Tag: ಅದ್ವಿತಿ ಶೆಟ್ಟಿ

  • `ಜೈ’ ಚಿತ್ರದ ಟೀಸರ್ ಲಾಂಚ್ ಮಾಡಿದ ರೋರಿಂಗ್ ಸ್ಟಾರ್ ಶ್ರೀಮುರುಳಿ

    `ಜೈ’ ಚಿತ್ರದ ಟೀಸರ್ ಲಾಂಚ್ ಮಾಡಿದ ರೋರಿಂಗ್ ಸ್ಟಾರ್ ಶ್ರೀಮುರುಳಿ

    ರಾವಳಿ ಭಾಗದ ಪ್ರತಿಭೆ ಹಾಗೂ ಬಿಗ್‌ಬಾಸ್ ಖ್ಯಾತಿಯ ರಾಕ್‌ಸ್ಟಾರ್ ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರುವ ತುಳು ಹಾಗೂ ಕನ್ನಡದ `ಜೈ’ (Jai) ಚಿತ್ರದ ಟೀಸರ್ ಬಿಡುಗಡೆ ಇತ್ತೀಚೆಗೆ ನಡೆದಿದೆ. ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ನಟ ಶ್ರೀಮುರಳಿ (Srimurali) ಚಿತ್ರದ ಟೀಸರ್ ಅನ್ನ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

    ಬಿಗ್‌ಬಾಸ್ ಮೂಲಕ ಖ್ಯಾತಿ ಪಡೆದಿರುವ ರೂಪೇಶ್ ಶೆಟ್ಟಿ (Rupeesh Shetty) ತುಳು ಭಾಷೆಯ ಸಂಸ್ಕೃತಿ, ಆಚಾರ-ವಿಚಾರದ ಬಗ್ಗೆ ಅಪಾರ ಪ್ರೀತಿಯನ್ನು ಇಟ್ಟುಕೊಂಡು ಸಿನಿಮಾ ಮಾಡುತ್ತಾ ಬಂದಿದ್ದಾರೆ ಎಂದು ನಟ ಶ್ರೀಮುರಳಿ ರೂಪೇಶ್ ಗುಣಗಾನ ಮಾಡಿದ್ದಾರೆ. ಇದನ್ನೂ ಓದಿ: ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾದ ತೆಲುಗು ಸ್ಟಾರ್‌ ರಾಮ್‌ ಚರಣ್‌

    ಅಂದಹಾಗೆ ಚಿತ್ರದ ನಟ, ನಿರ್ದೇಶಕ ರೂಪೇಶ್ ಶೆಟ್ಟಿ ಅವರ ಮೂರನೆಯ ನಿರ್ದೇಶನದ ಚಿತ್ರ. ಈ ಹಿಂದೆ ಗಿರಿಗಿಟ್, ಸರ್ಕಸ್ ಎಂಬ ಚಿತ್ರದ ನಿರ್ದೇಶನ ಮಾಡಿದ್ದ ರೂಪೇಶ್ ಶೆಟ್ಟಿ, ಇದೀಗ `ಜೈ’ ಸಿನಿಮಾ ಮೂಲಕ ಮತ್ತೆ ಕಮ್‌ಬ್ಯಾಕ್ ಮಾಡಿದ್ದಾರೆ. ಈ ಹಿಂದೆ ಮಾಡಿದ್ದ ಎರಡು ಸಿನಿಮಾಗಳು ಸಕ್ಸಸ್ ಕಂಡಿವೆ. ಅದರಲ್ಲೂ ಈ ಸಿನಿಮಾದಲ್ಲಿ ಸುನೀಲ್ ಶೆಟ್ಟಿ ವಿಶೇಷ ಪಾತ್ರದಲ್ಲಿ ನಟಿಸಿದ್ದಾರಂತೆ. ಇದೊಂದು ಕರಾವಳಿ ಭಾಗದ ಲೋಕಲ್ ಪೊಲಿಟಿಕಲ್ ಕಂಟೆಂಟ್ ಇರುವ ಚಿತ್ರವಾಗಿದೆಯಂತೆ. ಇದನ್ನೂ ಓದಿ: ಚಾಮುಂಡಿ ತಾಯಿ ದರ್ಶನ ಪಡೆದ ಕಿಚ್ಚ ಸುದೀಪ್

    ಇನ್ನು ರೂಪೇಶ್ ಶೆಟ್ಟಿಗೆ ನಾಯಕಿಯಾಗಿ ನಟಿ ಅದ್ವಿತಿ ಶೆಟ್ಟಿ (Advithi Shetty) ತೆರೆಹಂಚಿಕೊಂಡಿದ್ದಾರೆ. ಈ ಸಿನಿಮಾ ಅದ್ವಿತಿಗೆ ಮೊದಲ ತುಳು ಸಿನಿಮಾವಾಗಿದ್ದು, ಅವರ ಮಾತೃಭಾಷೆ ತುಳು ಆಗಿದೆ ಎಂದಿದ್ದಾರೆ. ಈ ಸಿನಿಮಾದಲ್ಲಿ ಜರ್ನಲಿಸ್ಟ್ ಪಾತ್ರದಲ್ಲಿ ನಟಿ ಅದ್ವಿತಿ ಶೆಟ್ಟಿ ನಟಿಸಿದ್ದಾರಂತೆ. ಆರ್.ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ ಚಿತ್ರಕ್ಕೆ ಬಂಡವಾಳ ಹೂಡಿದ್ದು, ದೀಕ್ಷಿತ್ ಸಹ ನಿರ್ಮಾಪಕರಾಗಿದ್ದಾರೆ.

    ಜೈ ಸಿನಿಮಾದ ಚಿತ್ರಕಥೆಯನ್ನ ರೂಪೇಶ್ ಶೆಟ್ಟಿ ಹಾಗೂ ವೇಣು ಹಸ್ರಳ್ಳಿ ಅವರು ಬರೆದಿದ್ದಾರೆ. ಮೂರು ಹಂತದಲ್ಲಿ ಚಿತ್ರೀಕರಣ ಮುಗಿಸಿದ `ಜೈ’ ಸಿನಿಮಾದಲ್ಲಿ ನಾಯಕನಾಗಿ ರೂಪೇಶ್ ಶೆಟ್ಟಿ ಮತ್ತು ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸಿದ್ದಾರೆ. ಉಳಿದಂತೆ ದೇವದಾಸ್ ಕಾಪಿಕಾಡ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್ ಮೊದಲಾದವರು ಅಭಿನಯಿಸಿದ್ದಾರೆ.

