಅಧೀರ’ ರೆಡಿ

    – ಹೈದರಾಬಾದ್‍ನಲ್ಲಿ ರಾಖಿ ಹವಾ

    ಮುಂಬೈ: ಕ್ಯಾನ್ಸರ್ ಚಿಕಿತ್ಸೆಯ ನಂತರ ಕೆಜಿಎಫ್-2ಗಾಗಿ ನಟ ಸಂಜಯ್ ದತ್ ಅವರು ತಯಾರಿ ಮಾಡಿಕೊಳ್ಳುತ್ತಿರುವ ಸಂದೇಶ ನೀಡಿದ್ದಾರೆ.

    ಬಾಲಿವುಡ್ ನಟ ಹಾಗೂ ಕೆಜಿಎಫ್-2 ಚಿತ್ರದಲ್ಲಿ ಅಧೀರನ ಪಾತ್ರ ನಿರ್ವಹಿಸುತ್ತಿರುವ ಸಂಜಯ್ ದತ್ ಕ್ಯಾನ್ಸರ್ ನಿಂದ ಬಳಲುತ್ತಿರುವುದು ತಿಳಿದೇ ಇದೆ. ಇದಕ್ಕಾಗಿ ಅವರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇತ್ತೀಚೆಗೆ ಈ ಸಂಬಂಧ ವಿದೇಶಕ್ಕೂ ಹೋಗಿದ್ದರು. ಹೀಗಾಗಿ ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಈಗ ವಾಪಸ್ ಆಗಿರುವ ಅಧೀರ ಫಿಟ್ ಆಗಿ ಕಾಣಿಸಿಕೊಂಡಿದ್ದಾರೆ.

    ಸ್ಟೈಲಿಶ್ ಲುಕ್‍ನಲ್ಲಿ ಫೋಟೋಶೂಟ್ ಮಾಡಿಸಿಕೊಂಡಿರುವ ಸಂಜಯ್ ದತ್ ಅವರು ಮೂರು ಫೋಟೋಗಳು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಅಧೀರನಿಗಾಗಿ ತಯಾರಿ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ನವೆಂಬರ್ ನಲ್ಲಿ ಆರಂಭವಾಗಲಿರುವ ಕೆಜಿಎಫ್-2 ಅಧೀರನ ಶೂಟಿಂಗ್ ಸಿದ್ಧವಾಗಿದ್ದೇನೆ ಎಂಬ ಸಂದೇಶವನ್ನು ರವಾನೆ ಮಾಡಿದ್ದಾರೆ. ಈ ಸುದ್ದಿ ತಿಳಿದ ಅಧೀರನ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

    ಕೊರೊನಾ ಲಾಕ್‍ಡೌನ್‍ಗೂ ಮುನ್ನ ಸಂಜಯ್ ದತ್ ಅವರು ಕೆಜಿಎಫ್-2 ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ನಂತರ ಅವರಿಗೆ ಕ್ಯಾನ್ಸರ್ ಸಮಸ್ಯೆ ಹೆಚ್ಚಾಗಿ ಆಸ್ಪತ್ರೆ ಸೇರಿದ್ದರು. ಇದರಿಂದ ಮತ್ತೆ ಅವರು ಬಂದು ಶೂಟಿಂಗ್‍ಗೆ ಸೇರಿಕೊಳ್ಳುತ್ತಾರಾ ಎಂಬ ಅನುಮಾನಗಳು ಮೂಡಿದ್ದವು. ಆದರೆ ಈಗ ಅವರು ಮುಂಬೈಗೆ ವಾಪಸ್ ಬಂದಿದ್ದು, ಸಲೂನ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ನಾನು ಚೆನ್ನಾಗಿದ್ದೇನೆ ಎಂದು ಹೇಳಿದ್ದಾರೆ.

    ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಸಂಜಯ್ ದತ್, ಚಿತ್ರೀಕರಣಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ. ನವೆಂಬರ್ ನಲ್ಲಿ ಕೆಜಿಎಫ್-2 ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ವರ್ಕೌಟ್ ಸಹ ಮಾಡುತ್ತಿರುವ ಸಂಜಯ್ ದತ್, ಚಿತ್ರೀಕರಣಕ್ಕೆ ತಯಾರಾಗುತ್ತಿದ್ದಾರೆ. ಸದ್ಯ ಮಂಗಳೂರಿನಲ್ಲಿ ಕೆಜಿಎಫ್-2 ಸಿನಿಮಾದ ಶೂಟಿಂಗ್ ಮುಗಿದಿದೆ. ಯಶ್, ನಾಯಕಿ ಶ್ರೀನಿಧಿ ಶೆಟ್ಟಿ ಭಾಗದ ಚಿತ್ರೀಕರಣ ಮಂಗಳೂರಿನ ಕಡಲ ತೀರದಲ್ಲಿ ನಡೆದಿತ್ತು.

