Tag: ಅಧಿಕಾರಿಗಳ ವರ್ಗಾವಣೆ

  • ಬೆಂಗಳೂರು, ಉಡುಪಿ, ಶಿವಮೊಗ್ಗ ಸೇರಿದಂತೆ 59 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ

    ಬೆಂಗಳೂರು, ಉಡುಪಿ, ಶಿವಮೊಗ್ಗ ಸೇರಿದಂತೆ 59 ಪೊಲೀಸ್‌ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ

    ಬೆಂಗಳೂರು: ಉಡುಪಿ, ಬೆಂಗಳೂರು (Bengluru), ಶಿವಮೊಗ್ಗ, ಬೀದರ್‌ ಸೇರಿದಂತೆ ವಿವಿಧ ಜಿಲ್ಲೆಗಳ 59 ಪೊಲೀಸ್‌ ಇನ್ಸ್‌ಪೆಕ್ಟರ್‌ (ಸಿವಿಲ್‌) ಗಳನ್ನ (Police Inspector Transfer) ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

    ಹೈಕೋರ್ಟ್‌ ಭದ್ರತೆಗೆ ನಿಯೋಜನೆಗೊಂಡಿದ್ದ ಟಿ.ಎಂ ಧರ್ಮೇಂದ್ರ ಅವರನ್ನು ಬೆಂಗಳೂರು ವಿವಿ ಪುರಂ ಪೊಲೀಸ್‌ ಠಾಣೆಗೆ, ಕರ್ನಾಟಕ ಲೋಕಾಯುಕ್ತ ಅಧಿಕಾರಿಯಾಗಿದ್ದ ಎಸ್‌. ಮಹದೇವಯ್ಯ ಅವರನ್ನು ಬೆಂಗಳೂರು ನಗರ ಸಿಸಿಬಿ ವಿಭಾಗಕ್ಕೆ, ಸಿಐಡಿ ಅಧಿಕಾರಿಯಾಗಿದ್ದ ಮಹೇಶ್‌ ಕನಕಗಿರಿ ಅವರನ್ನು ಬೆಂಗಳೂರು ನಗರ ಬಂಡೇಪಾಳ್ಯ ಪೊಲೀಸ್‌ ಠಾಣೆಗೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ. ಇದನ್ನೂ ಓದಿ: ಅ. 10ರೊಳಗೆ 40 ರಾಜತಾಂತ್ರಿಕರನ್ನು ವಾಪಸ್ ಕರೆಸಿಕೊಳ್ಳಿ- ಕೆನಡಾಗೆ ಭಾರತ ಗಡುವು

    ಶಿವಮೊಗ್ಗ ಸಾಗರ ಗ್ರಾಮಾಂತರ ವೃತ್ತದ ಪೊಲೀಸ್‌ ಇನ್ಸ್‌ಪೆಕ್ಟರ್‌ ಕೆ.ವಿ ಕೃಷ್ಣಪ್ಪ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೆಂಗಳೂರು ನಗರದ ಶೇಷಾದ್ರಿಪುರಂ (ಹೈಗ್ರೌಂಡ್‌) ಸಂಚಾರ ಪೊಲೀಸ್‌ ಠಾಣೆಗೆ ವರ್ಗಾಯಿಸಲಾಗಿದೆ. ಇದನ್ನೂ ಓದಿ: ರಾಜ್ಯದಲ್ಲೂ ಜಾತಿಗಣತಿ ಸಮೀಕ್ಷೆ ವರದಿ ಜಾರಿಗೆ ಒತ್ತಡ; ಕಾಂಗ್ರೆಸ್ ವಿರುದ್ಧ ಸಿಡಿದೆದ್ದ ಮೋದಿ

    ಅಲ್ಲದೇ ಸ್ಥಳ ನಿರೀಕ್ಷೆಯಲ್ಲಿದ್ದ ಚಂದ್ರಕಲಾ ಹೆಚ್‌. ಹೊಸಮನಿ ಅವರನ್ನು ಶಿವಮೊಗ್ಗ ಜಿಲ್ಲೆಯ ವಿನೋಬನಗರ ಪೊಲೀಸ್‌ ಠಾಣೆಗೆ, ಶಿವಶಂಕರ್‌ ಆರ್‌. ಗಣಚಾರಿ ಅವರನ್ನು ಹಾವೇರಿ ಜಿಲ್ಲೆಯ ಸಿಇಎನ್‌ ಪೊಲೀಸ್‌ ಠಾಣೆಗೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ.