  • ರೂಪೇಶ್ ಶೆಟ್ಟಿಗೆ ಜೋಡಿಯಾದ ಕುಡ್ಲದ ಬೆಡಗಿ ಅದ್ವಿತಿ

    ರೂಪೇಶ್ ಶೆಟ್ಟಿಗೆ ಜೋಡಿಯಾದ ಕುಡ್ಲದ ಬೆಡಗಿ ಅದ್ವಿತಿ

    ‘ಬಿಗ್ ಬಾಸ್ ಕನ್ನಡ 9’ರ (Bigg Boss Kannada 9) ವಿನ್ನರ್ ರೂಪೇಶ್ ಶೆಟ್ಟಿ (Roopesh Shetty) ಅವರು ‘ಜೈ’ (Jai Film) ಎಂಬ ತುಳು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ಅದ್ವಿತಿ ಶೆಟ್ಟಿ (Adhvithi Shetty) ಎಂಟ್ರಿ ಕೊಟ್ಟಿದ್ದಾರೆ. ಮೊದಲ ಬಾರಿಗೆ ತುಳು ಸಿನಿಮಾದಲ್ಲಿ ನಟಿಸುತ್ತಿರುವ ಖುಷಿಯನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

    ರೂಪೇಶ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡುತ್ತಿರುವ ‘ಜೈ’ (Jai Film) ಸಿನಿಮಾದಲ್ಲಿ ಹೀರೋಯಿನ್ ಆಗಿ ಆಯ್ಕೆಯಾಗಿದ್ದಾರೆ. ಈಗಾಗಲೇ ಚಿತ್ರೀಕರಣದಲ್ಲೂ ಅವರು ಪಾಲ್ಗೊಂಡಿದ್ದಾರೆ. ನಟನೆಗೆ ಸ್ಕೋಪ್ ಇರುವ ವಿಭಿನ್ನ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ:ಸುದೀಪ್ ತಾಯಿ ಅಗಲಿಕೆಗೆ ಸಂತಾಪ ಸೂಚಿಸಿದ ಪ್ರಧಾನಿ ಮೋದಿ- ಪ್ರತಿಕ್ರಿಯಿಸಿದ ಕಿಚ್ಚ

    ಇನ್ನೂ ಅದ್ವಿತಿ ಶೆಟ್ಟಿ ಅವರು ಮೂಲತಃ ಮಂಗಳೂರಿನವರು. ಮಾತೃ ಭಾಷೆ ತುಳು ಆಗಿದ್ದರೂ ಅವರು ಮೊದಲ ಬಾರಿಗೆ ತುಳು ಭಾಷೆಯ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಜೈ’ ಸಿನಿಮಾದಲ್ಲಿ ನಟಿಸುವ ಮೂಲಕ ಮೊದಲ ಬಾರಿಗೆ ತುಳು ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿರುವ ಕುರಿತು ನಟಿ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮನ್ನು ಆಯ್ಕೆ ಮಾಡಿದ್ದಕ್ಕೆ ರೂಪೇಶ್ ಮತ್ತು ಇಡೀ ತಂಡಕ್ಕೆ ನಟಿ ಧನ್ಯವಾದ ತಿಳಿಸಿದ್ದಾರೆ.

     

    View this post on Instagram

     

    A post shared by JAI TULU MOVIE (@jai_tulumovie2024)

    ಅಂದಹಾಗೆ, ರೂಪೇಶ್ ಶೆಟ್ಟಿ ಅವರಿಗೆ ತುಳು ಚಿತ್ರರಂಗ ಏನು ಹೊಸದಲ್ಲ. ಅವರು ಮೂಲತಃ ಮಂಗಳೂರಿನವರೇ ಆಗಿದ್ದಾರೆ. ‘ಜೈ’ ಸಿನಿಮಾದ ಜೊತೆಗೆ ಕನ್ನಡದ ‘ಅಧಿಪತ್ರ’ ಸೇರಿದಂತೆ ಹಲವು ಚಿತ್ರಗಳು ಅವರ ಕೈಯಲ್ಲಿವೆ.

  • ಬಿಗ್ ಬಾಸ್‌ಗೆ ಹೋಗ್ತಾರಾ ಅವಳಿ ಸಹೋದರಿಯರು?- ಸ್ಪಷ್ಟನೆ ನೀಡಿದ ಅದ್ವಿತಿ ಶೆಟ್ಟಿ

    ಬಿಗ್ ಬಾಸ್‌ಗೆ ಹೋಗ್ತಾರಾ ಅವಳಿ ಸಹೋದರಿಯರು?- ಸ್ಪಷ್ಟನೆ ನೀಡಿದ ಅದ್ವಿತಿ ಶೆಟ್ಟಿ

    ಬಿಗ್ ಬಾಸ್ ಸೀಸನ್ 11ಕ್ಕೆ (Bigg Boss Kannada 11) ವೇದಿಕೆ ಸಿದ್ಧವಾಗುತ್ತಿದ್ದಂತೆ ಹಲವರ ಹೆಸರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಅದರಲ್ಲಿ ಅದ್ವಿತಿ ಮತ್ತು ಅಶ್ವಿತಿ ಶೆಟ್ಟಿ ದೊಡ್ಮನೆಗೆ ಬರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಅದಕ್ಕೆಲ್ಲಾ ನಟಿ ಅದ್ವಿತಿ (Adhvithi Shetty) ಉತ್ತರ ನೀಡಿದ್ದಾರೆ. ನಾವು ಬಿಗ್ ಬಾಸ್‌ಗೆ ಹೋಗ್ತೀವಿ ಅಂತ ನೀವೇ ನಿರ್ಧರಿಸಲು ಹೋಗಬೇಡಿ ಎಂದಿದ್ದಾರೆ. ಇದನ್ನೂ ಓದಿ:ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳಲ್ಲಿ ಬ್ಯುಸಿಯಾದ ರಶ್ಮಿಕಾ ಮಂದಣ್ಣ