    ಹೈದರಾಬಾದಿನಲ್ಲಿ ರಾಖಿ ಹವಾ
    ಇದರ ಮಧ್ಯದಲ್ಲಿ ಮಂಗಳೂರಿನಲ್ಲಿ ನಡೆದ ಶೂಟಿಂಗ್‍ನಲ್ಲಿ ಭಾಗಿಯಾಗಿದ್ದ ರಾಕಿಂಗ್ ಸ್ಟಾರ್ ಯಶ್ ಅವರು, ಮುಂದಿನ ಚಿತ್ರೀಕರಣಕ್ಕೆ ಹೈದರಾಬಾದಿಗೆ ಹಾರಿದ್ದಾರೆ. ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಜಾಕೆಟ್ ಧರಿಸಿ, ಕಣ್ಣಿಗೆ ಕಪ್ಪು ಕನ್ನಡಕ ತೊಟ್ಟು ರಾಖಿ ಭಾಯ್ ನಡೆದುಕೊಂಡು ಹೋಗುತ್ತಿರುವ ಖಡಕ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ. ಈ ಫೋಟೋಗಳಲ್ಲಿ ರಾಖಿ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.

  • ಕತ್ತಿ ಹಿಡಿದು ಬೇಟೆಗೆ ಕಾಯ್ತಿರೋ ಅಧೀರನ ಲುಕ್ ಧಗ ಧಗ

    ಕತ್ತಿ ಹಿಡಿದು ಬೇಟೆಗೆ ಕಾಯ್ತಿರೋ ಅಧೀರನ ಲುಕ್ ಧಗ ಧಗ

    ಬೆಂಗಳೂರು: ಕೆಜಿಎಫ್ ಸಿನಿಮಾ ಮೂಲಕ ಚಂದನವನಕ್ಕೆ ಪ್ರವೇಶ ನೀಡಿರುವ ಸಂಜಯ್ ದತ್ ನಟನೆಯ ಅಧೀರನ ಲುಕ್ ಇಂದು ಅನಾವರಣಗೊಂಡಿದೆ.

    ಸಂಜಯ್ ದತ್ ಹುಟ್ಟುಹಬ್ಬದ ಹಿನ್ನೆಲೆ ಹೊಂಬಾಳೆ ಫಿಲಂಸ್ ಅಧೀರನ ಪೋಸ್ಟರ್ ಬಿಡುಗಡೆ ಮಾಡಿದೆ. ಕೈಯಲ್ಲಿ ಕತ್ತಿ ಹಿಡಿದು ಏನೋ ಯೋಚಿಸೋ ರೀತಿಯಲ್ಲಿ ಅಧೀರ ಕುಳಿತಿದ್ದು, ಫೋಟೋ ಸೋಶಿಯ್ ಮೀಡಿಯಾದಲ್ಲಿ ಧಗ ಧಗಿಸುತ್ತಿದೆ. ಇದರ ಜೊತೆಗೆ ಕ್ರೂರತನಗಳಿಂದ ಪ್ರಭಾವಿತನಾದ ನಿರ್ಭಿತ ಯೋಧ ಎಂದು ಬರೆಯಲಾಗಿದೆ.

    ಎರಡು ದಿನಗಳ ಹಿಂದೆ ಕೆಜಿಎಫ್ ಅಂಗಳದಿಂದ ದೊಡ್ಡ ಸುದ್ದಿ ಹೊರ ಬೀಳುವ ಮುನ್ಸೂಚನೆಯನ್ನು ನಿರ್ದೇಶಕ ಪ್ರಶಾಂತ್ ನೀಲ್ ನೀಡಿದ್ದರು. ರಾಕಿಯ ಜೊತೆಗಿನ ಯದ್ಧ ಅಧೀರನ ಯುದ್ಧ ಬಲುರೋಚಕವಾಗಿರಲಿದೆ ಎಂಬುದನ್ನು ಪೋಸ್ಟರ್ ಹೇಳುತ್ತಿದೆ. ಗರುಡನನ್ನ ಮುಗಿಸುವ ರಾಕಿಯ ಮುಂದಿನ ಯುದ್ಧ ಅಧೀರನೊಂದಿಗೆ ಇರಲಿದೆ. ಸಾವಿರಾರು ಜನರ ನಾಯಕನಾಗಿ ರಾಕಿ ಹೇಗೆ ತನ್ನ ಹೊಸ ಸಾಮ್ರಾಜ್ಯ ಕಟ್ಟಲಿದ್ದಾನೆ ಎಂಬು ಚಾಪ್ಟರ್-2ರಲ್ಲಿ ರಿವೀಲ್ ಆಗಲಿದೆ.

  • ತೆರೆಮರೆಯಲ್ಲಿದ್ದ ಖಳನಾಯಕ ಅಧೀರನ ರಗಡ್ ಲುಕ್ ರಿವೀಲ್

    ತೆರೆಮರೆಯಲ್ಲಿದ್ದ ಖಳನಾಯಕ ಅಧೀರನ ರಗಡ್ ಲುಕ್ ರಿವೀಲ್

    ಬೆಂಗಳೂರು: ‘ಕೆಜಿಎಫ್ ಚಾಪ್ಟರ್-2’ ಚಿತ್ರತಂಡ ಇಂದು ಅಧೀರನ ಪೋಸ್ಟರ್ ರಿಲೀಸ್ ಮಾಡುವುದಾಗಿ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ ಅಧೀರ ಯಾರಾಗಿರುತ್ತಾರೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದರು. ಇದೀಗ ಅಧಿಕೃತವಾಗಿ ಸಿನಿಮಾ ಖಳನಾಯಕ ಅಧೀರನ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ.