    ಎಸ್‌. ವಿಜಯಲಕ್ಷ್ಮಿ ಅವರನ್ನು ತುಮಕೂರು ಮಹಿಳಾ ಪೊಲೀಸ್‌ ಠಾಣೆಗೆ, ಗುರುರಾಜ್‌ ಎನ್‌. ಮೈಲಾರ್‌ ಅವರನ್ನು ಹುಬ್ಬಳ್ಳಿ-ಧಾರವಾಡ ಕೇಂದ್ರ ಪೊಲೀಸ್‌ ಠಾಣೆಗೆ, ರಾವ್‌ ಗಣೇಶ್‌ ಜನಾರ್ಧನ್‌ ಅವರನ್ನು ಬೆಂಗಳೂರು ಜಿಲ್ಲೆಯ ಹೊಸಹಳ್ಳಿಯ ಪೊಲೀಸ್‌ ಠಾಣೆಗೆ ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಒಂದು ಸಮಾಜವನ್ನು ಗುರಿಯಾಗಿಸಿಕೊಂಡು ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ – ರೇವಣ್ಣ ವಾಗ್ದಾಳಿ

    ಒಂದು ಸಮಾಜವನ್ನು ಗುರಿಯಾಗಿಸಿಕೊಂಡು ವರ್ಗಾವಣೆ ದಂಧೆ ನಡೆಸುತ್ತಿದ್ದಾರೆ – ರೇವಣ್ಣ ವಾಗ್ದಾಳಿ

    – ಎಷ್ಟು ಪರ್ಸೆಂಟ್ ತಗೋಂಡಿದ್ದಾರೆ ಹೇಳ್ಬೇಕು

    ಹಾಸನ: ಒಂದು ಸಮಾಜವನ್ನು ಗುರಿಯಾಗಿಸಿಕೊಂಡು ವರ್ಗಾವಣೆ ದಂಧೆ ನಡೆಸುತ್ತಿದ್ದು, ವರ್ಗಾವಣೆಗೆ ಎಷ್ಟು ಪರ್ಸೆಂಟ್ ಹಣ ಪಡೆದಿದ್ದೀರಿ ಎಂದು ತಿಳಿಸಿ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ವಾಗ್ದಾಳಿ ನಡೆಸಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ ಬಂದು ಆರು ತಿಂಗಳೂ ಆಗಿರಲಿಲ್ಲ. ಆಗಲೇ ಮಹಿಳಾ ಅಧಿಕಾರಿಯನ್ನು ಬೆಂಗಳೂರಿನಿಂದ ಜಮಖಂಡಿಗೆ ವರ್ಗಾವಣೆ ಮಾಡಲಾಗಿದ್ದು, ಇದಕ್ಕಾಗಿ ಎಷ್ಟು ಪರ್ಸೆಂಟ್ ಕಮಿಷನ್ ಪಡೆದಿದ್ದಾರೆ ಸ್ಪಷ್ಟಪಡಿಸಲಿ. ಮಹಿಳಾ ಅಧಿಕಾರಿಗೆ ಕಿರುಕುಳ ಕೊಟ್ಟಿದ್ದಾರೆ. ಪಿಡಬ್ಲ್ಯೂಡಿ ಸೇರಿದಂತೆ ಎಲ್ಲ ಇಲಾಖೆಗಳಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ. ಹಿಂದೆ ಟೆನ್ ಪರ್ಸೆಂಟ್ ಸರ್ಕಾರ ಎನ್ನುತ್ತಿದ್ದ ಮೋದಿಯವರು, ಇದೀಗ ಟೆನ್ ಅಥವಾ ಎಷ್ಟು ಪರ್ಸೆಂಟಾದರೂ ಮಾಡಿಸಲಿ. ವರ್ಗಾವಣೆ ದಂಧೆ ಮಾಡಿ ನಂತರ ನೆರೆ ಹಾನಿಗೆ ದುಡ್ಡು ಬಿಡುಗಡೆ ಮಾಡುತ್ತಾರೆ ಅನ್ನಿಸುತ್ತದೆ ಎಂದು ಹರಿಹಾಯ್ದಿದ್ದಾರೆ.