    ಕಳೆದ ಹಲವು ಸೀಸನ್‌ಗಳಿಂದ ಬಿಗ್ ಬಾಸ್‌ಗೆ ಹೋಗುವ ಕುರಿತು ಈ ಅವಳಿ ಸಹೋದರಿಯರ ಹೆಸರು ಕೇಳಿ ಬರುತ್ತಲೇ ಇದೆ. ಪ್ರತಿ ಸೀಸನ್ ಬಂದಾಗಲೂ ಇವರ ಸದ್ದು ಮಾಡುತ್ತದೆ. ಈ ಬಾರಿಯೂ ಹಾಗೇ ಆಗಿದೆ. ಅದಕ್ಕೆ ಇನ್ಸ್ಟ್ರಾಗ್ರಾಂ ಸ್ಟೋರಿ ಶೇರ್ ಮಾಡಿ, ಎಲ್ಲರಿಗೂ ನಮಸ್ಕಾರ, ನಾನು ಹಲವು ಪೋಸ್ಟ್‌ಗಳನ್ನು ನೋಡಿದೆ, ಬಿಗ್ ಬಾಸ್‌ಗೆ ಈ ಬಾರಿ ನಾನು ಮತ್ತು ಸಹೋದರಿ ಅಶ್ವಿತಿ (Ashvithi Shetty) ದೊಡ್ಮನೆಗೆ ಹೋಗುವ ಕುರಿತು. ನಾವು ಬಿಗ್ ಬಾಸ್‌ಗೆ ಹೋಗುತ್ತೇವೆ ಎಂದು ಎಲ್ಲೂ ಅಧಿಕೃತವಾಗಿ ಹೇಳಿಲ್ಲ ಎಂದಿದ್ದಾರೆ.

    ನಾನೇ ಹೇಳುವವರೆಗೂ ದಯವಿಟ್ಟು ನೀವೇ ಕಲ್ಪನೆ ಮಾಡಿಕೊಳ್ಳಲು ಹೋಗಬೇಡಿ ಎಂದಿದ್ದಾರೆ ನಟಿ ಅದ್ವಿತಿ. ಧನ್ಯವಾದಗಳು ನಮ್ಮನ್ನು ಹೀಗೆ ಬೆಂಬಲಿಸುತ್ತಾ ಇರಿ ಎಂದು ಮನವಿ ಮಾಡಿದ್ದಾರೆ. ಈ ಮೂಲಕ ಬಿಗ್ ಬಾಸ್‌ಗೆ ಹೋಗುವ ವಿಚಾರ ಇದು ವದಂತಿ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

    ಅಂದಹಾಗೆ, ಮಿಸ್ಟರ್ & ಮಿಸೆಸ್ ರಾಮಾಚಾರಿ ಸಿನಿಮಾ ಮೂಲಕ ಈ ಅವಳಿ ಸಹೋದರಿಯರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ರಾಧಿಕಾ ಪಂಡಿತ್ (Radhika Pandit) ಸ್ನೇಹಿತೆಯರಾಗಿ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಇಬ್ಬರೂ ಹೊಸ ಸಿನಿಮಾಗಳನ್ನು ಮಾಡುತ್ತಾ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

  • ಕೆಟ್ಟ ಕಾಮೆಂಟ್ ಮಾಡೋರನ್ನ ಬ್ಲಾಕ್ ಮಾಡಿಬಿಡಿ ಅಷ್ಟೇ: ಅದ್ವಿತಿ ಶೆಟ್ಟಿ

    ಕೆಟ್ಟ ಕಾಮೆಂಟ್ ಮಾಡೋರನ್ನ ಬ್ಲಾಕ್ ಮಾಡಿಬಿಡಿ ಅಷ್ಟೇ: ಅದ್ವಿತಿ ಶೆಟ್ಟಿ

    ಬೆಂಗಳೂರು: ಕೊಲೆ ಪ್ರಕರಣವೊಂದರಲ್ಲಿ ಸ್ಯಾಂಡಲ್‌ವುಡ್ ನಟ ಚಾಲೆಂಜಿಂಗ್‌ ಸ್ಟಾರ್‌ ಜೈಲು ಸೇರಿದ್ದಾರೆ. ಇದು ಇಡೀ ಕನ್ನಡ ಚಿತ್ರರಂಗಕ್ಕೆ‌ ದಂಗುಬಡಿಸಿದೆ. ಸದ್ಯ ನಟ ಆದಷ್ಟು ಬೇಗ ನಿರಪರಾಧಿಯಾಗಿ ಹೊರಬರಲಿ ಎಂಬುದಾಗಿ ನಟ-ನಟಿಯರು ಆಶಯ ವ್ಯಕ್ತಪಡಿಸುತ್ತಿದ್ದಾರೆ. ಈ ಸಂಬಂಧ ನಟಿ ಅದ್ವಿತಿ ಶೆಟ್ಟಿ (Adhvithi Shetty) ಕೂಡ ಇಂದು ಪ್ರತಿಕ್ರಿಯಿಸಿದ್ದಾರೆ.

    ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ನಟಿ, ಈ ಘಟನೆ ಬೇಸರ ತಂದಿದೆ. ಯಾರು ಯಾರಿಗೂ ಕೆಟ್ಟ ಕಾಮೆಂಟ್ ಮಾಡಬೇಡಿ. ಕೆಟ್ಟ ಕಾಮೆಂಟ್ ಮಾಡೋರನ್ನ ಬ್ಲಾಕ್ ಮಾಡಿಬಿಡಿ ಅಷ್ಟೇ. ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದರು. ಇದನ್ನೂ ಓದಿ: ದರ್ಶನ್‌ ಸರ್‌ ನಿರಪರಾಧಿಯಾಗಿ ಆಚೆ ಬರಲಿ: ಕಾರುಣ್ಯ ರಾಮ್‌

    ದರ್ಶನ್ ಸರ್ ನಮ್ ಫ್ಯಾಶನ್ ಶೋ ಕಾರ್ಯಕ್ರಮಕ್ಕೆ ಬಂದಿದ್ರು. ಅವತ್ತು ಸಿಕ್ಕಾಗ ಚೆನ್ನಾಗಿ ಮಾತಾಡಿಸಿದ್ರು. ಮತ್ತೆ ಯಾವತ್ತೂ ಮುಖಾಮುಖಿ ಆಗಿಲ್ಲ. ಈ ಕೇಸ್ ನಿಂದ ದರ್ಶನ್ ಸರ್ ಆಚೆ ಬರಲಿ ಅಂತ ಕೇಳಿಕೊಳ್ಳುತ್ತೇನೆ ಎಂದರು.

    ಪ್ರಕರಣ ಏನು?: ಗೆಳತಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್‌ ಮಾಡಿದನೆಂದು ಆರೋಪಿಸಿ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿಯನ್ನು (Renukaswamy Case) ಕಿಡ್ನಾಪ್‌ ಮಾಡಿ ಬೆಂಗಳೂರಿಗೆ ಕರೆತರಲಾಗಿತ್ತು. ಬಳಿಕ ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ದರ್ಶನ್‌ (Challenging Star Darshan) ಮತ್ತು ಗ್ಯಾಂಗ್‌ನಿಂದ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿತ್ತು. ಅಲ್ಲದೇ ಮೃತದೇಹವನ್ನು ಸುಮ್ಮನಹಳ್ಳಿ ಮೋರಿಗೆ ಎಸೆಯಲಾಗಿತ್ತು.