    ಹೊಂಬಾಳೆ ಫಿಲ್ಮ್ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟರ್ ರಿಲೀಸ್ ಆಗಿದ್ದು, ಅಧೀರ ಯಾರಾಗುತ್ತಾರೆ ಎಂದು ಮೊದಲೇ ಊಹಿಸಿದ ರೀತಿಯಲ್ಲಿಯೇ ಬಾಲಿವುಡ್ ನಟ ಸಂಜಯ್ ದತ್ ಅವರೇ ಅಧೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

    ಇಂದು ಸಂಜಯ್ ದತ್ ಅವರ ಹುಟ್ಟುಹಬ್ಬವಾಗಿದೆ. ಈ ಪ್ರಯುಕ್ತ ಚಿತ್ರತಂಡ ಅವರ ಪಾತ್ರದ ಮೊದಲ ಲುಕ್ ಬಿಡುಗಡೆ ಮಾಡುವ ಮೂಲಕ ಅವರ ಹುಟ್ಟುಹಬ್ಬಕ್ಕೆ ಗಿಫ್ಟ್ ನೀಡಿದೆ. ಪೋಸ್ಟರ್‌ನಲ್ಲಿ ಸಂಜಯ್ ದತ್ ಅವರು ತಮ್ಮ ಅರ್ಧ ಮುಖವನ್ನು ಕವರ್ ಮಾಡಿಕೊಂಡಿದ್ದು, ಭಯಾನಕ ಲುಕ್ ಕೊಟ್ಟಿದ್ದಾರೆ. ಜೊತೆಗೆ ಹಿಂದೆ ನೂರಾರು ಮಂದಿ ಇರುವುದನ್ನು ಕಾಣಬಹುದಾಗಿದೆ.

    ಪೋಸ್ಟರ್‌ನಲ್ಲಿ ಸಂಜಯ್ ದತ್ ಈಗ ಅಧೀರ ಎಂದು ಬರೆಯಲಾಗಿದೆ. ಸಂಜಯ್ ಅವರ ಲುಕ್ ರಿಲೀಸ್ ಮಾಡಿ ಚಿತ್ರತಂಡ ಅವರಿಗೆ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದೆ.

    ಈ ಹಿಂದೆ ಹೊಂಬಾಳೆ ಫಿಲಂಸ್ ತನ್ನ ಟ್ವಿಟ್ಟರ್ `ಕೆಜಿಎಫ್ ಚಾಪ್ಟರ್-2′ ಸಿನಿಮಾದ ಪೋಸ್ಟರ್‌ವೊಂದನ್ನು ಬಿಡುಗಡೆ ಮಾಡಿ ಮತ್ತೊಂದು ಬಿಗ್ ನ್ಯೂಸ್‍ಗೆ ಕಾಯುವಂತೆ ಅಭಿಮಾನಿಗಳಿಗೆ ತಿಳಿಸಿತ್ತು. ಅದರಲ್ಲಿ ಎರಡು ಕೈಗಳನ್ನು ಹಿಂದೆ ಹಿಡಿದಿರುವ ಅಧೀರನ ಪೋಸ್ಟರ್ ಆಗಿತ್ತು.

    ಯಾರು ಈ ಅಧೀರ?
    ಕೆಜಿಎಫ್ ಸಿನಿಮಾದಲ್ಲಿ ಖಳನಾಯಕ ಸೂರ್ಯವರ್ಧನ್ ಬರುತ್ತಾನೆ. ಆತನ ಸಹೋದರನೇ ಅಧೀರ. ಆದರೆ ಮೊದಲ ಭಾಗದಲ್ಲಿ ಅಧೀರನ ಪಾತ್ರ ಕೆಲವೇ ನಿಮಿಷವಿತ್ತು. ಅಷ್ಟೇ ಅಲ್ಲದೇ ಆತನ ಮುಖವನ್ನು ತೋರಿಸಿರಲಿಲ್ಲ. ಸೂರ್ಯವರ್ಧನ್ ಸಾವಿನ ನಂತರ ಗರುಡ ಅಧಿಕಾರಕ್ಕೆ ಬರುತ್ತಾನೆ. ಆಗ ರಾಕಿ ಭಾಯ್‍ಗೆ ಸುಪಾರಿ ಕೊಟ್ಟು ಗರುಡನನ್ನು ಕೊಲೆ ಮಾಡಿಸಿದ್ದನು. ಇದೀಗ `ಕೆಜಿಎಫ್ ಚಾಪ್ಟರ್ 2′ ಸಿನಿಮಾದಲ್ಲಿ ಅಧೀರ ಬರುತ್ತಾನೆ.