    ನಮ್ಮ ಜಿಲ್ಲೆಯಲ್ಲೂ ನೆರೆಯಿಂದ ಹಾನಿಯಾಗಿದೆ. ಆದರೆ, ಈವರೆಗೆ ಬಿಡಿಗಾಸು ಬಂದಿಲ್ಲ. ಹಾಸನ ಜಿಲ್ಲೆ ಅಂದರೆ ಇವರಿಗೆ ಒಂತರಾ ಅನ್ನಿಸುತ್ತದೆ. ಬೆಳೆಗಳು ನಷ್ಟವಾಗಿದ್ದರೂ ಯಾರೂ ಏನೂ ಕೇಳುತಿಲ್ಲ. ರೈತರು ನೊಂದಿರುವ ಕುರಿತು ನನಗೀಗ ಚಿಂತೆ ಶುರುವಾಗಿದೆ. ಯಾವ ಉದ್ದೇಶ ಇಟ್ಟುಕೊಂಡು ಈ ರೀತಿ ಮಾಡುತ್ತಿದ್ದಾರೆ ಗೊತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ದೇವೇಗೌಡರನ್ನು ಸೋಲಿಸಿದ್ದು ಯಾರು ಎಂದು ಇಡೀ ದೇಶಕ್ಕೆ ಗೊತ್ತಿದೆ. ಹಾಸನ ಜಿಲ್ಲೆಯಲ್ಲಿ ಏನು ನಡೆದಿದೆ ಎನ್ನುವುದೂ ಗೊತ್ತಿದೆ. ಹಾಸನದಲ್ಲಿ ಹವಾಯಿ ಚಪ್ಪಲಿ ಹಾಕಿಕೊಂಡು ಓಡಾಡುತ್ತಾರೆ. ಬೆಂಗಳೂರಲ್ಲಿ ಸೂಟು ಬೂಟು ಹಾಕ್ಕೊಂಡು ಓಡಾಡುತ್ತಾರೆ. ದೇವೇಗೌಡರು, ಕುಮಾರಸ್ವಾಮಿಗೆ ಇದೆಲ್ಲ ಗೊತ್ತಿದೆ ಎಂದು ಹರಿಹಾಯ್ದಿದ್ದಾರೆ.

  • ಎಲ್ಲಾ ಕೆಲ್ಸ ಸಿಎಂ ಮಾಡಿದ್ರೆ ನಾನು ಇರೋದು ಯಾಕೆ: ಎಚ್‍ಡಿಕೆ ಮೇಲೆ ಎಂಬಿಪಿ ಮುನಿಸು?

    ಎಲ್ಲಾ ಕೆಲ್ಸ ಸಿಎಂ ಮಾಡಿದ್ರೆ ನಾನು ಇರೋದು ಯಾಕೆ: ಎಚ್‍ಡಿಕೆ ಮೇಲೆ ಎಂಬಿಪಿ ಮುನಿಸು?

    ಬೆಂಗಳೂರು: ಮೂರು ನಗರಗಳ ಪೊಲೀಸ್ ಆಯುಕ್ತರ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಗೃಹ ಸಚಿವ ಎಂಬಿ ಪಾಟೀಲ್ ಸಿಎಂ ಕುಮಾರಸ್ವಾಮಿ ಅವರ ವಿರುದ್ಧ ಮುನಿಸಿಕೊಂಡಿದ್ದಾರೆ. ಎಲ್ಲಾ ಕೆಲಸಗಳನ್ನು ಸಿಎಂ ಮಾಡಿದರೆ ಗೃಹ ಸಚಿವನಾಗಿ ನಾನು ಇರುವುದು ಯಾಕೆ ಎಂದು ಆಪ್ತರ ಬಳಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

    ತಮ್ಮ ಗಮನಕ್ಕೆ ಬಾರದೇ ವರ್ಗಾವಣೆ ಮಾಡಲಾಗಿದೆ. ಈ ಕುರಿತು ಸಚಿವನಾಗಿ ನನಗೆ ಗೊತ್ತಿಲ್ಲದೇ ವರ್ಗಾವಣೆ ಮಾಡಿದರೆ ಹೇಗೆ ಎಂದು ಸಿಎಂ ಏಕಪಕ್ಷೀಯ ನಿರ್ಧಾರ ಬಗ್ಗೆ ಗೃಹ ಸಚಿವರಾದ ಎಂಬಿ ಪಾಟೀಲ್ ಗರಂ ಆಗಿದ್ದಾರೆ. ಅಲ್ಲದೇ ಈ ಕುರಿತು ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜುಗೂ ಅವರಿಗೂ ಎಂಬಿ ಪಾಟೀಲ್ ಪ್ರಶ್ನೆ ಮಾಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಪಬ್ಲಿಕ್ ಟಿವಿಗೆ ಲಭಿಸಿದೆ.