    ಇತ್ತ ಕಾಮಾಕ್ಷಿಪಳ್ಯ ಪೊಲೀಸ್‌ ಠಾಣೆಗೆ ನಾಲ್ವರು ಶರಣಾಗಿ ಹಣದ ವಿಚಾರಕ್ಕೆ ಕೊಲೆ ಮಾಡಿರುವುದಾಗಿ ಹೇಳಿಕೊಂಡಿದ್ದರು. ಈ ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಅಸಲಿ ವಿಚಾರ ಗೊತ್ತಾಗಿದೆ. ಈ ಕೇಸ್‌ನಲ್ಲಿ ದರ್ಶನ್‌ ಪಾತ್ರ ಇರುವುದನ್ನು ಮನಗಂಡ ಪೊಲೀಸರು ನೇರವಾಗಿ ಮೈಸೂರಿಗೆ ತೆರಳಿ ನಟನನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು. ಬಳಿಕ ಒಬ್ಬೊಬ್ಬರಾಗಿ ಒಟ್ಟು 17 ಮಂದಿಯನ್ನು ಬಂಧಿಸಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಇರಿಸಲಾಗಿತ್ತು. ತನಿಖೆಯ ಭಾಗವಾಗಿ ಸ್ಥಳ ಮಹಜರು ಪೂರ್ಣಗೊಳಿಸಿದ ಬಳಿಕ ಆರೋಪಿಗಳನ್ನು ಕೋರ್ಟ್‌ ಮುಂದೆ ಹಾಜರಿಸಿ ನಂತರ ಜೈಲಿಗಟ್ಟಲಾಗಿದೆ.

  • Exclusive: ಬಿಗ್ ಬಾಸ್‌ಗೆ ಅದ್ವಿತಿ ಶೆಟ್ಟಿ ಹೋಗುತ್ತಾರಾ? ನಟಿ ಸ್ಪಷ್ಟನೆ

    Exclusive: ಬಿಗ್ ಬಾಸ್‌ಗೆ ಅದ್ವಿತಿ ಶೆಟ್ಟಿ ಹೋಗುತ್ತಾರಾ? ನಟಿ ಸ್ಪಷ್ಟನೆ

    ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (Bigg Boss Kannada 10) ಶುರುವಾಗಲು ಕೌಂಟ್ ಡೌನ್ ಶುರುವಾಗಿದೆ. ಯಾರೆಲ್ಲಾ ದೊಡ್ಮನೆಗೆ ಎಂಟ್ರಿ ಕೊಡುತ್ತಾರೆ ಎಂದು ಒಂದಿಷ್ಟು ಹೆಸರುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅದರಲ್ಲಿ ಅದ್ವಿತಿ ಶೆಟ್ಟಿ (Adhvithi Shetty) ಕೂಡ ಹೋಗುತ್ತಾರೆ ಎಂದು ಹೇಳಲಾಗಿತ್ತು. ಈ ಬಗ್ಗೆ ಸ್ವತಃ ನಟಿ ಅದ್ವಿತಿ ಶೆಟ್ಟಿ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಸ್ಪಷ್ಟನೆ ನೀಡಿದ್ದಾರೆ.

    ಬಿಗ್ ಬಾಸ್ ಮನೆಗೆ (Bigg Boss Kannada) ಬರಲು ಆಫರ್ ಸಿಕ್ಕಿದ್ದು ನಿಜ. ಆದರೆ ನಾನು ಶೋನಲ್ಲಿ ಭಾಗಿಯಾಗ್ತಿಲ್ಲ. ಇತ್ತೀಚಿಗೆ ನನ್ನ ತಂದೆ ಅಗಲಿದರು. ಆ ನೋವಿನಿಂದ ಹೊರಬರಲು ಮಾನಸಿಕವಾಗಿ ಸಮಯಬೇಕಿದೆ. ಈ ನಡುವೆ ಫಿಟ್‌ನೆಸ್ ಕಡೆ ಕೂಡ ನಾನು ಗಮನ ನೀಡಿಲ್ಲ. ಬಿಗ್ ಬಾಸ್ ಶೋ ಬಗ್ಗೆ ಗೌರವಿದೆ. ಆ ಗೌರವಕ್ಕಾದರೂ ಸರಿಯಾದ ಪೂರ್ವ ತಯಾರಿ ಮಾಡಬೇಕು ಎಂದು ನಟಿ ತಿಳಿಸಿದ್ದಾರೆ.

    ಮಾನಸಿಕವಾಗಿ ಮತ್ತು ಫಿಟ್‌ನೆಸ್ ವಿಚಾರದಲ್ಲಿ ನೋಡಿದರೆ ನಾನು ಈ ಬಾರಿ ಬಿಗ್ ಬಾಸ್‌ಗೆ ಹೋಗಲು ತಯಾರಿಲ್ಲ. ತಯಾರಿ ಇಲ್ಲದೇ ಹೋಗಬಾರದು. ಬಿಗ್ ಬಾಸ್‌ಗೆ ನಾನು ಹೋಗುತ್ತೀನಿ ಎನ್ನುವ ಸುದ್ದಿ ಸುಳ್ಳು ಎಂದಿದ್ದಾರೆ. ನನ್ನ ಸಹೋದರಿ ಅಶ್ವಿತಿ ಕೂಡ ಭಾಗಿಯಾಗುತ್ತಿಲ್ಲ. ಇನ್ನೂ ನಾನು ನಟಿಸಿರುವ ‘ಧೀರ ಸಾಮ್ರಾಟ್’, ‘ಶುಗರ್ ಫ್ಯಾಕ್ಟರಿ’ ರಿಲೀಸ್‌ಗೆ ರೆಡಿಯಿದೆ. ಚಿತ್ರತಂಡದ ಜೊತೆ ಸೇರಿ ಪ್ರಚಾರದ ಕಡೆ ಗಮನ ಹರಿಸಬೇಕಿದೆ ಎಂದು ಅದ್ವಿತಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:‘ಐ ಯ್ಯಾಮ್ ಇನ್ ಲವ್’ ಅಂತಿದ್ದಾರೆ ರಚಿತಾ ರಾಮ್

    ‘ಮಿಸ್ಟರ್ & ಮಿಸೆಸ್ ರಾಮಾಚಾರಿ’ ಸಿನಿಮಾದ ಮೂಲಕ ಅದ್ವಿತಿ ಶೆಟ್ಟಿ ಬಣ್ಣದ ಬದುಕಿಗೆ ಎಂಟ್ರಿ ಕೊಟ್ಟರು. ಫ್ಯಾನ್, ಐರಾವನ್ ಸಿನಿಮಾಗಳ ಮೂಲಕ ನಟಿ ಗಮನ ಸೆಳೆದರು.

    ವರದಿ: ಶ್ರುತಿ ನಾಗೇಶ್‌, ಪಬ್ಲಿಕ್‌ ಟಿವಿ ಡಿಜಿಟಲ್‌

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಕ್ಯಾಡ್ಬರಿಸ್’ ಸಿನಿಮಾದಲ್ಲಿ ಸೋನು ಗೌಡ- ಪೋಸ್ಟರ್ ಔಟ್

    ‘ಕ್ಯಾಡ್ಬರಿಸ್’ ಸಿನಿಮಾದಲ್ಲಿ ಸೋನು ಗೌಡ- ಪೋಸ್ಟರ್ ಔಟ್

    ‘ಬಿಗ್ ಬಾಸ್ ಖ್ಯಾತಿಯ ಸೋನು ಗೌಡ (Sonu Srinivas Gowda) ಇದೀಗ ಬಿಕಿನಿ ಫೋಟೋಗಳ ಮೂಲಕ ಸಖತ್ ಸುದ್ದಿಯಾದ ಬೆನ್ನಲ್ಲೇ ಅಭಿಮಾನಿಗಳಿಗೆ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ. ತಮ್ಮ ಚೊಚ್ಚಲ ಸಿನಿಮಾದ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

    ಧರ್ಮ ಕೀರ್ತಿರಾಜ್ & ಅದ್ವಿತಿ ಶೆಟ್ಟಿ ನಟನೆಯ ಕ್ಯಾಡ್ಬರಿಸ್ ಸಿನಿಮಾದಲ್ಲಿ ಸೋನು ಶ್ರೀನಿವಾಸ್ ಗೌಡ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ಕ್ಯಾಡ್ಬರಿಸ್’ (Cadburys) ಸಿನಿಮಾದಲ್ಲಿನ ಸೋನು ಲುಕ್ ಕೂಡ ಚಿತ್ರತಂಡ ರಿವೀಲ್ ಮಾಡಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಚಿತ್ರತಂಡಕ್ಕೆ ಸೋನು ಧನ್ಯವಾದ ತಿಳಿಸಿದ್ದಾರೆ.

    ಕನಸು ಪ್ರೊಡಕ್ಷನ್ಸ್ ನಿರ್ಮಾಣದ ಕ್ಯಾಡ್ಬರಿಸ್ (Cadburys Film) ಚಿತ್ರದ ಒಂದು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿದ್ದೆ. ಈಗ ಆ ಮೂವಿಯ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಈ ವರ್ಷದ ಕೊನೆಯಲ್ಲಿ ನಿಮ್ಮ ಮುಂದೆ ಬರಲಿದ್ದೇವೆ. ಇಂದು ಈ ಚಿತ್ರದ ನನ್ನ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಹಾಗೂ ನಮ್ಮ ಚಿತ್ರತಂಡದ ಮೇಲೆ ಸದಾ ಇರಲಿ ಎಂದು ಕೇಳಿಕೊಳ್ಳುತ್ತೇವೆ.

    ಈ ಚಿತ್ರವು ರೆಟ್ರೋ ಶೈಲಿಯಲ್ಲಿ ಮೂಡಿ ಬಂದಿದ್ದು, ಈ ಸಿನಿಮಾದಲ್ಲಿ ನನ್ನ ಪಾತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈ ಚಿತ್ರದಲ್ಲಿ ಧರ್ಮ ಕೀರ್ತಿರಾಜ್- ಅದ್ವಿತಿ ಶೆಟ್ಟಿ(Adhvithi Shetty) ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದು, ಇನ್ನು ಹಲವಾರು ದೊಡ್ಡ ದೊಡ್ಡ ನಟರು ನಟಿಸುತ್ತಿದ್ದಾರೆ. ಅವರೆಲ್ಲರ ಜೊತೆ ನಟಿಸಿದ್ದು ನನಗೆ ಸಂತಸ ತಂದಿದೆ. ನನಗೆ ಈ ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟ ಈ ಚಿತ್ರದ ನಿರ್ಮಾಪಕರಿಗೂ ನಿರ್ದೇಶಕರಿಗೂ ಹಾಗೂ ಚಿತ್ರತಂಡದ ಎಲ್ಲರಿಗೂ ನನ್ನ ಧನ್ಯವಾದಗಳು ತಿಳಿಸುತ್ತಾ, ಸಮಸ್ತ ಕನ್ನಡ ನಾಡಿನ ಜನರ ಆಶೀರ್ವಾದ ಬಯಸುತ್ತಿರುವ ನಿಮ್ಮ ಪ್ರೀತಿಯ ಸೋನು ಶ್ರೀನಿವಾಸ್ ಗೌಡ ಎಂದು ಬರೆದುಕೊಂಡಿದ್ದಾರೆ.

    ಬಿಗ್ ಬಾಸ್ (Bigg Boss Kannada) ಶೋ ಬಳಿಕ ಇದೀಗ ಕ್ಯಾಡ್ಬರಿಸ್ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಸೋನು ಪಾದಾರ್ಪಣೆ ಮಾಡುತ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಟಿ ಅದ್ವಿತಿ ಶೆಟ್ಟಿಗೆ ಪಿತೃ ವಿಯೋಗ

    ನಟಿ ಅದ್ವಿತಿ ಶೆಟ್ಟಿಗೆ ಪಿತೃ ವಿಯೋಗ

     

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಅದ್ವಿತಿ ಶೆಟ್ಟಿಗೆ ಪಿತೃ ವಿಯೋಗ

    ಅದ್ವಿತಿ ಶೆಟ್ಟಿಗೆ ಪಿತೃ ವಿಯೋಗ

    Mr & Mrs ರಾಮಾಚಾರಿ ನಟಿ ಅದ್ವಿತಿ ಶೆಟ್ಟಿ (Advithi Shetty) ತಂದೆ (Father) ನಿಧನರಾಗಿದ್ದಾರೆ. ತಂದೆಯನ್ನು ಕಳೆದುಕೊಂಡ ನೋವಿನಲ್ಲಿ ನಟಿ ಪೋಸ್ಟ್ ಶೇರ್ ಮಾಡಿದ್ದಾರೆ.

    ಅದ್ವಿತಿ ಶೆಟ್ಟಿ (Adhvithi Shetty) ಅವರ ತಂದೆ (Father) ಕೆಲ ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅದ್ವಿತಿ ತಂದೆಗೆ ಚಿಕಿತ್ಸೆ ನೀಡಲಾಗಿತ್ತು. ಆದರೆ ಇದೀಗ ಅದ್ವಿತಿ ಶೆಟ್ಟಿ ತಂದೆಗೆ ವಿಧಿವಶರಾಗಿದ್ದಾರೆ. ತಂದೆಯ ನಿಧನದ ಬಗ್ಗೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಟಿ ಹಂಚಿಕೊಂಡಿದ್ದಾರೆ.

    ಅದ್ವಿತಿ- ಅಶ್ವಿತಿ ಶೆಟ್ಟಿ ಇಬ್ಬರು ಟ್ವಿನ್ಸ್ ಮಕ್ಕಳ ವೃತ್ತಿ ರಂಗದ ಗೆಲುವಿಗೆ ತಂದೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ತಂದೆ ನಿಧನ ಇದೀಗ ನಟಿ ಅದ್ವಿತಿ ಕುಟುಂಬಕ್ಕೆ ಶಾಕ್ ಕೊಟ್ಟಿದೆ. ಅದ್ವಿತಿ ತಂದೆಯ ನಿಧನಕ್ಕೆ ಆಪ್ತರು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ. ಇದನ್ನೂ ಓದಿ:Bigg Boss: ದೊಡ್ಮನೆಗೆ ಕಾಲಿಡಲು ಸಜ್ಜಾದ ಶಕೀಲಾ

    ಯಶ್(Yash)- ರಾಧಿಕಾ ಪಂಡಿತ್ (Radhika Pandit) ನಟನೆಯ ‘ಮಿಸ್ಟರ್ & ಮಿಸೆಸ್ ರಾಮಾಚಾರಿ’ ಸಿನಿಮಾದಲ್ಲಿ ಅದ್ವಿತಿ ಶೆಟ್ಟಿ ನಟಿಸಿದ್ದರು. ರಾಧಿಕಾ ಸ್ನೇಹಿತೆಯ ಪಾತ್ರದಲ್ಲಿ ನಟಿ ಮಿಂಚಿದ್ದರು. ಬಳಿಕ ಕಿರುತೆರೆ ಮತ್ತು ಹಿರಿತೆರೆಯ ಫ್ಯಾನ್, ಐರಾವನ್ ಚಿತ್ರದಲ್ಲಿ ನಟಿಸಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆಸ್ಟ್ರೇಲಿಯಾ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಬ್ರಹ್ಮಕಮಲ

    ಆಸ್ಟ್ರೇಲಿಯಾ ಪ್ರತಿಷ್ಠಿತ ಚಿತ್ರೋತ್ಸವದಲ್ಲಿ ಬ್ರಹ್ಮಕಮಲ

    ಮೆಲ್ಬೋರ್ನ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ (Chirotsava) ಗೆ ಸಿದ್ದು ಪೂರ್ಣಚಂದ್ರ (Siddu Poornchandra) ನಿರ್ದೇಶನದ  ಕನ್ನಡದ ‘ಬ್ರಹ್ಮಕಮಲ’ (Brahmakamala) ಚಿತ್ರ ಆಯ್ಕೆಯಾಗಿದೆ. ಪ್ರಪಂಚದ ಹಲವು ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ‌ ಇದೂ ಒಂದು. ಇಂತಹ ಫೆಸ್ಟಿವಲ್ ಗೆ ನಮ್ಮ ಚಿತ್ರ ಆಯ್ಕೆಯಾಗಿರುವುದು ಅತೀವ ಸಂತೋಷ ತಂದಿದೆ ಎಂದಿದ್ದಾರೆ ನಿರ್ದೇಶಕ ಸಿದ್ದು ಪೂರ್ಣಚಂದ್ರ.

    ಈಗಾಗಲೇ ಫ್ರಾನ್ಸ್ ನಲ್ಲಿ ನಡೆದ ಈಡಿಪ್ಲೇ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ, ಸಿಡ್ನಿಯ ವಂಡರ್ ಲ್ಯಾಂಡ್ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಫೀಚರ್ ಫಿಲ್ಮ್ ಪ್ರಶಸ್ತಿ,  ನೇಪಾಳದ ಓಲ್ಡ್ ಮಂಕ್ ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲೂ ಬೆಸ್ಟ್ ಫೀಚರ್ ಫಿಲ್ಮ್ ಪ್ರಶಸ್ತಿ ಮತ್ತು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಕೂಡ ಲಭಿಸಿದೆ. ಇಂಡೋ‌ ಸಿಂಗಪುರ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅದ್ವಿತಿ ಶೆಟ್ಟಿಗೂ (Adviti Shetty) ಅತ್ಯುತ್ತಮ ನಟಿ ಪ್ರಶಸ್ತಿ ಬಂದಿದೆ.

    ದಾದಾ ಸಾಹೇಬ್ ಫಾಲ್ಕೆ, ಅರುಣೋದಯ, ಕಲಕರಿ, ಚಲನಚಿತ್ರೋತ್ಸವಗಳನ್ನು ಒಳಗೊಂಡಂತೆ ಹಲವು ಚಲನಚಿತ್ರೋತ್ಸವಗಳಿಗೆ  ಆಯ್ಕೆಯಾಗಿರುವುದು ಇಡೀ ತಂಡಕ್ಕೆ ಸಂತಸ ತಂದಿದೆ. ವಿಶೇಷವಾದ ಕಥಾ ಹಂದರ ಈ ಚಿತ್ರದಲ್ಲಿರುವುದರಿಂದ ನನಗೆ ಮೊದಲಿನಿಂದಲೂ ಈ ಕಥೆಯ ಮೇಲೆ ನಂಬಿಕೆ ಇತ್ತು. ಈ ಚಿತ್ರ ಇನ್ನೂ  ಹಲವು ಪ್ರಶಸ್ತಿಗಳನ್ನು ತಂದು ಕೊಡುತ್ತದೆ ಎಂಬ ವಿಶ್ವಾಸ ಇದೆ. ಇದನ್ನೂ ಓದಿ:ಸಮಂತಾರಂತೆ ಐಟಂ ಡ್ಯಾನ್ಸ್ ಒಪ್ಪಲ್ಲ- ನಾಗಚೈತನ್ಯ ಮಾಜಿಪತ್ನಿಗೆ ಕೃತಿ ಶೆಟ್ಟಿ ಟಕ್ಕರ್

    ಈ ಕಥೆ ನಮ್ಮ ರಾಮನಗರದ ಹತ್ತಿರದ ಒಂದು ಹಳ್ಳಿಯಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿ ಕಥೆಯನ್ನು ಹೆಣೆದಿದ್ದೇನೆ. ಆ ಕುಟುಂಬ ಮಾಡಿದ ಒಂದು ತಪ್ಪಿನಿಂದಾಗಿ  ಆ ಮನೆಯವರೆಲ್ಲರೂ ಈಗಲೂ ಜೈಲಿನಲ್ಲಿದ್ದಾರೆ.

  • ‘ಧೀರ ಸಾಮ್ರಾಟ್’ ಸಿನಿಮಾಗೆ ಸಾಥ್ ನೀಡಿದ ಧ್ರುವ ಸರ್ಜಾ

    ‘ಧೀರ ಸಾಮ್ರಾಟ್’ ಸಿನಿಮಾಗೆ ಸಾಥ್ ನೀಡಿದ ಧ್ರುವ ಸರ್ಜಾ

    ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ‘ಧೀರ ಸಾಮ್ರಾಟ್’ (Dheera Samrat) ಚಿತ್ರವು ತೆರೆಗೆ ಬರುವ ಹಂತ ತಲುಪಿದೆ. ಪ್ರಚಾರದ ಸಲುವಾಗಿ ‘ಏನ್ ಚಂದ ಕಾಣಿಸ್ತಾವಳೆ’ ಸಾಲಿನ ಸಾಂಗ್ ಅನಾವರಣ ಸಮಾರಂಭ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ನಡೆಯಿತು. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಸರಿಯಾದ ಸಮಯಕ್ಕೆ ಹಾಜರಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸುಮಾರು ಒಂದೂವರೆ ದಶಕಕ್ಕೂ ಹೆಚ್ಚು ಕಾಲ ವಾಹಿನಿಯಲ್ಲಿ ನಿರೂಪಕ, ಕಾರ್ಯಕ್ರಮದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಪವನ್‌ ಕುಮಾರ್(ಪಚ್ಚಿ) (Pawan Kumar) ಸಿನಿಮಾಕ್ಕೆ ಕಥೆ ಬರೆದು, ನಿರ್ದೇಶನ ಮಾಡಿರುವ ಜತೆಗೆ ನೋಡುಗರು ಇಷ್ಟಪಡುವಂತಹ ನಕರಾತ್ಮಕ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಾಗೂ ಶೀರ್ಷಿಕೆ ಗೀತೆಗೆ ಸಾಹಿತ್ಯ ಮತ್ತು ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದಾರೆ.

    ಸರದಿಯಂತೆ ಮೊದಲು ಮೈಕ್ ತೆಗೆದುಕೊಂಡ ನಿರ್ದೇಶಕರು “ನಮ್ಮ ಸಿನಿಮಾ ಮಹೂರ್ತಕ್ಕೆ ಬಂದು, ಈಗ ಎಷ್ಟೇ ಬ್ಯುಸಿ ಇದ್ದರೂ, ಶೂಟಿಂಗ್‌ಗೆ ಬ್ರೇಕ್ ಮಾಡಿ ಹಾಡನ್ನು ಬಿಡುಗಡೆ ಮಾಡಿರುವುದು ಎಲ್ಲರ ಅಚ್ಚುಮೆಚ್ಚಿನ ಧ್ರುವ ಸರ್ಜಾ, ಸ್ನೇಹಕ್ಕೆ ಸಾಹುಕಾರ ಎಂದೇ ಹೇಳಬಹುದು. ಕುಟುಂಬ ಸಮೇತ ನೋಡಬಹುದಾದ ಸೆಸ್ಪನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿದೆ. ಐದು ಧೀರ ಹುಡುಗರ ಗೆಳತನ ಹೇಗಿರುತ್ತೆ ಎಂಬುದನ್ನು ಹೇಳಲಾಗಿದೆ. ಕೊನೆತನಕ ಕುತೂಹಲ ಕಾಯ್ದಿರಿಸಿದ್ದು, ಕ್ಲೈಮಾಕ್ಸ್‌ನಲ್ಲಿ ಪ್ರೇಕ್ಷಕರನ್ನು ಸೀಟಿನ ತುದಿಗೆ ಬರುವಂತೆ ಮಾಡುತ್ತದೆ. ಒಂದು ಎಳೆ ಬಿಟ್ಟುಕೊಟ್ಟರೂ ಸಿನಿಮಾದ ಸಾರಾಂಶ ತಿಳಿಯುತ್ತದೆ. ಪ್ರಶ್ನೆ ಎನ್ನುವಂತೆ ಸಾವಿಗೆ ಸಾವಿಲ್ಲ ಅಂತ ಅಡಿಬರಹವಿದೆ. ಒಬ್ಬ ವ್ಯಕ್ತಿಗೆ ಸಂಬಂಧಿಸದೆ ಸಮಾಜದಲ್ಲಿ ಯಾವುದೋ ಒಂದು  ವರ್ಗದಲ್ಲಿ ಶೋಷಣೆ ಆಗುತ್ತಿರುತ್ತದೆ. ಇಂತಹ ಮುಖ್ಯ ಅಂಶಗಳನ್ನು ಸನ್ನಿವೇಶಕ್ಕೆ ಬಳಸಲಾಗಿದೆ” ಎಂದರು.

    ತನ್ವಿ ಪ್ರೊಡಕ್ಷನ್ ಹೌಸ್ ಮುಖಾಂತರ ನಿರ್ಮಾಣ ಮಾಡಲಾಗಿದೆ. ಧೀರ ಸಾಮ್ರಾಟ್ ಅಂದರೆ ಏನು, ಯಾತಕ್ಕೆ ಈ ಟೈಟಲ್ ಇಡಲಾಗಿದೆ. ಕೊನೆಯಲ್ಲಿ ಯಾರು ಎಂಬುದು ತಿಳಿಯಲಿದೆ ಎಂದು ಗುಲ್ಬರ್ಗಾದ ಗುರುಬಂಡಿ ಹೇಳಿದರು. ನಾಯಕ ರಾಕೇಶ್‌ಬಿರದಾರ್, ನಾಯಕಿ ಅದ್ವಿತಿ ಶೆಟ್ಟಿ ಪಾತ್ರದ ವಿವರವನ್ನು ಗೌಪ್ಯವಾಗಿಟ್ಟರು. ಇದನ್ನೂ ಓದಿ:ನಾನು ಮಂಡ್ಯದವಳೇ, ಗೌಡ್ತಿ, ನಾನು ಗೌಡ್ತಿ ಎನ್ನುವುದನ್ನು ಯಾರೂ ಕಿತ್ತುಕೊಳ್ಳಲು ಆಗಲ್ಲ: ರಮ್ಯಾ

    ಕೊನೆಯಲ್ಲಿ ಮಾತನಾಡಿದ ಧ್ರುವ ಸರ್ಜಾ, “ಸಿನಿಮಾ ಅಣ್ಣ ಚಿರಂಜೀವಿ ಸರ್ಜಾ ಹುಟ್ಟುಹಬ್ಬದಂದು ಸೆಟ್ಟೇರಬೇಕಾಗಿತ್ತು. ಕಾರಣಾಂತರದಿಂದ 2020ಕ್ಕೆ ಮುಂದೂಡಲಾಯಿತು. ನಿರ್ದೇಶಕರು ಹೇಳಿದರು. ನಾವೆಲ್ಲರು ಹೊಸಬರು ಅಂತ. ನಾನು ಅದ್ದೂರಿ ಮಾಡಿದಾಗ ಹೊಸಬನಾಗಿದ್ದೆ. ಅಂದು ಪವನ್‌ಗೆ ವಾಹಿನಿಯಲ್ಲಿ ಜಾಸ್ತಿ ಸಲ ಹಾಡನ್ನು ಪ್ರಸಾರ ಮಾಡು ಎಂದು ದುಂಬಾಲು ಬಿದ್ದಿದ್ದೆ. ನಮ್ಮದು ಹೋಗೋ ಬಾರೋ ಗೆಳತನ. ಆ ಸಮಯದಲ್ಲಿ ಸಾಕಷ್ಟು ಜನರು ಪ್ರೋತ್ಸಾಹ ಕೊಟ್ಟಿದ್ದರು. ಅದರಲ್ಲಿ ಪವನ್ ಕೂಡ ಒಬ್ಬರು. ಈಗ ಅವರ ಪ್ರಥಮ ನಿರ್ದೇಶನದ ಚಿತ್ರ ಎಂದಾಗ ಅವರಿಗೆ ಪ್ರೋತ್ಸಾಹ ಕೊಡುವುದು ನಮ್ಮ ಕರ್ತವ್ಯವಾಗಿದೆ. ಅದರಲ್ಲೂ ಹೆಚ್ಚಾಗಿ ಗೆಳೆಯ. ಹೊಸಬರಿಗೆ ಉತ್ತೇಜನ ನೀಡಿ ಅಂತ ಕೇಳಿಕೊಳ್ಳುತ್ತೇನೆ. ಅವರಲ್ಲೂ ಪ್ರತಿಭೆ ಎನ್ನುವುದು ಇರುತ್ತದೆ. ಇಂಥವರನ್ನು ಬೆಳೆಸಿದರೆ ಪ್ರೇರೆಪಿಸಿದಂತೆ ಮತ್ತು ಅವರ ಕಲೆಗೆ ಬೆಲೆ ಕೊಟ್ಟಂತೆ ಆಗುತ್ತದೆ. ನಾಯಕ ಚೆನ್ನಾಗಿ ಕುಣಿದಿದ್ದಾರೆ.  ಅದಕ್ಕೆ ಕಾರಣ ನನ್ನ ಫೇವರೇಟ್ ಡ್ಯಾನ್ಸ್ ಮಾಸ್ಟರ್ ಮುರಳಿ. ಪವನ್ ತಾಯಿ ವರ್ಷಕ್ಕೆ ಆಗುವಷ್ಟು ಬಿರಿಯಾನಿ ತಿನ್ನಿಸುತ್ತಾರೆ. ಎಲ್ಲರೂ ಸಾಂಗ್ ನೋಡಿ ಹೊಸಬರನ್ನು ಬೆಳಸಿರಿ” ಎಂದು ಮಾತಿಗೆ ವಿರಾಮ ಹಾಕಿದರು.

    ತಾರಾಗಣದಲ್ಲಿ ಶಂಕರ ಭಟ್, ಶೋಭರಾಜ್, ನಾಗೇಂದ್ರ ಅರಸು, ಬಲರಾಜವಾಡಿ, ರಮೇಶ್‌ ಭಟ್, ಯತಿರಾಜ್, ಮನಮೋಹನ್‌ ರೈ, ಇಂಚರ, ಸಂಕಲ್ಪ್‌ ಪಾಟೀಲ್ ರವಿರಾಜ್, ಜ್ಯೋತಿ ಮರೂರು, ಮಂಡ್ಯಾ ಚಂದ್ರು, ಗಿರಿಗೌಡ, ಪ್ರೇಮ, ಹರೀಶ್‌ ಅರಸ್. ಬೇಬಿ ಪರಿಣಿತ, ನಂದಿತ ಮುಂತಾದವರು ನಟಿಸಿದ್ದಾರೆ. ಭರ್ಜರಿ ಚೇತನ್, ಡಾ.ಎನ್.ನಾಗೇಂದ್ರಪ್ರಸಾದ್ ಸಾಹಿತ್ಯದ ಒಟ್ಟು ನಾಲ್ಕು ಹಾಡುಗಳಿಗೆ ರಾಘವ್‌ ಸುಭಾಷ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವೀರೇಶ್.ಎನ್.ಟಿ.ಎ ಹಾಗೂ ಅರುಣ್‌ಸುರೇಶ್, ಸಂಕಲನ ಸತೀಶ್‌ ಚಂದ್ರಯ್ಯ, ಹಿನ್ನಲೆ ಶಬ್ದ ವಿನು ಮನಸು, ಸಂಭಾಷಣೆ ಎ.ಆರ್.ಸಾಯಿರಾಮ್, ಸಾಹಸ ಕೌರವ ವೆಂಕಟೇಶ್, ನೃತ್ಯ ಮುರಳಿ-ಕಿಶೋರ್-ಸಾಗರ್ ಅವರದಾಗಿದೆ. ಬೆಂಗಳೂರು, ಕನಕಪುರ, ನೆಲಮಂಗಲ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.