    ಗೃಹ ಖಾತೆಯನ್ನು ವಹಿಸಿಕೊಂಡು ಎಂಬಿ ಪಾಟೀಲ್ ಅವರಿಗೆ ಒಂದು ತಿಂಗಳು ಕಳೆದಿರಲಿಲ್ಲ. ಇದರ ನಡುವೆ ಗುರುವಾರದಂದು ಸಿಎಂ ಕುಮಾರಸ್ವಾಮಿ ಅವರು ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು. ಹುಬ್ಬಳ್ಳಿ-ಧಾರವಾಡ ನಗರದ ಕಮಿಷನರ್ ಆಗಿದ್ದ ಎಂ.ಎನ್ ನಾಗರಾಜ್ ಅವರ ಜಾಗಕ್ಕೆ ಕೆಜಿಎಫ್ ಎಸ್‍ಪಿ ಆಗಿದ್ದ ಬಿ.ಎಸ್ ಲೋಕೇಶ್ ಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದು, ಬೆಳಗಾವಿ ನಗರ ಕಮಿಷನರ್ ಆಗಿದ್ದ ಡಿ.ಸಿ ರಾಜಪ್ಪ ಹುದ್ದೆಗೆ ಬೆಂಗಳೂರು ವೈರ್ ಲೆಸ್ ವಿಭಾಗದ ಎಸ್‍ಪಿ ಆಗಿದ್ದ ಪಿ. ರಾಜೇಂದ್ರ ಪ್ರಸಾದ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಉಳಿದಂತೆ ಬೆಂಗಳೂರು ಗೃಹ ರಕ್ಷಕ ದಳದ ಕಮಾಂಡೆಂಟ್ ಆಗಿದ್ದ ಆರ್.ರಮೇಶ್ ಅವರನ್ನು ಯೋಜನೆ ಆಧುನೀಕರಣದ ಡಿಐಜಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.

    ಈ ಕುರಿತು ಆಪ್ತರ ಬಳಿ ಅಸಮಾಧಾನ ವ್ಯಕ್ತಪಡಿಸಿರುವ ಎಂಬಿಪಿ ಸಿಎಂ ಏಕಪಕ್ಷೀಯ ನಿರ್ಧಾರದ ಕುರಿತು ಮುಂದಿನ ಸಮನ್ವಯ ಸಮಿತಿ ಸಭೆಯಲ್ಲಿ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಡಿಸಿಎಂ ಪರಮೇಶ್ವರ್ ಅವರು ಗೃಹ ಖಾತೆಯನ್ನು ಹೊಂದಿದ್ದ ವೇಳೆಯೂ ಸಿಎಂ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ರು. ಅಲ್ಲದೇ ಲೋಕೋಪಯೋಗಿ ಸಚಿವ ರೇವಣ್ಣ ಅವರು ತಮ್ಮ ಇಲಾಖೆಯ ವರ್ಗಾವಣೆ ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡಿದ್ದ ಬಗ್ಗೆ ಕಾಂಗ್ರೆಸ್ ಸಚಿವರಿಂದಲೂ ಅಸಮಾಧಾನ ವ್ಯಕ್ತವಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ರೇವಣ್ಣ ಶಾಕ್- ರಾತ್ರೋರಾತ್ರಿ 700 ಅಧಿಕಾರಿಗಳ ವರ್ಗ!

    ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ರೇವಣ್ಣ ಶಾಕ್- ರಾತ್ರೋರಾತ್ರಿ 700 ಅಧಿಕಾರಿಗಳ ವರ್ಗ!

    ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಮತ್ತೆ ಎಚ್.ಡಿ.ರೇವಣ್ಣ ಶಾಕ್ ನೀಡಿದ್ದು, ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ನಡೆಗೆ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ. ಲೋಕೋಪಯೋಗಿ ಅಧಿಕಾರಿಗಳು, ನೌಕರರಿಗೆ ರೇವಣ್ಣ ಶಾಕ್ ನೀಡಿದ್ದು, ಮಧ್ಯರಾತ್ರಿ 700 ಅಧಿಕಾರಿಗಳು, ನೌಕರರನ್ನು ಏಕಾಏಕಿ ವರ್ಗಾವಣೆ ಮಾಡಿದ್ದಾರೆ.

    ಎಂಜಿನಿಯರ್ ಅಧಿಕಾರಿಗಳಿಂದ ಹಿಡಿದು ಪ್ರಥಮ ದರ್ಜೆ ಸಹಾಯಕರವರೆಗಿನ ನೌಕರರನ್ನು ವರ್ಗ ಮಾಡಲಾಗಿದೆ. ನೌಕರರನ್ನು ವರ್ಗಾವಣೆಗೊಳಿಸಿ ಶನಿವಾರ ಮಧ್ಯರಾತ್ರಿ ಆದೇಶ ಹೊರಡಿಸಿರುವುದಾಗಿ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದ್ದು, ಇದೀಗ ಸಚಿವರ ಆದೇಶ ಲೋಕೋಪಯೋಗಿ ಇಲಾಖೆಯಲ್ಲಿ ಭಾರೀ ಸಂಚಲನ ಮೂಡಿಸಿದೆ.

    ರೇವಣ್ಣ ತಾವು ಸಚಿವರಾದ ನಂತರ ಲೋಕೋಪಯೋಗಿ ಇಲಾಖೆಯಲ್ಲಿ 270 ಕ್ಕೂ ಹೆಚ್ಚು ವರ್ಗಾವಣೆಯನ್ನು ಇತ್ತೀಚೆಗೆ ಮಾಡಲಾಗಿತ್ತು. ಲೋಕೋಪಯೋಗಿ ಇಲಾಖೆ ಒಂದರಲ್ಲೇ ವರ್ಗಾವಣೆ ಸಂಬಂಧ ಸುಮಾರು 500ಕ್ಕೂ ಹೆಚ್ಚು ಶಿಫಾರಸ್ಸು ಪತ್ರಗಳು ಬಂದಿದ್ದವು. ಅದರಲ್ಲಿ ಬಿಜೆಪಿ ಶಾಸಕರ ಶಿಫಾರಸ್ಸು ಎಷ್ಟು? ಜೆಡಿಎಸ್ ಶಾಸಕರ ಶಿಫಾರಸ್ಸು ಎಷ್ಟು? ಮತ್ತು ಕಾಂಗ್ರೆಸ್ ಶಾಸಕರ ಶಿಫಾರಸ್ಸು ಎಷ್ಟು? ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ರೇವಣ್ಣ ಮುಂದಾಗಿದ್ದರು.

    ಸೂಪರ್ ಸಿಎಂ ಅವರ ವಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸೂಪರ್ ಸಿಎಂ ವರ್ಗಾವಣೆ ದಂಧೆ ಎಂದು ಆರೋಪ ಮಾಡಿತ್ತು. ಇದಕ್ಕೆ ತಿರುಗೇಟು ನೀಡಿದ್ದ ರೇವಣ್ಣ, ಒಂದು ವೇಳೆ ಮುಂದೆ ರಾಜಕೀಯ ಪ್ರೇರಿತ ಆರೋಪ ಮಾಡಿದರೆ ದಾಖಲೆ ಬಿಡುಗಡೆಗೆ ಮಾಡುವುದಾಗಿ ತಿಳಿಸಿದ್ದರು. ಅಷ್ಟೇ ಅಲ್ಲದೇ ವರ್ಗಾವಣೆ ದಂಧೆ ಅಂತ ಆರೋಪಿಸಿದರೂ ದಾಖಲೆಗಳನ್ನು ಬಿಡುಗಡೆ ಮಾಡುತ್ತೀನಿ. ಬಿಎಸ್‍ವೈ, ಈಶ್ವರಪ್ಪ ಸೇರಿದಂತೆ ಬಿಜೆಪಿಯ ಘಟಾನುಘಟಿಗಳ ಶಿಫಾರಸ್ಸು ಪತ್ರವು ಅದರಲ್ಲಿದೆ. ಶಿಫಾರಸ್ಸು ಮಾಡುತ್ತಾರೆ, ಟ್ರಾನ್ಸ್ ಫರ್ ಮಾಡಿಸುತ್ತಾರೆ. ಆರೋಪ ಮಾತ್ರ ನನ್ನ ಮೇಲೆ ಮಾಡುತ್ತಾರೆ. ಅವರಿಗೆ ದಾಖಲೆ ಕೊಡುತ್ತೀನಿ ಎಂದು ಹೇಳುವ ಮೂಲಕ ಬಿಜೆಪಿ ನಾಯಕರಿಗೆ ರೇವಣ್ಣ ತಿರುಗೇಟು ನೀಡಿದ್ದರು.

    ಸಮ್ಮಿಶ್ರ ಸರ್ಕಾರದಲ್ಲಿ ಎಚ್.ಡಿ.ರೇವಣ್ಣ ಸೂಪರ್ ಸಿಎಂ ಅಧಿಕಾರ ಚಲಾಯಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಅವರು ಅಧಿಕಾರ ದುರುಪಯೋಗ ಮಾಡಿಕೊಂಡು ವರ್ಗಾವಣೆ ದಂಧೆಯನ್ನು ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಆರೋಪಿಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews